ರೋಗಪ್ರತಿರೋಧಕ ಪ್ರತಿಕ್ರಿಯೆ

ನಮ್ಮ ದೇಹದಲ್ಲಿರುವ ರೋಗಪ್ರತಿರೋಧಕ ವ್ಯವಸ್ಥೆಯು ನಮ್ಮ ದೇಹದೊಂದಿಗೆ ಸಹವರ್ತಿಸುತ್ತಿರುವ ಸಹಸ್ರಾರು ಸೂಕ್ಷ್ಮಾಣುಜೀವಿಗಳ ಧಾಳಿಯಿಂದ ನಮ್ಮನ್ನು ಪ್ರತಿಕ್ಷಣ ರಕ್ಷಿಸುತ್ತಿರುತ್ತದೆ
ಈಗ ನೋಡಿ ನಮ್ಮ ರಕ್ಷಣಾಸೇನೆ ಕಾರ್ಯಪೃವೃತ್ತವಾಗಿದೆ. ಮಹಿಳೆಯರೇ, ಮಹನೀಯರೇ, ನಮ್ಮ ದೇಹದ ಧೀರ ರಕ್ಷಕರಿಗೆ ಎಲ್ಲರೂ ಚಪ್ಪಾಳೆತಟ್ಟಿ ಅಭಿನಂದಿಸಿರಿ. ಈಗ ನಾನು ನಿಮಗೆ ಪರಿಚಯಿಸಲಿದ್ದೇನೆ, ಧೀರೋಧಾತ್ತ ’ಡೆಂಡ್ರಿಟಿಕ್ ಜೀವಕೋಶ’, ಮಹಾನುಭಾವ ’ಮ್ಯಾಕ್ರೋಫ಼ೇಜ್’, ಕಠಿಣ ಪರಿಶ್ರಮಿ, ’ಬಿ’ ಜೀವಕೋಶ’ ಮತ್ತು ಕೊನೆಯದಾಗಿ, ಸದಾ ನಂಬಿಕಸ್ಥ ’ಟಿ’ ಜೀವಕೋಶಗಳನ್ನು. ನಾವು ಕತೆಯ ಕ್ಲೈಮ್ಯಾಕ್ಸ್ ಗೆ ಬಂದು ಸಜ್ಜನರು ಮತ್ತು ದುರ್ಜನರ ನಡುವಿನ ಕಾಳಗ ನೋಡುವ ಮೊದಲು, ನಾನು ನಿಮಗೆ ರೋಗಪ್ರತಿರೋಧಕ ವ್ಯವಸ್ಥೆಯ ಜೀವಕೋಶಗಳ ಬಗ್ಗೆ ಎರಡು ಮಾತು ಹೇಳಲು ಇಚ್ಛಿಸುತ್ತೇನೆ.
. ರೋಗಪ್ರತಿರೋಧಕ ವ್ಯವಸ್ಥೆಯ ಜೀವಕೋಶಗಳ ಜೀವನಗಾಥೆ ಶುರುವಾಗುವುದು ನಮ್ಮ ಮೂಳೆಗಳ ಒಳಗಿರುವ ಅಸ್ಥಿಮಜ್ಜೆಯೆಂಬ ಮೃದುವಾದ ಕೆಂಪನೆಯ ಅಂಗದಿಂದ. ಈ ಜಾಗದಲ್ಲಿಯೇ ಅತ್ಯಂತ ಪ್ರತಿಭಾನ್ವಿತ ಜೀವಕೋಶಗಳಾದ ಹೆಮಟೋಪೊಯೆಟಿಕ್ ಕಾಂಡಕೋಶಗಳು ಹುಟ್ಟುವುದು. ಎಲ್ಲಾ ವಿಧದ ರಕ್ತದ ಕಣಗಳನ್ನು ಸೃಷ್ಟಿಸುವ ಸಾಮರ್ಥ್ಯ ಈ ಜೀವಕಣಗಳಿಗೆ ಇದೆ. ಹಾಗಾಗಿ, ಕೆಂಪುರಕ್ತಕಣ ((erythrocytes) ) - ಇವು ದೇಹದ ಜೀವಕೋಶಗಳಿಗೆ ಆಮ್ಲಜನಕವನ್ನು ರವಾನಿಸುತ್ತವೆ ಮತ್ತು ರಕ್ತಕ್ಕೆ ಅದರ ಕೆಂಪುಬಣ್ಣ ಕೊಡುತ್ತವೆ)), ದುಗ್ಧಕಣಗಳು (lymphocytes (T and B cells)), ಬಾಸೋಫಿಲ್‌ಗಳು (basocytes), ನ್ಯೂಟ್ರೋಫ಼ಿಲ್ (ಇಯೊಸಿನೊಫ಼ಿಲ್ (eosinophilss) ( ಬೃಹತ್ಕಣ ಮತ್ತು ಡೆಂಡರೈಟ್ ಕೋಶಗಳು ಇವುಗಳಿಂದ ಉತ್ಪತ್ತಿ ಯಾಗುತ್ತವೆ)  ಇವು ಅಸ್ಥಿ ಮಜ್ಜೆಯಿಂದ ರೂಪುಗೊಳ್ಳುತ್ತವೆ
ಇಲ್ಲಿಂದ ಅವುಗಳು ರಕ್ತದ ಮೂಲಕ ದೇಹದ ಎಲ್ಲಾ ಭಾಗಗಳಿಗೆ ಸಂಚರಿಸುತ್ತವೆ. ಹೆಚ್ಚಿನ ಮೊನೊಸೈಟ್‌ಗಳು, ಬಾಸೋಫಿಲ್‌ಗಳು, ಇಯಾಸಿನೊಫಿಲ್‌ಗಳು, ಖಿ ಮತ್ತು ಃ ಕಣಗಳು ರಕ್ತದಲ್ಲಿ ಸದಾ ಸಂಚರಿಸುತ್ತಾ ದಾಳಿಕೋರರು ಯಾರಾದರೂ ಬಂದಿರುವರೇ ಎಂದು ಸದಾ ಕಣ್ಣಿಟ್ಟಿರುತ್ತವೆ. ಕೆಲವು ಮೊನೊಸೈಟ್‌ಗಳು ಚರ್ಮ ಮತ್ತು ಮೂಗಿನ ಕುಹರದ ಲೋಳೆಪೊರೆ, ಅನ್ನನಾಳ (oesophಚಿgus) ಮತ್ತು ಕರುಳಿಗೆ ವಲಸೆ ಹೋಗುತ್ತವೆ ಮತ್ತು ಇಲ್ಲಿ ಅವುಗಳು ಇನ್ನೂ ಪ್ರಬುದ್ಧವಾದ ಡೆಂಡ್ರೈಟಿಕ್ ಜೀವಕೋಶಗಳಾಗಿ ಬದಲಾಗುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಪಿತ್ತಜನಕಾಂಗ ಮತ್ತು ಶ್ವಾಸಕೊಶಗಳಿಗೆ ವಲಸೆ ಹೋಗುವ ಏಕಕೋಶಗಳು ಪ್ರಬುದ್ಧ ಬೃಹತ್ ಬಿಳಿರಕ್ತಕಣಗಳಾಗಿ ಬದಲಾಗುತ್ತವೆ.
ನಮ್ಮ ಕತೆಗೆ ಹಿಂದಿರುಗಿ ಬರೋಣ: ಶೀತವೈರಸ್ ಮೊದಲ ಬಾರಿಗೆ ನಮ್ಮ ಮೂಗನ್ನು ಪ್ರವೇಶಿಸಿ ನಮ್ಮ ಮೂಗಿನ ಲೋಳ್ಪೊರೆಯ ಜೀವಕೋಶಗಳ ಮೇಲೆ ದಾಳಿನಡೆಸಿದಾಗ, ದಾಳಿಗೊಳಗಾದ ಜೀವಕೋಶಗಳು ಸೈಟೋಕಿನ್ (cytokin) ಎಂಬ ರಸಾಯನಿಕದ ಮೂಲಕ ರಕ್ಷಣೆಗಾಗಿ ಕರೆಕಳುಹಿಸುತ್ತವೆ. ಬಿಸಿ ಬಿಸಿ ಸಮೋಸಾದ ವಾಸನೆ ನಿಮ್ಮ ಮೂಗು ಗ್ರಹಿಸಿದಾಗ ಆ ವಾಸನೆಯು  ಕಡುವಾಗಿ  ಬರುವ ಕಡೆಗೆ ನಿಮ್ಮ ಮೂಗು ನಿಮ್ಮನ್ನು ಕರೆದೊಯ್ಯುವಂತೆ ಸೈಟೋಕಿನ್‌ಗಳು ರೋಗಪ್ರತಿರೋಧಕ ಕಣಗಳನ್ನು ದಾಳಿಗೊಳಪಟ್ಟ ಪ್ರದೇಶದೆಡೆಗೆ ಹೋಗುವಂತೆ ಮಾಡುತ್ತವೆ. ರಕ್ಷಣೆಗೆ ಮೊದಲು ಧಾವಿಸುವವರು ರಕ್ತದಲ್ಲಿರುವ ಬಾಸೋಫಿಲ್‌ಗಳು. ಅಲ್ಲಿಗೆ ತಲುಪಿದ ಕೂಡಲೆ ಬಾಸೋಫಿಲ್‌ಗಳು ಧಾಳಿಯ ತೀವ್ರತೆಯನ್ನು ಅರಿತು ಹೆಚ್ಚಿನ ರಕ್ಷಣಾ ಸೇನೆಯನ್ನು ಕರೆಯುವುದಕ್ಕಾಗಿ ಇನ್ನೊಂದು ಪ್ರಬಲ ರಸಾಯನಿಕವನ್ನು ಬಿಡುಗಡೆಮಾಡುತ್ತವೆ. ಸಮುದ್ರದಲ್ಲಿ ಒಂದು ಹಡಗು ಮುಳುಗಿದಾಗ ಆಗುವಂತಹ ಪ್ರಕ್ರಿಯೆಯಂತೆಯೆ ಇದು. ಹಡಗು ಮುಳುಗುತ್ತಿದೆ ಎಂದಾಗ ನಾವಿಕರು , ಮೇ ಡೇ,  ಮೇ ಡೇ, ಮೇ ಡೇ ಎಂದು ರೇಡಿಯೊ ಸಂದೇಶ ಕಳುಹಿಸುತ್ತಾರೆ. ಈ ಸಂದೇಶವನ್ನು ಗ್ರಹಿಸುವ ಹತ್ತಿರದ ದೋಣಿಗಳು ಅಪಘಾತದ ಸ್ಥಳಕ್ಕೆ ಧಾವಿಸುತ್ತವೆ ಮತ್ತು ತಮ್ಮಿಂದ ಆದಷ್ಟು ಜನರನ್ನು ರಕ್ಷಿಸುತ್ತವೆ; ಅದರ ಜೊತೆಗೆ, ರಕ್ಷಣಾ ವಿಮಾನ ಮತ್ತು ಹಡಗುಗಳು ಸಮುದ್ರದಲ್ಲಿ ಬದುಕುಳಿದ ಇತರನ್ನುಹುಡುಕಲು ಸಾಧ್ಯವಾಗುವಂತೆ ಆಕಾಶಕ್ಕೆ ಪ್ರಕಾಶಮಾನವಾದ ಬೆಳಕಿನ ಗುಂಡುಗಳನ್ನು ಸಿಡಿಸುತ್ತಾರೆ.
ಲೋಳೆಪೊರೆಯಲ್ಲಿರುವ ಡೆಂಡ್ರೈಟಿಕ್ ಕೋಶಗಳು ಮತ್ತು ಬೃಹತ್ ಕಣಗಳು ಈ ರಸಾಯನಿಕ ಸಂದೇಶವನ್ನು ಗ್ರಹಿಸಿ, ಕೂಡಲೆ ಕಾರ್ಯಪೃವೃತ್ತರಾಗಿ ದಾಳಿಕೋರರನ್ನು ಬಗ್ಗುಬಡಿಯಲಾರಂಭಿಸುತ್ತವೆ. ಅವುಗಳು ಆತಿಥೇಯ ಕೋಶದ ಹೊರಗೆ ಕಂಡುಬರುವ ಯಾವುದೇ ವೈರಸನ್ನು ಸ್ವಾಹಾ ಮಾಡುವುದಷ್ಟೇ ಅಲ್ಲದೆ ಸೋಂಕುಪೀಡಿತವಾದ ಲೋಳೆಪೊರೆಯ ಜೀವಕೋಶಗಳನ್ನು ಕೂಡ ತಿಂದುಬಿಡುತ್ತವೆ. ದಾಳಿಕೋರರನ್ನು ಸ್ವಾಹಾಮಾಡುವ ಈ ಪ್ರಕ್ರಿಯೆಯನ್ನು ವೈಜ್ಞಾನಿಕ ಭಾಷೆಯಲ್ಲಿ ಫ಼್ಯಾಗೊಸೈಟೋಸಿಸ್ (Phagocytosis) ಅಂದರೆ ’ಕೋಶ ಭಕ್ಷಣೆ’ ಎಂದು ಕರೆಯುತ್ತಾರೆ. ಒಂದು ಸಾರಿ ಈ ವೈರಸ್ ಅಥವ ರೋಗಪೀಡಿತ ಕೋಶವನ್ನು ನುಂಗಿ ಆದಮೇಲೆ, ಅದನ್ನು ಲೈಸೊಸೋಮ್ (lysosome - ನ್ಯೂಕ್ಲಿಯಸ್ ಉಳ್ಳ ಜೀವಕೋಶಗಳ ಕೋಶಧಾತುವಿನಲ್ಲಿ ಕಂಡುಬರುವ ಜಲವಿಭಾಜಕ ಎನ್‌ಸೈಮುಗಳನೊಳ್ಳಗೊಂಡ ಸಂಚಿಯಂತಹ ಅಂಗ) ಎಂಬ ಹಲವು ಎನ್‌ಸೈಮ್ ಮತ್ತು ಆಮ್ಲಗಳು ಇರುವ ವಿಶೇಷ ಸಂಚಿಗಳಲ್ಲಿ ಸಣ್ಣಸಣ್ಣ ತುಂಡುಗಳಾಗಿ ಮಾಡಿ ಜಗಿಯಲಾಗುತ್ತದೆ. ಇದು ನಮ್ಮ ಹೊಟ್ಟೆಯಲ್ಲಿ ಆಹಾರ ಪಚನವಾಗುವ ಕ್ರಿಯೆಗೆ ಸಮನಾಗಿರುವಂತಹುದು. ಇಲ್ಲಿ ಸ್ವಾರಸ್ಯಕರ ವಿಷಯವೆಂದರೆ, ಜಗಿದು ಚೂರುಚೂರಾದ ವೈರಸ್ ತುಂಡುಗಳನ್ನು ಬೃಹತ್ಕಣ ಮತ್ತು ಡೆಂಡ್ರೈಟಿಕ್ ಕೋಶಗಳು ತಮ್ಮ ಪದರದ ಮೇಲ್ಮೈ ಮೇಲೆ ವಿಜಯಪತಾಕೆಗಳ ತರಹ ಪ್ರದರ್ಶಿಸುತ್ತವೆ; ’ನೋಡಿ ನಾವು ಇವುಗಳನ್ನು ನಾಶಮಾಡಿದ್ದೇವೆ. ಇಲ್ಲಿದೆ ನೋಡಿ ಅದಕ್ಕೆ ಪುರಾವೆ’ ಅನ್ನುವ ರೀತಿಯಲ್ಲಿ.
ಈ ವಿಜಯಪತಾಕೆಗಳನ್ನು ಹೊತ್ತುಕೊಂಡ ಮ್ಯಾಕ್ರೋಫ಼ೇಜ್‌ಗಳು ದಾರಿಯಲ್ಲಿ ಲಿಂಪೋಸೈಟ್‌ಗಳನ್ನು  ಸಂಪರ್ಕಿಸುತ್ತಾ, ಪಿತ್ತಜನಕಾಂಗ ತರಹದ ಅಂಗಗಳನ್ನು ತಲುಪುವ ತನಕ ದೇಹದ ತುಂಬ ಓಡಾಡುತ್ತವೆ. ಲಿಂಪೋಸೈಟ್‌ಗಳು ಬೃಹತ್ಕಣ/ಡೆಂಡ್ರೈಟಿಕ್ ಕೋಶಗಳ ಮೇಲ್ಮೈಯಲ್ಲಿ ಈ ವಿಜಯಪತಾಕೆಗಳನ್ನು (ವೈರಸ್ ಕಣಗಳನ್ನು) ಗಮನಿಸುತ್ತವೆ. B ಮತ್ತುT ಕೋಶಗಳಲ್ಲಿ ಇರುವ ಅಣುಗಳು (ಗ್ರಾಹಕಗಳು) ಇವುಗಳನ್ನು ಗುರುತಿಸಿ, ಇವುಗಳ ಸುತ್ತ ಸುತ್ತಿಕೊಳ್ಳಬಲ್ಲವು. ಆದರೆ ಈ ಸುತ್ತುಕೊಳ್ಳುವಿಕೆ ಸಾಧ್ಯವಾಗುವುದು ಅವುಗಳು ಮ್ಯಾಕ್ರೋಫ಼ೇಜ್ ಕೋಶಗಳ ಮೇಲ್ಮೈಗೆ ಅಂಟಿಕೊಂಡಾಗ ಮಾತ್ರ. ಇದಕ್ಕೆ ಉದಾಹರಣೆಯಾಗಿ ಹೇಳುವುದಾದರೆ, ಸಂತೋಷಕೂಟವೊಂದರಲ್ಲಿ ನಿಮಗೆ ಅಪರಿಚಿತ ವ್ಯಕ್ತಿಯೊಬ್ಬರು ಎದುರಾಗುತ್ತಾರೆ. ಆದರೆ ನಿಮ್ಮಿಬ್ಬರಿಗೂ ಸ್ನೇಹಿತನಾಗಿರುವ ಮೂರನೆ ವ್ಯಕ್ತಿಯೊಬ್ಬ ನಿಮ್ಮಿಬ್ಬರನ್ನು ಔಪಚಾರಿಕವಾಗಿ ಪರಿಚಯಿಸದ ಹೊರತು ನೀವು ಅವರ ಜೊತೆ ಮಾತಿಗಿಳಿಯುವುದಿಲ್ಲ.  
ಒಂದು ಸಾರಿ ವೈರಸ್ ಪರಿಚಯ ಸರಿಯಾಗಿ ಆಯಿತೆಂದರೆ, ಖಿ ಕೋಶಗಳು ’ಸಕ್ರಿಯ’ಗೊಂಡು ವೈರಸ್ಸಿನೊಂದಿಗೆ ತಾವೇ ವ್ಯವಹರಿಸಲು ಶುರುಮಾಡುತ್ತವೆ. ಮೊದಲಿಗೆ ಅವು ಸಾವಿರಾರು ’ಸಕ್ರಿಯ’ ಖಿ ಕೋಶಗಳನ್ನು ಉತ್ಪಾದಿಸುವ ನಿಟ್ಟಿನಲ್ಲಿ ಅತ್ಯಂತ ವೇಗವಾಗಿ ತಮ್ಮ ಸಂಖ್ಯಾವೃದ್ಧಿ ಮಾಡಲು ಶುರುಮಾಡುತ್ತವೆ. ಇದನ್ನು ಅರ್ಥಮಾಡಿಕೊಳ್ಳಲು ಈ ಉದಾಹರಣೆಯನ್ನು ಗಮನಿಸಿ: ಒಂದು ಕಾವಲು ನಾಯಿಗೆ ಸ್ಫೋಟಕಗಳು ಇರುವ ಒಂದು ಚೀಲದ ವಾಸನೆ ನೋಡಲು ಬಿಟ್ಟಿರೆಂದುಕೊಳ್ಳಿ. ಆ ನಾಯಿಯು ಈ ವಾಸನೆಯನ್ನು ನೆನಪಿಟ್ಟುಕೊಳ್ಳುತ್ತದೆ ಮತ್ತು ಇದೇ ವಾಸನೆ ಇನ್ನೆಲ್ಲಿಯಾದರೂ ಅಥವಾ ಇನ್ನ್ಯಾರಲ್ಲಾದರೂ ಕಂಡುಬಂದರೆ ಅದನ್ನು ಗುರುತಿಸುತ್ತದೆ. ಇಂತಹ ಒಂದು ಕಾವಲು ನಾಯಿಗೆ ತನ್ನದೇ ಹಲವು ಪ್ರತಿರೂಪಗಳನ್ನು ಸೃಷ್ಟಿಸುವ ಶಕ್ತಿಯಿದೆ ಎಂದುಕೊಳ್ಳಿ, ಆಗ ಆ ನಾಯಿಯ ಪ್ರತಿಯೊಂದು ಪ್ರತಿರೂಪವು ಈ ಸ್ಫೋಟಕದ ವಾಸನೆಯನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಹೊಸದಾಗಿ ಉತ್ಪತ್ತಿಯಾದ ಸಕ್ರಿಯ ಖಿ ಕೋಶಗಳ ಹಾಗೆ. ಹೀಗೆ ಸಕ್ರಿಯಗೊಂಡ ಖಿ ಕೋಶಗಳು ಶೀತವೈರಸ್‌ಗಳನ್ನು ಸೋಲಿಸುವ ಪ್ರಮುಖ ಸೇನೆಯಾಗಿ ಕೆಲಸಮಾಡುತ್ತವೆ. ಅವುಗಳು ತುರ್ತಾಗಿ ಮೂಗಿನ ಕುಹರದಲ್ಲಿರುವ ರಣಾಂಗಣಕ್ಕೆ ಧಾವಿಸಿ, ಎಲ್ಲಾ ರೋಗಪೀಡಿತ ಮಾನವ ಜೀವಕೋಶಗಳನ್ನು ಮತ್ತು ಅದರ ಜೊತೆಗೆ ಇದೇ ರೀತಿ ಕಾಣುವ ಸಾಮಾನ್ಯ ಜೀವಕೋಶಗಳನ್ನು ಕೂಡ ಕಿತ್ತೊಗೆಯುತ್ತವೆ. ಅವುಗಳು ವೈರಸ್ ಪೀಡಿತ ಜೀವಕೋಶಗಳನ್ನು ಅವುಗಳು ಆರೋಗ್ಯವಂತ ಜೀವಕೋಶಗಳೊಳಗೆ ತಮ್ಮ ಸಂಖ್ಯಾಭಿವೃದ್ಧಿ ಮಾಡಿಕೊಳ್ಳಲು ಅವಕಾಶ ಪಡೆಯುವ ಮೊದಲೇ ಟಾಕ್ಸಿನ್ ಎಂಬ ಪ್ರಬಲ ರಸಾಯನಿಕಗಳನ್ನು ಬಳಸಿ ನಾಶಮಾಡಿಬಿಡುತ್ತವೆ. ಇದು ವೈರಸ್ ತನ್ನ ಸಂಖ್ಯಾಭಿವೃದ್ಧಿ ಮಾಡಿಕೊಂಡು ಎಲ್ಲೆಡೆ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ ಮತ್ತು ಅದನ್ನು ದೇಹದಿಂದ ಹೊರಹಾಕುತ್ತದೆ ಕೂಡ. ಈ ಖಿ ಕೋಶಗಳು ರೋಗಪೀಡಿತ ಜೀವಕೋಶಗಳನ್ನು ಕೊಲ್ಲುವುದರಿಂದ, ಅವುಗಳನ್ನು ’ಸೈಟೊಟಾಕ್ಸಿಕ್ ಖಿ ಕೋಶಗಳು’ (ಛಿಥಿಣoಣoxiಛಿ ಖಿ ಛಿeಟಟs) ಎಂದು ಕರೆಯುತ್ತಾರೆ. ಸೈಟೊ = ಕೋಶ; ಟಾಕ್ಸಿಕ್ = ವಿಷಕಾರಕ. ಕೆಲವು ಸಕ್ರಿಯ T ಕೋಶಗಳು ಮತ್ತು ಸಕ್ರಿಯB ಕೋಶಗಳು ಪ್ರತಿಕಾಯ Antibodies)ಗಳೆಂಬ ಜೀವಾಣುಗಳನ್ನು ಉತ್ಪಾದಿಸಲು ಸಹಾಯಮಾಡುತ್ತವೆ; ಇವುಗಳು ಯಾವುದೇ ತೆರೆದ ವೈರಸ್‌ಗಳ ಸುತ್ತ ಸುತ್ತಿಕೊಂಡು ಅವುಗಳನ್ನು ನಿಷ್ಕ್ರಿಯಗೊಳಿಸುತ್ತವೆ. ಪ್ರತಿಕಾಯಗಳು ನಮ್ಮ ದೇಹದಲ್ಲಿ ಬಹುಕಾಲ ಬಾಳುತ್ತವೆ ಮತ್ತು ಇದೇ ವೈರಸ್ ಭವಿಷ್ಯದಲ್ಲಿ ಮತ್ತೆ ನಮ್ಮ ಮೇಲೆ ದಾಳಿಮಾಡದಂತೆ ನಮ್ಮನ್ನು ಕಾಪಾಡುತ್ತವೆ. ನಾಟಕೀಯವಾಗಿ ಹೇಳುವುದಾದರೆ, ಶಿಷ್ಟ ಶಕ್ತಿಗಳು ದುಷ್ಟಶಕ್ತಿಯನ್ನು ಸದೆಬಡಿದು ನಮ್ಮನ್ನು ರಕ್ಷಿಸುತ್ತವೆ. ಈ ಕಾಳಗದಿಂದ ನಮ್ಮ ದೇಹವು ತುಸು ಜರ್ಜರಿತವಾಗುತ್ತದೆ; ಸುಧಾರಿಸಿಕೊಳ್ಳಲು ಕೆಲವು ದಿನ ಹಿಡಿದುಕೊಳ್ಳುತ್ತದೆ.

ನಿಮಗೆ ಈ ಕತೆ ಇಷ್ಟವಾಯಿತು ಎಂದುಕೊಳ್ಳುತ್ತೇನೆ. ನಮ್ಮಲ್ಲಿ ರೋಗಪ್ರತಿರೋಧ ಶಕ್ತಿ ಮತ್ತು ವೈರಸ್‌ನ ನೆನಪು ಇದ್ದ ಮೇಲೂ ನಮಗೆ ಆಗಾಗ ಶೀತ ನೆಗಡಿ ಬರುವುದೇಕೆಂಬ ಪ್ರಶ್ನೆ ನಿಮ್ಮನ್ನು ಕಾಡಿರಬಹುದು. ಇದು ತುಂಬ ಒಳ್ಳೆಯ ಪ್ರಶ್ನೆಯೇ. ನಮ್ಮ ವಾತಾವರಣದಲ್ಲಿ ಸುಮಾರು ೧೧೫ ವಿಧದ ರೈನೋವೈರಸ್‌ಗಳಿವೆ ಎಂದು ನಾನು ನಿಮಗೆ ಈ ಮೊದಲೇ ಹೇಳಿದ್ದೆ. ನಾವು  ಯಾವುದಾದರೂ ಒಂದು ವಿಧದ ರೈನೋವೈರಸ್‌ನಿಂದ ಬಾಧಿತರಾದ ನಂತರ ನಮಗೆ ಆ ನಿರ್ದಿಷ್ಟ ವೈರಸ್ ವಿರುದ್ಧ ಮಾತ್ರ ರೋಗನಿರೋಧಕತೆ ದೊರೆಯುತ್ತದೆಯೇ ಹೊರತು ಉಳಿದ ಎಲ್ಲಾ ವೈರಸ್‌ಗಳ ವಿರುದ್ಧ ಅಲ್ಲ. ಇದರ ಜೊತೆಗೆ, ಇತರ ವೈರಸ್‌ಗಳಾದ ಇನ್‌ಫ಼್ಲುಯೆಂಜಾ ವೈರಸ್ ಪಿಕೊರ್ನಾವೈರಸ್ ( - ಇದರಲ್ಲಿ ೯೯ ವಿಧಗಳಿವೆ), ಕೊರೊನಾವೈರಸ್  ಮತ್ತು ಅಡೆನೊವೈರಸ್  ಕೂಡ ಶೀತವನ್ನು ಉಂಟುಮಾಡಬಲ್ಲವು. ಹಾಗಾಗಿ ನಮ್ಮ ದೇಹಕ್ಕೆ ಶೀತದ ವಿರುದ್ಧ ಸಂಪೂರ್ಣ ರೋಗಪ್ರತಿರೋಧಕತೆ ಎಂಬುದಿಲ್ಲ.
 

 

18449 ನೊಂದಾಯಿತ ಬಳಕೆದಾರರು
7204 ಸಂಪನ್ಮೂಲಗಳು