ಭಾರತೀಯ ಜಾತಿವ್ಯವಸ್ಥೆಯ ಕಾರಣದಿಂದಾಗಿ ಐತಿಹಾಸಿಕವಾಗಿ ಅವಕಾಶವಂಚಿತರಾಗಿರುವ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಜನವರ್ಗವು ಶಿಕ್ಷಣ ಪಡೆಯುವಲ್ಲಿ ಎದುರಾಗುವ ಸವಾಲುಗಳು ಮತ್ತು ಅಗತ್ಯವಾದ ಸುಧಾರಣಾ ಕ್ರಮಗಳು

 
I. ದುಡಿವ ಬಹುಸಂಖ್ಯಾತರ ಪ್ರಯೋಜನ ಮತ್ತು ಅದರ ಸಹಜ ಶಕ್ತಿ ಸಾಮರ್ಥ್ಯಗಳು 
 
ದುಡಿವ ಬಹುಸಂಖ್ಯಾತರ ಪ್ರಯೋಜನ (demographic dividend ಎನ್ನುವುದು ಇಂದು ಎಲ್ಲರಿಗೂ ಚಿರಪರಿಚಿತ ಪರಿಕಲ್ಪನೆಯಾಗಿದೆ. ಈ ದುಡಿವ ಬಹುಸಂಖ್ಯಾತರ ಪ್ರಯೋಜನದ ಅವಕಾಶವು ನಮ್ಮ ಕೈಜಾರಿ, ಅದು ಒಂದು ದುಃಸ್ವಪ್ನ ಆಗದೆ, ಅದರ ಸದುಪಯೋಗ ಮಾಡಿಕೊಳ್ಳಬೇಕಾದರೆ ನಮ್ಮ ಕಿರಿಯರ ಸಮುದಾಯಕ್ಕೆ ಉತ್ತಮ ಶಿಕ್ಷಣ, ಉತ್ತಮ ಆರೋಗ್ಯ ಮತ್ತು ಅಗತ್ಯ ಕೌಶಲ್ಯಗಳು ಲಭ್ಯವಾಗುವಂತೆ ಮಾಡುವುದು ಅತ್ಯಗತ್ಯ. ಶೈಕ್ಷಣಿಕ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿ ವ್ಯವಸ್ಥೆಗಳನ್ನು ಸ್ಥಾಪಿಸಿದರಷ್ಟೇ ಸಾಲದು, ಈ ಎಲ್ಲಾ ಸೌಲಭ್ಯ ಮತ್ತು ವ್ಯವಸ್ಥೆಗಳು ಸಮಾಜದ ಎಲ್ಲ ವರ್ಗದ  ಜನರಿಗೆ, ಅದರಲ್ಲೂ ಮುಖ್ಯವಾಗಿ ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದಿರುವ ಜನಸಮುದಾಯಕ್ಕೆ ತಲುಪುವಲ್ಲಿ ಇರುವ ಎಲ್ಲ ಅಡೆತಡೆಗಳನ್ನು ನಿವಾರಿಸಬೇಕು. 
 
II. ಅಸ್ಪೃಶ್ಯತೆಯನ್ನು ಆಚರಿಸುವ ಭಾರತೀಯ ಜಾತಿ ವ್ಯವಸ್ಥೆ - ದುಡಿವ ಬಹುಸಂಖ್ಯಾತರ ಪ್ರಯೋಜನದ ಸದುಪಯೋಗಕ್ಕೆ ಎದುರಾಗುವ ಅತಿದೊಡ್ಡ ಸವಾಲು 
 
ಅಸ್ಪೃಶ್ಯತೆಯ ಮೂಲಸ್ಥಂಭದ ಮೇಲೆ ನಿಂತಿರುವ ಭಾರತೀಯ ಜಾತಿವ್ಯವಸ್ಥೆ (Indian Caste System) ಮತ್ತು ಅದು ಪಾರಂಪರಿಕವಾಗಿ ಪಾಲಿಸಿಕೊಂಡು ಬಂದಿರುವ ಸಾಮಾಜಿಕ-ಆರ್ಥಿಕ ಚೌಕಟ್ಟು ಭಾರತದಲ್ಲಿ ದುಡಿವ ಬಹುಸಂಖ್ಯಾತರ ಪ್ರಯೋಜನದ ಪರಿಪೂರ್ಣ ಬಳಕೆಗೆ ಇರುವ ಅತ್ಯಂತ ಗಂಭೀರ ತೊಡಕಾಗಿದೆ. ಇದು ನಮ್ಮ ಜನಸಂಖ್ಯೆಯ ಒಂದು ದೊಡ್ಡ ಭಾಗದ ಮಕ್ಕಳುಹಾಗು ಯುವಜನತೆ ಶಿಕ್ಷಣವೂ ಸೇರಿದಂತೆ ಸಮಾಜದ ಇತರ ಎಲ್ಲಾ ಕ್ಷೇತ್ರಗಳಲ್ಲಿ ಲಭ್ಯವಾಗುವ ಸೌಕರ್ಯ ಮತ್ತು ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದೆ. ಈ ಪರಿಸ್ಥಿತಿಯನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ಪರಿಣಾಮಕಾರಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು, ನಾವು ಭಾರತೀಯ ಜಾತಿವ್ಯವಸ್ಥೆಯ ಸ್ವರೂಪವನ್ನು ಐತಿಹಾಸಿಕವಾಗಿ ಅವಕಾಶವಂಚಿತ ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಜನಸಮುದಾಯದ  ದೃಷ್ಟಿಕೋನದಿಂದ ನೋಡಬೇಕಾದ ಅಗತ್ಯ ಇದೆ. 
 
III.ಭಾರತೀಯ ಜಾತಿವ್ಯವಸ್ಥೆ, ಅದು ಕೆಲಸ ಮಾಡುವ ರೀತಿ ಮತ್ತದರ ದುಷ್ಪರಿಣಾಮಗಳು 
 
ಭಾರತೀಯ ಜಾತಿವ್ಯವಸ್ಥೆ ಎಂಬುದು ಕೇವಲ ಕೆಲವರ ಖಯಾಲಿಗೆ ನಡೆಸುವ ಆಚರಣೆ ಮತ್ತು ಪದ್ಧತಿ ಮಾತ್ರವಾಗಿಲ್ಲ; ಅದು ಮೇಲು, ಕೀಳು ಎಂಬ ಶ್ರೇಣೀಕರಣದ, ವಂಚನೆ ಮತ್ತು ಶೋಷಣೆಯ ಒಂದು ವ್ಯವಸ್ಥೆ. ಇದು ವೃತ್ತಿ ಆಧಾರಿತ ಶ್ರೇಣಿ ವ್ಯವಸ್ಥೆ ಕೂಡ. ವಿಶೇಷಾಧಿಕಾರ ಮತ್ತು ಪ್ರತಿಷ್ಠೆ ಹೊಂದಿರುವವರ ಹಿತಾಸಕ್ತಿಗಳನ್ನು ಕಾಪಾಡಲು, ಅನುಕೂಲಗಳ ಏಕಸ್ವಾಮಿತ್ವ ಸಾಧಿಸಲು ಕೆಳಗಿನವರಿಂದ ಅವರಿಗೆ ಅಗತ್ಯವಾದ ಸೇವಾ ದುಡಿಮೆಗಳು ತಪ್ಪದೆ ದೊರಕುವಂತೆ ನೋಡಿಕೊಳ್ಳಲು ಅದರ ವಿನ್ಯಾಸವನ್ನು ರೂಪಿಸಲಾಗಿದೆ. ನಮ್ಮ ದೇಶದಲ್ಲಿ ಸರ್ವವ್ಯಾಪಿಯಾಗಿರುವ ಈ ಜಾತಿವ್ಯವಸ್ಥೆಯು ನಮ್ಮ ದೇಶದ ಎಲ್ಲಾ ಸಾಮಾಜಿಕ, ಶೈಕ್ಷಣಿಕ, ಮತ್ತು ಆರ್ಥಿಕ ಪರಿಸ್ಥಿತಿಯನ್ನು ನಿಯಂತ್ರಿಸುವ ಅತ್ಯಂತ ಮೂಲಭೂತವಾದ ಮತ್ತು ನಿರ್ಣಾಯಕ ವಸ್ತುಸ್ಥಿತಿಯಾಗಿದೆ. ಶತಮಾನಗಳಿಂದ ಇಲ್ಲಿಯವರೆಗೂ ಭಾರತೀಯ ಜಾತಿವ್ಯವಸ್ಥೆಯ ಮುಖ್ಯ ಕಾರ್ಯ ಮತ್ತು ಅದರ ಪರಿಣಾಮ ಎಂದರೆ ಕೃಷಿ ಮತ್ತು ಇನ್ನಿತರ ಕೂಲಿಯಲ್ಲಿ ತೊಡಗಿರುವ  ಜಾತಿವರ್ಗಗಳನ್ನು ಅದೇ ಶ್ರಮಿಕ ವ್ಯವಸ್ಥೆಯೊಳಗೆ ಬಂಧಿಸಿಟ್ಟು, ಅವರು ಸಮಾಜದ ಉನ್ನತ ಸ್ಥಾನಕ್ಕೆ ಹೋಗದಂತೆ ನೋಡಿಕೊಳ್ಳುವುದು; ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅವರನ್ನು ಅವಕಾಶವಂಚಿತರನ್ನಾಗಿ ಮಾಡಿ, ತಮ್ಮ ಏಕಸ್ವಾಮ್ಯವನ್ನು, ಅಂದರೆ ಸಮಾಜದೊಳಗಿನ ಅವಕಾಶಗಳ, ಉನ್ನತ ಸ್ಥಾನಗಳ ಮೇಲಿನ ಹಿಡಿತವನ್ನು ಸವಲತ್ತು ವರ್ಗದ/ಜಾತಿ ಯ ಬಿಗಿ ಹಿಡಿತದಲ್ಲಿಟ್ಟುಕೊಳ್ಳುವುದು.  
Iv ಭಾರತೀಯ ಜಾತಿ ವ್ಯವಸ್ಥೆಯ ಬಲಿಪಶುಗಳು - ಪರಿಶಿಷ್ಟ ಜಾತಿ (SCs), ಪರಿಶಿಷ್ಟ ಬುಡಕಟ್ಟು (STs) ಮತ್ತು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರು OBCs)
 
ಭಾರತೀಯ ಜಾತಿವ್ಯವಸ್ಥೆಯೊಳಗೆ ಪರಿಶಿಷ್ಟ ಜಾತಿಗೆ ಸೇರಿದ ಜನರು ಅತ್ಯಂತ ಹೆಚ್ಚು ತುಳಿತಕ್ಕೊಳಗಾಗಿದ್ದಾರೆ.  ಭಾರತೀಯ ಸಮಾಜ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಕೃಷಿಕೂಲಿಯಾಳು ಜಾತಿಗಳನ್ನು ಮತ್ತು ಮಲಹೊರುವಂತಹ ನಿಕೃಷ್ಟ ಕೆಲಸಗಳನ್ನು ಮಾಡುವಂತಹ ಜಾತಿಗಳನ್ನು ಪರಿಶಿಷ್ಟ ಅಥವಾ ಅನುಸೂಚಿತ ಜಾತಿಗಳ ಅಡಿಯಲ್ಲಿ ಗುರುತಿಸಲಾಗಿದೆ. ಈ ಕೆಲಸಗಳನ್ನು ಇತರ ಯಾರೂ ಒತ್ತಡದ ಹೊರತಾಗಿ ಮಾಡುವುದಿಲ್ಲ. ಶಿಕ್ಷಣ ಹಾಗು ಮತ್ತಿತರ ಸಾಮಾಜಿಕ ಅವಕಾಶಗಳಿಂದ ಪರಿಶಿಷ್ಟ ಜಾತಿಯ ಜನರನ್ನು ವಂಚಿಸಿ, ಅವರಿಗೆ ಆತ್ಮಸ್ಥೈರ್ಯವಿಲ್ಲದಂತೆ ಮಾಡಿ, ಅವರನ್ನು ತಮ್ಮ ಸುತ್ತಲಿನ ಸಮಾಜದಿಂದ ಹೊರಗಿಡಲು ಭಾರತೀಯ ಜಾತಿವ್ಯವಸ್ಥೆ ಬಳಸುವ ಮುಖ್ಯ ಅಸ್ತ್ರ ಎಂದರೆ ಅಸ್ಪ್ಪ್ರೃಶ್ಯತೆ. 
 
ಪರಿಶಿಷ್ಟ ಜಾತಿಗಳಷ್ಟೇ ವಂಚಿತರಾಗಿರುವ, ಸಮಾಜದ ಮುಖ್ಯವಾಹಿನಿಯಿಂದ ಹೊರಗುಳಿದು ಗುಡ್ಡಗಾಡುಗಳಲ್ಲಿ ವಾಸಿಸುವ ಇನ್ನೊಂದು ವರ್ಗವೆಂದರೆ ಪರಿಶಿಷ್ಟ ಬುಡಕಟ್ಟು ಜನಾಂಗ. ಇವರ ಹೊರತಾಗಿ ಅಸ್ಪ್ರಶ್ಯರೆಂದು ಕರೆಸಿಕೊಳ್ಳದಿದ್ದರೂ, ಸಾಮಾಜಿಕ ಮತ್ತು ಶೈಕ್ಷಣಿಕ ಅವಕಾಶಗಳಿಂದ ವಂಚಿತವಾದ ಇನ್ನೊಂದು ವರ್ಗವೆಂದರೆ ಹಿಂದುಳಿದ ವರ್ಗದವರು. ಇವರನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ (OBCs)) ಅಥವ ಇತರ ಹಿಂದುಳಿದ ವರ್ಗ (OBCs) ಮತ್ತು ಹಿಂದುಳಿದ ವರ್ಗ (mcs)) ಎಂದು ಗುರುತಿಸುತ್ತಾರೆ. ಈ ಜಾತಿಯ ಅಡಿಯಲ್ಲಿ ಕುಶಲಕರ್ಮಿಗಳು (ಅಕ್ಕಸಾಲಿಗರು, ಬಡಗಿಗಳು, ಕುಂಬಾರರು, ಕಲ್ಲುಕುಟಿಗರು, ಇತ್ಯಾದಿ), ವಿವಿಧ ರೀತಿಯ ಸೇವೆ ಒದಗಿಸುವವರು (ಕ್ಷೌರಿಕರು), ಕೃಷಿಯೇತರ ಮೂಲೋತ್ಪಾದಕರು (ಮೀನುಗಾರರು) ಮತ್ತು ಕೃಷಿ ಮೂಲೋತ್ಪಾದಕರು (ಕೃಷಿಕರು) ಬರುತ್ತಾರೆ. ಕೃಷಿಯಲ್ಲಿ ತೊಡಗಿರುವ ಕೆಲವು ಜಾತಿಗಳಲ್ಲಿ ಕೆಲವರಿಗೆ ನೀರಾವರಿ, ಮಾರುಕಟ್ಟೆ ಮತ್ತು ಆಧುನಿಕ ತಂತ್ರಜ್ಞಾನ, ಇತ್ಯಾದಿ ಸೌಕರ್ಯಗಳು ಕೈಗೆಟುಕಿ, ಅವರು ಸಾಮಾಜಿಕ ಹಿಂದುಳಿಯುವಿಕೆಯಿಂದ ಪಾರಾಗಿರುತ್ತಾರೆ. 
 
ಈ ಮೇಲಿನ ಮೂರು ಗುಂಪಿನ ಜನರು - ಪರಿಶಿಷ್ಟ ಜಾತಿ (Sಅs), ಪರಿಶಿಷ್ಟ ಬುಡಕಟ್ಟು (Sಖಿs) ಮತ್ತು ಹಿಂದುಳಿದ ವರ್ಗದವರು(ಃಅs) - ಭಾರತದ ಜನಸಂಖ್ಯೆಯ ಅತಿ ಹೆಚ್ಚು (ಸುಮಾರು ಶೇ ೭೫) ಭಾಗವಾಗಿದ್ದಾರೆ ಮತ್ತು ನಮ್ಮ ಆರ್ಥಿಕತೆಯನ್ನು ಮುನ್ನಡೆಸಲು ಬೇಕಾದ ದೈಹಿಕ ಶ್ರಮದ ಶೇ ೧೦೦ ಪಾಲು ಇವರಿಂದ ಬರುತ್ತದೆ. ಹಿಂದು, ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗದಿಂದ ಧರ್ಮಪರಿವರ್ತನೆಗೊಂಡ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಅಲ್ಪಸಂಖ್ಯಾತರು ನಿರ್ದಿಷ್ಟ ಹಿಂದುಳಿದ ವರ್ಗದಡಿ ಬರುತ್ತಾರೆ. 
 
v. ವಸಾಹತುಶಾಹಿ ಕಾಲದಿಂದ ಈಗಿನವರೆಗೆ ಶತಶತಮಾನಗಳ ಭಾರತೀಯ ಜಾತಿವ್ಯವಸ್ಥೆಯ ಮುಂದುವರಿಕೆ ಮತ್ತು ತತ್ಪರಿಣಾಮವಾಗಿ ಮೀಸಲಾತಿ ಮತ್ತು ಇತರೆ ಸಾಮಾಜಿಕ ನ್ಯಾಯ ಕ್ರಮಗಳ ಜಾರಿಯ ಅಗತ್ಯ 
 
ಎರಡು ಶತಮಾನಗಳ ಕಾಲ ನಡೆದ ಬ್ರಿಟಿಷ್ ಆಳ್ವಿಕೆ ಮತ್ತು ತದನಂತರ ಬಂದ ಸ್ವಾತಂತ್ರ್ಯ ಬದಲಾವಣೆಗಳನ್ನೇನೋ ತಂದಿವೆ ಆದರೆ ಮೂಲಭೂತವಾಗಿ ಭಾರತದ ಸಾಮಾಜಿಕ -ಆರ್ಥಿಕ ಚೌಕಟ್ಟನ್ನು ಬದಲಾಯಿಸಿಲ್ಲ. 
 
ಜಾತಿ-ಕುಲಕಸುಬು-ಸಾಮಾಜಿಕ ಸ್ಥಾನಮಾನ,ಇವುಗಳ ನಿರಂತರ ಸಂಬಂಧ ಈ ವರೆಗೂ ಹೇಗೆ ಅನೂಚಾನವಾಗಿ ಮುಂದುವರಿದುಕೊಂಡು ಬಂದಿದೆ ಎಂಬುದನ್ನು ಮಂಡಲ್ ವ್ಯಾಜ್ಯದ ತೀರ್ಪಿನ (೧೬.೧೧.೧೯೯೨) ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಹೇಳಿಕೆಯಲ್ಲಿ ಗೊತ್ತಾಗುತ್ತದೆ: ... ಜಾತಿ ಎನ್ನುವುದು... ಒಂದು ಕಸುಬಿನ ಆಧಾರದ ಮೇಲೆ ಮಾಡಿದ ಗುಂಪು... ಒಬ್ಬ ವ್ಯಕ್ತಿ ತನ್ನ ಕುಲಕಸುಬನ್ನು ಮಾಡುವುದನ್ನು ನಿಲ್ಲಿಸಿದ್ದರೂ ಕೂಡ, ಆತನು ಆ ಕಸುಬಿನ ಗುಂಪಿನ ಸದಸ್ಯನಾಗಿಯೇ ಉಳಿಯುತ್ತಾನೆ... ಆ ಗುಂಪಿನ ಸಾಮಾಜಿಕ ಸ್ಥಾನಮಾನವು ಈ ಗುಂಪು ತೊಡಗಿಕೊಂಡಿದ್ದ ಕಸುಬಿನ ಮೇಲೆ ಆಧಾರಿತವಾಗಿರುತ್ತದೆ. ಕಸುಬು ಕೀಳು ಎಂದು ಪರಿಗಣಿಸಲ್ಪಟ್ಟಷ್ಟು, ಆ ಗುಂಪಿನ ಸಾಮಾಜಿಕ ಸ್ಥಾನಮಾನವೂ ಕೂಡ ಅಷ್ಟೇ ನಿಕೃಷ್ಟವಾಗಿರುತ್ತದೆ. ಕೀಳಾದ ಕಸುಬು ಮಾಡುವ ವ್ಯಕ್ತಿಯನ್ನು ಸಾಮಾಜಿಕವಾಗಿ ಕೀಳು ಸ್ಥಾನದಲ್ಲಿ ಇಡುವುದಷ್ಟೇ ಅಲ್ಲದೆ, ಅದು ಬಡತನಕ್ಕೂ ಕಾರಣವಾಗುತ್ತದೆ; ಅದು ಬಡತನವನ್ನು ಉಂಟುಮಾಡುತ್ತದೆ... ಈ ಸಾಮಾಜಿಕ ಪಿಡುಗನ್ನು ಕುರಿತು ನಮಗಿರುವ ಎಲ್ಲ ಹೇಸಿಗೆ, ವಿರೋಧ ಮತ್ತು ಅದನ್ನು ನಿರ್ಮೂಲನೆಗೊಳಿಸಲು ನಾವು ಮಾಡುವ ಎಲ್ಲಾ ಪ್ರಯತ್ನಗಳ ನಡುವೆಯೂ ಈ ಪರಿಸ್ಥಿತಿ ಹೀಗೆಯೇ ನಮ್ಮ ಕಣ್ಣಿಗೆ ರಾಚುವಂತೆ ಮುಂದುವರಿಯುತ್ತಿದೆ. 
 
ಜಾತಿ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂದರೆ ಅದು ಕೀಳು ಜಾತಿಯವರಿಗೆ ಅಂದರೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಹಿಂದುಳಿದ ವರ್ಗದವರಿಗೆ ಶಿಕ್ಷಣ ಮತ್ತು ಮುನ್ನಡೆಗೆ ಅವಕಾಶಗಳು ಸಿಗದಂತೆ ಮಾಡುತ್ತದೆ. ಇತಿಹಾಸಪೂರ್ವದಲ್ಲಿ ಏಕಲವ್ಯನ ಕಥೆ ನಮಗೆ ಇದಕ್ಕೆ ಪ್ರತೀಕವಾಗಿ ಕಂಡರೆ, ಆಧುನಿಕ ಭಾರತದಲ್ಲಿ ೧೮೫೮ನೇ ಇಸವಿಯಲ್ಲಿ ಆಗಿನ ಬಾಂಬೆ ಪ್ರೆಸಿಡೆನ್ಸಿಯ ವ್ಯಾಪ್ತಿಯಲ್ಲಿ ಬರುತ್ತಿದ್ದ (ಈಗಿನ ಕರ್ನಾಟಕ) ಧಾರವಾಡದಲ್ಲಿ ಅಸ್ಪೃಶ್ಯ (ಮಹರ್) ಜಾತಿಗೆ ಸೇರಿದ ಹುಡುಗನೊಬ್ಬ ಮೊಟ್ಟಮೊದಲ ಬಾರಿಗೆ ಶಾಲೆಗೆ ಸೇರಿದ ಎನ್ನುವ ಕಾರಣಕ್ಕಾಗಿ ’ಮೇಲ್ಜಾತಿ””ಗೆ ಸೇರಿದ ಮಕ್ಕಳ ತಂದೆತಾಯಿಯರೆಲ್ಲರೂ ಆ ಸರಕಾರಿ ಶಾಲೆಯನ್ನೇ ಬಹಿಷ್ಕರಿಸಿದ ನಿದರ್ಶನವಿದೆ. 
 
’ಕಾನೂನಿನ ಎದುರು ಎಲ್ಲರೂ ಸಮಾನರು”ಎಂಬ ಪರಿಕಲ್ಪನೆಯನ್ನು ಬ್ರಿಟಿಷರು ಪರಿಚಯಿಸಿದರೂ, ದಲಿತ, ದಮನಿತರಿಗೆ ಶಿಕ್ಷಣದ ಬಾಗಿಲು ತೆರೆಯಲು ಅವರು ಸಕ್ರಿಯ ಪ್ರಯತ್ನ ಮಾಡಲಿಲ್ಲ. ಕೆಳಜಾತಿಯ ಮಕ್ಕಳು ಉತ್ತಮ ವಿದ್ಯಾರ್ಥಿಗಳಾಗುವ ಎಲ್ಲ ಲಕ್ಷಣಗಳಿದ್ದೂ, ಬ್ರಿಟಿಷ್ ಆಡಳಿತದಲ್ಲಿ ಮೇಲಿನ ಸ್ಥಾನಕ್ಕೆ ಅರ್ಹವಾಗುವ ಎಲ್ಲ ಸಾಧ್ಯತೆಗಳಿದ್ದಾಗಲೂ ಕೂಡ ಮೇಲ್ಜಾತಿ’ಯವರ ಪ್ರತಿರೋಧ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕಾಗಿ, ಬ್ರಿಟಿಷ್ ಶಿಕ್ಷಣ ತಜ್ಞರು ’ತುಚ್ಛ ಜಾತಿ’ಯವರನ್ನು ( ಅವರು ಉತ್ತಮ ವಿದ್ಯಾರ್ಥಿಗಳು ಹಾಗು ವಸಾಹತು ಶಾಹಿ ಆಡಳಿತ ವ್ಯವಸ್ಥೆಯಲ್ಲಿ ಉನ್ನತಾಧಿಕಾರಕ್ಕೆ ಏರಬಲ್ಲ ಸಾಮರ್ಥ್ಯ ವಿದ್ದರೂ ಕೂಡ) ಕ್ರಿಯಾತ್ಮಕವಾಗಿ ಶಿಕ್ಷಣದ ಪರಿಧಿಯೊಳಗೆ ತರುವ ಯಾವುದೇ ಪ್ರಯತ್ನಗಳನ್ನು ಮಾಡದಿರುವ ಬಗ್ಗೆ ನಾನು ಬೇರೆ ಕಡೆ೧ ವಿವರಿಸಿದ್ದೇನೆ. ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಅಸ್ಪೃಶ್ಯ ಜಾತಿಯ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಅವರನ್ನು ತಡೆದು ನಿಲ್ಲಿಸಿ, ಅವರ ಮೇಲೆ ಹಲ್ಲೆ ನಡೆಸಿದ ನಿದರ್ಶನಗಳನ್ನು ಭಾರತೀಯ ಶಿಕ್ಷಣ (ಹಂಟರ್) ಆಯೋಗ (೧೮೮೨) ಪ್ರಸ್ತಾಪಿಸಿದನ್ನು ಕೂಡ ನಾನು ಉಲ್ಲೇಖಿಸಿದ್ದೇನೆ೨. ಆಧುನಿಕ ಶಿಕ್ಷಣ ಮತ್ತು ತನ್ಮೂಲಕವಾಗಿ ದೊರಕುವ ವೃತ್ತಿ ಅವಕಾಶಗಳು ಹಿಂದಿನ ಶತಮಾನಗಳಲ್ಲಿ ಆದಂತೆಯೇ ಆಧುನಿಕ ಭಾರತದಲ್ಲಿ ಕೂಡ ಬೇರೆ ಬೇರೆ ಪ್ರದೇಶಗಳ ಜನಸಂಖ್ಯೆಯ ಕೇವಲ ಶೇ ೩ ರಿಂದ ಶೇ ೨೦ ರಷ್ಟೇ ಇದ್ದ ಕೆಲವೇ ಜಾತಿಗಳ ಏಕಸ್ವಾಮ್ಯದಲ್ಲಿ ಉಳಿದವು. ಮೇಲ್ಜಾತಿಯ ಸ್ವಾಧೀನತೆ ಉಳಿಸಿಕೊಳ್ಳಲು ಜಾತಿಯ ಒಗ್ಗಟ್ಟಿನ ಪರಿಕಲ್ಪನೆ ಕೆಲಸ ಮಾಡಿದರೆ, ಉಳಿದವರನ್ನು ಹೊರಗಿಡಲು ’ಅಸ್ಪೃಶ್ಯತೆ’ಯ ಮಾನದಂಡಗಳು ಬಳಕೆಯಾದವು.
 
ಈ ಪರಿಸ್ಥಿತಿಯಲ್ಲಿ, ಸರ್ಕಾರದಲ್ಲಾಗಲಿ ಅಥವಾ ಆಡಳಿತದಲ್ಲಾಗಲಿ ಯಾವುದೇ ಪಾಲು ಇಲ್ಲದ, ಶಿಕ್ಷಣಕ್ಕೆ ಅದರಲ್ಲೂ ಇಂಗ್ಲಿಷ್ ಶಾಲಾ ಶಿಕ್ಷಣಕ್ಕೆ ಯಾವುದೇ ಅವಕಾಶ ಇಲ್ಲದ ಅಥವ ತೀರ ಕಡಿಮೆ ಅವಕಾಶ ಹೊಂದಿದ ಜಾತಿಗಳು/ಸಮುದಾಯಗಳು ತಮಗೆ ಮೀಸಲಾತಿ ಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟವು. ಹಾಗಾಗಿ  ಮೀಸಲಾತಿ ಎನ್ನುವುದು ಸ್ವಾತಂತ್ರ್ಯ ದೊರೆಯುವ ಮೊದಲೇ ಆಡಳಿತ ನೀತಿಯ ಭಾಗವಾಯಿತು. ವಂಚಿತರನ್ನಾಗಿ ಮಾಡಲು, ಮುಖ್ಯವಾಹಿನಿಯಿಂದ ಹೊರಗಿಡಲು ಜಾತಿಯೇ ಅಸ್ತ್ರವಾಗಿದ್ದ ಸಂದರ್ಭದಲ್ಲಿ, ಮೇಲ್ಮುಖ ಚಲನೆಗೆ ಮತ್ತು ಮೀಸಲು ಹಕ್ಕುದಾರಿಕೆಗೆ ಕೂಡ ಜಾತಿ ಎನ್ನುವುದೇ ಸಹಜ ಅಸ್ತ್ರವಾಯಿತು. 
 
vI. ಭಾರತದ ಸಂವಿಧಾನ ಮತ್ತು ಅದರ ಸಮಾನತಾವಾದಿ ರಚನೆ 
 
೧೯೫೦ರಲ್ಲಿ ಜಾರಿಗೆ ಬಂದ ಭಾರತದ ಸಂವಿಧಾನವು ಸಮಾನತಾವಾದದ ಮನೋಭಾವ ಮತ್ತು ಸದಾ ಕಾಲ ಉಳಿಯುವ  ರಾಷ್ಟ್ರೀಯ ಐಕ್ಯತೆಗೆ ಒಂದು ಭದ್ರ ಬುನಾದಿ ಹಾಕುವ ಗುರಿಯನ್ನು ಹೊಂದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಹಿಂದುಳಿದ ವರ್ಗದವರ ಶ್ರೇಯೋಭಿವೃದ್ಧಿಗಾಗಿ ಭಾರತದ ಸಂವಿಧಾನವು ದೂರಗಾಮಿ ಅವಕಾಶಗಳನ್ನು ಕಲ್ಪಿಸಿದೆ. ಮೀಸಲಾತಿ ಎನ್ನುವುದು ಶತಶತಮಾನಗಳಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು, ಹಿಂದುಳಿದ ವರ್ಗದವರು ಅನುಭವಿಸಿಕೊಂಡು ಬಂದ ಅನ್ಯಾಯವನ್ನು ಸರಿಪಡಿಸಲು, ಶೈಕ್ಷಣಿಕ ಮತ್ತು ಆರ್ಥಿಕ ಅವಕಾಶಗಳು ಅವರಿಗೂ ಸಂಪೂರ್ಣವಾಗಿ ಸಿಗಲು ಮತ್ತು ತನ್ಮೂಲಕವಾಗಿ ಅವರು ಕೂಡ ಸಾಮಾಜಿಕವಾಗಿ ಮೇಲ್ಮಟ್ಟದಲ್ಲಿರುವ ಜಾತಿಗಳನ್ನು ಅಥವಾ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಅಥವಾ ಹಿಂದುಳಿದವರ್ಗವಾಗಿರದ  ಜನರ ಜೀವನಮಟ್ಟದ ಎಲ್ಲಾ ಹಂತದ ಶಿಕ್ಷಣ ಪಡೆಯುವುದೂ ಸೇರಿದಂತೆ ಎಲ್ಲಾ ಗಣನಾಂಶಗಳನ್ನು ತಲುಪಲು ಸಾಧ್ಯವಾಗುವಂತೆ ಮಾಡುವ ಮುನ್ನೋಟವನ್ನಿಟುಕೊಂಡು ಸಂವಿಧಾನವು ರಚಿಸಿದ  ಸಮಗ್ರ ಯೋಜನೆಯ ಒಂದು ಭಾಗ.  
 
vII. ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿ ಮತ್ತು ಸಮಾನತೆಗಾಗಿ ಜಾರಿಗೊಳಿಸಿದ ಸಾಮಾಜಿಕ ನ್ಯಾಯ ಯೋಜನೆಗಳು - ಅದರ ಪರಿಣಾಮಗಳು ಮತ್ತು ಇತಿಮಿತಿಗಳು 
 
ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಮಾನತೆ ಮತ್ತು ಶೈಕ್ಷಣಿಕ ಅಭಿವೃದ್ಧಿ ಸಾಧ್ಯವಾಗಿಸಲು ಹಲವು ಮುಖ್ಯ ಯೋಜನೆಗಳನ್ನು ರಾಷ್ಟ್ರೀಯ ಮಟ್ಟದಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಪ್ರಾರಂಭಿಸಲಾಯಿತು. ವೈಸ್‌ರಾಯ್ ಅವರ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ೧೯೪೩ರಲ್ಲಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಪೋಸ್ಟ್‌ಮೆಟ್ರಿಕ್ ಸ್ಕಾಲರ್‌ಶಿಪ್ ಆರಂಭಿಸುವ ಮೂಲಕ ಡಾ. ಅಂಬೇಡ್ಕರ್ ಇದಕ್ಕೆ ನಾಂದಿ ಹಾಡಿದರು. 
ಈ ಕ್ರಮಗಳು ಸ್ವಲ್ಪ ಮಟ್ಟಿಗೆ ಪರಿಸ್ಥಿತಿಯನ್ನು ಸುಧಾರಿಸಿದರೂ, ಗ್ರಾಮೀಣ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿಗೆ ಮತ್ತು ಜಮೀನುರಹಿತ ಕೃಷಿ ಕುಟುಂಬಗಳಿಗೆ ಅಗತ್ಯವಾದಷ್ಟು ಕೃಷಿ ಜಮೀನು, ಎಲ್ಲ ದಲಿತ ಮತ್ತು ಬುಡಕಟ್ಟು ಕುಟುಂಬಗಳ ಬೇಸಾಯಕ್ಕೆ ಅಗತ್ಯವಾದಷ್ಟು ನೀರಾವರಿ, (ಇವೆರಡೂ ಆಳುವ ಪಕ್ಷಗಳು ಮತ್ತು ಸರಕಾರ ಮಾಡುವ ವಿದ್ಯುಕ್ತ ಆಶ್ವಾಸನೆಗಳು ಆದರೆ ಇದನ್ನು ಸರಕಾರ ಮತ್ತು ಪಕ್ಷಗಳು ಅಷ್ಟೆ ನಿರ್ಲಜ್ಜವಾಗಿ ಮರೆತುಹೋಗುತ್ತವೆ); ಮತ್ತು  ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಪ್ರಾಥಮಿಕ ಮತ್ತು ಪ್ರಾಥಮಿಕ ಪೂರ್ವ ಹಂತದ ಮಕ್ಕಳಿಗೆ ಗುಣಾತ್ಮಕ ಸಾರ್ವತ್ರಿಕ ಶಿಕ್ಷಣವನ್ನು ಸಂಪೂರ್ಣ ಪ್ರಮಾಣದಲ್ಲಿ ಒದಗಿಸಲು ಸಾಧ್ಯವಾಗುವಂತಹ ಅಗತ್ಯ ಆರ್ಥಿಕ ಕ್ರಮಗಳನ್ನು ಕೈಗೊಳ್ಳುವಲ್ಲಿನ ಸರಕಾರದ ವೈಫಲ್ಯದಿಂದಾಗಿ ಈ ಯೋಜನೆಗಳು ಸಂಪೂರ್ಣ ಫಲಪ್ರದವಾಗಿಲ್ಲ. 
 
vIII. ಸಾಮಾಜಿಕವಾಗಿ ಮೇಲ್ಮಟ್ಟದಲ್ಲಿರುವ ಜಾತಿಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಜನಾಂಗ ಅಥವ ಹಿಂದುಳಿದವರ್ಗವಾಗಿರದ ಜಾತಿಗಳಿಗೆ  ಹೋಲಿಸಿದರೆ ಪರಿಶಿಷ್ಟ ಜಾತಿ ,ಪರಿಶಿಷ್ಟ ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗದವರು  ಈಗಲೂ ಎದುರಿಸುತ್ತಿರುವ ಶೈಕ್ಷಣಿಕ ಅಸಮಾನತೆಯ ಪರಿಸ್ಥಿತಿ :
 
ಒಂದು ಕಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನಾಂಗದವರು  ಇದ್ದರೆ ಇನ್ನೊಂದೆಡೆ ಸಾಮಾಜಿಕವಾಗಿ ಮೇಲ್ಮಟ್ಟದಲ್ಲಿರುವ ಜಾತಿಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಜನಾಂಗ ಅಥವ ಹಿಂದುಳಿದವರ್ಗವಾಗಿರದ ಜಾತಿಗಳು  ಇವೆ. ಇವರ ನಡುವೆ ಇರುವವರು ಹಿಂದುಳಿದ ವರ್ಗದವರು . ಇವರ ಜೀವನಮಟ್ಟ ಸಾಮಾನ್ಯವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನಾಂಗ ಗಳಿಗೆ ಹತ್ತಿರವಾಗಿರುತ್ತದೆ. ಶೈಕ್ಷಣಿಕ ಅಸಮಾನತೆಯ ಮುಂದುವರಿಕೆ ಪ್ರತಿ ಹಂತದಲ್ಲೂ ನಮಗೆ ಕಾಣಸಿಗುತ್ತದೆ. 
 
ಹದಿನೈದು ವರ್ಷದವರಿಗಿಂತ ಮೇಲಿನ ವಯೋಮಾನದವರಿಗೆ ಸಂಬಂಧಿಸಿದಂತೆ NSSO ಪ್ರಕಟಿಸಿದ ದತ್ತಾಂಶಗಳು ಇದನ್ನು ತೋರಿಸುತ್ತವೆ: 
 
 
 
 
Ix. ಭಾರತದ ಆರ್ಥಿಕ ಪ್ರಗತಿ ಮತ್ತು ಮಾನವ ಸಂಪನ್ಮೂಲದ ಸಂಪೂರ್ಣ ಅಭಿವೃದ್ಧಿಯನ್ನು ಸಾಧಿಸುವಲ್ಲಿ ದುಡಿವ ಬಹುಸಂಖ್ಯಾತರ ಪ್ರಯೋಜನವನ್ನು ಪರಿಣಾಮಕಾರಿಯಾಗಿ ಬಳಸಬೇಕಾದ ಅಗತ್ಯತೆ  
 
ಭಾರತದ ಜನಸಮುದಾಯದಲ್ಲಿ ಇರುವ ಅಸಮಾನತೆಯನ್ನು ಹೋಗಲಾಡಿಸಲು ಕ್ರಮಗಳನ್ನು ಕೈಗೊಳ್ಳುವ ತನಕ, ನಾವು ಸಂವಿಧಾನಬದ್ಧ ಸಮಾನತೆಯ ಗುರಿಯನ್ನು ಸಾಧಿಸಲಾಗಲಿ ಅಥವ ಭಾರತದ ಆರ್ಥಿಕ ಪ್ರಗತಿಗೆ ಅತ್ಯಗತ್ಯವಾದ ದುಡಿವ ಬಹುಸಂಖ್ಯಾತರ ಪ್ರಯೋಜನ ಬಳಸಿಕೊಳ್ಳಲಾಗಲಿ ಸಾಧ್ಯವಾಗುವುದಿಲ್ಲ. ಇನ್ನೊಂದರ್ಥದಲ್ಲಿ ಹೇಳುವುದಾದರೆ, ನಾವು ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಹಿಂದುಳಿದ ವರ್ಗದವರನ್ನು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ, ಸಾಮಾಜಿಕವಾಗಿ ಮುಂದುವರಿದ ಜಾತಿಗಳ ಮಟ್ಟಕ್ಕೆ ಮುಟ್ಟುವಂತೆ ಮಾಡಿ ದೇಶದ ಪ್ರಗತಿಗೆ ಅಗತ್ಯವಾದ ಸಮಾನತೆಯ ಪ್ರಯೋಜನ (Equality Dividend)ದ ಪರಿಕಲ್ಪನೆಯನ್ನು ಸಾಕ್ಷಾತ್ಕಾರಗೊಳಿಸಬೇಕಿದೆ.  
 
x. ಸಮಾನತೆಯನ್ನು ಸಾಧಿಸಲು ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಜನಾಂಗದ ಮತ್ತು ಹಿಂದುಳಿದ ವರ್ಗದ ಜಾತಿ ಸಮುದಾಯಗಳಿಗೆ ಒದಗಿಸಬೇಕಾದ ಅಗತ್ಯ ಕ್ರಮಗಳು.
ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಜನಾಂಗದವರು ಮತ್ತು ಹಿಂದುಳಿದ ವರ್ಗದ ಜಾತಿ ಸಮುದಾಯಗಳಿಗೆ ಸಾಮಾಜಿಕವಾಗಿ ಮುಂದುವರಿದ ಜಾತಿಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಜನಾಂಗ ಅಥವ ಹಿಂದುಳಿದವರ್ಗವಾಗಿರದ ಜಾತಿ  ಸಮುದಾಯಗಳ ಮಟ್ಟಕ್ಕೆ ಸಮಾನವಾಗಿ ಎಲ್ಲಾ ಶೈಕ್ಷಣಿಕ ಹಂತಗಳಲ್ಲೂ ಸಮಾನ ಅವಕಾಶಗಳನ್ನು ಪಡೆಯುವ ಹಕ್ಕನ್ನು (ಆರ್ಥಿಕ, ಆರೋಗ್ಯ ಮತ್ತು ವಾಸ್ತವ್ಯ ಮತ್ತು ಉದ್ಯೋಗದ ಸಮಾನ ಅವಕಾಶಗಳ ಜೊತೆಗೆ) ಸಾಧ್ಯಮಾಡಿಸಲು ಅಗತ್ಯವಾದ ಕ್ರಮಗಳನ್ನು ನಾನು ಈ ಹಿಂದೆ ತಯಾರಿಸಿದ/ಅಥವ ಭಾಗಿಯಾಗಿದ್ದ ವಿವಿಧ ದಾಖಲೆಗಳಲ್ಲಿ ಸ್ಪಷ್ಟವಾಗಿ ವಿವರಿಸಲಾಗಿದೆ. ೩, ೪, ೫, ೬ ೭ ಈ ಹಿಂದೆ ಸರಕಾರಿ ಕಾರ್ಯಕ್ರಮಗಳಿಗೆ ನಾನು ಬರೆದಿದ್ದ ಯೋಜನಾ ಪತ್ರಗಳು ಮತ್ತು ಸಲಹಾ ಟಿಪ್ಪಣಿಗಳ ಜೊತೆಗೆ ಈ ದಾಖಲೆಗಳು ಕೂಡ ಧೂಳು ತಿನ್ನುತ್ತಾ ಇಷ್ಟು ವರುಷವೂ ಸರಕಾರಿ ಕಪಾಟುಗಳಲ್ಲಿ ಕುಳಿತಿವೆ. 
 
ಅವುಗಳಲ್ಲಿ ಅತಿಮುಖ್ಯವಾದುದ್ದನ್ನು ಇಲ್ಲಿ ಪಟ್ಟಿಮಾಡಲಾಗಿದೆ:
೧. ಪ್ರತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನಾಂಗದ ವಾಸಸ್ಥಾನದಲ್ಲಿ ಮತ್ತು ಪ್ರತ್ಯೇಕವಾಗುಳಿದಿರುವ ಹಿಂದುಳಿದ ವರ್ಗಗಳ ವಾಸಸ್ಥಾನದಲ್ಲಿ (ಉದಾ, ಮೀನುಗಾರರ ಹಳ್ಳಿಗಳು) ಒಂದು ಅಂಗನವಾಡಿ ಇದ್ದು ಅಲ್ಲಿ ಮಾಂಟೆಸರಿ ಅಥವ ಶಿಶುಪಾಲನೆಯ ಇತರ ವಿಧಾನಗಳಲ್ಲಿ ತರಬೇತಿ ಪಡೆದಿರುವ ಒಬ್ಬ ಕಾರ್ಯಕರ್ತೆ ಇರಬೇಕು. 
೨. ಪರಿಶಿಷ್ಟ ಬುಡಕಟ್ಟು ಜನಾಂಗದ ಮಕ್ಕಳಿಗೆ ೧.೭.೨೦೧೨ರಿಂದ ಕೊಡಮಾಡಿರುವ ಮ್ಯಾಟ್ರಿಕ್‌ಪೂರ್ವ ಸ್ಕಾಲರ್‌ಶಿಪ್ ರೀತಿಯಲ್ಲಿ ಪರಿಶಿಷ್ಟ ಸಮುದಾಯದ ಮಕ್ಕಳಿಗೂ ೧ರಿಂದ ೧೦ನೇ ತರಗತಿಯವರೆಗೆ ಒಂದು ಮುಕ್ತ ಮ್ಯಾಟ್ರಿಕ್‌ಪೂರ್ವ ಸ್ಕಾಲರ್‌ಶಿಪ್ ಯೋಜನೆ ಜಾರಿಗೊಳಿಸುವುದು.
೩. ಪ್ರತಿ ಬ್ಲಾಕಿನಲ್ಲಿ ೬ರಿಂದ ೧೨ನೇ ತರಗತಿಯವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನಾಂಗದ ಗಂಡುಮಕ್ಕಳಿಗೆ ಮತ್ತು ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಉತ್ತಮ ಗುಣಮಟ್ಟದ ಸಮುದಾಯ ವಸತಿ ಶಾಲೆಗಳನ್ನು ಸ್ಥಾಪಿಸಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟು ಜನಾಂಗದ ಮಕ್ಕಳ ವಸತಿಶಾಲೆಗಳಲ್ಲಿ ಶೇ ೭೫ರಷ್ಟು ಸೀಟುಗಳು ಆಯಾ ವರ್ಗದ ಮಕ್ಕಳಿಗೆ ಮೀಸಲಾಗಿರಬೇಕು ಮತ್ತುಳಿದ ಶೇ೨೫ ಸೀಟುಗಳನ್ನು Sಂಅs/ಓSಅಖಿಃಅs ಸಮುದಾಯಗಳ ಬಡಕುಟುಂಬದ ಮಕ್ಕಳಿಗೆ ಮೀಸಲಿಡುವುದು. ಈ ಶೇ೭೫ -ಶೇ೨೫ ಆನುಪಾತವು ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ಜನಸಮುದಾಯದ ಅವಶ್ಯಕತೆಯನ್ನು ಪೂರೈಸುವುದಷ್ಟೇ ಅಲ್ಲದೆ, ಸಾಮಾಜಿಕ ಐಕ್ಯತೆಯ ಉದ್ದೇಶವನ್ನೂ ಈಡೇರಿಸುತ್ತದೆ. ಈ ವಸತಿ ಶಾಲೆಗಳ ಸಂಖ್ಯೆಯು ಈ ಹಂತದ ಶಿಕ್ಷಣ ಪಡೆಯುವ ಎಲ್ಲಾ ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟು ಸಮುದಾಯದ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿರಬೇಕು. ನವೋದಯ ಮತ್ತು ಇತರೆ ಕೇಂದ್ರೀಯ ಶಾಲೆಗಳಲ್ಲಿ ಜನಸಂಖ್ಯೆಯ ಪ್ರಮಾಣ ಅನುಪಾತದಲ್ಲಿ ಕೊಡಮಾಡುವ ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟು ಜನಾಂಗದ ಮೀಸಲಾತಿಯು ಶತಮಾನಗಳಿಂದ ಬಳುವಳಿಯಾಗಿ ಪಡೆದಿರುವ ಅಸಮಾನತೆಯ ಭಾರವನ್ನು ಕುಗ್ಗಿಸಲು ಅಸಮರ್ಥವಾಗಿದೆ.  
 
ಹಿಂದುಳಿದ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೂ ಇದೇ ರೀತಿಯ ಸುಧಾರಣಾ ಕ್ರಮದ ಅಗತ್ಯವಿದೆ. 
 
ಆಂಧ್ರಪ್ರದೇಶದಲ್ಲಿ ಕಳೆದ ಮೂರುವರೆ ದಶಕಗಳಿಂದ ಇಂತಹ ಒಂದು ಯಶಸ್ವಿ ಮಾದರಿ ಜಾರಿಯಲ್ಲಿದೆ. ಇಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಕ್ಕಳಿಗೆಂದೇ ೨೮೮ ವಸತಿ ಶಾಲೆಗಳಿವೆ ಮತ್ತು ಅಷ್ಟೇ ಪ್ರಮಾಣದಲ್ಲಿ ಪರಿಶಿಷ್ಟ ಬುಡಕಟ್ಟು ಜನಾಂಗದ ಮಕ್ಕಳಿಗೂ ವಸತಿ ಶಾಲೆಗಳಿವೆ. ಹಿಂದುಳಿದ ವರ್ಗದವರಿಗೆ ಸುಮಾರು ೫೦ ವಸತಿ ಶಾಲೆಗಳಿವೆ. ಈ ಶಾಲೆಗಳ ೧೨ನೇ ತರಗತಿಯ ಫಲಿತಾಂಶವು ರಾಜ್ಯದ ಸರಾಸರಿ ಫಲಿತಾಂಶಕ್ಕಿಂತ ಗಣನೀಯವಾಗಿ ಹೆಚ್ಚಿದೆ. ನನ್ನ ಸಲಹೆಯಂತೆ, ರಾಷ್ಟ್ರೀಯ ಮಟ್ಟದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಹಿಂದುಳಿದ ವರ್ಗದ ಮಕ್ಕಳಿಗೆ ವಸತಿಶಾಲೆಗಳನ್ನು ನಿರ್ಮಿಸಲು ೧೯೯೬ರಲ್ಲಿ ರೂ. ೨೫೦ ಕೋಟಿ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು, ಇದನ್ನು ಮುಂದಕ್ಕೆ ರೂ. ೪೦೦ ಕೋಟಿಗೇರಿಸಲಾಯಿತಾದರೂ, ಇದನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಿಲ್ಲ. 
 
೪. ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಖಾಸಗಿಯವರು ನಡೆಸುತ್ತಿರುವ ವೃತ್ತಿಪರ, ತಾಂತ್ರಿಕ ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ, ಇತರ ಬೆಂಬಲಕ್ರಮಗಳು ಮತ್ತು ವ್ಯವಸ್ಥೆಗಳೊಂದಿಗೆ, ಸಂವಿಧಾನದ (೯೩ನೇ ತಿದ್ದುಪಡಿ) ಅಧಿನಿಯಮ, ೨೦೦೫ರಂತೆ ಮೀಸಲಾತಿ. 
೫. ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟು ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳು ಪೋಸ್ಟ್‌ಮ್ಯಾಟ್ರಿಕ್ ಸ್ಕಾಲರ್‌ಶಿಪ್ ಮತ್ತು ಸಾಗರೋತ್ತರ ಸ್ಕಾಲರ್‌ಶಿಪ್ ಯೋಜನೆಗಳ ಲಾಭ ಪಡೆಯಲು ಇರುವ ಅಡೆತಡೆಗಳನ್ನು ನಿವಾರಿಸುವುದು (೧೯೪೩ರಲ್ಲಿ ಅಂಬೇಡ್ಕರ್ ಮಾಡಿದ ಯೋಜನೆಗಳು) ಉದಾ, ಕುಟುಂಬದ ಆದಾಯದ ಮಿತಿ, ಅದೂ ಕೂಡ ಸ್ವವೈಫಲ್ಯಕಾರಿಯಾಗುವಂತಹ ಕಡಿಮೆ ಪ್ರಮಾಣದಲ್ಲಿ; ಮತ್ತು ಸಾಗರೋತ್ತರ ಸ್ಕಾಲರ್‌ಶಿಪ್ ಯೋಜನೆಯ ವಿಸ್ತರಣೆ. 
೬. ಇದೇ ರೀತಿಯಾಗಿ ರಾಷ್ಟ್ರೀಯ ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟು ಹಣಕಾಸು ಮತ್ತು ಅಭಿವೃದ್ಧಿ ನಿಗಮ ದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನಾಂಗದ ಮಕ್ಕಳು ವೃತ್ತಿಪರ ಮತ್ತು ತಾಂತ್ರಿಕ ಶಿಕ್ಷಣಕ್ಕಾಗಿ ಸಾಲ ಪಡೆದುಕೊಳ್ಳಲು ಕುಟುಂಬದ ವಾರ್ಷಿಕ ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ. ೪೦,೦೦೦ ಮತ್ತು ನಗರ ಪ್ರದೇಶದಲ್ಲಿ ರೂ. ೫೫,೦೦೦. ಇಂತಹ ಅವಿವೇಕದಿಂದ ಕೂಡಿದ ಆದಾಯ ಮಿತಿಯನ್ನು ತೆಗೆದುಹಾಕುವುದು.
 
ಶಿಕ್ಷಣದ ಎಲ್ಲಾ ಹಂತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಇತರ ಹಿಂದುಳಿದ ವರ್ಗದ  (Sಅ, Sಖಿ, ಔಃಅs) ಹಾಗು Sಂಅs/ಓSಅಖಿಃಅs ಗಳ ನಡುವೆ ಇರುವ ಅಂತರವನ್ನು ಕಡಿಮೆ ಮಾಡಲು ಅಗತ್ಯವಾದ ಮೇಲೆ ಚರ್ಚಿಸಿದ ಕ್ರಮಗಳು ಮತ್ತು ಇನ್ನಿತರ ಹಲವು ಯೋಜನೆಗಳನ್ನು ಕುರಿತು ಹೆಚ್ಚಿನ ಮಾಹಿತಿಯನ್ನು ಆಸಕ್ತರಿಗೆ ಒದಗಿಸಲು ನಾನು ಸಂತೋಷಪಡುತ್ತೇನೆ.  
 
xI. ಶಾಲೆ ಮತ್ತು ಇನ್ನಿತರ ಶೈಕ್ಷಣಿಕ ಸಂಸ್ಥೆಗಳಿಂದ ’ಅಸ್ಪೃಶ್ಯತೆ” ಮತ್ತು ಸಾಮಾಜಿಕ ನ್ಯಾಯಕ್ರಮಗಳನ್ನು ಕುರಿತು ಇರುವ ಪೂರ್ವಗ್ರಹಗಳನ್ನು ತೊಡೆದುಹಾಕುವುದು 
 
ರಾಷ್ತ್ರೀಯ ಮತ್ತು ಸಂವೈಧಾನಿಕ ಬದ್ಧತೆಯನ್ನು ಪಾಲಿಸಿ, ಶಿಕ್ಷಣದಲ್ಲಿ ಸಮಾನತೆಯನ್ನು ತರಲು ಮಾಡುವ ಎಲ್ಲಾ ಮಾನವ ಪ್ರಯತ್ನಗಳನ್ನು ’ಅಸ್ಪ್ರಶ್ಯತೆ’ ಎಂಬ ಪಿಡುಗು ಮತ್ತು ಸಾಮಾಜಿಕ ನ್ಯಾಯಕ್ರಮಗಳ ಬಗ್ಗೆ ಜನರಿಗಿರುವ ಪೂರ್ವಗ್ರಹಗಳು ಹಿಂದಕ್ಕೆ ಜಗ್ಗುತ್ತಿರುತ್ತವೆ. Human Right Watch ಎಂಬ ಸಂಸ್ಥೆಯು ೨೨.೪.೨೦೧೪ರಂದು ಹೊರತಂದ ’ ಅವರು ಹೇಳುತ್ತಾರೆ ನಾವು ಕೊಳಕು ಎಂದು: ಭಾರತದ ಸಾಮಾಜಿಕ ಕಡುಬಡವರಿಗೆ ವಿದ್ಯಾಭ್ಯಾಸ ನಿರಾಕರಣೆ   ಎಂಬ ವರದಿಯಲ್ಲಿ ಶಾಲೆಗಳಲ್ಲಿ ಹೇಗೆ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಈ ಅಧ್ಯಯನವನ್ನು ದೇಶದ ರಾಜಧಾನಿ ದೆಹಲಿ ಸೇರಿದಂತೆ ಭಾರತದ ಇತರ ನಾಲ್ಕು ರಾಜ್ಯಗಳಲ್ಲಿ ಕೈಗೊಳ್ಳಲಾಗಿತ್ತು. ಭಾರತದ ಬಹಳಷ್ಟು ರಾಜ್ಯಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.
 
ಅಸ್ಪೃಶ್ಯತೆ ಮತ್ತು ಸಾಮಾಜಿಕ ನ್ಯಾಯಕ್ರಮಗಳ ಬಗ್ಗೆ ಇರುವ ಪೂರ್ವಗ್ರಹಗಳನ್ನು ತೊಡೆದುಹಾಕಲು ಈ ಕೆಳಗಿನ ಕ್ರಮಗಳನ್ನು ತೆಗೆದುಕೊಳ್ಳಬೇಕು: 
 
೧. ಶಾಲಾ ತರಗತಿಯಲ್ಲಿ ಮತ್ತು ಮಧ್ಯಾಹ್ನದ ಬಿಸಿಯೂಟದ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನಾಂಗಕ್ಕೆ ಸೇರಿದ ಮಕ್ಕಳು ಇತರ ಮಕ್ಕಳೊಂದಿಗೆ ಒಟ್ಟಾಗಿ ಕುಳಿತುಕೊಳ್ಳುವಂತೆ ಮಾಡುವುದು. ಅಸ್ಪೃಶ್ಯತೆಯ ವಿರುದ್ಧದ ಪರಿಣಾಮಕಾರಿ ಕ್ರಮವಾಗಿ ಬಿಸಿಯೂಟ ತಯಾರಿಯಲ್ಲಿ ಅಥವ ಬಡಿಸುವ ಕೆಲಸದಲ್ಲಿ ಒಬ್ಬರು ಕಡ್ಡಾಯವಾಗಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆ ಇರಬೇಕು. ಇದಕ್ಕೆ ಎದುರಾಗುವ ಪ್ರತಿರೋಧವನ್ನು ಖಂಡಿಸಬೇಕು.
 
೨. ಶಾಲಾ, ಕಾಲೇಜುಗಳ ಪ್ರತಿಯೊಂದು ಹಂತದಲ್ಲೂ, ಪ್ರತಿಯೊಂದು ಶಿಕ್ಷಕ ತರಬೇತಿ ಕೇಂದ್ರದಲ್ಲೂ ಮಾನವ ಹಕ್ಕುಗಳ ಕುರಿತಾಗಿನ ಶಿಕ್ಷಣವನ್ನು, ಅದರಲೂ ಮುಖ್ಯವಾಗಿ ಭಾರತೀಯ ಜಾತಿ ವ್ಯವಸ್ಥೆಯ ಮಾನವ ವಿರೋಧಿ, ರಾಷ್ಟ್ರವಿರೋಧಿ ಮತ್ತು ಅಸಂವಿಧಾನಿಕ ಲಕ್ಷಣವನ್ನು, ಜಾತಿಯಾಧಾರಿತ ನಿಷ್ಠೆ, ಪಕ್ಷಪಾತ ಮತ್ತು ವೈಷಮ್ಯವನ್ನು, ಅದರಲ್ಲೂ ನಿರ್ದಿಷ್ಟವಾಗಿ ’ಅಸ್ಪೃಶ್ಯತೆ’ ಅಧಾರಿತ ಭೇದಭಾವಗಳನ್ನು ಕುರಿತು ಅರಿವು ಮೂಡಿಸಬೇಕು ಮತ್ತು ಸಂವಿಧಾನಬದ್ಧ ಸಮಾನತೆಯ ಕಲ್ಪನೆಯನ್ನು ಎತ್ತಿಹಿಡಿಯಬೆಕು. ಮಾನವ ಹಕ್ಕುಗಳ ಶಿಕ್ಷಣ ಸಂಸ್ಥೆ  ಯ ಅನುಭವವನ್ನು ಬಳಸಿಕೊಳ್ಳಬೇಕು. ಈ ಸಂಸ್ಥೆಯ ಬಲವರ್ಧನೆಯಲ್ಲಿ   ಧನಸಹಾಯ ಮತ್ತಿತರ ವಿಷಯಗಳಲ್ಲಿ ಸರಕಾರದ ಸಕ್ರಿಯ ಭಾಗವಹಿಸುವಿಕೆ ಅಗತ್ಯ ಇದೆ. 
 
 
೩. ಶೈಕ್ಷಣಿಕ ಸಂಸ್ಥೆಗಳಲ್ಲಿ ಅಸ್ಪೃಶ್ಯತೆ ಆಧಾರಿತ ಎಲ್ಲಾ ರೀತಿಯ ಭೇದ ಭಾವಗಳನ್ನು ತೊಡೆದುಹಾಕುವಲ್ಲಿ ಶಿಕ್ಷಕ ಸಮುದಾಯವು ಒಂದು ಸುರಕ್ಷಿತ ತಡೆಗೋಡೆಯ ರೂಪದಲ್ಲಿ ಕೆಲಸಮಾಡಬೇಕು. ಅದಕ್ಕಾಗಿ ಶಿಕ್ಷಕ ಸಮುದಾಯದಲ್ಲಿ ಸೂಕ್ತ ಸಂವೇದನೆ ಮೂಡಿಸಲು ಒಂದು ಸಮಗ್ರ ಆಂದೋಲನವನ್ನು ನಡೆಸಬೇಕು. 
೪. ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ರಮಗಳು ಇವತ್ತಿಗೂ ಅನಿವಾರ್ಯ ಮತ್ತು ಅತ್ಯಗತ್ಯ ಆಗಿರುವಂತೆ ಮಾಡಿರುವ ಐತಿಹಾಸಿಕ ಪರಿಸ್ಥಿತಿಗಳನ್ನು, ಕಾರಣಗಳನ್ನು ಮಾನವಹಕ್ಕು ಶಿಕ್ಷಣ ಮನವರಿಕೆ ಮಾಡಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಹಿಂದುಳಿದ ವರ್ಗವನ್ನು ಒಳಗೊಂಡಂತೆ ಎಲ್ಲ ಹಿಂದುಳಿದ ವರ್ಗಗಳು, ಅದರಲ್ಲೂ ವಿಶೇಷವಾಗಿ ಈ ವರ್ಗದ ಮಹಿಳೆಯರು ಮತ್ತು ಬಲಹೀನ ಸಮುದಾಯಗಳ ಸಮಾನತೆ ಮತ್ತು ಅಭಿವೃದ್ಧಿಯನ್ನು ಕುರಿತ ಸಂವೈಧಾನಿಕ ನೆಲೆಗಟ್ಟು ಮತ್ತು ರಾಷ್ಟ್ರದ ಪ್ರಗತಿಗೆ ಅದರ ಅವಶ್ಯಕತೆಯನ್ನು ಸ್ಪಷ್ಟಪಡಿಸಿ, ಈ ಕಾರ್ಯದಲ್ಲಿ ಭಾಗಿಯಾಗಲು ಪ್ರತಿಯೊಬ್ಬರಿಗೂ ಇರಬೇಕಾದ ರಾಷ್ಟ್ರಭಕ್ತಿಯ ಅಗತ್ಯವನ್ನು ಮನಗಾಣಿಸಬೇಕು. 
 
ಸಂಪೂರ್ಣ ಫಲಿತಾಂಶ ಸಾಧ್ಯವಾಗಬೇಕಾದರೆ ಈ ಶೈಕ್ಷಣಿಕ ಕ್ರಮಗಳ ಜೊತೆಜೊತೆಗೆ ಆರ್ಥಿಕ ಔದ್ಯೋಗಿಕ, ಆರೋಗ್ಯ ಮತ್ತು ಪೋಷಣೆ ಮತ್ತು ಪ್ರತಿದಿನ ಬದುಕಿನ ಪರಿಸ್ಥಿತಿ ಸುಧಾರಣೆಯ ಕ್ರಮಗಳು ದೊರಕಬೇಕು. ಆಸಕ್ತರಿಗೆ ಈ ನೆರವಿನ ವ್ಯವಸ್ಥೆಗಳನ್ನು ಕುರಿತ ಹೆಚ್ಚಿನ ವಿವರಗಳನ್ನು ನಾನು ನೀಡಬಲ್ಲೆ. 
 
ಈ ಕಾರ್ಯದಲ್ಲಿ ಸ್ವಯಂ ಸೇವಾಸಂಸ್ಥೆಗಳು ಮತ್ತು ಟ್ರಸ್ಟ್‌ಗಳು ತಮ್ಮ ಕೊಡುಗೆಯನ್ನು ಅರ್ಥಪೂರ್ಣವಾಗಿ ಹೇಗೆ ನೀಡಬಹುದು?
 
ಈ ಕಾರ್ಯದ ಗಾತ್ರ ಎಷ್ಟಿದೆಯೆಂದರೆ ಇದನ್ನು ಅದರ ಪೂರ್ಣಪ್ರಮಾಣದಲ್ಲಿ ನಿಭಾಯಿಸಲು ಸಾಧ್ಯವಾಗುವುದು ಕೇವಲ ಕೇಂದ್ರ ಮತ್ತು ರಾಜ್ಯ ಸರಕಾರದ ಸಂಸ್ಥೆಗಳಿಗೆ ಮಾತ್ರ. ಆದರೆ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಟ್ರಸ್ಟ್‌ಗಳು ಕೂಡ ಗಮನಾರ್ಹ ರೀತಿಯಲ್ಲಿ ತಮ್ಮ ಸೇವೆ ಸಲ್ಲಿಸಬಹುದು. ಉದಾಹರಣೆಗೆ, ಇಂತಹ ಪ್ರತಿಯೊಂದು ಸಂಸ್ಥೆ ಅಥವ ಟ್ರಸ್ಟ್ ಒಂದು ರಾಜ್ಯದ/ಒಂದು ಅಥವ ಹೆಚ್ಚಿನ ಜಿಲ್ಲೆಯ/ಒಂದು ಅಥವ ಹೆಚ್ಚಿನ ಬ್ಲಾಕಿನ ಅಥವ ಒಂದು ಅಥವ ಹೆಚ್ಚು ಹಳ್ಳಿ/ಪಟ್ಟಣದ ಎಲ್ಲ ಹಳ್ಳಿಗಳನ್ನು ಅಥವ ಪಟ್ಟಣಗಳನ್ನು ತಮ್ಮ ಸೇವಾಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡು, ಅಲ್ಲಿ ಅಂಗನವಾಡಿಗಳನ್ನು ಅಥವ/ಮತ್ತು ಮೇಲೆ (x) (೧) ಮತ್ತು (೩) ಹೇಳಿದ ರೀತಿಯ ವಸತಿಶಾಲೆಗಳನ್ನು ಸ್ಥಾಪಿಸಬಹುದು. ಪ್ರಾಮಾಣಿಕವಾದ ಶೈಕ್ಷಣಿಕ ಮತ್ತು ಸಾಮಾಜಿಕ ಕಾಳಜಿಯಿಟ್ಟುಕೊಂಡು ಖಾಸಗಿ ಶಾಲೆಗಳನ್ನು ಸ್ಥಾಪಿಸಿದವರು ಕೂಡ ಇದೇ ರೀತಿಯಲ್ಲಿ ಈ ಕಾರ್ಯಕ್ಕೆ ತಮ್ಮ ಕೊಡುಗೆಯನ್ನು ಕೊಡಬಹುದು. ಈ ರೀತಿಯ ಸ್ವಯಂಪ್ರೇರಿತ ಉಪಕ್ರಮಗಳನ್ನು ಗಂಭೀರವಾಗಿ ಮತ್ತು ಪ್ರಾಮಾಣಿಕತೆಯಿಂದ ಮಾಡಿದ್ದೇ ಆದಲ್ಲಿ ಆಂಧ್ರಪ್ರದೇಶದಲ್ಲಿ ನಮಗೆ ಕಾಣಸಿಗುವ ಉತ್ತಮ ಮಾದರಿಯನ್ನು ನಾವು ಎಲ್ಲೆಡೆ ಕಾಣಬಹುದು.
 
ಆದರೆ ಮೊದಲಿಗೆ ಈ ಸ್ವಯಂಸೇವಾ ಸಂಸ್ಥೆಗಳು, ಟ್ರಸ್ಟ್‌ಗಳು ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳು ಭಾರತೀಯ ಜಾತಿಪದ್ಧತಿಯ ಕಾರಣದಿಂದಾಗಿ ಶತಮಾನಗಳಿಂದ ಮೂಲೆಗುಂಪಾಗಿರುವ ಜನವರ್ಗಕ್ಕೆ ಹೆಚ್ಚಿನ ಮಹತ್ವ ನೀಡುವಂತಹ ಕ್ರಮಗಳನ್ನು ಅನುಸರಿಸಿ, ಅವರು ಶೈಕ್ಷಣಿಕವಾಗಿ Sಂಅs/ಓSಅಖಿಃಅ sಗಳಿಗೆ ಸಮವಾಗಿ ನಿಲ್ಲುವ ಅವಕಾಶಗಳನ್ನು ಕಲ್ಪಿಸಬೇಕು. ಸಮಾಜದಲ್ಲಿರುವ ತಾರತಮ್ಯಗಳನ್ನು ಗಣನೆಗೆ ತೆಗೆದುಕೊಳ್ಳದೆ, ’ನಾವು ಯಾರಿಗೂ ಭೇದ ಭಾವ ಮಾಡುವುದಿಲ್ಲ, ಎಲ್ಲರನ್ನೂ ಸಮನಾಗಿ ಕಾಣುತ್ತೇವೆ’ ಎಂದು ಬಾಯಿಮಾತಿಗೆ ಹೇಳಿದರೆ ನಾವು ಭಾರತೀಯ ಜಾತಿವ್ಯವಸ್ಥೆಯು ಹುಟ್ಟುಹಾಕಿರುವ ಅಸಮಾನತೆಯನ್ನು ಇನ್ನಷ್ಟು ಪೋಷಿಸಿದ ಹಾಗೆ ಆಗುತ್ತದೆ. ಅಮೇರಿಕಾ ಸಂಯುಕ್ತ ಸಂಸ್ಥಾನವು ೧೯೬೪ ರಲ್ಲಿ ನಾಗರಿಕ ಹಕ್ಕು ಕಾಯಿದೆಯನ್ನು ಜಾರಿಗೊಳಿಸಿದ ನಂತರ ಆಗಿನ ಅಧ್ಯಕ್ಷ ಲಿಂಡನ್ ಜಾನ್ಸ್‌ಸನ್ ಹೇಳಿದ ಹಾಗೆ, ಅವಕಾಶಗಳ ಬಾಗಿಲುಗಳನ್ನು ತೆರೆದರಷ್ಟೇ ಸಾಲದು. ನಮ್ಮ ಎಲ್ಲಾ ನಾಗರಿಕರಿಗೂ ಆ ಬಾಗಿಲುಗಳ ಮೂಲಕ ನಡೆದು ಹೋಗುವ ಸಾಮರ್ಥ್ಯ ಇರಬೇಕು. ನಾನು ಇಲ್ಲಿ ದಾಖಲಿಸಿದ ಕ್ರಮಗಳು ಮತ್ತು ಇತರ ಕ್ರಮಗಳು ಇಂತಹುದೇ ಸಾಮರ್ಥ್ಯವನ್ನು ಐತಿಹಾಸಿಕವಾಗಿ ಮತ್ತು ಪ್ರಸ್ತುತ ಭಾರತದ ಸಮಾಜದ ಕಡುಬಡವ ಅವಕಾಶವಂಚಿತ ಜನಸಮುದಾಯಗಳು ಇಂತಹ  ಅವಕಾಶದ ಬಾಗಿಲುಗಳನ್ನು ದಾಟಿ ತಮ್ಮ ನ್ಯಾಯಬದ್ಧ ಪಾಲನ್ನು ಪಡೆಯುವುದಕ್ಕೆ ಅಗತ್ಯವಾಗಿವೆ. 
 
ಯಾವುದೇ ಸ್ವಯಂಸೇವಾ ಸಂಸ್ಥೆ, ಟ್ರಸ್ಟ್ ಅಥವ ಖಾಸಗಿ ಶಿಕ್ಷಣ ಸಂಸ್ಥೆಯು ಪ್ರಾಮಾಣಿಕವಾಗಿ ಇಂತಹ ಮಾನವೀಯ, ರಾಷ್ಟ್ರೀಯ, ದೇಶಭಕ್ತಿಯ ಮತ್ತು ಸಾಂವಿಧಾನಿಕ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸಿದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಹಿಂದುಳಿದ ವರ್ಗದವರನ್ನು ಒಳಗೊಂಡಂತೆ ಹಿಂದುಳಿದ ವರ್ಗದವರಿಗಾಗಿ ಸಾಮಾಜಿಕ ನ್ಯಾಯ ದೊರಕಿಸುವ ಪ್ರಯತ್ನದಲ್ಲಿ ದೇಶಾದ್ಯಂತ ಸುತ್ತಿದ ನನ್ನ ಕಳೆದ ೬೫ ವರ್ಷದ ಅನುಭವದ ಆಧಾರದ ಮೇಲೆ ಅವರಿಗೆ ಅಗತ್ಯವಾದ ಮಾರ್ಗದರ್ಶನ ಮಾಡಬಲ್ಲೆ.  
 
ಪಿ. ಎಸ್ ಕೃಷ್ಣನ್
 
ಪಿ. ಎಸ್. ಕೃಷ್ಣನ್ (ಜನನ.೧೯೩೨) ಅವರು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ  ತಮ್ಮ ಭಾರತೀಯ ಆಡಳಿತ ಸೇವೆಯಿಂದ ನಿವೃತ್ತರಾಗಿದ್ದಾರೆ. ಇವರು ಪ.ಜಾ.,ಪ.ಪಂ., ಅಲ್ಪ ಸಂಖ್ಯಾತ ಹಿಂದುಳಿದವರೂ ಸೇರಿದಂತೆ ಹಿಂದುಳಿದ ವರ್ಗಗಳವರು ಅವರ ಮಹಿಳೆಯರು ಮತ್ತು ಮಕ್ಕಳ ಮುನ್ನಡೆ, ಸಬಲೀಕರಣ ಹಾಗು ಹಕ್ಕುಗಳ ಬಗ್ಗೆ ತಿಳಿದ ಪ್ರಖ್ಯಾತ ವಿದ್ವಾಂಸರಾಗಿದ್ದಾರೆ. ಅವರಿಗಾಗಿ ಅನೇಕ sಸಂವೈಧಾನಿಕ, ಶಾಸನಾತ್ಮಕ, ಕಾಯಕ್ರಮ ಮತ್ತು ಯೋಜನಾ ಕ್ರಮಗಳನ್ನು ಅವರು ತೆಗೆದುಕೊಂಡಿರುತ್ತಾರೆ.ಅಲ್ಲದೆ ಇದೇ ಸಾಮಾಜಿಕ ನ್ಯಾಯದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ, ಬರೆಯುತ್ತಿದ್ದಾರೆ ಮತ್ತು ಉಪನ್ಯಾಸ ನೀಡುತ್ತಿದ್ದಾರೆ. ಇವರನ್ನು shajincbc@gmail.com ನಲ್ಲಿ ಸಂಪರ್ಕಿಸಬಹುದು.
 
 
18784 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು