ಬನ್ನಿ! ಪ್ರಯೋಗ ಮಾಡೋಣ

ಶಿಕ್ಷಕರಿಗೆ ಒಂದು ಸಂಶೊಧನಾತ್ಮಕ ವಿಜ್ಞಾನ ಕಾರ್ಯಾಗಾರದ ಅನುಭವ

ಕಾರ್ಯಾಗಾರದ ಬಗ್ಗೆ:

ಬೆಂಗಳೂರಿನ ವರದೇನಹಳ್ಳಿಯ ಸೆಂಟರ್ ಫಾರ್ ಲರ್ನಿಂಗ್,( ಸಿಎಫ್‍ಎಲ್) 2012ರ ಸೆಪ್ಟೆಂಬರ್ 1 ರಿಂದ 4 ನೆಯ ತಾರೀಖಿನವರೆಗೆ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರುಗಳಿಗಾಗಿ ವಿಜ್ಞಾನ ಶಿಕ್ಷಣದ ಬಗೆಗಿನ ಒಂದು ಕಾರ್ಯಾಗಾರವನ್ನು ಏರ್ಪಡಿಸಿತ್ತ್ತು. ನಿಸರ್ಗವೇ ನಮ್ಮ ಪ್ರಯೋಗಶಾಲೆ ಈ ಕಾರ್ಯಾಗಾರದಲ್ಲಿ 30 ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಾಗಾರದ ವಿಷಯಗಳು ಮತ್ತು ತರಬೇತಿಯ ಅವಧಿಗಳನ್ನು ಸಿಎಫ್‍ಎಲ್‍ನ ಶಿಕ್ಷಕರುಗಳೇ ಪರಿಕಲ್ಪಿಸಿದ್ದರು ಮತ್ತು ಅದನ್ನು ಅಭಿವೃದ್ಧಿಪಡಿಸಿದ್ದರು. ಯಾದಗಿರಿ ಜಿಲ್ಲೆಯ ಅಜೀಂ ಪ್ರೇಂಜಿ ಪ್ರತಿಷ್ಠಾನದ ಜಿಲ್ಲಾ ಸಂಸ್ಥೆಯ ಸದಸ್ಯರುಗಳು ಯಾದಗಿರಿ ಜಿಲ್ಲೆಯ ಶಾಲೆಗಳಲ್ಲಿ ವಿಜ್ಞಾನ ಬೋಧನೆಯ ಸ್ಥಿತಿಗತಿ ಹೇಗಿದೆ ಎಂಬ ಬಗ್ಗೆ ಒಂದು ಅಧ್ಯಯನವನ್ನು ನಡೆಸಿದ್ದರು.ಈ ಕಾರ್ಯಾಗಾರಕ್ಕೆ ಪೂರ್ವತಯಾರಿಯಾಗಿ ಸಿಎಫ್‍ಎಲ್‍ನ ಸಂಪನ್ಮೂಲ ಅಧಿಕಾರಿಗಳು ವಿಜ್ಞಾನ ಪಠ್ಯಪುಸ್ತಕದ ವಿಶ್ಲೇಷಣೆಯನ್ನು  ನಡೆಸಿದರು.

ವಿಜ್ಞಾನ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಮತ್ತು ಕಲಿಯಲು ಸ್ಫೂರ್ತಿಯನ್ನು ಬೆಳೆಸುವುದೇ ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿತ್ತು.

ನಮ್ಮ ಅನಿಸಿಕೆಗಳು:

ಹಿಂದಿನ ಕಾರ್ಯಾಗಾರಗಳ ನಮ್ಮ ಅನುಭವದಿಂದಾಗಿ ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ನಾವು ಪ್ರಾರಂಭದಲ್ಲಿ ಅದನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದ್ದ ಒಂದೇ ಒಂದು ಲಾಭವೆಂದರೆ ಇದು ನಡೆಯುತ್ತಿದ್ದುದು ಬೆಂಗಳೂರು ನಗರದಲ್ಲಿ. ‘ವಿಜ್ಞಾನ ಶಿಕ್ಷಣ’ದ ಬಗೆಗಿನ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ಅಧಿಕಾರಿಗಳು ವಿಜ್ಞಾನ ಶಿಕ್ಷಣದ ಸ್ವರೂಪದ ಬಗ್ಗೆ ಕೆಲವು ಪಟನಿರೂಪಣೆಗಳನ್ನು ಮಾಡಿ ತದನಂತರ ಒಂದಿಷ್ಟು ಚರ್ಚೆಗಳನ್ನು ನಡೆಸಿ ಕಾರ್ಯಾಗಾರವನ್ನು ಮುಗಿಸಿಬಿಡುತ್ತಾರೆ ಎಂಬುದು ನಮ್ಮ ಅನಿಸಿಕೆಯಾಗಿತ್ತು.

ಆಶ್ಚರ್ಯ ಕಾದಿತ್ತು !

ಮೇಲಿನ ಈ ಕಲ್ಪನೆಗಳೊಂದಿಗೆ ನಾವು ಬೆಂಗಳೂರಿಗೆ ಕಾಲಿಟ್ಟೆವು. ನಮ್ಮನ್ನು ಕಾದಿದ್ದ ಮೊದಲ ಆಶ್ಚರ್ಯದ ಸಂಗತಿಯೆಂದರೆ ಕಾರ್ಯಾಗಾರದ ಏರ್ಪಡಿಸಿದ್ದ ಸ್ಥಳ. ಬೆಂಗಳೂರಿನಿಂದ 35 ಕಿ.ಮೀ. ಹೊರಗಡೆಯಲ್ಲಿರುವ, 22 ಎಕರೆ ಸಮೃದ್ಧ ಹಸಿರು ಬನಸಿರಿಯ ನೆಲದಲ್ಲಿ ಈ ಕಾರ್ಯಾಗಾರವನ್ನು ಏರ್ಪಡಿಸಿದ್ದರು.ನಮ್ಮನ್ನು ಅತಿಥಿಗಳು ಎಂಬುದಾಗಿ ಸತ್ಕರಿಸಿದರೂ ಕೂಡ, ಸಮುದಾಯ-ಆಧಾರಿತ ಸ್ವಯಂ-ಸೇವಾ ಸಂಸ್ಕೃತಿಯು ನಮ್ಮ ಮನಸೆಳೆದ ಎರಡನೆಯ ಆಶ್ಚರ್ಯಕರ ಸಂಗತಿಯಾಗಿತ್ತು.

ಅದರಲ್ಲಿ ನಮಗಾಗಿ ಇದ್ದ ಸಂಗತಿಗಳೇನು?

ಕಾರ್ಯಾಗಾರದಲ್ಲಿ ಭಾಗವಹಿಸಲು ಮತ್ತು ಕಲಿಯಲು ಬಂದ ನಮಗೆ ಅದರ ವಿನ್ಯಾಸವೇ ಬಲು ಮೆಚ್ಚಿಗೆ ಆಯಿತು. ಔಪಚಾರಿಕ ಮತ್ತು ಅನೌಪಚಾರಿಕ ಚಟುವಟಿಕೆಗಳ ಸಮಪಾಕ ನಮಗೆ ಬಹಳ ಸಹಾಯಕವಾಗಿತ್ತು.

ಕಾರ್ಯಾಗಾರದಲ್ಲಿ ಕೈಯ್ಯಾರೆ ಮಾಡಿಕಲಿಯುವ ಅನುಭವ ಮತ್ತು ತಜ್ಞರ ಜೊತೆ ಚರ್ಚೆಯ ಸಮಮೇಳವಿತ್ತು. ನಾವು ವಿಜ್ಞಾನ ಮತ್ತು ಶಿಕ್ಷಣದ ಬಗ್ಗೆ ಚರ್ಚೆಗಳನ್ನು ನಡೆಸಿದೆವು.ಮೊದಲ ಮೂರು ದಿನಗಳು ನಮ್ಮ ಪರಿಣಿತಿಯ ವಿಷಯಕ್ಕೆ ಅನುಗುಣವಾಗಿ - ಅಂದರೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಇತ್ಯಾದಿ - ನಮ್ಮನ್ನು ಗುಂಪುಗಳಾಗಿ ವಿಂಗಡಿಸಲಾಯಿತು.ನಾಲ್ಕನೆಯ ದಿನವನ್ನು ಪ್ರತಿಕ್ರಿಯೆಗಳು ಮತ್ತು ಮಾಹಿತಿಯನ್ನು ಸಂಗ್ರಹಿಸುವುದಕ್ಕೆ ಮತ್ತು ಕಾರ್ಯಾಗಾರವನ್ನು ಮುಕ್ತಾಯಗೊಳಿಸುವುದಕ್ಕೆ ಮೀಸಲಾಗಿರಿಸಲಾಯಿತು. ಪ್ರತಿಯೊಂದು ಅವಧಿಗಳ ಸಮಯದ ಮಿತಿಯು ನಮಗೆ ಅನುಕೂಲಕರವಾಗಿತ್ತು ಮತ್ತು ಅಲ್ಲಿ ಪರಸ್ಪರ ಮಾತುಕತೆಗೆ ಮತ್ತು ಅನೌಪಚಾರಿಕ ಚರ್ಚೆಗೆ ಹೆಚ್ಚಿನ ಸಮಯ ದೊರಕಿತು.ಈ ಚರ್ಚೆಗಳಿಂದ ನಮ್ಮ ಹಳೆಯ ಗೆಳೆತನ ಪುನಃ ಗಟ್ಟಿಯಾದವು.

ಕಲಿಯುವವರನ್ನೇ ಕೇಂದ್ರವಾಗಿ ಇರಸಿಕೊಂಡ  ‘ಬನ್ನಿ ಪ್ರಯೋಗ ಮಾಡೋಣ’ ಎಂಬುದು ಕಾರ್ಯಾಗಾರದ ಮೂಲ ವಿಷಯವಾಗಿತ್ತು. ಇದು ನಮಗೆ ಪ್ರಾಯೋಗಿಕ ಅನುಭವ ಮತ್ತು ವಿಚಾರಣೆ-ಆಧಾರಿತ ಕಲಿಕೆಯ ಅನುಭವವನ್ನು ದೊರಕಿಸಿಕೊಟ್ಟಿತು.

ಕಾರ್ಯಾಗಾರಕ್ಕೆ ಆಯ್ಕೆ ಮಾಡಿಟ್ಟ ವಿಷಯಗಳು ನಮಗೆ ಹೊಸತೇನೂ ಆಗಿರಲಿಲ್ಲ. ಕಾರ್ಯಾಗಾರದಲ್ಲಿ ಪಾಲ್ಗೊಂಡ ನಾವು ಹೆಚ್ಚಿನವರು ಈಶಾನ್ಯ ಕರ್ನಾಟಕದವರಾಗಿದ್ದೆವು; ನಾವು ವಿಜ್ಞಾನದ ಮಾಹಿತಿಗಳನ್ನು ಕೇವಲ “ಪಡೆದುಕೊಳ್ಳುತ್ತಿದ್ದೆವು” ಅಥವಾ “ ಅದನ್ನೇ ಮಾರ್ಪಡಿಸಿ” ಮಕ್ಕಳಿಗೆ ಹೇಳುತ್ತಿದ್ದೆವು, ಆದರೆ ಯಾರೊಬ್ಬರೂ ಅದರ ನೇರ ಅನುಭವವನ್ನು ಪಡೆದುಕೊಂಡಿರಲಿಲ್ಲ. ಈ ರೀತಿ ವಿಜ್ಞಾನದ ಮೂಲಭೂತ ವಿಷಯಗಳ ಬಗ್ಗೆ ಸ್ವಂತ-ಅನುಭವ ಪಡೆಯುವುದು ನಮಗೆ ನವೀನ ಸಂಗತಿಯಾಗಿತ್ತು. ಅದರಲ್ಲಿಯೂ ವಿಚಾರಣಾ-ಆಧಾರಿತ ಕಲಿಕೆಯು ನಮಗೆ ಅತ್ಯಂತ ಹೊಸ ಸಂಗತಿಯಾಗಿತ್ತು. ಈ ಕಾರ್ಯಾಗಾರದಲ್ಲಿ ಸರಳ ಮತ್ತು ಅತಿ ಕಡಿಮೆ ವೆಚ್ಚದ ವಸ್ತುಗಳನ್ನು ಬಳಸಿಕೊಂಡು ಮಾಡಿದ ಪ್ರಯೋಗಗಳನ್ನುನೋಡಿ ಮೂಲಭೂತ ವಿಜ್ಞಾನ ಪ್ರಯೋಗಗಳು ಬಗೆಗಿನ ಇವು ಬಲುಕ್ಲಿಷ್ಟ ಮತ್ತು ದುಬಾರಿ ಎಂಬ ನಮ್ಮ ಕಲ್ಪನೆಯು ಬುಡಮೇಲಾಗಿಬಿಟ್ಟಿತು. ಸಿಎಫ್‍ಎಲ್ ಎಂದರೆ ಇದ್ಯಾವುದೋ ನವನವೀನ ಉಪಕರಣಗಳನ್ನು ಹೊಂದಿರುವ ಬೃಹತ್ ಪ್ರಯೋಗಶಾಲೆ ಎಂದುಕೊಂಡಿದ್ದೆವು.  ಕಡಿಮೆ-ವೆಚ್ಚದ ಸಲಕರಣೆಗಳು ಮತ್ತು ಕಚ್ಚಾ ವಸ್ತುಗಳನ್ನು ಹೊಂದಿದ್ದ  10x10 ಚ.ಕೀ.ಮೀ.ಅಥವಾ 15x15 ಚ.ಕೀ.ಮೀ. ಪ್ರದೇಶದಲ್ಲಿ ನಿರ್ಮಿಸಿದ್ದ ಪ್ರಯೋಗಶಾಲೆಯನ್ನು ನೋಡಿ  ನಮ್ಮ ಅಭಿಪ್ರಾಯ ವು ಪೂರ್ಣ ಬದಲಾಯಿತು. ಈ ಪ್ರಯೋಗಶಾಲೆಯ ಉಪಕರಣಗಳನ್ನು ಎಲ್ಲಿ ಬೇಕಾದರೂ ಮತ್ತೆ ರಚಿಸಿಕೊಳ್ಳಬಹುದಾಗಿತ್ತು. ಜೀವಶಾಸ್ತ್ರದ ಹೆಚ್ಚಿನ ಪ್ರಯೋಗಗಳಿಗಂತೂ ನಿಸರ್ಗವೇ ಪ್ರಯೋಗಶಾಲೆಯಾಗಿತ್ತು.

ಸಂಪನ್ಮೂಲ ಅಧಿಕಾರಿಗಳು ತಜ್ಞರೂ ಅನುಭವಿಗಳೂ ಆಗಿದ್ದರು. ಪ್ರತಿ ದಿನದ ಎರಡನೆಯ ಅವಧಿಯು ನಮ್ಮ ನಿರೀಕ್ಷೆ ಮತ್ತು ಅವಶ್ಯಕತೆಗೆ ಮೀಸಲಾಗಿರುತ್ತಿತ್ತು – ಇದು ನಮಗೆ ತರಬೇತಿ ನೀಡುವ ಅಧಿಕಾರಿಗೆ ಸವಾಲನ್ನು ಎದುರಿಸುವ ಸಮಯವಾಗಿತ್ತು.ಆದರೆ ತರಬೇತಿದಾರರು ಎಷ್ಟು ಅನುಭವಿಗಳಾಗಿದ್ದರೆಂದರೆ ಅವರು ನಮ್ಮ ಎಲ್ಲಾ ಸಮಸ್ಯೆಗಳನ್ನು ಅತ್ಯಂತ ಸುಲಭವಾಗಿ ಬಗೆಹರಿಸಿ ನಮ್ಮ ಪ್ರಶಂಸೆಗೆ ಪಾತ್ರರಾದರು.

 

( ಸಂಪನ್ಮೂಲ ಅಧಿಕಾರಿಗಳು (ತರಬೇತುದಾರರು) – ಎಡದಿಂದ ಬಲಕ್ಕೆ ಯಾಸ್ಮಿನ್ ಜಯತೀರ್ಥ, ಶ್ರೀನಿವಾಸನ್ ಕೆ ಮತ್ತು ತೇಜಸ್ವಿ ಶಿವಾನಂದ)

 

ಈ ಅವಧಿಯು ನಾವು ಈ ಹಿಂದೆ ಕಾರ್ಯಾಗಾರಗಳಲ್ಲಿ ಪಡೆದುಕೊಂಡ ಅನುಭವಕ್ಕಿಂತ  ಭಿನ್ನವಾಗಿತ್ತುÅ.ಇದು ಕಲಿಯುವವರÉ ಜ್ಞಾ ನ ದಾಹವನ್ನು ತಣಿಸುವ  ಮುಖ್ಯ ಉದ್ದೇಶವನ್ನು ಹೊಂದಿತ್ತು.ಈ ಅಂಶವೇ ನಮಗೆ ಕಾರ್ಯಾಗಾರದಲ್ಲಿ ವಿಜ್ಞಾನ ಶಿಕ್ಷಣದ ಬಗ್ಗೆ ಆಸಕ್ತಿಯು ಮೂಡುವಂತೆ ಮಾಡಿತು.

ನಾವು ನಡೆಸಿದ ಕೆಲವು ಪ್ರಯೋಗಗಳು ಈ ರೀತಿ ಇವೆ:

ಭೌತಶಾಸ್ತ್ರ:ಕಿರಣ ಬಾಕ್ಸ್  ಗಳು, ಕಿರಣ ರೇಖಾಚಿತ್ರಗಳು, ಮಸೂರಗಳ ಚಿತ್ರ ನಿರ್ಮಿಸುವಿಕೆ, ವಿವಿಧ-ಮೀಟರ್ ನಿರ್ವಹಣೆ, ಬ್ರೆಡ್ ಬೋರ್ಡ್ ಬಳಕೆ, ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಮೂಲ ಎಲೆಕ್ಟ್ರಾನಿಕ್ ಸರ್ಕ್ಯೂಟ್‍ಗಳು.

ರಸಾಯನಶಾಸ್ತ್ರ :ವಿದ್ಯುದ್ವಿಚ್ಛೇದನ, ವಾಹಕ ಮೀಟರ್, ಹಾಫ್‍ಮ್ಯಾನ್ ಸಲಕರಣೆ (ವ್ಯವಸ್ಥೆ), ಸಣ್ಣ-ಪ್ರಮಾಣದ ರಸಾಯನಶಾಸ್ತ್ರ-ಕ್ಲೋರಿನ್ ತಯಾರಿಕೆ ಮತ್ತು ಅಗ್ನಿಪರ್ವತ – ಅಮೋನಿಯಮ್ ಡೈಕ್ರೋಮೈಟ್ ಕಣಗಳ ವಿಭಜನೆಯ ಒಂದು ಪ್ರದರ್ಶನ .

ಜೀವಶಾಸ್ತ್ರ : ದ್ಯುತಿಸಂಶ್ಲೇಷಣಕ್ರಿಯೆ, ಪರಿಸರದ ಅಧ್ಯಯನ – ಕ್ವಾಡ್ರೇಟ್ ವಿಧಾನ, ಡಿಎನ್‍ಎ ತೆಗೆಯುವಿಕೆ, -ಎಲೆಯ ಸ್ಟೋಮಟ ವೀಕ್ಷಣೆ ಮತ್ತು ಮೈಟಾಸಿಸ್ ಕೋಶವಿಭಜನೆಯ ಅಧ್ಯಯನ.

ಈ ಪ್ರತಿಯೊಂದು ಪ್ರಯೋಗವೂ ನಮ್ಮ ಮನಸ್ಸಿನಲ್ಲಿ ಪ್ರಶ್ನೆಗಳು ಉದ್ಭವವಾಗುವಂತೆ ಮಾಡಿದವು.ಈ ಪ್ರಯೋಗಗಳ ಮೂಲಕ ‘ಅನುಭವಾತ್ಮಕ ಕಲಿಕೆ’ ಮತ್ತು ‘ವಿಚಾರಣೆ-ಆಧಾರಿತ ಕಲಿಕೆ’ಗಳ ಅನನ್ಯ ಅನುಭವವು ನಮಗೆ ದೊರಕಿತು.

ಉದಾಹರಣೆಗೆ, ತೇಜಸ್ವೀ ಶಿವಾನಂದ ಇವರು ಜೀವಶಾಸ್ತ್ರದ ಅನುಭವಗಳ ಅವಧಿಯನ್ನು ನಮಗಾಗಿ ಸಿದ್ಧಪಡಿಸಿದ್ದರು ಭಾಗವಹಿಸಿದವರ ಕ್ಷಮತೆಯನ್ನು ಅರಿಯುವುದಕ್ಕೆ ದ್ಯುತಿಸಂಶ್ಲೇಷಣಕ್ರಿಯೆಯ ಬಗ್ಗೆ ಒಂದು ಚರ್ಚೆಯನ್ನು ಕಾರ್ಯಾಗಾರದ ಪ್ರಾರಂಭದಲ್ಲಿ ಏರ್ಪಡಿಸಲಾಗಿತ್ತು.ನಂತರ ಅವರು ಪ್ರಯೋಗವನ್ನು ನಡೆಸಿದರು ಮತ್ತು ಅದರಲ್ಲಿನ ನಿಯಂತ್ರಣಾ ಅಂಶಗಳ ಬಗ್ಗೆ ವಿವರಣೆಯನ್ನು ನೀಡಿದರು. ತರುವಾಯ ನಮಗೆ ಬೀಕರ್ (ಪಾತ್ರೆ), ನೀರು, ಸೋಡಿಯಮ್ ಕಾರ್ಬೋನೇಟ್, ದ್ರವ ಸೋಪ್ ಮತ್ತು ಒಂದು ಸಿರಿಂಜ್ ಅನ್ನು ನೀಡಲಾಯಿತು. ನಾವೆಲ್ಲರೂ ಕೂಡ ಸೋಡಿಯಮ್ ಬೈಕಾರ್ಬೋನೇಟ್‍ನ ಒಂದು ದುರ್ಬಲ ದ್ರಾವಣವನ್ನು ಮಾಡಿದೆವು.

 

 ಅದಕ್ಕೆ ನಾವು ಒಂದು ಅಥವಾ ಎರಡು ಹನಿ ದ್ರವ ಸೋಪ್ ಅನ್ನು ಸೇರಿಸಿದೆವು.ನಂತರ ಒಂದು ಮರದ (ಸೂಕ್ತ ವಯಸ್ಸಿನ ನಿಯಂತ್ರಣಕ್ಕಾಗಿ) ಸರಿಯಾದ ದಪ್ಪವಿರುವ ಕೆಲವು ಎಲೆಗಳನ್ನು ಸಂಗ್ರಹಿಸಿದೆವು. ತರುವಾಯ ಗಾತ್ರದ ನಿಯಂತ್ರಣಕ್ಕಾಗಿ ಈ ಎಲೆಗಳನ್ನು ಪಂಚಿಂಗ್ ಮಷಿನ್‍ನ ಸಹಾಯದಿಂದ ಸಣ್ಣದಾಗಿ ವೃತ್ತಾಕಾರವಾಗಿ ಕತ್ತರಿಸಲಾಯಿತು. ಪಿಸ್ಟನ್ ಅನ್ನು ಹೊರತೆಗೆದು  ಈ ಎಲೆಗಳನ್ನು ಸಿರಿಂಜ್‍ನಲ್ಲಿ ಇರಿಸಲಾಯಿತು.ಅನಂತರ ಪಿಸ್ಟನ್ ಅನ್ನು ಮತ್ತೆ ಹಾಕಲಾಯಿತು.ಆ ಮೇಲೆ ಪಿಸ್ಟನ್ ಸಹಾಯದಿಂದ ಬೀಕರ್‍ನಲ್ಲಿರುವ ಸೋಡಿಯಮ್ ಕಾರ್ಬೋನೇಟ್ ಮಿಶ್ರಣವನ್ನು ಸಿರಂಜಿನೊಳಕ್ಕೆ ಎಳೆದುಕೊಳ್ಳಲಾಯಿತು.ಸಿರಿಂಜ್‍ನಲ್ಲಿರುವ ದ್ರವವನ್ನು ಸರಿಯಾಗಿ ಮಿಶ್ರಣ ಮಾಡಿ ಹಾಗೆಯೇ ಬಿಡಲಾಯಿತು.ಕೆಲವೇ ನಿಮಿಷಗಳಲ್ಲಿ ಎಲ್ಲಾ ಎಲೆಗಳು ಸಿರಿಂಜ್‍ನ ಕೆಳಭಾಗಕ್ಕೆÀ ಬಂದು ಕುಳಿತವು.ನಂತರ ನಮ್ಮಲ್ಲಿ ಕೆಲವರು ಸಿರಿಂಜ್ ಅನ್ನು ಕತ್ತಲು ಪ್ರದೇಶದಲ್ಲಿ ಇರಿಸಿದೆವು ಮತ್ತು ಕೆಲವರು ಅದನ್ನು ನೇರವಾಗಿ ಬಿಸಿಲಿನಲ್ಲಿ ಇರಿಸಿದೆವು. ನಾವು ಫಲಿತಾಂಶಕ್ಕಾಗಿ ಕಾಯುತ್ತಿರುವ ಸಂದರ್ಭದಲ್ಲಿ ಈ ಕೆಳಗಿನ ಪ್ರಶ್ನೆಗಳು ನಮ್ಮ ಮನಸ್ಸಿಗೆ ಬಂದವು:

1 ಸೋಡಿಯಮ್ ಕಾರ್ಬೋನೇಟ್ ಅನ್ನು ಏಕೆ ಸೇರಿಸಲಾಯಿತು?

2. ಇಲ್ಲಿ ದ್ರವ ಸೋಪ್ ನಿರ್ವಹಿಸುವ ಕಾರ್ಯಗಳೇನು?

3.ಎಲೆಗಳು ಏಕೆ ಕೆಳಕ್ಕೆ ಹೋಗಿ ಸೇರಿಕೊಂಡವು?

ಎಲ್ಲಾ ಸಂಭಾವ್ಯ ಭೌತಿಕ ಕಾರಣಗಳನ್ನು ಚರ್ಚಿಸಲಾಯಿತು ಮತ್ತು ಈ ಫಲಿತಾಂಶವನ್ನು ಕಂಡುಕೊಳ್ಳಲಾಯಿತು:

1. ಸೋಡಿಯಮ್ ಕಾರ್ಬೋನೇಟ್ ಕಾರ್ಬನ್ ಡೈಆಕ್ಸಿಡ್ ಅನ್ನು ಒದಗಿಸುವ ಮೂಲಕ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಸಹಾಯವನ್ನು ಒದಗಿಸಿತ್ತದೆ.

2  ದ್ರವ ಸೋಪ್ ಮೇಲ್ಮೈಯ ಸೆಳೆತವನ್ನು ತಗ್ಗಿಸುತ್ತದೆ; ಆ ಕಾರಣದಿಂದಾಗಿ ಎಲೆಯ ಮೇಲಿನ ಗಾಳಿಯ ಗುಳ್ಳೆಗಳು ಮಾಯವಾದವು.

3 ಎಲೆಗಳು ಹೆಚ್ಚಿನ ಸಾಂದ್ರತೆಯನ್ನು ಹೊಂದಿರುವ ಕಾರಣದಿಂದಾಗಿ ಅವುಗಳು ಸಿರಿಂಜ್‍ನ ಕೆಳಕ್ಕೆ ಹೋದವು.

‘ವಿಜ್ಞಾನ ಶಿಕ್ಷಣ’ದ ಈ ಕಾರ್ಯಾಗಾರದ ಮುಖ್ಯ ಉದ್ದೇಶಗಳ ಪ್ರಾಮುಖ್ಯತೆಯ ಬಗ್ಗೆ ನಾವು ನಮ್ಮ ಚರ್ಚೆ ಮತ್ತು ತೀರ್ಮಾನವನ್ನು ಕೈಗೊಳ್ಳುವಲ್ಲಿ ಸಫಲರಾದೆವು.

ಭೌತಶಾಸ್ತ್ರದ ಪ್ರಯೋಗಶಾಲೆಯಲ್ಲಿ ಇನ್ನೊಂದು ಆಸಕ್ತಿಕರವಾದ ಘಟನೆಯು ಸಂಭವಿಸಿತು.ನಾವು ಒಂದು ಬ್ರೆಡ್ ಬೋರ್ಡ್ ಅನ್ನು ಬಳಸಿಕೊಂಡು ಮೂಲಭೂತ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಅನ್ನು ನಿರ್ಮಿಸುವ ಕಾರ್ಯಕ್ಕೆ ಮುಂದಾದೆವು.

ನೀರಿನ ಟ್ಯಾಂಕ್‍ನಲ್ಲಿ ನೀರು ತುಂಬಿ ಹರಿಯುವುದನ್ನು ನಿಲ್ಲಿಸುವ ಸಲುವಾಗಿ ನೀರಿನ ಮಟ್ಟವನ್ನು ಸೂಚಿಸುವ ಒಂದು ಬಳಕೆಗೆ ಯೋಗ್ಯವಾದ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಅನ್ನು ನಿರ್ಮಿಸುವ ಪ್ರಯೋಗವನ್ನು ನಮಗೆ ನೀಡಲಾಯಿತು. ಪ್ರತಿಯೊಬ್ಬರೂ  ಈ ಪ್ರಯೋಗದಲ್ಲಿ ಭಾಗವಹಿಸಿದರು ಮತ್ತು ನಿರೀಕ್ಷಿತ ಪರಿಣಾಮಗಳನ್ನು ಕಂಡುಕೊಳ್ಳುವಲ್ಲಿ ಸಫಲರಾದರು.ಆದರೆ ನಮ್ಮಲ್ಲೊಬ್ಬರು ಏನು  ಮಾಡಿದರೂ ಪ್ರಯೋಗವು ಸರಿಹೋಗುತ್ತಿರಲಿಲ್ಲ. ಅವರು ಸರ್ಕ್ಯೂಟ್ ಅನ್ನು ನಿರ್ಮಿಸುವುದಕ್ಕೆ ಬಹಳ ಸಾರಿ ಪ್ರಯತ್ನವನ್ನು ನಡೆಸಿದರು ಆದರೆ ಬಜರ್  ಶಬ್ದವನ್ನೇ ಮಾಡುತ್ತಿರಲಿಲ್ಲ. ತರುವಾಯ ಅವರು ಇನ್ನೊಬ್ಬರು  ಮಾಡಿದ್ದನ್ನು ಪೂರ್ಣ ಬಿಚ್ಚಿ ಮತ್ತೆ ನಿರ್ಮಿಸುವಲ್ಲಿ ಸಫಲರಾದರು.ನಂತರದಲ್ಲಿ ಮತ್ತೆ ಅವರಿಗೆ ನೀಡಿದ್ದ ಪೂರಕ ವಸ್ತುಗಳನ್ನು ಬಳಸಿಕೊಂಡು ಮಾಡುವುದಕ್ಕೆ ಪ್ರಯತ್ನಿಸಿದರು. ಆದರೆ ಪುನಃ ಅದರಲ್ಲಿ ವಿಫಲರಾದರು.ಪ್ರತಿಯೊಂದು ಪೂರಕ ವಸ್ತುವೂ ತನ್ನ ಕಾರ್ಯವನ್ನು ನಿರ್ಮಿಸುತ್ತಿದೆಯೇ ಎಂದು ಬಿಡಿಬಿಡಿಯಾಗಿ ಪರಿಶೀಲಿಸಿದಾಗ ಬಜರ್ ಸರಿಯಾಗಿ ಕೆಲಸಮಾಡುತ್ತಿಲ್ಲ ಎಂಬುದು ಕಂಡುಬಂದಿತು.

ಆದ್ದರಿಂದ ತನ್ನ ಸಕ್ರ್ಯೂಟ್‍ನಲ್ಲಿ ಯಾವಭಾಗ ಕೆಟ್ಟು ಹೋಗಿದೆ ಎಂಬುದನ್ನು  ಕಂಡುಹಿಡಿಯುವುದಕ್ಕೆ ಅವರು ತನ್ನ ಗೆಳೆಯನ ಕೆಲಸ ಮಾಡುವಂಥ  ಸರ್ಕ್ಯೂಟ್ ಅನ್ನು ಬಳಸಿಕೊಂಡು ಅದರಲ್ಲಿ ಒಂದೊಂದೇ ಭಾಗವನ್ನು ಬದಲಾಯಿಸಿ ನೋಡಲಾರಂಭಿಸಿದರು. ಹೊಸ ಬಜರ್ ಅಲ್ಲಿ ಜೋಡಿಸಿ ನೋಡಿದರೆ ಅದೇ ಕಥೆ! ಎರಡು ಬಾರಿ ಬೇರೆ ಬೇರೆ ಬಜರ್ ಜೋಡಿಸಿದರೂ ಕೂಡ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಆಗ ಇದು ಬಜರ್‍ ನ ದೋಷವಲ್ಲ ಇಡೀ ಸರ್ಕ್ಯೂಟ್ ದೋಷಪೂರಿತವಾಗಿದೆ ಎಂಬ ತೀರ್ಮಾನಕ್ಕೆ ಬಂದರು.ನಂತರ ಒಂದೊಂದು ಸಂಪರ್ಕಕ್ಕೂ ಗಮನ ನೀಡಿ ಮತ್ತೆ ಪ್ರಾರಂಭದಿಂದ ಎಚ್ಚರಿಕೆಯಿಂದ ಸರ್ಕ್ಯೂಟ್ ಅನ್ನು ನಿರ್ಮಿಸುವುದಕ್ಕೆ ಪ್ರಾರಂಭಿಸಿದರು; ಆದರೇನು ಫಲಿತಾಂಶವು ಮತ್ತೇ ಸೋಲು. ಅತ್ಯಂತ ನಿರಾಶೆಗೊಂಡ ಅವರು ಅಂತಿಮ ಪ್ರಯತ್ನ ನಡೆಸೋಣ ಎಂದು ಆಲೋಚಿಸಿ ಬೇರೆಯದೇ ಬಜರ್ ಅನ್ನು ಜೋಡಿಸಿ ಸರ್ಕ್ಯೂಟ್  ನಿರ್ಮಿಸಿದರು.ಕಡೆಗೊಮ್ಮೆ ಸರ್ಕ್ಯೂಟ್ ಶಬ್ದದೊಂದಿಗೆ ಕಾರ್ಯನಿರ್ವಹಿಸಿತು!

ಈ ಇಡೀ ಘಟನೆ "ಅನುಭವದಿಂದ ಕಲಿಕೆ’ ಮತ್ತು "ವಿಚಾರಣಾ-ಆಧಾರಿತ ಕಲಿಕೆ’ಯ ಒಂದು ಉದಾಹರಣೆಯಾಗಿದೆ. ದೋಷಪೂರಿತ ಬಜರ್ ಗಳನ್ನು ಕಂಡುಹಿಡಿಯುವುದು ನನ್ನ ಸ್ನೇಹಿತನ ಉದ್ದೇಶವಲ್ಲದಿದ್ದರೂ ಈ ಘಟನೆಯು ನಾಲ್ಕು ಅಂತಹ ಸಾಧನಗಳನ್ನು ಗುರುತಿಸುವುದಕ್ಕೆ ಸಹಾಯ ಮಾಡಿತು.

ಕಾರ್ಯಾಗಾರದ ಅವಧಿಯಲ್ಲಿ ನಮ್ಮ ತಲ್ಲೀನತೆ:

ಕಲಿಯುವ ಉತ್ಸಾಹ ತುಂಬಿದ ನಮಗೆ ಇಂಥ ಕಲಿಕೆಯ ವಾತಾವರಣಗಳನ್ನು ಒದಗಿಸಿದಾಗ  ನಾವು ಕಲಿಯುವುದರಲ್ಲಿ ಪೂರ್ಣ ಮಗ್ನರಾಗಿ ಹೋದೆವು. ಕಾರ್ಯಾಗಾರದಲ್ಲಿ ಕಲಿಯುತ್ತಿದ್ದ ಪ್ರತಿಯೊಂದು ಕ್ಷಣದಲ್ಲ್ಲಿ, ನಮ್ಮ ಮನಸ್ಸು ಕೇವಲ ಕಾರ್ಯಾಗಾರದಲ್ಲಿ ಹೇಳಿಕೊಡುತ್ತಿದ್ದ ವಿಷಯಗಳ ಕಡೆಗೆ ಮಾತ್ರವೇ ಇರದೆ ಕಾರ್ಯಾಗಾರದಲ್ಲಿ ನಡೆಯುತ್ತಿದ್ದ ಎಲ್ಲ ಇತರ ಪ್ರಕ್ರಿಯೆಗಳ ಕಡೆಗೆ ಮತ್ತು ಅವುಗಳನ್ನು ನಮ್ಮ ತರಗತಿಯಲ್ಲಿ ಪಾಠಮಾಡಲು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕಡೆಗೆ  ಪದೇ ಪದೇ ಆಲೋಚಿಸುತ್ತಿತ್ತು. ಉದಾಹರಣೆಗೆ, ಡಾ.ಯಾಸ್ಮಿನ್ ಅವರು “ಮೈಕ್ರೋ ಕೆಮೆಸ್ಟ್ರಿ ಇನ್ ಕ್ಲಾಸ್‍ರೂಮ್ (ಕ್ಲಾಸ್‍ರೂಮ್‍ನಲ್ಲಿ ಮೈಕ್ರೋ ರಸಾಯನಶಾಸ್ತ್ರ)” ವಿಷಯದ ಬಗ್ಗೆ ವಿವರಣೆ ನೀಡುತ್ತಿದ್ದ ಸಂದರ್ಭದಲ್ಲಿ ಕ್ಲಾಸ್‍ರೂಮ್‍ನಲ್ಲಿ ರಾಸಾಯನಿಕ ವಸ್ತುಗಳನ್ನು  ಬಳಸ ಬಹುದೇ ಬೇಡವೇ  ಎಂಬ ನಮ್ಮಲ್ಲಿದ್ದ ಆತಂಕದ ಬಗ್ಗೆ  ಆಲೋಚಿಸಿದೆವು . ಬಳಿಕ ಮೈಕ್ರೋ ಕೆಮೆಸ್ಟ್ರಿಯನ್ನು ಪ್ರಯತ್ನಿಸಿ ನೋಡಿದಾಗ ಮತ್ತು ಅದರ ಸುರಕ್ಷತೆಯ ಬಗ್ಗೆ ಮನದಟ್ಟಾದಾಗ ಅವುಗಳನ್ನು ಕ್ಲಾಸ್‍ರೂಮ್‍ನಲ್ಲಿ ಬಳಸಬಹುದು ಎಂಬುದನ್ನು ಮನಗಂಡೆವು. ಆಲ್ಲಿ ನಮ್ಮ ಗಮನ  “ಕ್ಲೋರಿನ್‍ನ ತಯಾರಿಕೆ”  ವಿಷಯದ ಬಗ್ಗೆ ಮಾತ್ರವೇ ಕೇಂದ್ರಿತವಾಗಿರಲಿಲ್ಲ.

ಮನಗಂಡ ಅಂಶಗಳು:

1. ಕಲಿಯುವವರಾಗಿ ‘ಪ್ರಾಯೋಗಿಕ ಕಲಿಕೆ’ ಮತ್ತು ‘ವಿಚಾರಣೆ-ಆಧಾರಿತ ಕಲಿಕೆ’ಯ ಪ್ರಕ್ರಿಯೆಯನ್ನು ನಾವೆಲ್ಲರೂ ಕೂಡ ಮೆಚ್ಚಿದೆವು ಮತ್ತು  ಇದು ನಿಶ್ಚಿತವಾಗಿಯೂ ಕ್ಲಾಸ್‍ರೂಮ್‍ನಲ್ಲಿ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂಬುದು ನಮಗೆ ಮನದಟ್ಟಾಯಿತು.

2  ನಾವು ಹೇಗೆ  ಕಾರ್ಯಾಗಾರದಲ್ಲಿದ್ದ  ಔಪಚಾರಿಕ ಮತ್ತು ಅನೌಪಚಾರಿಕ ಕಲಿಕೆ ಮಿಶ್ರಣವನ್ನು  ಆನಂದಿಸಿದೆವೋ, ಹಾಗೆಯೇ ನಮ್ಮ ವಿದ್ಯಾರ್ಥಿಗಳಿಗೂ ಕೂಡ ಇದು ಅಷ್ಟೇ ಆನಂದವನ್ನು ನೀಡುತ್ತದೆ.

3. ಸಂಪನ್ಮೂಲ ಅಧಿಕಾರಿಗಳ (ಪರಿಣಿತರ) ಜ್ಞಾನದ ಆಳವನ್ನು ನಾವು ಮೆಚ್ಚಿದಂತೆಯೇ ನಾವೂ ಆಳವಾದ ಜ್ಞಾನವನ್ನು  ಪಡೆದರೆ ನಮ್ಮ ವಿದ್ಯಾರ್ಥಿಗಳು ಕೂಡ ನಮ್ಮನ್ನು ಮೆಚ್ಚುತ್ತಾರೆ.

4 ಕ್ಲಾಸ್‍ರೂಮ್‍ನಲ್ಲಿ ಕಲಿಸುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಪೂರೈಸುವುದು, ಕಲಿಯುವುದಕ್ಕೆ ಅವಶ್ಯಕ ಸಮಯವನ್ನು ಒದಗಿಸುವುದು ಮತ್ತು ವಿಚಾರಣೆ-ಆಧಾರಿತ ಶಿಕ್ಷಣ ನೀಡುವಿಕೆ ಮತ್ತು ಕಲಿಕೆಗಳು ಬಲು ಮುಖ್ಯ. 

5. ಶಾಲೆಯಲ್ಲಿ ಕ್ಲಾಸ್‍ರೂಮ್‍ನಲ್ಲಿ ಪಾಠ ಮಾಡುವಾಗ ಜೊತೆ ಜೊತೆಯಲ್ಲೇ ಪ್ರಯೋಗ ನಡೆಸುವುದೂ ಅತ್ಯಾವಶ್ಯಕ.

6.ವಿಜ್ಞಾನ ಶಿಕ್ಷಣದಲ್ಲಿ ಕ್ಲಾಸ್‍ರೂಮ್‍ನಲ್ಲಿ ಪಾಠ ಹೇಳಿಕೊಡುವಾಗ  ಅದರ ಜೊತೆಗೆ ವಿಚಾರಣೆ-ಆಧಾರಿತ ಮತ್ತು ಪ್ರಾಯೋಗಿಕ ಅನುಭವಾತ್ಮಕ ಕಲಿಕೆಗಳನ್ನು ಮೇಳೈಸುವುದು ಇಂದು ಮಾಡಲೇ ಬೇಕಾದ ಕಾರ್ಯ.

ತೀರ್ಮಾನಗಳು:

ನಮ್ಮ ಸುತ್ತಲಿನ ಜಗತ್ತನ್ನು ಪ್ರಶ್ನೆ ಮಾಡಿ ಮಾಡಿ ಅರ್ಥಮಾಡಿಕೊಳ್ಳುವ ಮನೋಭಾವವನ್ನು ಮಕ್ಕಳಲ್ಲಿ ಬೆಳೆಸದಿದ್ದರೆ ವಿಜ್ಞಾನ ಶಿಕ್ಷಣವು ನಿಜಕ್ಕೂ ಅರ್ಥಹೀನವಾಗುತ್ತದೆ. ಪ್ರಕೃತಿ ಮತ್ತು ಅದರ ಸೂಕ್ಷ್ಮಾತಿ ಸೂಕ್ಷ್ಮ ಪದರಗಳು ಜಾನ ಅರಸುವವರಿಗೆ ಅವುಗಳನ್ನು ಅರ್ಥಮಾಡಿಕೊಳ್ಳಲು ದೊಡ್ಡ ಸವಾಲೇ ಸರಿ. ವಿಜ್ಞಾನ ಶಿಕ್ಷಣದ ಬಗ್ಗೆ ನಡೆದ ಈ ನಾಲ್ಕು-ದಿನಗಳ  ಕಾರ್ಯಾಗಾರವು ಈ ದಿಶೆಯಲ್ಲಿ ಆಸಕ್ತಿ ಮತ್ತು ಉತ್ಸಾಹವನ್ನು ಪ್ರಚೋದಿಸುವ ಒಂದು ಪ್ರಯತ್ನವಾಗಿತ್ತು. ಸಂಪನ್ಮೂಲ ವ್ಯಕ್ತಿಗಳು ಮತ್ತು ಕಾರ್ಯಾಗಾರದ ಅವರ ಅತಿಸೂಕ್ಷ್ಮ ¸ಸಂಯೋಜನೆಗಳು ಕಾರ್ಯಾಗಾರದ ಯಶಸ್ಸಿಗೆ  ಮುಖ್ಯ ಕಾರಣ. ಏರ್ಪಡಿಸಿದ ಸ್ಥಳ, ಪರಿಸರ, ವ್ಯವಸ್ಥೆಗಳು ಮತ್ತು ಅಚ್ಚುಕಟ್ಟಾದ ಸಮನ್ವಯ, ಭಾಗವಹಿಸಿದ ಎಲ್ಲರಿಗೂ  ಸೌಕರ್ಯ  ಒದಗಿಸಿದವು.ಇದನ್ನು ನಮ್ಮ ಕ್ಲಾಸ್‍ರೂಮ್‍ನಲ್ಲಿಯೂ ಪ್ರಯೋಗಿಸಿ ನೋಡೋಣ ಈ ಕಾರ್ಯಾಗಾರzಲ್ಲಿ ವಿಷಯಗಳನ್ನು ಕಲಿತದ್ದನ್ನು ಸಾರ್ಥಕಗೊಳಿಸೋಣ.                                  

ಅಡಿಟಿಪ್ಪಣಿ:

* ಸೆಂಟರ್ ಫಾರ್ ಲರ್ನಿಂಗ್ ಭಾರತದಲ್ಲಿ ಜಾರಿಯಲ್ಲಿರುವ ಸಂಬಂಧಪಟ್ಟ ಕಾನೂನುಗಳಡಿಯಲ್ಲಿ ನೊಂದಣಿಯಾದ ಒಂದು ಧರ್ಮಾರ್ಥ ಸಂಸ್ಥ್ತೆ. ಇದು ಸುಮಾರು 70 ವಿದ್ಯಾರ್ಥಿಗಳು ಮತ್ತು 20 ವಯಸ್ಕರನ್ನು ಹೊಂದಿರುವ ಒಂದು ಸಮುದಾಯ; ಇದು ಬೆಂಗಳೂರು ನಗರದ ಹೊರಭಾಗದಲ್ಲಿರುವ  ವರದೇನಹಳ್ಳಿಯಲ್ಲಿನ ಒಂದು ಅರೆ-ವಸತಿ ಶಾಲೆ .

 ಲೇಖಕರು:ಶರಣಗೌಡ, ರಮೇಶ್ ಮತ್ತು ಪರಿಮಳಾಚಾರ್ಯಎಸ್. ಅಗ್ನಿಹೋತ್ರಿ

 

 

18331 ನೊಂದಾಯಿತ ಬಳಕೆದಾರರು
7152 ಸಂಪನ್ಮೂಲಗಳು