ಭಾಷಾ ಬೋಧನೆಯ ಬುನಾದಿಯಾಗಿ ಮಾತೃಭಾಷೆ -ರಣದೀಪ್ ಕೌರ್

ಮನೆಯಲ್ಲಿ ಮಕ್ಕಳು ಹೇಗೆ ಭಾಷೆಯನ್ನು ಕಲಿಯುತ್ತವೆ ಮತ್ತು ಅವು ಹೇಗೆ ಅಷ್ಟೊಂದು ಜಟಿಲವಾದ ವಾಕ್ಯಗಳನ್ನು ಮಾತೃಭಾಷೆಯಲ್ಲಿ ಹೇಳಲು ಶಕ್ತರಾಗುತ್ತಾರೆ ಎಂಬುದನ್ನು  ಕುರಿತು ಜರು ಗಮನಿಸಿರುವ ಅಂಶಗಳನ್ನು ಅನುಸರಿಸಿ ಸಾಕಷ್ಟು ಸಿದ್ಧಾಂತಗಳಾಗಿವೆ. ಮಕ್ಕಳು ತಮ್ಮ ಮನೆಯಲ್ಲಿ ಮಾತನಾಡುವ ಭಾಷೆಯಲ್ಲಿ ತೀರಾ ಚಿಕ್ಕವಯಸ್ಸಿನಲ್ಲಿಯೇ ಯಾವುದೇ ಅಡೆತಡೆಯಿಲ್ಲದೆ ಮಾತನಾಡುತ್ತಾರೆ. ಯಾವುದೇ ಪರಿಶ್ರಮವಿಲ್ಲದೆ ಅವರಿಗೆ ಏನನಿಸುತ್ತಿದೆ ಎಂಬುದನ್ನು ಹೇಳಲು ಹಾಗೂ ತಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದನ್ನು ವಿವರಿಸಲು ಹಾಗೂ ಯಾವುದೇ ಪೂರ್ವ ಶಿಕ್ಷಣವಿಲ್ಲದೆ ಹಾಗೂ ಕಷ್ಟವಿಲ್ಲದೆಯೇ ಯಾವುದೇ ಘಟನೆಯನ್ನು ಕುರಿತು ವಿವೇಚನೆ ತೋರಿಸುತ್ತಾರೆ ಮತ್ತು ವಿಶ್ಲೇಷಣೆ ಮಾಡುತ್ತಾರೆ. ಭಾಷೆಯು ಕೇವಲ ಮಾತುಕತೆಯ ಸಾಧನ ಮಾತ್ರವಲ್ಲ ಇದು ಮಗುವಿನಲ್ಲಿ ಇತರ  ವಿಷಯಗ್ರಹಣೆ ಸಾಮರ‍್ಥ್ಯವನ್ನು ಬೆಳೆಸಿಕೊಳ್ಳಲು ಕೂಡಾ ಸಹಾಯಕವಾಗುತ್ತದೆ. ಆದ್ದರಿಂದ, ಮಗುವಿನಲ್ಲಿ ಭಾಷೆಯು ಯಾವ ರೀತಿಯಲ್ಲಿ ವಿಕಾಸವಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದುದು ಮುಖ್ಯವಾಗುತ್ತದೆ. 
 
ಮನುಷ್ಯನ ಮೆದುಳನ್ನು ಹೊಂದಿರುವ ನಾವು ಸ್ವಾಭಾವಿಕವಾಗಿಯೇ ಯೋಚನೆಗಳನ್ನು ಹೊರಹಾಕುವ ಇಚ್ಛೆಯನ್ನು ಹೊಂದಿರುತ್ತೇವೆ. ಮನುಷ್ಯನ ಮೊದಲ ಉಸಿರಿನಲ್ಲಿಯೇ ಈ ಸ್ಪಂಧನವು ಉಂಟಾಗುತ್ತದೆ. ಮಗು ಹುಟ್ಟಿದಾಕ್ಷಣ ಅಳುತ್ತದೆ ಮತ್ತು ಭಾಷೆಯ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಆ ಅಳುವೇ ಮಗುವು ತನ್ನ ಮನಸ್ಸಿನಲ್ಲಿರುವುದನ್ನು ಹೇಳಬೇಕೆಂಬ   ಒತ್ತಂಬವನ್ನು ಸೂಚಿಸುತ್ತದೆ !  
ಒಂದು ಹಂತದವರೆಗೆ ಮಕ್ಕಳು ಕೇವಲ ಅಳುವ ಮೂಲಕ ತಮ್ಮ ಅಗತ್ಯವನ್ನು ಹಾಗೂ ತಮಗನಿಸಿದ್ದನ್ನು ವ್ಯಕ್ತಪಡಿಸುತ್ತಾರೆ. ಹಸಿವಾದಾಗ ಅಳುವ ಮೂಲಕ ಅದನ್ನು ವ್ಯಕ್ತಪಡಿಸುತ್ತಾರೆ. ಅವರು ವಿವಿಧ ಸಂದರ್ಭದಲ್ಲಿ ವ್ಯಕ್ತಪಡಿಸುವ ಅಳುವು ಭಿನ್ನವಾಗಿರುತ್ತದೆ. ಅಂದರೆ  ಹಸಿವಾದಾಗ ಅಳುವ ಅಳು ಅಥವಾ ಅನಾರೋಗ್ಯ ಇರುವಾಗ ಅಥವಾ ತಮಗೆ ಕಿರಿಕಿರಿಯಾದಾಗ ವ್ಯಕ್ತಪಡಿಸುವ ಅಳುವು ವಿಭಿನ್ನವಾಗಿರುತ್ತದೆ. ನೋವಾದಾಗ ಅಳುವ ಅಳುವು ಅವರು ಆಟವಾಡುವಾಗ ಅಳುವ ಅಳುವಿಗಿಂತ ಭಿನ್ನವಾಗಿರುತ್ತದೆ.
ಮಕ್ಕಳು ಬೆಳೆದಂತೆ, ಬೇರೆ ಬೇರೆ ರೀತಿಯಲ್ಲಿ ಸಂಭಾಷಣೆ ನಡೆಸುತ್ತಾರೆ. ಉದಾಹರಣೆಗೆ ಅವರು ನಸುನಗುತ್ತಾರೆ ಅಥವಾ ಜೋರಾಗಿ ನಗುತ್ತಾರೆ, ಈ ರೀತಿಯಲ್ಲಿ  ಸಂವಹನವು ಮುಂದಿನ ಹಂತಕ್ಕೆ ಹೋಗುತ್ತದೆ. ನಿಧಾನವಾಗಿ ಅವರು ತಮ್ಮ ಸುತ್ತಮುತ್ತಲಿನ ಪರಿಸರದಿಂದ ಶಬ್ಧಗಳನ್ನು ಗ್ರಹಿಸಿ ಹೇಳಲು ಪ್ರಾರಂಭಿಸುತ್ತವೆ. ಪ್ರಾರಂಭದಲ್ಲಿ ಇವು  ಕೇವಲ ಮಮ್ಮ,  ಬಾಬಾ, ಹೂಂ... ಮುಂತಾದ ಶಬ್ಧಗಳನ್ನು ಮಾತ್ರ ಗ್ರಹಿಸಿ ಹೇಳಲು ಪ್ರಾರಂಭಿಸುತ್ತವೆ. ಅಲ್ಲದೆ ಈ ಶಬ್ಧಗಳನ್ನು ವಿವಿಧ ರೀತಿ ಹಾಗೂ ಧ್ವನಿಯಲ್ಲಿ ಹೇಳಲು ಪ್ರಾರಂಭಿಸುತ್ತವೆ.  
ಭಾಷಾಶಾಸ್ತ್ರಜ್ಞರಾಗಿರುವ, ನೊವಾಮ್ ಚೊಮ್‌ಸ್ಕಿ ಹೇಳುತ್ತಾರೆ, ಮಕ್ಕಳಿಗೆ ಭಾಷಾ ಕಲಿಕೆಯ ಸಹಜ ಸಾಮರ್ಥ್ಯವನ್ನು ಹೊಂದಿರುತ್ತವೆ. ಏಕೆಂದರೆ ಅವರ ಮೆದುಳಿನಲ್ಲಿ ಭಾಷೆಯನ್ನು ಕಲಿತುಕೊಳ್ಳುವ ಅಂಶವು ಜಾಗೃತವಾಗಿರುತ್ತದೆ ಮತ್ತು ಇದು ಸುತ್ತಮುತ್ತಲಿನ ಪರಿಸರದಿಂದ   ಭಾಷೆ ಹಾಗೂ ಇತರೆ ಸಂಜ್ಞೆಗಳನ್ನು ಅಂದರೆ ಸ್ಪರ್ಷ ಮತ್ತು ಭಾವನೆಗಳ ಅಂಶಗಳನ್ನು ಪಡೆದುಕೊಳ್ಳುತ್ತಿರುತ್ತದೆ. ಈ ಎಲ್ಲ ಸಂಜ್ಞೆಗಳನ್ನು ಗಮನಿಸಲಾಗುತ್ತದೆ ಹಾಗೂ ಮೆದುಳಿನಲಿ ದಾಖಲಾಗುತ್ತವೆ. ಹೀಗೆ ಒಳಬಂದ ಅಂಶಗಳು ಮೆದುಳಿನಾಳದಲ್ಲಿ ನೆಲೆಗೊಳ್ಳಲು ಸಮಯ ತೆಗೆದುಕೊಳ್ಳುತ್ತವೆ. ಇದು ಹಂತಹಂತವಾಗಿ ಹಾಗೂ ನೈಸರ್ಗಿಕವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಈ ಅಂಶಗಳು ಮುಂದೆ ಭಾವನೆಗಳ ಪ್ರತಿಕ್ರಿಯೆಗಳಾಗಿ ಬದಲಾಗುತ್ತದೆ : ಅಂದರೆ ಮನೆ ಭಾಷೆಯನ್ನು ಮಕ್ಕಳು ಸ್ವಾಭಾವಿಕವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ ಮತ್ತು ಅವರ ಯೋಚನೆಗಳನ್ನು ಹೇಳಲು ಇದನ್ನು ಬಳಸುತ್ತಾರೆ.  
 
ಮಗು ಹುಟ್ಟಿದ ಸಮಯದಿಂದ ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಸುತ್ತಮುತ್ತಲಿನ ಪರಿಸರದಿಂದ ಅಂಶಗಳನ್ನು ಪಡೆದುಕೊಂಡು ಬೆಳೆಯಲು ಕನಿಷ್ಠ ಎರಡು ವರ್ಷಗಳ ಸಮಯ ಬೇಕಾಗುತ್ತದೆ. ಅದೇ ರೀತಿ, ಮಗುವು ತಾನು ಕಲಿಯ ಬೇಕಾದ ಇತರೆ ಭಾಷೆಗಳ ವಿಷಯಕ್ಕೆ ಬಂದರೆ, ಅದಕ್ಕೆ ಮನೆಯ ರೀತಿಯಲ್ಲಿಯೇ ಅತ್ಯುತ್ತಮ ರೀತಿಯ ಪರಿಸರ ಇರಬೇಕು.  ಶಾಲೆಯಲ್ಲಿ ಕೂಡಾ ಮಗುವು ನಿರ್ದಿಷ್ಟ ಭಾಷೆಯನ್ನು ಕೇಳುವುದು, ಅರ್ಥಮಾಡಿಕೊಳ್ಳುವುದು ಮತ್ತು ಅದನ್ನು ಮನನಮಾಡಿಕೊಂಡು ಅದಕ್ಕೆ ತಕ್ಕಂತೆ ಮಾತನಾಡುವುದನ್ನು ರೂಢಿಸಿಕೊಳ್ಳುವ ವಾತಾವರಣ ಇರಬೇಕಾಗುತ್ತದೆ. ಸಾಮಾನ್ಯವಾಗಿ ಈಗಿರುವ ಪದ್ಧತಿ ವ್ಯವಸ್ಥೆಯಲ್ಲಿ  ನಾವು ಮಗು ತಕ್ಷಣ ಶಾಲೆಯ ಭಾಷೆಯನ್ನು ಕಲಿಯಬೇಕು ಎಂದು ಬಯಸುತ್ತೇವೆ. ಆದರೆ ಮಗುವಿಗೆ ಆ ಭಾಷೆಯ ಸಂಪರ್ಕ ಇರುವುದಿಲ್ಲ ಎಂಬುದನ್ನು ಮರೆತಿರುತ್ತೇವೆ.
 
ಮಕ್ಕಳು ಭಾಷೆಯನ್ನು ಮೊದಲು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳಲು ಬಳಸುತ್ತಾರೆ. ಮಗು ಪದೇ ಪದೇ ಕೇಳಿದ ಶಬ್ಧವನ್ನು ತಂತಾನೆ ಮಾತನಾಡಿಕೊಳ್ಳುವುದನ್ನು ನೀವು ಗಮನಿಸಿರಬಹುದು. ತಮ್ಮಷ್ಟಕ್ಕೆ ಮಾತನಾಡಿಕೊಳ್ಳುವುದು ಎಂದರೆ ಇದೊಂದು ಪ್ರಕ್ರಿಯೆಯಾಗಿದ್ದು ಇಲ್ಲಿ ಶಬ್ಧವು ನಿರ್ದಿಷ್ಟ ರೀತಿಯಲ್ಲಿ ಮಗುವಿನ ಮೆದುಳಿನಲ್ಲಿ ಶೇಖರವಾಗುತ್ತದೆ ಮತ್ತು ಮಗುವು ಮುಂದೆ ಅಗತ್ಯವಿರುವ ಸಂದರ್ಭದಲ್ಲಿ  ಇದನ್ನು ಬಳಸಿಕೊಳ್ಳುತ್ತದೆ.
 
ಮಕ್ಕಳು ಸಮಾಜದ ಜೊತೆ ಬೆರೆಯಲು ಭಾಷೆಯನ್ನು ಬಳಸುತ್ತಾರೆ. ಆದ್ದರಿಂದ ಮಕ್ಕಳು ಇದನ್ನು ಇತರರು ಹೇಗೆ ಬಳಸುತ್ತಾರೆ ಮತ್ತ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ಗಮನಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿ ಕೆಲವು ವಿನ್ಯಾಸಗಳನ್ನು ಅವರು ಅರ್ಥ  ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ಅವರು ತಮ್ಮ ಭಾಷಾ ಗ್ರಹಿಕೆಯ ಪ್ರಕ್ರಿಯೆಯಲ್ಲಿ ಮಾಡಿಕೊಳ್ಳುತ್ತಾರೆ. ಆ ರೀತಿಯ ವಾತಾವರಣದಲ್ಲಿ ಇದ್ದಾಗ ಇದು ಸ್ವಾಭಾವಿಕವಾಗಿ ಅಪ್ರಯತ್ನಪೂರ‍್ವಕವಾಗಿ ಉಂಟಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಅವರು ವ್ಯಾಕರಣದಲ್ಲಿ ತಪ್ಪನ್ನು ಮಾಡುತ್ತಾರೆ, ಅದನ್ನು ನಿರ್ಲಕ್ಷಿಸಬೇಕಾಗುತ್ತದೆ. {ಉದಾಹರಣೆಗೆ: ಆಟವಾಡುವಾಗ ಅವರು ಬಳಸುವ ಪದ್ಯಗಳು ಮತ್ತು ಶಬ್ಧಗಳು ತಪ್ಪಾಗಿರುತ್ತವೆ ಅಥವಾ ವ್ಯಾಕರಣ ತಪ್ಪಾಗಿರುತ್ತದೆ. ಇದೊಂದು ಪ್ರಕ್ರಿಯೆಯಾದಕಾರಣ  ಅವರನ್ನು ಹೀಯಾಳಿಸಬಾರದು ಅಥವಾ ಇದನ್ನು ಸರಿಗೊಳಿಸಬಾರದು.
ಅಮೂರ್ತ ಅನುಭವಗಳ ಮೂಲಕ ಹಾಗೂ ಭಾಷೆಯಿಂದ ಸಮೃದ್ಧವಾದ ಅಂಶಗಳನ್ನು ನೀಡುವ ಮೂಲಕ ಮನೆಭಾಷೆಯ ಅನುಭವವು ವೃದ್ಧಿಯಾಗುತ್ತದೆ. ಆದ್ದರಿಂದ, ಮಕ್ಕಳು ಪ್ರಾಥಮಿಕ ಶಾಲೆಗೆ ಬರುವ ಸಮಯದಿಂದ ಅವರು ಶಾಲೆಯಲ್ಲಿ ಬಳಸುವ ಭಾಷೆಯ ಮೇಲೆ ಹಿಡಿತ ಹೊಂದುವವರೆಗೆ ಮನೆ ಭಾಷೆಯನ್ನು ಪರಿಣಾಮಕಾರಿ ಸಂಪನ್ಮೂಲವಾಗಿ ಬಳಸಬೇಕು. ಆದರೆ ಮಗುವಿನ ಈ ಹಿಂದಿನ ಜ್ಞಾನವನ್ನು (ಭಾಷೆ) ಮತ್ತು ಗೊತ್ತಿರುವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಯನ್ನು ನೈಜ ಕ್ಲಾಸ್‌ರೂಮ್‌ನ ಸ್ಥಿತಿಯಲ್ಲಿ ನಿರ್ಲಕ್ಷಿಸಲಾಗುತ್ತದೆ. ಆದ್ದರಿಂದ, ಕಲಿಕೆಯ ಪ್ರಕ್ರಿಯೆಯಲ್ಲಿ ಪೂರಕವಾಗಿರುವ ಅಂಶಗಳು ಇದ್ದರೂ ಕೂಡಾ ಮನೆ ಪರಿಸರದ ಭಾಷೆಯನ್ನು ಭಾಷೆ ಕಲಿಕೆಯ ಮುಖ್ಯ ಆಧಾರವಾಗಿರಿಸಿಕೊಂಡಿರಬೇಕು.  
 
ಮನೆಭಾಷೆಯು ದ್ವಿತೀಯ ಮತ್ತು ತೃತಿಯ ಭಾಷೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮಕ್ಕಳು ’ಸ್ಪೂನ್’ ಅನ್ನು ’ಚಮಚ’ ಎಂದು ಕರೆಯುತ್ತಾರೆ ಮತ್ತು ಅದರ ಉದ್ದೇಶ ಹಾಗೂ ಇದರಿಂದ ಏನು ಮಾಡಬಹುದು, ಹೇಗೆ ಕಾಣಿಸುತ್ತದೆ ಎಂಬುದರ ಅರಿವು ಅವರಿಗಿರುತ್ತದೆ. ’ಚಮಚ’ ಎಂಬ ಶಬ್ಧವನ್ನು ಉಚ್ಚರಿಸಿದ ತಕ್ಷಣ ಮೆದುಳು ಅದರ ಅಂಶಗಳ ಜೊತೆಗೆ ಸಂಪರ್ಕ ಏರ್ಪಡಿಸಿಕೊಳ್ಳುತ್ತದೆ. ಮತ್ತು ಈ ಅರ್ಥ ಮಾಡಿಕೊಳ್ಳುವಿಕೆಯು ದ್ವಿತಿಯ ಮತ್ತು ತೃತಿಯ ಭಾಷೆಗೆ ಅನುಸರಿಸಿ ಅನ್ವಯಿಸಿಕೊಳ್ಳುತ್ತಾರೆ. ಶಾಲೆಯಲ್ಲಿ ಮಗುವಿನ ಭಾಷೆಯನ್ನು ನಿರ್ಲಕ್ಷಿಸುವುದು ಅವರಲ್ಲಿ ಪ್ರೇರೇಪಣೆಯನ್ನು ಕಡೆಗಣಿಸುವುದು ಮತ್ತು ಶಾಲೆಗೆ ಬರಲು ಅವರಿಗಿರುವ ಪ್ರೇರಣೆಯನ್ನು ಕಡೆಗಣಿಸಿದಂತೆ ಆಗುತ್ತದೆ.  
ಪ್ರತಿಯೊಂದು ಶಬ್ಧವನ್ನು ಕೂಡಾ ಕ್ರಿಯೆಯ ಮೂಲಕ ಮತ್ತು ಮಗುವಿಗೆ ಅರ್ಥವಾಗುವ ಭಾಷೆಯಲ್ಲಿ ಹಾಗೂ ಕಲಿಯಬೇಕಾದ ಭಾಷೆಯಲ್ಲಿ ಹೇಳಬೇಕು. ಕ್ರಿಯೆ ಹಾಗೂ ಸಂಬಂಧ ಇರದ ಶಬ್ಧಗಳು ಮಗುವಿಗೆ ಯಾವುದೇ ಅರ್ಥವನ್ನು ನೀಡಲಾರವು ಆದ್ದರಿಂದ ಮಗುವಿಗೆ ಪ್ರತಿಯೊಂದಕ್ಕೂ ಸಂಬಂಧ ಕಲ್ಪಿಸುವಂತಹ ವಾತಾವರಣವನ್ನು ನಿರ್ಮಿಸಿ ಕೊಡಬೇಕು. ಹಾಗೂ   ಮಗುವಿಗೆ ಅದು ತನ್ನ ದಿನನಿತ್ಯದ ಜೀವನ ಹಾಗು ವಸ್ತುಗಳೊಂದಿಗೆ ಶಬ್ಧಗಳನ್ನು ಸಂಬಂಧವನ್ನು ಕಲ್ಪಿಸಿಕೊಳ್ಳಲು ಸಹಾಯಕವಾಗುವಂತೆ ಅವಕಾಶ ನೀಡಬೇಕು. 
ಪ್ರಾಯೋಗಿಕ ಕಲಿಕೆಯ ವಿಧಾನವು ಅದ್ಭುತ ಕಾರ್ಯನಿರ್ವಹಿಸುತ್ತದೆ ಏಕೆಂದರೆ ಇಲ್ಲಿ ಮಕ್ಕಳು ನಿರ್ದಿಷ್ಟವಾದ ವಸ್ತುವಿನ ಜೊತೆಗೆ ಮಕ್ಕಳು ಇರುತ್ತಾರೆ. ಶಾಲೆಯ ಸುತ್ತುಮುತ್ತು ಇರುವ ವಸ್ತುಗಳು ಮಕ್ಕಳ ಕಲಿಕೆಗೆ ಉಪಯುಕ ಸಂಪನ್ಮೂಲಗಳಾಗಿ ಬಳಕೆ ಮಾಡಿಕೊಳ್ಳಬೇಕು. ನಿರ್ದಿಷ್ಟವಾದ ವಸ್ತುವಿನ ಜೊತೆಗೆ ಮಕ್ಕಳು ಸಂಪರ್ಕ ಹೊಂದುವುದು ಉತ್ತಮವಾದ ರೀತಿಯಲ್ಲಿ ನೆನಪಿಟ್ಟುಕೊಳ್ಳಲು ಸಹಾಯಕವಾಗುತ್ತದೆ. ಇದರಿಂದ ಅವರು ಅದನ್ನು ಅನುಭವಿಸಬಹುದು ಮತ್ತು ಅಗತ್ಯವಿದ್ದಾಗ ಅದರ ಕುರಿತು ಮಾತನಾಡಲು ಕೂಡಾ ಅವರಿಗೆ ಸಾಧ್ಯವಾಗುತ್ತದೆ.
ಚಿಕ್ಕ ಮಕ್ಕಳಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಮಕ್ಕಳು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿರುವಾಗ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುವುದನ್ನು ಗಮನಿಸಬಹುದು: ಅವರು ಒಬ್ಬರೇ ಇದ್ದಾರೆ ಎಂಬುದು ಕೂಡಾ ಇಲ್ಲಿ ನಗಣ್ಯವಾಗಿರುತ್ತದೆ. ಅವರುಗಳ ಈ ನಡತೆಯು ತಮ್ಮಲ್ಲಿ ಇದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದನ್ನು ತೋರ್ಪಡಿಸುತ್ತದೆ ಹಾಗೂ   ತಮ್ಮೊಂದಿಗೆ ತಾವು ಗೊಣಗಿಕೊಳ್ಳುವ ಮೂಲಕ ಅದರಲ್ಲಿ ಆಸಕ್ತಿಯನ್ನು  ಉಳಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇದು ಅವರಿಗೆ ಅದರ ಕುರಿತು ವ್ಯಾಖ್ಯಾನವಾಗಿರುತ್ತದೆ. ಆದ್ದರಿಂದ, ಮಕ್ಕಳು ತರಗತಿಯಲ್ಲಿ ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಳ್ಳುತ್ತಿರುವಾಗ ಅಥವಾ ಏನಾದರೂ ಮಾಡುತ್ತಿದ್ದರೆ, ಶಿಕ್ಷಕರಾಗಿರುವ ನಾವು ಅವರನ್ನು ಅವರಷ್ಟಕ್ಕೆ ಬಿಡಬೇಕು ಮತ್ತು ಇದನ್ನು ಗಲಾಟೆ ಎಂಬ ರೀತಿಯಲ್ಲಿ ಪರಿಗಣಿಸಬಾರದು. 
ಮಕ್ಕಳ ಏಕಾಗ್ರತೆಯ ಅವಧಿಯು ತುಂಬಾ ಕಡಿಮೆ ಇರುವುದರಿಂದ, ಶಿಕ್ಷಕರಾದವರು ಆಟಗಳ ಮೂಲಕ ಕಲಿಕೆಯನ್ನು ಅನುಸರಿಸುವುದು ತುಂಬಾ ಉಪಯುಕ್ತವಾಗಿರುತ್ತದೆ. ಉದಾಹರಣೆಗೆ, ಕವಿತೆಯನ್ನು ಹೇಳುವಾಗ, ಶಿಕ್ಷಕರ ಜೊತೆಗೆ ಮಕ್ಕಳು ಕವಿತೆಯಲ್ಲಿರುವ ಅಂಶವನ್ನು ನಟಿಸಿ ತೋರಿಸಲು ಹೇಳುವುದು. 
 
ಎಲ್ಲವನ್ನೂ ಕ್ರಿಯೆಯಲ್ಲಿ ತಿಳಿಸುವುದು ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಿರುತ್ತದೆ ಏಕೆಂದರೆ ಮಕ್ಕಳು ಹೆಚ್ಚು ಚಟುವಟಿಕೆಯಿಂದ ಇರುತ್ತಾರೆ ಮತ್ತು ಅದರಿಂದ ಅವರಿಗೆ ಖುಷಿ ಇರುತ್ತದೆ. ಅವರ ಈ ಖುಷಿಯನ್ನು ಹತ್ತಿಕ್ಕಲು ಪ್ರಯತ್ನಿಸಿದರೆ ಅವರು ಸಪ್ಪಗಾಗುತ್ತಾರೆ ಮತ್ತು ನಿರ್ಧಿಷ್ಟ ಕ್ರಿಯೆಯಲ್ಲಿ ಖುಷಿಯನ್ನು ಕಳೆದುಕೊಳ್ಳುತ್ತಾರೆ.  
 
ಪ್ರಾರಂಭದ ವಯಸ್ಸಿನಲ್ಲಿ ಕಥೆ ಹೇಳುವ ಮೂಲಕ ಹಲವಾರು ಅಂಶಗಳನ್ನು ಕಲಿಸಬಹುದಾಗಿದೆ. ಈ ಪ್ರಕ್ರಿಯೆಯನ್ನು ಯಾವ ರೀತಿ ವಿನ್ಯಾಸ ಮಾಡಿರಬೇಕೆಂದರೆ ಇಲ್ಲಿ ಮಕ್ಕಳಿಗೆ ಕಥೆಯ ಪಾತ್ರವಾಗಲು ಹೇಳಬೇಕು ಹಾಗೂ ಆ ಪಾತ್ರವನ್ನು ನಿರ್ವಹಿಸಲು ಹೇಳಬೇಕು. ಇನ್ನೂ ಹೆಚ್ಚಾಗಿ,   ಕಥೆಯನ್ನು ಬಿಡಿಸಲು ಹೇಳಬೇಕು ಹಾಗೂ ಆ ಚಿತ್ರಗಳನ್ನು ತರಗತಿಯ ಗೋಡೆಯ ಮೇಲೆ ಅಂಟಿಸಬೇಕು. ಹಾಗೆಯೇ ಕೆಲವು ಶಬ್ಧಗಳನ್ನು ಮಗುವಿನ ಮನೆ ಭಾಷೆ ಮತ್ತು ನಿರ್ಧಿಷ್ಟ ಭಾಷೆ ಎರಡರಲ್ಲಿಯೂ ಹೇಳಬೇಕು. ಆದ್ದರಿಂದ ಮಗುವು ತಾನು ಕಲಿತ ವಿಷಯವನ್ನು ಸಂಪೂರ್ಣವಾಗಿ ನೆನಪಿಟ್ಟುಕೊಳ್ಳಲು ಸಹಾಯಕವಾಗುತ್ತದೆ. 
 
ಶಿಕ್ಷಕರು ಮಕ್ಕಳಿಗೆ ತಪ್ಪಿಲ್ಲದಂತೆ ಬರೆಯಬೇಕು ಎಂದು ಒತ್ತಡ ಹಾಕಬಾರದು. ಪ್ರಾರಂಭದ ವರ್ಷಗಳಲ್ಲಿ ಮಕ್ಕಳು ಬರೆಯುವುದಕ್ಕಿಂತ ಹೆಚ್ಚಾಗಿ ಮಾತನಾಡುವಿಕೆಯ ಮತ್ತು ಕೇಳುವಿಕೆಯ ಅಂಶದ ಮೇಲೆ ಹೆಚ್ಚು ಗಮನವನ್ನು ಕೇಂದ್ರೀಕರಿಸಬೇಕು. ಬರವಣಿಗೆಯನ್ನು ಅವರಿಗೆ ಸೂಕ್ತ ಎನಿಸಿದ   ಸಮಯದಲ್ಲಿ ಮಾಡಬಹುದಾಗಿದೆ. ಮಕ್ಕಳು ಒಂದು ವಿನ್ಯಾಸದಲ್ಲಿ ಗೀಚುವಿಕೆಯನ್ನು ಮಾಡುತ್ತಾರೆ. ಈ ವಿಷಯದಲ್ಲಿ ಕೂಡಾ ಅವರಿಗೆ ಅವಕಾಶ ನೀಡುವುದರಿಂದ ಮಕ್ಕಳಿಗೆ ಉಪಯುಕ್ತವಾಗುತ್ತದೆ. 
ಪ್ರೀತಿ, ವೈಯಕ್ತಿಕ ಕಾಳಜಿ ಮತ್ತು ಹೆದರಿಕೆ ಇಲ್ಲದ ವಾತಾವರಣವು ಮಕ್ಕಳಿಗೆ ಅಗತ್ಯವಾಗಿರುವ ಸೃಜನಶೀಲತೆ ಮತ್ತು ಕಲ್ಪನೆಯ ವಾತಾವರಣದಲ್ಲಿ ಬೆಳೆಯಲು ಸಹಾಯ ಮಾಡುತ್ತದೆ. 
 
ಮಕ್ಕಳು ಹೆಚ್ಚು ಕುತೂಹಲ ಹೊಂದಿರುತ್ತಾರೆ ಮತ್ತು ತಮ್ಮಷ್ಟಕ್ಕೆ ತಾವು ಪ್ರಶ್ನೆ ಕೇಳುವ ಹಾಗೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಆದ್ದರಿಂದ ಅವರು ಶಾಲೆಗೆ ಸೇರ್ಪಡೆಯಾದ ತಕ್ಷಣದಿಂದ ಅವರಿಗೆ ಪ್ರಶ್ನೆಗಳನ್ನು ಕೇಳಿಕೊಳ್ಳಲು ಅನುಕೂಲವಾಗುವಂತಹ ವಾತಾವರಣವನ್ನು ರೂಪಿಸಿಕೊಡಬೇಕು. ಇದೇ ರೀತಿ ಭಾಷೆಯನ್ನು ಅರಿತುಕೊಳ್ಳುವ ಸಾಮರ್ಥ್ಯವು ಸ್ವಾಭಾವಿಕವಾಗಿಯೇ ಅವರಿಗೆ ಇರುತ್ತದೆ. ಅವರಿಗೆ ಭಾಷಾ ಕಲಿಕೆಗೆ ಸಹಾಯಕವಾಗುವಂತಹ ನಿರ್ದಿಷ್ಟ ಭಾಷೆಯ ಬಳಕೆ ಹೆಚ್ಚಾಗಿರುವಂತಹ ವಾತಾವರಣವನ್ನು ರೂಪಿಸಬೇಕು. ಭಾಷಾ ಕಲಿಕೆಯ ಪ್ರಕ್ರಿಯೆಯನ್ನು ತರಗತಿಗಳಲ್ಲಿ  ರೂಪಿಸುವಾಗ ಔಪಚಾರಿಕ ರೀತಿಗಿಂತ ಅನೌಪಚಾರಿಕ ರೀತಿಯ ವಾತಾವರಣವನ್ನು ರೂಪಿಸಿಕೊಡಬೇಕು.
 
ಆದ್ದರಿಂದ, ಮನೆ ಭಾಷೆಯು ಕಲಿಯಬೇಕಾದ ಇತರ ಭಾಷೆಯನ್ನು ಅರಿತುಕೊಳ್ಳಲು ಸಹಾಯಕವಾಗುವುದರ ಜೊತೆಗೆ ಮಗುವಿನ ಅಭಿವ್ಯಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿರುತ್ತದೆ. 
 
ರಣ್‌ದೀಪ್ ಅವರು ವಾಣಿಜ್ಯ ವಿಷಯದಲ್ಲಿ ಪದವಿ ಪಡೆದುಕೊಂಡಿದ್ದಾರೆ. ಅಜೀಂ ಪ್ರೇಂಜಿ ಫೌಂಡೇಷನ್ ಜೊತೆಗೆ ಇವರು  ೨೦೧೧ರಿಂದ ಗುರುತಿಸಿಕೊಂಡಿದ್ದು ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿಯ ರಾಜ್ಯ ಸಂಸ್ಥೆಯ ಸಂವಹನ ಮತ್ತು ತೊಡಗಿಸಿಕೊಳ್ಳುವಿಕೆಯ ತಂಡದ ಸದಸ್ಯೆಯಾಗಿದ್ದಾರೆ. ಮೆದುಳಿನಲ್ಲಿ ಭಾಷೆಯ ಕಲಿಕೆಯ ಪ್ರಕ್ರಿಯೆಯು ಹೇಗೆ ನಡೆಯುತ್ತದೆ ಎಂಬುದನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ. ಅವರಿಗೆ ಬರವಣಿಗೆ ಮತ್ತು ಕವಿತೆ ರಚಿಸುವುದು ಹವ್ಯಾಸ. ಮಕ್ಕಳನ್ನು ಗಮನಿಸುವುದನ್ನು ಅವರು ಇಷ್ಟಪಡುತ್ತಾರೆ ಮತ್ತು ಅವರ ಹೆಚ್ಚಿನ ಬರವಣಿಗೆಗಳು ಇದನ್ನು ಒಳಗೊಂಡಿರುತ್ತದೆ. ಅವರು ನಿರಂತರವಾಗಿ ಕಲಿಕೆಯನ್ನು ಇಷ್ಟಪಡುತ್ತಾರೆ. ಪ್ರಯಾಣ, ಬೇರೆ ಬೇರೆ ಪ್ರದೇಶಗಳಿಗೆ ಭೇಟಿ ಕೊಡುವುದು  ಮತ್ತು ಛಾಯಾಗ್ರಹಣ ಅವರ ಇಷ್ಟದ ಹವ್ಯಾಸ. ಅವರನ್ನು randeep.verma@azimpremjifoundation.orgರಲ್ಲಿ ಸಂಪರ್ಕಿಸಬಹುದು. 
 
18344 ನೊಂದಾಯಿತ ಬಳಕೆದಾರರು
7154 ಸಂಪನ್ಮೂಲಗಳು