ಮಾಲ್ಪುರದ ಮಹನೀಯರು

ಆ ಕೊಠಡಿಯ 30ಅಡಿX 20ಅಡಿ. ಅಳತೆಯದು.  ಅದರಲ್ಲಿ ನಾವು 40 ಮಂದಿ ಕುಳಿತಿದ್ದೆವು 34 ಜನ ಸರ್ಕಾರಿ ಶಾಲೆ ಶಿಕ್ಷಕರು ಮತ್ತು ನಾವು ಆರು ಜನ ವೀಕ್ಷಕರು ಎಲ್ಲಾ ನೆಲದ ಮೇಲೆ ಚಾಪೆ ಹಾಸಿ ಕುಳಿತುಕೊಂಡಿದ್ದೆವು.

ಕಡು ಬೇಸಿಗೆಯ ಬಿಸಿಲಿನ ಮೈದಾನ ಭೂಮಿ; ಅಲ್ಲಲ್ಲಿ ಮುಳ್ಳಿನ ಜಾಲಿಮರ ಕಾಣುತ್ತಿದ್ದವು ಹೊರಗೆ 44 ಡಿಗ್ರಿ ಸೆಲ್ಸಿಯಸ್ ನ ತಾಪಮಾನ ಕೊಠಡಿಯೊಳಗೆ 50 ಡಿಗ್ರಿ ಸೆಲ್ಸಿಯಸ್ ನಂತಹ ಉರಿ ಧಗೆ. ವಿದ್ಯುತ್ ಇಲ್ಲದೆ ಫ್ಯಾನುಗಳು ತಟಸ್ಥವಾಗಿ ನಿಂತಿದ್ದವು. ನಾನೋ ಬೆವರಿನಲ್ಲಿ ಮಿಂದು ಹೋಗಿದ್ದೆ, ಬೇರೆ ಯಾರೂ ಹಾಗೆ ಬೆವತಿರಲಿಲ್ಲ. ಅವರು ಎಲ್ಲಾ ಮಾಲ್ಪುರದ ಸುತ್ತಲ ಹಳ್ಳಿಗಳು ಮತ್ತು ನಗರಗಳಲ್ಲಿ ವಾಸಿಸುವವರು  ಈ ತಾಪಮಾನಕ್ಕೆ ಒಗ್ಗಿಹೋಗಿದ್ದರು. 30,000 ಜನಸಂಖ್ಯೆಯನ್ನು ಹೊಂದಿದ್ದ ಈ ಪಟ್ಟಣವು ಜೈಪುರ ದಕ್ಷಿಣದ ಟೋಂಕ್ ಜಿಲ್ಲೆಯ ಬ್ಲಾಕ್ ಕೇಂದ್ರಗಳಲ್ಲಿ  ಒಂದು.

ಈ ಗುಂಪು ಬ್ಲಾಕ್ ನ ಸುತ್ತಮುತ್ತಲ, ಕೆಲವು ಬಹುದೂರದ 50 ಕಿ.ಮೀ ದೂರದ ಹಳ್ಳಿಗಳು ಮತ್ತು ನಗರಗಳಿಂದ ಬಂದು, ಬೆಳಗ್ಗೆ 10 ಗಂಟೆಗೆ ಸೇರಿದ್ದರು. ಸೂಕ್ಷ್ಮದರ್ಶಕಗಳನ್ನು ಹೇಗೆ ಬಳಸಬಹುದು ಮತ್ತು ಯಾವ ಅದ್ಭುತಗಳನ್ನು ಅವುಗಳ ಮೂಲಕ ಪತ್ತೆ ಮಾಡಬಹುದು ಎಂಬ ಬಗ್ಗೆ ಒಂದು ಲೇಖನ ವಿತರಣೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು.
ಪ್ರತಿ ಗುಂಪು ಮೂಲಭೂತ ಸೂಕ್ಷ್ಮದರ್ಶಕ, ಗಾಜಿನ ಸ್ಲೈಡ್ಗಳು, ತೆಳುಬಿಲ್ಲೆ ಕುಯ್ಯುವ ಚಾಕು, ವರ್ಣಗಳು ಮತ್ತು ಸ್ಲೈಡ್ಗಳನ್ನು ಮಾಡಲು ವಸ್ತುಗಳನ್ನು ಹೊಂದಿತ್ತು ಅಂದರೆ ಆಲೂಗಡ್ಡೆ, ಕ್ಯಾಪ್ಸಿಕಂ, ಮತ್ತು ಕೊಳೆ ನೀರು ಇದ್ದವು. 15 ನಿಮಿಷಗಳ ಓದುವಿಕೆ ನಂತರ, ಕೊಠಡಿಯಲ್ಲಿ ಬಿರುಸಿನ ಚಟುವಟಿಕೆ ಪ್ರಾರಂಭವಾಯಿತು. ತರಕಾರಿಗಳನ್ನು ಕತ್ತರಿಸಿ ಬಿಲ್ಲೆಮಾಡುವುದು ಅವುಗಳಿಗೆ ಬಣ್ಣ ಹಾಕುವುದು ಮತ್ತು ಸಾಕಷ್ಟು ಬೆಳಕು ಇರುವಲ್ಲಿಗೆ ಸೂಕ್ಷ್ಮದರ್ಶಕವನ್ನು ಕೊಂಡೊಯ್ಯುವುದು, ಸ್ಲೈಡ್ಗಳನ್ನು ನೋಡಲು ನೂಕು ನುಗ್ಗಲು ಮತ್ತು ಉತ್ತಮ ಸ್ಲೈಡ್ಗಳು ಮಾಡಿದ ಸಂದರ್ಭದಲ್ಲಿ ಇತರರಿಗೆ ಹೆಮ್ಮೆಯಿಂದ ತೋರಿಸುವುದು. ತಾವು ಕಂಡದ್ದರ ಚಿತ್ರ ಬಿಡಿಸುವುದು, ಮತ್ತು ಲೇಖನದಲ್ಲಿದ್ದ ಚಿತ್ರಗಳಿಗೆ ಅದನ್ನು ಹೋಲಿಸಿ ನೋಡುವುದು. ವಿವಿಧ ಕೋಶಗಳು ಮತ್ತು ರಚನೆಗಳು, ಅಥವಾ ಕೊಳಕು ನೀರಿನಲ್ಲಿ ತೇಲುತ್ತಿರುವ ಸೂಕ್ಷ್ಮಜೀವಿಗಳನ್ನು ಗುರುತಿಸುವುದು.

ಅವರ ಸ್ಲೈಡ್ಗಳ ಅದ್ಭುತಗಳನ್ನು ವೀಕ್ಷಿಸುವುದಕ್ಕಾಗಿ ನನ್ನನ್ನು ಗುಂಪಿನಿಂದ ಗುಂಪಿಗೆ ಒಯ್ಯಲಾಯಿತು.ಶೆಕೆಯ ಬೇಗೆಯಲ್ಲಿ ನಾನು ಪೂರಾ ನೆನೆದು ಹೋಗಿದ್ದೆ. ಮುಚ್ಚೊಲೆಯ ತರಹದ ಕೋಣೆಯಲ್ಲಿ ಅವರ ಲವಲವಿಕೆಯ ಚಟುವಟಿಕೆ ಮತ್ತು ಅವರು ಆರಾಮದಾಯಕವಾಗಿರುವುದನ್ನು ಕಂಡು ನಾನು ಆಶ್ಚರ್ಯಚಕಿತನಾದನು. ಸಭೆಯು 10 ರಿಂದ ಮಧ್ಯಾಹ್ನ 12ರ ವರೆಗೆ ನಿಗದಿಯಾಗಿತ್ತು. ಅವರು ನಿಲ್ಲಿಸಲು ನಿರಾಕರಿಸಿದರು. ಅವರನ್ನು ಮಧ್ಯಾಹ್ನ 12.45 ನಲ್ಲಿ ತಮ್ಮ ಚಟುವಟಿಕೆಯಿಂದ ದೂರಕ್ಕೆ ಎಳೆದೊಯ್ಯಬೇಕಾಯಿತು.

ಅವರನ್ನು ಕಷ್ಟಪಟ್ಟು ಕರೆತಂದು ವೃತ್ತಾಕಾರದಲ್ಲಿ ಕೂರಿಸಬೇಕಾಯಿತು. ಅವರ ಪೈಕಿ ಇಬ್ಬರು ಶಿಕ್ಷಕರು ಗೋಯಲ್ ಮತ್ತು ಪಾಠಕ್ ನಿರ್ವಹಣೆ ವಹಿಸಿಕೊಂಡರು. ಅವರು ಸಾರಸಂಗ್ರಹಣೆಯನ್ನು ಬಹಳ ಅನುಕೂಲಕರವಾಗಿ ನಿರ್ವಹಿಸಿದರು. ಇದರ ಉದ್ದೇಶ ಅವರವರು ಕಲಿತ ವಿಷಯಗಳನ್ನು ಕುರಿತು ಹೇಳುವುದು ಮತ್ತು ಹೇಗೆ ತಮ್ಮ ಪಾಠದಲ್ಲಿ ಅದನ್ನು ಹೇಗೆ ಬಳಸಬಹುದು ಎಂಬುದನ್ನು ಕುರಿತು ಹೇಳುವುದು.  30 ನಿಮಿಷಗಳ ತೀವ್ರ ಚರ್ಚೆ ನಂತರ, ಅವರು 12, ಕೆಲವು ನಿರ್ದಿಷ್ಟ ಅಂಶಗಳನ್ನು ಕೆಲವು ಮೂಲಭೂತ ಅಂಶಗಳನ್ನು ಹೇಳಿದರು ("ವರ್ಣಗಳು ತಾಜಾ ಇರಬೇಕು") ಮತ್ತು ("ಸಹಯೋಗದೊಂದಿಗೆ ಚಟುವಟಿಕೆಗಳನ್ನು ನಡೆಸಿದರೆ ಉತ್ತಮವಾಗಿ ಕಲಿಯ ಬಹುದು")  ಎಂದು ಮಂಡಿಸಿದರು.

ಬೆಂಗಳೂರಿನಿಂದ ಅಷ್ಟು ದೂರ ನಾನು ಹೋಗಿದ್ದರಿಂದ  ನನಗೆ 15 ನಿಮಿಷ ಅವರೊಂದಿಗೆ ಮಾತುಕತೆಗೆ ಅವಕಾಶ ನೀಡಲಾಯಿತು. ಹೀಗೆ ಬೆಳಗ್ಗೆ 10 ಗಂಟೆಗೆ ಪ್ರಾರಂಭಿಸಿದ ಅಧಿವೇಶನ ನಡುವೆ ಒಂದು ಚಹಾ ವಿರಾಮವಿಲ್ಲದೆ,ಮಧ್ಯಾಹ್ನ 1.30 ನಲ್ಲಿ ಕೊನೆಗೊಂಡಿತು. ನಂತರ ಅವರು ತಮ್ಮ ಚೀಲಗಳನ್ನು ತೆಗೆದುಕೊಂಡು 46 ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ  ತಮ್ಮ ಮುಖದಲ್ಲಿ ಬೇಗೆಯ ನೋಟ ಹೊತ್ತು ತಮ್ಮ ಮನೆಗಳತ್ತ, ಮತ್ತೆ ತಮ್ಮ ದ್ವಿಚಕ್ರ ಸವಾರಿ ಮಾಡಿಕೊಂಡು, ಹೊರಟರು. ಈ ಗುಂಪು ಮಾಲ್ಪುರ ಬ್ಲಾಕ್ ನ ಎರಡು ಸ್ವಯಂಸೇವಾ ಶಿಕ್ಷಕ ವೇದಿಕೆಗಳಲ್ಲಿ ಒಂದಾಗಿದೆ. ಆರಂಭದಲ್ಲಿ ಇದನ್ನು 2009 ರಲ್ಲಿ ರಚಿಸಲಾಯಿತು ನನ್ನ ಸಹೋದ್ಯೋಗಿ ದೇವೇಂದ್ರ  ಇದನ್ನು ಆಯೋಜಿಸಿದರು , ಮತ್ತು ಕಾಲಾನಂತರದಲ್ಲಿ ಶಿಕ್ಷಕರು ಸಂಘ ನಮ್ಮದು  ಎಂದು ಹೆಚ್ಚು ಹೆಚ್ಚು ಭಾಗವಹಿಸುತ್ತಿದ್ದಾರೆ,. ಈ ಎರಡು ಗುಂಪುಗಳಲ್ಲಿ ಒಟ್ಟು 150 ಸರ್ಕಾರೀ ಶಾಲಾ ಶಿಕ್ಷಕರು ಇದ್ದಾರೆ. ಮಾಲ್ಪುರ ಬ್ಲಾಕ್ ಒಟ್ಟು 800 ಶಿಕ್ಷಕರನ್ನು ಹೊಂದಿದೆ.

ಶಿಕ್ಷಕರು ಸ್ವಯಂಪ್ರೇರಣೆಯಿಂದ ಈ ಸಂಕಿರಣಗಳಿಗೆ ಹಾಜರಾಗುತ್ತಾರೆ ಸರ್ಕಾರದ ಅಥವಾ ಅಧಿಕಾರಿಗಳ ಯಾವುದೇ ಆದೇಶ ಇಲ್ಲ,. ಅವರು ತಮ್ಮ ಶಾಲೆಯ ಗಂಟೆಗಳ ಸಮಯ ಅಲ್ಲದ ತಮ್ಮ ಸ್ವಂತ ಸಮಯದಲ್ಲಿ ಅಲ್ಲಿ ಬರುತ್ತಾರೆ. ನಾನು ವಿವರಿಸಿದ ಅಧಿವೇಶನ ರಜಾದಿನ ನಡೆದದ್ದು. ಸಾಕಷ್ಟು ದೂರದ ಮನೆಗಳು, ಮತ್ತು ಕಳಪೆ ಸಾರ್ವಜನಿಕ ಸಾರಿಗೆ ಇದ್ದಾಗ್ಯೂ ಅವರು ಪರಿಸ್ಥಿತಿಗಳನ್ನು ಎದುರಿಸುತ್ತಾರೆ, ಮತ್ತು ತಮ್ಮ ದ್ವಿಚಕ್ರ ವಾಹನದ ಪೆಟ್ರೋಲ್ ಗಾಗಿ ತಮ್ಮ ಹಣ ಖರ್ಚು ಮಾಡುತ್ತಾರೆ. ಅವರಿಗೆ ಇದಕ್ಕಾಗಿ ಯಾವುದೇ ಕ್ರೆಡಿಟ್, ಯಾವುದೇ ಹಣ ಮತ್ತು ಈ ವೇದಿಕೆಯಲ್ಲಿ ಒಂದು ಭಾಗವಾಗಿ ಯಾವುದೇ ಬಾಹ್ಯ ಪ್ರತಿಫಲ ಸಿಗುವುದಿಲ್ಲ.
ನಾನು ಅವರನ್ನು ಕೇಳಿದ ಒಂದೇ ಒಂದು ಪ್ರಶ್ನೆ " ಯಾರೂ ನಿಮ್ಮನ್ನು  ಕೇಳದೇ ಇರುವಾಗ ಮತ್ತು ಯಾವುದೇ ಪ್ರತಿಫಲ ಇಲ್ಲದಿದ್ದಾಗ ಈ ಕಡುಬಿಸಿಲು ಬೇಗೆಯಲ್ಲಿ, ನೀವು ಯಾಕೆ ನಿಮ್ಮ ಸ್ವಂತ ಹಣ ಖರ್ಚು ಮಾಡಿಕೊಂಡು, ರಜೆ ದಿನದಲ್ಲಿ ಬರುತ್ತೀರಿ?" ಅವರು ತಿಂಗಳಿಗೆ ಎರಡು ಬಾರಿ ಹೀಗೆ ಸೇರುತ್ತಾರೆ.


ನನ್ನ ಕೆಲಸದ ಒಂದು ಸೌಲಭ್ಯವೆಂದರೆ ನಾನು ದೇಶಾದ್ಯಂತ, ಪ್ರತಿ ದಿನ ಇಂತಹ ಜನರನ್ನು ಭೇಟಿ ಮಾಡಲು ಅವಕಾಶ ದೊರಕುವುದು. ನನ್ನ ಪ್ರಶ್ನೆಗೆ ಮಾಲ್ಪುರ ಕೇಳಿದ ಉತ್ತರ ನಾನು ದೇಶಾದ್ಯಂತ ಕೇಳುವ ಸರಳ ಉತ್ತರವೇ ಆಗಿತ್ತು: "ನಾವು ನಮ್ಮ ವಿದ್ಯಾರ್ಥಿಗಳಿಗೆ ಚೆನ್ನಾಗಿ ಕಲಿಸಲು ಹೆಚ್ಚು ಹೆಚ್ಚುವಿಷಯ ತಿಳಿದುಕೊಳ್ಳಲು ಇಲ್ಲಿಗೆ  ಬರುತ್ತೇವೆ." ಎಂಬುದು
ರಾಜಸ್ಥಾನದ ಎರಡು ಜಿಲ್ಲೆಗಳಲ್ಲಿ ನಾವು ತೊಡಗಿಸಿಕೊಂಡಿರುವ ಇಂತಹ 15 ವೇದಿಕೆಗಳು ಇವೆ, ಇವುಗಳಲ್ಲಿ 800 ಜನ ಶಿಕ್ಷಕ ಸದಸ್ಯರು ಇದ್ದಾರೆ-ಅಂದರೆ ಇದು ಆ ಎರಡು ಜಿಲ್ಲೆಗಳಲ್ಲಿರುವ  ಸರ್ಕಾರಿ ಶಿಕ್ಷಕರ ಒಟ್ಟು ಸಂಖ್ಯೆಯ ಸುಮಾರು 15% ಆಗಿರುತ್ತದೆ. ದೇಶಾದ್ಯಂತ, ನಾವು ಇಂತಹ ಅನೇಕ ಗುಂಪುಗಳನ್ನು ನೋಡುತ್ತೇವೆ ಮತ್ತು ಬಹುಶಃ ಇನ್ನೂ ಅನೇಕ ವೇದಿಕೆಗಳಿದ್ದು ಸರ್ಕಾರಿ ಇಲಾಖೆಗಳು ಸೇರಿದಂತೆ  ಹಲವು ಸಂಘಟನೆಗಳು ಅವುಗಳಿಗೆ ತರಬೇತಿ ನೀಡುತ್ತಿರಬಹುದು.

ಶಿಕ್ಷಣದಲ್ಲಿ ನಿರಂತರ ಸುಧಾರಣೆ ಅಂತರಂಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ   ಸಾಕಷ್ಟು ಒಳ್ಳೆಯ ಜನರು ನಿರತರಾಗಿದ್ದಾರೆ (ಒಳ್ಳೆಯ ಶಿಕ್ಷಕರು), ಇಲ್ಲ. ನಿರಂತರವಾಗಿ , ಸ್ವಲ್ಪ ಬೆಂಬಲ ಪಡೆದುಕೊಂಡು ಕೆಲವು ಸಂಸ್ಥೆಗಳು ಬದಲಾವಣೆಯ ಹರಿಕಾರರಾಗಿರುತ್ತಾರೆ. ಈ ಸಂಸ್ಥೆಗಳು ಬೌದ್ಧಿಕ ವಿನಿಮಯ ಮತ್ತು ಸಾಮರ್ಥ್ಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿ ನಾವೆಲ್ಲ ಒಂದು ಪರಸ್ಪರ ಕಲಿಯೋಣ ಎಂಬ ಭಾವನೆ ಮೂಡಿಸುವುದೇ ಅಲ್ಲದೆ ಅದಕ್ಕೆ  ಗೌರವ ನೀಡುವಂತೆ ಮಾಡುತ್ತಿವೆ. ಈ ಸಜ್ಜನ ಮಹಿಳೆಯರು ಮತ್ತು ಪುರುಷರಿಗೆ ನಾವು  ಬೆಂಬಲ ಹಸ್ತ ನೀಡೋಣ. ಪ್ರಯಾಣ ಎಷ್ಟೇ ಕಠಿಣ ಮತ್ತು. ದೀರ್ಘಕಾಲದ್ದಾಗಿರಲಿ, ನಮಗಿರುವ ಭರವಸೆ ಇವರೇ  ಆಗಿರುತ್ತಾರೆ.

http://www.livemint.com/Opinion/9nV6UjeB1SZMYiQyRoUL7H/Gangs-of-Malpura.html

ಲೇಖಕರು : ಅನುರಾಗ್ ಬೆಹರ್ 

 

 

18793 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು