ಸಂಕೋಚ ಪ್ರವೃತ್ತಿ ಹೋಗಲಾಡಿಸುವುದು.

 ನಾಚಿಕೆ ಪ್ರವೃತ್ತಿಯ ವಿದ್ಯಾರ್ಥಿಗಳ ಮೈಚಳಿ ಬಿಡಿಸಿ ಅವರು ಉತ್ಸಾಹದಿಂದ  ಎಲ್ಲದರಲ್ಲೂ ಧೈರ್ಯದಿಂದ ಭಾಗವಹಿಸುವಂತೆ ಮಾಡುವುದು ಎಲ್ಲ  ಶಿಕ್ಷಕರು ಎದುರಿಸಬಹುದಾದ ಸಾಮಾನ್ಯ ಸಮಸ್ಯೆ. ಲೇಖಕರು ಶಿಕ್ಷಕರು ಈ ಸಮಸ್ಯೆ ಯನ್ನು ಹೇಗೆ ಪರಿಹರಿಸಬಹುದೆಂಬುದನ್ನು ಇಲ್ಲಿ ಸೂಚಿಸುತ್ತಾರೆ.

ಮೊತ್ತ ಮೊದಲು,  ಶಿಕ್ಷಕರು ಹೆಚ್ಚು ಮಾತಾಡದ ವಿದ್ಯಾರ್ಥಿಗೂ ಮತ್ತು ಸಂಕೋಚ ಸ್ವಭಾವದ ವಿದ್ಯಾರ್ಥಿಗೂ ವ್ಯತ್ಯಾಸವನ್ನು ಅರಿಯುವುದು ಮುಖ್ಯ.ಅನೇಕ ಬಾರಿ, ಒಬ್ಬ ಹೆಚ್ಚು ಮಾತಾಡದ ವಿದ್ಯಾರ್ಥಿಯನ್ನೂ ತಪ್ಪಾಗಿ ನಾಚಿಕೆ ಸ್ವಭಾವದ ವಿದ್ಯಾರ್ಥಿ ಎಂದು ಕರೆಯಲಾಗುತ್ತದೆ. ಒಬ್ಬ ಶಾಂತ ವಿದ್ಯಾರ್ಥಿ ತರಗತಿ ಚಟುವಟಕೆಯಲ್ಲಿ ವಿರಳವಾಗಿ ಭಾಗವಹಿಸುತ್ತಾನೆ ಆದರೆ  ತನ್ನೊಳಗೆ ಮತ್ತು ಇತರ ಜನರೊಂದಿಗೆ ಅನ್ಯಥಾ ಆರಾಮವಾಗಿರುತ್ತಾನೆ. ಮತ್ತೊಂದೆಡೆ, ಒಬ್ಬಸಂಕೋಚ ಸ್ವಭಾವದ ವಿದ್ಯಾರ್ಥಿ     ಪರಿಸ್ಥಿತಿ  ಯಾವುದೇ ಇರಲಿ, ಬಲು ಗಲಿಬಿಲಿಯಲ್ಲಿರುತ್ತಾನೆ ಶಿಕ್ಷಕರು ಅಥವಾ ತನ್ನ ಸಹಪಾಠಿಗಳು ಅಥವಾ ಪ್ರಶ್ನಿಸಿದ್ದಾಗ  ಅಥವಾ  ತಾನೆ ಆನಂದಿಸಲು ಪ್ರಯತ್ನಿಸುತ್ತಿರುವಾಗ ಬಲು ವಿಚಲಿತನಾಗಿರುತ್ತಾನೆ.ಆ ವಿದ್ಯಾರ್ಥಿಯು  ವೀಕ್ಷಕರು ಪರಿಚಿತ ರಿರಲಿ ಅಥವಾ ಅಪರಿಚಿತ ರಿರಲಿ, ಅವರ ಮುಂದೆ ತನಗೆ ಅಭಿನಯಿಸಲು ಭಾಷಣ ಮಾಡಲು ಸಾಧ್ಯವಾಗುವುದಿಲ್ಲ ಎಂಬ ಭಾವನೆ ಇಂದ ಬಳಲುತ್ತಿರುತ್ತಾನೆ`. ಶಿಕ್ಷಕರು ಇಂತಹ ವಿದ್ಯಾರ್ಥಿ ಮುನ್ನುಗ್ಗಿ  ಈ ಭಾವನೆಗಳನ್ನು ಮೆಟ್ಟಿ ನಿಂತು ಕೊಳ್ಳಲು ಸಕಾರಾತ್ಮಕ ಸಹಾಯ ನೀಡ ಬಹುದು.

ವರ್ಷದ ಆರಂಭದಲ್ಲಿ, ಮಕ್ಕಳಿಗೆ ನೀವು ಗೊತ್ತಿಲ್ಲ ಮತ್ತು ಪರಸ್ಪರ ಗೊತ್ತಿಲ್ಲವಾದ್ದರಿಂದ ಆರಂಭದಲ್ಲಿ ಸಂಕೋಚ ಸರಿ ಎಂದು ನಿಮ್ಮ ವಿದ್ಯಾರ್ಥಿಗಳಿಗೆ  ವಿವರಿಸಿ ಹೇಳಿರಿ. ಮಕ್ಕಳಾಗಿದ್ದಾಗ ನಾಚಿಕೆ ಸ್ವಭಾವದವರಾಗಿದ್ದ ಪ್ರಸಿದ್ಧ ಮತ್ತು ಮಹಾನ್ ವ್ಯಕ್ತಿಗಳ ಬಗ್ಗೆ ತಿಳಿಸಿರಿ. ತಾವು ಏನನ್ನು ಬಯಸಿದರೋ ಅದನ್ನೆಲ್ಲಾ ಸಾಧಿಸಲು ಈ ಜನರು ತಮ್ಮ ಸಂಕೋಚದಿಂದ  ಹೊರಬರಲು ಏನು ತಂತ್ರ ಬಳಸಿದರು ಎಂಬುದನ್ನು  ಮನಗಾಣಿಸಿ. ಅತ್ಯಂತ ನಾಚಿಕೆ ಮಕ್ಕಳು ತಾವು ನಿರಂತರ ಇತರರ ನೆರಳಿನಲ್ಲಿ ಮುಂದುವರಿಯ ಬೇಕಾಗುತ್ತದೆ ಎಂಬ ಕಲ್ಪನೆಯಲ್ಲಿರುತ್ತಾರೆ. ಈ ತಪ್ಪಭಿಪ್ರಾಯವನ್ನು ನೀವು ತೊಡೆದು ಹಾಕಬೇಕು!

i'm_shy

ಗಲಾಟೆ ಮಾಡುವ ಮತ್ತು ಅರಳು ಹುರಿದಂತೆ ಮಾತನಾಡುವ ವಿದ್ಯಾರ್ಥಿಗಳನ್ನೇ ಗುರಿ ಇರಿಸಿ ಪಾಠಮಾಡುವುದು ಸುಲಭ ಏಕೆಂದರೆ ಅವರು ನಿಮ್ಮ ತರಗತಿ ಚಟುವಟಿಕೆಯಿಂದಿರಲು ಸಹಾಯ ಮಾಡುತ್ತಾರೆ.ಆದರೆ ನಾಚಿಕೆ ಸ್ವಭಾವದ ವಿದ್ಯಾರ್ಥಿಗಳೆಡೆಗೆ ಗಮನ ಕೇಂದ್ರೀಕರಿಸುವುದು ಶಿಕ್ಷಕರಿಗೆ ಬಹಳ ಸವಾಲಿನ ಮತ್ತು ಸಮಯಹಿಡಿಯುವ ಕೆಲಸವಾಗಿರುತ್ತದೆ ಮತ್ತು ಅವರು ಹೆಚ್ಚು ಶಕ್ತಿಯನ್ನು ವ್ಯಯ ಮಾಡಬೇಕಾಗುತ್ತದೆ.ನಿಮ್ಮ  ಒಂದು ಮುಗುಳ್ನಗೆ, ತಿಳಿಮಾತು, ಮಿದುಮಾತಿನ ಸುಲಭ ಪ್ರಶ್ನೆಯನ್ನು ಈ ವಿದ್ಯಾರ್ಥಿಗಳಿಗೆ ಕೇಳಿದರೆ ತರಗತಿಯಲ್ಲಿ ಅಪರಿಚಿತ ವ್ಯಕ್ತಿಯ  ಜೊತೆಯಲ್ಲಿ ಮಾತನಾಡುವುದು ಅಥವಾ ಸಂವಹನ ಅಷ್ಟೇನೂ ಕಷ್ಟವಲ್ಲ ಅಂದು ಅವರಿಗೆ ಅನಿಸುತ್ತದೆ.ಇಂಥ ಮಕ್ಕಳಿಗೆ ನಿಮ್ಮೊಡನೆ ಮತ್ತು ತರಗತಿಯ  ಉಳಿದ ಮಕ್ಕಳೊಂದಿಗೆ ಸಂವಹನ ಮಾಡುವ ಹಾಗೆ ಪ್ರತಿ ದಿನ ಒಂದು ಕೆಲಸವನ್ನು ನೀಡಿ.ಇದು ಈ ಮಕ್ಕಳು ಅರಿಯದೆ ನಿಮ್ಮೊಡನೆ ಮತ್ತು ತರಗತಿಯ  ಉಳಿದ ಮಕ್ಕಳೊಂದಿಗೆ ಮಾತನಾಡಲು ಮೈಚಳಿ ಬಿಡಿಸುತ್ತದೆ.ಅದೇ ಸಮಯದಲ್ಲಿ ನಿಮ್ಮ ಕಾರ್ಯಗಳಿಗೆ ಅನುಕೂಲ ಕಲ್ಪಿಸುತ್ತದೆ. 

ನೆನಪಿಡಿ! ಶಾಲೆಯಲ್ಲಿರಲು  ಭಯಭೀತರಾಗಿರದ ಮಕ್ಕಳನ್ನು ಮೊದಲು ಗುರಿಯಾಗಿ ಇರಿಸಿಕೊಳ್ಳಿ. ಏಕೆಂದರೆ ಸಂಕೋಚ ಪಡುವುದರಲ್ಲೂ ಅನೇಕ ಮಟ್ಟಗಳಿರುತ್ತವೆ.ಯಾರೊಡನೆ ತೊಡಗಿಸಿಕೊಂಡರೆ ಪ್ರತಿಕ್ರಿಯಿಸುತ್ತಾರೋ ಅವರಿಗೆ ಮೊದಲು ಗಮನಹರಿಸುವ ಅಗತ್ಯವಿದೆ.

ಶಾಲೆಯ ಗಂಟೆ ಹೊಡೆದಾಗ  ವಿದ್ಯಾರ್ಥಿಗಳು ತರಗತಿಯ ಒಳಕ್ಕೆ  ಒಮ್ಮೆ ಬಂದಮೇಲೆ ಬಾಗಿಲು ಮುಚ್ಚುವ ಕೆಲಸವನ್ನು ಈ ಮಕ್ಕಳಿಗೆ ವಹಿಸಿಕೊಡಿ. ನೀವು  ವಿದ್ಯಾರ್ಥಿಗೆ "ಎಕ್ಸ್ , ಹೊರಗಡೆ ಶಬ್ದ ಬಹಳ ನೀವು ಇಂದಿನಿಂದ ಗಂಟೆ ಹೊಡೆದ ನಂತರ ತರಗತಿ  ಬಾಗಿಲನ್ನು ದಯವಿಟ್ಟು ಮುಚ್ಚುತ್ತೀಯಾ? ಅದರಿಂದ, ನನಗೆ ಬಹಳ ಸಂತೋಷವಾಗುತ್ತದೆ.ಧನ್ಯವಾದಗಳು." ಎಂದು ಹೇಳಬೇಕು. ಕೊನೆಯ ವಾಕ್ಯದ ವಿದ್ಯಾರ್ಥಿ ಶಿಕ್ಷಕರಿಗೆ ಸಹಾಯಮಾಡುವ  ಕಾರ್ಯ ನಿರ್ವಹಿಸುತ್ತಾನೆ ಎಂದು ಸ್ಪಷ್ಟವಾದ ಸಂದೇಶವನ್ನು ಕಳುಹಿಸುತ್ತದೆ.  ವಿದ್ಯಾರ್ಥಿಯಲ್ಲಿ ವಿಶ್ವಾಸವನ್ನು ತುಂಬಲು ಮತ್ತು ಆತನಲ್ಲಿ ಒಳ್ಳೆಯದನ್ನು ಮಾಡುತ್ತಿದ್ದೇನೆ ಎಂಬ ಉತ್ತಮ ಭಾವನೆ ಮೂಡಿಸಲು ಸಾಕಾಗಿದೆ. ಅವನು ತರಗತಿಯಲ್ಲಿ ನಿಸ್ಸಂಕೋಚದಿಂದ  ಓಡಾಡಲು ಪ್ರಾರಂಭಿಸುತ್ತಾನೆ.

ಅದೇ ವಿದ್ಯಾರ್ಥಿಗೆ ಇತರ ವಿದ್ಯಾರ್ಥಿಗಳು ಮಾಡಿಕೊಂಡು ಬಂದ ಹೋಂವರ್ಕ್ /ಮನೆ ಅಭ್ಯಾಸದ ಪುಸ್ತಕಗಳನ್ನು ಸಂಗ್ರಹಿಸಲು ಕೇಳಬಹುದು. ಈ ಕೆಲಸವನ್ನು ಶಾಲೆಗೆ ತಮ್ಮ ಹೋಂವರ್ಕ್ ಪುಸ್ತಕಗಳನ್ನು ತಂದಿರದ  ವಿದ್ಯಾರ್ಥಿಗಳನ್ನು ನಿಭಾಯಿಸಲು ಹೆದರದ ವಿದ್ಯಾರ್ಥಿಗೆ ನೀಡಬೇಕಾಗುತ್ತದೆ. ನೀವು ವಿದ್ಯಾರ್ಥಿಗೆ ಹೀಗೆ  ಹೇಳಬೇಕು ನೀನು  ಇಂದಿನಿಂದ ಹೋಂವರ್ಕ್ /ಮನೆಅಭ್ಯಾಸ ದ ಪುಸ್ತಕಗಳನ್ನು ನನಗಾಗಿ ಸಂಗ್ರಹಿಸುತ್ತೀಯಾ ಅದರಿಂದ ನನಗೆ ದೊಡ್ಡ ಸಹಾಯ ಆಗುತ್ತದೆ. ಹೋಂವರ್ಕ್ ಪುಸ್ತಕಗಳನ್ನು ತಂದಿರದ ವ್ಯಕ್ತಿಗಳು ಬೆದರಿಕೆ ಹಾಕಿದರೆ ನನಗೆ ಹೇಳು ನಾನು ಅವರನ್ನು ನೋಡಿಕೊಳ್ಳುತ್ತೇನೆ" ಈ ವಾಕ್ಯವು ಎದುರುಬೀಳುವ ವಿದ್ಯಾರ್ಥಿಗಳನ್ನು ನಿಭಾಯಿಸುವ ಅಸಾಧ್ಯ ಪರಿಸ್ಥಿತಿ ಬಗ್ಗೆ ಆತನಿಗಿರಬಹುದಾದ ಭಯವನ್ನು ಹೋಗಲಾಡಿಸುತ್ತದೆ.

ಪ್ರತಿ ದಿನ ಸಂಕೋಚ ಸ್ವಭಾವದ ವಿದ್ಯಾರ್ಥಿಯೊಡನೆ ಏನಾದರೊಂದು ಮಾತನಾಡಿ .ಇದು ಅವರ ಉಡುಪು  ಅಥವಾ ಹೊತ್ತು ತಂದ ವಸ್ತುವಿನ ಪ್ರಶಂಸೆ ಆಗಿರಬಹುದು.ಹಾಗೆ ಮಾಡುವಾಗ ಬಲು ಸಹಜವಾಗಿ ಮಾಡಿ ನಿಮ್ಮಕೆಲಸದಲ್ಲಿ ನೀವು ತೊಡಗಿಸಿಕೊಳ್ಳಿ ಇಲ್ಲದೆ ಹೋದರೆ ನಿಮ್ಮ ಮೆಚ್ಚುಗೆಗೆ ಹೇಗೆ  ಪ್ರತಿಕ್ರಿಯಿಸಬೇಕೆಂದು  ವಿದ್ಯಾರ್ಥಿಯು ಗಲಿಬಿಲಿ ಗೊಳ್ಳುತ್ತಾನೆ. ಆದಾಗ್ಯೂ, ಇದು ಸಾಂದರ್ಭಿಕ ಮತ್ತು ವಿದ್ಯಾರ್ಥಿ ಹಣ ಅಭಿನಂದನೆ ಹೇಗೆ ಒಂದು ಪ್ಯಾನಿಕ್ ಹೋಗಿ ಎಂಬುದನ್ನು ಆದ್ದರಿಂದ ಕೈಯಲ್ಲಿ ವ್ಯಾಪಾರ ಮಾಡಲು ತೆರಳಿ. ಮೊದಲು ವಿದ್ಯಾರ್ಥಿಯು ಜನರ ಸಂಸರ್ಗದಲ್ಲಿ ಓಡಾಡಲು ಬಿಡಿ ತರುವಾಯ ಹೇಗೆ ಪ್ರತಿಕ್ರಿಯಿಸಬೇಕೆಂಬುದನ್ನು ಕಲಿಸಿಕೊಡಿ. ಎಲ್ಲವೂ ಏಕಕಾಲದಲ್ಲಿ ನಡೆಯುವುದಿಲ್ಲ. ಒಮ್ಮೆಲೆ ಎಲ್ಲಾ ಮಾಡಲು ಹೋದರೆ ಆತ ಆತಂಕಿತನಾಗುತ್ತಾನೆ.

ಜಗತ್ತನೊಡನೆ ಏಗಾಡಲು ತಮ್ಮ ಮಗುವನ್ನು ಸಜ್ಜು ಗೊಳಿಸುವ ಕಾರ್ಯದಲ್ಲಿ  ಭಾಗವಹಿಸಲು ಪೋಷಕರಿಗೆ  ಮನವೊಲಿಸಿರಿ. ಅವರು ತಮ್ಮ ಮಕ್ಕಳೊಂದಿಗೆ ಆಟವಾಡಲು ಹೇಳಿ ಆಟದಲ್ಲಿ ಮಕ್ಕಳು ಒಂದು ಪ್ರಶ್ನೆಗೆ ಉತ್ತರಿಸಬೇಕೆಂದರೆ ಕೈಗಳನ್ನು ಮೇಲೆತ್ತಲು ಹೇಳಬೇಕು. ಇದು ಅವರು ತರಗತಿಯಲ್ಲಿ ಕೆಲಸವನ್ನು  ಆರಾಮವಾಗಿ ಇರುವಂತೆ ಮಾಡುತ್ತದೆ.

ಅವರು ತಮ್ಮ ಮಕ್ಕಳು ಮನಸಲ್ಲೇ ಕಥೆ ಓದಿಕೊಳ್ಳುವ ಬದಲಿಗೆ  ಗಟ್ಟಿಯಾಗಿ   ಅವರಿಗೆ ಕಥೆಗಳನ್ನು  ಓದಿ ಹೇಳಲು ಪೋಷಕರು ಹೇಳಲು ತಿಳಿಸಿರಿ. ಮಕ್ಕಳು ತಮ್ಮ ಧ್ವನಿಯನ್ನು  ಕೇಳುವುದು ಅಭ್ಯಾಸವಾಗುತ್ತದೆ ಬರುಬರುತ್ತಾ ಅವರು ಅದನ್ನು ಪ್ರೀತಿಸಲು ಆರಂಭಿಸುತ್ತಾರೆ. ಪಾಲಕರು ತಮ್ಮ ಮಕ್ಕಳ ಫೋನ್ ನಲ್ಲಿ ಮಾತನಾಡಲು , ಬಾಗಿಲು ತೆರೆದು ಯಾರೆಂದು ವಿಚಾರಿಸಲು ಮತ್ತು ರೆಸ್ಟೊರೆಂಟ್ಗಳಲ್ಲಿ ಏನು ತಿಂಡಿ ಬೇಕೆಂದು ಆದೇಶನೀಡಲು ಅವಕಾಶ ಕೊಡಬೇಕು ಬೇಕು. ಇದು ಅವರಿಗೆ ಅಪರಿಚಿತರೊಡನೆ ಮಾತನಾಡಲು ಅವಕಾಶ ಕಲ್ಪಿಸುತ್ತದೆ ತನ್ಮೂಲಕ ತರಗತಿಯಲ್ಲಿ ಸುಲಭವಾಗಿ, ವ್ಯವಹರಿಸಲು ಸಾಧ್ಯವಾಗಿಸುತ್ತದೆ.

ಚಿರಪರಿಚಿತ ಪರಿಸರದಲ್ಲಿ ತಮ್ಮ ಸಂಕೋಚ ಬಿಟ್ಟು ಹೊರಬರಲು ಕಲಿತರೆ ತರಗತಿಯಲ್ಲಿ ಇತರರೊಡನೆ ಬೆರೆಯುವಿಕೆ ಕಷ್ಟದ ಕಾರ್ಯ ಆಗುವುದಿಲ್ಲ. ಅಂತಿಮವಾಗಿ ಶಿಕ್ಷಣ ಎಂದರೇನು ಜೀವನ ಕೌಶಲ್ಯ ಬಗ್ಗೆ ಕಲಿಸುವುದೇ ಅಲ್ಲವೇ? ಇದರಲ್ಲಿ ಶಿಕ್ಷಕನ ಪಾತ್ರ ಖಂಡಿತವಾಗಿ ಹಿರಿದು.

ಮನಸ್ವಿನಿ ಶ್ರೀಧರ್ ಅವರು ಬರೆದ ಈ ಲೇಖನವನ್ನು  ಮೂಲತಃ ಆಗಸ್ಟ್ 2009ರ ಟೀಚರ್ ಪ್ಲಸ್ ನ ಪ್ರಶ್ನೆ ಮತ್ತು ಉತ್ತರ ವಿಭಾಗ ಅಡಿಯಲ್ಲಿ ಪ್ರಕಟಿಸಲಾಗಿದೆ. ಅದನ್ನು ಇಲ್ಲಿ ಸ್ವಲ್ಪ ಬದಲಾವಣೆಗಳೊಂದಿಗೆ ಕನ್ನಡಕ್ಕೆ ಅನುವಾದಿಸಲಾಗಿದೆ .ಕನ್ನಡಾನುವಾದ: ಜೈಕುಮಾರ್ ಮರಿಯಪ್ಪ

ಪ್ರತಿಕ್ರಿಯೆಗಳು

Guddappa's picture

I like it

18904 ನೊಂದಾಯಿತ ಬಳಕೆದಾರರು
7392 ಸಂಪನ್ಮೂಲಗಳು