ವಿಜ್ಞಾನ ನಡೆದುಬಂದ ದಾರಿ-ಭೌತಶಾಸ್ತ್ರದ ಕಥೆ-ಭಾಗ.1

ಇದು ಮಾಹಿತಿ ಸಮೃದ್ಧ ಯುಗ.ವಿಜ್ಞಾನ ಕ್ಷೇತ್ರವಂತೂ ಬಲು ವಿಶಾಲವಾಗಿ ಬೆಳೆದಿದೆ. ಆದರೆ ಅದೇನೂ ಒಂದೇ ದಿನದಲ್ಲಿ ಆದದ್ದಲ್ಲ. ಅನೇಕ ವಿಜ್ಞಾನಿಗಳ ಕೂಡು ಚಿಂತನೆ, ಆನ್ವೇಷಣೆ ಮತ್ತು ಪ್ರಯೋಗಗಳಿಂದ ಸತ್ಯಗಳು ಹೊರಹೊಮ್ಮಿವೆ.

ಭೌತಶಾಸ್ತ್ರ ಎಂದರೇನು?

ಹೆಚ್ಚಿನ ಜನರು  'ಭೌತಶಾಸ್ತ್ರ' ಎಂಬ  ಪದಕೇಳಿದಾಕ್ಷಣ ಬಲು ಕಷ್ಟದ ವಿಜ್ಞಾನ ಎಂದು  ಭಯಪಡುತ್ತಾರೆ. ಆದರೆ ಇದು ಕೇವಲ ರಾಕೆಟ್ ವಿಜ್ಞಾನಿಗಳಿಗೆ ಮಾತ್ರ ಸೀಮಿತವಾದದ್ದಲ್ಲ.  ಭೌತಶಾಸ್ತ್ರ ನಮ್ಮನ್ನು ಸದಾ ಸುತ್ತುವರೆದಿದೆ, ಮತ್ತು ನಿಮಗೆ ಗೊತ್ತಿದೆಯೋ ಇಲ್ಲವೋ, ನೀವು ಪ್ರತಿ ದಿನ ಭೌತಶಾಸ್ತ್ರವನ್ನು  ಬಳಸುತ್ತೀರಿ. ಭೌತಶಾಸ್ತ್ರ, ದ್ರವ್ಯ ಮತ್ತು ಶಕ್ತಿಗಳ ಅಧ್ಯಯನ,  ಪುರಾತನ ವಿಜ್ಞಾನ ಮತ್ತು ವಿಶಾಲ ವ್ಯಾಪ್ತಿಯನ್ನು ಹೊಂದಿರುವಂತಹುದು.

 'ಭೌತಶಾಸ್ತ್ರ' ಆಥವಾ Physics ಎಂಬ ಪದಕ್ಕೆ, ಗ್ರೀಕ್ ಭಾಷೆಯಲ್ಲಿ " ಪ್ರಕೃತಿ ಜ್ಞಾನ" ಎಂದು ಅರ್ಥ ಮತ್ತು ಸಾಮಾನ್ಯವಾಗಿ ಬ್ರಹ್ಮಾಂಡದ ನೈಸರ್ಗಿಕ ವಿದ್ಯಮಾನಗಳನ್ನು   ವಿಶ್ಲೇಷಿಸುವ ಮತ್ತು ತಿಳಿಯುವ ಗುರಿಯನ್ನು  ಈ ಕ್ಷೇತ್ರಹೊಂದಿರುತ್ತದೆ. ಅದರ ಬಗ್ಗೆ ಒಂದು ಚಿತ್ರಮಾಲಿಕೆಯನ್ನು ಪ್ರಾರಂಭಿಸುತ್ತಿದ್ದೇವೆ.

ಪರಿಕಲ್ಪನೆ:ಪ್ರೋ|| ಟಿ.ಪದ್ಮನಾಭನ್ IUCAA ಚಿತ್ರ:ಕೀತ್ ಫ್ರಾನ್ಸಿಸ್-ಅವಿನಾಶ್ ದೇಶಪಾಂಡೆ

ಈ ಚಿತ್ರ ಮಾಲಿಕೆ ಮುಂದುವರಿಯಲಿದೆ ಮುಂದಿನ ಭಾಗಗಳನ್ನು ನಿರೀಕ್ಷಿಸಿ....

 

18443 ನೊಂದಾಯಿತ ಬಳಕೆದಾರರು
7203 ಸಂಪನ್ಮೂಲಗಳು