ಸರ್ವಸಮತೆಯ ಕೇಂದ್ರೀಕರಣ, ವಿವಿಧತೆಗೆ ಮನ್ನಣೆ: ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಸಮಾವೇಶನದ ಅನುಷ್ಠಾನ -ವಂದನಾ ಮಹಾಜನ್

ಹೆಣ್ಣು ಮಕ್ಕಳಿಗೆ ಸಮಾವೇಶಿ ಶಿಕ್ಷಣ ಶಕ್ತಿ:

 ಜಗತ್ತಿಗೆ ಸಾರಿ ಹೇಳುತ್ತಿದ್ದೇವೆ -ರೆಕ್ಕೆಗಳಿವೆ ನಮಗೆ, ಬಂಧಿಯಾಗೆವು ನಾವು ಪಂಜರದಲ್ಲಿ ,೧

ನನ್ನ ತಂದೆ ತಾಯಿಗೆ ನಾನು ತಕ್ಕ   ಮಗಳೆಂದು ಎಲ್ಲರೂ ಹೇಳುವಂತಾಗ ಬೇಕೆಂಬುದು ನನ್ನ ಇಚ್ಛೆ

ನನ್ನ ಊರಿನಲ್ಲಿ ನಾನೇ ಮೊದಲ ಪದವೀಧರೆ

ಒಳ್ಳೆಯ ಹೆಸರು ಗಳಿಸಬೇಕೆಂಬ ಆಸೆ ಇದೆ ನನಗೆ . ಆದರೆ ಎಲ್ಲಿ ಏನಾದರೂ ತಪ್ಪಾಗ ಬಹುದೇನೋ ಎಂಬ ಅಳುಕೂ ಇದೆ . ಅವಕಾಶವೇನಾದರೂ ಸಿಕ್ಕರೆ ಏನಾದರೂ ಮಾಡಿ ತೋರಿಸುತ್ತೇನೆ   ಎಂಬ ದೃಢ ನಂಬಿಕೆಯನ್ನು  ಕಳೆದುಕೊಂಡಿಲ್ಲ.

ಪುಕ್ಕಲು ಮತ್ತು ಅಂಜುಬುರುಕಿ ಎಂಬ ಸಮಾಜ ಕಟ್ಟಿದ  ಹಣೆಪಟ್ಟಿಯನ್ನ್ಟು ಅಳಿಸಿ ಹಾಕಿ  ಪರದೆ ಹಿಂದಿನಿಂದ  ಹೊರಬರುವುದೇ ನನ್ನ ಪಯಣ.

ಸಾಮಾಜಿಕ ರೂಢಿಗಳನ್ನು ಪ್ರಶ್ನಿಸಲು ನಾನು ನಿರ್ಧರಿಸಿದ್ದೇನೆ

ನಾನು ನಾಚಿಕೆಯನ್ನು ಬಿಡಲು ತೀರ್ಮಾನಿಸಿದ್ದೇನೆ

( ಮಹಿಳಾ ಸಮಾಕ್ಯ ಕಾರ‍್ಯಕ್ರಮ ಎಂದು ಜನಪ್ರಿಯವಾದ) ಮಹಿಳೆಯರ ಸಮಾನತೆಗೆ ಶಿಕ್ಷಣ ಎಂಬ ಹೆಸರಿನ  ರಾಷ್ಟ್ರೀಯ ಮಹಿಳಾ ಮತ್ತು ಹೆಣ್ಣು ಮಕ್ಕಳ ಸಬಲೀಕರಣ ಕಾರ್ಯಕ್ರಮದ  ರಾಷ್ಟ್ರೀಯ ಸಂಪನ್ಮೂಲ ಗುಂಪಿನ  ಸದಸ್ಯೆಯಾದ ನಾನು ಇತ್ತೀಚೆಗೆ ಜಾರ್ಖಂಡ್, ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ ಹೋದಾಗ, ಅಲ್ಲಿನ ಕೆಲವು ಯುವತಿಯರು ಎತ್ತಿದ ಧ್ವನಿ ಮೇಲಿನಂತಿತ್ತು. ತಮ್ಮ ಎಳೆ ವಯಸ್ಸಿನಲ್ಲೇ ಶಾಲೆಯಿಂದ ಹೊರದೂಡಲ್ಪಟ್ಟ ಹೆಣ್ಣು ಮಕ್ಕಳಿಗೆ, ಶಾಲೆಯ ಕಲಿಕೆ ಮತ್ತು ಮೋಜನ್ನು ಅನುಭವಿಸಲು ಮತ್ತೊಂದು ಅವಕಾಶ ಸಿಕ್ಕಿದ್ದು ಈ ಎಲ್ಲ ಹೆಣ್ಣು ಮಕ್ಕಳ ಅಭಿಪ್ರಾಯ ಮತ್ತು ಮಹತ್ವಾಕಾಂಕ್ಷೆಗೆ ಶಕ್ತಿ ಮತ್ತು ಚೈvನ್ಯವನ್ನು ಮತ್ತು ಗಟ್ಟಿ ಧ್ವನಿಯನ್ನು  ನೀಡಿದೆ. ಮಹಿಳಾ ಸಮಾಕ್ಯ ಕಾರ್ಯಕ್ರಮದ ಅಂಗವಾದ ಮಹಿಳಾ ಶಿಕ್ಷಣ ಕೇಂದ್ರವೆಂಬ   ಸೇತು ಶಿಕ್ಷಣ ಕಾರ್ಯಕ್ರಮದಿಂದ ಇಂತಹ ಸಾವಿರಾರು ಹೆಣ್ಣು ಮಕ್ಕಳು ಪ್ರಾಥಮಿಕ ಶಿಕ್ಷಣದ ಮುಖ್ಯವಾಹಿನಿಯನ್ನು ಮತ್ತೆ ಸೇರಲು ಅವಕಾಶ ದೊರೆಯಿತು. ಮಹಿಳಾ ಸಮಾಕ್ಯ ಕಾರ್ಯಕ್ರಮದಂತಹ ಕಾರ್ಯಕ್ರಮಗಳು ಇರದೇ ಹೋಗಿದ್ದರೆ  ಕಡು ಬಡವ ಮತ್ತು ಕಡೆಗಣಿಸಲಾದ ವರ್ಗದ ಈ ಹೆಣ್ಣುಮಕ್ಕಳ ಮಹತ್ವಾಕಾಂಕ್ಷೆ ಮತ್ತು ಆಶೋತ್ತರ ಗಳು ಬಹಿಷ್ಕರಿಸುವ ಮತ್ತು ತುಳಿಯುವಂತಹ ಸಾಮಾಜಿಕ ಸಂಸ್ಕೃತಿಯಿಂದ  ಕೈ ಗೆಟುಕದಂತಾಗಿ ಅವರು ವಂಚಿತರಾಗುತ್ತಿದ್ದರು. ಸರ್ವಸಮತೆಯ ತತ್ವ ಮತ್ತು ಸಮಾವೇಶನವನ್ನು ಅನುಷ್ಠಾನಕ್ಕೆ ತರುತ್ತಿರುವ ಈ ಮಹಿಳಾ ಶಿಕ್ಷಣ ಕೇಂದ್ರಗಳು  ಹೆಣ್ಣು ಮಕ್ಕಳಲ್ಲಿ ಆತ್ಮ ವಿಶ್ವಾಸ ಮತ್ತು ದೃಢ ಆತ್ಮ ಗೌರವ ಹಾಗು ಸುರಕ್ಷತೆಯನ್ನು ಬೆಳೆಸಲು ಬಹಳ ಸಹಾಯ ಮಾಡುತ್ತಿವೆ.

ಶಿಕ್ಷಣದಲ್ಲಿ ಜಾತಿಯಾಧಾರಿತ ತಾರತಮ್ಯ:
ಸಾಮಾಜಿಕ ಸಂಬಂಧಗಳಲ್ಲಿ ಸಮಾನತೆಯನ್ನು ಸೃಷ್ಟಿಸುವುದರಲ್ಲಿ ಶಿಕ್ಷಣವು  ವೇಗವರ್ಧಕವಾಗಿ ಕಾರ್ಯ ನಿರ್ವಹಿಸುತ್ತದೆಯೆಂದು ನಾವು ನಂಬಿದ್ದರೂ, ಶಾಲೆಗಳು ಅಥವಾ ತರಗತಿಗಳು ಎದ್ದು ಕಾಣುವ ಅಥವಾ ಒಳ ಒಳಗೇ ಇರುವ  ಪೂರ್ವಗ್ರಹ ಮತ್ತು ಅಸಮಾನತೆಗಳಿಂದ ಮುಕ್ತವಾಗಿಲ್ಲ. ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಸಮಾಜದ ಅತಿ ಕನಿಷ್ಠ  ವ್ಯಕ್ತಿಗೂ ಶಿಕ್ಷಣ ದೊರೆಯಬೇಕೆಂದಿದ್ದರೂ, ತೀರ ಕೆಳವರ್ಗದ ಮಕ್ಕಳು ತಮ್ಮ ಶಿಕ್ಷಕರು ಮತ್ತು ಇತರ  ಶಿಕ್ಷಣ ಸಿಬ್ಬಂದಿಯವರಿಂದ ಅನುಭವಿಸುವ ತಾರತಮ್ಯ ಮತ್ತು ಅವಮಾನಗಳನ್ನು  ಅನುಭವಿಸದಂತೆ ಮಾಡಲು  ವಿಫಲರಾಗಿದ್ದಾರೆ. ಇವು ಏಪ್ರಿಲ್ ೨೦೧೪ರ ಮಾನವ ಹಕ್ಕುಗಳ ಕಾವಲು ಸಮಿತಿ ವರದಿಯ ತೀರ‍್ಮಾನಗಳ ಮುಖ್ಯ ಅಂಶಗಳಾಗಿವೆ. ’ಅವರು ನಮ್ಮನ್ನು ಕೊಳಕರು ಎನ್ನುತ್ತಾರೆ: ಭಾರತದ ಕೆಳವರ್ಗದವರಿಗೆ ಶಿಕ್ಷಣದ ನಿರಾಕರಣೆ   ಎಂಬ ಶೀರ್ಷಿಕೆಯ ಈ ವರದಿಯು - ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರ ಪ್ರದೇಶದ ಕೆಲವು ದಲಿತ, ಬುಡಕಟು  ಜನಾಂಗದ  ಮತ್ತು ಮುಸ್ಲಿಂ ಮಕ್ಕಳ ಮೇಲೆ ಶಾಲಾ ಆಡಳಿತದವರಿಂದ ಆಗುತ್ತಿರುವ ತಾರತಮ್ಯವನ್ನು ದಾಖಲಿಸಿದೆ. ಶಾಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಕ್ಕಳನ್ನು ಶೌಚಾಲಯಗಳನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ತರಗತಿಗಳಲ್ಲಿ ಪ್ರತ್ಯೇಕವಾಗಿ ಬೇರೆಡೆ ಕೂಡಿಸುವವರೆಗೂ ಎಡೆಬಿಡದೆ ನಡೆಯುತ್ತಿರುವ ತಾರತಮ್ಯದ ಬಗ್ಗೆ ಸವಿಸ್ತಾರವಾಗಿ ಈ ವರದಿಯಲ್ಲಿ ಹೇಳಲಾಗಿದೆ. ವರದಿಯ ಪ್ರಕಾರ ಈ ತಾರತಮ್ಯ   ಮಕ್ಕಳಿಗೆ ಶಾಲೆಯಲ್ಲಿ ಇಷ್ಟವಿಲ್ಲದ ವಾತಾವರಣವನ್ನು ಸೃಷ್ಟಿಸಿ ಶಾಲೆಯಿಂದ ದೂರ ಉಳಿಯುವ ಮತ್ತು ಕೊನೆಗೆ ಶಾಲೆಯನ್ನೇ ಬಿಡುವ ಪರಿಸ್ಥಿತಿಯನ್ನುಂಟುಮಾಡುತ್ತದೆ. 

ಇಂತಹ ಬೇರೂರಿದ ಸಾಮಾಜಿಕ ಬಹಿಷ್ಕಾರಗಳನ್ನು ನಿಗ್ರಹಿಸಲು ಬಿಹಾರದಲ್ಲಿ ಉತ್ಥಾನ ಕಾರ್ಯಕ್ರಮದ ಮೂಲಕ ಮಹಾದಲಿತ (ಮುಸಹರ್) ಪಂಗಡದ ಬಗ್ಗೆ ಹೆಚ್ಚು  ಗಮನ ನೀಡುವ  ಕಾರ್ಯಕ್ರಮಗಳನ್ನು  ಪ್ರಾರಂಭಿಸಲಾಯಿತು ಮತ್ತು  ಅತ್ಯಂತ ಕಡೆಗಣಿಸಲ್ಪಟ್ಟ ವರ್ಗದವರೂ ಸಹ ಪ್ರಾಥಮಿಕ ಶಿಕ್ಷಣ ಮುಖ್ಯವಾಹಿನಿಯಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಲಾಯಿತು. ಅದೇ ರಾಜ್ಯದಲ್ಲಿ ’ಹುನಾರ್’ ಎಂಬ ಮತ್ತೊಂದು ಕಾರ್ಯಕ್ರಮವು  ಮುಸ್ಲಿಂ ಹೆಣ್ಣು ಮಕ್ಕಳಿಗೆ ವೃತ್ತಿಪರ ಶಿಕ್ಷಣ ಅವಕಾಶಗಳನ್ನು ಒದಗಿಸುತ್ತದೆ. ಸಮಾವೇಶಿ ಶಿಕ್ಷಣದ ಅನುಷ್ಠಾನಕ್ಕೆ ಈ ಕಾರ್ಯಕ್ರಮಗಳು ಉತ್ತಮ ಉದಾಹರಣೆಗಳಾಗಿವೆ.

ಮಗುವಿನ ಮೊದಲ ಭಾಷೆ, ಸ್ಥಳೀಯ ಭಾಷೆ ಮತ್ತು ಮುಖ್ಯವಾಹಿನಿ ಭಾಷೆಗಳ  ನಡುವಿನ ನಿಷ್ಕ್ರಿಯ ಸಂಬಂಧ

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಇರುವ  ಮತ್ತೊಂದು ಬೇರ್ಪಡಿಸುವ  ಪದ್ಧತಿಯೆಂದರೆ ಮಕ್ಕಳ  ಮಾತೃ ಭಾಷೆಯನ್ನು ಕಡೆಗಣಿಸಿ, ರಾಜ್ಯಗಳು ಪ್ರಾಯೋಜಿಸುವ ಕೇಂದ್ರೀಕೃತ ಪಠ್ಯಕ್ರಮ ಮತ್ತು ಬೋಧನಾ ವಿಧಾನದ ಮೂಲಕ  ಕೆಲವು ಪ್ರಬಲ ಭಾಷೆಯ ಅಧಿಪತ್ಯವನ್ನು ಮಕ್ಕಳ ಮೇಲೆ ಹೇರಲಾಗುತ್ತಿರುವುದು. ದ್ವಿಭಾಷಾ ಮತ್ತು ಬಹುಭಾಷೆ ಸಾಮರ್ಥ್ಯಗಳು ಮಕ್ಕಳಿಗೆ ಶೈಕ್ಷಣಿಕ ಯಶಸ್ಸು, ಉತ್ತಮ ಸಾಧನೆಯನ್ನು ಸಾಧಿಸಲು ಪ್ರೇರಣೆ ಯಾಗುತ್ತದೆ, ಕುಟುಂಬ ಮತ್ತು ಸಮೂಹದವರೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಮ್ಮ ಸ್ವಾಸ್ಥ್ಯಕ್ಕೆ ಪ್ರಯೋಜನಕಾರಿಯಾಗಿದೆ ಎನ್ನುವುದನ್ನು ಸಂಶೋಧನೆಗಳು ರುಜುವಾತು ಪಡಿಸಿವೆ (ವೆನ್-ಜುಯಿ ಮತ್ತು ಚೆಯಿನ್-ಚುಂಗ್, ೨೦೧೦; ಕ್ಲಾರ್ಕ್, ೨೦೦೯). ಇದಕ್ಕೆ ವಿರುದ್ದವಾಗಿ , ಮಕ್ಕಳು ತಮ್ಮ ಪ್ರಥಮ ಭಾಷೆಯನ್ನು ಕಳೆದುಕೊಂಡಾಗ ಅಥವಾ ಅದರಿಂದ ವಂಚಿತರಾದಾಗ, ಪ್ರಥಮ ಭಾಷೆಯ ಪ್ರಯೋಗವಿಲ್ಲದೆ ತಮ್ಮ ಸಾಂಸ್ಕೃತಿಕ ಪರಂಪರೆ ಮತ್ತು ಕೌಟುಂಬಿಕ ಮೌಲ್ಯಗಳೊಂದಿಗೆ ಬೆಸೆದುಕೊಳ್ಳುವುದು ಕಷ್ಟ. ಇದರಿಂದ ಮಕ್ಕಳು ತಮ್ಮ ಕುಟುಂಬ ಮತ್ತು ಗುಂಪಿನವರಿಂದ ಹೊರಗುಳಿಯುವಂತಾಗುತ್ತದೆ ಮತ್ತು ತಮ್ಮ ಮೊದಲ ಮತ್ತು ಎರಡನೆಯ ಭಾಷೆಯೊಂದಿಗೆ (ಹೆಚ್ಚುವರಿ) ಸಂಪರ್ಕ ವಿಲ್ಲದಿರುವುಸನ್ನು  ಅನುಭವಿಸಬೇಕಾಗುತ್ತದೆ (ಯಾಜಿಕಿ, ಇಟ್ಲರ್ ಮತ್ತು ಗ್ಲೋವರ್, ೨೦೧೦).

ಒರಿಸ್ಸಾದ ನಾಲ್ಕು ಬುಡಕಟ್ಟು ಸಮುದಾಯದ ಮಕ್ಕಳಿಗೆ ಒದಗಿಸಿದ  ಶೈಕ್ಷಣಿಕ ಸೇವೆಯ ಸಾಂದರ್ಭಿಕ ವಿಶ್ಲೇಷಣೆಗಳು೪ ಕೆಳಕಂಡ ಅಂಶಗಳನ್ನು ತೋರಿಸಿದವು. ಅಲ್ಲಿನ ಪ್ರಮುಖವಾದ ಬುಡಕಟ್ಟು ಜನಾಂಗದ ನಾಲ್ಕು ಪ್ರಾಥಮಿಕ ಶಾಲೆ ಮತ್ತು ಎಳೆಯ ಮಕ್ಕಳ ಆರೈಕೆ ಮತ್ತು ಶಿಕ್ಷಣ (ಇಅಅಇ) ಕೇಂದ್ರಗಳಲ್ಲಿ ಭಾಷೆ ಮತ್ತು ಬುಡಕಟ್ಟು ಪಂಗಡಗಳ ವಿಷಯಗಳಲ್ಲಿ ಯಾವುದೇ ವಿಭಿನ್ನತೆ   ಇರಲಿಲ್ಲ. ಪ್ರಮುಖ ಬುಡಕಟ್ಟು ಸಮುದಾಯದ ಮಕ್ಕಳು ತಮ್ಮ ಮನೆಭಾಷೆಯಲ್ಲೇ ಮಾತನಾಡುತ್ತಿದ್ದರು ಆದರೆ ಇಅಅಇ ಶಿಕ್ಷಕರಿಗೆ ಒರಿಯಾ ಭಾಷೆ ಮಾಧ್ಯಮದಲ್ಲಿ ಪಾಠ ಮಾಡಲು ತರಬೇತಿ ನೀಡಲಾಗಿತು. ಏಕೆಂದರೆ ಅವರಿಗೆ ಮಕ್ಕಳ ಮನೆ ಭಾಷೆಯನ್ನು ಓದಲು ಮತ್ತು ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಅಲ್ಲದೇ ಅವರಿಗೆ ತಮ್ಮ ನಿತ್ಯದ ತರಗತಿಗಳನ್ನು ಮಕ್ಕಳ ಭಾಷೆಯಲ್ಲಿ ನಿರ್ವಹಿಸಲು ಜೊತೆಗೆ ಒರಿಯಾ ಮತ್ತು ಮಕ್ಕಳ ಮನೆ ಭಾಷೆಯ ಮಧ್ಯೆ ಸಂಪರ್ಕವನ್ನು ತರಲು ಸಾಧ್ಯವಾಗುವಂತೆ ಸಾಕಷ್ಟು ಬೋಧನೆ ಕಲಿಕೆ ಯ ನೆರವು ಸಾಮಾಗ್ರಿಗಳು  ಇರುತ್ತಿರಲಿಲ್ಲ.
 
ಒರಿಸ್ಸಾ ರಾಜ್ಯ ಶಿಕ್ಷಣ ಇಲಾಖೆಯ ತಾಂತ್ರಿಕ ಶಿಕ್ಷಣ ಸಹಯೋಗ ಸಂಸ್ಥೆಯಾದ ಇಖಉ-IಉಓUS, ಬುಡಕಟ್ಟು ಸಮುದಾಯದ ಮಕ್ಕಳಿಗೆ ಇಅಅಇ ಶಿಕ್ಷಣದಲ್ಲಿ ಸಮಾವೇಶನವನ್ನು ಸೇರಿಸುವ ಪ್ರಯತ್ನ ನಡೆಸುತ್ತಿದೆ. ಈ ಮಕ್ಕಳಿಗೆ ನಾಲ್ಕು ಬುಡಕಟ್ಟು ಭಾಷೆಗಳಲ್ಲಿ ಮಕ್ಕಳ ಜೀವನಕ್ಕೆ ಸುಸಂಬಂಧಿತವಾದ ಬೋಧನಾ ವಿಷಯಗಳನ್ನು   ಒದಗಿಸಿ ಮತ್ತು ಶಿಕ್ಷಕರಿಗೆ ಆ ಮಕ್ಕಳ ಮಾತೃಭಾಷೆಯಲ್ಲಿ ಸಿದ್ಧಪಡಿಸಿದ ಇಅಅಇ ಪಠ್ಯಕ್ರಮದಲ್ಲಿ ಪಾಠಮಾಡಲು  ತರಬೇತಿಯನ್ನು ನೀಡಲಾಯಿತು.

ಈ ಎಲ್ಲಾ ಅನುಭವಗಳು ಇನ್ನೂ ದೊಡ್ಡ ದೊಡ್ಡ ಪ್ರಶ್ನೆಗಳ ಬಗ್ಗೆ     ಚಿಂತನೆ ನಡೆಸುವಂತೆ ಮಾಡುತ್ತವೆ-

ನಮ್ಮ (ಗಂಡು ಮತ್ತು ಹೆಣ್ಣು) ಮಕ್ಕಳಲ್ಲಿ   ಧಾರ್ಮಿಕ, ಪ್ರಾದೇಶಿಕ, ಭಾಷೆ, ಜಾತಿ, ವರ್ಗ, ಲಿಂಗ ಆಧಾರಿತ ಮತ್ತು ಜನಾಂಗೀಯ ಗುರುತುಗಳ ಬಹು ವೈವಿಧ್ಯ ಇರುವ ಸಂದರ್ಭದಲ್ಲಿ ’ ಅವರು ’ಮುಖ್ಯವಾಹಿನಿಯ ಗುರುತಿಗೆ ಸರಿ ಹೊಂದಿಕೊಳ್ಳದ ಮಕ್ಕಳ ಅಭಿವೃದ್ಧಿಯ ಅಗತ್ಯಗಳನ್ನು  ಮುಖ್ಯವಾಹಿನಿಯಲ್ಲಿ ಅವರು ವಿಲೀನ ಗೊಳ್ಳುವಂತೆ ಪೂರೈಸಲು ನಮ್ಮ ಶಿಕ್ಷಣ ಕಾರ್ಯಕ್ರಮ ಏಕೆ ವಿಫಲಗೊಂಡಿದೆ?

ಇದರ ಜೊತೆಗೆ ಅಸಮಾನತೆ, ವಿದ್ಯಾರ್ಥಿಯ ವಯಸ್ಸು, ಭೌತಿಕ, ಸಾಮಾಜಿಕ ಮತ್ತು ಮಾನಸಿಕ ಸಾಮರ್ಥ್ಯಗಳ ವ್ಯತ್ಯಾಸ ಮತ್ತು ವೈವಿಧ್ಯತೆಯನ್ನು ಸ್ವೀಕರಿಸುವಲ್ಲಿ ಕೊರತೆಗಳು ಕಂಡುಬರುತ್ತಿವೆ. ನಮ್ಮಲ್ಲಿ ಎಷ್ಟು ವೈವಿಧ್ಯ ಮತ್ತು ವ್ಯತ್ಯಾಸಗಳಿವೆಯೆಂದರೆ ಯಾವುದು ಮುಖ್ಯವಾಹಿನಿ ಮತ್ತು ಯಾವುದು ಸಾಮಾನ್ಯ ಎಂದು ಹೇಳುವುದೇ ಕಷ್ಟಕರವಾಗಿದೆ!

ಆದ್ದರಿಂದ ಬಹುತ್ವ ಮತ್ತು ವೈವಿಧ್ಯತೆಯ ಸವಾಲುಗಳನ್ನು ಎದುರಿಸಬೇಕಾದರೆ   ಶಿಕ್ಷಣದಲ್ಲಿ ಸಮಾನತೆ ಮತ್ತು ಸಮಾವೇಶಿ ಎಂಬ ಪದದ ಬಗ್ಗೆ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳ ಬೇಕಾದದ್ದು ಬಲು ಮುಖ್ಯ. ವೈವಿಧ್ಯತೆಯು ಲಿಂಗ, ಜನಾಂಗ, ಸಂಸ್ಕೃತಿಯಲ್ಲದೇ, ಬೇರೆ ಬೇರೆ ಭಾಷೆ, ಧರ್ಮ, ಮೌಲ್ಯ, ಸಾಮರ್ಥ್ಯ, ಸಾಮಾಜಿಕ- ಆರ್ಥಿಕ ಅಂತಸ್ತು ಮತ್ತು ಒಬ್ಬರಿಗಿಂತ ಮತ್ತೊಬ್ಬರು ಭಿನ್ನ ಎನ್ನುವಂತೆ ಮಾಡುವ  ಯಾವುದೇ ಅಂಶವುಳ್ಳ ಅಸಂಖ್ಯಾತ ವ್ಯತ್ಯಾಸಗಳನ್ನು ಒಳಗೊಂಡಿರುತ್ತದೆ. ಒಟ್ಟಾಗಿ ನಾವು ಪರಸ್ಪರ ಜೀವನದಲ್ಲಿ ಕೊಡುಗೆ ಮತ್ತು ಬೆಂಬಲವನ್ನು ನೀಡುವಂತೆಯೇ  ಸಮಾವೇಶನದ   ಮೂಲಕ ವೈವಿಧ್ಯತೆಯನ್ನು ಒಪ್ಪಿಕೊಂಡು, ಅರ್ಥಮಾಡಿಕೊಳ್ಳೋಣ ಮತ್ತು ವ್ಯತ್ಯಾಸಗಳನ್ನು ಆನಂದಿಸೋಣ. ಸಮಾವೇಶನದ ಅಂತಹ ಒಂದು ಪರಿಕಲ್ಪನೆಯು ನಮ್ಮ ಸಮಾಜದಲ್ಲಿರುವ ವೈವಿಧ್ಯಮಯ ವಿಭಾಗಗಳಲ್ಲಿ ಯಾವುದೇ ರೀತಿಯ ತಾರತಮ್ಯ, ಶಿಕ್ಷಣದಲ್ಲಿ ಶ್ರೇಣಿಯಾಧಾರಿತ ಪ್ರವೇಶ, ಆಕಾಂಕ್ಷೆ ಅಥವಾ ಫಲಿತಾಂಶಕ್ಕೆ ಎಡೆಯಿಲ್ಲದಂತೆ ಮಾಡುತ್ತದೆ . ಸಮಾವೇಶನದ   ವ್ಯಾಖ್ಯಾನ ಏನೇ ಇರಲಿ  ಶಿಕ್ಷಣದಲ್ಲಿ ಸರ್ವಸಮಾನತೆಯು ಸಮಾವೇಶಿ, ಸಬಲೀಕರಣ, ಗೌರವ, ನ್ಯಾಯಪರತೆ, ನ್ಯಾಯ, ಆತ್ಮೀಯತೆಯ ಭಾವ ಮತ್ತು ಯಾವುದೇ ರೀತಿಯ ತಾರತಮ್ಯತೆ ಇಲ್ಲದಿರುವಂತೆ ಮಾಡಬೇಕೆಂದು ಕರೆನೀಡುತ್ತದೆ.

ಸಮಾವೇಶನವು  , ನಮ್ಮ ಪರಿಸರವು   ಪಾಲ್ಗೊಳ್ಳುವಿಕೆಗೆ,  ಪ್ರವೇಶಕ್ಕೆ ಮತ್ತು ಕಲಿಕೆಗೆ ಅವಕಾಶ ಪಡೆಯುವಲ್ಲಿ ಅಡೆತಡೆಗಳನ್ನು ಒಡ್ಡುತ್ತದೆ ಎಂಬುದನ್ನು  ಗುರುತಿಸುತ್ತದೆ ಮತ್ತು ಅಂತಹ ಅಡೆತಡೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ. ಸಮಾವೇಶನದ ಅನುಷಾನ ಮಾಡುವಾಗ ವ್ಯತ್ಯಾಸಗಳನ್ನು ಗುರುತಿಸಲಾಗುತ್ತದೆ ಮತ್ತು ತಲೆಗೆಲ್ಲಾ ಒಂದೇ ಮಂತ್ರವನ್ನು ಎಂದಿಗೂ ಉಪಯೋಗಿಸುವುದಿಲ್ಲ. ಆದರೆ ವ್ಯತ್ಯಾಸಗಳನ್ನು  ಗುರುತಿಸುವಿಕೆ ಮತ್ತು ಅಸಮಾನತೆಯ ಪುಷ್ಟೀಕರಣ ಇವೆರಡನ್ನೂ ಒಂದೇ ಎಂದು ಭಾವಿಸಬಾರದು.

ಅತ್ಯಂತ ಸಮಾವೇಶನದ ಮೂಲಕ ಸರ್ವ ಸಮಾನವಾಗಿ ಶಿಕ್ಷಣ ನೀಡುವುದೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯನ್ನು ವಿಶೇಷವೆಂದು ಪರಿಗಣಿಸಿ  ಅವನ/ಅವಳ ನಿರ್ದಿಷ್ಟ ಅಗತ್ಯ, ಸಾಮರ್ಥ್ಯ ಮತ್ತು ಆಸಕ್ತಿಯ ಪ್ರಕಾರ ಬೋಧನಾ ಅವಕಾಶಗಳನ್ನು, ವಸ್ತು ವಿಷಯಗಳನ್ನು,  ಬೋಧನಾ ವಿಧಾನವನ್ನು  ಒದಗಿಸುವುದು ಎಂದು ಪೋವೆಲ್ (೧೯೯೪) ಸ್ಪಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳ ಭಿನ್ನತೆಗೆ  ಗೌರವ ನೀಡಿ  ವಿದ್ಯಾರ್ಥಿಗಳು ಕಲಿಕೆಯ ಪ್ರಕ್ರಿಯೆಯಲ್ಲಿ ಆಸಕ್ತಿಯಿಂದ ಭಾಗವಹಿಸಲು ಉತ್ತೇಜಿಸುವ  ಶಾಲಾ ಪರಿಸರದಲ್ಲಿ  ಎಲ್ಲಾ ವಿದ್ಯಾರ್ಥಿಗಳೂ ಅರ್ಥಪೂರ್ಣ ಕಲಿಕೆ ಯಲ್ಲಿ ಮಗ್ನರಾಗಿರುತ್ತಾರೆ. 

ಸಾಧ್ಯತೆಗಳ ಕಿರುನೋಟ- ಸಮಾವೇಶಿ ಶಿಕ್ಷಣದ ಅನುಷ್ಠಾನದ ಉದಾಹರಣೆಗಳು:
ನಮ್ಮ ದೇಶಾದ್ಯಂತ  ಯೋಜನೆ ಚಾಲಿತ ತಂತ್ರಗಳು, ಶಿಕ್ಷಣದಿಂದ ವಂಚಿತರಾದವರಿಗೆ ಶಾಲೆ ಅಥವಾ ಕ್ಲಸ್ಟರ್ ಹಂತದಲ್ಲಿ ಸಮಾವೇಶಿ ಶಿಕ್ಷಣದಿಂದ ,ಗಣನೀಯವಾಗಿ ಅನುಕೂಲ ಒದಗಿಸಿರುವಂತಹ  ಸಾಕಷ್ಟು ನಿದರ್ಶನಗಳು ನಮಗೆ ಸಿಗುತ್ತವೆ. ಉತ್ತಮವಾಗಿ ವಿನ್ಯಾಸಗೊಳಿಸಿದ ಕಾರ್ಯಕ್ರಮ (KGBV) ಸುಪ್ರೇರಿತ  ಜಿಲ್ಲಾ ಕಚೇರಿಗಳು, ಆಸಕ್ತಿ ಮತ್ತು ಸೂಕ್ಮ್ಷ ಅವಲೋಕನವುಳ್ಳ ಸಹಯೋಗಿಗಳು (NGO ಅಥವಾ ಮಹಿಳಾ ಸಮಾಕ್ಯ) ಎಲ್ಲ ಒಟ್ಟುಗೂಡಿದರೆ ಹೆಣ್ಣು ಮಕ್ಕಳಿಗೆ ಪ್ರಾಥಮಿಕವಾಗಿ ಸಬಲೀಕರಣ ಮತ್ತು ಏಜೆನ್ಸಿ ವರ್ಧನಾ ಪ್ರಕ್ರಿಯೆಯಿಂದ  ಮಾರ್ಗದರ್ಶಿತವಾದ  ಉತ್ತಮವಾದ ವಸತಿಶಾಲೆಗಳನ್ನು ರಚಿಸಲು   ಸಹಾಯ ಮಾಡಬಲ್ಲವು.
 
ಪ್ರಾದೇಶಿಕ ಉದ್ಯಮದ ಅಥವಾ ಸರ್ಕಾರೇತರ ಸಂಸ್ಥೆಯ ಸಹಯೋಗಗಳು, ಕರ್ನಾಟಕದಲ್ಲಿನ ಕಲಿಕಾ ಖಾತರಿ ಕಾರ್ಯಕ್ರಮ, ನಮ್ಮ ಶಾಲೆ ಮತ್ತು ಸಾಂಸ್ಥಿಕ ಸಾಮರ್ಥ್ಯ ಅಭಿವೃದ್ಧಿ (ಇನ್ಸ್ಟಿಟ್ಯೂಷನಲ್ ಕೆಪಾಸಿಟಿ ಡೆವೆಲಪ್‌ಮೆಂಟ್)ಕಾರ್ಯಕ್ರಮಗಳು, ಬಿಹಾರದಲ್ಲಿ ಹುನಾರ್ ಮತ್ತು ಉತ್ಥಾನ್, ಮತ್ತೆ ಹಲವು ರಾಜ್ಯಗಳಲ್ಲಿ ಸರ್ಕಾರದ ವಿಶೇಷ ಕಾರ್ಯಕ್ರಮ/ಯೋಜನೆಗಳಾದ ಮಹಿಳಾ ಸಾಮರ್ಥ್ಯ ವರ್ಧನೆಗೆ ಗಮನ ನೀಡುವ  ಮಹಿಳಾ ಸಾಮಾಕ್ಯ, ಮೀನಾ ಮಂಚ್  ಯೋಜನೆಗಳ ಮೂಲಕ ಕಡು ಬಡವ ಮತ್ತು ದುರ್ಬಲ ಮಕ್ಕಳ ಸಬಲೀಕರಣಕ್ಕೆ ಒತ್ತು ಕೊಟ್ಟು ಅವರ ಕಲಿಕೆಗೆ ಅಗತ್ಯವಾದ ನೆರವನ್ನು ನೀಡಿವೆ. ಇಂತಹ ಕಾರ್ಯಕ್ರಮಗಳು ಸಮುದಾಯ, ಶಾಲೆ, ಆಡಳಿತ, ಬಾಹ್ಯ ಮೂಲಗಳು (NGO, CSR bodyಗಳ ) ಒಗ್ಗೂಡಿ ವಿವಿಧ ಹಂತಗಳಲ್ಲಿ ಶಾಲೆಗಳು ತಮ್ಮದೇ ಎನ್ನುವ ಭಾವವನ್ನು ಉಂಟುಮಾಡಲು ಬೇಕಾದ ವ್ಯವಸ್ಥೆಗಳನ್ನು ಒದಗಿಸುತ್ತವೆ೫.

ಹೀಗಿದ್ದರೂ ಈ ಎಲ್ಲ  ಯೋಜನೆಗಳು ಯಶಸ್ವಿಯಾಗ ಬೇಕಾದರೆ  ಚೈತನ್ಯ ಶೀಲ ಮತ್ತು ಸುಪ್ರೇರಿತ ಮುಖ್ಯ ಶಿಕ್ಷಕರು ಮತು ಉತ್ತಮ ಶಿಕ್ಷಕರ  ತಂಡ ಮತ್ತು ಸಮುದಾಯವು ನಿಜವಾದ ಆಸಕ್ತಿಯಿಂದ ಭಾಗವಹಿಸುವುದು, ರಾಜಕೀಯವಾಗಿ ಕ್ರಿಯಾಶೀಲತೆಯುಳ್ಳ ಶೈಕ್ಷಣಿಕ ಆಡಳಿತ ಒಟ್ಟುಗೂಡಬೇಕು. ಇಂತಹ ನವೀನ ಯೋಜನೆಗಳಿಂದ ಕಲಿತ ಪಾಠವನ್ನು   ಮುಖ್ಯವಾಹಿನಿಯ ಸರ್ಕಾರದ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮಾಹಿತಿಯಾಗಿ  ನೀಡಬೇಕಾದ ಆವಶ್ಯಕತೆ ಇದೆ.

ಉತ್ತಮ ನಿರ್ವಹಣೆಯುಳ್ಳ ಮತ್ತು ಸೂಕ್ಷ್ಮಸಂವೇದನೆಯುಳ್ಳ ಪ್ರತಿಯೊಂದು ಕ್ರಿಯಾಶೀಲ ಶಾಲೆಗೆ ಅತ್ಯಂತ ಅನುಕೂಲ ವಂಚಿತರಾದ ವಿದ್ಯಾರ್ಥಿಗಳ ಬಗ್ಗೆ ಸೂಕ್ಷ್ಮ ಸಂವೇದನೆ ಹೊಂದಿರುವ ಶಿಕ್ಷಕರು, ಖುದ್ದು ಸುಪ್ರೇರಿತರಾದ ಮುಖ್ಯ ಶಿಕ್ಷಕ/ಶಿಕ್ಷಕಿಯರು ಗೆಲುವಿನ ಸೂತ್ರವಾಗಿರುತ್ತಾರೆ. ಸರ್ವ ಸಮಾನ ಶಿಕ್ಷಣವನ್ನು ಒದಗಿಸುವುದು ಶಿಕ್ಷಕರ ಜವಾಬ್ದಾರಿ. ಸಮಾಜದ ಕೆಳವರ್ಗ ಮತ್ತು ಶಿಕ್ಷಣದಿಂದ ವಂಚಿತ ಮಕ್ಕಳ ಬೆಳವಣಿಗೆ ಹಾಗು ಕಲಿಕೆಯ ವಿವಿಧ ಬಗೆಯ ಅಗತ್ಯತೆಗಳನ್ನು ಪೂರೈಸಲು ಶಿಕ್ಷಕರ ಜ್ಞಾನ, ಸಾಮರ್ಥ್ಯ ಮತ್ತು ಕುಶಲತೆ ಹೆಚ್ಚಿಸುವ ದಿಶೆಯಲ್ಲಿ  ಅರ್ಥಪೂರ್ಣವಾಗಿ ಮತ್ತು ಸೂಕ್ಷ್ಮ ಸಂವೇದನೆಯೊಂದಿಗೆ ಬಂಡವಾಳ ಹೂಡಲು ಶಿಕ್ಷಕರ ಪ್ರಶಿಕ್ಷಣ  ಮತ್ತು ಎಜುಕೇಷನಲ್ ಲೀಡರ್‌ಶಿಪ್ ಮ್ಯಾನೇಜ್‌ಮೆಂಟ್‌ನಂತಹ ಕಾರ್ಯಕ್ರಮಗಳಿಗೆ ವಿಶಾಲವಾದ ಕ್ಷೇತ್ರ ಮತ್ತು ಅವಕಾಶಗಳಿವೆ.

ಪ್ರತಿಕೂಲ ಹಿನ್ನೆಲೆಯ ಮಕ್ಕಳ ವಿವಿಧ ಬಗೆಯ ಅಗತ್ಯತೆಗಳನ್ನು ಪೂರೈಸಲು  ಮಕ್ಕಳು ಮತ್ತು ಶಿಕ್ಷಕರ ನಡುವೆ ಇರುವ ಅಧಿಕಾರಯುತ ಸಂಬಂಧದಲ್ಲಿ ರೂಢಮೂಲ ಬದಲಾವಣೆ ತರುವುದೇ ಇಂದಿನ ತುರ್ತು ಅಗತ್ಯ.  ವಿವಿಧ ಜಾತಿ, ಜನಾಂಗ, ಸಂಸ್ಕೃತಿ, ಲಿಂಗ, ಸಮಾಜ ವರ್ಗಗಳಿಂದ ಬಂದ ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಸಾಧನೆಯನ್ನು ಸಾಧಿಸುವಂತೆ   ಶಿಕ್ಷಕರು ತಮ್ಮ ಶಿಕ್ಷಣ ರೀತಿಯನ್ನು ಬದಲಾಯಿಸಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ (ಬ್ಯಾಂಕ್ಸ್, ೨೦೦೪). ನಮ್ಮ ಸಂವಿಧಾನದಲ್ಲಿ ವಿವರಿಸಿರುವ ಮೂಲಭೂತ ಮೌಲ್ಯ ಮತ್ತು ತತ್ವಗಳನ್ನು ಎತಿ ಹಿಡಿಯಲು   ರಾಜಕೀಯವಾಗಿ ಕಂಕಣ ಬದ್ಧ ಮತ್ತು ಪ್ರಗತಿಪರ ಶೈಕ್ಷಣಿಕ ಆಡಳಿತವು ಶಿಕ್ಷಕರಿಗೆ ಬೆಂಬಲವಾಗಿ ನಿಲ್ಲಬೇಕು.

ನೀವು ಒಂದು ಮಗುವನ್ನು  ಶಾಲೆಗೆ ಸೇರಿಸಿಕೊಂಡಾಗ, ಇಡೀ ಕುಟುಂಬವನ್ನೇ ಸೇರಿಸಿಕೊಂಡಂತೆ  (ಇಂಪ್ಟಾಲ್, ಕಮೆನೀರ್ ಮತ್ತು ಬ್ರಾಡ್ಲೀ, ೨೦೦೯).ಅನೇಕ ಆಧ್ಯಯನಗಳು ಹಲವು ಯೋಜನೆಗಳಾದ DPEP, SSA ಮತ್ತು ಸರ್ಕಾರೇತರ ಶೈಕ್ಷಣಿಕ ಕಾರ್ಯಕ್ರಮಗಳ ಫಲಿತಾಂಶದ ಪ್ರಕಾರ ಶಾಲೆಯ ಕೆಲಸ ಕಾರ್ಯಗಳಲ್ಲಿ ತಂದೆತಾಯಿಯರು ಹೆಚ್ಚು ಭಾಗವಹಿಸುವುದು ಮತ್ತು ಶಾಲೆ-ಪೋಷಕ ವರ್ಗದ ಉತ್ತಮ ಹೊಂದಾಣಿಕೆಯಿರುವುದು, ಕಲಿಕೆಯ ಗುಣಮಟ್ಟ ವನ್ನು ಮತ್ತು ಫಲಿತಾಂಶ ವನ್ನು ಹೆಚ್ಚಿಸುವಲ್ಲಿ ನಿಜಕ್ಕೂ ಸಹಕಾರಿಯಾಗುತ್ತದೆ. ಸಮುದಾಯದಲ್ಲಿ ಪ್ರತಿಯೊಬ್ಬರಲ್ಲೂ ಶಾಲೆಗಳ ಬಗ್ಗೆ ಹೆಮ್ಮೆ ಮತ್ತು ಈ  ಶಾಲೆಯು ತಮ್ಮದು ಎನ್ನುವ ಭಾವನೆ  ಎದ್ದು ಕಾಣುತ್ತ್ತದೆ.  ಶಿಕ್ಷಕರು, ಮುಖ್ಯ ಶಿಕ್ಷಕರು   ಕುಟುಂಬಗಳೊಡನೆ ಮತ್ತು ಸಮುದಾಯದೊಡನೆ   ಗೌರವಪೂರ್ಣ ಸಂಬಂಧ ಹೊಂದುವುದಕ್ಕೆ ಅನುಕೂಲ ಪರಿಸರ ನಿರ್ಮಾಣ ಮಾಡಿದರೆ ಅದು  ಮಕ್ಕಳ ವಿದ್ಯಾಭ್ಯಾಸ ಮತ್ತು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಇದರ ಜೊತೆಗೆ ಪರಸ್ಪರ ಜವಾಬ್ದಾರಿಯಿಂದ ಅಡೆತಡೆಗಳನ್ನು ಗುರುತಿಸಿ, ಹೊರತೆಗೆದು, ಗುಣಮಟ್ಟ ಮತ್ತು ಸಮಾನತೆಯ ಶಿಕ್ಷಣವನ್ನು ಒದಗಿಸಲು ಸಾಧ್ಯವಾಗುತ್ತದೆ.

ಜೀವನದಲ್ಲಿ ನಾವು ಎದುರಿಸಬೇಕಾದ ಹಲವಾರು ಪರಿಸ್ಥಿತಿಗಳಲ್ಲಿ ನಮ್ಮ ಕಾರ್ಯ ವಿಧಾನವನ್ನು ಸಮಾವೇಶಿಯಾಗಿಸಲು ಸಮಾನತೆ ಮತ್ತು ಪರಸ್ಪರ ಕೊಡುಗೆಯನ್ನು   ಆಧರಿಸಿದ  ಮಾತುಕತೆ ನಡೆಸುವುದು ಅತ್ಯಾವಶ್ಯಕ. ಇದನ್ನು ನಾವೇ ಆರಂಭಿಸುವುದು ಸೂಕ್ತ. ಬನ್ನಿ ನಮ್ಮ ಇಡೀ ಪ್ರಪಂಚವನ್ನು ಅತ್ಯಂತ ವರ್ಣರಂಜಿತವಾದ, ಸೂಕ್ಷ್ಮತೆಯಿಂದ ಕೂಡಿದ ಪರಿಪೂರ್ಣ  ವರ್ಣಚಿತ್ರವನ್ನಾಗಿಸೋಣ.

ರವೀಂದ್ರನಾಥ ಟಾಗೋರರ ಮಾತಿನಲ್ಲಿ ಹೇಳುವುದಾದರೆ, ವ್ಯತ್ಯಾಸಗಳಿಂದ ವಿವಿಧತೆ ಹುಟ್ಟುತ್ತದೆ; ಏಕತೆಯು ವಿವಿಧತೆಯನ್ನು ರಕ್ಷಿಸುತ್ತದೆ

ಅಡಿಟಿಪ್ಪಣಿಗಳು
೧ ಜಾಗರಿ ಎಂಬ ದೆಹಲಿಯಲ್ಲಿರುವ  ಮಹಿಳಾ ಸಂಪನ್ಮೂಲ ಸಂಸ್ಥೆಯು ಪ್ರಕಟಿಸಿದ ಹಾಡಿನ ಪುಸ್ತಕದಿಂದ  ಆಯ್ದ ಮಹಿಳಾ ಸಬಲೀಕರಣದ ಜನಪ್ರಿಯ ಹಾಡಿನ ಒಂದು ಭಾಗ.
೨ ಜಾರ‍್ಖಂಡ್ ನ ಸರಾಯಿಕೇಲ ಜಿಲ್ಲೆಯಿಂದ
ಮಹಿಳಾ ಸಮಾಕ್ಯ  ಎಂಬುದು ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ಶಿಕ್ಷಣ ಇಲಾಖೆಯ ಆಶ್ರಯದಲ್ಲಲಿ ನಡೆಯುತ್ತಿರುವ ಒಂದು ರಾಷ್ಟ್ರೀಯ ಕಾರ್ಯಕ್ರಮ.

೪  ಒರಿಸ್ಸಾ ಸರ್ಕಾರದ ಶಿಕ್ಷಣ ಇಲಾಖೆಯು ನಾಲ್ಕು ಬುಡಕಟ್ಟು ಭಾಷೆಯಲ್ಲಿ ಇಅಅಇ ಪಠ್ಯಕ್ರಮವನ್ನು ರೂಪಿಸಲು ದೆಹಲಿಯ ಇಗ್ನಸ್ ಇ ಆರ್ ಜಿ ತಂಡವನ್ನು ನಿಯೋಜಿಸಿದ್ದರು.ಈ ಯೋಜನೆಗೆ ಬಿ ವಿ ಎಲ್ ಎಫ್ ಅವರು ನೆರವು ನೀಡಿದ್ದಾರೆ.

೫ ಈ ಸದಭ್ಯಾಸಗಳು ’ಗುಣಮಟ್ಟದ ಸಮಾವೇಶಿ ಶಿಕ್ಷಣಕ್ಕೆ ಶಾಲಾಆಡಳಿತ ನಿರ‍್ವಹಣೆ ಮತ್ತು ವಿಕೇಂದ್ರೀಕೃತ ಶಾಲಾ ಆಡಳಿತ ಎಂಬ ಹೆಸರಿನ ಸಂಶೋಧನಾ ಅಧ್ಯಯನದ ಒಂದು ಭಾಗವಾಗಿದೆ. ಇದಕ್ಕೆ ಯೂರೋಪಿಯನ್ ಯೂನಿಯನ್ ನವರು ನೆರವು ನೀಡಿದ್ದಾರೆ ಮತ್ತು ERU consultants private ltd ಅವರು ನ್ಯಾಷನಲ್ ಸ್ಟೀರೀಂಗ್ ಕಮಿಟಿಯ ನೇತೃತ್ವದಲ್ಲಿ ನಡೆಸುತ್ತಿದ್ದಾರೆ.ಇದನ್ನು exchange of international best practices in education-Actions in india and overseas ಎಂಬ ಹೆಸರಿನ ಮಾನವಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ ಹಾಗು ಯೂರೋಪಿಯನ್ ಯೂನಿಯನ್ ಸಹಭಾಗಿತ್ವದಲ್ಲಿ ಸ್ಥಾಪಿತವಾಯಿತು . ಇದೇ ಸರ‍್ವಶಿಕ್ಷಣ ಆಭಿಯಾದ (SSA)ನಾವಿನ್ಯಕ್ಕೆ ನಾಂದಿಯಾಡಿತು.

ವಂದನಾ ಅವರು ಪ್ರಸ್ತುತ ಅಜೀಂ ಪ್ರೇಂಜಿ ಫೌಂಡೇಶನ್, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ೨೫ ವರ್ಷಗಳ ತನ್ನ ಸಮೃದ್ಧ ಅನುಭವದ ಅವಧಿಯಲ್ಲಿ, - ಲಿಂಗ ಸಮಾನತೆ ಪ್ರತಿಪಾದಕರಾಗಿ, ಹೋರಾಟಗಾರರಾಗಿ, ಸ್ತ್ರೀಸಮಾನತಾವಾದಿ ತರಬೇತುದಾರರಾಗಿ ಅವರು ವಿವಿಧ ಬಗೆಯ ಕೆಲಸಗಳನ್ನು ಮಾಡಿರುತ್ತಾರೆ. ಅವರು ಮಕ್ಕಳ ಶಿಕ್ಷಣ ಕಾರ್ಯಕ್ರಮಗಳೊಂದಿಗೆ ಕೆಲಸ ಮಾಡಿದ್ದಾರೆ, ಮಗು-ಕೇಂದ್ರಿತ ಮತ್ತು ಹಕ್ಕು-ಆಧಾರಿತ ಶೈಕ್ಷಣಿಕ ತರಬೇತಿ ಮತ್ತು ಬೋಧನಾ ಕಲಿಕೆಯ ಅಭ್ಯಾಸಗಳನ್ನು ಪರಿಶೀಲಿಸಿದ್ದಾರೆ ಮತ್ತು ಅಭಿವೃದ್ಧಿಪಡಿಸಿದ್ದಾರೆ ಮತ್ತು ವಿಶ್ವಸಂಸ್ಥೆಯ ಮಹಿಳೆಯರ ವಿಭಾಗದಲ್ಲಿ ಲಿಂಗ ತಾರತಮ್ಯ ಮತ್ತು ಎಚ್‌ಐವಿ ರಂಗದ ಕೆಲಸವನ್ನು ನಿರ್ವಹಿಸಿದ್ದಾರೆ ಮತ್ತು ಲಿಂಗ, ಶಿಕ್ಷಣ ಮತ್ತು ಅಭಿವೃದ್ಧಿ-ಆಧಾರಿತ ಕ್ರಮಗಳ ಸಂಶೋಧನೆ ಮತ್ತು ಪ್ರಕ್ರಿಯೆ ದಸ್ತಾವೇಜನ್ನು ತಯಾರಿಸುವ ಕೆಲಸಗಳನ್ನು ಮಾಡಿಕೊಟ್ಟಿದ್ದಾರೆ . ಅನುಕೂಲ ವಂಚನೆ ,ತಾರತಮ್ಯ ಮತ್ತು ಹಿಂಸಾಚಾರದಿಂದ  ಮುಕ್ತವಾದ ಜಗತ್ತನ್ನು ನಿರ್ಮಿಸುವ ಮಾನಸಿಕ ಚತುರತೆ ಮತ್ತು ಧೈರ್ಯದ ಚೈತನ್ಯವನ್ನು ಪ್ರತಿನಿಧಿಸುವ ತನ್ನ ಸಹವರ್ತಿಗಳ ಸ್ಫೂರ್ತಿಯನ್ನು ಅವರು ಗೌರವಿಸುತ್ತಾರೆ ಮತ್ತು ಅದನ್ನು ತಾವೂ ಹಂಚಿಕೊಳ್ಳುತ್ತಾರೆ. ಇವರನ್ನು

vandana.mahajan@azimpremjifoundation.org

ನಲ್ಲಿ ಸಂಪರ್ಕಿಸಬಹುದು

 

18488 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು