ರೇಖಾಚಿತ್ರ ರಚನೆ - ಮಗುವಿನ ಅಭಿವ್ಯಕ್ತಿ ಸ್ವಾತಂತ್ರ್ಯದ ಮಾರ್ಗ ಮತ್ತು ಪರಿಸರದೊಂದಿಗೆ ಅನುಬಂಧ ಬೆಳೆಸಿಕೊಳ್ಳುವ ವಿಧಾನ

ನನ್ನ ವೃತ್ತಿಯ ದೈನಂದಿನ ಕೆಲಸ ಕಾರ್ಯದಲ್ಲಿ ನಾನು ನಿಯತವಾಗಿ  ಶಾಲಾ ಪೂರ್ವಮಕ್ಕಳ ಜೊತೆ ಕೆಲಸ ಮಾಡುವ  ಅಂಗನವಾಡಿ ಶಿಕ್ಷಕರ ಸಂಸರ್ಗದಲ್ಲಿರುತ್ತೇನೆ  ಮತ್ತು ಆ ಮಕ್ಕಳ ಚಟುವಟಿಕೆಯನ್ನು  ನಿಕಟವಾಗಿ ವೀಕ್ಷಿಸಲು ಅವಕಾಶ ನನಗೆ ದೊರೆಯುತ್ತದೆ. ಎಲ್ಲಾ ಮಕ್ಕಳು ಮಾತಿನಿಂದಲೇ ಸಂಭಾಷಣೆ ಮಾಡಲಾರರು. ಈ ಪುಟಾಣಿ ಮಕ್ಕಳು  ಕೆಲವೊಮ್ಮೆ  ಪದಗಳ ಮೂಲಕ ಹೇಳಬಹುದು, ಅಥವಾ ಕೆಲವೊಮ್ಮೆ  ತಾವೇನು ಹೇಳಲು ಬಯಸುತ್ತಾರೋ ಅದರೆಡೆ ಸುಮ್ಮನೆ ನಿಟ್ಟಿಸಿ ನೋಡುತ್ತಿರುತ್ತಾರೆ.ಅದರಿಂದ ಅವರ ಮನಸ್ಸಿನಲ್ಲೇನಿದೆ ಎಂದು ಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ನಮಗೆ ಸಾಧ್ಯವಿಲ್ಲದೇ ಹೋಗಬಹುದು. ಸಾಮಾನ್ಯವಾಗಿ, ಮಕ್ಕಳು ಕುತೂಹಲದಿಂದ ಕೂಡಿರುತ್ತಾರೆ ಮತ್ತು ವಸ್ತುಗಳು  ಹೇಗೆ ಕಾರ್ಯ ನಿರ್ವಹಿಸುತ್ತವೆ ಮತ್ತು ತಮಗೂ  ಪರಿಸರಕ್ಕೂ  ಹೇಗೆ ಸಂಪರ್ಕ ಕಲ್ಪಿಸಬೇಕು ಮತ್ತು ಅವುಗಳ ಹೇಗೆ ನಿಯಂತ್ರಿಸಬೇಕು  ಎಂಬುದನ್ನು ಅವರು ಊಹಿಸಿ ಅರಿತುಕೊಳ್ಳುತ್ತಾರೆ. ಹೀಗೆ ಅರಿತು ಕೊಳ್ಳುವ  ಅಂಶಗಳು ಮತ್ತು  ಗೀಚುವ ಬರಹಗಳು ಅಥವಾ  ಸಂಕೇತಗಳ ರೂಪದಲ್ಲಿ ರೇಖಾಚಿತ್ರಗಳ ಮೂಲಕ ತಮ್ಮನ್ನು ವ್ಯಕ್ತಪಡಿಸುವ ಚಿಂತನೆ ನಮ್ಮ  ಕಣ್ಮನ  ಸೆಳೆಯುವಂತಹವು ಮತ್ತು ಇದೇನು ಬರೆದಿದ್ದಿ ಎಂದು ಅವರನ್ನು  ಕೇಳಿದಾಗ ಅವರು ಇದು ಅಪ್ಪ, ಅಮ್ಮ, ಅಣ್ಣ , ಅಕ್ಕ,ಮನೆ ,ಇತ್ಯಾದಿ., ಎಂದು  ಹೇಳುತ್ತಾರೆ.

ಅವರ ಆಳವಾದ ಆಂತರಿಕ ಭಾವನೆಗಳು ಮತ್ತು ಅಭಿವ್ಯಕ್ತಿಗಳು ತುಂಬಾ ತೀವ್ರವಾಗಿದ್ದು ಪದಗಳಲ್ಲಿ ವ್ಯಕ್ತಪಡಿಸಲಾಗದಂತಹವುಗಳನ್ನು ತಮ್ಮ ರೇಖಾಚಿತ್ರಗಳ ಮೂಲಕ ಮುಕ್ತವಾಗಿ ವ್ಯಕ್ತಪಡಿಸುತ್ತಾರೆ ಮತ್ತು ರೇಖಾಚಿತ್ರವು ಸ್ವಂತ ಭಾವನೆಗಳನ್ನು ವ್ಯಕ್ತಪಡಿಸಲು ಒಂದು ಸಹಜ ಮಾರ್ಗವಾಗಿದೆ. ನಾವು ವಯಸ್ಸಾದಂತೆ ಬೆಳೆಯುತ್ತಿದ್ದಾಗ ಮತ್ತು ವಯಸ್ಕರಾದಾಗ ನಮ್ಮಲ್ಲಿ ಸ್ವಯಂ ಪ್ರಜ್ಞೆ ಬಲು ಜಾಗೃತವಾಗಿ  ರೇಖಾಚಿತ್ರದ ಮೂಲಕ ಚಿತ್ರಿಸುವಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾವನೆಯನ್ನೇ ನಾವು ಕಳೆದುಕೊಳ್ಳುತ್ತೇವೆ. ಮುಕ್ತವಾಗಿ  ರೇಖಾಚಿತ್ರ ರಚನೆಯ ಕ್ರಿಯೆಯಲ್ಲಿ ಮಕ್ಕಳನ್ನು ಉತ್ತೇಜಿಸಿದಾಗ  ಅವರು ತಮ್ಮ ಸ್ವಾಭಾವಿಕ ಪ್ರೇರಣೆ ಮೂಲಕ ಕೆಲಸ ಮಾಡಲು ಸಹಾಯ ಮಾಡುತ್ತದೆ. ಇತರರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಚಿಂತೆ ಮಾಡದೆ ಅದನ್ನು ಮುಕ್ತವಾಗಿ ವ್ಯಕ್ತಪಡಿಸಲು ಅದು ಅವರಿಗೆ ಕಲಿಸುತ್ತದೆ. ನೆಲದ ಮೇಲೆ, ಕಪ್ಪು ಬೋರ್ಡ್, ಕಾಗದಗಳು, ಪಟಗಳು ಮುಂತಾದವುಗಳ ಮೇಲೆ ಮನಬಂದಂತೆ ರೇಖಾಚಿತ್ರ ರಚನೆಗೆ ಅವಕಾಶ ದೊರೆತಾಗ ಚಾಲನೆಯಲ್ಲಿರುವವು ತಮ್ಮ  ಸಾವಯವ ಮತ್ತು ರಚನಾತ್ಮಕ ಆಲೋಚನೆಗಳನ್ನು ಕುಶಲತೆಯಿಂದ ಸ್ವಾಧೀನಪಡಿಸಿಕೊಳ್ಳಲು ಮತ್ತು ಸಂಪರ್ಕಗಳನ್ನು ಬೆಳೆಸಿಕೊಳ್ಳಲು  ಸ್ವಾತಂತ್ರ್ಯ ವನ್ನು ಒದಗಿಸುತ್ತವೆ.

 ಪಠ್ಯ ಯೋಜನೆ ಪ್ರಕಾರ, ಅಂಗನ ವಾಡಿ ಶಿಕ್ಷಕರು ಮಕ್ಕಳಿಗೆ ಮುಕ್ತ ಚಿತ್ರಣದ ಮೂಲಕ ತಮ್ಮನ್ನು ವ್ಯಕ್ತಪಡಿಸಲು ಅವಕಾಶಗಳನ್ನು ನೀಡಿದರು ಮತ್ತು ಉತ್ತೇಜಿಸಲು ಪ್ರಾರಂಭಿಸಿದರು, ಇದು ಮಕ್ಕಳ ಆಲೋಚನೆಯ ಸ್ವಾತಂತ್ರ್ಯದ ಜೊತೆಗೆ ಮಕ್ಕಳ ಅತಿ ಸೂಕ್ಷ್ಮ ಚಲನಾ ಕೌಶಲ್ಯಗಳನ್ನು ಸುಧಾರಿಸುತ್ತದೆ, ಇನ್ನು ಸಂತೋಷವನ್ನು ಮಕ್ಕಳು ಅಭ್ಯಾಸ ಮಾಡಲು ಅನುಭವಿಸುತ್ತಾರೆ ಜೀವನಕ್ಕೆ ಮಾತ್ರವಲ್ಲದೇ ಕಲಿಯಲು ಕೂಡ ಉಪಯುಕ್ತವಾದ ಕೌಶಲ್ಯಗಳ ವ್ಯಾಪಕ ಶ್ರೇಣಿಯನ್ನು ಕೈಯ್ಯಾರೆ ಮಾಡಿ ಕಲಿಯಲು ಪಡೆಯುವ ಆನಂದದ ಬಗ್ಗೆ ಬೇರೆ ಹೇಳಬೇಕಾಗಿಲ್ಲ. ಹೊಂದಿದೆ.ಅಂಗನ ವಾಡಿ ಶಿಕ್ಷಕರು ರೇಖಾ ಚಿತ್ರ ಬರೆಯಲು ಅನೇಕ  ಆಯ್ಕೆಗಳನ್ನು ಒದಗಿಸಬೇಕು, ಮಗುವಿಗೆ ಬೆಂಬಲ ನೀಡಬೇಕು ಮತ್ತು  ಹೀಗೆ ಬರೆಯಿರಿ ಹಾಗೆ ಬರೆಯಿರಿ ಎಂದು ಹೇಳಿ ಬರೆಸಲು ಹೋಗ ಬಾರದು.ಅವರಿಗೆ  ಬೇರೆ ರೀತಿಯಲ್ಲಿಯೇ ನಿರ್ದೇಶಿಸಿದರೆ ಅದು ಅವರ  ಖುಷಿ ಯನ್ನೇ ಕಸಿದುಕೊಳ್ಳುತ್ತದೆ.ಯಾಗುವಂತೆ ಮಾಡುವುದು ಅಗತ್ಯವಲ್ಲ. ಚಟುವಟಿಕೆ ಅಂತಿಮ ಫಲಿತಾಂಶ ಗುರಿಯಿಟ್ಟು ನಡೆಯಬಾರದು ಮುಕ್ತವಾಗಿರಬೇಕು  ಮತ್ತು ಪ್ರಕ್ರಿಯೆಯ ಮೇಲೆ ಕೇಂದ್ರೀಕರಿಸ ಬೇಕೇ ಹೊರತು  ಕೊನೆಯಲ್ಲಿ ಚಿತ್ರ ಹೇಗಿರಬೇಕು ಎಂದು ಇರಬಾರದು.

ಮೇಲಿನ ಚಿತ್ರಕಲೆಗಳು ನಮ್ಮ ಅಂಗನವಾಡಿ ಕೇಂದ್ರ ದಲ್ಲಿ 3+ ವರ್ಷದ ಮಕ್ಕಳು ಬರೆದ ಚಿತ್ರಗಳಾಗಿವೆ

 ರಮಾದೇವಿ

ಕನ್ನಡಾನುವಾದ: ಜೈಕುಮಾರ್ ಮರಿಯಪ್ಪ

18934 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು