ವಿಜ್ಞಾನದ ಹಿರಿಅಜ್ಜ ಪ್ರೊಫೆಸರ್ ಯಶಪಾಲ್

ಪ್ರಸಿದ್ಧ ಭಾರತೀಯ ವೈಜ್ಞಾನಿಕ ಪ್ರೊಫೆಸರ್ ಯಶಪಾಲ್  ಅವರು ಇನ್ನಿಲ್ಲ. 90 ವರ್ಷದ ಸಾರ್ಥಕ ಜೀವನದ ನಂತರ 24-07-2017 ವರು ದೇಹಾಂತ ಹೊಂದಿದ್ದಾರೆ. ಕಾಸ್ಮಿಕ್ ಕಿರಣಗಳ ಅಧ್ಯಯನಕ್ಕೆ ಪ್ರೊಫೆಸರ್ ಯಶಪಾಲ್  ನೀಡಿದ ಕೊಡುಗೆ ಅದ್ಭುತ ವಾದದ್ದು ಆದರೂ ದೂರದರ್ಶನದ ಅತ್ಯಂತ ಜನಪ್ರಿಯ ಕಾರ್ಯಕ್ರಮವಾದ "ಟರ್ನಿಂಗ್ ಪಾಯಿಂಟ್" ನಲ್ಲಿ ತಾತಯ್ಯನಂತೆ  ಕ್ಲಿಷ್ಟ ವೈಜ್ಞಾನಿಕ ವಿಷಯಗಳನ್ನು ಸರಳವಾಗಿ ವಿವರಿಸಿ ಜನ ಸಾಮಾನ್ಯರಿಗೆ ಅಚ್ಚುಮೆಚ್ಚಿನವರಾಗಿದ್ದರು,ಪ್ರೊಫೆಸರ್  ಯಶಪಾಲ್  ಅವರು ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಶಪಾಲ್  ಅವರಿಗೆ 1976 ರಲ್ಲಿ ಪದ್ಮಭೂಷಣವನ್ನು ಪ್ರದಾನಮಾಡಿ ಗೌರವಿಸಲಾಯಿತುಮತ್ತು 2013 ರಲ್ಲಿ ಪದ್ಮ ವಿಭೂಷಣವನ್ನು ಪಡೆದರು. 1983-84ರಲ್ಲಿ ಅವರು ಯೋಜನಾ ಆಯೋಗದ ಮುಖ್ಯ ಸಲಹೆಗಾರರಾಗಿದ್ದರು. 1986 ರಿಂದ 1991 ರವರೆಗೆ, ಯುಜಿಸಿ ಅಧ್ಯಕ್ಷರಾಗಿದ್ದರು. ಅವರು ಉನ್ನತ ಶಿಕ್ಷಣಕ್ಕಾಗಿ ಸಮಿತಿಯನ್ನು ನೇಮಿಸಿದರು. 2007 ರಿಂದ 2012 ರವರೆಗೆ, JNU ಚಾನ್ಸೆಲರ್ ಆಗಿದ್ದರು. ದೂರದರ್ಶನದ ವೈಜ್ಞಾನಿಕ-ಸಂಬಂಧಿತ ಕಾರ್ಯಕ್ರಮದ 'ಟರ್ನಿಂಗ್ ಪಾಯಿಂಟ್' ಕಾರ್ಯಕ್ರಮದ ನಿರೂಪಕರಾಗಿದ್ದರು. ದೇಶದ ದೊಡ್ಡ ವಿಜ್ಞಾನಿಗಳ ಪೈಕಿ ಹೆಸರಾಂತ ಪ್ರೊಫೆಸರ್ ಯಶಪಾಲ್ 26 ನವೆಂಬರ್ 1926 ರಂದು ಹರಿಯಾಣದಲ್ಲಿ ಜನಿಸಿದರು.

17ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನದ (ಎನ್‌ಸಿಎಸ್‌ಸಿ) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ಯಶಪಾಲ್ ಅವರು ಶಿಕ್ಷಕರಿಗೆ  "ಪುಸ್ತಕದಲ್ಲಿದ್ದದ್ದನ್ನು ಇದ್ದ ಹಾಗೆ ಪಾಠ ಮಾಡಿ ಕೊರಿಯರ್ ಏಜೆಂಟ್‌ಗಳಂತೆ ವರ್ತಿಸಬೇಡಿ. ಮಕ್ಕಳಲ್ಲಿ ಕುತೂಹಲ ಹುಟ್ಟಿಸಿ, ಅವರ ಸಂಶಯಗಳನ್ನು ನಿವಾರಿಸುವ ಕೆಲಸಗಳನ್ನು ಮಾಡುವುದೂ ಶಿಕ್ಷಕರ ಜವಾಬ್ದಾರಿ "ಎಂದು ಖ್ಯಾತ ವಿಜ್ಞಾನಿ ಪ್ರೊಫೆಸರ್ ಯಶಪಾಲ್ ಸಲಹೆ ನೀಡಿದ್ದಾರೆ.

ಸಾಮಾನ್ಯವಾಗಿ  ಬೆಳೆಯುತ್ತಿರುವ ಮಕ್ಕಳು ಕುತೂಹಲವನ್ನೂ ಕಳೆದುಕೊಳ್ಳುತ್ತಾರೆ. ಇದಕ್ಕೆ ನಾವು ಅಂದರೆ ಪ್ರಬುದ್ಧರು ಕಾರಣ. ಕೆಲವೊಂದು ವೈಚಿತ್ರ್ಯಗಳು ಮತ್ತು ಬೆಳವಣಿಗೆಗಳ ಬಗ್ಗೆ ಮಕ್ಕಳು ಅಚ್ಚರಿಗೊಂಡು, ಅದರ ಬಗ್ಗೆ ಪ್ರಶ್ನಿಸಲಾರಂಭಿಸಿದಾಗ, ನಾವು ದೊಡ್ಡವರು ಅದನ್ನು ನಿರ್ಲಕ್ಷಿಸುತ್ತೇವೆ. ಇದರ ಪರಿಣಾಮ, ಪ್ರಶ್ನೆಗಳನ್ನೆತ್ತುವುದರಿಂದ ಏನೂ ಉಪಯೋಗವಾಗದು ಎಂದು ಮಕ್ಕಳು ನಂಬಲಾರಂಭಿಸುತ್ತಾರೆ ಎಂದು ಹೇಳಿದರು.

ಅದರ ಬದಲು ನಾವು ಅದರಲ್ಲೂ ವಿಶೇಷವಾಗಿ ಶಿಕ್ಷಕರು, ಅಪ್ರಬುದ್ಧ ಮನಸ್ಸುಗಳಲ್ಲಿ ಕೌತುಕವನ್ನು ಸೃಷ್ಟಿಸುವ ಮೂಲಕ ಅವರ ಕುತೂಹಲವನ್ನು ತಣಿಸಲು ಸಹಾಯ ಮಾಡಬೇಕು. ಶಿಕ್ಷಕರೇ ಎಲ್ಲವನ್ನೂ ತಿಳಿದುಕೊಂಡವರಲ್ಲ. ಅವರೂ ಮಕ್ಕಳಿಂದ ಕಲಿಯಬೇಕು. ನೂತನ ವಿಚಾರಗಳತ್ತ ಅವರಲ್ಲಿರುವ ಕೌತುಕವನ್ನು ತಿಳಿದುಕೊಳ್ಳುವುದನ್ನು ನಾವು ಕಲಿಯಬೇಕಾಗಿದೆ. ಮಕ್ಕಳನ್ನು ಯಾವುದೇ ಕಾರಣಕ್ಕೂ ಕೈದಿಗಳಂತೆ ನೋಡಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಮಕ್ಕಳು ಶಿಕ್ಷಕರ ಶಿಕ್ಷಕರು-- ಯಾಕೆಂದರೆ ಅವರು ಪ್ರಶ್ನೆಗಳನ್ನು ಕೇಳುತ್ತಾರೆ ಎಂದ ಯಶಪಾಲ್, ಶಿಕ್ಷಕರು ತಾವು ಕೊರಿಯರ್ ಏಜೆಂಟ್‌ಗಳಂತೆ ನಡೆದುಕೊಳ್ಳಬಾರದು. ಕೇವಲ ಪುಸ್ತಕದಲ್ಲಿ ಏನಿದೆಯೋ ಅದನ್ನಷ್ಟೇ ಮಕ್ಕಳಿಗೆ ಹೇಳಿಕೊಡುವುದೇ ಶಿಕ್ಷಣ ಅಥವಾ ಪಾಠವಲ್ಲ ಎಂದು ಅಧ್ಯಾಪಕರಿಗೆ ಕಿವಿ ಮಾತು ಹೇಳಿದರು.ಪ್ರೊಫೆಸರ್ ಯಶಪಾಲ್ 

1970 ರಲ್ಲಿ ಹಾಶಂಗಾಬಾದ್ ಸೈನ್ಸ್ ಟೀಚಿಂಗ್ ಪ್ರೋಗ್ರಾಂನೊಂದಿಗಿನ ಅವರ ಸಹಯೋಗವು ಅವರ ಜೀವನ ವನ್ನು  ಶಾಲಾ ಶಿಕ್ಷಣಕ್ಕೆ ಮುಡಿಪಾಗಿಡಲು ಕಾರಣವಾಯಿತು.

19218 ನೊಂದಾಯಿತ ಬಳಕೆದಾರರು
7452 ಸಂಪನ್ಮೂಲಗಳು