ಶೈಕ್ಷಣಿಕ ಹಕ್ಕುಗಳು ಮತ್ತು ಬೋಧನೆ ಸವಾಲುಗಳು: ಸಮಾವೇಶನ ಮತ್ತು ಹೇಗೆ ಸೇರಿಸಿಕೊಳ್ಳುವುದು - ಸಿದ್ಧಿ ವ್ಯಾಸ್

ಸಮಾವೇಶನ ಸಾಧಿಸಬೇಕಾದರೆ ಅಂಗೀಕಾರದ ಮನೋಭಾವ ಇರಲೇಬೇಕು . ಭಾರತದಲ್ಲಿರುವ ನಂಬಿಕೆಗಳು, ಸಂಪ್ರದಾಯಗಳು, ಭಾಷೆಗಳು ಮತ್ತು ಜನಾಂಗೀಯತೆಗಳ ವೈವಿಧ್ಯತೆಯ ಹಿನ್ನೆಲೆಯಲ್ಲಿ ನಾವು ವೃತ್ತಿಯಲ್ಲಿ,ಸಾಮಾಜಿಕ ಮತ್ತು ವೈಯಕ್ತಿಕ ಸಂದರ್ಭಗಳಲ್ಲಿ ಸಮಾವೇಶನ ಮಾಡಬೇಕಾದ ಮತ್ತು ವ್ಯತ್ಯಾಸಗಳನ್ನು ಅಂಗೀಕರಿಸಬೇಕಾದ ಅವಕಾಶಗಳನ್ನು ಪಡೆಯುತ್ತೇವೆ. ಹೀಗಾಗಿ ನಾವು ನಮ್ಮ ದೈನಂದಿನ ಕೆಲಸದಲ್ಲಿ ಸಾಮಾಜಿಕ ಮತ್ತು ವೈಯಕ್ತಿಕ ಆಚರಣೆಗಳಲ್ಲಿ ಅನೇಕ ರೀತಿಗಳಲ್ಲಿ ಸಮಾವೇಶನ ಮಾಡುವ  ಅಥವಾ ಹೊರಗಿರಿಸುವ ಅಂಶಗಳನ್ನು ಒಳಗೊಂಡಿದ್ದೇವೆ. ಆದ್ದರಿಂದ ನಾವಿರುವ ಸಂದರ್ಭ ಮತ್ತು ಸನ್ನಿವೇಶ ಗಳೊಳಗೆ ಸಮಾವೇಶನ ವೆಂಬ ಪರಿಕಲ್ಪನೆ ಭಾರತೀಯ ಸಮಾಜಕ್ಕೆ ಅಥವಾ ಅದರ ಪ್ರಾಚೀನ ಮತ್ತು / ಅಥವಾ ಸಾಂಪ್ರದಾಯಿಕ ಆಚರಣೆಗಳಿಗೆ ಹೊಸದೇನಲ್ಲ .

ಕೆಲವು ಉದಾಹರಣೆಗಳನ್ನು ಹೇಳುವುದಾದರೆ, ತಮ್ಮನ್ನು ತಾವೇ ಆರೈಕೆ ಮಾಡಿಕೊಳ್ಳಲಾಗದ ಸಮುದಾಯಕ್ಕೆ ಸಂಬಂಧಿಸಿದಂತೆ ರಾಜ್ಯ ಮತ್ತು ಸಮಾಜಗಳು ಯಾವ ಯಾವ  ಜವಾಬ್ದಾರಿಗಳನ್ನು ಹೊಂದಿವೆ ಎಂಬುದನ್ನು ಕೌಟಿಲ್ಯನು (c.320 BC) ಸ್ಥೂಲವಾಗಿ  ಹೇಳುತ್ತಾನೆ ಎಂದು ಗ್ರಾಮಗಳ ರಚನೆ, ಸರ್ಕಾರಿ ಮೇಲ್ವಿಚಾರಕರ  ಕರ್ತವ್ಯಗಳು  ಎಂಬ  ತಮ್ಮ ಲೇಖನದಲ್ಲಿ (ಶಾಮಶಾಸ್ತ್ರಿ, 1956) ವಿವರಿಸುತ್ತಾರೆ. ಅಕ್ಬರ್ ನ ಆಳ್ವಿಕೆಯಲ್ಲಿ (1556-1605) ಮದ್ರಸಾ  ಶಿಕ್ಷಣದಲ್ಲಿ  ಸಾಮಾಜಿಕವಾಗಿ ಸಮಾವೇಶನದ   ವಿಧಾನಗಳನ್ನು ಅನುಸರಿಸಲಾಗುತ್ತಿತ್ತು ಎಂದು ದಾಖಲೆಗಳು ಸೂಚಿಸುತ್ತವೆ (ಚೌಧರಿ, 2008). ಇದೇ ತರಹದ ಇನ್ನೊಂದುಉದಾಹರಣೆಯನ್ನು ಕೊಡುವುದಾದರೆ ನಮ್ಮೆಲ್ಲರ  ಅಚ್ಚುಮೆಚ್ಚಿನ ಐತಿಹಾಸಿಕ ಮತ್ತು ನೀತಿಕಥೆಗಳ ಸಂಗ್ರಹವಾದ, ಪಂಚತಂತ್ರವು,  ವಿದ್ಯಾರ್ಥಿಗಳ ವಿಭಿನ್ನತೆ ಗಳನ್ನು ಅಂಗೀಕರಿಸಿ ಕಲಿಕೆಯ ಅಗತ್ಯತೆಗಳಿಗೆ ತಕ್ಕಂತೆ ಬೋಧನೆ ವಿಧಾನಗಳನ್ನು ಅಳವಡಿಸಿಕೊಳ್ಳುವುದಕ್ಕೆ ಉತ್ತಮ  ನಿದರ್ಶನ  ಒದಗಿಸುತ್ತದೆ. ಬ್ರಿಟಿಶ್ ವಸಾಹತುಶಾಹಿ ಆಡಳಿತದ  ಮುಂಚಿನ ಕಾಲದ, ಬೋಧನಾ ಶಾಸ್ತ್ರದ ಬಗ್ಗೆ ಬಹುಶಃ ಮೊತ್ತ ಮೊದಲ ಪಠ್ಯವಾದ , ಪಂಚತಂತ್ರವು ಸಂಭಾಷಣೆ ಮೂಲಕ ಪಾಠ ಮಾಡಿ ಮತ್ತು ಕಲಿಕೆಯ ಗುರಿಗಳನ್ನು ಸಾಧಿಸಲು ಪ್ರಾಣಿ ಪ್ರಪಂಚದಿಂದ ಉದಾಹರಣೆಗಳನ್ನು ಕೊಡುವತಂತ್ರ ಅನುಸರಿಸಿದೆ ; "ಸೌಜನ್ಯರಹಿತ " ಮತ್ತು ಇವರಿಗೆ ವಿದ್ಯೆ ಕಲಿಸಲಾಗದು ವಿದ್ಯಾ ವಿರೋಧಿ ಗಳು ಎನ್ನುವಂತಹ ರಾಜಕುಮಾರರಿಗೆ (ಶಾಸ್ತ್ರಿ, 1967, ಪುಟ 2) ವಿದ್ಯೆ ಕಲಿಸಬೇಕಾದ  ಆವಶ್ಯಕತೆಯಿಂದ ಸ್ಫೂರ್ತಿ ಪಡೆದು ಈ ವಿಧಾನವನ್ನು ಅನುಸರಿಸಬೇಕಾಯ್ತು. " (ರೈಡರ್, 1949 ಪುಟ 12).

ಒಂದಲ್ಲ ಒಂದು ರೂಪದಲ್ಲಿ, ನಮ್ಮ ಪದ್ಧತಿ ಶಿಕ್ಷಣ  ವ್ಯವಸ್ಥೆಗಳು ಸಮಾವೇಶನ  ವಿಧಾನಗಳನ್ನು ಬಳಸಲು ಪ್ರಯತ್ನಿಸುತ್ತಿವೆ ಅಥವಾ ಅನ್ವಯಿಸುತ್ತಿವೆ. ಈ ಲೇಖನದಲ್ಲಿ ಅಸಮರ್ಥತೆಯನ್ನು ಹೊಂದಿರುವ ಮಕ್ಕಳನ್ನು ಸಾಮಾನ್ಯ ಶಾಲೆಗಳಲ್ಲಿ ಒಳಗೊಳ್ಳುವ ಅಂಶಗಳನ್ನು ಚರ್ಚಿಸುತ್ತದೆ. ಅಸಮರ್ಥರ ಹಕ್ಕುಗಳ ಚಳುವಳಿ ಮತ್ತು 1995 ರ  ಅಸಮರ್ಥತೆ ಹೊಂದಿರುವ ವ್ಯಕ್ತಿಗಳ  ಕಾಯಿದೆಯನ್ನು  ಜಾರಿಗೆ ತಂದ ಮೇಲೆ ಅಸಮರ್ಥತೆ ಹೊಂದಿರುವ ವ್ಯಕ್ತಿಗಳನ್ನೂ ಸೇರಿಸಿಕೊಂಡು  ವಿದ್ಯಾಭ್ಯಾಸ ನೀಡಲು ಒಂದು ಕಾರ್ಯನೀತಿ ರಚಿಸಬೇಕೆಂಬ  ಬಗ್ಗೆ ತೀವ್ರವಾದ ಗಮನ ಉಂಟಾಯಿತು. ಸರ್ವ ಶಿಕ್ಷಾ ಅಭಿಯಾನದ ಅಂತರ್ಗತ ಶಿಕ್ಷಣ ನಿಬಂಧನೆಗಳು ಅದನ್ನು ಶಿಕ್ಷಣ ಪದ್ಧತಿಯಾಗಿ ತರಗತಿ ಕೊಠಡಿಗಳಿಗೆ ಮತ್ತು ಶಿಕ್ಷಕ ವೃತ್ತಿಯ ದಿನನಿತ್ಯದ ಕೆಲಸ ಮತ್ತು ಕೊಳ್ಕೊಡೆಯ ಭಾಗವಾಗಿಸಿತು. ಶಿಕ್ಷಣ ನೀತಿಯ ಇತ್ತೀಚಿನ ಬೆಳವಣಿಗೆಗಳು, ನಿರ್ದಿಷ್ಟವಾಗಿ ಶಿಕ್ಷಣ ಹಕ್ಕು ಕಾಯಿದೆ (2009) ರ ನಂತರ, ಭಾರತದಲ್ಲಿ ಎಲ್ಲರಿಗೂ ಶಿಕ್ಷಣದ ಕಡೆಗೆ ಕೇಂದ್ರೀಕರಿಸಿವೆ ಮತ್ತು ಈಗ ಶಿಕ್ಷಕರು ಮತ್ತು ಸಂಶೋಧಕರು ಸಮಾವೇಶಿ ಶಿಕ್ಷಣದ ಬಗ್ಗೆ ಹೆಚ್ಚಿನ ಪರಿಶೀಲನೆಮಾಡುವಂತೆ ಮಾಡಿದೆ. ಇತ್ತೀಚಿನ ಶಾಸನ ಕ್ರಮಗಳ ತರುವಾಯ, ಸಮಾವೇಶಿ ಶಿಕ್ಷಣವನ್ನು ಅಭ್ಯಾಸ ಮಾಡುವುದು ಈಗ ಪ್ರಜ್ಞಾಪೂರ್ವಕ ತೀರ್ಮಾನ ಕೈಗೊಳ್ಳುವ  ,ಎಲ್ಲೆಲ್ಲಿ  ನಮ್ಮ ಬೋಧನಾ ಅಭ್ಯಾಸಗಳು ಸಮಾವೇಶಿ ಆಗಿಲ್ಲ ಎಂಬ ಸಂದರ್ಭಗಳನ್ನು ಗಮನಿಸಿನೋಡುವ ವಿಷಯವಾಗಿದೆ

ಸಮಾವೇಶಿ ಶಿಕ್ಷಣವು ಅಸಮರ್ಥರ ಹಕ್ಕುಗಳನ್ನು ಸಮರ್ಥಿಸುವವರಿಗೆ, ವಿದ್ಯಾರ್ಥಿಯಲ್ಲಿ ಇರುವ ಸಾಮರ್ಥ್ಯಗಳು ಮತ್ತು ಚಾಲ್ತಿಯಲ್ಲಿರುವ ಶಕ್ತಿಗಳನ್ನು ಗುರುತಿಸದೇ ಕೇವಲ ನ್ಯೂನತೆ ಇರುವ ಮಕ್ಕಳನ್ನು ಸೇರಿಸಿಕೊಳ್ಳಲು ನಿರ್ಬಂಧಿಸುವ ಶೈಕ್ಷಣಿಕ ಮತ್ತು ಸಾಮಾಜಿಕ ಅಭ್ಯಾಸಗಳ ಬಗ್ಗೆಯೇ ಗಮನ ಹರಿಸುವುದನ್ನು ತಪ್ಪಿಸಿ ವಿದ್ಯಾರ್ಥಿಯಲ್ಲಿ ಇರುವ ಸಾಮರ್ಥ್ಯಗಳು ಮತ್ತು ಚಾಲ್ತಿಯಲ್ಲಿರುವ ಶಕ್ತಿಗಳನ್ನು ಗುರುತಿಸಲು ಪ್ರೋತ್ಸಾಹಿಸುತ್ತದೆ. ಪೋಷಕರಿಗೆ, ಸಮಾವೇಶಿ ಶಿಕ್ಷಣದ ಭರವಸೆಯು ಶಾಲೆಗಳು, ಪಾಠದ ಕೊಠಡಿಗಳು ಮತ್ತು ಅಂತಿಮವಾಗಿ, ಸಹಪಾಠಿಗಳನ್ನು ತಮ್ಮ ಮಗುವನ್ನು ಅಂಗೀಕರಿಸುವ ನವೀಕೃತ ಭರವಸೆಯನ್ನು ನೀಡುತ್ತದೆ. ಇನ್ನು ಶಿಕ್ಷಕರಿಗೆ,ತಮ್ಮ  ಬೋಧನೆಯು ಪರಿಣಾಮಕಾರಿಯಾಗಿಸುವ ಕಾಳಜಿ ತರುತ್ತದೆ ಮತ್ತು ಪಾಠದ ಕೊಠಡಿಗಳ ಬಗ್ಗೆ ಕಾನೂನು ನಿರೀಕ್ಷೆಗಳನ್ನು ಪೂರೈಸುವಂತೆ  ತಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ವಿದ್ಯಾಭ್ಯಾಸವನ್ನು ಸುಧಾರಿಸುವ ಅಗತ್ಯದ ಗುರುತಿಸುವ ಕಾರಣದಿಂದ ಅಥವಾ ಇಲ್ಲಿನ ದುರ್ಬಲತೆಯುಳ್ಳ ಮಕ್ಕಳ ಶಿಕ್ಷಣಕ್ಕಾಗಿ ನಮಗಿರುವ  ಕಾಳಜಿಯ ಕಾರಣದಿಂದಾಗಿ ಈ ವಿಷಯಕ್ಕೆ  ಸಂಬಂಧಿಸಿದವರಾದ ನಮಗೆ, ಶೈಕ್ಷಣಿಕ ಅಸಮಾನತೆಯನ್ನು ಬಗೆಹರಿಸುವ ಭರವಸೆಯನ್ನುಸಮಾವೇಶಿ ಶಿಕ್ಷಣವು ಒದಗಿಸುತ್ತದೆ. ಸಮಾವೇಶಿ ಶಿಕ್ಷಣವು ಬಹಳಷ್ಟು ವಿದ್ಯಾರ್ಥಿಗಳು ಶಿಕ್ಷಣವು ಹೊಂದಿದ್ದ ತರಹದ ಪ್ರವೇಶ ಅವಕಾಶಗಳನ್ನು ಐತಿಹಾಸಿಕ, ಸಾಂಸ್ಕೃತಿಕ ಅಥವಾ ಬೋಧನಾವಿಧಾನಗಳ ಮೂಲಕ ಇದುವರೆಗೂ ಹೊಂದಿರದ ವಿದ್ಯಾರ್ಥಿಗಳಿಗೆ ಒದಗಿಸುತ್ತದೆ.

ಕಾರ್ಯನೀತಿಯ ಉದ್ದೇಶವನ್ನು ಅನುಷ್ಠಾನಗೊಳಿಸುವುದು ಎಂದರೆ ಪ್ರಜ್ಞಾಪೂರ್ವಕವಾಗಿ ನಮ್ಮ ಧೋರಣೆಯಲ್ಲಿ ಬದಲಾವಣೆಯನ್ನು ತರುವುದು; ಕಾರ್ಯನೀತಿಯನ್ನು  ಕಾರ್ಯಾಚರಣೆಯಲ್ಲಿ ಜಾರಿಗೆ ತರುವುದು ಒಂದು ಸಮಾವೇಶಿ ತರಗತಿ ಮತ್ತು ಶಾಲಾ ಸಂಸ್ಕೃತಿಯನ್ನು ರಚಿಸುವುದು, ಬೆಳೆಸುವುದು ಮತ್ತು ಆಚರಣೆಯಲ್ಲಿ ತರುವುದನ್ನು  ಉದ್ದೇಶಪೂರ್ವಕವಾಗಿ ಯೋಜಿಸ ಬೇಕಾಗುತ್ತದೆ. ಆದ್ದರಿಂದ, ನಮ್ಮ ಪಾಠದ ತರಗತಿಗಳು ಸಿದ್ಧವಾಗಿವೆಯೇ? ವೈವಿಧ್ಯತೆಗಳನ್ನು ಕ್ರಮಬದ್ದವಾಗಿ ನಿಭಾಯಿಸಲು  ತಮ್ಮ ಯೋಜನೆ ಮತ್ತು ಅಭ್ಯಾಸಗಳಲ್ಲಿ, ಶಿಕ್ಷಕರ ಸಿದ್ಧತೆಗಳು ಏನನ್ನು ಒಳಗೊಂಡಿರಬೇಕು? ಈ ಪ್ರಶ್ನೆಗಳಿಗೆ ನನ್ನ ಸ್ವಂತ ಬೋಧನಾ ಅನುಭವಗಳ ಜೊತೆಗೆ ನಾನು ಸಾರ್ವಜನಿಕ ಸಮಾವೇಶಿ ತರಗತಿಗಳಿಗಾಗಿ ಶಿಕ್ಷಕರ ಶಿಕ್ಷಣ ಸಾಮಗ್ರಿಯನ್ನು ತಯಾರಿಸಿದ ಇತ್ತೀಚಿನ ಕೆಲಸದ ಹಿನ್ನೆಲೆಯಲ್ಲಿ  ಉತ್ತರಿಸುತ್ತೇನೆ.

ವ್ಯತ್ಯಾಸಗಳನ್ನು ಅಂಗೀಕರಿಸುವುದು ವೈವಿಧ್ಯತೆ ಯ ಸಮಾವೇಶನ

ಮೊದಲೇ ಹೇಳಿದಂತೆ, ಸಮಾವೇಶನ ಮಾಡಬೇಕಾದರೆ ಸ್ವೀಕೃತಿಯಲ್ಲಿ ಉತ್ತಮ ಗುಣಮಟ್ಟ ಇರಬೇಕಾಗುತ್ತದೆ. ವಿದ್ಯಾರ್ಥಿಗಳಲ್ಲಿ ವ್ಯತ್ಯಾಸಗಳಿರುತ್ತವೆ  ಮತ್ತು ಕಲಿಕೆಯಲ್ಲೂ ವೈವಿಧ್ಯಮಯ ವಿಧಾನಗಳು ಇರುತ್ತವೆ  ಎಂಬುದನ್ನು  ನಿರೀಕ್ಷಿಸುವುದು ಮತ್ತು ಒಪ್ಪಿಕೊಳ್ಳುವುದು ನಮ್ಮ ತರಗತಿ ಕೊಠಡಿಗಳಲ್ಲಿ  ಮತ್ತು ಶಾಲೆಗಳಲ್ಲಿ ಸಮಾವೇಶಿ ಸಂಸ್ಕೃತಿಯನ್ನು ಸೃಷ್ಟಿಸುವ ಮೊದಲ ಹಂತಗಳಾಗಿವೆ. ನನ್ನ ದೇ ಶಾಲೆಯ  ಆರಂಭಿಕ ಅನುಭವಗಳ ಹಿನ್ನೆಲೆಯಲ್ಲಿ  ಇದು  ನಾನು ಶಿಕ್ಷಕಳಾಗಿ ನಿಕಟವಾಗಿ ನಂಬಿದ  ಅತ್ಯಮೂಲ್ಯವಾದ ಪಾಠಗಳಲ್ಲಿ ಒಂದಾಗಿದೆ. ಮತ್ತು ವಿವಿಧ ಬಗೆಯ ತರಗತಿಗಳಲ್ಲಿ ನನ್ನ ಹಲವು ವರ್ಷಗಳ ಕೆಲಸದಲ್ಲಿ  ಇದೇರೀತಿ  ನನ್ನ ಶಾಲೆಯ ವಿದ್ಯಾರ್ಥಿಗಳೂ ನನಗೆ ನೆನಪಿಸುವ ಒಂದು ಪಾಠ ಇದಾಗಿದೆ.

ಬೋಧನೆಯಲ್ಲಿ  ಸಮಾವೇಶಿ ವಿಧಾನವನ್ನು ಬಳಸಬೇಕಾದರೆ ಯೋಜನೆಯಲ್ಲಿ ಮತ್ತು ಭಾಷೆಯ ಬಳಕೆಯಲ್ಲಿ ಸಂವೇದನಾಶೀಲತೆ , ಮತ್ತು ಲಿಂಗ, ನಂಬಿಕೆಗಳು ಮತ್ತು ಜನಾಂಗೀಯತೆಗಳು, ಭಾಷೆಗಳು, ಕಲಿಕೆಯ ಶೈಲಿಗಳು ಮತ್ತು ಸಾಮರ್ಥ್ಯಗಳ.ವ್ಯತ್ಯಾಸಗಳ ಸ್ವೀಕಾರವನ್ನು ಪ್ರತಿಬಿಂಬಿಸುವ ಸಂಸ್ಕೃತಿಯನ್ನು ರಚಿಸಲು ಸಹಾಯ ಮಾಡುವ ಬೋಧನಾ-ಕಲಿಕೆಯ ಶೈಲಿಗಳ ಗುರುತಿಸುವಿಕೆ  ಇರಬೇಕಾಗುತ್ತದೆ,  ಸಮಾವೇಶಿ ತರಗತಿಯೊಂದರ ಶಿಕ್ಷಕನಿಗೆ ಈ ಅಗತ್ಯತೆ  ಯೋಜನೆಗಾಗಿ ಸಾಕಷ್ಟು ಭಯಪಡಿಸುವ ಒಂದು ಪರಿಗಣನೆ ಯೇ ಸರಿ. ಶಿಕ್ಷಕಳಾಗಿ ಮತ್ತು ಶಿಕ್ಷಕ ಶಿಕ್ಷಕಳಾಗಿ, ನನ್ನ ಪಾಠದ ಕೊಠಡಿಗಳಲ್ಲಿ ಒಬ್ಬೊಬ್ಬರೇ ವಿದ್ಯಾರ್ಥಿಗಳ ಅಗತ್ಯವನ್ನು  ಪ್ರತ್ಯೇಕವಾಗಿ ಕೇಂದ್ರೀಕರಿಸಲು ಮತ್ತು ಒಬ್ಬೊಬ್ಬರಿಗೆ ಗಮನ ನೀಡುವ  ಬದಲಾಗಿ, ನಾನು ವಿದ್ಯಾರ್ಥಿಗಳ ವೈವಿಧ್ಯತೆಗಳನ್ನು ಪ್ರಜ್ಞಾಪೂರ್ವಕವಾಗಿ ಪರಿಗಣಿಸಿ ಪಾಠಗಳನ್ನು ತಯಾರಿಸುವುದು ವಾಸ್ತವವಾಗಿ ಉತ್ಪಾದಕವಾಗಿದೆ ಎಂದು ನಾನು ಕಲಿತಿದ್ದೇನೆ. ಕಾಲಾನಂತರದಲ್ಲಿ ನಾನು ಸಹಜವಾಗಿ  ವಿವಿಧ ವೈವಿಧ್ಯತೆಗಳು  ಒಳಗೊಳ್ಳುವಂತೆ  ಯೋಜನೆ ಮಾಡಿದ್ದೇನೆ.

 ವೈದ್ಯಕೀಯ, ದೈಹಿಕ, ಸಂವೇದನಾ ಮತ್ತು ಅರಿವಿನ ಅಗತ್ಯತೆಗಳೊಂದಿಗಿನ ವಿದ್ಯಾರ್ಥಿಗಳನ್ನು ಒಳಗೊಂಡ ತಂಡಕ್ಕೆ  ನನ್ನ ಸಹೋದ್ಯೋಗಿಗಳೊಂದಿಗೆ  ಬೋಧಿಸುವುದು ಒಂದು ಸೃಜನಶೀಲ ಪ್ರಕ್ರಿಯೆಯಾಯಿತು ಮತ್ತು ವಿದ್ಯಾರ್ಥಿಗಳ ಲಕ್ಷಣಗಳು, ಅವರ ವ್ಯಕ್ತಿತ್ವಗಳು, ಸಾಮರ್ಥ್ಯಗಳು, ಆದ್ಯತೆಗಳು ಮತ್ತು ಅಗತ್ಯಗಳನ್ನು ಸಂಘಟಿಸಿ, ನನ್ನ ತರಗತಿಯ ಯೋಜನೆಯೊಳಕ್ಕೆ ಅವನ್ನು ಸೇರಿಸಿಕೊಳ್ಳುವುದು  ನಿಜಕ್ಕೂ ಸಂತೋಷವಾಗುತ್ತದೆ. ಎಲ್ಲರಿಗೂ ಸಮಾವೇಶಿ ಶಿಕ್ಷಣದ ಬಗ್ಗೆ ಅರ್ಥಮಾಡಿಕೊಳ್ಳುವುದು  ಅಭ್ಯಾಸವನ್ನು ಸಂಕೀರ್ಣಗೊಳಿಸುವುದಕ್ಕಿಂತ ಹೆಚ್ಚಾಗಿ  ಸಹಾಯ ಮಾಡುತ್ತದೆ. ಸಮಾವೇಶನದ ಪ್ರಯತ್ನಗಳು ಹೆಚ್ಚು ಯಶಸ್ವಿಯಾಗಿ ಮಾಡುವಲ್ಲಿ ಪರಿಣಾಮಕಾರಿಯಾಗಿ ಉಪಯೋಗಿಸಬಹುದಾದ ವಿಭಿನ್ನ ವಿಧಾನಗಳನ್ನು ಗುರುತಿಸುವುದೂ ಮುಖ್ಯವಾಗಿದೆ.

ಸಾಮರ್ಥ್ಯಗಳು ಮತ್ತು ಭಿನ್ನತೆಗಳಮೇಲೆ ನಿರ್ಮಿಸುವುದು ಸಮಾವೇಶಿ ತರಗತಿಗಳಿಗೆ ಉತ್ತಮ ಕಾರ್ಯತಂತ್ರ.

ಈ ರೀತಿಯಲ್ಲಿ ಒಟ್ಟಾಗಿ ತರಗತಿಯಲ್ಲಿ ಎಲ್ಲಾ [ಒತ್ತು ಸೇರಿಸಿದ] ವಿದ್ಯಾರ್ಥಿಗಳಿಗೆ ನಾವು ಕಲಿಸಬಹುದೆಂದು ಊಹಿಸಿರಲಿಲ್ಲ. ( ಸರ್ಕಾರಿ ಶಾಲಾ ಶಿಕ್ಷಕ, NCERT ಕಾರ್ಯಾಗಾರ, ಜನವರಿ 2014).

ಸಂವೇದನಾತ್ಮಕ, ದೈಹಿಕ, ಅರಿವಿನ ಮತ್ತು / ಅಥವಾ ಅದರಲ್ಲಿ ಅನೇಕ ದುರ್ಬಲತೆಗಳನ್ನು ಹೊಂದಿರಬಹುದಾದ ವಾಡಿಕೆಯ  ತರಗತಿಗಳಲ್ಲಿ ಬೋಧಿಸುವುದನ್ನು ಕುರಿತ ಕಾರ್ಯಾಗಾರದ ಕೊನೆಯಲ್ಲಿ ನಾವು ಮೇಲಿನ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆವು. ಅದರಲ್ಲಿ ಭಾಗವಹಿಸಿದ್ದವರು ಎಲ್ಲಾ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು. ನಡೆಸುತ್ತಿದ್ದ ಕಾರ್ಯಾಗಾರ ಸರಣಿಯ ಗಮನವು ಮುಖ್ಯಧಾರೆ ತರಗತಿಗಳಲ್ಲಿ ಅಸಮರ್ಥತೆಯನ್ನು ಹೊಂದಿರುವ ವಿದ್ಯಾರ್ಥಿಗಳನ್ನು ಸಮಾವೇಶನ ಮಾಡಿಕೊಳ್ಳುವುದಾಗಿದ್ದರೂ , ನಮ್ಮ ಸಾರ್ವಜನಿಕ ಶಾಲಾ ಶಿಕ್ಷಕರ ಶಿಕ್ಷಣ ಸಾಮಗ್ರಿಗಳನ್ನು ತಯಾರಿಸುವಾಗ ನನ್ನ ಆಧಾರವಾಗಿಟ್ಟುಕೊಂಡ ಉದ್ದೇಶವೆಂದರೆ, ತರಗತಿಗಳ  ವಿದ್ಯಾರ್ಥಿಗಳ ವೈವಿಧ್ಯತೆಗಳು ಅಥವಾ ಹೋಲಿಕೆಗಳು ಏನೇ ಇದ್ದರೂ ಎಲ್ಲಾ ವಿದ್ಯಾರ್ಥಿಗಳನ್ನು ತಲುಪಲು ಯಾವುದೇ ಏಕ ಮಾರ್ಗವಿಲ್ಲ ಎಂದು ಶಿಕ್ಷಕರು ಗುರುತಿಸಲು ಸಹಾಯ ಮಾಡುವುದು. ಈ ಸಂಬಂಧಿತ ನಮ್ಮ ಕೆಲಸವು ಶಿಕ್ಷಕರು ಈ  ಆಲೋಚನೆಯನ್ನು ಪ್ರಾಯೋಗಿಕವೆಂದು ಕಂಡುಕೊಳ್ಳುತ್ತಿದ್ದಾರೆ ಮತ್ತು ನಮ್ಮ ಪ್ರಯತ್ನಗಳನ್ನು ಮತ್ತಷ್ಟು ದೃಢೀಕರಿಸುತ್ತಿದ್ದಾರೆ ಎಂಬುದನ್ನೂ  ತೋರಿಸಿಕೊಟ್ಟಿತು ಮಾತ್ರವಲ್ಲ ,ಇದೇ ವಿಷಯದ ಮೇಲೆ ನಂತರದಲ್ಲಿ ಇನ್ನೊಂದಿಷ್ಟು ಕಾರ್ಯಾಗಾರಗಳನ್ನು ನಡೆಸಬೇಕೆಂದು ಸೂಚಿಸಿದ್ದಾರೆ.

"ಭಾಷೆ ಇಲ್ಲದೆ, ಯಾರೂ ಜನರೊಂದಿಗೆ ಮಾತನಾಡಲು ಮತ್ತು ಅವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ; ತಮ್ಮ ಭರವಸೆಯನ್ನು ಮತ್ತು ಆಕಾಂಕ್ಷೆಗಳನ್ನು ಹಂಚಿಕೊಳ್ಳಲು, ಅವರ ಇತಿಹಾಸವನ್ನು ಗ್ರಹಿಸಲು ಸಾಧ್ಯವಿಲ್ಲ... "(ಮಂಡೇಲಾ, 1995, ಪುಟ 84).

ವಿದ್ಯಾರ್ಥಿಗಳ ಬಗ್ಗೆ ತಿಳುವಳಿಕೆಯು, ಅವರು ಹೊಂದಿರುವ ಅಥವಾ ಹೊಂದಿರದ ಸಂಭವನೀಯ ಅನುಭವಗಳು, ಮತ್ತು ಅವರ ಹಿನ್ನೆಲೆಗಳು ತರಗತಿಯೊಂದಿಗೆ ಶಿಕ್ಷಕನ ಕೆಲಸವನ್ನು ವಿನ್ಯಾಸಗೊಳಿಸುವಲ್ಲಿ ಮತ್ತು ವಿವರಿಸುವಲ್ಲಿ ನಿರ್ಣಾಯಕವಾಗಿವೆ. ನಾನು ಭಾಷೆ ಪದದ ಅರ್ಥವನ್ನು ಮೇಲೆ ಬಳಸಿರುವ ಭಾಗಶಃ ಉಲ್ಲೇಖದ ಅರ್ಥಕ್ಕಿಂತ ಮುಂದಕ್ಕೆ ತಂದು  ವಿದ್ಯಾರ್ಥಿಗಳನ್ನು ಪ್ರಸ್ತುತಪಡಿಸುವದನ್ನು ಗುರುತಿಸುವ ಪ್ರಾಮುಖ್ಯತೆಯನ್ನು, ತಮ್ಮ ಅನುಭವಗಳನ್ನು, ಅವರ ತಿಳುವಳಿಕೆಯನ್ನು ಮತ್ತು ಅವರ ಪ್ರಸ್ತುತ ಪ್ರಪಂಚದ ದೃಷ್ಟಿಕೋನಗಳನ್ನು ಹೇಗೆ ಬಹಿರಂಗಪಡಿಸುತ್ತಾರೋ ಅದರ ಪ್ರಾಮುಖ್ಯತೆಯನ್ನು ತಿಳಿಯುವುದೆಂದು ನಾನು ವಿಸ್ತರಿಸುತ್ತೇನೆ. ಅವರ ಅಭಿವ್ಯಕ್ತಿಗಳ ಭಾಷೆಯನ್ನು ಗುರುತಿಸುವುದಕ್ಕೆ  ನಮ್ಮಲ್ಲಿ  ಪ್ರತಿಯೊಬ್ಬರಲ್ಲಿಯೂ ಇರುವ ಶಿಕ್ಷಕರಿಗೆ  ಪರಿಧಿಯಲ್ಲಿ ಇರುವವರನ್ನು  ತಲುಪಲು, ಅರ್ಥಮಾಡಿಕೊಳ್ಳಲು, ಮತ್ತು ಒಳಗು ಮಾಡಿಕೊಳ್ಳಲು ಲು ಸಹಾಯ ಮಾಡುವ ಸಾಮರ್ಥ್ಯವಿದೆ.

ಸರ್ಕಾರಿ ಶಾಲಾ ಶಿಕ್ಷಕರು ಹೆಚ್ಚು ಸುಗಮವಾಗಿ ಸಮಾವೇಶಿ ಶಿಕ್ಷಣಕ್ಕಾಗಿ ನಿರೀಕ್ಷಿತ ಬದಲಾವಣೆಗಳಿಗೆ ತಕ್ಕ ಪರಿವರ್ತನೆ ಮಾಡಲು ಸಹಾಯ ಮಾಡುವುದಕ್ಕಾಗಿ, ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಕೌನ್ಸಿಲ್ನಲ್ಲಿ (ಎನ್ಸಿಇಆರ್ಟಿ) ವಿಶೇಷ ಅಗತ್ಯಗಳನ್ನು ಹೊಂದಿರುವ ಗುಂಪುಗಳ ಶಿಕ್ಷಣ ಇಲಾಖೆ (ಡಿಇಜಿಎಸ್ಎನ್) ಶಿಕ್ಷಕ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುತ್ತಿದೆ. ನಮ್ಮ ಸಂಶೋಧನೆ ಮತ್ತು ನಿಯತ ಮತ್ತು ವಿಶೇಷ ಶಿಕ್ಷಣ ಶಿಕ್ಷಕರು ಒಳಗೊಂಡ DEGSN ಆಯೋಜಿಸಿದ ಸರಣಿ ಕಾರ್ಯಾಗಾರಗಳ ಮೂಲಕ ಸಂಗ್ರಹಿಸಲಾದ ಮಾಹಿತಿಯಿಂದ ಸಲಹೆಗಳನ್ನು, ಸಲಹೆಗಳು, ಕಲ್ಪನೆಗಳು ಮತ್ತು ತಂತ್ರಗಳನ್ನು ಇವು ಒಳಗೊಂಡಿವೆ. ಶಿಕ್ಷಕ ಶಿಕ್ಷಣ ವಿಷಯಕ್ಕೆ ಸಂಬಂಧಪಟ್ಟ ನಡೆಯುತ್ತಿರುವ ಕಾರ್ಯಾಗಾರಗಳು ಶಿಕ್ಷಕರು ಎನ್ಸಿಇಆರ್ಟಿ ಪಠ್ಯಪುಸ್ತಕಗಳಿಂದ ಪಾಠಗಳನ್ನು ಅಳವಡಿಸಿಕೊಳ್ಳುವುದು, ಮಾರ್ಪಡಿಸುವುದು ಮತ್ತು ಯೋಜನೆ ಮಾಡುವ ಮೂಲಕ ತಮ್ಮದೇ ಆದ ವಿವರಣಾತ್ಮಕ ವಿಧಾನಗಳನ್ನು ಅಭಿವೃದ್ಧಿಪಡಿಸಲು ಮಾಡಿಕಲಿ  ಚಟುವಟಿಕೆಗಳನ್ನು ಕೈಗೊಳ್ಳುವಲ್ಲಿ ತೊಡಗಿಸಿಕೊಳ್ಳುತ್ತವೆ.  ಚಿತ್ರ 1ನಮ್ಮ ಕೆಲಸದಲ್ಲಿ ನಾವು ಹಂಚಿಕೊಂಡಿರುವ ನನ್ನ ಬೋಧನೆಯ ಅನುಭವಗಳ ಆಧಾರದ ಮೇಲೆ ಕೆಲವು  ಸಲಹೆಗಳನ್ನು ಶಿಕ್ಷಕರು ಸಮಾವೇಶಿ ಸಂಸ್ಕೃತಿಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ

ಅಮೇರಿಕನ್ ಸೈನ್ಸ್ ಎಜುಕೇಟರ್ ಬಿಲ್ ನೆಯ್ (1955) ಅವರೊಂದಿಗಿನ ಆನ್-ಲೈನ್ ಸಂದರ್ಶನದ ಒಂದು ಭಾಗವು ಜನಪ್ರಿಯ ಉಲ್ಲೇಖವಾಗಿದೆ; "ನೀವು ಭೇಟಿ ಮಾಡುವ ಪ್ರತಿಯೊಬ್ಬರು ನಿಮಗೆ ತಿಳಿಯದ ಏನನ್ನಾದರೂ ತಿಳಿದಿರುತ್ತಾರೆ" (2012) ಈ ಮಾತು ನಿಮ್ಮ ಸಮಾವೇಶನದ ಪ್ರಯತ್ನದಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳ ಬೇಕಾದ ಪ್ರಾಮುಖ್ಯತೆಯನ್ನು ತೋರಿಸುತ್ತದೆ.ಸಮಾವೇಶಿ ತರಗತಿಗಾಗಿ ವ್ಯಾಪಕ ಕೆಲಸ ಮತ್ತು ಯೋಜನೆಮಾಡುವುದು  ವಿಶೇಷವಾಗಿ ಸವಾಲಿನ ಕೆಲಸವಾಗಿದ್ದರೂ ಬೋಧನೆಯು ಲಾಭದಾಯಕವಾಗಿದೆ. ಮೊದಲೇ ಹೇಳಿದಂತೆ ವಿಶೇಷವಾದ ಸವಾಲುಗಳನ್ನು ಪರಿಹರಿಸಲು ಸಂಘಟಿಸುವುದು, ನವೀನ ಅಭ್ಯಾಸಗಳನ್ನು ಸಂಯೋಜಿಸುವುದು ಮತ್ತು ವಿಶೇಷ ಸೇವೆಗಳ ಅಗತ್ಯವಿದ್ದಾಗ ಸಂಪನ್ಮೂಲಗಳನ್ನು ಬಳಸುವುದು ಸಮಾವೇಶಿ ಬೋಧನಾ ಅನುಭವಗಳನ್ನು ಪರಿಣಾಮಕಾರಿಯಾಗಿ ಮತ್ತು ಆನಂದದಾಯಕವಾಗಿ  ಮಾಡುತ್ತದೆ.ಈ ಪ್ರಕ್ರಿಯೆಯಲ್ಲಿ, ಸಮಾವೇಶಿ ಅನುಭವದ ಮೂಲಕ ಕಲಿಯುವ ವಿದ್ಯಾರ್ಥಿಗಳು ತಮ್ಮಗಳ ನಡುವೆ ಇರುವ ಹೋಲಿಕೆ ಮತ್ತು ಭಿನ್ನತೆಗಳನ್ನು ಕಲಿಯುತ್ತಾರೆ; ಅವರಲ್ಲಿ ಪ್ರತಿಯೊಬ್ಬರೂ ವಿಭಿನ್ನ  ಮತ್ತು ಆದ್ದರಿಂದ ವಿಶಿಷ್ಟ, ಏಕೆಂದರೆ ಅವನು ಅಥವಾ ಅವಳು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಈ ಸಹಕಾರಿ ಪ್ರಕ್ರಿಯೆಗೆ ಕೊಡುಗೆ ನೀಡಬಲ್ಲರು ಎಂಬುದನ್ನು ಮನಗಾಣುವುದು, ಮಹತ್ವದ ಸಾಧನೆಯಾಗಿದೆ.

 

ಕನ್ನಡಾನುವಾದ : ಜೈಕುಮಾರ್ ಮರಿಯಪ್ಪ

18464 ನೊಂದಾಯಿತ ಬಳಕೆದಾರರು
7225 ಸಂಪನ್ಮೂಲಗಳು