ಭಾರತದ ಶಿಶುವಿಹಾರಗಳಲ್ಲಿ ರೆಜ್ ಎಮಿಲಿಯಾ ಸಿದ್ಧಾಂತದ ಸಂಯೋಜನೆ - ನೀನಾ ಕಂಜಿರತ್

೨೦೦೦ನೇ ಇಸವಿಯ ಆರಂಭದಲ್ಲಿ, ಎಳೆಯ ವಯಸ್ಸಿನ ಮಕ್ಕಳ ಶಿಕ್ಷಣವು ಮಕ್ಕಳ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂಬ ವಿಚಾರವೇ ತೀರ ಹೊಸ ಆಲೋಚನೆಯಾಗಿತ್ತು. ಈ ಕಾರಣದಿಂದ ನಾನು ಗೀತಾ ನಾರಾಯಣನ್ ಅವರನ್ನು ಭೇಟಿಯಾಗಬೇಕಾಯಿತು. ಆಗ ಅವರು ಮಲ್ಯ ಅದಿತಿ ಇಂಟರ್‌ನ್ಯಾಷಲ್ ಶಾಲೆಯ ನಿರ್ದೇಶಕರಾಗಿದ್ದರು. ಅವರು ನಮಗೆ ರೆಜಿಯೊ ಎಮಿಲಿಯಾ ಮಾರ್ಗವನ್ನು ಪರಿಚಯ ಮಾಡಿಸಿದರು.
 
ಇತರ ಎಲ್ಲಾ ಕಲಿಕಾ ವಿಧಾನಗಳಂತೆ ರೆಜಿಯೊ ವಿಧಾನ ಉಗಮವಾದದ್ದು ಮತ್ತು ಜನಿಸಿದ್ದು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ಮತ್ತು ಪರಿಸರದಲ್ಲಿ. ವಿಶ್ವದ ಅತಿ ವಿದ್ವಂಸಕ ಎರಡನೇ ಮಹಾಯುದ್ಧದ ನಂತರ ಇಟಲಿಯ ರೆಜ್ ಎಮಿಲಿಯಾ( ಉಚ್ಚಾರಣೆ: ರೆಜ್ ಎಮಿಲಿಯಾ) ಎಂಬ ಪ್ರದೇಶದ ಸುತ್ತಮುತ್ತಲಿರುವ ಗ್ರಾಮಗಳ ಪೋಷಕರೊಂದಿಗೆ ಸೇರಿಕೊಂಡು ಲೋರಿಸ್ ಮೆಲಗುಜ಼ಿ ಎಂಬ ಶಿಕ್ಷಕಿಯು ಈ ಕಲಿಕಾ ವಿಧಾನವನ್ನು ರೂಪಿಸಿ ಬೆಳಸಿದರು. ಮಕ್ಕಳಿಗೆ ಹೊಸ ಕಲಿಕಾ ವಿಧಾನದ ಅಗತ್ಯವಿದೆ ಎಂಬುದು ಇದರ ನಂಬಿಕೆಯಾಗಿತ್ತು: ಜನರು ಪುಟ್ಟ ಮಕ್ಕಳಾಗಿದ್ದಾಗ ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾರೆ, ಮೇಲಾಗಿ ಅಂತಹ ಮಕ್ಕಳು  ನೂರಾರು ಭಾಷೆಗಳಿಂದ ಸಂಪನ್ನರಾಗಿರುತ್ತಾರೆ ಎನ್ನುವುದು ಈ ವಿಧಾನದ ಕಲ್ಪನೆ. ಜನರ ದೈನಂದಿನ ಜೀವನದಲ್ಲಿ ಶಿಕ್ಷಣವನ್ನು ಹೇಗೆ ಸದ್ಬಳಕೆ ಮಾಡಬೇಕು ಎನ್ನುವುದು ಈ ವಿಧಾನದ ಗುರಿಯಾಗಿದೆ. ಈ ಕಾರ್ಯಕ್ರಮವು ಗೌರವ, ಜವಾಬ್ದಾರಿ ಮತ್ತು ಸಮುದಾಯವೆಂಬ ತತ್ವಗಳ ಆಧಾರದ ಮೇಲೆ ರೂಪುಗೊಂಡಿದೆ. ಸಂಶೋಧನೆ ಮತ್ತು ಆವಿಷ್ಕಾರಗಳ ಬೆಂಬಲಗಳಿಂದ ಮಕ್ಕಳ ಅಭಿರುಚಿಯನ್ನು ಆಧಾರವಾಗಿರಿಸಿಕೊಂಡು ‘ಸ್ವಯಂ-ಮಾರ್ಗದರ್ಶನ ಪಠ್ಯಕ್ರಮ’ ದ ಮೂಲಕ ಈ ಕಾರ್ಯಕ್ರಮವನ್ನು ಸಮೃದ್ಧಗೊಳಿಸಲಾಗಿದೆ’ 
(ಮೂಲ : ವಿಕಿಪೀಡಿಯ).
 
ನಮ್ಮ ಪುಟ್ಟ ಮಕ್ಕಳ ಕಲಿಕಾ ಕೇಂದ್ರಗಳಿಗಾಗಿ, ನಮಗೊಂದು ಸಂಪರ್ಕ ದೊರೆತಂತಾಯಿತು. ರೆಜಿಯೊದ ಹಲವಾರು ಅಂಶಗಳು ವಿಶೇಷವಾಗಿ ಸ್ವಯಂ-ಮಾರ್ಗದರ್ಶನ ಪಠ್ಯಕ್ರಮದ ಬಗ್ಗೆ ನಾವು ಸಂತೋಷ ಪಟ್ಟಿದ್ದೆವು. ಇದು ನಮಗೆ ನಮ್ಯತೆ, ಶೋಧಿಸಿ ನೋಡುವ ಅವಕಾಶ, ಸಂಶೋಧನೆ ಮತ್ತು ಸ್ಥಳೀಯ ಅಭಿರುಚಿ ಹಾಗೂ ಪರಿಸ್ಥಿತಿಗಳಿಗೆ ನಮ್ಮನ್ನು  ಹೊಂದಾಣಿಕೆ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿದೆ. ನಾವು ಇದರ ಒಟ್ಟಾರೆ ಸಿದ್ಧಾಂತವನ್ನು ಆದರದಿಂದ ಸ್ವೀಕರಿಸಿದ್ದೇವೆ.
 
ರೆಜಿಯೊ ಎಮಿಲಿಯಾ ಸಿದ್ಧಾಂತವು ಮುಖ್ಯವಾಗಿ ಈ ಕೆಳಗಿನ ತತ್ವಗಳ ಆಧಾರದಲ್ಲಿ ರೂಪುಗೊಂಡಿದೆ:
ಮಕ್ಕಳು, ತಮ್ಮ ಕಲಿಕೆ ಯಾವ ದಿಕ್ಕಿನ ಕಡೆಗೆ ಹೋಗಬೇಕು ಎಂಬುದರ ಬಗ್ಗೆ ಒಂದಿಷ್ಟು ನಿಯಂತ್ರಣವನ್ನು ಹೊಂದಿರಬೇಕು.
ಮಕ್ಕಳು ಸ್ಪರ್ಶ, ಓಡಿಯಾಡಿಸುವುದು, ಆಲಿಸುವುದು, ನೋಟ ಮತ್ತು ಕೇಳುವಿಕೆ ಮುಂತಾದ ಅನುಭವಗಳ ಮೂಲಕ ಕಲಿಯುವ ಸಾಮರ್ಥ್ಯವನ್ನು ಹೊಂದಿರಬೇಕು.
ಮಕ್ಕಳು ಇತರ ಮಕ್ಕಳೊಂದಿಗೆ ಹಾಗೂ ಜಗತ್ತಿನ ಭೌತಿಕ ವಸ್ತುಗಳ ಜೊತೆಗೆ ಸಂಬಂಧವನ್ನು ಹೊಂದಿರುತ್ತಾರೆ ಹೀಗಾಗಿ ಅವರು ಅವುಗಳ ಶೋಧನೆ ನಡೆಸಲು ಅವಕಾಶ ಇರಬೇಕು.
ಮಕ್ಕಳಿಗೆ ತಮ್ಮನ್ನು ತಾವು ಅಭಿವ್ಯಕ್ತಗೊಳಿಸಲು ಕೊನೆಯಿಲ್ಲದಷ್ಟು ಮಾರ್ಗ ಮತ್ತು ಅವಕಾಶಗಳು ಇರಲೇಬೇಕು.
         (ಮೂಲ : ವಿಕಿಪೀಡಿಯ)
 
ರೆಜಿಯೊದ, ನಿಬಂಧನೆಗಳು ಅತ್ಯಂತ ಹೊಂದಿಕೊಳ್ಳಬಹುದಾಗಿದ್ದು, ಈ ಆ ನಿಬಂದನೆಗಳಂತೆ ಸ್ಥಾಪಿಸಿದ ನಮ್ಮ ಭೌತಿಕ ಆವರಣವನ್ನು ಪರಿಸರವನ್ನು ಮೂರನೇ ಶಿಕ್ಷಕನನ್ನಾಗಿ ಪರಿಗಣಿಸಿ ರೂಪಿಸಿದೆವು. ಇದರಲ್ಲಿ ಮಕ್ಕಳು ಒಂದು ಕಡೆ ಬೆರೆತು ಪರಸ್ಪರ ಸಂಭಾಷಣೆ ನಡೆಸಲು ಅಂಗಳದ ವಿವಿಧ ಮೂಲೆಗಳು, ಒಳಗೆ ಹೊರಗೆ (ಬಾಗಿಲುಗಳಿಲ್ಲದ) ಎಂಬ ತಡೆಗಳಿಲ್ಲದೆ ವಿಲೀನವಾಗುವ ಸ್ಥಳವನ್ನು ಕಲ್ಪಿಸುತ್ತದೆ (ಇಲ್ಲಿ ನಮಗೆ ಬೆಂಗಳೂರಿನ ಹಿತಕರ ವಾತಾವರಣ ಬಹಳ ಅನುಕೂಲವಾಯಿತು ).  ಈ ಸ್ಥಳದಲ್ಲಿ ಬೆಳೆಯುತ್ತಿರುವ ತಮ್ಮ ಮಕ್ಕಳನ್ನು ನೋಡಲು ಅವರ ತಂದೆತಾಯಿಯರನ್ನು ಸ್ವಾಗತಿಸಲಾಗುತ್ತದೆ, ಪ್ರತಿಯೊಂದು ವಸ್ತುಗಳನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಅಲ್ಲದೆ ಇಲ್ಲಿನ ಉದ್ಯಾನವನವು ರಾಸಾಯನಿಕ ವಸ್ತುಗಳಿಂದ ಮುಕ್ತವಾದ, ಮರಗಳಿಂದ ತುಂಬಿದ, ಬೀಳುತ್ತಿರುವ ಎಲೆಗಳು, ಹೂವು, ಹಣ್ಣುಗಳಿರುವ ಸಾವಿರ ಕಾಲಿನ ಹುಳುಗಳು ಆಡುವ ಅಥವಾ ಹೊರಗಿನಿಂದ ಬರುವ ಸ್ಥಳವಾಗಿದೆ. ಈ ವಾತಾವರಣವು ಮಕ್ಕಳನ್ನು ಸ್ವಯಂ ಕಲಿಕೆಗೆ ಪ್ರೋತ್ಸಾಹಿಸುತ್ತದೆ. ಅಲ್ಲದೆ ಅವರು ವಿಷಯಗಳನ್ನು ಪರಸ್ಪರ ಹಂಚಿಕೊಳ್ಳಲು ಮತ್ತು ಸಮಾಲೋಚನೆ ಮಾಡಲು ಅವಕಾಶ ಒದಗಿಸುತ್ತದೆ.
ಆದಷ್ಟು ಬೇರೂರಿದ ಅಭಿಪ್ರಾಯಗಳಿಂದ ಕೂಡಿದ ಹಿರಿಯರ ಪ್ರಪಂಚವು, ಮಗುವಿನ ಮನಸ್ಸಿನಲ್ಲಿ ಯಾವುದೇ ಪಕ್ಷಪಾತ ಅಥವಾ ಪೂರ್ವಭಾವಿ ಕಲ್ಪನೆಗಳನ್ನು ನೀಡಿ ಅವರ ವ್ಯಕ್ತಿತ್ವವನ್ನು ರೂಪಿಸಲು ಅವಕಾಶವಾಗಬಾರದು ಎಂದು ಗಟ್ಟಿ ಮನಸ್ಸು ಮಾಡಿದ್ದೆವು. ಆದ್ದರಿಂದ ಮಕ್ಕಳು ಹೊರ ಜಗತ್ತಿನ ಸಂಬಂಧಗಳ ಜೊತೆಗೆ ಹರ್ಷದಿಂದಿರಲು ಸಾಧ್ಯವಾಗುವಂಥಹ ಹಾಗು ಏನನ್ನು ಎದುರಿಸಿದರೂ ತಮ್ಮ ಆತ್ಮವಿಶ್ವಾಸ ಕುಂದದಂತಹ ತಮ್ಮ ಬಗ್ಗೆ ಆಳವಾದ eನ ಮತ್ತು ತಿಳಿವಳಿಕೆ ಹೊಂದುವಂತಹ ಒಂದು ಪಠ್ಯಕ್ರಮವನ್ನು ನಾವು ಅಭಿವೃದ್ಧಿಗೊಳಿಸಲು ನಾವು ಹೊರೆಟೆವು.
 
ಮಕ್ಕಳ ನಡುವಿನ ಸಂಭಾಷಣೆಗಳಿಂದ ಅನೇಕ ವಿಷಯಗಳನ್ನು ಕಲಿತು ಅದನ್ನು ದಾಖಲಿಸುವಂತೆ ಶಿಕ್ಷಕರು ಪ್ರೋತ್ಸಾಹಿಸಿದೆವು. ಈ ರೆಜಿಯೊ ಕಲಿಕೆಯ ಸಿದ್ಧಾಂತದಲ್ಲಿ ನನಗೆ ತುಂಬಾ ಆಸಕ್ತಿಯುಂಟು ಮಾಡಿದ ಅಂಶವೆಂದರೆ ಮಕ್ಕಳ ಯೋಚನೆ ಮತ್ತು ಸಮಸ್ಯೆ ಬಗೆಹರಿಸುವ ಸಾಮರ್ಥ್ಯಗಳನ್ನು ಉತ್ತೇಜಿಸುವ ಪರಿಕಲ್ಪನೆ. ಇದರಿಂದ ಮೂಡಿದ್ದು ಮಾಡಿಕಲಿ ವಿಜ್ಞಾನ ಕಾರ್ಯಕ್ರಮ. 
 
ಪುಸ್ತಕಗಳೇ ರಂಜನೆಯ ಮೂಲವಾಗಿದ್ದ ಪೀಳಿಗೆಯಿಂದ ಬಂದ ನನಗೆ ಓದಿನ ಬಗ್ಗೆ ಪ್ರೀತಿ ಮತ್ತು ಆಸಕ್ತಿಯನ್ನು ಬೆಳೆಸಿಕೊಂಡರೆ ಅದುವೇ ನಮ್ಮಲ್ಲಿ ಸ್ವಯಂ ಕಲಿಕೆಯನ್ನು ಬೆಳೆಸುತ್ತದೆ ಎನ್ನುವುದರ ಬಗ್ಗೆ ಆತ್ಮವಿಶ್ವಾಸವಿದೆ. ನಾನೇ ಬಹಳ ಚಟುವಟಿಕೆಯ ವ್ಯಕ್ತಿ ಆಗಿದ್ದ ಕಾರಣ ಭಾಗಶಃ ಸ್ವಾನುಭವದ ಆಧಾರದ ಮೇಲೆ  ಕೈಗೊಂಡ ಇನ್ನೊಂದು ನವೀನ ಪ್ರಯೋಗವೆಂದರೆ, ಮಕ್ಕಳು ತಾವು ಬಯಸಿದಾಗಲೆಲ್ಲಾ ಕುಳಿತುಕೊಳ್ಳಬೇಕು, ನಿಲ್ಲಬೇಕು, ನಡೆಯಬೇಕು, ಮಾತನಾಡಬೇಕು, ತಮಗೆ ಅನಿಸಿದ್ದನ್ನು ವ್ಯಕ್ತಪಡಿಸಬೇಕು ಮತ್ತು ತಮ್ಮ ಕಲಿಕಾ ಏರಿಳಿತವನ್ನು ತಾವೇ ನಿಯಂತ್ರಿಸಿಕೊಳ್ಳುವ ಸಾತಂತ್ರ್ಯ ಅವರಿಗೆ ಇರಬೇಕು. ಮಕ್ಕಳ ಈ ಕ್ರಿಯಾ ಸ್ವಾತಂತ್ರ್ಯವನ್ನು ವೀಕ್ಷಿಸುವುದರಿಂದ ನಮಗೆ ಹಲವಾರು ಆಶ್ಚರ್ಯಕರ ವಿಷಯಗಳನ್ನು ಕಲಿಯುವ ಅವಕಾಶ ಸಿಕ್ಕಿತು. ಶಿಕ್ಷಕರು ಒತ್ತಡ ರಹಿತರಾಗುತ್ತಾರೆ, ಸಭ್ಯತೆ ಮತ್ತು ಪ್ರೀತಿಯಿಂದ ಮಾತನಾಡುತ್ತಾರೆ ಹಾಗೂ ತಮ್ಮ ಸುತ್ತಮುತ್ತ ಇರುವ ಎಲ್ಲರೊಂದಿಗಿನ ಸಂಬಂಧವನ್ನು ಆನಂದಿಸಲು ಆರಂಭಿಸುತ್ತಾರೆ. ಇದರಿಂದ ಅವರಲ್ಲಿ ಶ್ರೇಣಿ ಮನೋಭಾವಗಳು ಮತ್ತು ಬಿಕ್ಕಟ್ಟುಗಳು ದೂರವಾಗುತ್ತವೆ. ಇದು ತಪ್ಪುಗಳನ್ನು ಮಾಡುವುದು ಕೂಡಾ ಒಂದು ಕಲಿಕೆಯ ವಿಧಾನ ಎಂಬುದನ್ನು ತಿಳಿಸುವ ಒಂದು ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಕೇಳಲು ವಿಚಿತ್ರವೆನಿಸಿದರೂ ಇದು ಶಿಕ್ಷಕರು ಮಾತ್ರವಲ್ಲದೆ ಮಕ್ಕಳಿಗೆ ತುಂಬಾ ಪರಿಣಾಮಕಾರಿಯಾದ ಕಲಿಕಾ ಸಾಧನವಾಗಿದೆ. ಮಕ್ಕಳು ಒಂದೇ ಕಡೆ ಕುಳಿತುಕೊಳ್ಳುತ್ತಿರಲಿಲ್ಲ, ಹಾಗೇನಾದರೂ ಕೂತರೆ ತಾವೇ ಆಯ್ದುಕೊಂಡ ಒಂದು ನಿರ್ದಿಷ್ಟ ಕಾರಣಕ್ಕಾಗಿ ಕುಳಿತು ಕೊಳ್ಳುತ್ತಿದ್ದರು. ಅಗಾಗ್ಗೆ ಗುಂಪು ಬದಲಾಯಿಸುವುದಕ್ಕಾಗಿ ,ಅಥವಾ ಕೊಟ್ಟ ಕೆಲಸ ಮುಗಿಸುವುದಕ್ಕಾಗಿ ಅಥವಾ ಊಟ ಮಾಡುವುದಕ್ಕಾಗಿ ಕುಳಿತುಕೊಳ್ಳುತ್ತಿದ್ದರು.ಹೀಗಾಗಿ ಕಲಿಕೆ ಎಂಬುದು ಸಂತೋಷದಾಯಕ ಮತ್ತು ಸಹಜವಾಯಿತು.ಇದಕ್ಕೆ ಸಾಕ್ಷಿಯಾಗಿ ಮಕ್ಕಳ ಕಲರವ ವಾತಾವರಣದಲ್ಲಿ ಮಿದುವಾಗಿ ಹಬ್ಬಿ ಹರಡಿತ್ತು.
 
ಭಾರತದಲ್ಲಿ ರೆಜಿಯೊ ವಿಧಾನದ ಕಲಿಕೆಯನ್ನು ಕಾರ್ಯರೂಪಕ್ಕೆ ತರಲು ಮತ್ತು ಅಳವಡಿಸಿಕೊಳ್ಳಲು ಧೈರ್ಯ ಮತ್ತು ನಂಬಿಕೆಯಿರಬೇಕು. ಅದೇನೆಂದರೆ, ಎಲ್ಲಾ ಮಕ್ಕಳು ಹಕ್ಕುಗಳನ್ನು ಹೊಂದಿರುತ್ತಾರೆ ಮತ್ತು ಅವು ಸುಂದರ, ಪ್ರಬಲ, ಸಮರ್ಥ, ಕ್ರಿಯಾಶೀಲ, ಕುತೂಹಲಭರಿತರಾಗಿರುತ್ತರೆ ಅಲ್ಲದೆ  ಸಾಧ್ಯತೆ ಮತ್ತು ಮಹತ್ವಾಕಾಂಕ್ಷೆ ಯಿಂದ ತುಂಬಿ ತುಳುಕುತ್ತಿರುತ್ತಾರೆ  (ಮೂಲ: ವಿಕಿಪೀಡಿಯ).
 
ರೆಜಿಯೊ ಎಮಿಲಿಯಾ ಸಿದ್ಧಾಂತವನ್ನು ಅನುಸರಿಸಬೇಕಾದರೆ ಶಿಕ್ಷಕರಿಗೆ ಉತ್ಸಾಹವಿರಬೇಕು ಮತ್ತು ತಮ್ಮ ಸ್ವಂತ ಕಲಿಕೆಯ ಬಗ್ಗೆ ನಿರಂತರ ಆಲೋಚಿಸುವ ಮನೋಭಾವವಿರಬೇಕು. ಇದಕ್ಕೆ ಕಲಿಕಾ ವಿಧಾನ ಮತ್ತು ನಡವಳಿಕೆಗಳಲ್ಲಿ, ಮೂಲಭೂತ ಬದಲಾವಣೆಗಳು ಆಗಬೇಕಾದ ಅಗತ್ಯವಿದೆ. ಏಕೆಂದರೆ ನಮ್ಮ ಬಹುತೇಕ ಕಲಿಕಾ ವಿಧಾನಗಳು ಕಾರ‍್ಯಾಂತರಗೊಂಡು ವಿತರಿಸಲ್ಪಟ್ಟಿವೆ.  ನಮ್ಮ ತರಬೇತಿ ಕಾರ್ಯಕ್ರಮಗಳು ಮಾತ್ರವಲ್ಲ ಬದಲಾಗಿ ನಾವು ಮಕ್ಕಳಾಗಿದ್ದಾಗ ಕಲಿತ ವಿಷಯಗಳೂ ವಿತರಣೆಯಾಗುತ್ತಿವೆ.
 
ನೀನಾ ಅವರು ಬೆಂಗಳೂರಿನ ಆರ್.ಟಿ ನಗರದಲ್ಲಿರುವ ಗಯಿಯಾ ಪ್ರಿಸ್ಕೂಲ್ ಮತ್ತು ಚೈಲ್ಡ್‌ಕೇರ್ ಸೆಂಟರ್‌ನ ನಿರ್ದೇಶಕರಾಗಿದ್ದಾರೆ. ಶಿಕ್ಷಕ ತರಬೇತುದಾರರಾಗಿ, ಪಠ್ಯಕ್ರಮ  ರೂಪಿಸುವವರಾಗಿ , ಪ್ರಾಥಮಿಕ ಪೂರ್ವ ಮತ್ತು ಪ್ರಾಥಮಿಕ ಉಪಾಧ್ಯಾಯರಾಗಿ ಅವರಿಗೆ ೩೦ ವರ್ಷಗಳ ಅನುಭವವಿದೆ.  ಅವರು ನ್ಯೂಜಿಲೆಂಡ್‌ನ ಕಿಂಡರ್‌ಗಾರ್ಟನ್, ಶ್ರೀಲಂಕಾ ಮತ್ತು ಇಂಡೋನೇಷ್ಯಾದ ಬ್ರಿಟಿಷ್ ಮತ್ತು ಅಮೆರಿಕನ್ ಶಾಲೆಗಳಲ್ಲಿ ಹಾಗೂ ಬೆಂಗಳೂರಿನ ಮಲ್ಯ ಅದಿತಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ  ಪ್ರಾಥಮಿಕ ಪೂರ್ವ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದ್ದಾರೆ. ಅವರು ಮಲ್ಟಿಮೀಡಿಯಾ ಪಾಠಗಳನ್ನು ರಚಿಸಿ ಇಂಡಿಯಾ ಸ್ಕೂಲ್‌ನೆಟ್‌ನಲ್ಲಿ ಶಿಕ್ಷಕರಿಗೆ ತರಬೇತಿ ನೀಡುತ್ತಿದ್ದಾರೆ. ಇದರಲ್ಲಿ ಅವರು ಬಹು ಸಂವೇದನೆ ವಿಧಾನ (ಮಲ್ಟಿ ಸೆನ್ಸೊರಿಯಲ್ ಅಪ್ರೋಚ್ )ವನ್ನು ಬಳಸುತ್ತಾ ಅದರೊಂದಿಗೆ ತರಗತಿಗಳಲ್ಲಿ ತಂತ್ರeನದ ಬಳಕೆ ಯನ್ನೂ ಮಾಡುತ್ತಿದ್ದಾರೆ. ಇವರು ಮಕ್ಕಳಿಗಾಗಿ ಹಲವಾರು ನಾಟಕಗಳನ್ನು ಬರೆದು, ನಿರ್ದೇಶಿಸಿ, ಪ್ರದರ್ಶಿಸಿದ್ದಾರೆ. ಅವರಿಗೆ ಕಲೆ ಮತ್ತು ಪಾಶ್ಚಾತ್ಯ  ಶಾಸ್ತ್ರೀಯ ಸಂಗೀತ ಬಗ್ಗೆಯೂ ಆಸಕ್ತಿಯಿದೆ. ಅವರು ಬೆಂಗಳೂರು ವೈನ್ ಕ್ಲಬ್‌ನ ಸ್ಥಾಪಕ ಸದಸ್ಯರಾಗಿದ್ದಾರೆ. ಭಾರತದ ಕ್ರಿಸ್ಟೆಲ್ ಹೌಸ್‌ನಲ್ಲೂ (ಅವಕಾಶ ವಂಚಿತ ಮಕ್ಕಳ ಶಾಲೆ) ಅವರು ಕೆಲಸ ಮಾಡಿದ್ದಾರೆ. ಜೊತೆಗೆ ಪಠ್ಯ ರಚನೆ ಮತ್ತು ತರಗತಿ ಅಭ್ಯಾಸದ ಕುರಿತು ಮರು ಚಿಂತನೆ ಮಾಡಲು ಒಯಾಸಿಸ್ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಸಹಾಯ ಮಾಡಿದ್ದಾರೆ. ಅವರನ್ನು ಸಂಪರ್ಕಿಸುವ ವಿಳಾಸ: kanjirath@yahoo.com

 
18934 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು