ಬಾಹ್ಯಾಕಾಶದ ಕಸದ ರಾಶಿ

ನಮ್ಮ ಗ್ರಹವನ್ನು 7000 ಟನ್ಗಳಷ್ಟು ಹಳೆ ಯಂತ್ರ ಮತ್ತು ಲೋಹದ ಕಸಗಳು ಅನೇಕ ವಿಭಿನ್ನ ಆಯಾಮಗಳಲ್ಲಿ ಸುತ್ತುವರೆದಿರುವ ವಿಷಯವನ್ನು ಹಾಗೆಯೇ ನಿರ್ಲಕ್ಷಿಸಿ ಕುಳಿತುಕೊಳ್ಳುವುದು ಸಾಧ್ಯವಿಲ್ಲ ಮತ್ತು ಸಾಧುವೂ ಅಲ್ಲ.ಇದು ಗಂಭೀರವಾಗಿ ಪರಿಗಣಿಸ ಬೇಕಾದ  ವಿಷಯ.

ವಿವಿಧ ದೇಶಗಳು ಹಾರಿಸಿದ ಉಪಗ್ರಹಗಳು ಅಂಕೆ ತಪ್ಪಿ ಬಾಹ್ಯಾಕಾಶದಲ್ಲಿ  ಪ್ರೇತಗಳಂತೆ ಅಲೆಯುತ್ತಿರುತ್ತವೆ . ಗೊತ್ತು ಗುರಿಯಿಲ್ಲದೆ ಅಲೆಯುವ ಮತ್ತು ನಮ್ಮ ಭೂಮಿಯ ಗುರುತ್ವಾಕರ್ಷಣೆಗೆ ಸಿಕ್ಕು ಹೇಗೆಂದರೆ ಹಾಗೆ ಭೂಮಿಯ ಸುತ್ತ ಅಲೆದಾಡುವ ನಿರ್ಜೀವ ಉಪಗ್ರಹಗಳು ಭೂಮಿಗೆ ಮತ್ತು ಅದರ ಮುಂದಿನ ಬಾಹ್ಯಾಕಾಶ ಆನ್ವೇಷಣೆಗೆ ಬಲು ದೊಡ್ಡ ಅಡ್ಡಿ.

 ಭೂಮಿಯನ್ನು ಸುತ್ತುತ್ತಿರುವ ಸಾವಿರಾರು ಉಪಗ್ರಹಗಳು ಯಾವುದೇ ಸಮಯದಲ್ಲಿ ಬಾಹ್ಯಾಕಾಶ ಕಸದರಾಶಿಗಳಿಂದ ಹಾನಿಗೊಳಗಾಗುವ ಸಂಭಾವ್ಯತೆಯು ತುಂಬಾ ಹೆಚ್ಚಾಗಿದೆ, ಅದು ಅನೇಕ ರಂಗಗಳಲ್ಲಿ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡುತ್ತದೆ.

 ಈ ಬಾಹ್ಯಾಕಾಶದ ಕಸದ ರಾಶಿಯು ರಾಕೆಟ್ ಬಿಡಿಭಾಗಗಳು, ಕೆಲಸಮಾಡದ ಬಾಹ್ಯಾಕಾಶನೌಕೆಗಳು, ಗಗನಯಾತ್ರಿಗಳು ಹೊರಗೆಸೆದ ವಸ್ತುಗಳು ಮತ್ತು ಸಹಜವಾಗಿ, ಸರಿಯಾಗಿ ಕೆಲಸ ಮಾಡದೆ ಕಕ್ಷೆ ತಪ್ಪಿ ಅಂಡಲೆಯುತ್ತಿರುವ ಉಪಗ್ರಹಗಳನ್ನು ಒಳಗೊಂಡಿರುತ್ತದೆ.

ಲಕ್ಷಾಂತರ ತುಣುಕುಗಳ ಅವಶೇಷಗಳಲ್ಲಿ, ಡಬಲ್ ಡೆಕ್ಕರ್ ಬಸ್ಗಳಿಗಿಂತ ದೊಡ್ಡ ತುಣುಕುಗಳಿವೆ!

ಆದ್ದರಿಂದ, ಈ ಬಾಹ್ಯಾಕಾಶ ಅವಶೇಷಗಳನ್ನು ತೆರವುಗೊಳಿಸುವ ಶ್ರೇಷ್ಠ ಉದ್ದೇಶದೊಂದಿಗೆ, ಮುಂದಿನ ವರ್ಷ 23 ದಶಲಕ್ಷ ಡಾಲರ್  ವೆಚ್ಚದ ಬ್ರಿಟಿಷ್ ಯೋಜನೆಯನ್ನು ಪ್ರಾರಂಭಿಸಲಾಗುವುದು.

ಒಂದು ಹಾರ್ಪೂನ್  ಮತ್ತು ಬಲೆಯ ಸಹಾಯದಿಂದ  ಈ ಅವಶೇಷ ಗಳನ್ನು ಭೂಮಿಯ ವಾಯುಮಂಡಲಕ್ಕೆಎಳೆತಂದು ಬಿಡಲು ಇದರಲ್ಲಿ  ಯೋಜಿಸಲಾಗಿದೆ. ಭೂಮಿಯ ವಾಯುಮಂಡಲಕ್ಕೆ ಅದರ ಪ್ರವೇಶವಾದ ಮೇಲೆ ಅಲ್ಲಿನ ಒತ್ತಡಕ್ಕೆ ಅವು ಸುಟ್ಟು ಹೋಗುವ  ಪ್ರಕ್ರಿಯೆ ಉಂಟುಮಾಡುವ ಭರವಸೆಯಿಂದ ಇದನ್ನು ಮಾಡಲಾಗುತ್ತಿದೆ

 

ಬಾಹ್ಯಾಕಾಶ ಅವಶೇಷಗಳ ಚಿತ್ರ: ಕೃಪೆ google.

18488 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು