ಶಿಕ್ಷಕರ ಬಗ್ಗೆ ನಲ್ವಾತುಗಳು

ಇಂದು ದೇಶದ ಎರಡನೇ ರಾಷ್ಟ್ರಪತಿ ಶ್ರಿ ಸರ್ವಪಳ್ಳಿ ರಾಧಾಕೃಷ್ಣ ಅವರ ಜನ್ಮದಿನ .ಅದನ್ನು ಭಾರತದಾದ್ಯಂತ ಶಿಕ್ಷಕರ ದಿನವಾಗಿ ಆಚರಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಅನೇಕ ಖ್ಯಾತನಾಮರು ಶಿಕ್ಷಕರ ಬಗ್ಗೆ ಆಡಿರುವ ತ್ತಮ ಮಾತುಗಳನ್ನು ಇಲ್ಲಿ ಕೊಡಲಾಗಿದೆ.

“ ನಾನೇನೂ ಶಿಕ್ಷಕನಲ್ಲ .ನಾನೊಬ್ಬ ಸಹಪ್ರಯಾಣಿಕ ನೀವು ಬಂದು ದಾರಿ ಯಾವುದೆಂದು ಕೇಳಿದಿರಿ.ನಾನು ಮುಂದಕ್ಕೆ ಕೈ ತೋರಿಸಿದೆ ನನಗೂ ನಿಮಗೂ ಮುಂದಕ್ಕೆ ಕೈತೋರಿಸಿದೆ ಅಷ್ಟೆ.” ಜಾರ್ಜ್ ಬರ್ನಾರ್ಡ್ ಷಾ

“ಬೋಧನೆಯ ಕಲೆಯೆಂದರೆ ಎಳೆಯರಲ್ಲಿರುವ ಸಹಜವಾಗಿರುವ ಕುತೂಹಲವನ್ನು ಮುಂದೆ ಅದನ್ನು ತಣಿಸಿಕೊಳ್ಳುವ ಸಲುವಾಗಿ ಜಾಗೃತಗೊಳಿಸುವ ಕಲೆ” -ಅನತೋಲ್ ಫ್ರಾನ್ಸ್

“ಮಕ್ಕಳ ಜನಕರಿಗಿಂತಲೂ ಮಕ್ಕಳಿಗೆ ವಿದ್ಯೆ ನೀಡುವವರನ್ನು ಹೆಚ್ಚು ಗೌರವಿಸಬೇಕು ಏಕೆಂದರೆ ಜನಕರು ಅವರಿಗೆ ಜೀವ ಮಾತ್ರಕೊಟ್ಟರು ಆದರೆ ಶಿಕ್ಷಕರು ಚೆನ್ನಾಗಿ ಬಾಳುವ ಕಲೆಯನ್ನು ಕಲಿಸಿಕೊಡುತ್ತಾರೆ”-ಅರಿಸ್ಟಾಟಲ್

“ಬೋಧನೆಯ ಕಲೆಯೆಂಬುದು ಹೊಸಹೊಸತನ್ನು ಕಂಡುಹಿಡಿಯುವುದಕ್ಕೆ  ನೆರವು ನೀಡುವ ಕಲೆ” ಮಾರ್ಕ್ ವಾನ್ ಡೊರೆನ್

Teachers' Day 2018

 

“ಅವರು ನಿಮಗೆ ಸ್ಫೂರ್ತಿ ನೀಡುತ್ತಾರೆ ಮನರಂಜಿಸುತ್ತಾರೆ ಎಷ್ಟರಮಟ್ಟಿಗೆಯೆಂದರೆ ನಿಮಗೆ ಏನೇನೂ ಗೊತ್ತಿಲ್ಲದಿದ್ದರೂ ಅನೇಕಾನೇಕ ವಿಷಯಗಳನ್ನು ಕಲಿತುಬಿಡುತ್ತೀರಿ.”-ನಿಕೊಲಾಸ್ ಸ್ಪಾರ್ಕ್

“ಈ ಮಾತು ನಾವು ಸದಾ ನೆನಪಿನಲ್ಲಿಡಬೇಕು :ಒಂದು ಪುಸ್ತಕ, ಒಂದು ಲೇಖನಿ, ಒಂದು ಮಗು ಮತ್ತು  ಒಬ್ಬ ಶಿಕ್ಷಕ ಇಡೀ ಜಗತ್ತನ್ನೇ ಬದಲಾಯಿಸಬಲ್ಲರು” ಮಲಾಲ ಯೂಸೂಫಾಜೈ಼

“ಒಬ್ಬ ಉತ್ತಮ ಕಲಾವಿದನಂತೆ ಉತ್ತಮ ಶಿಕ್ಷಕನು ಮೊದಲು ಮಕ್ಕಳ ಮನವನ್ನು ತನ್ನೆಡೆ ಸೆಳೆದಿಟ್ಟುಕೊಳ್ಳಬೇಕು ನಂತರ ಪಾಠವನ್ನು ಬೋಧಿಸಬೇಕು” ಜಾನ್ ಹೆನ್ರಿಕ್ ಕ್ಲಾರ್ಕ್

“ನಿಜಕ್ಕೂ ಧೀಮಂತನಾದ ಶಿಕ್ಷಕನು ನಿಮ್ಮನ್ನು ತನ್ನ ಜ್ಞಾನದ ಮಂದಿರಕ್ಕೆ ಪ್ರವೇಶಿಸಿ ಎಂದು ಕರೆಯುವುದಿಲ್ಲ  ಬದಲು ನಿಮ್ಮನ್ನು ನಿಮ್ಮ ಮನೋಮಂದಿರದ ಹೊಸ್ತಿಲ ವರೆಗೆ ಕೊಂಡೊಯ್ಯುತ್ತಾನೆ.”ಖಲೀಲ್ ಗಿಬ್ರಾನ್

“ ಸಾಮಾನ್ಯ ಶಿಕ್ಷಕನು ವಿಷಯಹೇಳುತ್ತಾನೆ. ಉತ್ತಮ ಶಿಕ್ಷಕನು ವಿಷಯ ವಿವರಿಸುತ್ತಾನೆ ಅತ್ಯುತ್ತಮ  ಶಿಕ್ಷಕನು ಮಾಡಿ ತೋರಿಸುತ್ತಾನ ಮಹಾನ್ ಶಿಕ್ಷಕನು ಸ್ಫೂರ್ತಿ ನೀಡುತ್ತಾನೆ”-ವಿಲಿಯಂ ಅರ್ಥರ್ ವಾರ್ಡ್

“ಶಿಕ್ಷಕರು ಏನನ್ನಾದರೂ ಮಾಡಲು ಹೊರಟರೆ ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಅವರು ಸುಮ್ಮನೆ ಮಾಡಿ ಮುಗಿಸುತ್ತಾರೆ.”-ಜೆ.ಡಿ. ಸಾಲಿಂಗರ್

“ಕಲಿಯುವುದರ ಬಗ್ಗೆ ಅತೀವ ಪ್ರೇಮವಿರುವ ಶಿಕ್ಷಕನು ಇತರರು ಕಲಿಯಲು ಸಹಾಯ ಮಾಡುವ ಹಕ್ಕು ಮತ್ತುಸಾಮರ್ಥ್ಯವನ್ನು ಗಳಿಸುತ್ತಾನೆ.”- ರುತ್ ಬೀಚಿಕ್

“ಜೀವನದಲ್ಲಿ ಒಬ್ಬ ಉತ್ತಮ ಶಿಕ್ಷಕ ಸಿಕ್ಕರೆ ಸಾಕು ದಾರಿತಪ್ಪಿದವನನ್ನು ಶ್ರೇಷ್ಠ ಪ್ರಜೆಯನ್ನಾಗಿ ಮಾಡಬಲ್ಲನು”-ಫಿಲಪ್ ವೈಲಿ

 

19514 ನೊಂದಾಯಿತ ಬಳಕೆದಾರರು
7758 ಸಂಪನ್ಮೂಲಗಳು