ಪಠ್ಯ ಪುಸ್ತಕವನ್ನೂ ದಾಟಿ

ಶಿಕ್ಷಣದ ಒಂದು  ಮುಖ್ಯ ಉದ್ದೇಶ ವೆಂದರೆ ಮಕ್ಕಳು ಕಲೆ, ಸಂಸ್ಕೃತಿ, ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳ ಮಹತ್ವವನ್ನು ಅರಿಯುವಂತೆ ಮಾಡುವುದು.  ಸೃಜನಶೀಲತೆ ಮತ್ತು  ಒಳ್ಳೆಯ ಗುಣಗಳನ್ನು ಮೈಗೂಡಿಸುವುದರ ಜೊತೆಗೆ ಮಕ್ಕಳ ಆರೋಗ್ಯಕರ ಬೆಳವಣಿಗೆಯಲ್ಲಿ ಪ್ರಾಥಮಿಕ ಶಿಕ್ಷಣ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ಶಿಕ್ಷಕರು ಮಕ್ಕಳು ತಮ್ಮ ಸೃಜನಶೀಲ ಪ್ರತಿಭೆಯನ್ನು ಬಳಸಿ ತಮ್ಮ ಸಹಜ ಸಾಧ್ಯತೆಗಳನ್ನುಅಭಿವೃದ್ಧಿಪಡಿಸುವಲ್ಲಿ ಮಾರ್ಗದರ್ಶಿ ಆಗಬೇಕು .ಕೈಯಿಂದ ಕೆಲಸವನ್ನು ತಮ್ಮ ವಿದ್ಯಾರ್ಥಿಗಳು ಮಾಡಬೇಕು. ಬಿಲ್ಡಿಂಗ್ ಬ್ಲಾಕ್ಸ್, ಮಣ್ಣಿನ ಅಥವಾ ಮೇಣದ ಮಾದರಿ ತಯಾರಿಕೆ ಮತ್ತು ಮರಳು ಗೂಡು ಕಟ್ಟಿ ಆಡುವುದು ಇವುಗಳನ್ನು ಮಾಡಲು ಖಂಡಿತವಾಗಿಯೂ ಮಕ್ಕಳಿಗೆ ಅವಕಾಶ ನೀಡಬೇಕು.

ಶಿಕ್ಷಕರು ಮಕ್ಕಳಿಗೆ ಆಟಗಳು ಮತ್ತು ದೈಹಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಅರ್ಥ ಮಾಡಿಸಬೇಕು.ಏಕೆಂದರೆ ಅವು ಏರೋಬಿಕ್ ಚಟುವಟಿಕೆ ಮತ್ತು ಆರೋಗ್ಯ ಸುಧಾರಣೆ ಮಾತ್ರವೇ ಅಲ್ಲ, ಮಕ್ಕಳು ತಂಡದ ಸದಸ್ಯರಾಗಿ  ಉತ್ಸಾಹ ಭಾವನೆ ಹೊಂದಲು ಹೊಂದಿ ಬಾಳಲು ಸಹಾಯ ಮಾಡುತ್ತವೆ.

ಏಕತಾನತೆಗೆ ಒಂದು ಚಿಕಿತ್ಸೆ: ಇಂದಿನ ಸಂದರ್ಭದಲ್ಲಿ, ಪಠ್ಯೇತರ ಚಟುವಟಿಕೆಗಳು ಕೇವಲ ಬೌದ್ಧಿಕ ಪರಿಧಿಯನ್ನು ವಿಸ್ತರಿಸು ವುದಷ್ಟೇ ಅಲ್ಲ, ಒತ್ತಡದ ಪಠ್ಯಕ್ರಮದ ಏಕತಾನತೆಯನ್ನು  ಮಕ್ಕಳಿಗೆ ನಿವಾರಿಸುವಲ್ಲಿ ಸಹಾಯ ಮಾಡುತ್ತವೆ. ಮಕ್ಕಳು ಹೋಂವರ್ಕ್, ಮನೆಪಾಠ ಮತ್ತು ಕೋಚಿಂಗ್ ತರಗತಿಗಳಲ್ಲಿ ನಿರತರಾಗಿರುವ ಕಾರಣ ಮನೆಯಲ್ಲಿ ತಮ್ಮದೇ ಒಂದು ಹವ್ಯಾಸ ಮುಂದುವರಿಸಿಕೊಂಡುಹೋಗಲು ಸಮಯವೇ ದೊರಕುವುದಿಲ್ಲ. ಹೀಗಾಗಿ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಸಮಯ ವಿನಿಯೋಗಿಸಲು ಅವರಿಗೆ ಸಹಾಯ ಮಾಡಬೇಕು.

ಈ ಅಭ್ಯಾಸಗಳು ನಿಮ್ಮ ವಿದ್ಯಾರ್ಥಿಗಳಲ್ಲಿ ಉತ್ತಮ ಕಲಾವಿದರು, ಬರಹಗಾರರು ಅಥವಾ ಕ್ರೀಡಾಪಟುಗಳನ್ನು ಗುರುತಿಸಲು ಮತ್ತು ಅವರಿಗೆ ವೃತ್ತಿ ಆಯ್ಕೆಯ ಮಾರ್ಗದರ್ಶನ ಮಾಡುವ ಸಮಯದಲ್ಲಿ ಅಮೂಲ್ಯಮಾಹಿತಿ ಆಗಬಹುದು.

ಇಂತಹ ಚಟುವಟಿಕೆಗಳನ್ನು ಬಿಡುವಿರದ ಪಠ್ಯಕ್ರಮ ನಡುವೆ ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು  ಇವಕ್ಕೆ ಸಮಯ ಕಂಡುಕೊಳ್ಳುವಂತೆ ಶಾಲೆಗಳಲ್ಲಿ ಕಡ್ಡಾಯ ಮಾಡಬೇಕಾಗುತ್ತದೆ.

ಪಠ್ಯೇತರ ಚಟುವಟಿಕೆಗಳು ಒಂದು ಮಗುವಿನ ಸಂವಹನ ಕೌಶಲ್ಯಗಳನ್ನು ಉತ್ತಮಗೊಳಿಸುವುದಲ್ಲದೆ ಆತನ ಆತ್ಮ ವಿಶ್ವಾಸ ಉತ್ತೇಜಿಸುತ್ತವೆ ಮತ್ತು ಆತನ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ಕೊಡುಗೆ  ನೀಡುತ್ತವೆ.

ನಾವು ಇಲ್ಲಿ ಶಿಕ್ಷಕರು  ಶಾಲಾ ಆವರಣದಲ್ಲಿಯೇ, ತಮ್ಮ ವಿದ್ಯಾರ್ಥಿಗಳಿಂದ ಮಾಡಿಸ ಬಹುದಾದ  ಕೆಲವು ಚಟುವಟಿಕೆಗಳನ್ನು ಕೊಡುತ್ತಿದ್ದೇವೆ.

ಆತ್ಮ ತೃಪ್ತಿಗೆ : ಗಾಯನ , ವಾದ್ಯ ಸಂಗೀತ, ಶಾಸ್ತ್ರೀಯ, ಅಥವಾ ಲಘು ಸಂಗೀತ ಚಿಕಿತ್ಸಕ ಮೌಲ್ಯವನ್ನು ಹೊಂದಿವೆ. ಇವು ಒತ್ತಡ ನಿವಾರಿಸುವ ಸಾಧನ ಎನ್ನುತ್ತಾರೆ.

ಆದ್ದರಿಂದ ಮಕ್ಕಳಿಗೆ ಬಿಡುವಿನ ಸಮಯದಲ್ಲಿ ಹಾಡಲು ಪ್ರೋತ್ಸಾಹಿಸಿ . ನಿಯಮಿತವಾಗಿ ಅಂತಾಕ್ಷರಿ ಅಥವಾ ಹಾಡಿನ ಬಂಡಿ ರೀತಿಯ ಸಂಗೀತ ಆಟಗಳು ನಡೆಸಲು ಸಮಯ ತೆಗೆದುಕೊಳ್ಳಬಹುದು. ಮಕ್ಕಳ ಮೋಜನ್ನು ಪಡೆಯುವುದೇ ಅಲ್ಲದೇ ಮುಖ್ಯವಾಗಿ, ಒತ್ತಡ ಮುಕ್ತರಾಗುತ್ತಾರೆ.

 ತಾಳಕ್ಕೆ ತಕ್ಕಂತೆ ಕುಣಿತ : ನೃತ್ಯ ಒತ್ತಡ ನಿವಾರಕ. ವಾಸ್ತವವಾಗಿ, ನೃತ್ಯ ಎಲ್ಲಾ ಬಂಧಿಸಿಟ್ಟ ಭಾವನೆಗಳು ಮತ್ತು ಭಾವನೆಗಳನ್ನು ಹೊರಹಾಕಿ ಭಾವ ಪರಿಶೋಧನೆ ಮಾಡುತ್ತದೆ.ತನ್ಮೂಲಕ ದೇಹ ಮತ್ತು ಮನಸ್ಸು ಚೈತನ್ಯ ಪೂರ್ಣ ವಾಗಿಸುತ್ತದೆ, ಆದ್ದರಿಂದ ಮಕ್ಕಳು ತಮ್ಮ ಒಳ ಒತ್ತಡ ಮತ್ತು ಹಿಂಜರಿಕೆ ನೀಗಿಸಿಕೊಳ್ಳಲು ಶಾಲೆಯಲ್ಲಿ 'ಮುಕ್ತ ಶೈಲಿ' ನೃತ್ಯ ಸ್ಪರ್ಧೆಗಳನ್ನು  ನಡೆಸಲು ಅವಕಾಶ ಮಾಡಿಕೊಡಿ. ಪರ್ಯಾಯವಾಗಿ ದೈನಂದಿನ ವಿದ್ಯಾರ್ಥಿಗಳು ಒಂದು ಹತ್ತು ನಿಮಿಷ ನರ್ತನ ಮಾಡಲು ಏರ್ಪಾಡು ಮಾಡಿ, ಇಲ್ಲಿ ಮಕ್ಕಳು ಮನಪೂರ್ತಿಯಾಗಿ ಕುಣಿದು ಕುಪ್ಪಳಿಸಲಿ.

ಬಣ್ಣ  ಬಳಿಯುವಾಟದ ಚಿಕಿತ್ಸೆ: ನಾಚಿಕೆ ಮತ್ತು ಹಿಂಜರಿಕೆ ಸ್ವಭಾವದ ಮಕ್ಕಳು ಕ್ಯಾನ್ವಾಸ್ ಮೇಲೆ   ಉತ್ತಮ ಅಭಿವ್ಯಕ್ತಿ ಮಾಡಬಲ್ಲರು. ನಿಮ್ಮ ವಿದ್ಯಾರ್ಥಿಗಳು ತಮ್ಮ ಕಲ್ಪನೆಯ ಚಿತ್ರ ಬರೆದು ಬಣ್ಣ ಹಾಕಲು  ಪ್ರೋತ್ಸಾಹಿಸಿ. ಆರಂಭದಲ್ಲಿ ಪತ್ರಿಕೆಗಳ ಹಲವು ಕಾರ್ಟೂನ್ಗಳಿಗೆ ಬಣ್ಣ ಹಾಕಲು ತಿಳಿಸಿ.

 ಕುಶಲ ಕಲೆ ಮೂಲಕ ಪರಿಹಾರ: ಕೆಲವು ಮಕ್ಕಳು ಹೊಲಿಗೆ ಮತ್ತು ಕಸೂತಿ ಬಗ್ಗೆ ಆಸಕ್ತಿ ತೋರಿಸಬಹುದು. ಕನಿಷ್ಠ ವಾರದಲ್ಲಿ ಒಮ್ಮೆ ಹೊಲಿಗೆ ತರಗತಿಗಳನ್ನು ಏರ್ಪಡಿಸಿರಿ ಬಟನ್ ಹಾಕುವುದು, ಹೆಮ್ಮಿಂಗ್ ಮತ್ತು ಟ್ಯಾಕಿಂಗ್ ಇವುಗಳ ಬುನಾದಿ ಕೌಶಲ್ಯ ಕಲಿಸಿರಿ.

ಬಣ್ಣದ ಕಾಗದದ ಬಳಸಿ, ಹೂಗಳು  ಮತ್ತಿತರ ವಸ್ತುಗಳನ್ನು ಮಾಡಲು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿರಿ.

ಜೇಡಿ ಮಣ್ಣಿನ ಆಕಾರ ಮಾಡಿ ವಿವಿಧ ವಸ್ತುಗಳನ್ನು ತಯಾರಿಸುವುದು ಕುತೂಹಲಕಾರಿ ಅನುಭವ ಆಗುತ್ತದೆ. ಮಕ್ಕಳು ಕೈಯ್ಯಾರೆ ಕುಡಿಕೆಗಳು ಮತ್ತು ಆಕಾರಗಳನ್ನು ಮಾಡಿ ಅವುಗಳಿಗೆ ಬಣ್ಣಹಚ್ಚಲಿ.

ತಂತಿಗಳಿಂದ ಬುಟ್ಟಿಗಳು ಮತ್ತು ಹೂದಾನಿಗಳನ್ನು  ಹೆಣೆಯಲು ಮಕ್ಕಳಿಗೆ ಕಲಿಸಿರಿ.

ಶಾಲಾ ಆವರಣದಲ್ಲಿ ಸಣ್ಣ ಪ್ರದರ್ಶನ ನಡೆಸಿ ತಮ್ಮ ಕೃತಿಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಡಿ.

ಸಾಹಿತ್ಯ ಅಭ್ಯಾಸಗಳು: ಸಾಂಪ್ರದಾಯಿಕ ಮಾರ್ಗವನ್ನು ಬಿಟ್ಟು  ನಿಮ್ಮ ವಿದ್ಯಾರ್ಥಿಗಳು ತರಗತಿಯಲ್ಲಿ ಕಾವ್ಯ ಮತ್ತು ಸೃಜನಶೀಲ ಗದ್ಯ ಬರೆಯಲು ಪ್ರೋತ್ಸಾಹಿಸಿರಿ. ಅವರ ಸಾಮಾನ್ಯ ಜ್ಞಾನ ಚುರುಕು ಗೊಳಿಸಲು ನಿಯಮಿತವಾಗಿ ರಸಪ್ರಶ್ನೆ ಕಾರ್ಯಕ್ರಮಗಳನ್ನು ಏರ್ಪಡಿಸಿ.

ರಂಗ ತಾಲೀಮು: ನಾಟಕಗಳು ಮತ್ತು ಸ್ಕಿಟ್ಸ್ ಆಯೋಜಿಸಿ ಮತ್ತು ಮಕ್ಕಳು ಅದರಲ್ಲಿ ನಟಿಸಲು ಪ್ರೋತ್ಸಾಹಿಸಿರಿ. ರಂಗದ ನಟರಷ್ಟೇ ಅಲ್ಲ ನೃತ್ಯ, ವೇಷಭೂಷಣ ಡಿಸೈನರ್ ಇತ್ಯಾದಿ ತೆರೆಮರೆಯ ತಜ್ಞರು  ನಿಮಗೆ ದೊರಕುತ್ತಾರೆ. ನೀವು ಮಕ್ಕಳು ತಮ್ಮದೇ ನಾಟಕ ಸಂಭಾಷಣೆ ಬರೆಯಲು ಪ್ರೋತ್ಸಾಹಿಸಿ ಮತ್ತು ಅವರ ನಾಟಕಗಳನ್ನು ಪ್ರದರ್ಶಿಸಲು ಸಹಾಯ ಮಾಡಿ.

ಅಥ್ಲೆಟಿಕ್ಸ್ - ಹುರುಪು ಉತ್ಸಾಹಕ್ಕೆ ಟಾನಿಕ್: ಕ್ರೀಡೆ ಮನರಂಜನೆಯ ಮೂಲ ಮತ್ತು ಸರ್ವಾಂಗೀಣ  ಆರೋಗ್ಯ ಮತ್ತು ಹುರುಪು ಉತ್ಸಾಹಕ್ಕೆ ಟಾನಿಕ್ ಆಗಿದೆ. ಮಕ್ಕಳು ಓಟದ ಸ್ಪರ್ಧೆ, ಫುಟ್ಬಾಲ್, ಬ್ಯಾಡ್ಮಿಂಟನ್ ಇತ್ಯಾದಿ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿ.

 

 ನೀವು ನಿಮ್ಮಎಲ್ಲಾ  ವಿದ್ಯಾರ್ಥಿಗಳಿಗೆ ಸಮಾನವಾಗಿ ಭಾಗವಹಿಸಲು ಪ್ರೋತ್ಸಾಹಿಸುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲಿನ ಉದ್ದೇಶಅವರ ತಡೆಗಳನ್ನು ಸೋಲಿಸಿ ತಮ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುವುದು. 

ಈ ಲೇಖನವು ಮೊದಲು ಟೀಚರ್ ಪ್ಲಸ್ ಸಂಚಿಕೆ ಸಂ..66, ಮೇ-ಜೂನ್ 2000 ರಲ್ಲಿ ಪ್ರಕಟವಾಗಿದೆ ಮತ್ತು  ಅದನ್ನು ಸ್ವಲ್ಪ ಬದಲಾವಣೆಯೊಂದಿಗೆ ಕನ್ನಡಕ್ಕೆ ಅನುವಾದಿಸಿ ಕೊಡಲಾಗಿದೆ.   

 

18331 ನೊಂದಾಯಿತ ಬಳಕೆದಾರರು
7152 ಸಂಪನ್ಮೂಲಗಳು