ಮಕ್ಕಳ ಚಿತ್ರಗಾರಿಕೆಯಿಂದ ನಾವೇನು ಕಲಿಯಬಹುದು?

ಮಕ್ಕಳಿಗೆ ಅದೂ ಇದೂ  ಚಿತ್ರ ಬರೆಯುವುದೆಂದರೆ ಬಹಳ ಇಷ್ಟ. ಎರಡು ವರ್ಷದ  ಹೊತ್ತಿಗೆ ಏನಾದರೂ ಗುರುತು ಮಾಡುವುದರಲ್ಲಿನ   ಸಂಪೂರ್ಣ ಸಂತೋಷ ಅರಿಯುತ್ತಾರೆ. ಅವರು ಯಾವುದೇ  ಮೇಣದ ಬಳಪ, ಪೆನ್ಸಿಲ್ ಅಥವಾ ಪೆನ್ ತೆಗೆದುಕೊಂಡು  ಗೀಚಲಾರಂಬಿಸುತ್ತಾರೆ.
 
ನಮ್ಮ ಪುಟ್ಟ ಮಕ್ಕಳು  ಈ ಗೀಚು ಕಲೆಯಿಂದ ವಾಸ್ತವವನ್ನು  ಬಿಂಬಿಸಲು ಪ್ರಯತ್ನ ಪಡುತ್ತಿರುವುದಿಲ್ಲ. ಇದು ಕೇವಲ ತಮ್ಮ ಹೊಸ ಸಾಮರ್ಥ್ಯದ  ಒಂದು ಸಂತೋಷದಾಯಕ ಪರಿಶೋಧನೆ ಆಗಿದೆ. ಅದೇನು  ಕಡಿಮೆ ಸಾಮರ್ಥ್ಯವೇ ?  ಪ್ರಪಂಚದ ಮೇಲೆ ಖಾಯಂ ಛಾಪು ಒತ್ತುವ ಸಾಮರ್ಥ್ಯ.
 
ಗೀಚುವ ಕ್ರಿಯೆಯ ಪ್ರಾಮುಖ್ಯತೆ   - 
 
Uh-oh… from www.shutterstock.com
ವಯಸ್ಸು ಸುಮಾರು ಮೂರು ಅಥವಾ ನಾಲ್ಕು ವರ್ಷಗಳಾದ ನಂತರ, ಉದ್ದುದ್ದಕ್ಕೆ  ಗೀಚುತ್ತಿದ್ದ ಮಕ್ಕಳು  ವೃತ್ತಾಕಾರದಲ್ಲಿ  ಗೀಚಲು  ವಿಕಾಸಗೊಳ್ಳುತ್ತಾರೆ ಮತ್ತು ಇದು ಅತ್ಯಂತ ಪ್ರಮುಖ ಮೈಲುಗಲ್ಲಾಗಿದೆ. ಅವ ದೊಡ್ಡ, ನಿರಂತರ, ಸುತ್ತು ಸುತ್ತಿನಲ್ಲಿ ಗೀಚಿದ ಸಾಲುಗಳು ಒಂದರೋಳಗೊಂದು  ಸುತ್ತು ಇರುವ  ವೃತ್ತದ ಆಕಾರಗಳನ್ನು ಮಾಡಲು ಆರಂಭಿಸುತ್ತವೆ.
 
ಒಂದು ಸುತ್ತುವರಿದ ಆಕಾರ ಬರೆಯುವ  ಸಾಮರ್ಥ್ಯ ಸುತ್ತಮುತ್ತಲ ವಿಶ್ವದ  ಅನೇಕ ವಸ್ತುಗಳನ್ನು ಪ್ರತಿನಿಧಿಸುವ ಸಾಮರ್ಥ್ಯದ ಆರಂಭವನ್ನು ಸೂಚಿಸುತ್ತದೆ. ಇದು ವರ್ಣಮಾಲೆಯ ಅಕ್ಷರಗಳನ್ನು ರೂಪಿಸಲು ಸಾಧ್ಯವಾಗುವ ಶಕ್ತಿ  ಆರಂಭವಾಗಿರುವುದನ್ನು ಸಹ ಗುರುತಿಸುತ್ತದೆ.
 
ಅರ್ಥ ಪೂರ್ಣವಾಗುವುದು
 
‘Is that mummy?’ The Paessel Family/Flickr, CC BY
 
ಕ್ರಮೇಣ ಗೀಚು ಮಕ್ಕಳ ಆಂತರಿಕ  ಸಂತೋಷ ಕ್ಕೇ ಸೀಮಿತವಾಗದೆ  ಜೀವನದಲ್ಲಿ ಬರುವ ವಯಸ್ಕರು ಅವರ   ಚಿತ್ರಗಳಲ್ಲಿ  ಸಂದೇಶಗಳನ್ನು ಹುಡುಕಲು  ಪ್ರಾರಂಭಿಸಿದಾಗ  ಬೇರೆ ಮಟ್ಟಕ್ಕೆ ಹೋಗುತ್ತವೆ.
 
ವೃತ್ತಾಕಾರದ ಆಕಾರಗಳು ತಲೆ ಅಥವಾ ಸೂರ್ಯ, ಅಥವಾ ಹೂಗಳಾಗಿ ಮಾರ್ಪಡುತ್ತವೆ. ಅಮ್ಮಂದಿರು, ಅಪ್ಪಂದಿರು, ಅಜ್ಜಿ ಮತ್ತು ಪೋಷಕರು ಅವರ ಗೀಚು ಕಲೆಗೆ, "ಇದೇನು ನಿನ್ನ ಅಮ್ಮನಾ?" "ಎಷ್ಟು ಚೆನ್ನಾಗಿದೆ ಈ ಹೂವು" ಎಂದು ಅರ್ಥ ಕಲ್ಪಿಸುತ್ತಾ ಹೋಗುತ್ತಾರೆ.
 
ವಯಸ್ಕರಿಗೆ ಪ್ರೋತ್ಸಾಹದ  ಮಾತುಕತೆ ಮತ್ತು ರೂಪಿಸುವ ಕಾರ್ಯದ ಮೂಲಕ, ಅವರ ಗೀಚು ಈಗ ಇತರರಿಗೆಗುರುತಿಸಬಹುದಾದ "ವಿಷಯಗಳಾಗಿ"  ಮಾರ್ಪಟ್ಟಿವೆ. ಇದು ಬರೆದ ಶಬ್ದಗಳು  ಸಹ ಅರ್ಥ ಸಂಕೇತ ಗಳು ಎಂಬ ಸಂಕೀರ್ಣ ಮತ್ತು ಅಮೂರ್ತ ವಿಚಾರದ  ಒಂದು ಪರಿಚಯವಾಗಿರುತ್ತದೆ.
 
ನಮ್ಮ ಮಕ್ಕಳು ತಾವು  ಮಾಡುವ ಗುರುತುಗಳು ಅರ್ಥಗಳನ್ನು ತಿಳಿಸುವ  ಶಕ್ತಿಯನ್ನು ಹೊಂದಿವೆ ಎಂದು  ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಾರೆ.
 
