ಪಾದರಸ ವಾಯು ಭಾರ ಮಾಪಕ

ಸರಳ ಪಾದರಸ ವಾಯು ಭಾರ ಮಾಪಕ: ಆ ದಿನಗಳು!

ಡಿಜಿಟಲ್ ಯುಗದಲ್ಲಿ ಅಪ್ಲಿಕೇಶನ್ಗಳು ಬರುವುದಕ್ಕೆ ಮುಂಚೆ ವಾತಾವರಣದ ಒತ್ತಡವನ್ನು ಅಳೆಯಲು ಪಾದರಸದ ಮಾಪಕದ ಸರಳ ರಚನೆಯಾಗಿ ಈ ಕೆಳಗಿನ ವ್ಯವಸ್ಥೆ ಬಳಸುತ್ತಿದ್ದರು.

ಒಂದು ಕಡೆ ತೆರೆದ ತುದಿಯಿರುವ ಒಂದು ಗಾಜಿನ ಕೊಳವೆಗೆ ಪಾದರಸವನ್ನು ತುಂಬಲಾಗುತ್ತಿತ್ತು, ಇದು ನೀರಿಗಿಂತ ಸುಮಾರು 14 ಪಟ್ಟು ಗಾಢವಾಗಿರುತ್ತದೆ, ಮತ್ತು ನಂತರ ಪಾದರಸ ತುಂಬಿದ ತೆರೆದ ಅಗಲ ಪಾತ್ರೆಯೊಳಗೆ ಈಗಾಜಿನ ಕೊಳವೆಯನ್ನು ಅದರ ತೆರೆದ ಬಾಯಿಯನ್ನು ಪಾತ್ರೆಯೊಳಗಿನ ಪಾದರಸದೊಳಗೆ ಲಂಬವಾಗಿ ಮುಳುಗಿಸಿ ನೇರವಾಗಿ ಇರಿಸಲಾಗುತ್ತದೆ.

ನಳಿಕೆಯೊಳಗಿನ ಪಾದರಸಪಂಕ್ತಿ ಅದರ ತೂಕವು ಬಿ ನಲ್ಲಿನ ವಾತಾವರಣದ ಒತ್ತಡದ ಶಕ್ತಿಯಿಂದ ಸಮತೋಲನಗೊಳಿಸಲ್ಪಟ್ಟಾಗ ನಳಿಕೆಯಲ್ಲಿ ನೆಲೆಗೊಳ್ಳುತ್ತದೆ, ಆ ಸಮಯದಲ್ಲಿ, B ಮತ್ತು C ನಲ್ಲಿನ ಒತ್ತಡವು ಒಂದೇ ಮಟ್ಟದಲ್ಲಿರುತ್ತದೆ.

ಆಗ ಎ ಬಳಿ ಒತ್ತಡ ಶೂನ್ಯವಾಗಿರುತ್ತದೆ, ಏಕೆಂದರೆ ಇದು ನಿರ್ವಾತವಾಗಿರುತ್ತದೆ.

ಆದ್ದರಿಂದ, ಪಾದರಸದ ಪಂಕ್ತಿ ತೋರುವ ಒತ್ತಡವು ವಾಯುಮಂಡಲದ ಒತ್ತಡಕ್ಕೆ ಸಮನಾಗಿರುತ್ತದೆ. ಇಲ್ಲಿ ಪಾದರಸದ ಸಾಂದ್ರತೆ ಹೆಚ್ಚಾಗಿರುವುದು ಉಪಯೋಗಕ್ಕೆ ಬರುತ್ತದೆ, ಇದರಿಂದಾಗಿ ಈ ಉಪಕರಣದ ಎತ್ತರವನ್ನು ಒಂದು ಮೀಟರ್ಗಿಂತ ಕಡಿಮೆ ಎತ್ತರಕ್ಕೆ ನಿರ್ಬಂಧಿಸಬಹುದು.

ಅದೇ ಉದ್ದೇಶಕ್ಕಾಗಿ ನೀರನ್ನು ಬಳಸಿದರೆ, ನಳಿಕೆಯ ಎತ್ತರವು 13.5 x 76 ಅಥವಾ 10 ಮೀಟರ್ ಎತ್ತರವಾಗಬೇಕಾಗುತ್ತದೆ.
 

18462 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು