ಪುಟಾಣಿ ಮಕ್ಕಳಿಗೆ ಅಜ್ಜಿಯ ಕಥೆಗಳ ಮತ್ತು ಕಥೆ ಹೇಳುವುದರ ಅಗತ್ಯತೆ

"ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದನು, ಅವನ ಬಳಿ ಒಂದು ದೊಡ್ಡ ಅರಮನೆ ಇದ್ದಿತು. ಅದಕ್ಕೆ ಚಿನ್ನದ ಬಾಗಿಲುಗಳು ಇದ್ದವು  ಮತ್ತು ರಾಜನು ಓಡಾಡಲು  ಬೆಳ್ಳಿ ರಥಗಳಿದ್ದವು ". “ಬಹಳ ಹಿಂದೆ  ಒಂದು ದಟ್ಟ ಕಾಡಿನಲ್ಲಿ  ಒಂದು ಬಿಳಿ ಆನೆ,ಕಪ್ಪು ನರಿ ಮತ್ತು ನೀಲಿ ಹಕ್ಕಿ ಇದ್ದವು. ಅವೆಲ್ಲಾ ಸೇರಿ ಹಬ್ಬ ಮಾಡುತ್ತಿದ್ದವು.”ಇತ್ಯಾದಿ ಕಥೆಗಳನ್ನು ನಮ್ಮ ಅಜ್ಜಿ ಮತ್ತು ನಮ್ಮ ಅಪ್ಪ ಅಮ್ಮ ನಮಗೆ ರಾಗವಾಗಿ ಹೇಳಿದ್ದನ್ನು ಕೇಳುತ್ತಾ ನಾವು ಬೆಳೆದಿದ್ದೇವೆ. ಬಹುಪಾಲು ಅದು ನಮ್ಮ ಕಲ್ಪನಾ ಹೊರ ಜಗತ್ತಿಗೆ ನಮ್ಮ ಭಾವನಾತ್ಮಕ ಸಂಪರ್ಕವನ್ನು ಬೆಸೆಯುವ ಕೊಂಡಿಗಳಾಗಿದ್ದವು. ನಾವು ಚಿಕ್ಕವರಿದ್ದಾಗ ನಾವು  ಕೇಳಿದ ಕಥೆಗಳು ನಮಗೆ ಜೀವನದ ಪ್ರಮುಖ ಪಾಠಗಳನ್ನು ಕಲಿಯಲು ಸಹಾಯ ಮಾಡಿದ್ದವು.

ಅಪ್ಸರೆಯರ ಕಾಲ್ಪನಿಕ ಕಥೆಗಳು, ಒಳ್ಳೆಯದು ಮತ್ತು ಕೆಟ್ಟದರ  ಪಂಚತಂತ್ರದ ನೀತಿ ಕಥೆಗಳು, ಪಾಂಡವರು, ಯೇಸು, ರಾಮ, ಕೃಷ್ಣ, ಅಲ್ಲಾ ಮುಂತಾದವರ ಪೌರಾಣಿಕ ಕಥೆಗಳು ಅಜ್ಜಿ  ಕಥಾ ಬಂಢಾರದ ವಿಭಿನ್ನ ಪ್ರಕಾರಗಳಾಗಿವೆ ಮತ್ತು ಇವುಗಳು ವಿಭಿನ್ನ ಸಂಸ್ಕೃತಿಗಳನ್ನು ಪರಿಚಯ ಮಾಡಿಕೊಂಡು ಅರಿಯಲು ಅವಕಾಶ ನೀಡುತ್ತವೆ; ಮೌಲ್ಯಗಳ ನ್ನು ಪೀಳಿಗೆಯಿಂದ ಪೀಳಿಗೆಗೆ  ಕೊಂಡು ಒಯ್ಯಲು  ಮತ್ತು ಮನುಷ್ಯರ ನಡುವಿನ ಹಂಚಿಬಾಳುವ  ಜೀವನಕ್ಕಾಗಿ  ಅವರ ನಡುವಿನ ಸಂಬಂಧಗಳನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ಇದೆಲ್ಲ ಆಗಬೇಕಾದರೆ, ಮಾನವರ ಪರಸ್ಪರ ಕೊಳ್ಕೊಡೆ ಹೆಚ್ಚು ಇರಬೇಕು, ಇದೇ ಕಥೆಯ ಸಾಗರಕ್ಕೆ ಯಾವಾಗಲೂ ಸಮೃದ್ಧ ಮೂಲವಾಗಿದೆ.

ಕಥೆ ಹೇಳುವುದು ಒಂದು ಕಲೆಯೂ ಹೌದು ಮತ್ತು ವಿಜ್ಞಾನವೂ ಹೌದು ಮತ್ತು ಕಥೆಗಳು ಮಕ್ಕಳಲ್ಲಿ ಕೇಳುವ ಕೌಶಲ್ಯ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳಸುವಲ್ಲಿ ಸಹಾಯ ಮಾಡುತ್ತದೆ, ಇದು ಶಬ್ದಕೋಶವನ್ನು ಸಮೃದ್ಧಗೊಳಿಸಲು  ಸಹಾಯ ಮಾಡುತ್ತದೆ, ಸೃಜನಶೀಲತೆಯನ್ನು ಹೆಚ್ಚಿಸುತ್ತದೆ, ಚಿಂತನೆಯ ಪ್ರಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಸ್ವಭಾವತಃ ಸಂವಾದಾತ್ಮಕವಾಗಿದೆ. ಕಥೆ ಹೇಳುವುದರ ಹಿಂದಿನ ವಿಜ್ಞಾನದ ಪ್ರಕಾರ ಅದು ಏಕಕಾಲದಲ್ಲಿ ಮೆದುಳಿನಲ್ಲಿನ ಎಲ್ಲಾ ಇಂದ್ರಿಯಗಳನ್ನೂ ಉತ್ತೇಜಿಸುತ್ತದೆ ಮತ್ತು ಮಗುವು  ಪ್ರತಿಕ್ರಿಯೆ ನೀಡುವಂತೆ ಮತ್ತು ಆತ್ಮವಿಶ್ವಾಸ ಬೆಳಸಿಕೊಳ್ಳುವಂತೆ ಮಾಡುತ್ತದೆ. ಇಂದಿನ ವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಟೆಕ್ನಾಲಜಿ, ಸೆಲ್ ಫೋನ್ಗಳು, ವಿವಿಧ ಆಡಿಯೋ ದೃಶ್ಯ ಗ್ಯಾಜೆಟ್ಗಳು ತಂತ್ರಜ್ಞಾನವು ಆಕ್ರಮಣಗೊಳ್ಳುತ್ತಿರುವ ಸಂದರ್ಭದಲ್ಲಿ ವಾಸ್ತವ  ಮುಖಾಮುಖಿ  ಕೊಳ್ಕೊಡೆ ಕಡಿಮೆಯಾಗುತ್ತಿದೆ ಮತ್ತು ಮಕ್ಕಳು ಮತ್ತು ವಯಸ್ಕರ ನಡುವೆ ಭಾವನಾತ್ಮಕ ಸಂಪರ್ಕ ದುರ್ಬಲಗೊಳ್ಳುತ್ತಿದೆ.

 ಭಾವನೆಗಳು ಮತ್ತು ಧ್ವನಿ ಏರಿಳಿತ ಗಳೊಂದಿಗೆ ಅಜ್ಜಿಯ ಹೇಳುವ ಕಥೆಗಳು ಆನಿಮೇಟೆಡ್ ಆವೃತ್ತಿಗಳಿಗಿಂತ ಹೆಚ್ಚು ರೋಮಾಂಚನಕಾರಿ ಮತ್ತು ಶಕ್ತಿಯುತವಾಗಿರುತ್ತವೆ. ಆದರೆ ಪೋಷಕರು ಮತ್ತು ಶಿಕ್ಷಕರಾದ ನಾವು ನಮ್ಮ ಮಕ್ಕಳಿಗೆ  ಕೊಡುತ್ತಿರುವ ತಂತ್ರಜ್ಞಾನದ ಸಂಸರ್ಗ ನಿಜಕ್ಕೂ ಬಲು ಹಾನಿಕಾರಿ. ಕಥೆಗಳು ಮತ್ತು ಕಥೆ-ನಿರೂಪಿಸುವ ಪ್ರಕ್ರಿಯೆಯನ್ನು ರಚಿಸುವುದರಲ್ಲಿ  ತಂತ್ರಜ್ಞಾನದ ಪಾತ್ರ ಎಷ್ಟಿರಬೇಕುೆಂಬುದರ ಬಗ್ಗೆ ಮತ್ತು ನೋಡಿ ಕಥೆಯನ್ನು ಗ್ರಹಿಸುವ ವಿಧಾನವನ್ನು ಹೇಗೆ ಕಡಿಮೆ ಮಾಡಬೇಕುಎಂಬ ಬಗ್ಗೆ  ಮತ್ತು ವ್ಯಕ್ತಿ ವ್ಯಕ್ತಿ ನಡುವೆ ಸಂವಹನವನ್ನು ಮತ್ತು ವ್ಯಕ್ತಿ ಯೊಳಗಿನ ವಿಷಯಗ್ರಹಣ ಶಕ್ತಿಯನ್ನು ಚೆನ್ನಾಗಿ ಬೆಳಸಲು  ಸಹಾಯ ಮಾಡುವ ಮಕ್ಕಳ ಮನಸ್ಸನ್ನು ಪೂರ್ಣ ಸೆರೆಹಿಡಿಯುವಂತಹ   ಕಥೆ ಹೇಳುವ ಕಲೆಯನ್ನು ಹೆಚ್ಚಿಸುವ ಬಗ್ಗೆ  ಮತ್ತು ಮಗುವಿನ ಕಲ್ಪಕ ಶಕ್ತಿ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಹೆಚ್ಚಿಸುವಬಗ್ಗೆ   ನಾವು ಮರುಚಿಂತನೆ ನಡೆಸಬೇಕಾಗಿದೆ

ನಾವು ಕೆಲಸ ಮಾಡುತ್ತಿರುವ  ಅಂಗನವಾಡಿಗಳಲ್ಲಿ, ಮಗುವಿನ ಸಮಗ್ರ ಬೆಳವಣಿಗೆಗೆಂದು ರೂಪಿಸಲಾದ ಪಠ್ಯಕ್ರಮದ ಚಟುವಟಿಕೆಗಳಲ್ಲಿ ಕಥೆ ಹೇಳುವುದು ಪ್ರಮುಖ ಮತ್ತು ಪ್ರಬಲ ಅಂಶವಾಗಿದೆ. ಅಂಗನವಾಡಿ ಶಿಕ್ಷಕರು ಸಾಮಾನ್ಯವಾಗಿ ಬಾಯಿಮಾತಿನಲ್ಲಿ ಕಥೆ ಹೇಳುತ್ತಾ ಅಥವಾ ನಾಟಕದ ಮೂಲಕ, ಪಾತ್ರಾಭಿನಯ ಮಾಡುವ ಮೂಲಕ ಮಗುವಿನ ಜೊತೆ ಓದುವ ಮೂಲಕ, ಜೋರಾಗಿ ಎಲ್ಲರೂ ಕೇಳುವಂತೆ ಕಥೆಯನ್ನು ಓದುವ ಮೂಲಕ ಕಥೆಗಳನ್ನು ಹೇಳುತ್ತಾರೆ. ಮಕ್ಕಳಿಗೆ ನೀಡಲಾದ ಅವಕಾಶಗಳು ಮತ್ತು ಅನುಭವಗಳು ಶಿಕ್ಷಕರಿಂದ ಶಿಕ್ಷಕರಿಗೆ ಬದಲಾಗಬಹುದು ಆದರೆ ಖಂಡಿತವಾಗಿಯೂ ಕೆಲವು ಮಾನವನ ಸಂಪರ್ಕ ಪ್ರತಿಕ್ರಿಯೆಗಳು ಖಂಡಿತಾ  ಸಂಭವಿಸುತ್ತವೆ ಮತ್ತು ಭಾವನಾತ್ಮಕ ಮಾನವರಹಿತ ವಿಧಾನಗಳಾದ ಡಿಜಿಟಲ್ ಕಥೆ ನಿರೂಪಣೆ ಗಿಂತ ನೂರುಪಾಲು ಉತ್ತಮ ಅಲ್ಲದೆ , ಮನುಷ್ಯರೇ ಕಥೆಹೇಳುವುದಕ್ಕೆ ಹೋಲಿಸಿದರೆ ಡಿಜಿಟಲ್ ಕಥೆ ನಿರೂಪಣೆ ಮಗುವಿನ ಪರಿಪೂರ್ಣ ಬೆಳವಣಿಗೆಯನ್ನು ನಿರ್ಬಂಧಿಸಬಹುದು. ನಗರದ ಮಕ್ಕಳೊಂದಿಗೆ ಹೋಲಿಸಿದರೆ ಅಂಗನವಾಡಿ ಮಕ್ಕಳು ಯಾಂತ್ರೀಕೃತ ಕಥೆ ನಿರೂಪಣೆಗೆ  ಹೆಚ್ಚು ಸಿಲುಕುವುದಿಲ್ಲ .ದೊಂದು ರೀತಿ ಶುಭಆಶೀರ್ವಾದ ಎಂದೇ ಹೇಳಬಹುದು. ಬಹುಶಃ, ಆಂಗನವಾಡಿ ಶಿಕ್ಷಕರು ಮತ್ತು ಸಹಾಯಕರು ಕಥೆ ಹೇಳುವಲ್ಲಿ ಪರಿಣತರಾಗಿರದೇ ಇರಬಹುದು. ಆದರೆ, ಓರ್ವ ಕಥೆಯನ್ನು ಹೇಳುತ್ತಿರುವ ಅಂಗನವಾಡಿ ಶಿಕ್ಷಕಿಯನ್ನು ಗಮನಿಸಿದಾಗ ಮತ್ತು ಕಥೆ ಕೇಳುತ್ತಾ ಹೋದಾಗ ಅಲ್ಲಿ ಮಕ್ಕಳು ಅನುಭವಿಸುವ ಭಾವನೆಗಳು ಮತ್ತು ಅನುಭವಗಳೆಲ್ಲವೂ  ಡಿಜಿಟಲ್ ವಿಧಾನಕ್ಕಿಂತ ಅತ್ಯಂತ ನೈಜ ಮತ್ತು ಮಾನವ ಸಹಜ ಎಂದು ಮನವರಿಕೆ ಆಗುತ್ತದೆ.

ರಮಾದೇವಿಯ ಸಂಪರ್ಕ- 9000062444  rama.devi@azimpremjifoundation.org

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು