ನೀವು ಒಂದು ಒಳ್ಳೆಯ ಕಥೆಯನ್ನು ಹೇಳಬಲ್ಲಿರಾ?

ಕಥೆಗಳು ಮತ್ತು ಕಥೆಗಳನ್ನು ಕೇಳುವ ಅಭ್ಯಾಸವು ನಮ್ಮ ಜೀವನ ಮತ್ತು ಸಮಾಜದಿಂದ ನಿಧಾನವಾಗಿ ಕಣ್ಮರೆಯಾಗುತ್ತಿವೆಅಲ್ಲ ನಾನೇಕೆ ನಿಧಾನವಾಗಿ ಎಂದು ಹೇಳುತ್ತಿದ್ದೇನೆನಾವು ಸುತ್ತಲೂ ತಿರುಗಿ ನೋಡಿದರೆಇದು ಹಿಂದೆಂದಿಗಿಂತಲೂ ವೇಗವಾಗಿ ಕಳೆದುಹೋಗುತ್ತಿದೆ ಎಂದು ನಾವು ತೀರ್ಮಾನಿಸಬಹುದುಎಂಥಾ ವೇಗವೆಂದರೆ ನಾವು  ಶೀಘ್ರದಲ್ಲೇ ಕಥೆಗಳೇ ಇಲ್ಲದವರಾಗಿಬಿಡುತ್ತೇವೆ.ಯಾವ ಸಮಾಜದಲ್ಲಿ ಹಂಚಿಕೊಳ್ಳಲು ಕಥೆಗಳೇ ಇಲ್ಲವೋ  ಆ ಸಮಾಜಕ್ಕೆ ಯಾವುದೇ ಭರವಸೆ ಇಲ್ಲ ಎಂದು ಹೇಳುತ್ತಾರೆಎಷ್ಟು ಸತ್ಯಮತ್ತು ಖಂಡಿತವಾಗಿಯೂ ಯಾವ ಸಮಾಜವು ಹೇಳಲು ಕಥೆಗಳನ್ನು ಹೊಂದಿಲ್ಲವೋ ಅದಕ್ಕಿಂತ ಕಳಪೆಸಮಾಜ ಇನ್ನೊಂದಿಲ್ಲ ಅದುಮಕ್ಕಳಿಗೆ ಹೇಳುವ  ಕಥೆಗಳುಸಮ ವಯಸ್ಕರೊಡನೆ  ಹಂಚಿಕೊಳ್ಳ ಬಲ್ಲ ಕಥೆಗಳು ವಯಸ್ಕರ ಕಥೆಗಳು. ವಾಸ್ತವವಾಗಿ ಕಥೆಗಳು ಸಮಾಜದ ಸಂಸ್ಕೃತಿಯ ಪ್ರತೀಕವಾಗಿವೆ.

 ದುರದೃಷ್ಟವಶಾತ್ ಸಂಶೋಧನೆಗಳು  ವಿಶ್ವದಾದ್ಯಂತ ವಿದ್ಯಮಾನ ಇರುವುವನ್ನು ಖಚಿತಪಡಿಸುತ್ತವೆಕಥೆ ಹೇಳುವ ಪ್ರಕ್ರಿಯೆಯು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ತೀವ್ರವಾಗಿ ಕಡಿಮೆಯಾಗಿದೆ ಎಂದು ಅವರು ಹೇಳುತ್ತಾರೆಇನ್ನೂ ಹೇಳಬೇಕೆಂದರೆ ಅಭಿವೃದ್ಧಿ ಮುಂದುವರೆದಷ್ಟೂ ಬೆಳವಣಿಗೆಕಥೆಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಕಥೆ ಹೇಳುವ ಪ್ರಕ್ರಿಯೆ ಕಡಿಮೆಯಾಗುತ್ತದೆನಮ್ಮ ತಂದೆತಾಯಿಗಳಿಗೆ  ಗೊತ್ತಿದ್ದ ಕಥೆಗಳ ಸಂಖ್ಯೆಗೆ ಹೋಲಿಸಿದರೆನಮಗೆ ಗೊತ್ತಿರುವ ಕಥೆಗಳು ತೀರ ಕಡಿಮೆಹಿಂದಿನ ದಿನಗಳಲ್ಲಿ ನೀವು ಕಥೆಯನ್ನು ಕೇವಲ ಹೇಳಬೇಕಾಗಿತ್ತುಇಂದು ಹಾಗಲ್ಲ ಕಥೆಗಳನ್ನು ನಿರೂಪಿಸಲು ನಮಗೆ ಅನೇಕ ಮಾರ್ಗಗಳಿವೆ. ಕಥೆಗಳನ್ನು ಸೆರೆಹಿಡಿದು ದಾಖಲಿಸಿ ಮತ್ತೆ ಪ್ರದರ್ಶಿಸುವ(ಮತ್ತೆ ಆಡಿಸಿ ತೋರಿಸುವ   ಸಾಧ್ಯತೆಗಳು ಅಗಾಧವಾಗಿವೆಇತರ ಸಮುದಾಯಗಳೊಡನೆ  ಮತ್ತು ಭೌಗೋಳಿಕವಾಗಿ ದೂರದ ಜನಗಳಿಗೆ  ನಾವು ವಿಷಯಗಳನ್ನು ತಿಳಿಸುವ ವಿಧಾನವು ಬಹಳ ವಿಶಾಲವಾಗಿದೆಇದನ್ನೆಲ್ಲ  ಲೆಕ್ಕಕ್ಕೆ ತೆಗೆದುಕೊಂಡರೆಇಂದು ಸಮಾಜದಲ್ಲಿ ಕಥೆಯೋ ಕಥೆಗಳು ತುಂಬಿ ತುಳುಕಬೇಕಿತ್ತು. ಸ್ಫೋಟಿಸಿಕಥೆಗಳಿಂದ ತುಂಬಿರಬೇಕುಆದರೆವಿಷಾದದ ಸಂಗತಿಯೆಂದರೆ ಇಷ್ಟೊಂದು ನವೀನ ಯಂತ್ರೋಪಕರಣಗಳು ಒಂದರ ಮೇಲೊಂದು ಬಂದರೂಕಥೆಗಳಾಗಲಿ  ಮತ್ತು ಕಥೆಗಳನ್ನು ಹೇಳುವ ಪ್ರಕ್ರಿಯೆಯಾಗಲಿ ಅತೀವವಾಗಿ ಇಳಿಮುಖವಾಗಿಹೋಗಿವೆ.

 ಮಾತನಾಡುವುದೇನಾದರೂ ಕಡಿಮೆಯಾಗಿದೆಯೇಇಲ್ಲಇಂದು ಮಾತನಾಡುವುದು ಕಡಿಮೆಯಾಗಿಲ್ಲ ಆದರೆ ಕಥೆ ಹೇಳುವ ಅಭ್ಯಾಸ ಮತ್ತು ಹವ್ಯಾಸ ಕೆಳಗಿಳಿಯುತ್ತಿದೆಜನರು ಬಹಳಷ್ಟು ಮಾತನಾಡುತ್ತಾರೆಅನಗತ್ಯವಾಗಿ ಮಾತನಾಡುತ್ತಾರೆ ಮತ್ತು ಅನೇಕವೇಳೆ ಅವಿವೇಕದಿಂದ ಮಾತನಾಡುತ್ತಾರೆಜನರು ಮಾತನಾಡಿ ಮಾತನಾಡಿ ಇತರರನ್ನು ಬೋರ್ ಹೊಡಿಸುತ್ತಾರೆಆದ್ದರಿಂದ ಕಥೆ ಹೇಳುವುದು ಕೇವಲ ಮಾತನಾಡುವುದು ಅಲ್ಲಏನನ್ನೋ ಕಥೆ ಹೇಳುವುದಲ್ಲ .ಕಥೆ ಹೇಳುವ ಕಲೆಯಲ್ಲಿ ಒಂದು ಮೋಡಿ ಇದೆಮಾತಾಡುವವನ ಮುಂದೆ ಒಂದು ಮಾಯಾಲೋಕವೇ ತೆರೆದುಕೊಳ್ಳುತ್ತದೆ ಹಾಗೆಯೇ ಕೇಳುವವನ ಮನೋಪಟಲದಲ್ಲಿ ಮಾಯಾಲೋಕ ಮೂಡಿ ಅರಳುತ್ತದೆ. ಈ ಸರಳ ಅತಿ ಪ್ರಾಚೀನ  ಸಂವಹನ ಕಲೆಯಲ್ಲಿ ಮತ್ತು ಶಿಕ್ಷಣದಲ್ಲಿ  ಅಪಾರ ಸೃಜನಶೀಲತೆ ಅಡಗಿದೆ.

ಕಥೆ ಹೇಳುವ ಪ್ರಕ್ರಿಯೆ ಏಕೆ ಇಷ್ಟೊಂದು ಶಕ್ತಿಶಾಲಿ ಮತ್ತು ಪರಿಣಾಮಕಾರಿಯಾಗಿರುತ್ತದೆಕಥೆ ಹೇಳುವ ಮೂಲಕ ಏನನ್ನಾದರೂ ಮತ್ತು ಯಾವುದನ್ನಾದರೂ ಮನದಟ್ಟು ಮಾಡಬಹುದುಮೂಲ ಸಂಗತಿಗಳುಸೂಚನೆಗಳುಕೌಶಲ್ಯಗಳುಕಲ್ಪನೆಗಳುಪರಿಕಲ್ಪನೆಗಳುದೃಷ್ಟಿಕೋನಗಳುಧೋರಣೆಗಳು ಅನಿಸಿಕೆಗಳು ಭಾವಗಳುಭಾವನೆಗಳು - ಇವುಗಳಲ್ಲಿ ಯಾವುದನ್ನಾದರೂ ಮತ್ತು ಎಲ್ಲವನ್ನೂ ಕಥೆಯ ಮೂಲಕ ಸಂವಹನ ಮಾಡಬಹುದು.  ಎಲ್ಲಕ್ಕೂ ಮಿಗಿಲಾದ ಅಂಶವೆಂದರೆ  ಕಥೆಯನ್ನು  ಆಲಿಸುವ ಕೇಳುಗನ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಇದು ಬಹಳಷ್ಟು ವಿಷಯಗಳನ್ನು ಪ್ರಚೋದಿಸಬಲ್ಲದುಕಥೆಯನ್ನು ಕೇಳುವುದರಿಂದ ಕಲ್ಪನೆಗಳುಮಾನಸಿಕ ಚಿತ್ರಗಳು ಗರಿಗೆದರುತ್ತವೆಹೊಸ ಆಲೋಚನೆಗಳುಪರಿಕಲ್ಪನೆಗಳುಭಾವಗಳು ಮತ್ತು ಭಾವನೆಗಳು ಬೆಳೆಯುತ್ತವೆ.

ಕಥೆಹೇಳುವ ಮೂಲಕ ನೀವು ಒಬ್ಬ ವ್ಯಕ್ತಿಯನ್ನು ಅಥವಾ ಗುಂಪು ಅಥವಾ ಸಮುದಾಯ ಅಥವಾ ಒಟ್ಟಾರೆ ಜನ ಸಮೂಹವನ್ನು ಮುಟ್ಟಬಹುದು ಹೃದಯ ಸ್ಪರ್ಶಿಸಬಹುದುಕಥೆಗಳು ಪ್ರಪಂಚದಾದ್ಯಂತ ಪ್ರಯಾಣಿಸಬಲ್ಲವುಕಥೆಗಳು ಎಲ್ಲ ಎಲ್ಲೆ ಕಟ್ಟುಗಳನ್ನು ದಾಟಬಲ್ಲವು. ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬಹುದುಇದನ್ನು ವಿಭಿನ್ನ ಶ್ರೋತೃಗಳಿಗೆ ಸಂದರ್ಭೋಚಿತವಾಗಿಸಬಹುದು ಮತ್ತು ಸಂಬಂಧಿಸುವಂತೆ ಮಾಡಬಹುದುಕಥೆಯ ವಿಷಯವನ್ನು ಟ್ವೀಟ್ ಮಾಡಬಹುದುಅದರ ರೂಪವನ್ನು ಬದಲಾಯಿಸಬಹುದುಸೃಜನ ಶಕ್ತಿಯೇ ಯಾವುದೇ ಕಥೆ ಹೇಳುವ ಪ್ರಕ್ರಿಯೆಯ ಜೀವ ಜೀವಾಳ. ಜಗತ್ತಿನಾದ್ಯಂತ ಇರುವಎಲ್ಲಾ ಪ್ರದರ್ಶನಗಳು ಮೂಲಭೂತವಾಗಿ ಅಭಿವ್ಯಕ್ತಿಯ ರೂಪಗಳಾಗಿವೆಅವುಗಳಲ್ಲಿ ಬಹುಪಾಲು ಕಥಾನಿರೂಪಣೆಯ ರೂಪಗಳುಕಥೆ ಹೇಳುವ ಕಲೆಯ  ಎಲ್ಲಾ ಅಂಶಗಳು ತಿಳಿದಿದ್ದರೂ   ಶಕ್ತಿಶಾಲಿ ಮಾಧ್ಯಮವು ಇಂದು ನಮ್ಮ ಜೀವನದಲ್ಲಿ ಅದರ ಮಹತ್ವವನ್ನು ಏಕೆ ಕಳೆದುಕೊಂಡಿದೆಇದಕ್ಕೆ ನಮ್ಮ ಜೀವನ ಶೈಲಿಯು ಕಾರಣವೇನಮ್ಮ ಕೆಲಸದ ಪರಿಸ್ಥಿತಿ ಕಾರಣವೇಅದು ಏನೇ ಇರಲಿನಮ್ಮ ಜೀವನದಲ್ಲಿ ಕಥೆಯನ್ನು ಹೇಳುವ ಕಲೆಯನ್ನು ಮರಳಿ ತರಲು ನಾವು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು

.

ಇದಕ್ಕಾಗಿ ನಾವು ಏನು ಮಾಡಬಹುದು?ಇದನ್ನು  ನಾವು ಮಕ್ಕಳೊಂದಿಗೆ ಪ್ರಾರಂಭಿಸಬೇಕುನಾವು ಬಿಡುವು ಮಾಡಿಕೊಂಡು ನಮ್ಮ ಮಕ್ಕಳಿಗೆ ಕಥೆಗಳನ್ನು ಹೇಳಲು ಪ್ರಾರಂಭಿಸಬೇಕುನಾವು ಅವಕಾಶ ಕಲ್ಪಿಸಿಕೊಂಡು  ಮತ್ತು ಸಮಯವನ್ನು ಮಾಡಿಕೊಂಡು  ಈ ಕೆಲಸವನ್ನು ಮಾಡಬೇಕು. ಬೆಳಿಗ್ಗೆ ಅಥವಾ ಸಂಜೆಯಲ್ಲಿ ಲ್ಲಿ ವಾರಾಂತ್ಯಅಥವಾ ರಜಾದಿನಗಳಲ್ಲಿನಾವು ಕಥೆ ಹೇಳುವುದಕ್ಕೇ ಒಂದು ಸಮಯವನ್ನು ನಿಗದಿ ಮಾಡಿಕೊಳ್ಳಬೇಕುನಮ್ಮ ಮಕ್ಕಳಿಗೆ ಪ್ರತಿ ಮಗುವಿಗೂ ಕಥೆಗಳನ್ನು ಹೇಳುವ ಅಭ್ಯಾಸವನ್ನು ನಾವು ಬೆಳೆಸಿಕೊಳ್ಳಬೇಕುಇದು  ನೀವು ನಮ್ಮ ಮಗುವಿನೊಂದಿಗೆ ಬಂಧವನ್ನು ಬೆಳಸಿಕೊಳ್ಳಲು ಉತ್ತಮ ಅವಕಾಶನಮ್ಮ ಮಕ್ಕಳ ಜೊತೆಗೆಗಾಢವಾದ ಸಂಬಂಧವನ್ನು ಬೆಳೆಸುವುದು ಸಾಧ್ಯವಾಗುತ್ತದೆನಮ್ಮಲ್ಲಿ  ಪ್ರತಿಯೊಬ್ಬರೂ ಕಥೆಯನ್ನು ನಮ್ಮ ಮಕ್ಕಳಿಗೆ ಮತ್ತು ಇತರ ಮಕ್ಕಳಿಗೂ ಹೇಳಬೇಕುನಾವು ಯಾವುದೇ ಮಗುವಿಗೂ ಪ್ರತ್ಯೇಕವಾಗಿಗುಂಪುಗಳಲ್ಲಿ ಮತ್ತು ಇಡೀ ಸಮೂಹಕ್ಕೆ ಕಥೆಗಳನ್ನು ಹೇಳಲು ಸಮರ್ಥರಾಗಬೇಕು!. 

ಮನೆಯಲ್ಲಿಶಾಲೆಯಲ್ಲಿಬೀದಿಗಳಲ್ಲಿಮತ್ತು ಯಾವುದೇ ಇತರ ಸ್ಥಳಗಳಲ್ಲಿ ಕಥೆಗಳನ್ನು ಹೇಳಲು ಸಮರ್ಥರಾಗಬೇಕು. ಇದಕ್ಕಾಗಿ ನಾವು ಇತರರಿಂದ ಕಥೆಗಳನ್ನು ಕೇಳಬೇಕುಪುಸ್ತಕಗಳಿಂದ ಕಥೆಗಳನ್ನು ಓದಬೇಕುಕಥೆಗಳ ವಿನಿಮಯ ಮಾಡಿಕೊಳ್ಳ ಬೇಕುಇದು ಈ   ಕೆಲಸದ ಕೇವಲ ಒಂದು ಭಾಗಇನ್ನೊಂದು ಭಾಗವೆಂದರೆ ಮಗುವಿನ ಕಥೆಯನ್ನು ಕೇಳುವುದುನಾವು ಮಕ್ಕಳು ಹೇಳುವುದನ್ನು ಕೇಳುವುದು ಬಹಳ ವಿರಳ  ಮಗುವಿಗೆ  ಅದು ಮಾತಾಡುವುದನ್ನು  ಗಮನವಿಟ್ಟು ಕೇಳುವವರ ಅಗತ್ಯವಿದೆನಾವು ಮಗು ಮಾತನಾಡುವಾಗ ಇನ್ನೇನೋ ಮಾಡುತ್ತ ಅದರ ಮಾತು  ಕೇಳಿಸಿಕೊಳ್ಳುತ್ತೇವೆಒಂದೇ ಕಾಲದಲ್ಲಿ ಎರಡು ಮೂರು ಕೆಲಸಇದನ್ನು ನಾವು ಗಮನವಿಟ್ಟು  ಕೇಳುವುದು ಎಂದು ಹೇಳಲಾಗುವುದಿಲ್ಲ.    ಮತ್ತು ಮಗುವಿಗೆ ಇದು ಚೆನ್ನಾಗಿ ತಿಳಿದಿದೆಮಕ್ಕಳು ಇದನ್ನು ಗಮನಿಸುತ್ತಾರೆ ಮತ್ತು ಇತ್ತ  ಗಮನ ಕೊಡು ಎಂದು  ಕೇಳಿಕೊಳ್ಳುತ್ತವೆ.   ನಾವು ಗಮನವಿಟ್ಟು ಕೇಳದೆ ಹೋದರೆನಾವು ಮಗುವಿಗೆ ಸೂಕ್ಷ್ಮಸಂವೇದಿಯಾಗಿರುವುದಿಲ್ಲಮಗು ಕಥೆ ಹೇಳುವ ಆಸಕ್ತಿಯನ್ನು ಕಳೆದುಕೊಳ್ಳುತ್ತದೆ ಮತ್ತು ನಮಗೆ ಅದರ ಕಥೆಯನ್ನು ಹೇಳುವುದನ್ನು ನಿಲ್ಲಿಸುತ್ತದೆ ಮತ್ತು ಹೀಗೆ ನಮ್ಮ ಜೊತೆ ಮಾತುಕತೆಯನ್ನೇ ನಿಲ್ಲಿಸುತ್ತದೆಆದ್ದರಿಂದಕಥೆ ಹೇಳುವ ಸಂಸ್ಕೃತಿಯನ್ನು ಬೆಳಸುವುದು ಮಗುವಿನ ಬೆಳವಣಿಗೆಗೆ ಮತ್ತು ಸ್ವಾಸ್ಥ್ಯಕ್ಕೆ ಅತ್ಯಗತ್ಯವಾಗಿದೆ.   ಶಾಲೆಗಳಲ್ಲಿನಾವು ಔಪಚಾರಿಕವಾಗಿ ಮತ್ತು ಅನೌಪಚಾರಿಕವಾಗಿ ಕಥೆ ಹೇಳುವ ಅವಕಾಶಗಳನ್ನು  ಕಲ್ಪಿಸಬೇಕು ಇದು ಸ್ಪರ್ಧೆಆಗಬಾರದು ಭಯವುಂಟುಮಾಡದ ,  ಸಂಕೋಚವಿಲ್ಲದೆ ಆನಂದಿಸುತ್ತಾ ಕಥೆ ಹೇಳುವ ಅವಕಾಶಗಳನ್ನು ಕಲ್ಪಿಸಬೇಕು

ಶಾಲೆಗಳಲ್ಲಿ ಕಥೆ ಹೇಳುವ ಸಂಸ್ಕೃತಿಯನ್ನು ನಾವು ಬೆಳೆಸಿಕೊಳ್ಳಬೇಕುಶಿಕ್ಷಕರು ಮತ್ತು ಪೋಷಕರಿಗಾಗಿಯೂ ನಾವು  ಸದವಕಾಶಗಳನ್ನು ರಚಿಸಬೇಕು.ಮಕ್ಕಳಿಗೆ ಕಥೆ ಹೇಳಿ ಈ ಪ್ರಕ್ರಿಯೆಯನ್ನು ನಾವು ಮರುಪ್ರಾರಂಭಿಸಬೇಕಾಗಿದೆ ಮತ್ತು ಹದಿಹರೆಯದವರು, ಯುವಕರು, ಹಿರಿಯರು ಮತ್ತು ವಯಸ್ಸಾದ ಜನರಿಗೆ ಸೂಕ್ತ ಅವಕಾಶಗಳನ್ನುಕಲ್ಪಿಸಿ ಮತ್ತು ಕಥೆ ಹೇಳುವ ಸಂಸ್ಕೃತಿಯನ್ನು ರಚಿಸಬೇಕಾಗಿದೆ.  ನನಗಿನ್ನೂ ನೆನಪಿದೆ ನನ್ನ ಅಜ್ಜ ಹೇಳಿದ ಕಥೆ. ರಾಜನೊಬ್ಬ ಯುದ್ಧದಲ್ಲಿ ಸೋತು ಖಿನ್ನನಾಗಿರುತ್ತಾನೆ  ಮತ್ತು  ಈ ಹತಾಶ ಪರಿಸ್ಥಿತಿಯಲ್ಲಿ ಓರ್ವ ಮುದುಕಮ್ಮನು ಕಥೆಯೊಂದನ್ನು ಹೇಳಿ  ಅವನನ್ನು ಹುರಿದುಂಬಿಸುತ್ತಾಳೆ. ಆದೇ ಭರವಸೆಯ ಕಥೆ. 

ಕನ್ನಡಾನುವಾದ :ಜೈಕುಮಾರ್ ಮರಿಯಪ್ಪ

18798 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು