ಶಿಕ್ಷಕರ ಪರಿಕಲ್ಪನೆ , ಶಿಕ್ಷಕರ ಶಿಕ್ಷಣ ಕಾರ್ಯಕ್ರಮ ಗಳು ಮತ್ತು ಶಾಲಾ ಸುಧಾರಣೆ - ಒಂದು ಚರ್ಚೆ

ಆತ್ಮೀಯ ಸದಸ್ಯರೆ,
ನಾವು ನಮ್ಮ ಈ ವೇದಿಕೆಯಲ್ಲಿ ಇಂದಿನಿಂದ 'ಶಿಕ್ಷಕರು ಎಂಬ ಪರಿಕಲ್ಪನೆ' ಮೇಲೆ ಒಂದು ಆಸಕ್ತಿಕರ ಚರ್ಚೆಯನ್ನು  ಆರಂಭಿಸುತ್ತಿದ್ದೇವೆ. ಶಿಕ್ಷಣದ ಇಡೀ ಪ್ರಕ್ರಿಯೆಯಲ್ಲಿ ಶಿಕ್ಷಕರನ್ನು ಬಲು ಪ್ರಮುಖ ವ್ಯಕ್ತಿಗಳು ಎಂದು ನಾವು ಕರೆಯುತ್ತೇವೆ'. ಬೋಧನೆ ಗುಣಮಟ್ಟ, ನಮ್ಮ ಅನೇಕರ ದೃಷ್ಟಿಯ ಪ್ರಕಾರ, ನಮ್ಮ ಶಿಕ್ಷಣ ವ್ಯವಸ್ಥೆ ಎಷ್ಟು ಗುಣಮಟ್ಟದ ಶಿಕ್ಷಕರನ್ನು  ಉತ್ಪಾದಿಸುತ್ತದೆಯೋ ಬೋಧನೆಯ ಗುಣಮಟ್ಟವೂ ಅಷ್ಟೇ ಉತ್ಕೃಷ್ಟವಾಗಿರುತ್ತದೆ. ಇತರ ಯಾವುದೇ ಸುಧಾರಣೆಗಳು ಎಷ್ಟೇ ನಡೆಯಲಿ  ಶಿಕ್ಷಕರು  ಗುಣಮಟ್ಟದ  ಶಿಕ್ಷಣ ನೀಡಲು ಅಗತ್ಯ ಸಾಮರ್ಥ್ಯಗಳೊಂದಿಗೆ ಸಮರ್ಪಕವಾಗಿ ಕೌಶಲ್ಯವನ್ನು ಹೊಂದಿರದಿದ್ದರೆ, ನುರಿತವರಾಗಿರದಿದ್ದರೆ ,ವಿದ್ಯಾಅರ್ಹತೆ ಇಲ್ಲದಿದ್ದರೆ, ಗುಣಮಟ್ಟದ ಮತ್ತು ಸಮರ್ಥ ಭವಿಷ್ಯದ ಪೀಳಿಗೆಯ ತಯಾರಿಯ ಕಲ್ಪನೆಯು ದೂರದ ಕನಸಾಗಿ ಉಳಿಯುತ್ತದೆ. ಶಿಕ್ಷಕರ ತರಬೇತಿ ಮತ್ತು ಸಜ್ಜುಗೊಳಿಸುವಿಕೆ ಕುರಿತ ಚರ್ಚೆ ಗೆ ಪೂರ್ವ ಭಾವಿಯಾಗಿ ನಾವು ನಮ್ಮ ಮಕ್ಕಳಿಗೆ ಬೋಧನೆ ಮಾಡಲು ಎಂಥ  ಶಿಕ್ಷಕರನ್ನು ನಾವು ನೋಡಲು ಬಯಸುತ್ತೇವೆ ಎಂಬುದು ನಿರ್ಧಾರವಾಗಬೇಕಾಗುತ್ತದೆ. ಇದು ಬೇರೆ ಎಲ್ಲ ವಿಷಯಗಳಿಗಿಂತ ಮೊದಲು 'ಶಿಕ್ಷಕರು ಎಂಬ ಪರಿಕಲ್ಪನೆ' ಬಗ್ಗೆ ಮಾತನಾಡುವುದು  ತಾರ್ಕಿಕವಾದದ್ದು ಮತ್ತು ಅದನ್ನೂ ಮೀರಿದ್ದು .

ಶಿಕ್ಷಕರ ಪರಿಕಲ್ಪನೆ , ಶಿಕ್ಷಕರ ಶಿಕ್ಷಣ ಕಾರ್ಯಕ್ರಮ ಗಳು ಮತ್ತು ಶಾಲಾ ಸುಧಾರಣೆ - ಒಂದು ಚರ್ಚೆ

ಹೆಸರಾಂತ ಶಿಕ್ಷಣ ತಜ್ಞ, ಚಿಂತಕ, ತತ್ವಜ್ಞಾನಿ ಮತ್ತು ಶಿಕ್ಷಣ ಸಮುದಾಯದ ಸಂಪನ್ಮೂಲ ಗುಂಪು ಸದಸ್ಯ ರೋಹಿತ್ ಧನಕರ್, 'ಅತಿಥಿ ಮಾಡರೇಟರ್ ಆಗಿ ಚರ್ಚೆಯ  ಸಮನ್ವಯ ಮಾಡಲು  ಸಮ್ಮತಿಸಿದ್ದಾರೆ. 'ರೋಹಿತ್ ಜಿ ಅವರು ಎತ್ತುವ ಪ್ರಶ್ನೆಗಳ  ಬೆಳಕಿನಲ್ಲಿ ನಾವು ಶಿಕ್ಷಕರು ಎಂಬ ಪರಿಕಲ್ಪನೆ ಬಗ್ಗೆ ಸದಸ್ಯರು ಉತ್ಸಾಹದಿಂದ  ತಮ್ಮ ಅಭಿಪ್ರಾಯಗಳನ್ನು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ತೊಡಗುತ್ತಾರೆಂದು ನಾವು ಎದುರುನೋಡುತ್ತೇವೆ.

ಡಾ ಶುಭಾಂಗಿ ಶರ್ಮಾ ಸಂಪನ್ಮೂಲ ವ್ಯಕ್ತಿ, ಶಿಕ್ಷಣ ಸಮುದಾಯ - ಯುಎನ್ ಪರಿಹಾರ ವಿನಿಮಯ, ಯುನೆಸ್ಕೋ, ಯುನೆಸ್ಕೋ ಹೌಸ್,ನವ ದೆಹಲಿ.

ಆತ್ಮೀಯ ಸ್ನೇಹಿತರೆ,
ನಾನು ಅನುಕೂಲರಹಿತ ವರ್ಗದ  ಮಕ್ಕಳಿಗೆ ಶಿಕ್ಷಣ ನೀಡುವ ಮತ್ತು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶ್ರಮಿಸುವ ಒಂದು ಸಂಸ್ಥೆಗಾಗಿ ಕೆಲಸ.  ನಮ್ಮ   ಕೆಲಸ ಅವಶ್ಯಕ ಜ್ಞಾನ ತಳಹದಿ, ತಿಳುವಳಿಕೆ, ಸಾಮಾಜಿಕ ಕಾಳಜಿ ಮತ್ತು ಶಿಕ್ಷಣದಲ್ಲಿ ಗುಣಮಟ್ಟದ ವಿಷಯವನ್ನು ನಿರ್ವಹಿಸುವ ಸಾಮರ್ಥ್ಯಗಳೊಂದಿಗೆ ಶಿಕ್ಷಕರ ಅಭಿವೃದ್ಧಿ  ಮಾಡುವುದನ್ನು ಒಳಗೊಂಡಿದೆ. ನಮ್ಮ  ಸಂಸ್ಥೆಯ ಕಳೆದ 30 ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಮತ್ತು ದೇಶದ ವಿವಿಧ ಭಾಗಗಳಲ್ಲಿ ಆಯಾ ರಾಜ್ಯ ಸರಕಾರದ, ಶಿಕ್ಷಕ ತರಬೇತಿ ಸಂಸ್ಥೆಗಳು ಮತ್ತು ರಾಜ್ಯದಲ್ಲಿನ NGO ಗಳು ಸಹಯೋಗದೊಂದಿಗೆ ಶಿಕ್ಷಕರ ಪ್ರಶಿಕ್ಷಣದ ಜವಾಬ್ದಾ ರಿ  ತೆಗೆದುಕೊಂಡಿದೆ. ನಾವು TISS ನಡೆಸುತ್ತಿರುವ ಎಂ.ಎ. (ಪ್ರಾಥಮಿಕ) ಶಿಕ್ಷಣ ವ್ಯಾಸಂಗಕ್ರಮದ ಅಭಿವೃದ್ಧಿಗೆ ಕೊಡುಗೆ ನೀಡಿದ್ದೇವೆ ಮತ್ತು ನಾನು ಅತಿಥಿ ಬೋಧಕಳಾಗಿ ಆ ವ್ಯಾಸಂಗಕ್ರಮದಲ್ಲಿ ಶಿಕ್ಷಣದ ತತ್ತ್ವಶಾಸ್ತ್ರ  ಕೋರ್ಸ್ ಕಲಿಸುತ್ತಿದ್ದೇನೆ..

ಅಂತಿಮವಾಗಿ ಶಿಕ್ಷಣದ ಗುಣಮಟ್ಟವು ನಮ್ಮ ಶೈಕ್ಷಣಿಕ ಸಂವಾದದಲ್ಲಿ ಕೇಂದ್ರ ಕಾಳಜಿ ಮಾರ್ಪಟ್ಟಿರುವಂತೆ ತೋರುತ್ತದೆ. ಈ ಸರ್ವಶಿಕ್ಷಣ ಅಭಿಯಾನದಲ್ಲಿ  ಗುಣಮಟ್ಟಕ್ಕೆ  ಒತ್ತು ಸ್ಪಷ್ಟವಾಗಿದೆ, NCF 2005 ವ್ಯಕ್ತಪಡಿಸಿದ ಕಾಳಜಿ  ವಿಚಾರಗೋಷ್ಠಿಯಲ್ಲಿ ಸಂವಾದಗಳು ಮತ್ತು ರಾಷ್ಟ್ರೀಯ ಪತ್ರಿಕಾ ಸಂವಾದಗಳಲ್ಲಿ ಇದಕ್ಕೆ ಒತ್ತು ಸ್ಪಷ್ಟವಾಗಿದೆ . ಹಿಂದೆ ಹೀಗಿರಲಿಲ್ಲ ಎಂಬುದನ್ನು  ಅದು ಮನಸ್ಸಿನಲ್ಲಿ ಇಟ್ಟು ಕೊಂಡಿರುವುದು ಸೂಕ್ತ. ಇತ್ತೀಚಿನ ದಿನಗಳ ತನಕ ನಮ್ಮ ಶೈಕ್ಷಣಿಕ ಕಾರ್ಯಕ್ರಮಗಳು ಬಹಳ, ಪ್ರವೇಶ (ಪರಿಮಾಣ) ಮತ್ತು ಗುಣಮಟ್ಟದ ನಡುವಿನ ದ್ವಂದ್ವದಲ್ಲಿ  ಬಹಳ ಕಾಲ  ತೊಳಲಾಡಿವೆ.

ಶಿಕ್ಷಣದಲ್ಲಿ ಗುಣಮಟ್ಟ ಸುಧಾರಿಸುವಲ್ಲಿ ಶಿಕ್ಷಕ ನ ಪಾತ್ರ ಹಿರಿದು   ಎಂದು ಗುರುತಿಸುವಿಕೆ ಸಹ ಯಾತನೀಯ ವಿಳಂಬದಿಂದ ಆದರೆ ಖಚಿತವಾಗಿ ನಮ್ಮಲ್ಲಿ ಅರುಣೋದಯವಾಗಿದೆ. ಇದು ನಾವು ಇನ್ನೂ ಗುರಿ ತಲುಪಿರದಿದ್ದರೂ, ಆದರೆ ಅರುಣೋದಯ ಚಿಹ್ನೆಗಳು  ಸಾಕಷ್ಟು ಸ್ಪಷ್ಟ ವಾಗಿವೆ. ಆದ್ದರಿಂದ, ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಅದಿರುವ ಅಧೋಗತಿಯಿಂದ ಹೊರತರಬಲ್ಲ ಮತ್ತು ದೃಢವಾಗಿ ಗುಣಾತ್ಮಕ ಸುಧಾರಣೆಯ ಹಾದಿಯಲ್ಲಿ ಕೊಂಡೊಯ್ಯಬಲ್ಲ ಎಂಥ ಶಿಕ್ಷಕ ನಮ್ಮ . ಮನಸ್ಸಿನಲ್ಲಿದ್ದಾನೆ ಇದು ಕೇಳಲು ಸಕಾಲ ? ನಾವು ಅವರಲ್ಲಿ  ಯಾವ ಸಾಮರ್ಥ್ಯಗಳನ್ನು ಮತ್ತು ಗುಣಗಳನ್ನು ನಾವು ಕಲ್ಪಿಸಿಕೊಳ್ಳುತ್ತೇವೆ. ವ್ಯವಸ್ಥೆ, ಮಗು ಮತ್ತು  ಸಮಾಜದೊಂದಿಗೆ ಯಾವ ರೀತಿಯ ಸಂಬಂಧ ಅವರು ಬೆಳೆಸಿ ನಿರ್ವಹಿಸ ಬೇಕು?

, ನಾವು ಸದಾ  ಪೂಜಿಸಿ ಹೊಗಳುವ ಶಿಕ್ಷಕನ ಸಾಂಪ್ರದಾಯಿಕ ಚಿತ್ರವೆಂದರೆ, ತನ್ನ (ಇದು ಯಾವಾಗಲೂ ಪುರುಷರು) ಹೃದಯದಲ್ಲಿ ಸದಾ ವಿದ್ಯಾರ್ಥಿಗಳ 'ಕ್ಷೇಮಾಭಿವೃದ್ಧಿ’ ಹೊಂದಿದ್ದ ಬಹುತೇಕ ಎಲ್ಲಾ ತಿಳಿದ ಗುರು ಎಂಬುದು. ತನ್ನ ಕ್ಷೇತ್ರದಲ್ಲಿ ಮತ್ತು ಎಲ್ಲರಿಗೂ  ಅದನ್ನು ತಿಳಿಸಿಕೊಡದೆ 'ವಿದ್ಯಾ' ನಿಧಿ ರಕ್ಷಕನಾದ ಸ್ವತಂತ್ರ  ಬೋಧಕ; ಬಹಳ ಕಠಿಣವಾದ ಅಳತೆಗೋಲಿನ ಮೇಲೆ ತನ್ನ 'ಸುಪಾತ್ರ ಶಿಷ್ಯ'ನ  ಆಯ್ಕೆಮಾಡುವವ , ಶಿಕ್ಷಣ ಸಾರ್ವತ್ರಿಕೀಕರಣ ಕಲ್ಪನೆ ಻ವನಿಗೆ ಇರಲಿಲ್ಲ. ಆದರೆ ಈ ಚಿತ್ರ ಒಂದು ಪುರಾಣ ಇರಬಹುದು, ಮತ್ತು ಸರಿಯಾದ ಇತಿಹಾಸದ ಕಟ್ಟುನಿಟ್ಟಾದ ಪರೀಕ್ಷೆ ಯಲ್ಲಿ ಗೆಲ್ಲುವುದಿಲ್ಲ.

ವಸಾಹತುಶಾಹಿ ಕಾಲದಲ್ಲಿ ಶಿಕ್ಷಕರು ವ್ಯವಸ್ಥೆಯ ಸಂಪೂರ್ಣವಾಗಿ ನಿಯಮಗಳು, ಪಠ್ಯಕ್ರಮವನ್ನು ಪಠ್ಯಪುಸ್ತಕಗಳು, ಪರೀಕ್ಷೆಗಳು ಮತ್ತು ಮೇಲಿನಿಂದ ಬಂದ ಆದೇಶಗಳನ್ನು ಪಾಲಿಸಲು ಬದ್ಧರಾಗಿರುವ ಸೇವಕರಾದನು. ಅವರು ಎಲ್ಲಾ ಸ್ವಾಯತ್ತತೆ ಕಳೆದುಕೊಂಡು ಅಧಿಕಾರದ ಕ್ರಮಾನುಗತ ಶ್ರೇಣಿಯಲ್ಲಿ ಕಟ್ಟಕಡೆಯ ಸ್ಥಾನದಲ್ಲಿದ್ದಾರೆ. ಕೊನೆಯ ಸರ್ಕಾರಿ ಸೇವಕ ರಾದರು.

ಸ್ವಾತಂತ್ರ್ಯಾನಂತರ, ವ್ಯವಸ್ಥೆಯು ಇನ್ನೂ  ಕಡಿಮೆ ವಿದ್ಯಾರ್ಹತೆಯ (ತರಬೇತಿಯಿಲ್ಲದ ) ಶಿಕ್ಷಕರು ಸಮಸ್ಯೆಗಳಲ್ಲೆ ತಡಕಾಡುತ್ತಿದ್ದಾಗ  NFE ಮತ್ತು ಪ್ಯಾರಾ-ಶಿಕ್ಷಕರು ವಿವಿಧ ರೂಪಗಳಲ್ಲಿ ಶಿಕ್ಷಕ ವಿದ್ಯಾರ್ಹತೆಗಳು ಮತ್ತು ಸನ್ನದ್ಧತೆಯನ್ನು ಮತ್ತಷ್ಟು ಕೆಳಕ್ಕೆ ತಳ್ಳಿದವು. ಯಾರಾದರೂ ಕೇವಲ ಓದಲು ಮತ್ತು ಬರೆಯಲು ತಿಳಿದಿದ್ದರೆ ಸಾಕು, ಕೆಲವೇ ದಿನಗಳ ತರಬೇತಿ ನೀಡಿ ಸ್ಥಳೀಯ ಎಂಬ ಕಾರಣದಿಂದ ನಿರಂತರ ಬೆಂಬಲ ವಾಗ್ದಾನದ ಜೊತೆಗೆ  ವಿದ್ಯೆ ಕಲಿಸಿಕೊಡಲು ಫಿಟ್ ಎಂದು ಘೋಷಿಸಿ ಬಿಡುತ್ತಿದ್ದರು . ಹೀಗಾಗಿ, ಯಾವುದೇ ಜ್ಞಾನ ತಳಹದಿ ಬೋಧನೆಗೆ ಅವಶ್ಯವೆಂಬ ಕಲ್ಪನೆಯನ್ನು ಸಂಪೂರ್ಣವಾಗಿ ಕೈಬಿಡುತ್ತಿದ್ದರು. ಇಲ್ಲಿ ಶಿಕ್ಷಕ ತನಗೆ ಕೊಟ್ಟ ಒಂದು ಅತಿ ಸಣ್ಣ ತರಬೇತಿ ಹಾಗೂ ಕೆಟ್ಟದಾಗಿ ಬರೆದ  ಕೈಪಿಡಿ ಸೂಚನೆಗಳನ್ನು ಅನುಸರಿಸುವ  ಯಾರಾದರೂ ಶಿಕ್ಷಕನೆಂದು ಪರಿಗಣಿತ ನಾಗುತ್ತಿದ್ದ.. ಶೈಕ್ಷಣಿಕ ಚಿಂತನೆ, ವಿಷಯದ ಜ್ಞಾನ ಅಥವಾ ತರಗತಿಯ ಬೋಧನೆಗೆ ಬೇಕಾದ ಕೌಶಲ್ಯಗಳ ಯಾವುದೇ ತಿಳುವಳಿಕೆ ಸಹ ಅಗತ್ಯ ಎಂದು ಪರಿಗಣಿಸಲಾಗುತ್ತಿರಲಿಲ್ಲ.

 ಇಂದಿಗೂ,ಸರ್ಕಾರದ ವ್ಯವಸ್ಥೆಯಲ್ಲಿ ಪತ್ರದಲ್ಲಿ ಅರ್ಹತೆಗಳು ಮತ್ತು ತರಬೇತಿ ನಿಯಮಗಳನ್ನು ಸರಿಯಾಗಿ ಪಾಲಿಸಿದರೂ (ಕಾರ್ಯತಃ ಅಲ್ಲ) ಮತ್ತು ಸಂಬಳ ರಚನೆ ಸುಧಾರಣೆ ಮಾಡುತ್ತಾ ವ್ಯವಸ್ಥೆಯು ಶಿಕ್ಷಕರನ್ನು ಆದೇಶ ಮತ್ತು ತರಬೇತಿಯನ್ನು ಚಕಾರ ಎತ್ತದೆ ಸ್ವೀಕರಿಸುವ ವಿಧೇಯ ನೌಕರನಂತೆ ನೋಡುತ್ತದೆ

ಆದ್ದರಿಂದ, ಇಲ್ಲಿ ಉಂಟಾಗುವ ಪ್ರಶ್ನೆ: ಶಿಕ್ಷಕರ ಪ್ರಶಿಕ್ಷಣ ಮತ್ತು ನಮ್ಮ ಶಾಲೆಗಳಲ್ಲಿ ಸುಧಾರಣೆಗಳನ್ನು ಯೋಜಿಸುವಾಗ ನಮ್ಮ ಮನಸ್ಸಿನಲ್ಲಿರುವ ಶಿಕ್ಷಕನ ಕಲ್ಪನೆ ಯಾವುದು?

 

•        ಅವನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಗೆ ಬಗ್ಗಿದ ನಿಯಮಕ್ಕೆ / ಕೈಪಿಡಿಗೆ ಬದ್ದನಾದ , ಯಾವುದೇ ಸ್ವಾತಂತ್ರ್ಯವನ್ನು ಹೊಂದಿರದ, ತನಗೆ ವಹಿಸಿದ ಕಾರ್ಯಗಳನ್ನು ಪೂರೈಸುವಲ್ಲಿ ಸಮರ್ಥನಾದ ಅತಿ ವಿಧೇಯನಾದ ವ್ಯಕ್ತಿಯೇ?·        

·         ಶಾಲೆ ಮತ್ತು ಶಿಕ್ಷಣವನ್ನು ಯೋಜಿಸುವಲ್ಲಿ ಯಾವುದೇ ಸ್ವಾತಂತ್ರ್ಯವಿಲ್ಲದವನಾಗಿದ್ದರೂ, ತನಗೆ ವಹಿಸಿದ ಕಾರ್ಯವನ್ನು ನಿರ್ವಹಿಸಲು ಸಾಕಷ್ಟು ಜ್ಞಾನ ಮತ್ತು ಕೌಶಲ್ಯ ಮೂಲವನ್ನು ಹೊಂದಿರುವ ವ್ಯಕ್ತಿಯೇ?

 ಅರ್ಥಪೂರ್ಣ ಶಿಕ್ಷಣವನ್ನು ಸ್ವತಂತ್ರವಾಗಿ ನಿರ್ವಹಿಸಲು ಶೈಕ್ಷಣಿಕ ಚಿಂತನೆ, ವಿಷಯ ಮತ್ತು ಪ್ರಾಯೋಗಿಕ ಕೌಶ ಲ್ಯಗಳ ಮಟ್ಟದಲ್ಲಿ ಈ ಕೆಲಸಕ್ಕಾಗಿ ಅವರು ಸಾಕಷ್ಟು ಶಿಕ್ಷಣ ದರ್ಶನವನ್ನು ಹೊಂದಿರುವ ವ್ಯಕ್ತಿಯೇ? ಹೌದು ಎಂದಾದರೆ, ನಮ್ಮ ವ್ಯವಸ್ಥೆಯು ಅಂತಹ ಶಿಕ್ಷಕನನ್ನು ಸಹಿಸಿಕೊಳ್ಳುವುದಕ್ಕೆ ಸಿದ್ಧವಾಗಿದೆಯೇ?      ·        

·         • ಷಾಫರ್ಸ್ಪದವನ್ನು ಬಳಸುವುದಾದರೆ, ಅವರು ಹೇಳುವಂತೆ ಅವನು ತನಗೆ ಹೇಳಿಕೊಟ್ಟಂತೆ ಕಲಿಸಬಹುದಾದ 'ಚಿಕ್ಕ ತಂತ್ರಜ್ಞ' ಅಥವಾ ಮಕ್ಕಳನ್ನು ಮಾನವೀಯ ರೀತಿಯಲ್ಲಿ ತಿಳಿದುಕೊಳ್ಳುವುದು, ಮಾಡಿಕಲಿಯುವ ಮತ್ತು ಭಾವನೆಯನ್ನು ಹೊಂದುವಂತೆ ಮಕ್ಕಳೊಂದಿಗೆ ಒಂದು ತರ್ಕಬದ್ಧ ಸಂವಾದವನ್ನು ಪ್ರಾರಂಭಿಸುವ ಸಾಮರ್ಥ್ಯ ಹೊಂದಿರುವವರು . ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ಬೇರೆಯವರು ವಿನ್ಯಾಸಗೊಳಿಸಿದ ಶೈಕ್ಷಣಿಕ ಮಹಲುಗಳಲ್ಲಿ 'ಇಟ್ಟಿಗೆ ಜೋಡಿಸುವ ಮೇಸ್ತ್ರಿಯೇ ಅಥವಾ ಈ ಮಹಲಿನ ಸಹವಾಸ್ತುಶಿಲ್ಪಿಯೇ? 

ಗುಣಮಟ್ಟವೇ  ನಮ್ಮ ನಿಜವಾದ ಕಳವಳವಾಗಿದ್ದರೆ  ಮತ್ತು ಶಿಕ್ಷಕನೇ ಗುಣಮಟ್ಟಕ್ಕೆ ಕೇಂದ್ರವ್ಯಕ್ತಿಯಾಗಿದ್ದರೆ, ಈ ಸಮೀಕರಣಗಳಿಗೆ ತೃಪ್ತಿದಾಯಕ ಉತ್ತರವನ್ನು ಪಡೆಯದೆ ನಾವು ಬಹಳ ದೂರ ಸಾಗಲು ಸಾಧ್ಯವಿಲ್ಲ. ಮೇಲಿರುವ ವಿಚಾರಗಳ ಬೆಳಕಿನಲ್ಲಿ ನಾನು ಸದಸ್ಯರು ತಮ್ಮ ಆಲೋಚನೆಗಳು ಮತ್ತು ಅಭಿಪ್ರಾಯಗಳನ್ನು ತಿಳಸಲು ವಿನಂತಿಸುತ್ತಿದ್ದೇನೆ. ಶಿಕ್ಷಕರ ಪಾತ್ರವನ್ನು ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳುವಲ್ಲಿ ನಿಮ್ಮ ಅಭಿಪ್ರಾಯಗಳು ಸಹಾಯಕವಾಗುತ್ತವೆ ಮತ್ತು ತಕ್ಕಂತೆ ಶಿಕ್ಷಕ ಶಿಕ್ಷಣಕ್ಕಾಗಿ ಕಾರ್ಯಕ್ರಮಗಳಿಗೆ ಹೂಡುವಳಿ ಆಗಿ ಕಾರ್ಯನಿರ್ವಹಿಸುತ್ತವೆ.

ರೋಹಿತ್ ಧನಕರ್, ದಿಗಂತರ್, ಜೈಪುರ, ರಾಜಸ್ಥಾನ

 

19654 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು