ಬರೆಯುವುದು ಫಲದಾಯಕ

ಬರವಣಿಗೆ ನಿಸ್ಸಂದೇಹವಾಗಿ ಪಠ್ಯಕ್ರಮದ ಅವಿಭಾಜ್ಯ ಭಾಗ ಮತ್ತು ಆದ್ದರಿಂದಲೇ ನಾವು  ನಮ್ಮ ವಿದ್ಯಾರ್ಥಿಗಳನ್ನು  ಸದಾ ಅದೂ ಇದು ಬರೆಯಲುತೊಡಗಿಸುತ್ತೇವೆ. ಅವರು ಉಕ್ತಲೇಖನ ಬರೆಯುತ್ತಾರೆ ( ಇನ್ನೂ ಅದೇ ತಪ್ಪುಗಳನ್ನು ಮುಂದುವರಿಸುತ್ತಾರೆ) ಉತ್ತರಗಳನ್ನು ಬರೆಯುತ್ತಾರೆ. (ಉರುಹೊಡೆದು ಬರೆಯುತ್ತಾರೆ)  ಮತ್ತು ಪ್ಯಾರಾಗ್ರಾಫ್ ಬರವಣಿಗೆ, ಸಾರಾಂಶ ಬರವಣಿಗೆ ಮತ್ತು ನಂತರ ಸೃಜನಾತ್ಮಕ ಬರವಣಿಗೆಯನ್ನು ಬರೆಯಲು ಕಲಿಯುತ್ತಾರೆ.

 ಪಠ್ಯಕ್ರಮ ಮತ್ತು ಶಾಲೆ ವಿದ್ಯಾರ್ಥಿಗಳು ಶಿಶುವಿಹಾರದಿಂದಲೇ ಬರೆಯುವುದನ್ನು ಕಲಿಯಲು ನಿರೀಕ್ಷಿಸುತ್ತವೆ. ಮತ್ತು ಪ್ರಾಥಮಿಕ ಶಾಲೆಗೆ ಬರುವ ಹೊತ್ತಿಗೆ  ಅವರು ಒಂದು ನಿರ್ದಿಷ್ಟ ಪದ ಬಳಸಿ ವಾಕ್ಯಗಳನ್ನು ರಚಿಸಲು, ಅಥವಾ ತಮ್ಮ ಬಗ್ಗೆ ಒಂದು ಸಣ್ಣ ಪ್ಯಾರಾಗ್ರಾಫ್ ಬರೆಯಲು ನಿರೀಕ್ಷಿಸಲಾಗುತ್ತದೆ..

ಇಷ್ಟೊದು ಬರೆಯುವ ಅಭ್ಯಾಸ  ಇರುವಾಗ , ನಾವು ಶಿಕ್ಷಕರು, ಪೋಷಕರು, ಮತ್ತು ಯಸ್ಕರಾಗಿ ವರ್ಡ್ಸ್ವರ್ತ್ ಕವಿಯ ಮಾತುಗಳಲ್ಲಿ ಹೇಳುವುದಾದರೆ ಬರವಣಿಗೆ ಎಂಬುದು ಮಕ್ಕಳಿಗೆ "ಪ್ರಬಲ ಭಾವನೆಗಳ ಸ್ವಾಭಾವಿಕ ಪ್ರವಾಹ 'ಎಂದು ಭಾವಿಸಿಬಿಡುತ್ತೇವೆ.

ಆದರೆ, ವಿದ್ಯಾರ್ಥಿಗಳು ಬರವಣಿಗೆ ಎಂಬುದು ಸ್ವಾಭಾವಿಕ ಪ್ರವಾಹ ಎಂದು ಭಾವಿಸುವುದಿಲ್ಲ. ಅವರು ತಮ್ಮ ಪೆನ್ಸಿಲ್ ಅಗಿಯುತ್ತಾರೆ ಸ್ಫೂರ್ತಿಗಾಗಿ ಅತ್ತಿತ್ತ ನೋಡುತ್ತಾರೆ. ಚಾವಣಿ ನೋಡಿ ಹುಡುಕುತ್ತಾರೆ ಇತರ ವಿದ್ಯಾರ್ಥಿಗಳು ಮುಂದುವರಿಯುತ್ತಿದ್ದಾರೆ ಎನಿಸಿದರೆ ಒಂದು ದೀರ್ಘ ನಿಟ್ಟುಸಿರು ಬಿಡುತ್ತಾರೆ . ಶಿಕ್ಷಕರು  ಸಮಯ ಮುಗಿಯಿತು ಎಂದಾಗ  ಏನೇನೋ ಬರೆಯಲು ವ್ಯರ್ಥ ಪ್ರಯತ್ನ ಮಾಡುತ್ತಾರೆ. ಉತ್ತರ ಪತ್ರಿಕೆ ನೀಡುವಾಗ ಇಡೀ ಬರವಣಿಗೆ ಕೆಲಸ ಅನಧಿಕೃತ ಚಿತ್ರಹಿಂಸೆ ಆಗಿತ್ತು ಎಂದು  ಅವರ ನೋಟ ಸ್ಪಷ್ಟವಾಗಿ  ಸೂಚಿಸುತ್ತದೆ.

ಒಂದನೇ ತರಗತಿಯಲ್ಲಿ ಶಿಕ್ಷಕರಾದ ನಾವು ಮಕ್ಕಳು ಸಾಕಷ್ಟು ಕಲಿತು ಬಂದಿರುತ್ತಾರೆ  . ವಿದ್ಯಾರ್ಥಿಗಳು ಕೊರತೆ ಮಾತ್ರ ತುಂಬಲು ಅಗತ್ಯವಿದೆ ಎಂದು  ನಂಬುತ್ತೇವೆ. ಇಲ್ಲಿ ವಿದ್ಯಾರ್ಥಿಗಳು ಮಾಡಬೇಕಾದ ಬರೆಯುವ ಕೆಲಸದ ಒಂದು ಮಾದರಿಯಿದೆ.

ಅಭ್ಯಾಸ
 
ಇಂದು ನಿಮ್ಮ ಜನ್ಮದಿನ. ಪೆಟ್ಟಿಗೆಯಿಂದ ಪದಗಳನ್ನುತೆಗೆದು ಖಾಲಿ ಸ್ಥಾನಗಳನ್ನು  ತುಂಬಿರಿ.

 

ಮುದ್ದಾಗಿ ಕಾಣುತ್ತಿದೆ                      5               ಉಡುಗೊರೆ        ಕೇಕ್               ಬೊಂಬೆ

 

ಇಂದು ನನ್ನ ಜನ್ಮದಿನ. ನನಗೆ -------- ವರ್ಷ ವಯಸ್ಸಾಗಿದೆ. ಅಮ್ಮ ___________ ಮಾಡುತ್ತಿದ್ದಾಳೆ.  ಅಪ್ಪ ನನಗೆ ಒಂದು __________ ನೀಡಿದರು. ಅದು ಒಂದು ______________. ಅದು______________.

 
ಈ ಅಭ್ಯಾಸದಲ್ಲಿ ಜಟಿಲತೆ ಇಲ್ಲ. ಆದರೂ ಬರವಣಿಗೆಯಲ್ಲಿ ಕೆಲವೊಂದು ದೋಷ  ಇವೆ.
 
1) ಬಹಳಷ್ಟು  ವಿದ್ಯಾರ್ಥಿಗಳು  ಓದುವುದಕ್ಕೆ ಕಷ್ಟಪಡುತ್ತಾರೆ. 
2) ಅವರು ಅಲ್ಲಿರುವ ಪದಗಳನ್ನುಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳಲಾಗಿಲ್ಲ.
 
ಆದರೆ ತುಂಬಿ ತುಳುಕುವ ಪಠ್ಯಕ್ರಮವು ವಿದ್ಯಾರ್ಥಿಗಳು, ಸಂಭಾವ್ಯವಾಗಿ ತಾವೇ ಸ್ವಯಂ ಕಲಿತು ಬಂದುದ್ದು . ಈಗ ತಮ್ಮ  ಕುಟುಂಬ, ಶಾಲೆ,  ತಮ್ಮ ಸುತ್ತ ಮುತ್ತಲಿನ ಪ್ರಾಣಿಗಳು,ತಮ್ಮ ಸ್ನೇಹಿತನ ಬಗ್ಗೆ  ತೋಟದಲ್ಲಿ  ಆಡುವ ಬಗ್ಗೆ    ಅಂದರೆ       ಅವರು ತಾವು ವಾಸಿಸುತ್ತಿರುವ ಪರಿಸರದ ಬಗ್ಗೆ ತಿಳಿದಿರಬೇಕು ಮಾತ್ರವಲ್ಲ   , ದುರದೃಷ್ಟವಶಾತ್,  ಅದರ ಬಗ್ಗೆ ಬರೆಯಲು ತಿಳಿದಿರಬೇಕೆಂದು ನಿರೀಕ್ಷಿಸಲಾಗಿದೆ! ಆದ್ದರಿಂದ ಅವರು ಒಂದು ವಿಷಯದ ಮೂಲಕ ಹೆಣಗಾಡಿ ಬಂದ  ಮೇಲೆ ಏದುತ್ತಾ ಮೇಲುಸಿರು ಬಿಡುತ್ತಾ  ಇನ್ನೊಂದು  ವಿಷಯವನ್ನು  ಕುರಿತು  ಹೆಣಗಾಡಬೇಕಾಗುತ್ತದೆ. ಹೀಗೆ ಮಾಡುವಾಗ ಅವರು ಅವೇ ತಪ್ಪುಗಳನ್ನು ಮತ್ತೆ ಮತ್ತೆ ಮಾಡುತ್ತಿರುತ್ತಾರೆ. ಏಕೆಂದರೆ  ಶಿಕ್ಷಕರಿಗೆ ಪದೆ ಪದೆ  ಅಭ್ಯಾಸ ಮಾಡಿಸಿ ವಿನ್ಯಾಸ ಮತ್ತು ಪರಿಕಲ್ಪನೆಗಳನ್ನು ಮನನ ಮಾಡಿಸಲು  ಯಾವುದೇ ಸಮಯ ಇರುವುದಿಲ್ಲ.
 
ಇದಕ್ಕಿಂತ   ಉತ್ತಮ ಮಾರ್ಗ ಇದೆಯೇ? ವಿದ್ಯಾರ್ಥಿಗಳು ಉತ್ತಮ ಬರಹಗಾರರು ಆಗುವಂತೆ ಮಾಡಲು ಅದೇ ಅಭ್ಯಾಸವನ್ನು  ಶಿಕ್ಷಕರು,  ವಿವಿಧ ರೀತಿಯಲ್ಲಿ  ಮಾಡಿಸಬಹುದು. ವಿದ್ಯಾರ್ಥಿಗಳು ಪದದ ತುಂಡು ಮಾಡುವಿಕೆ  ಹೇಗೆ ಕೆಲಸ ಮಾಡುತ್ತದೆ  ಎಂಬುದನ್ನು  ಅರ್ಥಮಾಡಿಕೊಂಡರೆ   ಅವರು ಚೆನ್ನಾಗಿ ಓದಲು ಮತ್ತು ಬರೆಯಲು ಕಲಿಯಬಹುದು. ಮೇಲಿನ ವಿಷಯವನ್ನೇ ಒಂದು ಕೋಷ್ಟಕದ ರೀತಿಯಲ್ಲಿ ಮಾಡಿ  ವಿದ್ಯಾರ್ಥಿಗಳು ವಾಕ್ಯಗಳಿಗೆ ಸಂಖ್ಯೆಹಾಕಲು ಹೇಳಬಹುದು.  ನಿಸ್ಸಂದೇಹವಾಗಿ, ನಾವು ಅವುಗಳನ್ನು ವಾಕ್ಯ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ನೀಡುವ ಸಲುವಾಗಿ ವಿದ್ಯಾರ್ಥಿಗಳು ವಾಕ್ಯಗಳನ್ನು ಗೋಜಲು ಮಾಡುತ್ತೇವೆ. ಆದರೆ ವಿವಿಧ ಪೆಟ್ಟಿಗೆಗಳಲ್ಲಿ ಪದಗಳನ್ನು ಹಾಕಿದಾಗ ವಿದ್ಯಾರ್ಥಿಗಳು ತಮ್ಮ ಆಲಸ್ಯ ಬಿಡುತ್ತಾರೆ ಮತ್ತು ಆಮೂಲಾಗ್ರ ಹಾಗು ನಿಜವಾಗಿಯೂ ಗಂಭೀರ ಚಿಂತನೆಗೆ ತೊಡಗುತ್ತಾರೆ. ಅವರು ಅಂಕಣಗಳಿಗೆ ಸಂಖ್ಯೆ ಹಾಕಿ  ನಂತರ ಸಂಪೂರ್ಣವಾಗಿ ಓದುತ್ತಾರೆ. ಅವರು ಅದು ಮುದ್ದಾಗಿದೆ ( ಅಭ್ಯಾಸದಲ್ಲಿ ಕೊಟ್ಟದ್ದು)  ಇದು ಉಡುಗೊರೆಯಾಗಿ  ತಂದೆ ನೀಡಿದ ಬೊಂಬೆಗೆ ಸಂಬಂದಿಸಿದ್ದು . ಆದ್ದರಿಂದ  ಉಡುಗೊರೆ ವಿಷಯ ಮೊದಲು ಬರಬೇಕು ಎಂದು ಅರ್ಥಮಾಡಿಕೊಳ್ಳುತ್ತಾರೆ.  ವಿಷಯ ನಿರೂಪಣೆಯಲ್ಲಿ ಒಂದು ತಾರ್ಕಿಕ ವಿನ್ಯಾಸ ಇದೆ  ಎಂದು ಮಕ್ಕಳು  ಅರ್ಥಮಾಡಿಕೊಂಡರೆ ಅವರು ವ್ಯವಸ್ಥಿತವಲ್ಲದ  ಪ್ಯಾರಾಗಳನ್ನು  ಬರೆಯುವುದಿಲ್ಲ
ಇಲ್ಲಿ ಒಂದು ಅಂಕಣಗಳ ಸ್ವರೂಪದಲ್ಲಿ ಅದೇ ಅಭ್ಯಾಸ ನೀಡಲಾಗಿದೆ. 
 

ನನ್ನ ಜನ್ಮದಿನ

 

ಅಮ್ಮ

 

ಇಂದು

ಕೊಡುತ್ತಾರೆ

 

ನನಗೆ

 

ಐದು ವರ್ಷ ವಯಸ್ಸು

ಒಂದು ಉಡುಗೊರೆ

ಕೇಕ್ ಮಾಡುತ್ತಾಳೆ

ಅಪ್ಪ

 

ಒಂದು ಬೊಂಬೆ

ಮುದ್ದಾಗಿದೆ

 

ಅದು

ಅದು

 

 

ಈ ರೀತಿಯ ಅಭ್ಯಾಸವು  ಪದಗಳನ್ನು ಒಟ್ಟಿಗೆ ಜೋಡಿಸಲು ವಿದ್ಯಾರ್ಥಿಗಳಿಗೆ  ಸಹಾಯಮಾಡುತ್ತದೆ. ಅವರು ವಾಕ್ಯದ ಕೊನೆಯಲ್ಲಿ ವಿರಾಮ ಚಿಹ್ನೆ ಹಾಕಬೇಕೆಂಬುದನ್ನು ಕಲಿಯುತ್ತಾರೆ  ಮತ್ತು ಅವರು  ವ್ಯಾಕರಣದ   ನಿಯಮಗಳನ್ನು  ಕಲಿಯುತ್ತಾರೆ.
 
 ಅಭ್ಯಾಸವನ್ನು  ಕೂಡ ಬೇರೆ ರೀತಿಯ ಸ್ವರೂಪಕ್ಕೆ  ಬದಲಾವಣೆ ಮಾಡ ಬಹುದು. ಸ್ವರೂಪಗಳನ್ನು  ಸ್ವಲ್ಪ ಬದಲಾವಣೆ ಮಾಡಿದಾಗ, ಹೆಚ್ಚು ಆಸಕ್ತಿ ಉಂಟುಮಾಡಬಹುದು.

ಇಲ್ಲಿದೆ ಮತ್ತೊಂದು ಉದಾಹರಣೆ: -

 
ಅಭ್ಯಾಸಪತ್ರ:
 
ವಾಕ್ಯದ ಭಾಗಗಳು 1.ಸಂಖ್ಯೆ

 

2.ಈಗ ವಾಕ್ಯದ ವಿವಿಧ ಭಾಗಗಳನ್ನು 1 ಹಸಿರು ಬಣ್ಣ; ವಾಕ್ಯ 2  ವಿವಿಧ ಭಾಗಗಳನ್ನು   ಕೆಂಪು;

ವಾಕ್ಯದ 3 ವಿವಿಧ ಭಾಗಗಳನ್ನು ಕಿತ್ತಳೆ  ಮತ್ತು ವಾಕ್ಯದ 4 ವಿವಿಧ ಭಾಗಗಳನ್ನು ಹಳದಿ ಬಣ್ಣವಾಗಿ ಗುರುತಿಸಿರಿ
 
ಬಣ್ಣ ಹಾಕುವ ಚಟುವಟಿಕೆ ವಿದ್ಯಾರ್ಥಿಗಳು ನಂತರ ಮುಂದಿನ ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ.

 

3. ಕೆಳಗೆ ನಾಲ್ಕು ವಾಕ್ಯಗಳನ್ನು ಬರೆಯಿರಿ. ವಾಕ್ಯದ ಅಂತ್ಯದಲ್ಲಿ ಪೂರ್ಣ ವಿರಾಮ ಹಾಕಬೇಕು   ನೆನಪಿಡಿ.
 
___________________________________________________________________________
 
___________________________________________________________________________
 
4. ಬಿಳಿ ಬೋರ್ಡ್ ಮೇಲೆ ಒಂದು ಅಭ್ಯಾಸ:
 
ಈ ನಾಲ್ಕು   ಸರಳ ವಾಕ್ಯಗಳನ್ನು ಬೋರ್ಡ್ನ  ಮೇಲೆ ಬರೆಯಿರಿ.
 
ಇವನು ಹರಿ . ಇವನು ಐಸ್ ಕ್ರೀಮ್ ಇಷ್ಟಪಡುತ್ತಾನೆ. ನನಗೆ  ಐಸ್ ಕ್ರೀಮ್ ತುಂಬಾ ಇಷ್ಟ. ನೀವು ಐಸ್ ಕ್ರೀಮ್ ಇಷ್ಟಪಡುತ್ತೀರಾ?
 
ವಿದ್ಯಾರ್ಥಿಗಳು ಸರಿಯಾಗಿ ಜೋಡಣೆ ಮಾಡಿ  ಮತ್ತು ಸರಿಯಾದ ಕಡೆ  ವಿರಾಮ ನೀಡಿ  ವಾಕ್ಯಗಳನ್ನು ಓದಲು ಹೇಳಿ.
 
___________________________________________________________________________
 
___________________________________________________________________________
 

ಈಗ ಹೇಳಿ: ನಾನು ಈ ನಾಲ್ಕು ವಾಕ್ಯಗಳಲ್ಲಿ   ಒಂದು ಅಥವಾ ಹೆಚ್ಚು ಪದಗಳನ್ನು ಬೆಟ್ಟು  ಮಾಡಿ ತೋರಿಸುತ್ತೇನೆ.   ನೀವು ಇದರ ಬದಲು ಯಾವುದೇ ಇತರ  ಪದ ಅಥವಾ ಪದಗಳನ್ನು ಹಾಕ ಬೇಕು. ನೀವು ಅರ್ಥಮಾಡಿಕೊಳ್ಳಲು ನಾನು ಒಂದು  ಉದಾಹರಣೆ ಮಾಡಿತೋರಿಸುತ್ತೇನೆ.

 
ಇವನು ಹರಿ  ಎಂಬುದರ ಬದಲಾಗಿ
 
ಇದು ನನ್ನ ಅಮ್ಮ. ಅವರಿಗೆ ಸೇಬುಗಳು ಇಷ್ಟ. ನನಗೆ ಸೇಬುಗಳು ಇಷ್ಟವಿಲ್ಲ. ನೀವು ಸೇಬುಗಳನ್ನು ಇಷ್ಟಪಡುತ್ತೀರಾ?
 
ಈಗ ವಿದ್ಯಾರ್ಥಿಗಳನ್ನು  ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗ ಬಹುದಾಗಿದೆ ವಾಕ್ಯದಲ್ಲಿರುವ ಎರಡು ಪದಗಳನ್ನು ಬದಲಾಯಿಸಲು ಪ್ರಾರಂಭಿಸಿ. ಶೀಘ್ರದಲ್ಲೇ, ವಿದ್ಯಾರ್ಥಿಗಳಿಗೆ ಮೂಲ ಪಠ್ಯಕ್ಕೆ ಒಂದು ಟ್ವಿಸ್ಟ್ ನೀಡಲು ಪ್ರೋತ್ಸಾಹ ನೀಡಬಹುದು.
 
ಉದಾಹರಣೆ:
 ಇವರು ನನ್ನ ಅಜ್ಜ. ಅವರು ಸೈಕ್ಲಿಂಗ್ ದ್ವೇಷಿಸುತ್ತಾರೆ. ಅವರು ಓದುವುದನ್ನು ಇಷ್ಟಪಡುತ್ತಾರೆ. ನಿಮಗೆ ಓದುವುದು ಇಷ್ಟವೋ ಅಥವಾ ಸೈಕ್ಲಿಂಗ್ ಇಷ್ಟವೋ?
 
ವಿದ್ಯಾರ್ಥಿಗಳು ಹೀಗೆ ಮಾಡಲು ಸಮರ್ಥರಾದ ಮೇಲೆ , ಅವರು ಬರವಣಿಗೆ ಕೆಲಸ ಮಾಡಲು ಸಿದ್ಧರಾಗುತ್ತಾರೆ.   ಸಮಸ್ಯೆಯೇನೆಂದರೆ  ನಾವು  ಅವರು ಸುಲಭವಾಗಿ ಮಾತನಾಡಲು ಬಾರದ  ಭಾಷೆಯಲ್ಲಿ ಪದಗಳನ್ನು  ಜೋಡಿಸಲು ಕೇಳುತ್ತೇವೆ  ಮತ್ತು ಅಲ್ಲಿ ಕಾಗುಣಿತ ಮತ್ತು ವಿರಾಮ ಬೃಹತ್ ತಡೆ ಆಗುತ್ತವೆ ಕೂಡ. 

 

ಹೆಚ್ಚು ಸೃಜನಶೀಲತೆ ಗಾಗಿ, ವಿದ್ಯಾರ್ಥಿಗಳು ತಮ್ಮದೇ  ಅಭ್ಯಾಸಪತ್ರ    ರಚಿಸಬಹುದು. ಅವುಗಳನ್ನು, ಅವರು ಯಾವುದೇ ವಿಷಯದ ಬಗ್ಗೆ ಕೆಲವು ವಾಕ್ಯಗಳನ್ನು ಯೋಚಿಸಲಿ  ಮತ್ತು ವಾಕ್ಯಗಳಿಗೆ ಸಂಬಂಧಿಸಿದ ಏನೋ ಚಿತ್ರ ಬರೆಯಲಿ ಅದನ್ನು  ವಿವಿಧ ಭಾಗಗಳಾಗಿ ವಿಭಾಗಿಸಲಿ. ಚಿತ್ರವನ್ನು  ವಾಕ್ಯಗಳಾಗಿ ಜೋಡಿಸಲಿ.   ನಂತರ ವಿದ್ಯಾರ್ಥಿಗಳು ಈ ಅಭ್ಯಾಸಪತ್ರ ಗಳನ್ನು  ವಿನಿಮಯ ಮಾಡಿಕೊಂಡು  ಅವುಗಳ ಸಮಸ್ಯೆಗಳನ್ನು ಪರಿಹರಿಸಲಿ.
 
ಈ ಚಟುವಟಿಕೆಗಳು ಸ್ವಲ್ಪ   ಸಮಯ ತೆಗೆದುಕೊಳ್ಳಬಹುದು, ಮತ್ತು ನಿರಂತರವಾಗಿ ಸ್ವತಃ ಮುಂದುವರೆಯಲು ಪ್ರಯತ್ನಿಸುವ  ಶಿಕ್ಷಕನಿಗೆ, ಇದು ಪ್ರಯೋಜನವಾಗದು . ಆದರೆ ವಿದ್ಯಾರ್ಥಿಗಳಿಗೆ ಬಹಳ ಪ್ರಯೋಜನ ವಾಗುತ್ತದೆ. ಈ ರೀತಿಯ ಪಾಠ ರಚನೆ  ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಹಾಗು ಕಡಿಮೆ ಒತ್ತಡದಲ್ಲಿ  ಬರೆಯಲು ಕಲಿಯುವುದಕ್ಕೆ ಸಹಾಯ ಮಾಡುತ್ತವೆ, ಮತ್ತು ಈ ಕಾರಣಗಳಿಗಾಗಿ, ವಿದ್ಯಾರ್ಥಿಗಳು ಬರವಣಿಗೆ ಕುರಿತು ಒಲವು ಬೆಳೆಸಿಕೊಳ್ಳಲು  ಸಾಧ್ಯವಾಗುತ್ತದೆ. 
 
18456 ನೊಂದಾಯಿತ ಬಳಕೆದಾರರು
7218 ಸಂಪನ್ಮೂಲಗಳು