ಬಹುಮಾನಗಳು ಅಥವಾ ಶಿಕ್ಷೆ ಇಲ್ಲದೆ ನಿಮ್ಮ ಮಕ್ಕಳಲ್ಲಿ ಶಿಸ್ತು ಬೆಳಸುವುದು ಹೇಗೆ?

ಶಿಸ್ತು ಮಕ್ಕಳಿಗೆ ಅವಶ್ಯಕ, ಆದರೆ ನಾವು ಅವರಿಗೆ ಮನೋನಿಗ್ರಹ ವನ್ನು ಕಲಿಸಬೇಕೆ ಹೊರತು ಪುಸಲಾಯಿಸಿ ಅದೂ ಇದೂ ಕೊಟ್ಟು ಒಳ್ಳೆಯ ನಡತೆ ಕಲಿಸಲು ಹೋಗ ಬಾರದು.

EmilianoCC BY-SA

 

 ಅನೇಕ ಹೆತ್ತವರು ಶಾಂತಿ ಸಮಾಧಾನದಿಂದ ಮಕ್ಕಳಿಗೆ ಒಳ್ಳೆಯ ನಡತೆಯನ್ನು  ಕಲಿಸಲು  ಇಚ್ಛಿಸುತ್ತಿದ್ದಾರೆ ಇಲ್ಲಿ ಅವರು ಮಕ್ಕಳನ್ನು ಉತ್ತಮ ನಡವಳಿಕೆಗೆ ಪ್ರೋತ್ಸಾಹಿಸಲು  ("ಲಂಚ" ಸ್ಟಿಕ್ಕರ್ , ಮಿಠಾಯಿ, ಚಾಕೊಲೇಟ್, ಟಿವಿ ನೋಡಲು ಅವಕಾಶ ) ಮುಂತಾದ ಬಹುಮಾನ ಕೊಡದೆ) ಮತ್ತು (ಹೊಡೆಯುವುದು,ಕೊಡುತ್ತಿದ್ದ ವಿಶೇಷ ಪುರಸ್ಕಾರ ನಿಲ್ಲಿಸುವುದು ಹೊರಗೆ ಆಡಿಕೊಳ್ಳಲು ಬಿಡದೇ ಇರುವುದು ಮುಂತಾದ ಶಿಕ್ಷೆ ನೀಡದೆ) ಸರಿಯಾದ ನಡವಳಿಕೆ ಒಳ್ಳೆಯದು ಎಂದು ಮನವರಿಕೆ ಮಾಡಿಸಿ ಮಕ್ಕಳಿಗೆ ಉತ್ತಮ ನಡವಳಿಕೆ ಕಲಿಸುತ್ತಾರೆ

ಶಾಂತಿ ಸಮಾಧಾನ ಪೋಷಕರು ಮಕ್ಕಳಿಗೆ ಈ ರೀತಿ ಬಹುಮಾನ  ಮತ್ತು ಶಿಕ್ಷೆನೀಡುವುದು ಸರಿಯಾದ ನಡವಳಿಕೆ ಕಡೆಗೆ ಮಗುವು ಸಹಜವಾಗಿ ಒಗ್ಗಿಕೊಂಡು ವರ್ತಿಸುವುದನ್ನು ತಪ್ಪಿಸುತ್ತದೆ ಮತ್ತು ಬಹುಮಾನದ  ಆಸೆಯಿಂದ, ಅಥವಾ ಶಿಕ್ಷೆಯನ್ನು ತಪ್ಪಿಸಿಕೊಳ‍್ಳಲು ಕೆಲವು ಸಲ ಉತ್ತಮವಾಗಿ  ವರ್ತಿಸುತ್ತಾರೆ ಅಷ್ಟೆ ಎಂದು ವಾದಿಸುತ್ತಾರೆ.

ಶಿಸ್ತು ಎಂದರೇನು?
ಬಹಳಷ್ಟು ಜನರು ಬಹುಮಾನ ಮತ್ತು ಶಿಕ್ಷೆಯನ್ನು ಕೊಡದೆ ಶಿಸ್ತು ತರುವುದು ಅಸಾಧ್ಯ ಎಂದು ಭಾವಿಸುತ್ತಾರೆ. ಆದಾಗ್ಯೂ, ಇದೆಲ್ಲಾ "ಶಿಸ್ತು"ಎಂಬುದರ ಬಗ್ಗೆ ನಿಮ್ಮ ತಿಳುವಳಿಕೆಯನ್ನು ಅವಲಂಬಿಸಿರುತ್ತದೆ.
ಶಿಸ್ತು ಎಂದು ಹೇಳಿದಾಗ "ಸ್ವಯಂಶಿಸ್ತು"ಎಂದರ್ಥ.ಇಲ್ಲಿ ನಿಮ್ಮನ್ನು ನೀವು ನಿಯಂತ್ರಿಸುಕೊಳ್ಳುವುದೇ ಮುಖ್ಯ.

ಆದ್ದರಿಂದ, ಪೋಷಕರ ಸಂದರ್ಭದಲ್ಲಿ, ಇದು ಮಕ್ಕಳು ತಮ್ಮನ್ನು, ತಮ್ಮ ಭಾವನೆಗಳನ್ನು, ತಮ್ಮನಡವಳಿಕೆ ಮತ್ತು ತಮ್ಮ ತಿಕ್ಕಲುತನವನ್ನು ನಿರ್ವಹಿಸಿ ವರ್ತಿಸಲು ಕಲಿಯುವುದಕ್ಕೆ ಸಹಾಯ ಮಾಡುವುದು. ನಾವು ನಮ್ಮ ಮಕ್ಕಳು ಒಂದು ಸರಿಯಾದ  ನೈತಿಕ ದಿಕ್ಸೂಚಿಯನ್ನು ಬೆಳೆಸಿಕೊಳ್ಳಬೇಕೆಂದು ಆಶಿಸುತ್ತೇವೆ. "ಇದು ಸೂಕ್ತ" ಮತ್ತು "ಇದು ಅನುಚಿತ" ಎಂದು  ನಡವಳಿಕೆಗಳನ್ನು, ಪ್ರಚೋದನೆಗಳು ಮತ್ತು ಭಾವನೆಗಳನ್ನು ವಿಂಗಡಿಸಲು ಮತ್ತು ತಮ್ಮ ಆಯ್ಕೆಗಳನ್ನು ಬಗ್ಗೆ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಲು ಸಮರ್ಥರಾಗಬೇಕು ಎಂದು ಬಯಸುತ್ತೇವೆ.
 ಶಿಸ್ತು
ಪದವನ್ನು ಬಳಸಿದಾಗ, ಇದು ಶಿಕ್ಷೆಯನ್ನು ಸೂಚಿಸುತ್ತದೆ. ಏಕೆ ಈ ಅರ್ಥ ಬರುತ್ತದೆಂದರೆ  ಶಿಸ್ತು ಎಂಬ ಮಾನವ ತಿಳಿವಳಿಕೆಯು ವರ್ತನಾವಾದ (behaviourist)    ದೃಷ್ಟಿಕೋನವನ್ನು ಹೊಂದಿದೆ. ಏಕೆಂದರೆ ಈ ಅರ್ಥವನ್ನು ಸೂಚಿಸುತ್ತದೆ.ವರ್ತನಾವಾದವು(Behaviourism)ವರ್ತನೆಯ ಅಧ್ಯಯನ , ಕಲಿಕೆ ಕೇವಲ ಪಾವ್ಲೋವ್ ನಾಯಿ ಪ್ರಯೋಗದಲ್ಲಿದ್ದಂತೆ (Pavlov’s dog experiment)ರೀತಿಯ ವರ್ತನೆ ನಿಯಂತ್ರಣ ಮತ್ತು ಒಳ್ಳೆಯ ಅಥವಾ ಕೆಟ್ಟ ಫಲಿತಾಂಶದ ನಡುವಿನ ಸಂಬಂಧವನ್ನು ಕುರಿತ ಪ್ರಕ್ರಿಯೆಯಾಗಿದೆ.
ಮಾನವ ವರ್ತನೆಯನ್ನು ಸರಳ ಬಹುಮಾನ / ಶಿಕ್ಷೆಗಳ ಮಾದರಿ ಸೂಚಿಸುವುದಕ್ಕಿಂತ ಸಂಕೀರ್ಣವಾದುದು  ಹಾಗಾಗಿ ವರ್ತನೆವಾದವನ್ನು  ಕಡಿಮೆ ಬಳಸಲಾಗುತ್ತದೆ(behaviourism is used less and less). ಜನರು ಮಾತ್ರ ಪ್ರತಿಫಲಗಳನ್ನು ಪಡೆದು ಅಥವಾ ಶಿಕ್ಷೆಯನ್ನು ಕಡಿಮೆ ಮಾಡಿಕೊಳ್ಳುವುದರಿಂದ(
secure rewards or minimise punishments.) ಅಪೇಕ್ಷಣೀಯವಲ್ಲ .
ಅವರು ಏನೋ ದೊರಕುತ್ತದೆ ಅಥವಾ ಸಿಕ್ಕಿಹಾಕಿಕೊಂಡರೆ ತೊಂದರೆಗೆ ಸಿಲುಕುತ್ತಾರೆ ಎಂಬುದಕ್ಕಾಗಿ ಮಾತ್ರವೇ  ನಮ್ಮ ಮಕ್ಕಳು ಅಪೇಕ್ಷಣೀಯ  ರೀತಿಯಲ್ಲಿ ವರ್ತಿಸ ಬೇಕೆಂದು ನಾವು ಬಯಸುವುದಿಲ್ಲ. ನಾವು ಒಂದು ನಡವಳಿಕೆ ಅವರು ಅದನ್ನು ಸರಿಯಾದದ್ದು ಎಂದು  ತಿಳಿದಿರುವ ಕಾರಣ ನಮ್ಮ ಮಕ್ಕಳು ಸರಿಯಾದದ್ದನ್ನೇ ಮಾಡಲು  ವಿಷಯವನ್ನು ಬಯಸುವ, ಕಾರಣ ಸರಿಯಾಗಿ ನಡೆದುಕೊಳ್ಳಬೇಕೆಂದು ಬಯಸುತ್ತೇವೆ.
 
ಬಾಹ್ಯವಾಗಿ ಅಲ್ಲದೆ ಆಂತರಿಕವಾಗಿ ಮಕ್ಕಳನ್ನು ಪ್ರೇರೇಪಿಸುವುದು

ವರ್ತನೆಯ ಅಧ್ಯಯನವು ಅಪೇಕ್ಷಣೀಯ ಮಾರ್ಗದಲ್ಲಿ ವರ್ತಿಸಲು ಮಕ್ಕಳು ಬಾಹ್ಯ ಪ್ರೇರಣೆಗಳನ್ನು ಹುಡುಕಬೇಕೆಂದು  ಕಲಿಸುತ್ತದೆ. ಇದು ಬಹುಮಾನ ಮತ್ತು ಶಿಕ್ಷೆಯನ್ನು ಬಯಸುವುದು ಅವರು ತಮ್ಮ ಸಹಜ ಆಭಿಲಾಷೆಯನ್ನುಅವಲಂಭಿಸದೆ ಬಾಹ್ಯ ಪ್ರೇರಣೆ ಬಯಸುವುದರಿಂದ  ಅದೇ ಮೇಲುಗೈ ಪಡೆಯುತ್ತದೆ ಎಂದು ಹೇಳುತ್ತಾರೆ.
ಕೆಲಸದ ಸ್ಥಳಗಳ ಸಂಶೋಧನೆ ಪ್ರಕಾರ ಅವರು ಬಾಹ್ಯ ಪ್ರೇರೇಪಣೆ  ನೀಡಿದಾಗ  ಮಾಡಿದಾಗ ಜನರು ಉತ್ತಮ ಪ್ರದರ್ಶನ ನೀಡಲಿಲ್ಲ ಎಂದು ತೋರಿಸಿದೆ.  ಅಚ್ಚರಿಯೆಂದರೆ, ಹಣ, ಒಂದು ಉತ್ತಮ ಹುದ್ದೆ, ಉತ್ತಮ ಪ್ರಶಸ್ತಿ ಅಥವಾ ಪ್ರಮಾಣಪತ್ರಗಳನ್ನು ಒಳಗೊಂಡಿದ್ದಾಗಲೂ ಈ ಪ್ರೇರೇಪಣೆ ಪ್ರಯೋಜನವಾಗಲಿಲ್ಲ.
ಕೆಲಸದ ಸ್ಥಳಗಳ ಸಂಶೋಧನೆ ಪ್ರಕಾರ
ಜನರು ಸಂತೋಷವನ್ನು ಅನುಭವಿಸುತ್ತಿದ್ದಾಗ ಮಾತ್ರ ತಮ್ಮ ಕಾರ್ಯಸ್ಥಾನಗಳಲ್ಲಿ ಅಪೇಕ್ಷಿತ ರೀತಿಯಲ್ಲಿ ವರ್ತಿಸುತ್ತಾರೆ. ಜನರು ತಾವು ಮೌಲ್ಯಯುತ ಎಂದು ಭಾವಿಸಿದರೆ ಮಾತ್ರ ತಮ್ಮ ಕಾರ್ಯಸ್ಥಾನಗಳಲ್ಲಿ ಸಂತೋಷವಾಗಿರುತ್ತಾರೆ ಮತ್ತು ಅವರು ತಮ್ಮ ಜೀವನದ ಮೇಲೆ ನಿಯಂತ್ರಣ ಇದ್ದಾಗ ಮಾತ್ರ  ಅವರು ತಾವು ಮೌಲ್ಯಯುತ ಎಂದು ಭಾವಿಸುತ್ತಾರೆ.

ಜೀವನದ ಮೇಲೆ ನಿಯಂತ್ರಣವನ್ನು ಪ್ರೇರಣಾ ಸಾಧನ ಎಂದು ಕರೆಯಲಾಗುತ್ತದೆ. ಸಂಶೋಧನೆಯಲ್ಲಿ ಹೆಚ್ಚು ಪ್ರೇರಣಾ ಸಾಧನ ಹೊಂದಿರುವ ಜನರು ಸಂತೋಷದಿಂದಿರುತ್ತಾರೆ  ಮತ್ತು ಹೆಚ್ಚು ಉತ್ಪಾದಕ ರಾಗಿರುತ್ತಾರೆ.

ಹಾಗೆಯೇ, ಮಕ್ಕಳಲ್ಲೂ ಈ ಪ್ರೇರಣಾಶಕ್ತಿಯೆಂದರೆ ಅವರು ತಮ್ಮ ಬಗ್ಗೆ ನಿಯಂತ್ರಣ ಹೊಂದುವ ಸಾಮರ್ಥ್ಯ. ನಾವು ಅದರ ಬಗ್ಗೆ ಯೋಚಿಸಿದರೆ, ಮಕ್ಕಳು ತಮ್ಮ ಜೀವನದ ಮೇಲೆ ಬಹಳ ಕಡಿಮೆ ನಿಯಂತ್ರಣ ಹೊಂದಿರುತ್ತಾರೆ. ಅವರ ತಂದೆತಾಯಿಗಳು ಅಥವಾ ಪೋಷಕರು ಇಡೀ ದಿನದಲ್ಲಿ ಬಹಳಷ್ಟು ವಿಷಯವನ್ನು ನಿರ್ಧರಿಸುತ್ತಾರೆ - ಏನು ತಿನ್ನಬೇಕು,ಏನು ಧರಿಸ ಬೇಕು ಯಾವಾಗ ಹೊರ ಹೋಗಬೇಕು ಯಾವಾಗ ಜೊತೆಯಲ್ಲಿ  ಉಳಿಯ ಬೇಕು ಯಾವಾಗ ಅವರು ಚಿಕ್ಕನಿದ್ರೆ ಮಾಡಬೇಕು ಅವರು  ಬಗ್ಗೆ ಎಲ್ಲವನ್ನೂ ನಿರ್ಧರಿಸುತ್ತಾರೆ.
ಮಕ್ಕಳ  ಸುರಕ್ಷತೆ ಬಗ್ಗೆ ಕಾಳಜಿ ಇರಬೇಕು ನಿಜ,
ಅವರ ಜೀವನದ ಬಗ್ಗೆ ತಕ್ಕ ಪ್ರೇರಣೆ ಪಡೆಯಲು ಅವರಿಗೆ ಸ್ವಲ್ಪ ಅವಕಾಶ ನೀಡಬೇಕು. ಇದರ  ಪರಿಣಾಮ ಏನೆಂದರೆ ತಮ್ಮ ಬಗ್ಗೆ ಹೆಚ್ಚು ನಿಯಂತ್ರಣ ಹೊಂದಿ ಎಲ್ಲರಿಗೂ ಸಂತೋಷ ನೀಡುವ ತಾವೂ   ಸಂತೋಷದಿಂದಿರುವ  ಮಕ್ಕಳು ದೊರೆಯುತ್ತಾರೆ.
ಹಾಗೆಂದರೆ ನಾವು ಮಕ್ಕಳಿಗೆ ಸ್ವೇಚ್ಛೆ ನೀಡಕೂಡದು, ಇದು ಅಪಾಯಕರ ಸಂಗತಿ!

ನೀವು ಬಹುಶಃ ಇದನ್ನು ಓದುತ್ತಾ ಓದುತ್ತಾ ಅಯ್ಯಯ್ಯೋ ಮಕ್ಕಳನ್ನು  ನಂಬಲು ಸಾಧ್ಯವೇ? ಮುಕ್ತವಾಗಿ ಬಿಡಲು ಸಾಧ್ಯವೇ? ಚಾಕು ಮುಟ್ತಾರೆ,ಬೆಂಕಿ ಹಚ್ಚಿಕೊಳ್ಳುತ್ತಾರೆ ನಾಯಿ ಹತ್ತಿರ ಹೋಗ್ತಾರೆ ಮನೆಯಲ್ಲಿ ಗ್ಯಾಸ್ ಬಿರಡೆ ಜೊತೆ ಆಡುತ್ತಾರೆ ಅಥವಾ ರಸ್ತೆಗೆ ಓಡಿಬಿಡುತ್ತಾರೆ ಭಯಾನಕ, ಆಲೋಚನೆ ಮಾಡುತ್ತೀರಿ.

ಮಕ್ಕಳಿಗೆ ಮಿತಿ ಇರಬೇಕು. ಯಾವುದು ಸುರಕ್ಷಿತ (ತಮ್ಮ ಮನೆ ಅಂಗಳದಲ್ಲಿ ಆಡುವಸುರಕ್ಷತೆ ) ಮತ್ತು ಏನು ಅಸುರಕ್ಷಿತ (ಚಾಕುಗಳು, ಸ್ಟೌವ್ಗಳು, ರಸ್ತೆಗಳು, ನಾಯಿ ಬೆಂಕಿ ಜೊತೆ ಆಟ) ಏನನ್ನು ತಿಳಿಯಬೇಕು. ಅವರು ಮಗುವಿಗೆ ಇದು ಎಂದು  ಹೇಳುವುದು ಅವರನ್ನು ಶಿಕ್ಷಿಸಿದಂತೆ  ಅಲ್ಲ. ಅದರ ಬದಲಿಗೆ, ನೀವು ಈ ಕ್ರಮಗಳನ್ನು ಅನುಸರಿಸಬಹುದು:
   1.
ವರ್ತನೆಯನ್ನು ನಿಲ್ಲಿಸಿ. ಮಗು ರಸ್ತೆ ಕಡೆಗೆ ಓಡಲಿದೆ ಆಗ ಮಗುವನ್ನು ಹಿಡಿದೆತ್ತಿಕೊಂಡು ತಡೆಯಬೇಕು.
ಮಗು ನಾಯಿ ನೋಯಿಸುವುದನ್ನು ತಡೆಯ ಬೇಕು ಕೈ ಹಿಡಿದು ಅದರಲ್ಲಿ ಕೋಲು ಏನಾದರೂ ಇದ್ದರೆ ಬಿಡಿಸಿ ತೆಗೆಯಬೇಕು.  ಮಗು ಹಾಟ್ ಪ್ಲೇಟ್ ಮುಟ್ಟಲು ಹೋದರೆ ಅದನ್ನು ದೂರ ಕೈಗೆಟುಕದಂತೆ ಇಡಿ.  ಅವರು ಅಸಭ್ಯವಾಗಿ  ಒರಟಾಗಿ ನಡೆದುಕೊಂಡರೆ ನೀವು ಅದನ್ನೂ ತಡೆಯ ಬೇಕು .
  2.  ಈ ರೀತಿ ಹೇಳಿ "[ಹಾಗೆ  ಮಾಡುವುದು] ಸುರಕ್ಷಿತವಲ್ಲ, ನಾನು  ಹಾಗೆ ಮಾಡಲು ಅವಕಾಶ ನೀಡುವುದಿಲ್ಲ". ರಸ್ತೆಗೆ ಓಡುವುದನ್ನೇ ಉದಾಹರಣೆಗೆ ತೆಗೆದುಕೊಳ್ಳಿ ಮೇಲೆ ಚಾಲನೆಯಲ್ಲಿರುವ ಬಳಸಲು, ನೀವು ರಸ್ತೆಗೆ ಓಡುವುದು ಅಪಾಯಕಾರಿ  ನಿನಗೆ ರಸ್ತೆಗೆ ಹೋಗಿ ಓಡಲು ಬಿಡುವುದಿಲ್ಲ " ಮಗು ಒರಟಾಗಿ ನಡೆದುಕೊಂಡರೆ  ನಾನು   ನನಗೆ  / ನಿನ್ನ ಸಹೋದರ / ಇನ್ಯಾರಿಗೋ ನೋವುಂಟು ಮಾಡಲು ಅವಕಾಶ ನೀಡುವುದಿಲ್ಲ "ಎಂದು ಹೇಳಿ 

  3.ಅವರು, ಅಳಬಹುದು. ಅದಕ್ಕೂ ಸಿದ್ಧರಾಗಿರಿ ಅಳಲಿ ಬಿಡಿ ನಾನು ಒಂದು ವೇಳೆ ಗಾಡಿ ವೇಗವಾಗಿ ಓಡಿಸಿದ್ದಕ್ಕೆ ಟಿಕೆಟ್ ಪಡೆದರೆ ನನಗೂ ಅಳು ಬರುತ್ತದೆ  ಆದರೆ ಅಪರಾಧ ದಾಖಲಾಗುವುದೇನೂ ನಿಲ್ಲುವುದಿಲ್ಲವಲ್ಲ.  

4.ಅವರು ಅತ್ತೂ ಕರೆದರೆ , ಅವರನ್ನು ಕೇಳಲು ಮತ್ತು ಅವರೇನು ಹೇಳುತ್ತಾರೋ  ಸಮಾಧಾನದಿಂದ ಕೇಳಿ  ಅವರ ಕಷ್ಟ ಏನೆಂದು ವಿಚಾರಿಸಿದ್ದು ಅವರಿಗೆ ಸಮಾಧಾನ ತರುತ್ತದೆ.

5. ಸುರಕ್ಷತೆ ಕಾಳಜಿಯಿಂದ ಅವರು ಮುನ್ನುಗ್ಗಿ ಪರಿಶೀಲಿಸುವುದನ್ನು ನೀವು ತಡೆದಿದ್ದಿರಿ. ಹೀಗೆ ಹೇಳಿ ,ನಾನು ತಡೆದದ್ದು ನಿನಗೆ ಬೇಜಾರು ತಂದಿದೆ " ಹಾಟ್ಪ್ಲೇಟ್  ಸಂದರ್ಭದಲ್ಲಿ   ನನಗೆ ಹಾಟ್ಪ್ಲೇಟ್ ನೋಡಬೇಕು ಅಂತಾ ಇತ್ತಲ್ವ ಆದರೆ ಅದು ಸುಡುತ್ತದೆ ಆದ್ದರಿಂದ  ಅದನ್ನು ಮುಟ್ಟಲು ಸಾಧ್ಯವಿಲ್ಲ.  ಅವರು ಒರಟಾಗಿ ನಡೆದುಕೊಂಡರೆ  ನೀನೇನೂ ನೋಯಿಸಬೇಕು ಅಂತಿಲ್ಲ ಆದರೆ ಹಾಗೆ ಮಾತನಾಡಿದರೆ ಬೇರೆಯವರಿಗೆ ನೋವಾಗುತ್ತದೆ ಎಂದು ತಿಳಿಸಬೇಕು.

ನಾವು ನಮ್ಮ ಮಕ್ಕಳಿಗೆ ಶಿಸ್ತು ಕಲಿಯಲು  ಸಹಾಯ ಮಾಡಬೇಕಾದ ಅಗತ್ಯವಿದೆ, ಆದರೆ ನಾವು ಅವರ ಸ್ವಾಭಿಮಾನಕ್ಕೆ ಅವರ ಪ್ರೇರಣೆ ಶಕ್ತಿಗೆ ಧಕ್ಕೆ ಬಾರದಂತೆ   ಮಾಡಬಹುದು. ಇದು ಜೀವನದ ಸುವರ್ಣ ನಿಯಮ   "ನಾನು ನನ್ನ ಮಗುವಿನ ಸ್ಥಾನದಲ್ಲಿ ಇದ್ದಲ್ಲಿ  ನನ್ನನ್ನು ಹೇಗೆ ನಡೆಸಿಕೊಳ್ಳಬೇಕೆಂದು ಬಯಸುತ್ತೇನೆ?"ಎಂಬುದನ್ನು ಪರ್ಯಾಲೋಚಿಸಿ ಮಾತನಾಡಬೇಕು.

18934 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು