ಮೊಲ ಚಂದ್ರನಲ್ಲಿ ಏನು ಮಾಡುತ್ತದೆ?

 ಈಕೆಯ ಹೆಸರು ಸುರಭಿ. ಓದುತ್ತಿರುವುದು ನಾಲಕನೇ ಕ್ಲಾಸು.. ಆದರೆ ಅವಳ ಬರವಣಿಗೆ ಮಾತ್ರ ಹೈ ಕ್ಲಾಸು. ಆ ಪುಟ್ಟಿಯ ಒಂದು ಪುಟ್ಟ ಕತೆ ಇಲ್ಲಿದೆನಿಮಗಾಗಿ.
 
     ಒಂದು ದಿನ ನಾನು ನನ್ನ ಮನೆಯ ಅಂಗಳದಲ್ಲಿ ಆಡುತ್ತಿದ್ದೆ. ಆಗ ಎಲ್ಲ ಮೊಲಗಳ ಹಾಗೆ ಇರದಂತ ಒಂದು ಮೊಲ ನನ್ನ ಎದುರು ಬಂದು ಕೂತಿತು. ಹೇಳಿತು "ಹಾಯ್ ಸುರಭಿ, ಹೇಗಿದ್ದೀಯಾ. ಚೆನ್ನಾಗಿದ್ದಿ ತಾನೇ?" ಎಂದು ಕೇಳಿತು. ನಾನು ಆಶ್ಚರ್ಯ ಮತ್ತು ಭಯದಿಂದ ಕೇಳಿದೆ "ನೀನು ಯಾರು? ನಿನಗೆ ನನ್ನ ಹೆಸರು ಹೇಗೆ ಗೊತ್ತು?" 
     ಮೊಲ "ನಿನಗೆ ನನ್ನ ಪರಿಚಯ ಆಗಲಿಲ್ಲವೇ?" ಎಂದು ಕೇಳಿತು. 
     ನಾನು "ಇಲ್ಲ" ಹೇಳಿದೆ. 
     ಮೊಲ "ನಾನು ಚಂದ್ರಮುಖಿ. ನಾನು ಚಂದ್ರನಲ್ಲಿ ಇರುವ ಮೊಲ. ನಾನು ನೀನು ಸಣ್ಣ ಬಾಬು ಇರುವಾಗ, ನಿನ್ನೊಡನೆ ಆಟ ಆಡುವುದಕ್ಕೆ ಬರುತ್ತಿದ್ದೆ, ಈಗ ನೆನಪು ಆಯಿತಾ?" ಎಂದು ಹೇಳಿತು. 
     ನಾನು " ಓ, ನೀನು.... ಚಂದ್ರಮುಖಿ.... ಎಷ್ಟು ವರ್ಷ ಆಯಿತು ನಿನ್ನನ್ನು ನೋಡಿ? ಬಾ ಒಳಗಡೆ ಬಾ." ಎಂದು ಹೇಳಿದೆ. ಒಳಗಡೆ ಬಂದಾಗ ನಾನು ಕೇಳಿದೆ "ನೀನು ಚಂದ್ರನಲ್ಲಿ ಏನು ಮಾಡುತ್ತೀ?" 
     ಚಂದ್ರಮುಖಿ ಹೇಳಿತು "ಎಷ್ಟು ಬೋರ್ ಆಗುತ್ತದೆ ಗೊತ್ತುಂಟಾ? ಯಾರೂ ಇಲ್ಲ, ನನ್ನೊಡನೆ ಆಡಲಿಕ್ಕೆ. ಅದಕ್ಕೆ ನಾನು ಇಲ್ಲಿ ಬಂದಿದ್ದು." 
     "ಓ, ಪಾಪ, ನೀನು ಇಲ್ಲಯೇ ಇರಬಹುದಲ್ಲಾ?"
     "ಇಲ್ಲ ಚಂದ್ರ ನನ್ನನ್ನು ಬರೀ 5 ದಿವಸ ಮಾತ್ರ ಬಿಡುವುದು" ಎಂದು ಹೇಳಿತು. 
     ನಾವು ತಿಂಡಿ ತಿಂದು ಆಟ ಆಡಿದೆವು. ಹೀಗೆ ಐದು ದಿನ ಕಳೆಯಿತು. ಆ ದಿನ ಚಂದ್ರ ಚಂದ್ರಮುಖಿಯನ್ನು ಕರೆಯಿತು. ಚಂದ್ರಮುಖಿ ಹೋಗುವಾಗ ನಾನು ಹೇಳಿದೆ "ನೀನು ಕಾಯುತ್ತಾ ಇರು, ನಾನು I.S.R.O. ದ ವಿಜ್ಞಾನಿಗಳು ಕಳಿಸುವ ಚಂದ್ರಲೋಕಕ್ಕೆ ಹೋಗುವ ಉಪಗ್ರಹದಲ್ಲಿ ಕೂತು, ನಿನ್ನ ಮನೆಗೆ ಬಂದು ನಿನ್ನೊಡನೆ ಆಟ ಆಡುತ್ತೇನೆ ಆಯ್ತಾ."
18610 ನೊಂದಾಯಿತ ಬಳಕೆದಾರರು
7272 ಸಂಪನ್ಮೂಲಗಳು