ಶಿಕ್ಷಣದಲ್ಲಿ ಹಾಸ್ಯ-ಗೀತಾ ಅಯ್ಯರ್

ಸರ್ ವಿಲ್ಲಿಯಂ ಥಾಮ್ಸನ್ ರವರು ಗಣಿತ ಶಾಸ್ತ್ರೀಯ ಭೌತಶಾಸ್ತ್ರಜ್ಞ ಮತ್ತು ಒಬ್ಬ ಇಂಜಿನಿಯರ್. ಇವರು ಗ್ಲಾಸ್ ಗೌ ವಿಶ್ವವಿದ್ಯಾನಿಲಯದಲ್ಲಿ ನ್ಯಾಚುರಲ್ ಹಿಸ್ಟರಿ (ಈಗ ನ್ಯಾಚುರಲ್ ಸೈನ್ಸ್) ಉಪನ್ಯಾಸಕರಾಗಿದ್ದರು. ಅವರು ಸ್ವಲ್ಪ ತಿಕ್ಕಲು ಸ್ವಭಾವದ ಹಾಸ್ಯಪ್ರವೃತ್ತಿಯ ಉಪನ್ಯಾಸಕರಾಗಿದ್ದರು. ನಾಟಕ ಮತ್ತು ರಂಗಭೂಮಿಗಳಲ್ಲಿ ಅಭಿರುಚಿಯನ್ನು ಹೊಂದಿದವರಾಗಿದ್ದು ಅವರ ವಿದ್ಯಾರ್ಥಿಗಳಿಂದ ಮೆಚ್ಚುಗೆಯನ್ನು ಪಡೆದವರಾಗಿದ್ದರು. ಒಮ್ಮೆ ಅವರು ಯಾವುದೋ ಕಾರಣದಿಂದಾಗಿ  ತಮ್ಮ ಉಪನ್ಯಾಸವನ್ನು ನೀಡಲಾಗದಿದ್ದಾಗ, ತಮ್ಮ ಉಪನ್ಯಾಸ ಕೋಣೆಯ ಬಾಗಿಲ ಮೇಲೆ “Professor Thomson will not meet his classes today’  ಎನ್ನುವ ಸೂಚನೆಯನ್ನು ವಿದ್ಯಾರ್ಥಿಗಳಿಗಾಗಿ ಬರೆದಿಟ್ಟು ಹೋಗಿದ್ದರು.
 
ವಿದ್ಯಾರ್ಥಿಗಳ ಒಂದು ಗುಂಪು ಪ್ರೊಫೆಸರ್ ಅವರ ಸೂಚನೆಯೊಂದಿಗೆ ತಮಾಷೆ ಮಾಡಲು ನಿರ್ಧರಿಸಿತು. ಅವರು ಆ ಸೂಚನೆಯಲ್ಲಿದ್ದ ’C’ ಅಕ್ಷರವನ್ನು ಎಚ್ಚರಿಕೆಯಿಂದ ಅಳಿಸಿದರು- ಆಗ ಆ ಸೂಚನೆ “Professor Thomson will not meet his lasses today’  ಎಂದಾಯಿತು ಮತ್ತು ಅವರ ಪ್ರತಿಕ್ರಿಯೆಯನ್ನು ನೋಡಲು ವಿದ್ಯಾರ್ಥಿಗಳು ಕಾದಿದ್ದರು. ಬಂದು ನೋಡಿದಾಗ ಇದ್ದದ್ದು- “Professor Thomson will not meet his asses today’  ಹಾಸ್ಯ ಪ್ರವೃತ್ತಿಯಲ್ಲಿ ಒಂದು ಕೈ ಮೇಲಿದ್ದ ಪ್ರೊಫೆಸರ್, ಆ ಸೂಚನೆಯಲ್ಲಿದ್ದ "l"   ಅಕ್ಷರವನ್ನು ಅಳಿಸಿದ್ದರು. 
 
 ವಿಚಿತ್ರ ಸ್ವಭಾವದ ಉಪನ್ಯಾಸಕರಾದ ಥಾಮ್ಸನ್, ಅವರು ಬೇರೆ ಯಾರೂ ಅಲ್ಲ ಲಾರ್ಡ್ ಕೆಲ್ವಿನ್,  ಅವರ ಜನ್ಮ ನಾಮ ವಿಲ್ಲಿಯಂ ಥಾಮ್ಸನ್ ನಂತರ ಲಾರ್ಗ್ಸ್ ನ ಬ್ಯಾರನ್ ಕೆಲ್ವಿನ್ (Baron Kelvin of Largs) ಎಂಬ ಬಿರುದನ್ನು ಪಡೆದರು. ಅವರು ರಾಣಿ ವಿಕ್ಟೋರಿಯಾ ಅವರಿಂದ ಟ್ರಾನ್ಸ್-ಅಟ್ಲಾಂಟಿಕ್ ಟೆಲಿಗ್ರಾಫ್ ಕಲ್ಪನೆ (ಯೋಜನೆ) ಗಾಗಿ ಬಿರುದನ್ನು ಪಡೆದರು. ಅವರು ೧೮೬೬ರಲ್ಲಿ ಮೊದಲ ಯಶಸ್ವಿ ಟ್ರಾನ್ಸ್ ಅಟ್ಲಾಂಟಿಕ್ ಟೆಲಿಗ್ರಾಫ್ ಕೇಬಲ್ ಅನ್ನು ಹಾಕುವುದರ ಜವಾಬ್ದಾರಿಯನ್ನು ಹೊತ್ತ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದರು. ಅಲ್ಲದೇ ನಾವಿಕರ ದಿಕ್ಸೂಚಿಯ ತಯಾರಿಕೆಯಲ್ಲಿ ಗಮನಾರ್ಹ ಕೆಲಸಮಾಡಿದ್ದಾರೆ, ಅವರು ಕೆಲ್ವಿನ್ ಉಷ್ಣತೆಯ ಮಾಪನದ ಸಂಶೋಧನೆಯಿಂದಾಗಿ ಅತ್ಯಂತ ಚಿರಪರಿಚಿತರಾಗಿದ್ದಾರೆ.
 
ಕೊಡುಗೆ: ಗೀತಾ ಐಯ್ಯರ್. ಮೂಲ: ಸೈನ್ಸ್ ಎಜುಕೇಷನ್ ರಿವೀವ್, ಸಂಪುಟ ೧ ನಂ..೨-೨೦೦೨, pp. ೧೧೧-೧೧೨ (ಫೋಲಿನೊನಲ್ಲಿ ಉಲ್ಲೇಖಿಸಲಾದ, ರೊಬ್ಯಾಕರ್,೨೦೦೧)
 
ಗೀತಾ ಅಯ್ಯರ್ ರವರು ಒಬ್ಬ ಸ್ವತಂತ್ರ ಸಲಹೆಗಾರರಾಗಿದ್ದು, ಅನೇಕ ಶಾಲೆಗಳೊಂದಿಗೆ ಪಠ್ಯಕ್ರಮದ ವಿನ್ಯಾಸ ಅಲ್ಲದೇ ವಿಜ್ನಾನ ಮತ್ತು ಪರಿಸರ ಶಿಕ್ಷಣದಲ್ಲಿ ಕೆಲಸಮಾಡಿದ್ದಾರೆ. ಮೊದಲು ಅವರು ರಿಷಿ ವ್ಯಾಲಿ ಶಾಲೆಯಲ್ಲಿ ಶಿಕ್ಷಕಿಯಾಗಿಯಾಗಿದ್ದರು, ನಂತರ ಪುಣೆಯ ಹತ್ತಿರ ಸಹ್ಯಾದ್ರಿ ಶಾಲೆಯಲ್ಲಿ(ಏಈI) ಮುಖ್ಯಸ್ಥೆಯಾಗಿದ್ದರು. ಶಿಕ್ಷಣ ಮತ್ತು ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ವಿಸ್ತಾರವಾಗಿ ಬರೆದಿದ್ದಾರೆ. ಅವರನ್ನು scopsowl@gmail.com ನಲ್ಲಿ ಸಂಪರ್ಕಿಸಬಹುದು.
 
18477 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು