ಪರೀಕ್ಷೆಯ ಮರು ಪರೀಕ್ಷೆ - ಪೆರಿ

ತಾವು ಮಾಡಿದ ಪ್ರತೀ ಕಾರ್ಯವನ್ನು ಪ್ರತಿ ಬಾರಿಯೂ ಮತ್ತೆ ಪರೀಕ್ಷಿಸಿ ನೋಡುವವರು ವಿರಳವೆಂದೇ ಹೇಳಬೇಕು. ಸಾಮಾನ್ಯವಾಗಿ ಜನರು ನಿರಂತರವಾಗಿ ಪರೀಕ್ಷಿಸುತ್ತಾ ಇರುವುದಿಲ್ಲ ಎಂಬುದು ನನ್ನ ಅನುಭವ. ಮಾಡಿದ್ದು ತಪ್ಪಾದಾಗ ಮಾಡಿದ  ಕೆಲಸ ಫಲನೀಡದಿದ್ದಾಗ ಬಿಕ್ಕಟ್ಟು ಉಂಟಾದಾಗ ಮಾತ್ರ ನಾವು ಪರೀಕ್ಷಿಸುತ್ತೇವೆ. ಆದ್ದರಿಂದ ಕೈಯಲ್ಲಿ ಸಮಸ್ಯೆಯಿದ್ದಾಗ ಅಥವಾ ಫಲಿತಾಂಶದೊಂದಿಗೆ ಸಮಸ್ಯೆ ಎದುರಾದಾಗ ಮಾತ್ರ ನಾವು ಪರೀಕ್ಷೆ ಅಥವಾ ಮರು ಪರಿಶೀಲನೆ ನಡೆಸುತ್ತೇವೆ,.

ಪರೀಕ್ಷೆ ಮಾಡುವ ಸಮಸ್ಯೆಯು ನಾವು ಸ್ವಯಂ ಪರೀಕ್ಷೆಯನ್ನು ಮಾಡಿಕೊಳ್ಳುವುದರಿಂದ ಇತರರ ಪರೀಕ್ಷೆಗೆ  ತೊಡಗಿದಾಗ  ಪ್ರಾರಂಭವಾಗುತ್ತದೆ. ಫಲಿತಾಂಶದ ನಿರೀಕ್ಷೆಯಿದೆ ಎಂದು ಅರಿತಾಗ ನಾವು ಪರೀಕ್ಷೆಯನ್ನು ಕುರಿತು  ಚಿಂತಿಸಲಾರಂಭಿಸುತ್ತೇವೆ. ಪರೀಕ್ಷೆಯ ಫಲಿತಾಂಶದಿಂದ  ಹೆಚ್ಚಿನ ಹಕ್ಕನ್ನುಗಳಿಸುವ ಸಂದರ್ಭವಿರುವಾಗ, ದುರಾಚಾರ ನುಸುಳುತ್ತದೆ.  ಫಲನಿರೀಕ್ಷೆ ಹೆಚ್ಚಿದಷ್ಟು ಭ್ರಷ್ಟ ಆಚರಣೆಗಳು  ಹೆಚ್ಚುತ್ತವೆ.

ವೈಫಲ್ಯದ ಭಯವು ಯಾವುದೇ ಪರೀಕ್ಷೆಯ ಜೊತೆಗೂಡಿ   ಇರುವಂಥ ವಿಷಯವಾಗಿದೆ. ವೈಫಲ್ಯದ ಈ ಭಯವು ಅಭ್ಯರ್ಥಿಯು  ಕಾಯಿಲೆ ಬೀಳುವುದರಿಂದ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವವರೆಗೂ ಕಾರಣವಾಗಬಹುದು. ಪರೀಕ್ಷೆಯಲ್ಲಿ ಭ್ರಷ್ಟಾಚಾರ ಮೇಲ್ವಿಚಾರಣೆ ಜಾಗೃತಿಗೆ ಬೆದರಿಕೆಒಡ್ಡಿದರೆ. ವೈಫಲ್ಯದ ಭಯವು ಎಲ್ಲವನ್ನೂ ಮೊಟಕುಗೊಳಿಸುತ್ತದೆ. ಇದು ನಿಮ್ಮ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ. ಏನಾದರೂ ಮಾಡಲು ನಿಮ್ಮಸ್ವಾತಂತ್ರ್ಯವನ್ನು, ಪ್ರಯೋಗಮಾಡಲು ಸ್ವಾತಂತ್ರ್ಯವನ್ನು  ಮತ್ತು ಒಂದಿಷ್ಟು ಅಪಾಯವಿದ್ದರೂ ಮಣಿಯದೆ ಮುಂದುವರೆಯುವ ಸ್ವಾತಂತ್ರ್ಯವನ್ನು ಇಲ್ಲವಾಗಿಸುತ್ತದೆ. ನಾವೀನ್ಯತೆ ಮತ್ತು ಸೃಜನಶೀಲತೆಗಳಿಗೆ ಬಲು ಗಮನಾರ್ಹ ಅಡಚಣೆ ವೈಫಲ್ಯದ ಭಯ. ಹಾಗೆ ನೋಡಿದರೆ ಬದಲಾವಣೆಗಳ ಸಂದರ್ಭದಲ್ಲೂ ವೈಫಲ್ಯದ ಭಯ ಅಥವಾ ಅಜ್ಞಾತ ಪರಿಣಾಮದ  ಭಯವು ಪ್ರಮುಖ ಅಡಚಣೆಯಾಗುತ್ತದೆ. ಈ ಭಯ ಏಕೆ ಉಂಟಾಗುತ್ತದೆ? ನಿರೀಕ್ಷೆಗಳು ಇಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ನಾನು ಭಾವಿಸುತ್ತೇನೆ. ಪೋಷಕರ ನಿರೀಕ್ಷೆಗಳು, ಸಹಪಾಠಿಗಳ ನಿರೀಕ್ಷೆಗಳು, ಸಮಾಜದ ನಿರೀಕ್ಷೆಗಳು ಮತ್ತು ಅತಿ ಮುಖ್ಯವಾಗಿ ತಮ್ಮ ಬಗ್ಗೆ ತಮ್ಮದೇ ಆದ ನಿರೀಕ್ಷೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತವೆ. ಈ ನಿರೀಕ್ಷೆಗಳು ಅವಾಸ್ತವಿಕವಾಗಿದ್ದಾಗಲೇ ಈ ಸಮಸ್ಯೆಗಳು ಆರಂಭವಾಗುವುದು. ಎಷ್ಟೋ ನಿಕಟ ಸಂಬಂಧಗಳು ಅವಾಸ್ತವಿಕ ನಿರೀಕ್ಷೆಗಳಿಂದಾಗಿ ಬಹುಪಾಲು ಒಡೆಯುತ್ತವೆ.

ಈ ಸಂಬಂಧ “ದಿ ಡೈರಿ ಆಫ್ ಎ ಟ್ರೈನ್ ಡ್ರೈವರ್: ಎಂಬ ಚಲನಚಿತ್ರವು ಸ್ವಲ್ಪ ಸಮಯದವರೆಗೆ ನನ್ನನ್ನು ಕಾಡಿಸಿತು. ಅದರ ಕಥಾವಸ್ತು ಸರಳವಾಗಿದೆ. ಆತ  ವಯಸ್ಸಾದ ರೈಲು ಚಾಲಕ. ತನ್ನ  ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾನೆ. ತನ್ನ ಕೆಲವು ಬಲು ಹತ್ತಿರದ ಜನರು ರೈಲಿನ ಕೆಳಗೆ ಬಿದ್ದಿರುವುದನ್ನು ಅವನು ನೋಡಿದ್ದಾನೆ. ಅವನಿಗೊಬ್ಬ ದತ್ತು ಮಗನಿದ್ದು, ಅವನು ತಾನೂ ಒಬ್ಬ ರೈಲಿನ ಚಾಲಕನಾಗಲು ಬಯಸುತ್ತಿರುತ್ತಾನೆ.ಆದರೆ ನಮ್ಮ  ರೈಲು ಚಾಲಕನಿಗೆ ತನ್ನ ಮಗನು ರೈಲು ಚಾಲಕನಾವುದು ಇಷ್ಟವಿಲ್ಲ. ಆದ್ದರಿಂದ, ಅವನು ಇನ್ಯಾವುದೋ ವಿದ್ಯಾವಿಷಯ ಅಧ್ಯಯನ ಮಾಡಲು ಮಗನನ್ನು ಹತ್ತಿರದ ಪಟ್ಟಣಕ್ಕೆ ಕಳುಹಿಸುತ್ತಾರೆ. ಅಂತಿಮವಾಗಿ ಮಗನು ತನ್ನ ತಂದೆಯ ಆಸೆಗೆ ವಿರುದ್ಧವಾಗಿ ರೈಲು ಚಾಲಕನಾಗುತ್ತಾನೆ. ಮಗನು ರೈಲನ್ನು ಓಡಿಸಲು ಪ್ರಾರಂಭಿಸುತ್ತಾನೆ ಮತ್ತು ಯಾವುದೇ ಅಪಘಾತಗಳಿಲ್ಲದೆ ರೈಲು ನಡೆಸಲು ಅವನು ಬಯಸುತ್ತಾನೆ. ಅದೇನೋ ಸರಿಯೇ  ಆದರೆ ನಿಧಾನವಾಗಿ ಅಪಘಾತಗಳನ್ನು ತಪ್ಪಿಸುವುದೇ  ಮಗನ ಪ್ರಮುಖ ಕಾರ್ಯೋದ್ದೇಶ ವಾಗಿ ಪರಿಣಮಿಸುತ್ತದೆ. ಅದೇ ಆ ಯುವಕನಲ್ಲಿ ಮಾನಸಿಕ  ಒತ್ತಡ ಉಂಟು ಮಾಡುತ್ತದೆ.

'ಯಾರನ್ನೂ ಕೊಲ್ಲದಿರುವುದು' ನ ಒತ್ತಡ. ಮತ್ತು ಯುವಕನಿಗೆ 'ಯಾವುದೇ ಅಪಘಾತ' ಒಂದು ಪ್ರಮುಖ ಒತ್ತಡ ಮತ್ತು ಒತ್ತಡ ಆಗುತ್ತದೆ. ಯಾವುದೇ ಸಮಯದಲ್ಲಿ ರೈಲಿನ ಪ್ರಯಾಣದಲ್ಲಿ ಬರಬಹುದಾದ ಯಾವುದೇ ಅವಗಡವನ್ನು ಅವನು ಸತತವಾಗಿ ಹುಡುಕುತ್ತಿರುತ್ತಾನೆ. . . . ಇದು ಒಂದು ಭೀತಿಯಾಗುತ್ತದೆ ಮತ್ತು ನಂತರ ಅದು ಆತನ ಚಾಲನವನ್ನು ಹಾಳುಮಾಡುತ್ತದೆ ಮತ್ತು ಅವನ ಜೀವನಕ್ಕೆ ಹಾಸು ಹೊಕ್ಕಾಗುತ್ತದೆ. ಈ ಯುವಕನ  ಅಪಘಾತದ ಬಗ್ಗೆ ಮತ್ತು ಯಾರನ್ನಾದರೂ ಕೊಲ್ಲುತ್ತೇನೆನೋ ಎಂಬ ಬಗ್ಗೆ ಇರುವ ನಿರಂತರ ಭಯ ಇಡೀ ಚಾಲಕ ಸಮುದಾಯಕ್ಕೆ ಒಂದು ಪ್ರಮುಖ ಕಳವಳ ಆಗುತ್ತದೆ. ಅವರು ಅವನನ್ನು ಸಮಾಧಾನ ಮಾಡುತ್ತಾರೆ , ಮತ್ತು ಒಂದು ಅವಗಡ ಆದರೆ ಆಗಲಿ ಬಿಡು ಎಂದು ಹೇಳುತ್ತಾರೆ  ಅವಗಡ ಸಂಭವಿಸಲಿ ಬಿಡು ಎಂಬುದನ್ನು ಈ ಮಗನಿಗೆ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ಮಗನ   ಈ ಪರಿಸ್ಥಿತಿಯಲ್ಲಿ  ಅವನಿಗೆ ನೆರವಾಗಲು ತಂದೆಯು ಮುಂದೆಬರುತ್ತಾನೆ. ರೈಲಿನ ಕೆಳಗೆ ಯಾರೋ ಬೀಳುವಂತೆ ಮಾಡಲು ವ್ಯರ್ಥವಾಗಿ ಅವನು ಪ್ರಯತ್ನಿಸುತ್ತಾನೆ ಮತ್ತು ಅಂತಿಮವಾಗಿ ಅವನು ತನ್ನ ಮಗನ ರೈಲಿನ ಕೆಳಗೆ ತಾನೇ ಮಲಗುವುದು ಎಂದು ನಿರ್ಧರಿಸುತ್ತಾನೆ. ಅಂತಿಮವಾಗಿ ಏನು ನಡೆಯುತ್ತದೆ ಎಂಬುದು ಸಿನಿಮೀಯವಾಗಿದೆ. ಮತ್ತು ರೈಲು ಒಂದು ಅಪಘಾತಕ್ಕೆ ಈಡಾಗಿ ತಂದೆಯು ಮಲಗಿದ ಸ್ಥಳಕ್ಕೆ  ಮೊದಲು ರೈಲು ನಿಲ್ಲುತ್ತದೆ. ಈ ಚಿತ್ರವನ್ನು ನೋಡಿದ ನಂತರ ಈ ಸಮಸ್ಯೆಯು ನನ್ನನ್ನು ಬಿಡದೆ ಕಾಡುತ್ತಿದೆ.

ಕಥಾವಸ್ತುವೇನೋ ಸರಳ ಆದರೆ, ವೈಫಲ್ಯವು ಒಂದು ಪ್ರಮುಖ ಫೋಬಿಯಾಯಾಗುವ ಭಯದಿಂದಾಗಿ ಮತ್ತು ಸಂಪೂರ್ಣವಾಗಿ ನೀವು ನಿಷ್ಕ್ರಿಯ  ವಾಗುವ ಭೀತಿಯನ್ನು ಕುರಿತು ಈ ನಿರ್ದೇಶಕನು ನಿರ್ದೇಶಿಸುವ ರೀತಿ ಪರಿಗಣಿಸಬೇಕಾದದ್ದು. ಪರೀಕ್ಷೆಯೆಂಬುದು ಎಲ್ಲರನ್ನೂ, ಮಕ್ಕಳು ಅಥವಾ ವಯಸ್ಕರನ್ನು ಕಾಡುತ್ತದೆ. ಪರೀಕ್ಷೆಯ ಪ್ರಸ್ತುತ ಪರಿಕಲ್ಪನೆಯನ್ನು ಪುನಃ ಪರೀಕ್ಷಿಸಲು ನಾವು ಸಿದ್ಧರಿದ್ದೇವೆಯೇ?

 

 

18784 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು