ಪರಿಸರ ಕುರಿತ ಕೆಲವು ರಾಷ್ಟ್ರೀಯ ಅಭಿಯಾನಗಳು

ನಾವು ಇಂದು ಸುಖ ಸಂತೋಷದಿಂದ ಬಾಳ ಬೇಕಾದರೆ ಪರಿಸರದ ಸಂರಕ್ಷಣೆ ಅತಿಮುಖ್ಯ ಇದಕ್ಕಾಗಿ ಭಾರತ ಸರ್ಕಾರ ಎಂಟು ಪ್ರಮುಖ ಅಭಿಯಾನಗಳನ್ನು ಹಮ್ಮಿಕೊಂಡಿದೆ
 
ರಾಷ್ಟ್ರೀಯ ಜಲನಿರ್ವಹಣಾ ಅಭಿಯಾನNational Water Mission
ಈ ಅಭಿಯಾನವು ನೀರಿನ ಸಂರಕ್ಷಣೆ, ಪೋಲಾಗುವುದನ್ನು ಅತಿಕಡಿಮೆಯಾಗಿಸುವುದು,ಸಮಾನ ವಿತರಣೆ ಆಗುವಂತೆ ಮಾಡುವುದು. ಇದು ಜಲ ಬಳಕೆಯಲ್ಲಿ ಶೇ20 ರಷ್ಟು ಸುಧಾರಣೆ ತರುವ ಗುರಿ ಇರಿಸಿಕೊಂಡಿದೆ.
ಸುಸ್ಥಿರ ಕೃಷಿಗಾಗಿ ರಾಷ್ಟ್ರೀಯ ಅಭಿಯಾನ National Mission for Sustainable Agriculture 
ಈ ಅಭಿಯಾನವು ಕೃಷಿಯಲ್ಲಿ ಹವಾಮಾನಕ್ಕೆ ತಕ್ಕ ಅಳವಡಿಕೆ ಮಾಡಿಕೊಳ್ಳುವುದಕ್ಕೆಸಹಾಯನೀಡುತ್ತದೆ. ಆಹಾರ ಭದ್ರತೆ,ಆಹಾರ ಸಂಪನ್ಮೂಲಗಳ ಸಮಾನ ಲಭ್ಯತೆ, ಜೀವಾನೋಪಾಯ ಅವಕಾಶಗಳು ಹೆಚ್ಚುವಂತೆ ಮಾಡುವುದು,ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸ್ಥಿರತೆ ತರುವುದನ್ನು  ಗುರಿಯಲ್ಲಿ  ಇರಿಸಿಕೊಂಡಿದೆ.
 
ಸುಸ್ಥಿರ ಜೀವಾವಾಸ ರಾಷ್ಟ್ರೀಯ ಅಭಿಯಾನ National Mission on Sustainable Habitat
ಈಅಭಿಯಾನವು ಮಾಲಿನ್ಯ ಇತ್ಯಾದಿ   ತಗ್ಗಿಸುವಿಕೆ ಜೊತೆ ಆಳವಡಿಕೆ ಸಂಬಂಧಿಸಿದ ಗುರಿಗಳನ್ನಿರಿಸಿಕೊಂಡಿದೆ ಮತ್ತು ಜಲನಿರ್ವಹಣೆಗೆ ಸಮಗ್ರ ವಿಧಾನ, ನಗರ ಮಳೆ ನೀರಿನ ನಿರ್ವಹಣೆ, ನಗರ ಯೋಜನೆಯನ್ನು ಮರು ಸಂಯೋಜಿಸುವುದು ಮತ್ತು ವಿಕೋಪಕ್ಕೆ ಪ್ರತಿಕ್ರಿಯೆಯನ್ನು ಉತ್ತಮಪಡಿಸುವುದು ಇದರೆಡೆಗೆ ಗಮನ ಕೇಂದ್ರೀಕರಿಸುತ್ತದೆ. 
 
ಹಿಮಾಲಯದ ಜೀವಿಪರಿಸರವನ್ನು ಸುಸ್ಥಿರಗೊಳಿಸುವ ರಾಷ್ಟ್ರೀಯ ಅಭಿಯಾನNational Mission for Sustaining the Himalayan Eco-system,
ಈ ಅಭಿಯಾನ ಜೀವವೈವಿಧ್ಯ ಸಂರಕ್ಷಣೆ ಅರಣ್ಯ ವಾಪ್ತಿ ಹೆಚ್ಚಿಸುವುದು ಮತ್ತಿತರ ಜೀವಿಪರಿಸರ ಮೌಲ್ಯಗಳನ್ನು ಹಿಮಾಲಯ ಪ್ರದೇಶದಲ್ಲಿ ತರಲು ಗಮನ ಕೇಂದ್ರೀಕರಿಸುತ್ತದೆ. 
 
 ಹಸಿರು ಭಾರತದ ರಾಷ್ಟ್ರೀಯ ಅಭಿಯಾನNational Mission for a Green India, 
ಈ ಅಭಿಯಾನವು ಬೀಳು ಬಿದ್ದ ಕಾಡುಗಳಲ್ಲಿ 6 ಮಿಲಿಯನ್ ಹೆಕ್ಟೇರ್ ಪ್ರದೇಶದಲ್ಲಿ ವನನಿರ್ಮಾಣದ ಮತ್ತು ಭಾರತದ ಸೀಮಾಂತರ್ಗತ ಪ್ರದೇಶದಲ್ಲಿ ಅರಣ್ಯ ಪ್ರದೇಶವನ್ನು ಶೇ 23 ರಿಂದ ಶೇ33 ಕ್ಕೆ ಹೆಚ್ಚಿಸುವ ಗುರಿಯಿರಿಸಿಕೊಂಡಿದೆ.
 
ವರ್ಧಿತ ಇಂಧನ ದಕ್ಷತೆ ಕುರಿತ ರಾಷ್ಟ್ರೀಯ ಅಭಿಯಾನ National Mission on Enhanced Energy Efficiency
  2001 ಇಸವಿಯ  ಇಂದನ  ಕಾಯಿದೆಯಡಿ ರಾಷ್ಟ್ರೀಯ ಮಿಷನ್ ದೇಶದಲ್ಲಿ ಗೊತ್ತುಪಡಿಸಿದ ಸಂಸ್ಥೆಗಳು ಕಾರ್ಯವಿಧಾನಗಳ ಬ್ಯೂರೋ ಇಂಧನ ದಕ್ಷತೆ ಆಫ್ (ಬೀ) ಮೂಲಕ ಶಕ್ತಿ ದಕ್ಷತೆ ಕ್ರಮಗಳನ್ನು  ಅನುಷ್ಠಾನಕ್ಕೆತರಲು ಕಾನೂನು ಮುದ್ರೆಯನ್ನು  ಒದಗಿಸುತ್ತದೆ. 11 ಪಂಚವಾರ್ಷಿಕ ಯೋಜನೆಯಲ್ಲಿ  2012ರ ಅಂತ್ಯದ ಹೊತ್ತಿಗೆ ಸುಮಾರು 10,000 ಮೆವ್ಯಾ ಉಳಿಸಲು ಉದ್ದೇಶವುಳ್ಳ  ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
 

ರಾಷ್ಟ್ರೀಯ ಸೌರಶಕ್ತಿ ಅಭಿಯಾನ National Solar Mission

2022 ರ ಹೊತ್ತಿಗೆ100 ಗಿ.ವಾ.ವಿದ್ಯುತ್ ಉತ್ಪಾದನೆ ಇದರ ಗುರಿ.

2015 ರಿಂದ ಪ್ರಾರಂಭಗೊಂಡು ಮುಂದಿನ 7 ವರ್ಷಗಳಲ್ಲಿ ಭಾರತದ ಸೌರಶಕ್ತಿ ಸಾಮರ್ಥ್ಯ  ಹೆಚ್ಚಾಗಿ 100 ಗಿ. ವಾ. ತಲುಪಲಿದೆ

ವಾತಾವರಣ ಬದಲಾವಣೆ ಸ್ಟ್ರಾಟೆಜಿಕ್ ಜ್ಞಾನ ಮೇಲೆ ಅಭಿಯಾನ.(National Mission on Strategic Knowledge for Climate Change)

ಹವಾಮಾನ ಬದಲಾವಣೆಯ ಕಾರಣದಿಂದ ಹುಟ್ಟುವ ಸವಾಲುಗಳನ್ನು ಗುರುತಿಸುವುದು.

ವಿಶೇಷವಾಗಿ ಆರೋಗ್ಯ, ಜನಸಂಖ್ಯಾಶಾಸ್ತ್ರದ, ವಲಸೆ, ಕರಾವಳಿಯ ಸಮುದಾಯಗಳ ಜೀವನಾಧಾರ ಪ್ರದೇಶಗಳಲ್ಲಿ ಹವಾಮಾನ ಬದಲಾವಣೆಯ ಜ್ಞಾನದ ಬೆಳವಣಿಗೆಗೆ ಉತ್ತೇಜಿಸುವುದು.

ಇದು  ಪರಿಸರದ  ಸುಸ್ಥಿರ  ಅಭಿವೃದ್ಧಿಯ ಉದ್ದೇಶಕ್ಕೆ  ಪರಿಣಾಮಕಾರಿಯಾಗಿ ಸ್ಪಂದಿಸಲು ಸಮರ್ಥನೀಯವಾದ ರಾಷ್ಟ್ರೀಯ ಕ್ರಮಗಳಿಗೆ ಮಾಹಿತಿ ಮತ್ತು ಒಂದು ರೋಮಾಂಚಕ ಹಾಗು ಕ್ರಿಯಾತ್ಮಕ ಜ್ಞಾನ ವ್ಯವಸ್ಥೆಯನ್ನು ನಿರ್ಮಿಸಲು ಬಯಸುವ ರಾಷ್ಟ್ರೀಯ ಕ್ರಿಯಾ ಯೋಜನೆ. ಇದು ಮಾನವ ಮತ್ತು ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವ ಮೂಲಕ ಜ್ಞಾನ ವ್ಯವಸ್ಥೆಯನ್ನು  ದೀರ್ಘಕಾಲದ ವರೆಗೆ ಬಲಪಡಿಸುವ ಉದ್ದೇಶವನ್ನು  ಹೊಂದಿರುವ ಅಭಿಯಾನ ರೂಪಿ ಕ್ರಮಗಳನ್ನು ಒದಗಿಸುತ್ತದೆ.

 

ಮಾಹಿತಿ ಕೃಪೆ: ಸೈನ್ಸ್ ಎಕ್ಸಪ್ರೆಸ್ 

18077 ನೊಂದಾಯಿತ ಬಳಕೆದಾರರು
6933 ಸಂಪನ್ಮೂಲಗಳು