ಮುಂದಿನ ಪ್ರಮುಖ ಬೆಳವಣಿಗೆ ಎಂದರೆ  ಆ ಆಕೃತಿಗಳ "ಒಳಭಾಗ" ಮತ್ತು   "ಹೊರಭಾಗ" ಗುರುತಿಸುವ  ಸಾಮರ್ಥ್ಯ. ಒಳಗೆ ಹಾಕಿದ ಚುಕ್ಕಿಗಳು ಕಣ್ಣುಗಳು ಮತ್ತು ಮೂಗುಗಳು ಆಗುತ್ತವೆ ಮೇಲೆ ಚುಕ್ಕೆಗಳನ್ನು, ಹೊರಗಿನಿಂದ ಎಳೆದ ರೇಖೆಗಳು ತೋಳುಗಳು, ಕಾಲುಗಳು, ಸೂರ್ಯನ ಕಿರಣ ಮತ್ತು ಗಿಡದ  ಕಾಂಡಗಳು ಹಾಗು ಹೂವಿನ ದಳಗಳು ಆಗುತ್ತವೆ. ಇದೇ ಕೌಶಲ್ಯಗಳು  ಅವರ ವರ್ಣಮಾಲೆಯು ಬರವಣಿಗೆ ಸುಧಾರಿಸಲು ಅಗತ್ಯವಿದೆ.
ಮಕ್ಕಳ  ಜೀವನದಲ್ಲಿ ಬರುವ ವಯಸ್ಕರು ಪುಳಕಿತರಾಗುತ್ತಾರೆ ಮತ್ತು ಆ ಸಂತಸದ ಪ್ರತಿಕ್ರಿಯೆಗಳು  ಮಕ್ಕಳಿಗೆ ಭಾರಿ ಪ್ರೋತ್ಸಾಹ ನೀಡುತ್ತವೆ. ಅವರ ಚಿತ್ರಗಳನ್ನು ಹೊಗಳುತ್ತಾರೆ ಬಗ್ಗೆ ವಿವರ ಗೋಡೆಗಳ ಮೇಲೆ ಅಂಟಿಸುತ್ತಾರೆ ರೆಫ್ರಿಜರೇಟರ್ನಲ್ಲಿ ಬಾಗಿಲುಗಳಿಗೆ ಲಗತ್ತಿಸುತ್ತಾರೆ . ಆದ್ದರಿಂದ ಅವರು ಚಿತ್ರ ಬರೆಯುತ್ತಲೇ ಇರುತ್ತವೆ.
 
ನಾಲ್ಕು ವರ್ಷದ ಮಗುವಿನ ದೃಷ್ಟಿಕೋನದಿಂದ ನೋಡೋಣ :ಅಲ್ಲ   ಚಿತ್ರ ಬರೆಯುವುದರಲ್ಲಿ   ಇಷ್ಟಪಡದಿರುವಂತಹುದು ಏನಿದೆ ? ಇದು ಅವರ ಮನಸ್ಸಿಗೆ ಅಪಾರ  ಸಂತೋಷ ನೀಡುತ್ತದೆ, ಮತ್ತು ಇದು ಅವರ ಪ್ರೀತಿಪಾತ್ರರಿಗೆ ಖುಷಿ ಪಡಿಸುತ್ತದೆ, ಆದರೆ ಮಲಗುವ ಕೋಣೆ ಗೋಡೆಯ ಮೇಲೆ ಬರೀಬಾರದು ಅಷ್ಟೆ... 
 
 ಎಲ್ಲವೂ ಮಳೆಬಿಲ್ಲುಗಳು ಮತ್ತು ಹೂಗಳು ಅಲ್ಲ
 
 
Todd Sanders/Flickr, CC BY
 
ಐದು ಆರು ವರ್ಷ ವಯಸ್ಸಿನ ಮಕ್ಕಳು ಹೂಗಳು ಮತ್ತು ಮಳೆಬಿಲ್ಲುಗಳನ್ನು  ಬರೆಯಲು ಒಲವು ತೋರುತ್ತಾರೆ. ಏಕೆಂದರೆ  ಅವು ಬರೆಯಲು ಸುಲಭ ಆಕಾರಗಳು    
ನೀವು ದೇಶಾದ್ಯಂತ ಫ್ರಿಜ್ ಬಾಗಿಲುಗಳನ್ನು ಗಮನಿಸುತ್ತಾ ಬನ್ನಿ ಮಕ್ಕಳಿಗೆ ಮತ್ತು ಗೀಚು ಹೂಗಳು, ಸೂರ್ಯ,  ಮಳೆಬಿಲ್ಲುಗಳು ಮತ್ತು ಚೂಪು ಚಾವಣಿ ಮನೆಗಳ ಒಂದು ಗೀಳು ಉಂಟಾಗಿದೆ ಎಂದು ನೀವು ಭಾವಿಸಿದರೆ ಏನೂ  ತಪ್ಪಿಲ್ಲ.  . ಐದು ಮತ್ತು ಆರು ವರ್ಷ ವಯಸ್ಸಿನವರಿಗೆ ಅದೇ ಮುಗಿಯದ ಆಕರ್ಷಣೆ .
 
ಈ  ಎಲ್ಲಾ ಸರಳವಾದ ಆಕಾರಗಳು  ಬರೆಯಲು ಸುಲಭ ಮತ್ತು ಅವುಗಳ ಸ್ವರೂಪ ಎಲ್ಲರಿಗೂ ಗೊತ್ತಿರುವುದೇ   ಮತ್ತು  ಬಹಳ ಸುಲಭವಾಗಿ ಮೆಚ್ಚುಗೆ ಪಡೆಯಲು ಚೆನ್ನಾಗಿವೆ. ಅವನ್ನು ಬರೆಯುವುದರಿಂದ ಇತರರ ಮೆಚ್ಚುಗೆ ಮತ್ತು ಆಂತರಿಕ ಸಂತೋಷ ಪಡೆಯಬಹುದು
 
ಆದರೆ  ಐದು, ಆರು ಮತ್ತು ಏಳು ವರ್ಷ ವಯಸ್ಸಿನವರ ಚಿತ್ರಗಳನ್ನು  ಗಮನವಿಟ್ಟು ನೋಡಿದಾಗ   ಅವುಗಳಲ್ಲಿ   ಬಿಸಿಲು, ಲಾಲಿಪಾಪ್ಗಳನ್ನು ಮತ್ತು ಮಳೆಬಿಲ್ಲುಗಳಷ್ಟಕ್ಕೇ ಸೀಮಿತವಾಗಿರುವುದಿಲ್ಲ. ಅವರ ಚಿತ್ರಗಳಲ್ಲಿ ವಸ್ತುಗಳ ಪ್ರಮಾಣ ನಿಜ ಜೀವನದಲ್ಲಿ ವಸ್ತುಗಳ ಪ್ರಮಾಣಕ್ಕೂ ಏನೇನೂ ಸಂಬಂಧವರುವುದಿಲ್ಲ.   
 
ತಮ್ಮ  ಮೇಲೆ ಅಳಿಯದ ಪ್ರಭಾವ ಬೀರಿದ ವಸ್ತುಗಳ ಚಿತ್ರವನ್ನು ಕಾಗದದ ಮೇಲೆ ದೊಡ್ಡದಾಗಿ ಬರೆದಿರುತ್ತಾರೆ. ಆದ್ದರಿಂದ, ಹೊಕ್ಕುಳನ್ನು ಮತ್ತು ರೆಪ್ಪೆಗೂದಲುಗಳನ್ನು ಈ ಪುಟ್ಟ ಮಕ್ಕಳು ಚಿತ್ರಗಳಲ್ಲಿ ದೊಡ್ಡದಾಗಿ ಬರೆಯುತ್ತಾರೆ.
ಹೆಚ್ಚು ದುಃಖಕರವಾದ ಅಂಶವೆಂದರೆ, ಬಂಧನ ಕೇಂದ್ರಗಳ ಮಕ್ಕಳ ಚಿತ್ರಗಳಲ್ಲಿ ಬೇಲಿಗಳು ಮತ್ತು ಮುಳ್ಳುತಂತಿ ಬೇಲಿಗಳು ಪ್ರಮುಖವಾಗಿ ಸೂಚನೆಯಾಗಿ ಕಾಣುತ್ತವೆ.
 

ಏಳು ವರ್ಷ   ವಯಸ್ಸಿನ ಮಕ್ಕಳು ಮತ್ತೊಂದು ಚಿತ್ರಗಾರಿಕೆಯ ಮೈಲಿಗಲ್ಲು ತಲುಪುತ್ತಾರೆ.ಹಿಂದೆ ತಮ್ಮ ವಸ್ತುಗಳನ್ನು ಯಾದೃಚ್ಛಿಕವಾಗಿ ತೇಲಿ ಬಿಡುತ್ತಿದ್ದ ಮಕ್ಕಳು ಈಗ ಅವನ್ನು ತಮ್ಮ ಚಿತ್ರಗಳನ್ನು ಪುಟದಲ್ಲಿ ನಿಶ್ಚಿತ ಜಾಗದಲ್ಲಿ ಕೂರಿಸಲು ಪ್ರಾರಂಭಿಸುತ್ತಾರೆ.

 

ಅವರು ತಾವು ನೋಡಿದ  ಪ್ರಪಂಚವನ್ನು ಸುಮಾರು  ಸರಿಯಾಗಿ ಪ್ರತಿಬಿಂಬಿಸಲು ಪ್ರಯತ್ನಿಸಿ ಎಲ್ಲೆಗೆರೆಗಳನ್ನು ಬರೆಯುತ್ತಾರೆ ಮತ್ತು ತಳರೇಖೆ ಅದರಲ್ಲಿ , ಹಸಿರು ಹುಲ್ಲು ಮತ್ತು ನೀಲಿ ಆಕಾಶದ ರೇಖೆಯನ್ನು ಸಾಮಾನ್ಯವಾಗಿ ತೆಳು ಸಾಲುಗಳಲ್ಲಿ ಬರೆಯುತ್ತಾರೆ.

ಮಕ್ಕಳ ಏಕೆ ಚಿತ್ರ ಬರೆಯುವುದನ್ನುನಿಲ್ಲಿಸುತ್ತಾರೆ?

 

ಅವರು ಒಂಬತ್ತು ಅಥವಾ ಹತ್ತು ವರ್ಷದವರಾದಾಗ ಅನೇಕ ಮಕ್ಕಳಿಗೆ, ಚಿತ್ರಗಳ ರಚನೆಯಲ್ಲಿನ ಸಂಪೂರ್ಣ ಸಂತೋಷ ಕ್ರಮೇಣ ಮಾಯವಾಗಲು ಪ್ರಾರಂಭವಾಗುತ್ತದೆ. ಅವರು ಕಠಿಣವಾಗಿ ಸ್ವಯಂ ವಿಮರ್ಶೆಯ ಕಣ್ಣುಗಳ ಮೂಲಕ ತಮ್ಮ ಚಿತ್ರಗಳನ್ನು ನೋಡಲು ಆರಂಭಿಸುತ್ತಾರೆ. ಅವರು ನೈಜ ಜಗತ್ತನ್ನು  ಪ್ರತಿನಿಧಿಸಲು ಬಯಸುತ್ತಾರೆ ಮತ್ತು ಹಾಗೆ ಮಾಡಲು ತಮ್ಮಲ್ಲಿನ ಕೊರತೆಯನ್ನು ಗುರುತಿಸುತ್ತಾರೆ.

 

ಹಸಿರು ಹುಲ್ಲು ಬರೆದ ಒಂದು ಸಾಲಿನಲ್ಲಿ ಬರೆದ ಸುಂದರ ಹೂಗಳು ಇನ್ನು ಮುಂದೆ ಅವರಿಗೆ  ನಿಜವಾದದ್ದಾಗಿ   ಕಾಣುವುದಿಲ್ಲ. ಅವರು ಕೈಗಳೆಂದರೆ ಒಂದು ವೃತ್ತದಿಂದ ಎಳೆದ  ಐದು ಗೆರೆಗಳಲ್ಲ ಆದರೆ  ತಮಗೆ ನಿಜವಾದ ಕೈಗಳನ್ನು ಬರೆಯಲು ಸಾಧ್ಯವಿಲ್ಲ.ಎಂಬುದನ್ನು ಗುರಿತಿಸುತ್ತಾರೆ.

 

ಅವರ ಜೀವನದಲ್ಲಿ ಬರುವ ವಯಸ್ಕರು ಹಿಂದೆ ಒಮ್ಮೆ ಅವರು ಬರೆದ ಎಲ್ಲವನ್ನು  ಇಷ್ಟಪಡುತ್ತಿದ್ದವರು  ಈಗ ಕಡಿಮೆ ಒಲವನ್ನು ತೋರುತ್ತಾರೆ. ಶಾಲೆಯಲ್ಲಿ ಚಿತ್ರ ಬರೆಯಲು ಪ್ರೋತ್ಸಾಹಿಸುತ್ತಿದ್ದ ಶಿಕ್ಷಕರು ಇನ್ನು ಮುಂದೆ, ಅದಕ್ಕೆ ಪ್ರೋತ್ಸಾಹ ನಿಲ್ಲಿಸುತ್ತಾರೆ  - "ನಿಮ್ಮ ಬರವಣಿಗೆ ಕೆಲಸಗಳನ್ನು ಮುಗಿಸಿದ  ನಂತರ ನೀವು ಚಿತ್ರವನ್ನು ಬರೆಯಬಹುದು “ ಎನ್ನುತ್ತಾರೆ.

 

ನಮ್ಮ ಮಕ್ಕಳು ಚಿತ್ರ ಬರೆಯುವುದನ್ನು ಮುಂದುವರೆಸುವುದರ ವಿರುದ್ಧ ಎಲ್ಲವೂ ಪಿತೂರಿ  ನಡೆಸುತ್ತಿವೆ ಎನಿಸುತ್ತದೆ.

 

ನಾವು ಚಿತ್ರ ಬರೆಯುವುದನ್ನು ಕಲಿಸಬೇಕಾದ ಅಗತ್ಯವಿದೆ

 

"ನಾನು ಚೆನ್ನಾಗಿ ಬರೆಯಲಾರೆ" ಎಂದು  ನಮ್ಮ ಹತ್ತು ವರ್ಷ ವಯಸ್ಸಿನ ಮಗ ಚಿತ್ರ ಬರೆಯುವುದನ್ನು ನಿಲ್ಲಿಸಿದರೆ  ಅವನು ಅತ್ಯಂತ ಪ್ರಮುಖವಾದ ಕಲಿತುಕೊಳ್ಳುವ  ಸಾಧನವನ್ನು ಕಳೆದುಕೊಳ್ಳುತ್ತಾನೆ. ಅವನು. ರೇಖಾಚಿತ್ರರಚನೆಯ ಸಾಧನವನ್ನು  ತನ್ನ ಸೃಜನಶೀಲ ಮತ್ತು ಅಭಿವ್ಯಕ್ತಿಶೀಲ ಬತ್ತಳಿಕೆಯಿಂದ  ಕಳೆದುಕೊಂಡರೆ ಅದು ದೊಡ್ಡ ಅನನುಕೂಲವನ್ನು. ಉಂಟುಮಾಡುತ್ತದೆ,

 

ಡ್ರಾಯಿಂಗ್ (ರೇಖಾಚಿತ್ರರಚನೆ) ನಮಗೆ ಭಾವನೆಗಳನ್ನು ಮತ್ತು ಕಲ್ಪನೆಗಳನ್ನು ಪರೀಕ್ಷಿಸಲು ಮತ್ತು ಅದರೊಂದಿಗೆ ಆಡಲು ಅವಕಾಶ ನೀಡುತ್ತದೆ. ಇದು ಓದುವುದು, ಬರೆಯುವುದು ಮತ್ತು ಮಾತನಾಡುವ ಮೌಖಿಕ ಕೌಶಲ್ಯಗಳನ್ನು ಪೋಷಿಸುತ್ತದೆ.

 

ರೇಖಾಚಿತ್ರರಚನೆ ನಮ್ಮ ಸುತ್ತಲಿನ ಜಗತ್ತನ್ನು  ನಿಕಟವಾಗಿ ಗಮನಿಸುವುದಕ್ಕೆ ಸಾಧನವಾಗಿದೆ ನಾವು ಗಮನಿಸಿದ್ದನ್ನು ದಾಖಲು ಮಾಡಿ ಮತ್ತಷ್ಟು ವಿಚಾರಣೆಗೆ ಆಧಾರವಾಗಿ ಅದನ್ನು ಬಳಸುವ ಒಂದು ವಿಧಾನವಾಗಿದೆ. ನಾವು ಪರಿಕಲ್ಪನಾ ಸವಾಲುಗಳನ್ನು ಕುರಿತು ಕೆಲಸ ಮಾಡುವುದಕ್ಕೆ ಇದು ನಮ್ಮ ಆಂತರಿಕ ಸಂಭಾಷಣೆ ಪ್ರಮುಖ ಅಂಗವಾಗಬಲ್ಲದು.

 

ಡ್ರಾಯಿಂಗ್ ಒಂದು ಕಲಿತ ಕಲೆಯಾಗಿದೆ; ಹೇಳಿಕೊಟ್ಟು ಅದನ್ನು  ಸುಧಾರಿಸಬಹುದು. ಹೀಗಿದ್ದರೂ ನಾವು ಮಕ್ಕಳಿಗೆ ಸೂಚನೆಯ ರೇಖಾಚಿತ್ರ ರಚನೆ ಪಾಠ ಹೇಳಿಸಲು ಮನಮಾಡುವುದಿಲ್ಲ. ನಾವು ಮಧ್ಯೆ ಪ್ರವೇಶಿಸಿ  ರೇಖಾಚಿತ್ರ ರಚನೆ ಪಾಠ ಹೇಳಿಕೊಟ್ಟರೆ ನಾವು ಸೃಜನಶೀಲತೆ ಚಿವುಟಿಹಾಕುತ್ತೇವೆ ಎಂಬ ಒಂದು ತಪ್ಪಾದ  ಭಯ ಇರುತ್ತದೆ.

 

ಆದರೆ ವಾಸ್ತವಸಂಗತಿ ಏನೆಂದರೆ  ಬಹಳಷ್ಟು ಮಕ್ಕಳು ಕೇವಲ ತಮಗೆ ಯಾವುದೇ ಬೋಧನೆ ದೊರೆಯಲಿಲ್ಲ ಎಂಬ ಕಾರಣಕ್ಕೆ ಡ್ರಾಯಿಂಗ್ ಬಿಟ್ಟುಬಿಡುತ್ತಾರೆ .

 

ಇದು ಮೇರುಕೃತಿಗಳು ಸೃಷ್ಟಿಸುವ ಬಗ್ಗೆ ಅಲ್ಲ

 

ಎಲ್ಲಾ ಮಕ್ಕಳು ಮಹಾನ್ ಕಾದಂಬರಿಕಾರರು ಆಗುವುದಿಲ್ಲ  ಆದರೂ ನಾವು ಅವರಿಗೆ ಬರೆಯುವ ಕೌಶಲಗಳನ್ನು ಕಲಿಸುತ್ತೇವೆ.

 

ಮಕ್ಕಳು ವೃತ್ತಿಪರ ಬರಹಗಾರರು ಆಗುವ ಸಾಧ್ಯತೆಗಿಂತ  ಬರವಣಿಗೆಯ ಪ್ರಯೋಜನಗಳ ಸಾಧ್ಯತೆ ಇನ್ನೂ  ಹೆಚ್ಚುಯಿದೆ ಎಂಬುದನ್ನು  ನಾವು ಅರಿತಿದ್ದೇವೆ.

ಆದ್ದರಿಂದ ಎಲ್ಲಾ ಮಕ್ಕಳು ಮಹಾನ್ ಕಲಾವಿದರು ಆಗ ಲಾರರು ಆದರೂ ನಾವು ಅವರಿಗೆ ಚಿತ್ರ ಕೌಶಲಗಳನ್ನು ಕಲಿಸಲು ತಪ್ಪಬಾರದು.

 

ಅವರು ವೃತ್ತಿಪರ ಕಲಾವಿದರು  ಆಗಲಿ ಬಿಡಲಿ ನಾವು ಚಿತ್ರ ರಚನಾ ಕೌಶಲ್ಯದ ಪ್ರಯೋಜನಗಳ ಸಾಧ್ಯತೆ ಅದಕ್ಕಿಂತ ತುಂಬಾ ಹೆಚ್ಚು ಎಂಬುದನ್ನು   ಅರ್ಥ ಮಾಡಿಕೊಳ್ಳಬೇಕು.

________________________________________


Misty Adoniou wrote this article in The Conversation.

 

 
 
19210 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು