"ನಿನ್ನ ಜೀವಕ್ಕಾದರೂ ಜೀವ ಸಂಕುಲ ಉಳಿಸು ಮಾನವ !"

"ನಿನ್ನ ಜೀವಕ್ಕಾದರೂ ಜೀವ ಸಂಕುಲ ಉಳಿಸು ಮಾನವ !"
- ಗಿರಿಧರ ವೈದ್ಯ

ನಾನು ಆಲೋಚನೆ ಮಾಡುತ್ತಾ ಇದ್ದೆ. ಮಳೆ ಬಂದು ನಿಂತಾಗ ಮಳೆ ಹುಳುಗಳು ಎ? ಬಂದು ಬಿಟ್ಟವು, ಗೊತ್ತಾಗಲಿಲ್ಲಾ? ಎಂದು. ಅವು ಎ? ಬೇಗ ಹುಟ್ಟುತ್ತ್ವೆ, ಅಷ್ಟುಬೇಗ ಸಾಯುತ್ತವೆ. ಆದರೂ ಅವುಗಳು ಸತ್ತು ಮಣ್ಣಲ್ಲಿ ಮಣ್ಣಾಗಿ ಗೊಬ್ಬರವಾಗುತ್ತವೆ. ಕೀಟಗಳು ಕೂಡ ಹುಟ್ಟೋದು ಸಾಯೋದು ಮುಖ್ಯವಾಗಿದೆ ಪರಿಸರಕ್ಕೆ. ಆದರೆ ಕೀಟಗಳನ್ನು ಸಾಯಿಸಲಿಕ್ಕೆ ಹೋಗಿ ಮನುಷ್ಯ. ತಾನೂ ಕೂಡ ವಿಕುಡಿತಾ ಇದಾನೆ ಅನ್ನೋದು ಗೋತ್ತಾಗುತ್ತಾ ಇಲ್ಲ. ಮೊನ್ನೆ ದಿನಪತ್ರಿಕೆ ಓದುತ್ತಾ ಇದ್ದೆ ಬಿಳಗಿ ತಾಲ್ಲೂಕಿನ ಆಲಿಮಟ್ಟಿ ಡ್ಯಾಮಲ್ಲಿ ನೀರು ಕಡಿಮೆ ಆಗಿದ್ದರಿಂದ ಒಂದು ಮೊಸಳೆ ಒದ್ದಾಡುತ್ತಾ ಇತ್ತು. ಗ್ರಾಮಸ್ಥರು ನೋಡಿ ಅದನ್ನು ಅರಣ್ಯ ಇಲಾಖೆಗೆ ತಿಳಿಸಿ ಅದರ ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಮೊಸಳೆಗೆ ನೀರು ಇಲ್ಲದಾಗಿ ಮಾಡಿದವರು ಯಾರು? ಜನರಿಗೆ ಸರಕಾರ ಡ್ಯಾಮ್ ತುಂಬಿದರೆ ಹಳ್ಳಿಗಳು ಮುಳುಗುತ್ತವೆ ಎಂದು ಪುನರ ವಸತಿ ಕೊಟ್ಟರೂ ಹೋಗದೆ, ಡ್ಯಾಮಲ್ಲಿ ನೀರು ಕಡಿಮೆಯಾದಾಗ ನದಿ ಫಲವತ್ತತೆ ಭೂಮಿ ಕಾಣುತ್ತದೆ. ಅದರಲ್ಲಿ ಉಳುಮೆ ಮಾಡಲು ಶುರುಮಾಡಿದರೆ, ಜಲಚರಗಳಿಗೆ ಇದ್ದ ನೀರನ್ನು ಕೂಡ ಬಳಸಿದರೆ ಮೊಸಳೆ ಏನು ಮಾಡಬೇಕು?

ಇನ್ನು ಹಳ್ಳಿಗಳಿಗೆ ಬಂದರೆ ಕೆರೆಗಳನ್ನು ತೆಗೆದು ಗದ್ದೆ, ಹೊಲಗಳನ್ನು ಮಾಡಿದ್ದೇವೆ. ಸಾಕು ಪ್ರಾಣಿ ,ಕಾಡು ಪ್ರಾಣಿಗಳು,ಪಕ್ಷಿಗಳು ಬೇಸಿಗೆಯಲ್ಲಿ ನೀರು ಕುಡಿಯಲು ಎಲ್ಲಿಗೆ ಹೋಗಬೇಕು ? ನಮ್ಮ ಹಿರಿಯರು ಕೆರೆಯಲ್ಲಿ ನೀರು ತುಂಬಿ, ಹೊಂಡು ತುಂಬಿದಾಗ ಕೆಲವು ವರ್ಷಗಳಾದ ಮೇಲೆ
ಅದರ ಹೊಂಡು ಹೊಲಗಳಿಗೆ ಹಾಕಿ ಫಲವತ್ತತೆ ಹೆಚ್ಚಿಸುತ್ತಾ ಇದ್ದರು. ಕೆರೆಗಳು ಇಲ್ಲದಕ್ಕಾಗಿ ಪ್ರಾಣಿ, ಪಕ್ಷಿ ಮತ್ತು ಮನುಷ್ಯನಿಗೂ ನೀರು ಇಲ್ಲದಾಗಿದೆ. ಯಾವ ರಾಸಯನಿಕ ಗೊಬ್ಬರ ಇದನ್ನು ಸೃಷ್ಟಿಸಲು ಸಾಧ್ಯವೇ ?

ಸರಕಾರಗಳು, ಸಮುದಾಯಗಳು ಆಲೋಚಿಸಬೇಕು. ಕೆರೆಗಳು, ಗುಡ್ಡಗಳು ಮತ್ತು ಕಾಡುಗಳು ಎಷ್ಟು ಮುಖ್ಯವಾಗಿವೆ ಎಂದು. ಇವುಗಳನ್ನು ಉಳಿಸುವ ಪ್ರಯತ್ನ ನಾವು ಮಾಡಿದರೆ "ನಮ್ಮ ಜೀವ ಸಂಕುಲ ಉಳಿಸಿ ನಾವು ಚೆನ್ನಾಗಿ ಬದುಕಲಿಕ್ಕೆ ಸಾಧ್ಯವಾಗಬಹುದು".

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು