ಮಕ್ಕಳಿಗೆ ಸಂಬಂಧಿಸಿದ ಕಥೆಗಳು

ಹಳ್ಳಿಯ  ಮಕ್ಕಳು ಹೊಸ ಭಾಷೆ ಕಲಿಯುವುದಕ್ಕೂ  ನಗರದ  ಮಕ್ಕಳು ಹೊಸ ಭಾಷೆ ಕಲಿಯುವುದಕ್ಕೂ ವ್ಯತ್ಯಾಸವಿದೆಯೇ?

ಒಂದು ಭಾಷೆಯನ್ನು  ಕಲಿಯುವುದಕ್ಕೂ  ಮಗುವಿನ ಸುತ್ತಮುತ್ತಲಿನ ಪರಿಸರ ಮತ್ತು  ಅದು ಪರಸ್ಪರ ಒಡನಾಡುವ  ಜನರ ಕೊಳ್ಕೊಡೆಗೂ  ಬಹಳಷ್ಟು ಸಂಬಂಧವಿರುತ್ತದೆ. ಈ ಹಿನ್ನೆಲೆಯಲ್ಲಿ ನೋಡಿದಾಗ  ಇದು  ಹಳ್ಳಿಯ ಮಕ್ಕಳು  ಸಮೃದ್ಧ  ಪ್ರಕೃತಿ ಸಂವೇದನಾ ಹೊಂದಿರುತ್ತಾರೆಎಂದು ಗಮನಿಸಲಾಗಿದೆ. ಅವರು ಮರಹತ್ತಿ ಕುಣಿಯುತ್ತಾರೆ , ಕೊಳಗಳಲ್ಲಿ ಈಜುತ್ತಾರೆ  ಸಾಕುಪ್ರಾಣಿಗಳ, ಜೊತೆ ಆಡುತ್ತಾರೆ. ಹೊಲಗದ್ದೆಗಳಲ್ಲಿ  ಕೆಲಸ ಮಾಡುತ್ತಾರೆ,  ಅಜ್ಜಿ ಕಥೆಗಳನ್ನು  ಕೇಳುತ್ತಾರೆ  ಅನೇಕ ಹಾಡುಗಳನ್ನು ಹಾಡುತ್ತಾರೆ  ಮತ್ತು ನಗರದ ಮಕ್ಕಳು ಕನಸು ಕಾಣಲೂ  ಸಾಧ್ಯವಿಲ್ಲದ ಇತರ ಚಟುವಟಿಕೆಗಳನ್ನು ಮಾಡುತ್ತಾರೆ. ಈ ನಿರಾತಂಕ  ಪರಿಸರ, ದೊಡ್ಡವರ ತೀರ ಮೇಲ್ವಿಚಾರಣೆ ಇಲ್ಲದ ಮತ್ತು ಟಿವಿ ನೋಡುವ ಮತ್ತು ಕಂಪ್ಯೂಟರ್ ಆಟಗಳು ಆಧುನಿಕ ಗೀಳು ಇಲ್ಲದೆ, ಈ ಮಕ್ಕಳ “ಹೊರಾಂಗಣ ತಿಳಿವಳಿಕೆಯಲ್ಲಿ “ ಬಲು ಬುದ್ಧಿವಂತರಿರುತ್ತಾರೆ   ಆದರೆ ಏಕೆ ಇವರಲ್ಲಿ ಅನೇಕರು ಶಾಲೆಯಲ್ಲಿ ತೀರ ಕಡಿಮೆ ಪ್ರಗತಿ ತೋರುತ್ತಾರೆ?

 

ಶಿಕ್ಷಕರು ಇಂತಹ ವಿದ್ಯಾರ್ಥಿಗಳಿಗೆ ಕಲಿಕೆಯು ಹೆಚ್ಚು ಪರಿಣಾಮಕಾರಿ ಮತ್ತು ಪ್ರೇರೇಪಕವಾಗಿ ಹೇಗೆ ಮಾಡಬಹುದು? ಇದು ಆಗುವಂತೆ  ಮಾಡಲು, ಶಿಕ್ಷಕರು ಈ ಮಕ್ಕಳು ಈಗಾಗಲೇ ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೊಂದಿರುವ  ಅವರ ಜ್ಞಾನದ  ಆಧಾರದ ಮೇಲೆ ಕಲಿಕೆಯನ್ನುರಚಿಸ ಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನೋಡಿದಾಗ, ಹಳ್ಳಿಯ  ಮಕ್ಕಳು ವಿದೇಶಿ ಶಬ್ದಕೋಶ, ಕವನಗಳು ಮತ್ತು ಕಥೆಗಳನ್ನು  ಪರಿಚಯಿಸುವ ಪಾಠಗಳಿಗಿಂತ  ತಮಗೆ  ಪರಿಚಿತ ವಿಷಯಗಳನ್ನು  (ಜನಪದ ಕಥೆಗಳು, ಪುರಾಣ ಕಥೆಗಳು, ಸರಳ ನಿರೂಪಣೆ ಮತ್ತು ಕವನಗಳು, ಗ್ರಾಮೀಣ ಜೀವನ ಮತ್ತು ವಸ್ತುಗಳ ಶಬ್ದಕೋಶವನ್ನು)

ಹೊಂದಿರುವ ಪಾಠಗಳನ್ನು ಉಳ್ಳ ಪಠ್ಯಪುಸ್ತಕಗಳನ್ನು ಇದು ತಮ್ಮದು ಎಂಬಂತೆ ಭಾವಿಸಿ ಕಲಿಯುತ್ತಾರೆ. ಹಳ್ಳಿಯ  ಮಕ್ಕಳು ಕೆಟ್ಟ ಗಾಳಿ,  ಉಸಿರುಕಟ್ಟಿಕೊಳ್ಳುವ ಇಕ್ಕಟ್ಟಿನ ಶಾಲಾ ಕೊಠಡಿಗಳಲ್ಲಿ ಪಾಠ ಕೇಳುವುದಕ್ಕಿಂತ ಪ್ರಕೃತಿಯ ಮಡಿಲಲ್ಲಿ ಪಾಠ ಕಲಿಯುವುದು ಹೆಚ್ಚು ಆರಾಮದಾಯಕ  ಎಂದು ಭಾವಿಸುವುದರಿಂದ ಹೊರಾಂಗಣದಲ್ಲಿ ಪಾಠಮಾಡುವುದು ಮತ್ತು ಅಧ್ಯಯನ ಓಡಾಟಕ್ಕೆ  ಅಥವಾ  ಕಿರು ಪ್ರವಾಸಕ್ಕೆ ಕರೆದೊಯ್ಯುವುದು ಉತ್ತಮ.

ಆದ್ದರಿಂದ ಶಿಕ್ಷಕರು ಪರಿಚಿತ ವಿಷಯಗಳಿಂದ ಅಪರಿಚಿತ ವಿಷಯದ ಕಡೆಗೆ  ಪ್ರಯಾಣವನ್ನು  ಪ್ರಯತ್ನಿಸಿನೋಡುವುದು ಲಾಭದಾಯಕ ಮತ್ತು  ತಮ್ಮ ವಿದ್ಯಾರ್ಥಿಗಳ ನಿಕಟ  ಪರಿಸರವನ್ನು ಆಧರಿಸಿ ಪಾಠ ಯೋಜನೆಗಳು ರಚಿಸಬೇಕು  ನಂತರ ಪೂರಕವಾಗಿ ಸೂಕ್ತ ಕಥೆಗಳು ಮತ್ತು ಹಾಡುಗಳನ್ನು ಆಯ್ಕೆ ಮಾಡಿಕೊಳ್ಳ ಬೇಕು .

ಇದು ಆಗುವಂತೆ  ಮಾಡಲು  ಬಳಸಲಾದ ಕೆಲವು ತಂತ್ರಗಳನ್ನು ಈ ಲೇಖನದಲ್ಲಿ  ವಿವರಿಸಲಾಗಿದೆ.

 

ಸುಪ್ತ ಸಂಪತ್ತು

ಒಂದೂರಿನಲ್ಲಿ  ಒಬ್ಬ  ಚಿಕ್ಕ , ಅತೃಪ್ತ  ಹುಡುಗಿ ವಾಸಿಸುತ್ತಿದ್ದಳು . ಆವಳ ಹೆಸರು ಮಾಲ. ಅವಳೇನೋ  ಬಹಳ ಮುದ್ದಾಗಿ ಮತ್ತು ಬುದ್ದಿವಂತಳಾದ ಹುಡುಗಿ ಆದರೆ ಬಲು ಸೋಂಬೇರಿ . ಅವಳು ಇಡೀ ದಿನ ಮಲಗಿರುತ್ತಿದ್ದು  ತನ್ನ ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ಧಳು  ಮತ್ತು  ಯಾವುದರ ಬಗ್ಗೆಯೂ ಅವಳಿಗೆ  ಆಸಕ್ತಿ ಇರಲಿಲ್ಲ. ಅವಳಿಗೆ ಹಳ್ಳಿಯ ಮಕ್ಕಳ ಜೊತೆ ಓಡಾಡಿಕೊಂಡು  ಆಟ ಆಡಲು ಇಷ್ಟವಾಗುತ್ತಿರಲಿಲ್ಲ; ಅವಳು  ಶಾಲೆಯನ್ನು ದ್ವೇಷಿಸುತ್ತಿದ್ದಳು  ಮತ್ತು ಅವಳಿಗೆ  ಯಾವುದೇ ಸ್ನೇಹಿತರು ಇರಲಿಲ್ಲ. ತನ್ನ ಸುಕ್ಕುಗಟ್ಟಿದ ಮುಖದ ಅಜ್ಜಿ, ತನ್ನ ಮುದಿ ಅಜ್ಜ, ತನ್ನ ಪ್ರೀತಿಯ ತಾಯಿ, ತನ್ನ ಕಟ್ಟುನಿಟ್ಟಿನ  ತಂದೆ ಮತ್ತು ಚೋಟು ಮತ್ತು ಮೊಟು ಎಂಬ ತನ್ನ ಎರಡು ಚಿಕ್ಕ ತುಂಟ ತಮ್ಮಂದಿರ ಜೊತೆಯಲ್ಲಿ  ವಾಸಿಸುತ್ತಿದ್ದಳು . ಮಾಲಾ ಹೀಗೆ ಸದಾ ದುಃಖದಿಂದಿರುವುದು ಕಂಡು  ಆಕೆಯ ತಂದೆತಾಯಿ  ಆತಂಕಿತರಾಗಿದ್ದರು ಮತ್ತು ಗ್ರಾಮದ ದೇವಸ್ಥಾನಕ್ಕೆ ಹೋಗಿ ಅವಳ ಒಳಿತಿಗಾಗಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದರು..

                "ದೇವರೇ ನಮ್ಮಪ್ಪ, ನಮ್ಮ  ಮಾಲಾ ಸಂತೋಷದಿಂದಿರಲು  ಸಹಾಯ ಮಾಡು  ಅವಳು ದುಃಖದಲ್ಲಿದ್ದರೆ  ನಾವೂ ದುಃಖ ಪಡುತ್ತೇವೆ ಮತ್ತು ಅವಳು ತನ್ನ ಶಾಲೆಗೆ  ತಪ್ಪಿಸಿಕೊಂಡರೆ  ದಡ್ಡಿ ಆಗುತ್ತಾಳೆ. "

ಒಂದು ಅಮವಾಸ್ಯೆ ರಾತ್ರಿ, ಮಾಲಾ ನಿದ್ದೆ ಮಾಡುತ್ತಿರುವಾಗ  ಉದ್ದನೆಯ ಗಡ್ಡದ ಒಬ್ಬ ಮಾಂತ್ರಿಕ ಅವಳ ಮನೆಗೆ ಬಂದು ಅವಳನ್ನು ಎಬ್ಬಿಸುತ್ತಾನೆ.

                 "ಹೇ, ಮಾಲಾ!" ಅವರು ಜೋರಾಗಿ ಕರೆದು   " ಏನು ಮಾಡಿದರೆ  ನಿನಗೆ ಸಂತೋಷ ಆಗುತ್ತದೆ?" ಎಂದು ಕೇಳಿದರು. ಆ ಚಿಕ್ಕ ಹುಡುಗಿ ಒಂದಿಷ್ಟು  ಆಲೋಚಿಸಿ ನಿದ್ದೆಗಣ್ಣಿನಲ್ಲಿ ಉತ್ತರಿಸಿದಳು,

"ಸಂಪತ್ತು ಸಿಗಬೇಕು!"

" ನಾನು ಹೇಳಿದಹಾಗೆ  ನೀನು ಮಾಡಿದರೆ ನಾನು ನಿನಗೆ ಸಂಪತ್ತು  ಪಡೆಯಲು ಸಹಾಯ ಮಾಡುತ್ತೇನೆ," ಎಂದ ಆ  ಮಾಂತ್ರಿಕ "

"ನಾನು ಖಂಡಿತವಾಗಲೂ ಮಾಡ್ತೀನಿ," ಹುಡುಗಿ ಖುಷಿಯಾಗಿ ಹೇಳಿದಳು.ನಿದ್ದೆ ಸಂಪೂರ್ಣವಾಗಿ ಮಾಯವಾಗಿತ್ತು.

"ಸರಿ ಹಾಗಿದ್ರೆ  ನಾನು ನಿನಗೆ ಒಂದು ಮಾಂತ್ರಿಕ ಶಕ್ತಿಯನ್ನು ನೀಡುತ್ತೇನೆ ಇದು ದಾರಿಯಲ್ಲಿ ಎಲ್ಲಾ ಕಳ್ಳರು ಮತ್ತು ದುಷ್ಟ ರಿಂದ ನಿನ್ನನ್ನು ರಕ್ಷಿಸುತ್ತದೆ! ಆದರೆ  ಈ  ಕೆಲಸ ಕಷ್ಟದ್ದು ಅದನ್ನು ನೀನು ಮಾಡಿ ಮುಗಿಸಲೇಬೇಕಾಗುತ್ತದೆ! " ಎಂದು ಮಾಂತ್ರಿಕ ಎಚ್ಚರಿಕೆ ಮಾತನ್ನು ಆಡಿದನು ಮತ್ತು ತನ್ನ ಗೊಗ್ಗರು ಗಂಟಲಿನಿಂದ ಮಾಲಾಳ ಕಿವಿಯಲ್ಲಿ  ಏನೋ ಪಿಸುಗುಟ್ಟಿದನು.

 

ಮರುದಿನ ಮುಂಜಾನೆ, ಮಾಲಾ ಒಂದು ದೀರ್ಘ ಪ್ರಯಾಣಕ್ಕೆ ಹೊರಟಳು. ಆಕೆ ಅತ್ಯಂತ ಉತ್ಸಾಹ ಮತ್ತು ಉಲ್ಲಾಸದಿಂದ ಇದ್ದಳು! ಅವಳು, ಐದು ಭೋರ್ಗರೆಯುವ ನದಿಗಳ ಮೂಲಕ ಹಾದು ಹೋಗಿ ಮೂರು ದಟ್ಟವಾದ ಅರಣ್ಯಗಳನ್ನು ದಾಟಬೇಕಿತ್ತು. ಅಲ್ಲಿಂದ  ಏಳು ಸಣ್ಣ ಹಳ್ಳಿಗಳ ಮೂಲಕ ಹಾದು ಹೋಗಬೇಕಿತ್ತು  ಅದಕ್ಕಾಗಿ  ಸುತ್ತು ಬಳಸಿನ ಮಾರ್ಗಗಳಲ್ಲಿ ಕೆಳಗೆ ಹೋಗಿ ಕಡಿದಾದ, ಮೊನಚಾದ ಪರ್ವತ ಏರಬೇಕಾಗಿತ್ತು. ಒಮ್ಮೆ ಮೇಲೆ, ಏರಿದ ಮೇಲೆ  ಆಕೆ  ಒಂದು ದೊಡ್ಡ ಗುಹೆ ಹುಡುಕ ಬೇಕಾಗಿತ್ತು ಮತ್ತು ಅದರೊಳಗೆ ಹೋಗಬೇಕಾಗಿತ್ತು . ಅಷ್ಟೆಲ್ಲಾ ಸಾಹಸ ಮಾಡಿ  ಏದುಸಿರು ಬಿಡುತ್ತಾ ಬಂದರೆ  ಮತ್ತು ಗುಹೆ ಪ್ರವೇಶ ದ್ವಾರದಲ್ಲಿ  ಒಂದು ದೈತ್ಯಾಕಾರದ  ಭಯಾನಕ ಕಪ್ಪು ಕರಡಿ ಪ್ರವೇಶದ್ವಾರವನ್ನು ಕಾಯುತ್ತಿತ್ತು, ಕಂಡುಬಂದಿಲ್ಲ.

 

" ಏನಪ್ಪಾ ಮಾಡಲಿ ನಾನು?" ಎಂದು ಮಾಲಾ ಹತಾಶೆಯಲ್ಲಿ ಕೂಗಿದಳು.

                “ಎಲ್ಲೋ ಮೇಲುಗಡೆ  ಆಕಾಶದಲ್ಲಿ ಮಾಂತ್ರಿಕ  “ಹೋರಾಡಿ ಓಡಿಸು” ಎಂದು ಉತ್ತರಿಸಿದನು. ಮಾಲಾ ಅವನನ್ನು ನೋಡಲು ಸಾಧ್ಯವಾಗಲಿಲ್ಲ. ಆದರೆ ಅವನ ಧ್ವನಿ ಅವಳಿಗೆ ಧೈರ್ಯ ನೀಡಿತು. ಅವಳು ನಿಜವಾದ ವೀರರಂತೆ ಸಾಹಸದಿಂದ ಕರಡಿ ಜೊತೆ ಹೋರಾಡಿ ಅದನ್ನು ದಾರಿಯಿಂದ  ಹೊರಗೆ ಓಡಿಸಿದಳು ಮತ್ತು ಗುಹೆಯನ್ನು  ಪ್ರವೇಶಿಸಿದಳು. ಮಾಂತ್ರಿಕ  ಶಕ್ತಿ ಗಾಯಗಳಿಂದ ರಕ್ಷಣೆ ನೀಡಿತು. ಗುಹೆ ಒಳಗೆ ಅವರು ಒಂದು ದೊಡ್ಡ ಮರದ ಪೆಠಾರಿಯನ್ನು ಕಂಡಳು ಮತ್ತು ತೆರೆದಳು.ಅದರ ಒಳಗೆ ಒಂದು ಸಣ್ಣ ಮರದ ಪೆಟ್ಟಿಗೆ ಇತ್ತು. ಅದನ್ನು ತೆರೆದಾಗ, ದಾರ ಪೋಣಿಸಿದ ಒಂದು ಬಟ್ಟೆ ಚೀಲ ಕಂಡುಬಂದಿತು. ಅವರು ದಾರದ ಗಂಟು ಬಿಚ್ಚಿ ನೋಡಿದಾಗ ಒಂದು ಗುಂಡಗಿನ ಚಿನ್ನದ ಪೆಟ್ಟಿಗೆ ಇತ್ತು. ಅವಳು ಅದನ್ನು ತೆರೆದಳು ! ಅಲ್ಲಿ ಒಂದು ಸಣ್ಣ ವಜ್ರದ ಕೀಲಿ ಕೈ ಇತ್ತು.

                "ಅಬ್ಬ! ವಜ್ರದ ಕೀಲಿ ಕೈ! ಯಾತಕ್ಕೆ ಬಳಕೆಯಾಗುತ್ತೆ ಇದು?” ಸುತ್ತ ತೆರೆಯಲು ಯಾವುದೇ ಇತರ ವಸ್ತು ಇರಲಿಲ್ಲ .ಮಾಲಾ ಆಶ್ಚರ್ಯ ಪಟ್ಟಳು. ಇದ್ದಕ್ಕಿದ್ದಂತೆ ಮಾಂತ್ರಿಕನ  ಧ್ವನಿ ಪ್ರತಿಧ್ವನಿಸಿತು,

                "ಈ ಕೀಲಿಕೈ ಸಂತೋಷದ ಬಾಗಿಲು ತೆರೆಯುತ್ತದೆ. , ಮಾಲಾ ಇದನ್ನು ಬಳಸು ಮತ್ತು ನೀನು ಸಂತೋಷವಾಗಿರುತ್ತೀಯಾ! "  ಮಾಲಾ ದುಃಖವನ್ನು  ಬಿಟ್ಟಳು ಬಲು ಸಂತಸದಿಂದ  ಮುಗುಳ್ನಕ್ಕಳು! ಆ ಗವಿಗೆ ಬರಲು ಇಷ್ಟೆಲ್ಲ ಕಷ್ಟಪಟ್ಟರೂ ಅವಳಲ್ಲಿ ಸಂತಸ ತುಂಬಿ ತುಳುಕಾಡಿತು.

                "ನಾನು  ಇಷ್ಟೊಂದು ಶ್ರಮ ಪಟ್ಟರೂ ಈ ಕಷ್ಟದ ಕೆಲಸದಿಂದ  ನನ್ನಲ್ಲಿ  ಕಿರುನಗೆ ಮೂಡುತ್ತಿದೆಯೇ ಹೊರತು ವಜ್ರದ ಕೀಲಿಯಿಂದ ಅಲ್ಲ. ಎಂದು! ಭಾವಿಸುತ್ತೇನೆ" ಅವಳು ಹೇಳಿದರು " ನನ್ನಲ್ಲಿ ಈಗಾಗಲೇ ನನ್ನ ಸಂತೋಷದ ಬಾಗಿಲು ತೆರೆದಿದೆ! ನಾನು ವಜ್ರದ ಕೀಲಿಯನ್ನು  ಮತ್ತೊಂದು ಸೊಂಬೇರಿ ಮಗುವಿಗೆ ಇಲ್ಲೇ ಇಡುತ್ತೇನೆ! ಮತ್ತು  ಯಾರಿಗೆ ಗೊತ್ತು ಇಲ್ಲಿ ಬರುವ ಮೂಲಕ , ಅವನು ಅಥವಾ ಅವಳು ಬದಲಾಯಿಸಬಹುದು! " ಹೀಗೆ ಹೇಳುತ್ತ, ತನ್ನ ಹಳ್ಳಿಗೆ ಹಿಂದುರುಗಿದಳು ಮತ್ತು ಸಕ್ರಿಯ ಚಟುವಟಿಕೆ ನಿರತಳಾದಳು. ಅವಳು ಚೆನ್ನಾಗಿ ಜನರೊಡನೆ ಬೆರೆತು ಆಟ ಆಡುತ್ತಿದ್ದಳು, ಓದಿದಳು ಮತ್ತು ಅವಳಿಗೆ ಅನೇಕ ಗೆಳೆಯರಿದ್ದರು,

             ಎಲ್ಲರು   "ನಮ್ಮ ನಗೆಮೊಗದ ಮಾಲಾ-ಅಕ್ಕ!"ಎಂದು ಅವಳನ್ನು ಕರೆಯಲಾರಂಭಿಸಿದರು.

                

 ಅಭ್ಯಾಸ

ಕಥೆಗಾರ ತಮಿಳುನಾಡಿನ ಒಂದು ಗ್ರಾಮ ಅಧ್ಯಯನ ಕೇಂದ್ರದಲ್ಲಿ ವಯಸ್ಸಿನ 11-12 ಮಕ್ಕಳು ಒಂದು ಅಧಿವೇಶನ ನಡೆಸಲು “ಸುಪ್ತ ಸಂಪತ್ತು' ಎಂಬ ಕಥೆಗೆ ಬಳಸಿದರು. ಕಥೆ ಹೇಳುವ ಮುಂಚೆ ಅಲ್ಲಿ ಪೂರ್ವಸಿದ್ಧತಾ ಚಟುವಟಿಕೆ ಮಾಡಲಾಯಿತು. ಮಕ್ಕಳು ತರಗತಿಯ ಹೊರಗೆ, ಒಂದು ಮರದ ಕೆಳಗೆ ಕುಳಿತು ತಮಿಳಿನಲ್ಲಿ ಹಾಡನ್ನು ಹಾಡಿದರು. ಇವರಲ್ಲಿ  ಅನೇಕರು  ಏನೋ ಎಂತೋ ಎಂದು ಆತಂಕದಿಂದ  ನೋಡುತ್ತಿದ್ದರು ಅವರನ್ನು ನಿರಾಳಗೊಳಿಸಲು ಹಾಗೆ ಮಾಡಲಾಯಿತು. ಒಮ್ಮೆ ಮಕ್ಕಳು  ಚೆನ್ನಾಗಿ ನಿರಾಳ ಆದ ಮೇಲೆ  ಸುಗಮಕಾರನು  ಅವರಿಗೆ ತಮ್ಮ ತಮ್ಮ ಹೆಸರುಗಳನ್ನು ಹೇಳುವ ಮೂಲಕ ತಮ್ಮನ್ನು ಪರಿಚಯಿಸಲು ಅವರನ್ನು ಕೇಳಿದರು ಮತ್ತು ಅವರಿಗೆ ಏನು ಇಷ್ಟ ಎಂಬುದನ್ನು ಅಭಿನಯದ ಮೂಲಕ ತೋರಿಸಲು ಕೇಳಿದರು.

 ಕಥೆ ಹೇಳುವ ಮುನ್ನ

ಅಧಿವೇಶನ ಮುಂದಿನ ಹಂತದಲ್ಲಿ  ಕಥೆ ಹೇಳುವ ಮುನ್ನ ಚಟುವಟಿಕೆಗಳನ್ನು ನಡೆಸಿದೆ ಮತ್ತು ಮಕ್ಕಳನ್ನು  ಒಂದು ಹುಲ್ಲಿನ ಚಾವಣಿ ತರಗತಿಯಿಂದ ಹೊರಗಿನ ಒಂದು ಉದ್ಯಾನ ಕ್ಕೆ ಕರೆ ತರಲಾಯಿತು.  ಇದರ  ಉದ್ದೇಶ ಕಥೆಯಲ್ಲಿ  ಕಂಡುಬರುವ ವಸ್ತುಗಳು, ಕಲ್ಪನೆಗಳು ಅಥವಾ ಪದಗಳನ್ನು ಕೆಲವು ವಿದ್ಯಾರ್ಥಿಗಳಿಗೆ ಪರಿಚಯ ಮಾಡುವುದು. 'ಬಾಕ್ಸ್ನಲ್ಲಿ ಇಲ್ಲಿದೆ?'  ಎಂಬ ಒಂದು ಚಟುವಟಿಕೆ ಮಾಡಲಾಯಿತು. ಮಿನಿ ನಿಧಿ ಪೆಟ್ಟಿಗೆ ಹೋಲುವ ಒಂದು ಸಣ್ಣ ಮರದ ಬಾಕ್ಸ್ ತರಲಾಯಿತು ಸೇಫ್ಟಿ ಪಿನ್ನು, ಕೀಲಿಕೈ, ಎರೇಸರ್, ಬಟನ್ ಇತ್ಯಾದಿ ಸಣ್ಣ ವಸ್ತುಗಳನ್ನು ಅದರಲ್ಲಿ ಇಡಲಾಯಿತು ... ಮತ್ತು ಮಕ್ಕಳು ಪೆಟ್ಟಿಗೆಯಲ್ಲಿ, ಏನು ಇದೆ ಊಹಿಸಲು ಹೇಳಲಾಯಿತು "ಬಾಕ್ಸ್ನಲ್ಲಿ  ಒಂದು ಪಿನ್ ಇದೆಯೇ?" ಕೇಳುವ ಮೂಲಕ ಪ್ರಶ್ನೆಗೆ ಉತ್ತರ ಪಡೆಯಬೇಕಿತ್ತು.ಸುಗಮ ಕಾರ"ಹೌದು, ಒಳಗೆ ಒಂದು ಪಿನ್ ಇದೆ"   ಪಿನ್ ಒಳಗೆ ಇಲ್ಲದಿದ್ದರೆ, ಸುಗಮ ಕಾರ, ಮತ್ತು ಆದರೂ, ಒಂದು ಪಿನ್, ಅವರು ನಾನು "ಹೇಳಿದರು ಮೀ ಕ್ಷಮಿಸಿ, ಒಳಗೆ ಒಂದು ಪಿನ್ ಅಲ್ಲ! "ಪರಿಕಲ್ಪನೆಯನ್ನು, ಪ್ರಶ್ನಿಸುವುದು ಕೌಶಲ್ಯಗಳನ್ನು ಸುಧಾರಿಸಲು ನಿರ್ದಿಷ್ಟ ಭಾಷೆ ರಚನೆಗಳನ್ನು ಮನದಟ್ಟು ಮಾಡಿಸಲು ಮತ್ತು ವಿದ್ಯಾರ್ಥಿಗಳಿಗೆ ಕಥೆಯ ಒಂದು ಅಥವಾ ಎರಡು ಅಂಶಗಳನ್ನು ಪರಿಚಯಿಸಲು ಒಂದು ಸಣ್ಣ ಆಟ ಆಗಿತ್ತು.

ಕಥೆ ಹೇಳುವುದು

ಕಥೆ ಸುಪ್ತ ಸಂಪತ್ತು  ಕಥೆಯನ್ನು ಸೂಕ್ತ ಸ್ಥಳಗಳಲ್ಲಿ ಕಥೆ ನಿಲ್ಲಿಸಿ ಪಠಿಸುವುದು, ಭಾವಾಭಿನಯ, ಪುನರಾವರ್ತನೆಗಳು, ದ್ವಿಭಾಷಿಕ ಅನುವಾದಗಳು ಮತ್ತು ಧ್ವನಿ ಸಮನ್ವಯತೆ ಜೊತೆ ನಿರೂಪಿಲಾಯಿತು? ಅಲ್ಲಲ್ಲಿ ಅಜ್ಜಿ ಗೆ ಗೂನು ಬೆನ್ನಿತ್ತೆ ? ಮಾಲಾ ಪೋಷಕರು ನೋಡಲು ಹೇಗಿದ್ದರು ರಾತ್ರಿ ಯಲ್ಲಿ ಮಾಲಾ ಕೊಠಡಿಗೆ ಏನು ಬಂದಿತು? ಇಂತಹ ಪ್ರಶ್ನೆಗಳನ್ನು ಕೇಳಲಾಯಿತು. ಈ ಮಕ್ಕಳ ವಿಷಯ ಗ್ರಹಣೆ ಮಟ್ಟವನ್ನು ಅಳೆಯಲು ಹಾಗೆ ಮಾಡಲಾಯಿತು. ಕಥೆಯ ಭಾಗಗಳನ್ನು ಅರ್ಥ ಮಾಡಿಸಲು ಅಲ್ಲಿನ ಕ್ರಿಯೆಗಳನ್ನು ಮಾಡುವ ಅಥವಾ ದೃಶ್ಯ ಕೆಲವು ನೈಜ ವಸ್ತುಗಳನ್ನು ಪಡೆಯುವ ಮೂಲಕ ನಿಧಾನವಾಗಿ ಅವುಗಳನ್ನು ಮತ್ತೆ ಹೇಳಲಾಯಿತು. ಕೆಲವೊಮ್ಮೆ ಸಮುದಾಯ ಸಂಯೋಜಕರನ್ನು ಅದರ ಕೆಲವು ಪದಗಳು ಅಥವಾ ನುಡಿಗಟ್ಟುಗಳು ತಮಿಳಿಗೆ ಭಾಷಾಂತರಿಸಲು ಕರೆಸಿಕೊಳ್ಳಲಾಯಿತು.

 

ಕಥೆ ಹೇಳಿದ ನಂತರ

ಚೆಂಡಿನ ಆಟ:

ಸುಗಮಕಾರರು ಮಕ್ಕಳಿಗೆ ಒಂದು ಸಣ್ಣ ಚೆಂಡನ್ನು ಎಸೆದರು ಮತ್ತು ಯಾರು ಅದನ್ನು ಹಿಡಿಯುತ್ತಾರೋ ಅವರು ಎದ್ದು ನಿಂತು ಸುಗಮಕಾರರು ಕೇಳಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡಬೇಕು  . ಆಟದ ಅಂಶ ಮಕ್ಕಳಲ್ಲಿ ಉತ್ಸಾಹ ತುಂಬಿತು ಮತ್ತು ಅವರು ಚೆಂಡನ್ನುಹಿಡಿಯಲು  ಮತ್ತು ಪ್ರಶ್ನೆಗಳಿಗೆ ಉತ್ತರವನ್ನು ನೀಡಲು  ಪೈಪೋಟಿ ನಡೆಸಿದರುದರು. ಉತ್ತರ ಸರಿಯಾಗಿದ್ದರೆ ವೇಳೆ ಎಲ್ಲಾ ಮಕ್ಕಳಿಗೆ ನಾಲ್ಕು ಬಾರಿ ಒಟ್ಟಿಗೆ ಚಪ್ಪಾಳೆ ಬಂತು ಮತ್ತು ಉತ್ತರ ತಪ್ಪಾಗಿದ್ದ  ವೇಳೆ ಮಗುವಿಗೆ ಮುಖ ಭಂಗ ಆಗದಂತೆ ಅವರು ವಿರೋಧಿಸುತ್ತವೆ ಒಮ್ಮೆ ಚಪ್ಪಾಳೆ ತಟ್ಟುತ್ತಿದ್ದರು. ಈ ಆಟದ ಮೋಜನ್ನು ಎಲ್ಲಾ ಅನುಭವಿಸುತ್ತಿದ್ದರು ಮತ್ತು ಮಕ್ಕಳಲ್ಲಿ ಉದ್ವಿಗ್ನ ಮತ್ತು ಅಹಿತಕರ ಭಾವನೆಯನ್ನು ಮೂಡಿಸದೆ ವಿದ್ಯಾರ್ಥಿಗಳ ವಿಷಯಗ್ರಹಣಶಕ್ತಿ ಅಳೆಯುವ ಒಂದು ಉತ್ತಮ ಮಾರ್ಗವಾಗಿದೆ.

ಕೈಗವಸು ಬೊಂಬೆಗಳು

ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಹಾಯ ಮಾಡುವುದಕ್ಕಾಗಿ, ಆಯೋಜಕನು ದುಃಖ, ಆಶ್ಚರ್ಯ, ಕೋಪ ಮುಂತಾದ ಮುಖದ ಭಾವನೆಗಳ ಕಟ್ ಔಟ್ಸ್ ಇರುವ ಒಂದು ಕೈಗವಸು ಕೈಗೊಂಬೆ ತೆಗೆದುಕೊಂಡರು ... ಮಕ್ಕಳ ಮೊದಲು ಅಭಿವ್ಯಕ್ತಿ ಗುರುತಿಸಬೇಕು ಮತ್ತು ನಂತರ ಈ ಭಾವನೆಗಳನ್ನು ಅನುಭವಿಸಿದ ಕೆಲವು ಸಂದರ್ಭಗಳ ಬಗ್ಗೆ ಮಾತನಾಡ ಬೇಕಿತ್ತು. ನಂತರ, ಮಕ್ಕಳು ತಮ್ಮ ಅಂಗೈ ಮೇಲೆ ಕೈಗವಸು ಗೊಂಬೆ ಹಾಕಿಕೊಂಡು ತಮ್ಮ ಕಥೆಗಳು ವಿವರಿಸಲು ಆರಂಭಿಸಿದರು.

ಹಾಡು

ಕಥೆಯ ನಾಯಕಿ, ಮಾಲಾಳ ಸಂತೋಷದಿಂದ ಕಥೆ  ಕೊನೆಗೊಂಡಿದ್ದರಿಂದ ಅಧಿವೇಶನವು ಸಂತೋಷದ ಹಾಡಿನೊಡನೆ ಕೊನೆಗೊಂಡಿತು. ಮಕ್ಕಳು ಬೇಗನೆ ಸಾಲುಗಳನ್ನು ಕಲಿತು ಹಾಡು ಹಾಡಲು ಆರಂಭಿಸಿದರು "ನಿನಗೆ  ಸಂತೋಷ ಆದಾಗ  ನಿನಗದು ಗೊತ್ತಾದಾಗ ನೀನು  ಕೈಚಪ್ಪಾಳೆ ತಟ್ಟು.." ಮತ್ತು ಕೆಲವು ಪದಗುಚ್ಛಗಳು ರಚಿಸಿ ನಿನಗೆ  ಸಂತೋಷ ಆದಾಗ  ನಿನಗದು ಗೊತ್ತಾದಾಗ ನೀನು  ಮೂಗು ಎಳಿ ಎಂದು ಹಾಡು ಕಟ್ಟಿದರು .
ಭಾಷಾಂತರ : ಜೈಕುಮಾರ್ ಮರಿಯಪ್ಪ

 

18346 ನೊಂದಾಯಿತ ಬಳಕೆದಾರರು
7154 ಸಂಪನ್ಮೂಲಗಳು