ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಕರ ಸಿದ್ಧತೆ - ಕರ್ನಾಟಕದಲ್ಲಿನ ಒಂದು ಅನುಭವ ಮೈಥಿಲಿ ರಾಮ್‌ಚಂದ್

 
ಸಾಮಾಜಿಕ ನ್ಯಾಯಕ್ಕೆ ಉತ್ತೇಜನ ಕೊಡುವ ಉದ್ದೇಶದಲ್ಲಿ ಶಿಕ್ಷಕರನ್ನು ಸಿದ್ಧಗೊಳಿಸುವುದು ಒಂದು ಚೈತನ್ಯ ರಥ ಆಗಬಲ್ಲುದು (ಹಾನ್‌ಸೆನ್ ೨೦೦೮). ಸಾಮಾಜಿಕ ನ್ಯಾಯವು ತಾತ್ವಿಕವಾಗಿ ಪರ ವಿರೋಧ ಒಡ್ಡುವ ಮತ್ತು ಪ್ರಮಾಣಕ ಗುಣ ಸ್ಥಾಪಕ ಪರಿಕಲ್ಪನೆಯಾಗಿದೆ. (ಗುಡ್‌ಲಾಡ್,೨೦೦೨). ಆದರೆ ರಾಲ್ಸ್ ಹೇಳುವಂತೆ ನ್ಯಾಯವು ಸಾಮಾಜಿಕ ಸಂಸ್ಥೆಗಳ ಆದ್ಯ ಕರ್ತವ್ಯವಾಗಿದೆ (ರಾಲ್ಸ್ ೧೯೭೧ ಪು.೩). ನೊವಾಕ್ (೨೦೦೦) ಅವರೂ ಸಾಮಾಜಿಕ ನ್ಯಾಯವು ವ್ಯಕ್ತಿಯೊಬ್ಬನ ಆಲೋಚನಾತ್ಮಕ ಮತ್ತು ಪರ್ಯಾಲೋಚಕ ಕ್ರಿಯೆಗಳಿಗೆ ಆರೋಪಿಸಬಹುದಾದ ಕರ್ತವ್ಯ ಎಂದು ವಾದಿಸುತ್ತಾರೆ (ಗ್ರಾಂಟ್ ಮತ್ತು ಅಗಸ್ಟೊ , ೨೦೦೮ ಪು.೯೮ ರಲ್ಲಿ ಉಲ್ಲಿಖಿತವಾಗಿದೆ).  
 
ಮೇಲು ಕೆಳಗಿನ ವಿವಿಧ ಸ್ತರಗಳ ವ್ಯವಸ್ಥೆಗಳ ನಮ್ಮ ಸಮಾಜದಲ್ಲಿ,  ಭಾವೀ ಶಿಕ್ಷಕರು ತಾರತಮ್ಯದ ಸಮಸ್ಯೆಗಳ ಬಗ್ಗೆ ವಿಮರ್ಶಾತ್ಮಕ ಪರ್ಯಾಲೋಚನೆಯಲ್ಲಿ ತೊಡಗಿಕೊಳ್ಳುವಂತೆ ಮತ್ತು ಪ್ರಜ್ಞಾಪೂರ್ವಕವಾಗಿ ಸಮಾವೇಶಿ ಬೋಧನಾಕಲೆಯನ್ನು ಅಳವಡಿಸಿಕೊಳ್ಳಲು ಯತ್ನಿಸುವಂತೆ ಶಿಕ್ಷಕ ತರಬೇತಿ ನಡೆಸುವುದು  ಸಣ್ಣ ಆಶಾಕಿರಣವನ್ನು ತೋರುತ್ತದೆ.  ಇಲ್ಲಿಯವರೆಗೆ ಶಾಲಾ ವಿದ್ಯಾಭ್ಯಾಸ ಎನ್ನುವುದು ವಿಭಿನ್ನ ಗುಣಮಟ್ಟಗಳ  ವಿವಿಧ ಬಗೆಯ ಶಾಲೆಗಳು,ವಿವಿಧ ವರ್ಗದ  ಮಕ್ಕಳಿಗೆ ಒದಗಿಸುತ್ತಾ ಇವುಗಳೊಂದಿಗೆ ತಾರತಮ್ಯವನ್ನು ನಿರಂತರವಾಗಿ ಪೋಷಿಸುತ್ತಾ ಬಂದಿರುವುದಲ್ಲದೇ ಸೂಕ್ಷ್ಮವಲ್ಲದ  ಸಂವೇದನಾರಹಿತ ಬೋಧನಾತತ್ವಗಳು ಮತ್ತು ವಿವೇಚನಾರಹಿತ ಪಠ್ಯಕ್ರಮಗಳನ್ನು ಹೊಂದಿದ್ದವು. (ಕುಮಾರ್ ೧೯೮೯; ನಂಬಿಸನ್ & ರಾವ್, ೨೦೧೩). 
 
ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕಿನ ಕಾಯಿದೆ ೨೦೦೯, ಪ್ರತಿಯೊಂದು ಮಗುವೂ (೬-೧೪ ವರ್ಷದವರೆಗಾದರೂ) ನಿಗದಿಪಡಿಸಿದ ಗುಣಮಟ್ಟದ ಶಿಕ್ಷಣ ಪಡೆಯು ವಂತೆ ನೋಡಿಕೊಳ್ಳುವ  ಒಂದು ಪ್ರಯತ್ನವಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು  ೨೦೦೫ ಮತ್ತು ಸಂಬಂಧಿತ ವಸ್ತುಸ್ಥಿತಿ ಲೇಖನಗಳು  (ಓಅಇಖಖಿ, ೨೦೦೫) ಪಠ್ಯವಿಷಯಗಳ ವ್ಯಾಖ್ಯಾನವನ್ನು ವ್ಯಾಪಕವಾಗಿ ಹೇಳಿವೆ ಮತ್ತು ಬಹುಮುಖ್ಯವಾಗಿ ತನ್ನ ತರಗತಿಯಲ್ಲಿನ ಪ್ರತಿಯೊಂದು ಮಗುವೂ ಶಾಲಾ ವಿದ್ಯಾಭ್ಯಾಸದ ಅನುಭವವನ್ನು ಅರ್ಥಪೂರ್ಣವಾಗಿ ಪೂರ್ಣಗೊಳಿಸಲು ಸಾಧ್ಯವಾಗಿಸುವ  ಜವಾಬ್ದಾರಿಯನ್ನು ಶಿಕ್ಷಕರ ಮೇಲೆ ಹೇರುತ್ತದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCEF೨೦೦೯) ಶಿಕ್ಷಕ ತರಬೇತಿಯು ಇದಕ್ಕಾಗಿ ಶಿಕ್ಷಕರನ್ನು ಸಿದ್ಧಗೊಳಿಸಲು ಅವಶ್ಯವಾದ ಗುಣಾಂಶಗಳನ್ನು ಒದಗಿಸಿದೆ. 
ಕರ್ನಾಟಕದ ಪರಿಷೃತ ಶಿಕ್ಷಣದಲ್ಲಿನ ಡಿಪ್ಲಮೋದ (ಡಿ.ಎಡ್) ಪಠ್ಯಕ್ರಮವು ಸಮಾವೇಶಿ ಶಿಕ್ಷಣವನ್ನು ಪಠ್ಯಕ್ರಮದುದ್ದಕ್ಕೂ ವ್ಯಾಪಿಸುವ ತತ್ವದಂತೆ ಪರಿಚಯಿಸುವ ಮೂಲಕ ಎನ್‌ಸಿಎಫ್‌ಟಿಇ, ೨೦೦೯ರ ದೃಷ್ಟಿಕೋನವನ್ನು ವಿವರವಾಗಿ ಹೇಳಲು ಪ್ರಯತ್ನಿಸಿದೆ. ಸಮಾವೇಶಿ ಶಿಕ್ಷಣವು ಸಾಮಾಜಿಕ ನ್ಯಾಯದ ವಿಶಾಲ ದೃಷ್ಟಿಕೋನದಿಂದ ರೂಪುಗೊಂಡಿದೆ.ಯುನೆಸ್ಕೋ (ಯುಎನ್‌ಇಎಸ್‌ಸಿಓ) (೨೦೦೮)ದ ಪ್ರಕಾರ ಸಮಾವೇಶಿ ಶಿಕ್ಷಣವು ಪ್ರತಿಯೊಬ್ಬ ಮಗುವಿನ ಆವಶ್ಯಕತೆಗಳನ್ನು ಪೂರೈಸಲು ಶಕ್ತವಾಗುವಂತೆ ಶಾಲಾ ವ್ಯವಸ್ಥೆಯನ್ನು ಬಲಗೊಳಿಸುವ ಪ್ರಕ್ರಿಯೆಯಾಗಿದೆ. ಮಕ್ಕಳು ಶಾಲೆಗಳಿಗೆ ಹೊಂದಿಕೊಳ್ಳವುದರ ಬದಲಿಗೆ (ಶಿಕ್ಷಕರು ಪ್ರಮುಖ ಪಾತ್ರವಹಿಸುವಂತಹಾ) ವ್ಯವಸ್ಥೆಯು ಮಕ್ಕಳ ಆವಶ್ಯಕತೆಗಳನ್ನು ಪೂರೈಸುವಂತೆ ಬದಲಾಗಬೇಕು. 
 
ಈ ಲೇಖನವು ಪಠ್ಯಕ್ರಮ ಮತ್ತು ಸಂಬಂಧಪಟ್ಟ ಸಾಮಗ್ರಿ ಗಳಲ್ಲಿ ಏನನ್ನು ಸೇರಿಸಲಾಗಿದೆ ಎಂಬುದರ ಸಂಕ್ಷಿಪ್ತ ಚಿತ್ರವನ್ನು ನೀಡುತ್ತದೆ ಮತ್ತು  ಶೈಕ್ಷಣಿಕ ವಿಷಯದ ವಿದ್ಯಾರ್ಥಿಗಳ ಸಣ್ಣ ಗುಂಪಿನೊಂದಿಗೆ ಈ ಸಾ ಮಾಗ್ರಿ ಗಳನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಿದಾಗ ಪಡೆದ ಅನುಭವಗಳನ್ನು ಹಂಚಿಕೊಳ್ಳುತ್ತದೆ. 
 
ಡಿ.ಎಡ್ ಕಾರ್ಯಕ್ರಮಕ್ಕಾಗಿ ಸಮಾವೇಶಿ ಶಿಕ್ಷಣದ ಪಠ್ಯಕ್ರಮ ಮತ್ತು ಸಲಕರಣೆಗಳ ತಯಾರಿ
ಕಾಯ್ದೆಗಳು, ನೀತಿಗಳು, ನಿಯಮಾವಳಿಗಳನ್ನು  ಉದಾರ ಆದರ್ಶದ ಸಾಕಾರಕ್ಕಾಗಿ   ರಚಿಸಲಾಗಿರುತ್ತದೆ. ಆದರೆ ಇವು ಸಮರ್ಥಿಸುವ  ಸಮಾನತಾವಾದಿ ತತ್ವಗಳಿಗೆ ವಿರುದ್ಧವಾದ ಸಂಸ್ಕೃತಿಯಲ್ಲಿ ನೆಟ್ಟು ಅವುಗಳನ್ನು ಬೆಳೆಯುವಂತೆ ಬಿಡಲಾಗುತ್ತಿದೆ (ಜುನೇಜ ೨೦೧೧; ಪು.೧೬೫). ಆದ್ದರಿಂದ, ಇಲ್ಲಿರುವ  ಸವಾಲು ಶಿಕ್ಷಕ ತರಬೇತಿಯ ಬಗೆಗಿನ ಎನ್‌ಸಿಎಫ್‌ಟಿಇ ೨೦೦೯ ರ ದೃಷ್ಟಿಕೋನವೂ ಸೇರಿದಂತೆ  ನೂತನ ಕಾಯ್ದೆಗಳು ಮತ್ತು ನೀತಿಗಳ ಸರ್ವಸಮಾನತೆಯ ಅಭೀಪ್ಸೆಗಳನ್ನು ನನಸಾಗಿಸುವುದು. 
 
ಪಠ್ಯಕ್ರಮದ ತಯಾರಿಯು ಸಮಾಲೋಚನಾ ಪ್ರಕ್ರಿಯೆಯಾಗಿತ್ತು . ಸಮಾವೇಶಿ ಶಿಕ್ಷಣವು ಸಂಪೂರ್ಣ ಪಠ್ಯಕ್ರಮದುದ್ದಕ್ಕೂ ವ್ಯಾಪಿಸಿರಬೇಕು ಮಾತ್ರವಲ್ಲದೇ ವಿದ್ಯಾರ್ಥಿಗಳಾದ ಶಿಕ್ಷPರು  ಇದರ ಹಿಂದಿರುವ ಪರಿಕಲ್ಪನೆಯ ಅರಿವನ್ನು ಗಳಿಸಿಕೊಳ್ಳಬೇಕು ಎಂಬ ಸರ್ವಸಮ್ಮತ ತೀರ್ಮಾನವು ಹೊರಹೊಮ್ಮಿತು. ಅದರಂತೆ ಶಿಕ್ಷಣ ಅಧ್ಯಯನದ ಕೋರ್ಸಿನಲ್ಲಿ ಸಮಾವೇಶಿ ಶಿಕ್ಷಣವನ್ನು ಒಂದು ಘಟಕವಾಗಿ ಸೇರಿಸಲಾಯಿತು. ಈ ಘಟಕವು, ಸಮಾವೇಶಿ ಶಿಕ್ಷಣ ಏಕೆ ಬೇಕು ಎಂಬುದಕ್ಕೆ ಆಧಾರವಾದ ಪರಿಕಲ್ಪನೆಗಳ ಪರಿಚಯ , ಸಮಾವೇಶಿಯನ್ನಾಗಿಸಲು ಇರುವ ಅಡೆತಡೆಗಳನ್ನು  ಗುರುತಿಸುವುದು ಮತ್ತು ಅವುಗಳನ್ನು ನಿವಾರಿಸಲು  ಇರುವ ಮಾರ್ಗೋಪಾಯಗಳನ್ನು ಗುರುತಿಸುವುದು; ಮಕ್ಕಳ ಲ್ಲಿರುವ ವಿಭಿನ್ನತೆಯನ್ನು ಒಮದು ಸಂಪನ್ಮೂಲದಂತೆ ಬಳಸಿಕೊಳ್ಳುವುದು  ಮತ್ತು ಸಮಾವೇಶಿ ಕಲಿಕೆಯ ವಾತಾವರಣವನ್ನು ನಿರ್ಮಿಸಲು ಬೇಕಾದ ಗುಣಾಂಶಗಳನ್ನು ಕುರಿತು  ವಿವರಿಸುತ್ತದೆ.
 
ಪಠ್ಯಕ್ರಮವನ್ನು ತಯಾರಿಸಿದ ತಂಡವು ಶಿಕ್ಷಕರ ಶಿಕ್ಷಕರಿಗಾಗಿ ಒಂದು ಕೈಪಿಡಿಯನ್ನು ಮತ್ತು  ವಿದ್ಯಾರ್ಥಿ  ಶಿಕ್ಷಕರಿಗಾಗಿ ವಾಚನ ಸಾಮಾಗ್ರಿಗಳನ್ನು ಸಿದ್ಧಗೊಳಿಸುವ ಕಾರ್ಯವನ್ನೂ  ಮಾಡಿತ್ತು. ವಿದ್ಯಾರ್ಥಿ ಶಿಕ್ಷಕರಿಗಾಗಿ  ವಾಚನ  ಸಾಮಾಗ್ರಿಗಳನ್ನು ತಯಾರಿಸುವಾಗ ಈ ಕೆಳಗಿನ ಗುಣಾಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಯಿತು . 
ಪಠ್ಯಕ್ರಮಕ್ಕೆ ಅಗತ್ಯಪಡಿಸುವ  ಬೋಧನೆ ಆವಶ್ಯಕತೆಗಳನ್ನು ಪೂರೈಸುವುದು.
ವಿದ್ಯಾರ್ಥಿಶಿಕ್ಷಕರ  ಅಭಿವೃದ್ಧಿಯ ಆವಶ್ಯಕತೆಗಳನ್ನು ಪೂರೈಸುವುದು .
ಅವರ ಸಾಮಾಜಿಕ ಸಾಂಸ್ಕೃತಿಕ ಸನ್ನಿವೇಶಗಳ ಅಗತ್ಯತೆಯನ್ನು ಪೂರೈಸುವುದು.
ಕಲಿಕೆಗೆ ಬೇಕಾದ ಬೇಡಿಕೆಗಳನ್ನು ಈಡೇರಿಸುವುದು .
 
ಸಮಾವೇಶಿ ಶಿಕ್ಷಣದ ಬಗೆಗಿನ ಸಾಹಿತ್ಯವು ವಿಫುಲವಾಗಿದೆ ಮತ್ತು ವಿವಿಧತೆಯಿಂದ ಕೂಡಿದೆ. ಅವೆಲ್ಲವನ್ನೂ ವಿದ್ಯಾರ್ಥಿ  ಶಿಕ್ಷಕರಿಗೆ  ಮನದಟ್ಟಾಗುವ ರೀತಿಯಲ್ಲಿ  ಮಂಡಿಸುವುದು ಮತ್ತು ವಿಷಯವನ್ನು ಅವರ ಸಾಮಾಜಿಕ ಸಾಂಸ್ಕೃತಿಕ ಹಿನ್ನೆಲೆ ಗೆ ಸರಿಹೊಂದುವಂತೆ ಮಂಡಿಸುವುದು ನಿಜಕ್ಕೂ ಒಂದು ಸವಾಲಾಗಿತ್ತು.ಅನೇಕ ಬಾಹ್ಯ ಸಮಾಲೋಚನೆಗಳು ಮತ್ತು ಆಂತರಿಕ ಸಭೆಗಳಲ್ಲಿ  ಶ್ರೇಣಿಗಳಲ್ಲಿ  ವಿಷಯಗಳು ಪದೆ ಪದೆ ಪ್ರತಿಪಾದನೆ ಆದ ಮೇಲೆ  ಕರಡು ಪಠ್ಯಕ್ರಮವನ್ನು ಸಿದ್ಧಮಾಡಲಾಯಿತು .ಪಠ್ಯವನ್ನು ಸಂಭಾಷಣೆಯ ರೂಪದಲ್ಲಿಡುವುದು, ಚಿಂತನೆಗಾಗಿ ವಿವಿಧ ಪ್ರಶ್ನೆಗಳನ್ನು ಮುಂದಿಡುವುದು ಮತ್ತು ವಿಷಯಗಳನ್ನು ಚಿತ್ರಗಳು, ದಿನಪತ್ರಿಕೆಯ ಲೇಖನಗಳು ಮತ್ತು ಪುಟ್ಟ ಜೀವನಚರಿತ್ರೆಗಳ ಮೂಲಕ ವಿವರಿಸುವುದೆಂದು ಸ್ಥೂಲ ವಿಧಾನವನ್ನುನಿಗದಿ ಮಾಡಲಾಯಿತು.
 
ವಿದ್ಯಾರ್ಥಿ ಶಿಕ್ಷಕ ರಿಗೆ ಓದಲು ಕೊಟ್ಟು ವಾಚನ ಲೇಖನಗಳ ಪರೀಕ್ಷೆ ೪
ಬೆಂಗಳೂರಿನ ಮೂರು ಡಿ.ಎಡ್ ಕಾಲೇಜುಗಳ ೨೦ ಮಂದಿ ವಿದ್ಯಾರ್ಥಿಶಿಕ್ಷಕರಿಗೆ  ಕರಡು ಕರಡು ವಾಚನ ಲೇಖನಗಳನ್ನು ಓದಲು ಕೊಟ್ಟು  ಪರಿಶೀಲಿಸುವುದು ಮುಂದಿನ ಹಂತವಾಗಿತ್ತು . 
 
ವಿದ್ಯಾರ್ಥಿ  ಶಿಕ್ಷಕರೊಂದಿಗೆ ಮೂಲತಃ ಸಂಭಾಷಣೆ  ವಿಧಾನದಲ್ಲಿ ತೊಡಗಿಸಿಕೊಂಡು ಇದನ್ನು ನಡೆಸಲಾಯಿತು. ವಾಚನ ಸಾಮಾಗ್ರಿಗೆ ಬೆಂಬಲವಾಗಿ  ಸಂಬಂಧಪಟ್ಟ ಲೇಖನಗಳು/ ಗ್ರಂಥಗಳಲ್ಲಿನ ಅಧ್ಯಾಯಗಳು ಮತ್ತು ಚಲನಚಿತ್ರದ ತುಣುಕುಗಳನ್ನು ಬಳಸಲಾಯಿತು. ಪಾಠದ ಅವಧಿಗಳಲ್ಲಿ ಸಣ್ಣ ಸಣ್ಣ ಗುಂಪುಗಳು ಅಥವಾ ಇಡೀ ತರಗತಿ ವಿಸ್ತೃತ ಚರ್ಚೆ ನಡೆಸಿದವು  ಮತ್ತು ವಿದ್ಯಾರ್ಥಿ  ಶಿಕ್ಷಕರಿಗೆ  ಮುಕ್ತ ಉತ್ತರದ ಪ್ರಶ್ನೆಗಳ ಪ್ರಶ್ನಾವಳಿ ಕೊಟ್ಟು ಸಾಂದರ್ಭಿಕ ಪ್ರಶ್ನೆಗಳು ಮತ್ತು ಪ್ರಬಂಧಗಳ ಪ್ರತಿಕ್ರಿಯೆಯಾಗಿ ಲಿಖಿತ  ಕಾರ್ಯಯೋಜಮಾಡಲು  ಕೊಡಲಾಯಿತು. 
 
ನಡೆದ ಚರ್ಚೆಗಳು ಮತ್ತು ಮಾಡಿದ  ಕಾರ್ಯಯೋಜನೆ ಲೇಖನಗಳು ಅವರ ನಂಬಿಕೆ ಮತ್ತು ದೃಷ್ಟಿಕೋನದ ಬಗ್ಗೆ ಒಂದು ಬೆಳಕಿಂಡಿಯನ್ನು ಒದಗಿಸಿದವು . ಉದಾಹರಣೆಗೆ ಮಕ್ಕಳನ್ನು ’ಚುರುಕು’ ’ದಡ್ಡ’ ಎಂದು (ಪರೀಕ್ಷೆಯಲ್ಲಿ ಪಡೆದ ಅಂಕಗಳಿಂದ ತಿಳಿದುಕೊಂಡಂತೆ) ಜಾಣತನದ  ಆಧಾರದಲ್ಲಿ  ಹಣೆಪಟ್ಟಿ ಹಚ್ಚುವುದು ಸರಿ ಎಂಬ  ನಂಬಿಕೆಯು ಬಹಳ ಆಳವಾಗಿ ಬೇರೂರಿದ್ದು ಕಂಡುಬಂದಿತು ,ಇನ್ನು  ಜಾತಿಯ ಬಗೆಗಿನ ಗ್ರಹಿಕೆಗಳು ವಿವಿಧ ಸ್ತರದವುಗಳಾಗಿದ್ದವು. ಸಾಮಾಜಿಕ ಐತಿಹಾಸಿಕ ವಿಷಯಗಳ ತಿಳಿಯುವಿಕೆಯ ಸೂಕ್ಷ್ಮ ವ್ಯತ್ಯಾಸದಿಂದ ಪಡೆದ ತಿಳಿವಳಿಕೆಯಿಂದ ಆರಂಭಿಸಿ ದಲಿತ ಮಕ್ಕಳು ಕಡಿಮೆ ಬುದ್ಧಿವಂತರು ಮತ್ತು ಶಾಲೆಗೆ  ಸರಿಯಾಗಿ ಬರುವುದಿಲ್ಲ ಎಂಬ ಗಟ್ಟಿಯಾಗಿ ಕುಳಿತ   ಪೂರ್ವಗ್ರಹದ ಅಭಿಪ್ರಾಯದವರೆಗೆ ಭಿನ್ನ ವಾಗಿದ್ದವು  ಸಾಮಾಜಿಕ  ಮೇಲು ಕೀಳು ವ್ಯವಸ್ಥೆಯೂ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿದ್ದು  ಅಲ್ಲಿ ಕಂಡುಬಂತು.  ಮ್ಯಾಗ್ಸಿನ್ ಗ್ರೀನ್ ಆಗ್ರಹಿಸುವಂತೆ ದಿನನಿತ್ಯದ ಅಂಗವಾಗಿ ಗಮನಕ್ಕೆ ಬಾರದಿರುವ, ಸುಪರಿಚಿತ  ವಿಷಯಗಳಿಂದ ಮರೆಮಾಚಿ ಹೋಗಿರುವ ಅಂಶಗಳನ್ನು   ನೋಡಲು ಸಾಧ್ಯವಿದೆಯೇ ಎಂದು  ಪರಿಶೋಧಿಸಲು ನಿರ್ಧರಿಸಿದೆವು . ಈ ಅನ್ವೇಷಣೆಗಳು ಗ್ರಾಂಟ್ ಮತ್ತು ಅಗಸ್ಟೋ (೨೦೦೮) ಪ್ರಸ್ತಾಪಿಸಿದ ಸಾಮಾಜಿಕ ನ್ಯಾಯಕ್ಕಾಗಿ ಶಿಕ್ಷಕ ಸಾಮರ್ಥ್ಯಗಳಿಂದ ರೂಪಿಸಲ್ಪಟ್ಟವು . 
 
೧. ಶೋಧನೆ ಆಧಾರಿತ ವಿಮರ್ಶಾತ್ಮಕ ಬೋಧನೆ ವಿಧಾನಕ್ಕೆ  ಬದ್ಧತೆ .
೨. ಕಾರ‍್ಯಗತಗೊಳಿಸುವ ಮತ್ತು ಸಹಯೋಗಗಳ ಸಮೂಹಗಳ ರಚನೆ .
೩. ಚಿಂತನಾತ್ಮಕ ಅಭ್ಯಾಸದಲ್ಲಿ ತೊಡಗುವಿಕೆ .
೪. ವಿಮರ್ಶಾತ್ಮಕ ಸಾಮಾಜಿಕ ಜಾಗೃತಿಯ ಅಭಿವೃದ್ಧಿ . 
 
ಈ ಸಾಮರ್ಥ್ಯಗಳು ಅಭಿವೃದ್ಧಿಗೊಳ್ಳಲು ಸಮಯ ಮತ್ತು ತಾಳ್ಮೆಯಿಂದ ಕೂಡಿದ ಅವಿರತ ಪ್ರಯತ್ನ ಆವಶ್ಯಕವಾಗಿದೆ. ವಿದ್ಯಾರ್ಥಿ ಶಿಕ್ಷಕರೊಂದಿಗಿನ ನಮ್ಮ ೩೦ ಗಂಟೆಗಳ ಕೆಲಸದಲ್ಲಿ ಅವರಿಗೆ ಶೋಧನೆ ಆಧಾರಿತ ವಿಮರ್ಶಾತ್ಮಕ ಬೋಧನೆ ವಿಧಾನದ ಸಂಕ್ಷಿಪ್ತ ಅನುಭವ ನೀಡಲು ಮತ್ತು ಚಿಂತನಾತ್ಮಕ ಅಭ್ಯಾಸದಲ್ಲಿ ತೊಡಗಲು ಅವಶ್ಯ ಸಲಹೆಗಳನ್ನು ನೀಡಲು ಸಾಧ್ಯವಾಯಿತು ಮತ್ತು ಕಾರ‍್ಯರೂಪಕ್ಕೆ ತರುವ ಸಮೂಹಗಳ ರಚನೆ ಮತ್ತು ವಿಮರ್ಶಾತ್ಮಕ ಸಾಮಾಜಿಕ ಜಾಗೃತಿಯ ಅಭಿವೃದ್ಧಿಯ ಪ್ರಾಮುಖ್ಯತೆಯನ್ನು ಮನಗಾಣಿಸಲಾಯಿತು ೫. ಶಿಕ್ಷಕ ತರಬೇತುದಾರರು ಅರ್ಥವಾಗುವಚಿತಹ ಸಂದೇಶ ಕೊಡುವುದರೊಂದಿಗೆ ಈ ಪ್ರಯತ್ನವು ಶಿಕ್ಷಕ ತರಬೇತಿ ಕಾರ್ಯಕ್ರಮದುದ್ದಕ್ಕೂ ಹರಡಿರಬೇಕು . ಅದರೊಂದಿಗೆ ಸಾಮಾಜಿಕ ನ್ಯಾಯದ ವಿಚಾರ ಮತ್ತು ಸಿದ್ಧಾಂತಗಳನ್ನು ಅಭ್ಯಾಸದಲ್ಲಿ ತರಬೇಕಾದರೆ ಹೊಸದಾಗಿ ನೇಮಕಗೊಂಡ  ಶಿಕ್ಷಕರನ್ನು  ಕೈಹಿಡಿದು ನಡೆಸಿ  ಮಾರ್ಗದರ್ಶನ ಮತ್ತು ಸಲಹೆನೀಡುವ  ಉತ್ತೇಜನವು ಆರಂಭದಲ್ಲಿ  ಆವಶ್ಯಕವಾಗಿರುತ್ತದೆ. ವಿದ್ಯಾರ್ಥಿ ಶಿಕ್ಷಕರು  ತಮ್ಮ ಬಗ್ಗೆ ,ಇತರರೊಂದಿಗೆ ಅಥವಾ ಪ್ರಪಂಚದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಪ್ರಶ್ನಿಸಿದಾಗ  ಎದುರಿಸುವ ಮುಜುಗರದ  ಬಗೆಗೆ ಶಿಕ್ಷಕರ  ತರಬೇತುದಾgರನ್ನು  ಸಂವೇದನಾ ಶೀಲರಾಗಿಸಬೇಕು. (ಕುಮಾಶಿರೊ-೨೦೦೮) . ಬಹುಮುಖ್ಯವಾಗಿ ತಮ್ಮ ವಿದ್ಯಾರ್ಥಿ ಶಿಕ್ಷಕ ರಲ್ಲಿ ಕಾಣಬಯಸುವ ಸಾಮರ್ಥ್ಯಗಳನ್ನು ಶಿಕ್ಷಕ ತರಬೇತುದಾರರು ಪ್ರಜ್ಞಾಪೂರ್ವಕವಾಗಿ ಬೆಳೆಸ ಬಕು.
 
ಶಿಕ್ಷಕರ ಸಾಮರ್ಥ್ಯ ಬೆಳಸಬೇಕಾದರೆ ಮತ್ತು ’ಉನ್ಮುಕ್ತ  ಬೋಧನೆಯ” ಕಡೆಗೆ (Hammerness et al, , ೨೦೦೫) ಅವರಿಗೊಂದು ದೃಷ್ಟಿಕೋನ  ಬೆಳೆಯಬೇಕಾದ ಅವಶ್ಯಕತೆ ಇದೆಯಾದರೂ, ಪೂನಮ್ ಬಾತ್ರ (೨೦೧೪) ಎಚ್ಚರಿಸುವಂತೆ ಶಿಕ್ಷಕರು ಸುಧಾರಣೆಯ  ವಸ್ತು ವಿಶೇಷಗಳಾಗಬಾರದು. ಶಿಕ್ಷಕರು ಈ ವ್ಯವಸ್ಥೆಯ ಅಂಗ ಮತ್ತು ಶಿಕ್ಷಕ ತರಬೇತಿಯು ಅವರನ್ನು ಶಕ್ತಗೊಳಿಸುವಲ್ಲಿ ಮಹತ್ವದ ಪಾತ್ರವಹಿಸಿದಾಗ ಸಾಂಸ್ಥಿಕ ರಚನೆಯು ಶಿಕ್ಷಕರ ಸ್ವಾಯತ್ತತೆಯನ್ನು ಹಾಳುಗೆಡವುದಿಲ್ಲ ಎಂಬುದನ್ನು ನಿಯಮಗಳು ಮತ್ತು ನಿಬಂಧನೆಗಳು ನಿಶ್ಚಿತ ಮಾಡಿಕೊಡಬೇಕು. ಅಮನ್ ಮದನ್ (೨೦೧೩) ಅವರು - ಶಾಲಾ ವಿದ್ಯಾಭ್ಯಾಸ ಮತ್ತು  ಶಾಲಾ ರಚನೆಗಳ ಮಧ್ಯದ ಸಂಬಂಧವು ಸಂಕೀರ್ಣವಾದುದು ಮತ್ತು ಅದಕ್ಕೆಸೂಕ್ಷ್ಮ ಅರ್ಥೈಸುವಿಕೆಅಗತ್ಯ  (ಪು.೧೩೮) ನಮ್ಮ ದೇಶದಲ್ಲಿ ಸಾಮಾಜಿಕ ನ್ಯಾಯ ಮತ್ತು ಶಿಕ್ಷಕರ ತರಬೇತಿಯ ಕಾರ್ಯಗಳು ಅಂತಹಾ ಅರ್ಥೈಸುವಿಕೆಯನ್ನು ಪ್ರೋತ್ಸಾಹಿಸಬೇಕು ಎಂದು ನಿರ್ದಿಷ್ಟವಾಗಿ ಹೇಳುತ್ತಾರೆ .
 
ಶಿಕ್ಷಣವು ಅವಲೋಕಿಸುವ ಸಾಮರ್ಥ್ಯದೊಂದಿಗೆ  ಬದಲಾವಣೆಯನ್ನು ಮಾಡುವ ಸಾಮರ್ಥ್ಯದೊದಿಗೆ , ಅರ್ಥೈಸಿಕೊಳ್ಳುವುದು  ಮಾತ್ರವಲ್ಲದೇ ಅದರೊಂದಿಗೆ ಮರುಶೋಧನೆಯನ್ನು ಮಾಡುವ ಮತ್ತು ಜಗತ್ತನ್ನು ಅರಿತುಕೊಳ್ಳುವ ಹಾಗೂ ಅದನ್ನು ರೂಪಾಂತರಗೊಳಿಸುವ ಸ್ವಾತಂತ್ರ್ಯದೊಂದಿಗೆ ತಳುಕುಹಾಕಿಕೊಂಡಿದೆ (ಅಯರ‍್ಸ ೨೦೦೪,ಪು.೨೧). ಶಾಲಾವ್ಯವಸ್ಥೆಯು ಈ ಶಿಕ್ಷಣವನ್ನು ನಿಶ್ಚಿತಗೊಳಿಸಬೇಕಾದರೆ ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಗಳು ಪರಸ್ಪರ ಹೊಂದಿಕೊಳ್ಳಬಲ್ಲ ನೈಪುಣ್ಯತೆಯನ್ನು (ಗ್ರಾಂಟ್ ಮತ್ತು ಅಗಸ್ಟೊ ೨೦೦೮)  ಬೆಳಸಿಕೊಳ್ಳಬೇಕು. 
 
ಕೊನೆಯ ನುಡಿ
೧. ಸಮಾವೇಶಿ ಶಿಕ್ಷಣದಲ್ಲಿ ತೊಡಗಿಕೊಳ್ಳಲು ನನ್ನನ್ನು  ಒಪ್ಪಿಸಿದ ಮತ್ತು ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ನಿರಂತರ ಜೊತೆಯಾಗಿದ್ದುದಕ್ಕೆ ರುಮಾ ಬ್ಯಾನರ್ಜಿಯವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ . 
 
೨. ಬಹಳ ಹಿಂದಿನಿಂದಲೂ ಅವಕಾಶ ವಂಚಿತರಾದವರಿಗೆ ಶಾಲಾವ್ಯವಸ್ಥೆಯು ಅರ್ಥಹೀನ ಅನುಭವವನ್ನು ನೀಡುತ್ತಿದೆಯಲ್ಲದೇ, ಅತ್ಯಂತ ದುರ್ಬಲ ಆತ್ಮವಿಶ್ವಾಸ ಮತ್ತು ಬಲಿಷ್ಠ ನಾಯಕತ್ವದ ಮೌಲ್ಯಗಳ ಕೊರತೆಯನ್ನು ಸಕ್ರಿಯವಾಗಿ ಮುಂದುವರೆಸುತ್ತಾ ಬರುತ್ತಿವೆ. ಇದನ್ನು ಬಹಳ ಉತ್ತಮವಾಗಿ ದಾಖಲಿಸಲಾಗಿದೆ. (ಉದಾಹರಣೆಗಾಗಿ ನೋಡಿ : ಕೃಷ್ಣ ಕುಮಾರರ  ಸಮಾಜ ಅಧ್ಯಯನ ತರಗತಿಯಲ್ಲಿ  ಬುಡಕಟ್ಟು ಜನಾಂಗದ ಹುಡುಗನ ಅನುಭವದ ಗಮನಿಸುವಿಕೆ - ೧೯೮೯, ಅಥವಾ ಮುರಳಿ ಕೃಷ್ಣರ ಬೋಧನಾತತ್ವಗಳ ಅಭ್ಯಾಸ ಮತ್ತು ಶಾಲಾ ವಿದ್ಯಾಭ್ಯಾಸದಲ್ಲಿ ದಲಿತರ ವಿರುದ್ಧ ಹಿಂಸೆ, ೨೦೧೨) ಸಮಾವೇಶತೆಯ ಪ್ರಯತ್ನಗಳು ನಡೆದರೂ, ಅಸಮರ್ಥತೆ ಹೊಂದಿದ  ಮಕ್ಕಳಿಗೆ ಪ್ರತ್ಯೇಕಿಸಲಾದ ಅನುಭವಗಳು ಮನವರಿಕೆಯಾಗಿತ್ತು(ಸಕ್ಸೇನ ೨೦೧೨).
 
೩. ಸಮಾವೇಶಿ ಶಿಕ್ಷಣದ ಬಗೆಗಿನ ಯಥಾವತ್ ಲೇಖನಗಳು (ಬ್ಯಾನರ್ಜಿ ೨೦೧೩) ಪರಾಮರ್ಶೆಗಳಿಗೆ ಬೇಕಾದ ಆಧಾರವನ್ನು ಒದಗಿಸಿದವು.
 
೪. ಈ ಚಟುವಟಿಕೆಯು  ಆSಇಖಖಿ ಯ  ಸಹಯೋಗಿ ಯೋಜನೆಯಾಗಿ ಮತ್ತು ಯುನಿಸೆಫ್‌ನ ಆರ್ಥಿಕ ಅನುದಾನದೊಂದಿಗೆ ನಡೆಯಿತು .
.  
 
೫. ತಾರತಮ್ಯತೆಗೆ ಸಂಬಂಧಿಸಿದ ವಿಷಯಗಳನ್ನು ಕುರಿತ ದೃಷ್ಟಿಕೋನವನ್ನು ಬೆಳೆಸಿಕೊಳ್ಳಲು ಬೇಕಾದಷ್ಟು ವಾಚನ ಸಾಮಾಗ್ರಿಗಳು ಇರುವುದು ನಮಗೆ ಕಂಡುಬಂದರೂ; ಬುದ್ಧಿಶಕ್ತಿ ಯಂತಹ ಮತ್ತು ಸಮಾವೇಶಿ ಕಲಿಕಾ ವಾತಾವರಣದ ಅಭಿವೃದ್ಧಿ ಅಗತ್ಯವನ್ನು ಮನಗಾಣುವುದನ್ನು  ಕುರಿತ ಕೆಲವು ಪರಿಕಲ್ಪನೆಗಳ ವಿಶದೀಕರಣ ಗಳು ಮತ್ತು ; ಸೂಚಿಸಿರುವ ಕೆಲವು ದೃಷ್ಠಾಂತಗಳು ಮತ್ತು ಚಟುವಟಿಕೆಗಳು ಈಗಾಗಲೇ ಇರುವ  ನಂಬಿಕೆಗಳು ಮತ್ತು ಪೂರ್ವಗ್ರಹಗಳನ್ನು ಇನ್ನೂಬಲಪಡಿಸುವಂತೆ ಕಾಣಿಸಿತು. ನಾವು ಈ ವಿಭಾಗಗಳನ್ನು ಪುನರವಲೋಕಿಸುವ ಪ್ರಕ್ರಿಯೆಯಲ್ಲಿದ್ದೇವೆ . ಸಾಮಾಜಿಕ ನ್ಯಾಯದ ವಿಚಾರಗಳನ್ನು ಬಾಹ್ಯ ದೃಷ್ಟಿಕೋನದಿಂದ ತಂದು ಮೇಲೆ ಹೇರಬಾರದು ಎಂದು ಜೇನ್ ಸಾಹಿಯವರು ನಮ್ಮ ಸಿದ್ದ  ಕೃತಿಯ ತಮ್ಮ ವಿಮರ್ಶೆಯಲ್ಲಿ ಎತ್ತಿ ಹೇಳಿದ್ದಾರೆ. ವಿದ್ಯಾರ್ಥಿಶಿಕ್ಷಕರೊಂದಿಗೆ  ನಮ್ಮ ಒಡನಾಟವು , ವಿದ್ಯಾರ್ಥಿ ಶಿಕ್ಷಕರಿಗೆ ಉದ್ಭವವಾಗುವ ಸಮಸ್ಯೆಗಳು ಮತ್ತು ನಂಬಿಕೆಗಳ ವಿಷಯವನ್ನು ಬಹಳ ಸ್ವಾಭಾವಿಕವಾಗಿ ತಿಳಿಸುವುದು ಹೇಗೆ ಎಂಬ ಒಳನೋಟವನ್ನು ಒದಗಿಸಿತು.
 
೬. ಯುನಿಸೆಫ್‌ನ ಆರ್ಥಿಕ ಅನುದಾನದ ಅಂಗವಾಗಿ ನಾವು ನಡೆಸಿದ ಅಧ್ಯಯನದಿಂದ , ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಶಿಕ್ಷಕರಿಬ್ಬರಲ್ಲೂ ಸಮಾವೇಶಿತ್ವದ ಬಗ್ಗೆ  ಆಳವಾಗಿ ಬೇರೂರಿವ ನಂಬಿಕೆಗಳು ಇರುವುದು ಎದ್ದುಕಾಣಿಸಿತು.  . ನಾವು ಸಾಮಾಜಿಕ ನ್ಯಾಯಕ್ಕೆ ಶಿಕ್ಷಕರ ಸಾಮರ್ಥ್ಯವನ್ನು ಅಭಿವೃದ್ಧಿಗೊಳಿಸುವ ಶಿಕ್ಷಕರ ತಯಾರಿಯ ಸದೃಢ ಕಾರ್ಯಕ್ರಮವನ್ನು ತೆಗೆದುಕೊಂಡರೂ . ಪ್ರಸ್ತುತ ಇರುವ ಶಾಲೆಗಳಲ್ಲಿ ಇವುಗಳನ್ನು ಅಭ್ಯಾಸಕ್ಕಿಳಿಸಲು ಹೊಸದಾಗಿ ನೇಮಕವಾದ ಶಿಕ್ಷಕರಿಗೆ ದೃಢ ನಿಶ್ಚಯ ಮತ್ತು ಅಧಿಕ ಆತ್ಮವಿಶ್ವಾಸ ಇರಬೇಕಾಗುತ್ತದೆ. ಹಳೇ ವಿದ್ಯಾರ್ಥಿಗಳಲ್ಲಿ ಕಾರ್ಯಗತಗೊಳಿಸುವ  ಸಮೂಹಗಳನ್ನು  ರಚಿಸಲು ಸಹಾಯಮಾಡುವಲ್ಲಿ ಮತ್ತು ಅತ್ಯಗತ್ಯ ಮಾರ್ಗದರ್ಶನವನ್ನು ನೀಡುವಲ್ಲಿ ಶಿಕ್ಷಕ ತರಬೇತಿ ಸಂಸ್ಥೆಗಳ ಪಾತ್ರವು ನಿರ್ಣಾಯಕವಾಗಿರುತ್ತದೆ. 
 
 
 
ಮೈಥಿಲಿಯವರು ವಿಜ್ಞಾನ ಶಿಕ್ಷಣದ ವಿಷಯದಲ್ಲಿ ಡಾಕ್ಟರೇಟ್ ಪದವಿಯನ್ನು ಪಡಿದಿದ್ದಾರೆ ಮತ್ತು ಪ್ರಸ್ತುತ ಇವರು ಬೆಂಗಳೂರಿನಲ್ಲಿರುವ ಆರ್‌ವಿ ಎಜುಕೇಷನಲ್ ಕನ್ಸಾರ‍್ಷಿಯಂ (ಆರ್ ವಿ ಇ ಸಿ )ನಿರ್ದೇಶಕರಾಗಿದ್ದಾರೆ.  ಆರ್‌ವಿಇಸಿಯ ಮುಖ್ಯ ಗಮನವು ಪ್ರಾಥಮಿಕ ಶಾಲಾ ಶಿಕ್ಷಕರ ಶಿಕ್ಷಣದ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಮಾಡುವುದಾಗಿದೆ.  ಮೈಥಿಲಿಯವರು ಈ ಹಿಂದೆ ಡಿ.ಎಡ್ ಪಠ್ಯಕ್ರಮ ಪರಿಷ್ಕರಣೆ   ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರಿಂದ, ಪ್ರಸ್ತುತ ಅವರು ಕರ್ನಾಟಕ ರಾಜ್ಯದ ಎರಡು ವರ್ಷದ ಶೈಕ್ಷಣಿಕ ವಿಷಯದ ಡಿಪ್ಲಮೋದ ಸಂಪನ್ಮೂಲಗಳು ಮತ್ತು ವಿಷಯ ಸಾಮಾಗ್ರಿಗಳನ್ನು ತಯಾರಿಸುವುದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇವರಿಗಿರುವ ಇನ್ನಿತರ ಆಸಕ್ತಿಗಳೆಂದರೆ ಸಮಾವೇಶಿ ಶಿಕ್ಷಣ ಮತ್ತು ಶಿಕ್ಷಣ ತತ್ವಶಾಸ್ತ್ರ..  ಇವರನ್ನು rvecbangalore@gmail.com ನಲ್ಲಿ ಸಂಪರ್ಕಿಸಬಹುದು
 
 
 
 
18934 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು