ಪಾಲಿಮರ್ ನ ಗುಣಲಕ್ಷಣಗಳನ್ನು ಹೇಗೆ ಬದಲಾಯಿಸಬಹುದು?

ನಾವು ಆಣ್ವಿಕ ಪಾರಸ್ಪರಿಕ ಕ್ರಿಯೆಗಳ ಬಗ್ಗೆ ನಮ್ಮ ಜ್ಞಾನವನ್ನು ಬಳಸಿಕೊಂಡು ಹೊಸ ವಸ್ತುಗಳನ್ನು ವಿನ್ಯಾಸಗೊಳಿಸುವ ಯುಗದಲ್ಲಿ ನಾವು ವಾಸಿಸುತ್ತೇವೆ. ಈ ಕ್ಷೇತ್ರದಲ್ಲಿ ಅನೇಕ ಇತ್ತೀಚಿನ ಪ್ರಯತ್ನಗಳು, ಉದಾಹರಣೆಗೆ, ಜೈವಿಕವಾಗಿ ಮತ್ತು ಬೆಳಕಿನಿಂದ -ವಿಘಟನೆ ಹೊಂದಬಲ್ಲ ಕೃತಕ ಪಾಲಿಮರ್ ಗಳನ್ನು  ಮಾಡುವ ಗುರಿಯನ್ನು ಹೊಂದಲಾಗಿದೆ. 

ಪಾಲಿಮರ್ ನ ಗುಣಲಕ್ಷಣಗಳನ್ನು ಹೇಗೆ ಬದಲಾಯಿಸಬಹುದು? ಸ್ಥೂಲವಾಗಿ, ಇದನ್ನು ಮಾಡುವ ಮೂರು ವಿಧಾನಗಳಿವೆ:

  •        ಅದರ ಅಡ್ಡ ಸರಪಣಿಗಳನ್ನು ಬದಲಿಸುವ ಮೂಲಕ - ಹೆಚ್ಚಿನ ಧ್ರುವೀಯ ಸರಪಣಿಗಳು ಹೆಚ್ಚಿನ ಪರಸ್ಪರ     ಕ್ರಿಯೆಗಳನ್ನು ತರುತ್ತವೆ.
  •    ಸರಪಳಿಯ ಉದ್ದವನ್ನು ಬದಲಿಸುವ ಮೂಲಕ – ಉದ್ದವಾದ ಸರಪಳಿಗಳು ಬಲವಾದ ಅಂತರ ಅಣು ಶಕ್ತಿಗಳನ್ನು ಹೊಂದಿವೆ.
  •         ಅಡ್ಡ ಗುಂಪುಗಳ ಅಭಿಮುಖತೆ ಬದಲಿಸುವ ಮೂಲಕ – ಆ ಮೂಲಕ ಸರಪಳಿಗಳನ್ನು ಉತ್ತಮವಾಗಿ ಪ್ಯಾಕ್ ಮಾಡಲು ಸಹಾಯ ಮಾಡುತ್ತೇವೆ.

ಪಾಲಿ-ಇಥೆನಾಲ್ ಪಾಲಿಥೀನ್ಗೆ ರಚನೆಯಲ್ಲಿ ಹೋಲುವ ಪಾಲಿಮರ್ ಆಗಿದೆ. ಪಾಲಿಇಥಿನೋಲ್ ತನ್ನ ಬದಿಯ ಸರಪಳಿಯಲ್ಲಿ ಅನೇಕ ಹೈಡ್ರಾಕ್ಸಿಲ್ (-OH) ಗುಂಪುಗಳನ್ನು ಹೊಂದಿದೆ. 99-100% ನಷ್ಟು ಪಾಲಿಮರ್ -OH ಗುಂಪುಗಳಿಂದ ಮಾಡಲ್ಪಟ್ಟಾಗ, ಪಾರ್ಶ್ವ-ಸರಪಣಿಗಳ ನಡುವೆ ಹೈಡ್ರೋಜನ್ ಬಂಧಗಳು ರೂಪುಗೊಂಡು ನೀರಿನಲ್ಲಿ ಕರಗುವುದಿಲ್ಲ.  -ಓಎಚ್ ಗುಂಪಿನ ಶೇಕಡಾವಾರು ಕಡಿಮೆಯಾದಾಗ  , ಪಾಲಿಮರ್ ನೀರಿನಲ್ಲಿ ಕರಗುತ್ತದೆ. ಏಕೆಂದರೆ ಅದರ ಪಕ್ಕ-ಸರಪಣಿಗಳ ನಡುವಿನ ಅಂತರವು ನೀರಿನ ಅಣುಗಳು ಪಾಲಿಮರ್ ನೊಂದಿಗೆ ಪ್ರತಿಕ್ರಿಯಿಸಲು ಅನುವು ಮಾಡಿಕೊಡುತ್ತದೆ. ಈ ಗುಣ ಲಕ್ಷಣವನ್ನು ಬಳಸಿಕೊಂಡು, ಆಸ್ಪತ್ರೆ ಲಾಂಡ್ರಿ ಚೀಲಗಳನ್ನು ತಯಾರಿಸಲು ಪಾಲಿ-ಇಥೆನಾಲ್ ಅನ್ನು ಬಳಸಲಾಗುತ್ತದೆ. ಸೋಂಕಿತ ವಸ್ತ್ರಗಳನ್ನು ಈ ಚೀಲಗಳಲ್ಲಿ ಹಾಕಿ ಮತ್ತು ಬಟ್ಟೆ ಒಗೆಯುವ ಯಂತ್ರಗಳಿಗೆ ಲೋಡ್ ಮಾಡಿದಾಗ, ಚೀಲಗಳು ಕರಗುತ್ತವೆ, ಸ್ವಚ್ಛ ಬಟ್ಟೆಗಳನ್ನು ಬಿಡುಗಡೆ ಯಾಗುತ್ತವೆ.

ರಸಾಯನಶಾಸ್ತ್ರಜ್ಞರು ರೇಷ್ಮೆ, ಉಣ್ಣೆ ಮತ್ತು ರಬ್ಬರ್ ರೀತಿಯ ನೈಸರ್ಗಿಕ ಪಾಲಿಮರ್ಗಳನ್ನು ಅನುಕರಿಸಲು ಪ್ರಯತ್ನಿಸಿದ್ದಾರೆ. ಸಿಲ್ಕ್ ಮತ್ತು ಉಣ್ಣೆ ಪ್ರೋಟೀನ್ಗಳಿಂದ ಮಾಡಲ್ಪಟ್ಟಿವೆ, ಮತ್ತು ನೈಲಾನ್ ಮತ್ತು ಪಾಲಿಯೆಸ್ಟರ್ಗಳು ಅವುಗಳ ಸಮನಾದ ಸಂಶ್ಲೇಷಿತ ಆವೃತ್ತಿಗಳಾಗಿವೆ. ಈ ಸಂಶ್ಲೇಷಿತ ಪಾಲಿಮರ್ ಗಳನ್ನು ನೂಲೆಳೆಗಳಾಗಿ ಎಳೆಯಲಾಗುತ್ತದೆ ಮತ್ತು ಬಟ್ಟೆಯನ್ನು ನೇಯಲಾಗುತ್ತದೆ. ಈ ಗುಣಲಕ್ಷಣಗಳು ಭಾಗಶಃ ಅಣುವಿನ ರಾಸಾಯನಿಕ ಸ್ವಭಾವದಿಂದಾಗಿ, ಮತ್ತು ಭಾಗಶಃ ಪ್ರಕ್ರಿಯೆಗೊಳ್ಳುವ ವಿಧಾನದಿಂದಾಗಿ ಬರುತ್ತವೆ. ಅಂತೆಯೇ, ರಸಾಯನ ಕೆವ್ಲರ್ (ಪ್ರಬಲ ಮತ್ತು ಹಗುರ), ಪಿಎಚ್ಎ (ಬೆಂಕಿ ನಿರೋಧಕ) ಮತ್ತು ಪಾಲಿ ಕಾರ್ಬೋನೇಟ್ (ಗಾಜಿನ ಬದಲಿಗೆ) ಪಡೆಯಲು ಅಣುಗಳೊಂದಿಗೆ ಆಟವಾಡಿದ್ದಾರೆ.

 

 

 

 

 

 

19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು