ಮುಖ್ಯವಾಗಿ ಬೇಕಾದದ್ದು ನಮ್ಮ ವಿದ್ಯಾರ್ಥಿಗಳ ಸಾಮರ್ಥ್ಯದಲ್ಲಿ ನಂಬಿಕೆ.

.ನಾನು ಇಂದು ಶಾಲೆಗೆ ಹೋದಾಗ, ಅದು ಎಷ್ಟು  ಅದ್ಭುತ ಅನುಭವವಾಗಿರುತ್ತದೆ ಎಂಬುದರ ಯಾವುದೇ ಸುಳಿವು ನನಗೆ ಇರಲಿಲ್ಲ. ಎಂದಿನಂತೆ, ನಾನು ಸುತ್ತು ಪರಿಶೀಲನೆಗೆ ಹೋದೆ ಮತ್ತು ಕೆಲವು ಶಿಕ್ಷಕರ ಜೊತೆ ಮಾತುಕತೆ  ಆಡುತ್ತಿದ್ದೆ. ಅವರು ತರಗತಿಯಲ್ಲಿ ತಾವು ಎದುರಿಸುತ್ತಿರುವ ಸವಾಲುಗಳನ್ನು ಹಂಚಿಕೊಂಡರು ಮತ್ತು ತಮಗೆ ಸಹಾಯ ಮಾಡಲು ಅವರು ಕೇಳಿದರು. ಆ ತನಕ ಆ ದಿನ ಬಹಳ ಎಂದಿನಂತೆ ಇತ್ತು.  ಶಿಕ್ಷಕರೊಬ್ಬರು ನನ್ನ ಬಳಿಗೆ ಓಡಿ ಬಂದು ಗ್ರೇಡ್ 6 ,ಇಂಗ್ಲಿಷ್ ಟೀಚರ್ ರಶ್ಮಿ ಮೇಡಮ್, ಅನ್ನು ಭೇಟಿಯಾಗಲು ಹೇಳಿದರು. ಏನೋ ಭಯಾನಕವಾದದ್ದು ಸಂಭವಿಸಿದೆ ಎಂದು ನಾನು ಭಯಪಟ್ಟಿದ್ದೆ. ಹಾಗಾಗಿ, ನಾನು ತಕ್ಷಣವೇ ಆ ತರಗತಿ ನಡೆಯುವಲ್ಲಿಗೆ ಓಡಿದೆ. ಅಲ್ಲಿ ವರೆಗೂ ಅಲ್ಲಿ ಕಂಡದ್ದು ನಾನು ತರಗತಿಯಲ್ಲಿ ನಾನು ನೋಡುವ ರೀತಿಯನ್ನು  ಬದಲಾಯಿಸುವಂತೆ ಮಾಡುತ್ತದೆ  ಎಂಬುದರ ಅರಿವು ನನಗೆ ಇರಲಿಲ್ಲ.

76

ಜಾದೂಗಾರ್ತಿ: ರಶ್ಮಿ ಮೇಡಮ್!

ನಾನು 6 ನೇ ತರಗತಿ ಕೋಣೆ ತಲುಪಿದಾಗ, ತರಗತಿಯ ವ್ಯವಸ್ಥೆಯು ಸಾಮಾನ್ಯಕ್ಕಿಂತ ಭಿನ್ನವಾಗಿದೆ ಎಂದು ನಾನು ಗಮನಿಸಿದೆ. ತರಗತಿಯಲ್ಲಿರುವ ಮಕ್ಕಳು ಗುಂಪುಗಳಾಗಿ ವಿಂಗಡಿಸಲ್ಪಟ್ಟಿದ್ದರು ಮತ್ತು ಸಂಪೂರ್ಣವಾಗಿ  ಒಂದು ಚಟುವಟಿಕೆಯಲ್ಲಿ ಮಗ್ನರಾಗಿದ್ದರು.  ನಮ್ಮ ಮಕ್ಕಳ ವಾಡಿಕೆಯ ತರಗತಿ ಕೊಠಡಿಗಳ ಹಿನ್ನೆಲೆಯಲ್ಲಿ ಇದು ಅಸಾಧಾರಣ ದೃಶ್ಯವಾಗಿತ್ತು , ವಾಡಿಕೆಯ ತರಗತಿ ಕೊಠಡಿಗಳಲ್ಲಿ ಮಕ್ಕಳು ತಮ್ಮ ಸಾಲುಗಳಲ್ಲಿ ಸಾಲುಗಳನ್ನು ಕುಳಿತು ಪಾಠ ಕೇಳುತ್ತಾರೆ.  ಈ ತರಗತಿಯಲ್ಲಿ ಏನು ನಡೆಯುತ್ತಿದೆಯೆಂದು ನನಗೆ ವಿಸ್ಮಯವಿತ್ತು. ಏಕೆಂದರೆ ತರಗತಿಯಲ್ಲಿ 100% ವಿದ್ಯಾರ್ಥಿಗಳು ಮಗ್ನರಾಗಿರುವುದು  ನೋಡಲು  ಬಲು ಅಪರೂಪವಾಗಿತ್ತು. ಕೊಠಡಿ ಮೂಲೆ ಒಂದರಲ್ಲಿ ಕುಳಿತು ನಾನು ರಶ್ಮಿ ಮೇಡಂ ನನ್ನನ್ನು ನೋಡುತ್ತಾ ಮುಗುಳ್ನಗುತ್ತಿದ್ದರು. ಅವರ ಮುಗುಳ್ನಗು ಏನೋಸಾಧಿಸಿರುವುದನ್ನು ಮತ್ತು ಹೆಮ್ಮೆಯನ್ನು  ತಿಳಿಸುತ್ತಿತ್ತು. ಅವಳನ್ನು ತಬ್ಬಿ ಅಭಿನಂದಿಸದೇ ಇರುವುದು ನನಗೆ ಆಗಲಿಲ್ಲ. ತರಗತಿಯಲ್ಲಿ ಸಹಪಾಠಿ ಕಲಿಕೆಯನ್ನು  ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಅವರನ್ನು ನಾನು ಅಭಿನಂದಿಸಿದೆ . ಅವರ ಮಾತಿನಲ್ಲಿ ಹೇಳುವುದಾದರೆ, ಈ ತರಗತಿಗಳು "ಮಕ್ಕಳಿಗಾಗಿ ಮ್ಯಾಜಿಕ್ ಹಾಗೆ ಕೆಲಸ ಮಾಡುತ್ತವೆ" ಮತ್ತು ಅವರಿಗೆ ಅದು ಬಲು ಆನಂದದಾಯಕ ಎಂಬುದು ಸ್ಪಷ್ಟವಾಗಿತ್ತು.

ಕ್ರಿಸ್ಮಸ್ ಈವ್ನಲ್ಲಿ ಮಗುವು ಎಷ್ಟು ಉತ್ಸುಕ ವಾಗಿರುತ್ತದೊ ಅಷ್ಟೇ ನಾನು ನನ್ನ ವೀಕ್ಷಣೆತರುವಾಯದ ಚರ್ಚೆಯ ಬಗ್ಗೆ ಉತ್ಸುಕಳಾಗಿದ್ದೆ. ನಾವು ಶಾಲೆಗಳು ಮತ್ತು ಶಿಕ್ಷಕರೊಂದಿಗೆ ಕೆಲಸ ಮಾಡುವಾಗ, ನಾವು ಉದ್ದೇಶಿಸುವ ಏಕೈಕ ವಿಷಯವೆಂದರೆ ನಮ್ಮ ಮಕ್ಕಳ ಸಿದ್ಧತೆಯಲ್ಲಿ  ಬದಲಾವಣೆ. ಇದು ಇದರ ಅತ್ಯುತ್ತಮ ಉದಾಹರಣೆಯಾಗಿತ್ತು. ಒಂದು ವರ್ಷದಿಂದ ನಮ್ಮ ನಿರಂತರ ಪ್ರಯತ್ನಗಳು ಮತ್ತು ಪ್ರೇರಣೆಗೆ ಇದು ಕಾರಣವಾಗಿದೆ. ನನ್ನ ದೃಷ್ಟಿಯಲ್ಲಂತೂ, ಈ ವರ್ಗ ಮುಂಬರುವ ಸಮಯದಲ್ಲಿ ಅನುಸರಿಸಬೇಕಾದ ಬದಲಾವಣೆಯ ರೀತಿಯ ಬಗ್ಗೆ ಬಲು ಉತ್ಸಾಹದಿಂದ ಹೇಳುತ್ತಿತ್ತು.

ನಮ್ಮ ಚರ್ಚೆಯಲ್ಲಿ, ರಶ್ಮಿ ಮೇಡಮ್ ಶಾಲೆಯಲ್ಲಿ  "ಸಹಪಾಠಿ ಕಲಿಕೆ" ಯ ಪ್ರಯೋಗ ಹೇಗೆ ನಡೆಯಿತು ಮತ್ತು ಅದರ ಹಿಂದಿನ ಪ್ರೇರಣೆ ಏನು ಎಂದು ವಿವರಿಸಿ ಹೇಳಿದರು. ವಿವಿಧ ಕಲಿಕೆಯ ಹಂತಗಳಲ್ಲಿರುವ  ಮಕ್ಕಳ ಅಗತ್ಯತೆಗಳನ್ನು ಪೂರೈಸಲು ಅವರು ತರಗತಿಯಲ್ಲಿ ಹೆಣಗಾಡುತ್ತಿದ್ದರು ಎಂದು ಅವರು ತಿಳಿಸಿದರು. ಒಂದು ಪಾಠದ ಅವಧಿಯಲ್ಲಿ  ಎಲ್ಲ ಮಕ್ಕಳ ಮೇಲೆ ಕೇಂದ್ರೀಕರಿಸಲು  ಸಮಯ ಏನೇನೂ ಸಾಲುತ್ತಿರಲಿಲ್ಲ.ಆದ್ದರಿಂದ, ಅವರು ಮಕ್ಕಳ ಸಾಮರ್ಥ್ಯಗಳನ್ನು ಬಳಸಿಕೊಂಡು  ಶಿಕ್ಷಕರ  ಮೇಲೆ ಮಕ್ಕಳು ಅವಲಂಬಿಸಿಲ್ಲದಿರುವ ಸಂಸ್ಕೃತಿಯನ್ನು ನಿರ್ಮಿಸುವ ಬಗ್ಗೆ ಅವರು ಯೋಚಿಸಿದರು. ಆಕೆಯು ಪಾಠಕಲಿಕೆಯ ವಿಷಯದಲ್ಲಿ ಹೆಣಗಾಡುತ್ತಿರುವ ಮಕ್ಕಳನ್ನು ಮೊದಲು ಗುರುತಿಸಿದರು ಮತ್ತು ಅವರನ್ನು  ಚೆನ್ನಾಗಿ ಕಲಿಯುವ ವಿದ್ಯಾರ್ಥಿಗಳೊಂದಿಗೆ ಜೋಡಿಯಾಗಿ ಮಾಡಿದರು. ಯಾವುದೇ ಹೊಸ ಪ್ರಯತ್ನದಂತೆ, ಇದೂ ಪ್ರಾರಂಭದಲ್ಲಿ ಕಾರ್ಯಗತಗೊಳಿಸಲು ಸ್ವಲ್ಪ ಕಷ್ಟವಾಯಿತು  ಆದರೆ ಮಕ್ಕಳು ಈ ಪ್ರಯತ್ನದ ಬೆಲೆಯನ್ನು ಕಂಡಾಗ, ಅದು ತುಂಬಾ ಪರಿಣಾಮಕಾರಿಯಾಯಿತು. ಸಹಪಾಠಿ ಕಲಿಕೆಯು ಮಕ್ಕಳ ಮೂಲಕ ತರಗತಿ ಅಭ್ಯಾಸ  ಮತ್ತು ಹೋಂ ವರ್ಕ್ ಪೂರ್ಣಗೊಳಿಸುವಂತಹ ತಕ್ಷಣದ ಯಶಸ್ಸಿಗೆ ಕಾರಣವಾಯಿತು ಎಂಬುದನ್ನು ಅವರು ಹಂಚಿಕೊಂಡರು

34

ಸಹಪಾಠಿಕಲಿಕೆಯ ತಾರೆಗಳೊಂದಿಗೆ ರಶ್ಮಿ ಮೇಡಂ

ಅವರು ಹೇಳಿದ್ದನ್ನೇ ಯಥಾವತ್ತಾಗಿ ಹೇಳುತ್ತೇನೆ ಮತ್ತು "ಕಳೆದ ವರ್ಷ ಅಥವಾ ಕಳೆದ ತಿಂಗಳಿಗಿಂತ ಇದು ಒಂದು ದೊಡ್ಡ ಜಂಪ್ ಆಗಿದೆ, ನಾನು ಧನುಷ್ ಅಥವಾ ಹರೀಶ್ ತಮ್ಮ ಕೆಲಸವನ್ನು ಮುಗಿಸಿಬಿಡುತ್ತಾರೆ ಮತ್ತು ತಮ್ಮ ನೋಟ್ಬುಕ್ಗಳನ್ನು ಸ್ವಚ್ಛವಾಗಿರಿಸಿಕೊಳ್ಳುತ್ತಾರೆ ಎಂದು ನಾನು ಎಂದಿಗೂ ಕಲ್ಪಿಸಿಕೊಂಡಿರಲಿಲ್ಲ. ಆದರೆ ಈಗ ನಾನು ನೋಡುತ್ತಿರುವುದು ನನ್ನ ಮಕ್ಕಳ ಬಗ್ಗೆ  ಹತಾಶಳಾಗದಂತೆ ನನಗೆ ಸ್ಫೂರ್ತಿಯಾಗಿದೆ. "

ಇತರರಿಗೆ ತಮ್ಮ ಆಲೋಚನೆಗಳನ್ನು ವಿವರಿಸುವ ಮೂಲಕ ಮತ್ತು ತಮ್ಮ ಸಹಪಾಠಿಗಳಿಂದ ಕಲಿಯಬಹುದಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಹೆಚ್ಚಿನದನ್ನು ಕಲಿಯುತ್ತಾರೆ ಎಂಬುದನ್ನು ಅವರು ಗಮನಿಸಿದ್ದಾರೆ. ಕಲಿಕೆಯ ಚಟುವಟಿಕೆಗಳನ್ನು ಸಂಘಟಿಸಲು ಮತ್ತು ಯೋಜಿಸಲು ಅವರು ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ, ಇತರರೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಾರೆ, ಪ್ರತಿಕ್ರಿಯೆ ನೀಡುತ್ತಾರೆ ಮತ್ತು  ಪಡೆಯುತ್ತಾರೆ. ತಮ್ಮ ಸ್ವಂತ ಕಲಿಕೆಯ ಮೌಲ್ಯಮಾಪನ ಮಾಡುತ್ತಾರೆ.

ತನ್ನ ಅನುಭವವನ್ನು ಹಂಚಿಕೊಳ್ಳುವಾಗ, ಅವರು "ಎಲ್ಲ ಕೆಟ್ಟ ಫಲಿತಾಂಶಗಳು ಮತ್ತು ಅಪೂರ್ಣ ಹೋಮ್ವರ್ಕ್ಗ ಗಳಿಗಾಗಿ ವಿದ್ಯಾರ್ಥಿಯನ್ನು ದೂಷಿಸುವುದು ಸುಲಭ, ಆದರೆ ಶಿಕ್ಷಕರಾಗಿ ನಾವು ಅದರ ಬಗ್ಗೆ ಆಲೋಚಿಸಬೇಕಾಗಿದೆ. ತರಗತಿಯಲ್ಲಿ ಯಾವುದೇ ಕಲಿಕೆಯನ್ನು  ಮಕ್ಕಳು ಪಡೆಯಲು ಸಾಧ್ಯವಾಗದಿದ್ದರೆ ಅದು ನಮ್ಮ ತಪ್ಪು. "

 

 

 


Vasundhara who penned this story is School Transformation Lead at Mantra4Change.

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು