ಬರ ಗಾಲ ಬರುತ್ತಿದೆ ನೀರಿನ ಸಂರಕ್ಷಣೆ ಮಾಡಿ

ಕೇಂದ್ರ ಸರ್ಕಾರದ ಜಲ ಸಂರಕ್ಷಣಾ ಸಮಿತಿ ವಿಶ್ಲೇಷಣೆ

ಸ್ನಾನಕ್ಕೆ ನೀರಿನ ಬಳಕೆ......

ಶವರ್ ಬಳಸಿದರೆ  100 ಲೀಟರ್ ಖರ್ಚಾಗುತ್ತದೆ.ಬಕೆಟ್ ಬಳಸಿದರೆ 18 ಲೀಟರ್ ಖರ್ಚಾಗುತ್ತದೆ. ಅಂದರೆ 82 ಲೀಟರ್ ಉಳಿತಾಯವಾಗುತ್ತದೆ.

ಶೌಚಾಲಯದಲ್ಲಿ ಫ್ಲಷ್ ಮಾಡಿದರೆ

ಫ್ಲಶ್  ಮಾಡಿದಾಗ 20 ಲೀಟರ್ಗಳಷ್ಟು  ನೀರು ಖರ್ಚಾಗುತ್ತದೆ. ಬಕೆಟ್ ಮೂಲಕ ಫ್ಲಶ್  ಮಾಡಿದಾಗ 6 ಲೀಟರ್ ಖರ್ಚಾಗುತ್ತದೆ. 14 ಲೀಟರ್ಗಳಷ್ಟು ನೀರಿನ ಉಳಿತಾಯ ಆಗುತ್ತದೆ.
ಬಟ್ಟೆಗಳನ್ನು ಒಗೆಯುವುದು
ಕೊಳಾಯಿ ನೀರು ಬಳಸಿದರೆ  - 116 ಲೀಟರ್ ನೀರು ಖರ್ಚಾಗುತ್ತದೆ.ಬಕೆಟ್ ನೀರು ಬಳಸಿದರೆ  36 ಲೀಟರ್ ನೀರು ಖರ್ಚಾಗುತ್ತದೆ.ಅಂದರೆ 80 ಲೀಟರ್ಗಳಷ್ಟು. ನೀರಿನ ಉಳಿತಾಯ ಆಗುತ್ತದೆ.
ಶೇವಿಂಗ್
ಕೊಳಾಯಿ ನೀರು ಬಳಸಿದರೆ  ..5 ಲೀಟರ್ ನೀರು ಖರ್ಚಾಗುತ್ತದೆ.
ಒಂದು ಮಗ್ ನಲ್ಲಿ ನೀರು ಬಳಸಿದರೆ. 0.5 ಲೀಟರ್.
ಖರ್ಚಾಗುತ್ತದೆ.
ಹಲ್ಲುಜ್ಜುವುದು
ಕೊಳಾಯಿ ನೀರು ಬಳಸಿದರೆ  5 ಲೀಟರ್
ಮುಚ್ಚಿದ ನಲ್ಲಿ ಅಥವಾ ಬಕೆಟ್ ನಿಂದ.. 0.75 ಲೀಟರ್ ನೀರು ಖರ್ಚಾಗುತ್ತದೆ.
ಕಾರು ತೊಳೆಯುವುದು
ನೀರನ್ನುಕೊಳಾಯಿಯಿಂದ ನೇರ ಜಿರಕಿ ಹೊಡೆದರೆ ಸುಮಾರು 100 ಲೀಟರ್ ..ಒಂದೇ ಬಕೆಟ್ನ ಕೇವಲ 18 ಲೀಟರ್ ನೀರಿನಲ್ಲಿ 2 ರಿಂದ 3 ಕಾರುಗಳನ್ನು ತೊಳೆಯಬಹುದು ......

ಕುಂಡದಲ್ಲಿ ಬೆಳಸಿದ ಸಸ್ಯಗಳಿಗೆ ನೀರುಣಿಸುವುದು
 ನೇರ ನಲ್ಲಿ ನೀರು ಬಳಸಿದರೆ  ಸುಮಾರು 50 ಲೀಟರ್ ...... ಬಕೆಟ್ನಲ್ಲಿ 10 ಲೀಟರ್ ಗೂ ಕಡಿಮೆ

 ತೋಟಕ್ಕೆ ನೀರು ಹಾಯಿಸುವುದು

100 ಲೀಟರ್ ಅಥವಾ ಅದರ ಗುಣಕ ...... ಸಿಂಪಡಿಸುವ ಪದ್ಧತಿಯನ್ನು ಅನುಸರಿಸಿದರೆ  ಕೇವಲ 25/30 ಲೀಟರ್

ಬಕೆಟ್ ಬಳಸಿ - ನೀವು ಒಂದು ಗಮನಾರ್ಹ ವ್ಯತ್ಯಾಸವನ್ನು ಕಾಣಬಹುದು .

ಮನೆಯಲ್ಲಿ ನೀರಿನ ಜೋಪಾನ ಬಳಕೆ

 

1.  ನಲ್ಲಿಗಳು ಮತ್ತು ಪೈಪ್ ಸೋರಿಕೆಯಾಗುತ್ತಿದೆಯೇ ಪರಿಶೀಲಿಸಿ ರಿಪೇರಿ ಮಾಡಿಸಿ.

ಒಂದು ಸವೆದ ನಲ್ಲಿ ವಾಷರ್ ನಿಂದ ತೊಟ್ಟಿಕ್ಕುತ್ತಾ ಹೋಗುವ ಒಂದು ಸಣ್ಣ ಹನಿ ದಿನಕ್ಕೆ 20 ಗ್ಯಾಲನ್ ನೀರಿನ ಪೋಲು ಮಾಡುತ್ತದೆ.ಇನ್ನೂ ದೊಡ್ಡ ಸೋರಿಕೆಯಿಂದ ನೂರಾರು ಗ್ಯಾಲನ್ಗಳಷ್ಟು ನೀರು ವ್ಯರ್ಥ ಆಗುತ್ತದೆ.

2. ಟಾಯ್ಲೆಟ್ ಅನ್ನು ಒಂದು ಆ್ಯಷ್ ಟ್ರೇ ಅಥವಾ ಕಸದ ಬುಟ್ಟಿಯಂತೆ ಬಳಸಬೇಡಿ.

ನೀವು ಪ್ರತಿ ಬಾರಿ ಸಿಗರೇಟ್ ಬಟ್, ಮುಖ ಒರಸಿದ ಟಿಷ್ಯೂ ಅಥವಾ ಇತರ ಕಸ ಸಣ್ಣ ತುಂಡು ಹೊರದೂಡಲು ಹೊರಟರೆ  ಐದರಿಂದ ಏಳು ಗ್ಯಾಲನ್ ನೀರು ವ್ಯರ್ಥವಾಗುತ್ತದೆ.

3. ನಿಮ್ಮ ಶೌಚಾಲಯಗಳಲ್ಲಿ  ಸೋರಿಕೆಯನ್ನು ಪರಿಶೀಲಿಸಿ.
ನಿಮ್ಮ ಶೌಚಾಲಯದ ಟ್ಯಾಂಕ್ ಗೆ ಸ್ವಲ್ಪ ಆಹಾರದ ಬಣ್ಣ ಹಾಕಿ, ಸ್ವಚ್ಛಗೊಳಿಸಲು ಬಳಸಿದಾಗ ಅಲ್ಲದೆ, ಬಣ್ಣ 30 ನಿಮಿಷಗಳಲ್ಲಿ ಬಟ್ಟಲಿನಲ್ಲಿ ಕಾಣಿಸಿಕೊಳ್ಳಲು ಆರಂಭವಾದರೆ, ಸೋರಿಕೆ ಆಗುತ್ತಿದೆ ಎಂದು ಅರ್ಥ ಮತ್ತು ನೀವು ತಕ್ಷಣ ದುರಸ್ತಿ ಮಾಡಿಸಬೇಕು. ಬದಲಾಯಿಸಬೇಕಾದ ಬಿಡಿಭಾಗಗಳು ಅತ್ಯಂತ ಅಗ್ಗ ಮತ್ತು ಅಳವಡಿಸುವುದು ಸುಲಭ.

4. ನಿಮ್ಮ ನೀರಿನ ಮೀಟರ್ ಬಳಸಿ ನೀರಿನ ಗುಪ್ತ ಸೋರುವಿಕೆ ಪರಿಶೀಲಿಸಿರಿ.

ಎರಡು ಗಂಟೆ ಒಂದು ಅವಧಿಯಲ್ಲಿ  ನೀರನ್ನು ಬಳಸದೆ ಆ ಅವಧಿಗೆ ಮೊದಲು ಮತ್ತು ನಂತರ  ಮನೆ ನೀರಿನ ಮೀಟರ್ ಓದಿ. ಒಂದು ವೇಳೆ ಮೀಟರ್ ರೀಡಿಂಗ್ ಒಂದೇ ಆಗಿರದೇ ಇದ್ದರೆ, ಸೋರಿಕೆ ಆಗುತ್ತಿದೆ ಎಂದು ಅರ್ಥ.

5. ನೀರಿನ ಉಳಿತಾಯ ಮಾಡುವ ಶವರ್ ನ  ನಲ್ಲಿ ಮತ್ತು ಕಡಿಮೆ ಹರಿವಿನ ನೀರಿಗೆ ಗಾಳಿ ಬೆರಸುವ ನಲ್ಲಿಗಳನ್ನು ಹಾಕಿಸಿರಿ.

 ಅಗ್ಗದ  ಮತ್ತು ನೀರು ಉಳಿಸುವ ಕಡಿಮೆ ಹರಿವಿನ ಶವರ್ ನಲ್ಲಿ  ಅಥವಾ ನಿರ್ಬಂಧಕಗಳನ್ನು ಹಾಕಿಸುವುದು ಮನೆಯ ಮಾಲಿಕರಿಗೆ  ಸುಲಭ. ಅಲ್ಲದೆ, ದೀರ್ಘಕಾಲ, ಬಿಸಿ ಸ್ನಾನ ಪ್ರತಿ ಅನಗತ್ಯವಾದ ನಿಮಿಷ ಐದರಿಂದ ಹತ್ತು ಗ್ಯಾಲನ್ ನೀರು ಬಳಸಬಹುದು. ನಿಮ್ಮ ಸ್ನಾನದ ಅವಧಿಯನ್ನು ಸಾಬೂನು ಹಚ್ಚಿಕೊಳ್ಳಲು ತೆಗೆದುಕೊಳ್ಳುವ ಸಮಯ ಅದನ್ನು ತೊಳೆದು ಕೊಳ್ಳುವ ಸಮಯಕ್ಕೆ ಮಿತಿ ಗೊಳಿಸಿ,. "ಕಡಿಮೆ ಹರಿವಿನ" ನಲ್ಲಿ ಎಂದರೆ ಅದು ಪ್ರತಿ ನಿಮಿಷಕ್ಕೆ 2.5 ಗ್ಯಾಲನ್ ನಷ್ಟು ಕಡಿಮೆ ನೀರು ಬಳಸುತ್ತದೆ  ಎಂದು ಅರ್ಥ..
ಅಲ್ಲದೆ, ಮನೆಯ ಎಲ್ಲಾ ನಲ್ಲಿ ಗಳಲ್ಲೂ ಏರೇಟರ್ ಬಳಸಿ. ಈ ಏಕೈಕ ಅತ್ಯುತ್ತಮ ಮನೆ ನೀರಿನ ಸಂರಕ್ಷಣೆ ವಿಧಾನ ಅಗ್ಗ ಸಹ ಆಗಿದೆ!

 

6. ನಿಮ್ಮ ಶೌಚಾಲಯದ ಟ್ಯಾಂಕ್ ಒಳಗೆ ಪ್ಲಾಸ್ಟಿಕ್ ಬಾಟಲಿಗಳು ಅಥವಾ ಫ್ಲೋಟ್ ಬೂಸ್ಟರ್ ಹಾಕಿರಿ.
ನೀರು ಪೋಲಾಗುವುದನ್ನು ತಪ್ಪಿಸಲು, ಎರಡು ಪ್ಲಾಸ್ಟಿಕ್ ಬಾಟಲಿಗಳಲ್ಲಿ  ಅವುಗಳನ್ನು ಕೆಳಗೆ ಭಾರದಿಂದ ಕೂರುವಂತೆ ಒಂದು ಇಂಚು ಮರಳು ಅಥವಾ ಪುಟ್ಟ ಕಲ್ಲುಗಳನ್ನುಹಾಕಿಟ್ಟು ನೀರು ತುಂಬಿ ಬಾಟಲಿಗಳ ಮುಚ್ಚಳ  ಬಿಗಿಯಾಗಿ ಮುಚ್ಚಿರಿ. ನಂತರ  ಶೌಚಾಲಯದ ಟ್ಯಾಂಕ್ ಒಳಗೆ ಇಡಿ. ಸುರಕ್ಷಿತವಾಗಿ ಯಾಂತ್ರಿಕ ಸಲಕರಣೆ ಯಿಂದ ಅದಕ್ಕೆ ಅಡ್ಡಿಯಾಗದಂತೆ ದೂರ ಇರಿಸಿ. ಅಥವಾ, ದುಬಾರಿಯಲ್ಲದ ಟ್ಯಾಂಕ್ ಬ್ಯಾಂಕ್ ಅಥವಾ ತೇಲು ಬೂಸ್ಟರ್ ಅಳವಡಿಸಿ. ಇದರಿಂದ ದಿನಕ್ಕೆ ಹತ್ತು ಅಥವಾ ಹೆಚ್ಚು ಗ್ಯಾಲನ್ ನೀರನ್ನು ಉಳಿಸಬಹುದು.

7. ನಿಮ್ಮ ನೀರಿನ ಕೊಳವೆಗಳನ್ನು ಶಾಖರಕ್ಷಕವನ್ನಾಗಿ ಮಾಡಿರಿ.
ಮೊದಲೇ ಸೀಳಿದ ಫೋಮ್ ಪೈಪ್ ಶಾಖರಕ್ಷಕವನ್ನು  ನಿಮ್ಮ ನೀರಿನ ಪೈಪ್ ಗೆ ಅಳವಡಿಸುವುದು ಸುಲಭ ಮತ್ತು ಅಗ್ಗ ಕೂಡ. ವು ವೇಗವಾಗಿ ಬಿಸಿ ನೀರು ಪಡೆಯಲು ಸಹಾಯಕ ಮತ್ತು  ಇದು ಬಿಸಿಯಾಗುವಾಗ ನೀರಿನ ಪೋಲು ತಪ್ಪುತ್ತದೆ.

8. ನಲ್ಲಿ ನಿಲ್ಲಿಸಿ ಮತ್ತು ಬಳಸಿ ಮಧ್ಯೆ ಮಧ್ಯೆ ಷವರ್ ಮಾಡಿ.

ನೀರಿನ ಬಳಕೆ ಕಡಿಮೆ ಮಾಡಲು ಸೋಪು ಹಚ್ಚಿಕೊಳ್ಳುವಾಗ ಶವರ್ ಆಫ್ ಮಾಡಿ  ಮೈತೊಳೆದುಕೊಳ್ಳುವಾಗ ಮತ್ತೆ ಆನ್ ಮಾಡಿ ನಾಲ್ಕು ನಿಮಿಷ ಷವರ್ ಮಾಡಿದರೆ  ಸುಮಾರು 20 ರಿಂದ 40 ಗ್ಯಾಲನ್ ನೀರು ಬಳಕೆಯಾಗುತ್ತದೆ.
,,,ಮ ಹಲ್ಲುಜ್ಜುವಾಗ ನೀರು ನಿಲ್ಲಿಸದೆ ಬಿಡಬೇಕಾದ ಅಗತ್ಯವಿಲ್ಲ. ನಿಮ್ಮ ಬ್ರಷ್ ತೇವಮಾಡಿಕೊಳ್ಳಿ  ಮತ್ತು ಬಾಯಿ ತೊಳೆಯಲು ಒಂದು ಗ್ಲಾಸಿನಲ್ಲಿ ನೀರು ತುಂಬಿಕೊಳ್ಳಿ.

10. ನಿಮ್ಮ ರೇಜರ್ ಅನ್ನು  ಸಿಂಕ್ ನಲ್ಲಿ ತೊಳೆಯಿರಿ
ಬೆಚ್ಚಗಿನ ನೀರನ್ನು ಕೆಲವು ಇಂಚುಗಳಷ್ಟು ಸಿಂಕ್ ನಲ್ಲಿ ಭರ್ತಿ ಮಾಡಿರಿ.  ಹರಿಯುವ ನೀರಿನಂತೆಯೇ ನಿಮ್ಮ ರೇಜರ್ ತೊಳೆಯುತ್ತದೆ ಕಡಿಮೆ ನೀರಿನ ಬಳಕೆ ಆಗುತ್ತದೆ.

 

11. ನಿಮ್ಮ ಪಾತ್ರೆ ತೊಳೆಯುವ ಯಂತ್ರ ಮತ್ತು ಬಟ್ಟೆಗಳನ್ನು ತೊಳೆಯುವ ಯಂತ್ರಗಳನ್ನು ಪೂರ್ಣ ಲೋಡ್ ನಲ್ಲಿ ಮಾತ್ರ ಬಳಸಿರಿ.

ಸ್ವಯಂಚಾಲಿತ ಪಾತ್ರೆ ತೊಳೆಯುವ ಯಂತ್ರ ಮತ್ತು ಬಟ್ಟೆಗಳನ್ನುತೊಳೆಯುವ ಯಂತ್ರಗಳನ್ನು  ಸಂಪೂರ್ಣವಾಗಿ ಗರಿಷ್ಠ ನೀರಿನ ಸಂರಕ್ಷಣೆ ಆಗುವಂತೆ ಲೋಡ್ ಮಾಡಬೇಕು.

12. ಅಡುಗೆಮನೆ ತೊಟ್ಟಿ ಕಸ ವಿಲೇವಾರಿ ಘಟಕಗಳ ಬಳಕೆ ಕಡಿಮೆ ಮಾಡಿರಿ
ಆಹಾರ ತ್ಯಾಜ್ಯ ಬಳಸಿ ಒಂದು ಪರ್ಯಾಯ ವಿಧಾನವಾಗಿ ಒಂದು ಮಿಶ್ರಗೊಬ್ಬರ ರಾಶಿಯನ್ನು ಪ್ರಾರಂಭಿಸಿ.

13. ಕೈಯಿಂದ ಪಾತ್ರೆ ತೊಳೆಯುವಾಗ ತೊಳೆಯಲು ನೀರು ಬಿಟ್ಟು ಕೊಂಡೇ ಪಾತ್ರೆ ಉಜ್ಜಬೇಡಿ

14. ನೀವು ತರಕಾರಿಗಳನ್ನು ತೊಳೆಯುವ ಸಂದರ್ಭದಲ್ಲಿ ನಲ್ಲಿ ನೀರು ಹರಿಯಲು ಬಿಡಬೇಡಿ

ಒಂದು ಬಿರಡೆ ಹಾಕಿದ ಸಿಂಕ್ನಲ್ಲಿ ನೀರು ತುಂಬಿಸಿ ತೊಳೆದು  ಅಥವಾ ಶುದ್ಧ ನೀರಿನ ಪ್ಯಾನ್ ಅವುಗಳನ್ನು ಜಾಲಾಡಿ ತೊಳೆಯಿರಿ.
 

 

15. ಮನೆ ಮುಂದೆ  ನೀರಿನ ಬರ ತಡೆದುಕೊಳ್ಳುವ  ಹುಲ್ಲುಹಾಸುಗಳು, ಪೊದೆಗಳು ಮತ್ತು ಸಸ್ಯಗಳು ನಿಮ್ಮ ತೋಟದಲ್ಲಿ ಬೆಳಸಿರಿ.
ನೀವು ಒಂದು ಹೊಸ ಹುಲ್ಲು ಹಾಸು ಮಾಡಬೇಕಾದರೆ "ಪರಿಸರ ಲಾನ್" ಎಂಬ ಬರ ನಿರೋಧಕ ಹುಲ್ಲುಗಳನ್ನು ಬಳಸಿ., ಹೊಸ ಅನೇಕ ಸುಂದರ ಪೊದೆಗಳು ಮತ್ತು ಸಸ್ಯಗಳು ಇತರ ಜಾತಿಗಳು ಕಡಿಮೆ ನೀರಿನಲ್ಲಿ ಹುಲುಸಾಗಿ ಬೆಳೆಯುತ್ತವೆ. ಸ್ಥಳೀಯ ಕಡಿಮೆ ನೀರು ಕೇಳುವ  ಸಸ್ಯಗಳನ್ನು ಬೆಳಸಿರಿ.

 

 

18077 ನೊಂದಾಯಿತ ಬಳಕೆದಾರರು
6933 ಸಂಪನ್ಮೂಲಗಳು