ನಿಧಾನ ಕಲಿಯುವವರೋ ಅಥವಾ ವಿಭಿನ್ನವಾಗಿ ಕಲಿಯುವವರೋ- ಶಿಮ್ಮಿ ಶರ್ಮಾ

ನಿಧಾನ ಕಲಿಕೆ ಎಂಬುದು ವಿದ್ಯಾರ್ಥಿಗಳ ಕಲಿಕೆಯ ವಿಭಿನ್ನ ಶೈಲಿ ಅಷ್ಟೆ. ನಿಧಾನವಾದರೂ ನಿಶ್ಚಯ ನಿರತವಾಗಿ ಓಡಿದರೆ ಸ್ಫರ್ಧೆ ಗೆಲ್ಲುವುದು ಖಂಡಿತ ಎಂಬ ಗಾದೆ ಮಾತು ಕೇಳಿಲ್ಲವೆ? ಈ ಲೇಖನದಲ್ಲಿ ನಿಧಾನವಾದರೂ ನಿಶ್ಚಯ ನಿರತ ಕಲಿಕೆ ಬಗ್ಗೆ  ವಿಚಾರ ಮಾಡೋಣ.

ನಾನು ಬೇರೆ ರೀತಿ ಕಲಿಯುತ್ತೇನೆ ಆದರೆ ಕಲಿಯದೇ ಬಿಡುವುದಿಲ್ಲ !
ನಿಧಾನವಾಗಿ ಕಲಿಯುವ ವಿದ್ಯಾರ್ಥಿಯೊಂದಿಗೆ ವ್ಯವಹರಿಸುವಾಗ, ತಾಳ್ಮೆ ಮತ್ತು ಸಹಾನುಭೂತಿಗಳು ತಪ್ಪದೇ  ನೆನಪಿನಲ್ಲಿಟ್ಟುಕೊಳ್ಳಬೇಕಾದ ಪ್ರಮುಖ ಗುಣಗಳು.  ಆ ಮಕ್ಕಳ ಬಗ್ಗೆ ನಾಚಿಕೆಪಡುವ ಬದಲು, ಶಾಲಾ ನಾಯಕರು, ಶಿಕ್ಷಕರು ಮತ್ತು ಪೋಷಕರು ಆ ಮಕ್ಕಳು ತಮ್ಮ ನಿಜವಾದ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡಬೇಕು. ಒಡನಾಡಿ ಕಲಿಯುವವರು ಮತ್ತು ಬೋಧಕರಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ನೆರವು ನೀಡುವುದಾದರೆ, ನಾವು ಶೈಕ್ಷಣಿಕ ವ್ಯವಸ್ಥೆಯಲ್ಲಿ ನಮ್ಮ ನಿಲುವನ್ನು ಕುರಿತು ಪುನರ್ವಿಮರ್ಶಿಸಬೇಕು. ಎಲ್ಲ ಮಕ್ಕಳೂ ಒಂದೇ ರೀತಿಯಲ್ಲಿ ಅಥವಾ ಒಂದೇ ವೇಗದಲ್ಲಿ ಕಲಿಯುವುದಿಲ್ಲ. ಒಂದೇ ಕ್ಷೇತ್ರದಲ್ಲಿ ಎಲ್ಲ ಮಕ್ಕಳೂ ಉತ್ಕೃಷ್ಟವಾಗಿರುವುದಿಲ್ಲ; ಕೆಲವರು ಓದುವುದರಲ್ಲಿ  ಮುಂದು ಮತ್ತು ಕೆಲವರು ಲೆಕ್ಕದಲ್ಲಿ ಮುಂದು.ಹಾಗೆಂದಾಕ್ಷಣ ಇದು ಒಂದು ಮಗು ಇನ್ನೊಬ್ಬನಿಗಿಂತ ಜಾಣನೆಂದು ಮಾಡುತ್ತದೆಯೇ? ಖಂಡಿತವಾಗಿಯೂ ಇಲ್ಲ!

ಅಂತಹ ಮಕ್ಕಳ ಬಗ್ಗೆ ಇವರಿಂದ ಏನೂ  ಸಾಧ್ಯವಿಲ್ಲ ಎಂದು ಆಜೀವ ಹಣೆಪಟ್ಟಿ ಲಗತ್ತಿಸುವವರಿದ್ದಾರೆ. ಮತ್ತೊಂದೆಡೆ, ನಿಧಾನ ಕಲಿಯುವವರು ವಾಡಿಕೆಯ ಶಾಲೆಗಳ ಒಂದು ಭಾಗವಾಗಿರುತ್ತಾರೆ, ಆದ್ದರಿಂದ ಅವರು ದೈಹಿಕವಾಗಿ ಅಥವಾ ಮಾನಸಿಕವಾಗಿ ನ್ಯೂನತೆ ಹೊಂದಿಲ್ಲವೆಂಬುದು ಸಾಬೀತಾಗುತ್ತದೆ . ಅವರ ತೊಂದರೆ ಏನಿದ್ದರೂ ಕಲಿಯುವ ವೇಗದಲ್ಲಿ ನಿಧಾನಗತಿ ಮಾತ್ರ. ಅವರ ಏಕೈಕ ಸಮಸ್ಯೆ ಏನೆಂದರೆ ಅವರು ತಮ್ಮ ಸಹಪಾಠಿಗಳಿಗೆ ಹೋಲಿಸಿದರೆ ಪರಿಕಲ್ಪನೆಗಳನ್ನು ನಿಧಾನವಾಗಿ ಕಲಿಯುತ್ತಾರೆ ಮತ್ತು ಬೆಳವಣಿಗೆಯ ಮೈಲಿಗಲ್ಲುಗಳನ್ನು ನಿಧಾನ ವೇಗದಲ್ಲಿ ಸಾಧಿಸುತ್ತಾರೆ.

ಹಾಗೆಯೇ, ಕೆಲವೊಂದು ಮಕ್ಕಳು ನಿಧಾನವಾಗಿ ಪ್ರೌಢರಾಗುವ ಮತ್ತು ನಿಧಾನವಾಗಿ ಸೂಕ್ಷ್ಮ ಹಾಗು ಒಟ್ಟಾರೆ ಸ್ನಾಯು ಚಲನೆ ಕೌಶಲ್ಯಗಳನ್ನು ಮತ್ತು ನಿಧಾನವಾಗಿ ವಿಷಯಗ್ರಹಣೆ  ಮತ್ತು ನೆನಪಲ್ಲಿ ಇಟ್ಟುಕೊಳ್ಳುವ ಶಕ್ತಿ ಕೌಶಲ್ಯಗಳನ್ನು ಗಳಿಸುವ ಸಂದರ್ಭಗಳಿವೆ. ಅನೇಕ ಬಾರಿ ಇಂಥ ಮಕ್ಕಳನ್ನು 'ನಿಧಾನ ಕಲಿಯುವವರು' ಎಂದು ಕರೆಯುವುದಿದೆ. ವೈಯಕ್ತಿಕವಾಗಿ, ನನಗೆ  ಈ ಪದವೇ ಹಿಡಿಸುವುದಿಲ್ಲ. ಮಕ್ಕಳಿಗೆ  ಏನಾದರೂ ಹಣೆಪಟ್ಟಿ  ಕಟ್ಟುವುದೇ  ಖಂಡನೀಯವಾದದ್ದು.ಇನ್ನು ಕಲಿಯುವುದರಲ್ಲಿ 'ನಿಧಾನ' ಎಂದು ಹಣೆಪಟ್ಟಿ ಕಟ್ಟುವುದು ಅವಮಾನಕರ ಮತ್ತು ಅವರನ್ನು ಕೀಳು ಗೈದಂತೆ. – ಇನ್ನು ಆ ಮಕ್ಕಳಿಗೂ ಇತರರಷ್ಟು ತಾವು ಜಾಣರಲ್ಲ ಎಂದು ಹೇಳಿದಂತಾಗುತ್ತದೆ. ಅವರ ಸ್ವಾಭಿಮಾನ ಮತ್ತು ಆತ್ಮವಿಶ್ವಾಸ ಮಟ್ಟಗಳಿಗೆ ತೀವ್ರ ಧಕ್ಕೆ ಒದಗುತ್ತದೆ ಮತ್ತು ತಮ್ಮೊಳಗೆ ನೋವನ್ನು ಹಿಡಿದುಕೊಳ್ಳುವ ಪ್ರಯತ್ನದಿಂದ ಅವರು ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ ಅಂತರ್ಮುಖಿಗಳಾಗುತ್ತಾರೆ.

ಅದೇನೇ ಇದ್ದರೂ, ಹೆಚ್ಚುವರಿ ಸಹಾಯ ಅಗತ್ಯವಿರುವ ಮಕ್ಕಳು ಮತ್ತು ತಾವು ಕಲಿಯಲು ಮತ್ತು ಬೆಳೆಯಲು ವಿಶೇಷವಾದ ಬೋಧನೆ ಅಗತ್ಯವಿರುವ ಮಕ್ಕಳು  ಇದ್ದೇ ಇರುತ್ತಾರೆ.
ಒಂದು ಮಗುವು 'ನಿಧಾನವಾಗಿ ಕಲಿಯುವ ಮಗು ' ಆಗಿದ್ದರೆ, ಅವನಿಗೆ ವಿಷಯಗಳನ್ನು ನಿಧಾನವಾಗಿ ಕಲಿಸಿಕೊಡಿ. ಅವರಿಗೆ ಅವರ ಸಾಮರ್ಥ್ಯವನ್ನು ತಲುಪಲು ಅಗತ್ಯವಾದ ಮತ್ತು ಅವಶ್ಯವಾದ ಸಹಾನುಭೂತಿ ಮತ್ತು ಸಮಯವನ್ನು ನೀಡಿರಿ .ಅವರಿಗೆ ಅಗತ್ಯವಾದ ವಾತಾವರಣ ಮತ್ತು ಉಪಕರಣಗಳನ್ನು ಒದಗಿಸಿ. ಎಲ್ಲ ಮಕ್ಕಳಿಗೂ ಸೂಕ್ತ  ಅವಕಾಶ ದೊರಕಲೇ ಬೇಕು.

 

 ಶಿಕ್ಷಕರು ಮತ್ತು ಪೋಷಕರು ನಿಧಾನ ಕಲಿಯುವವರ ಜೀವನದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸುತ್ತಾರೆ. ಅವರ ಬೆಂಬಲ ಮತ್ತು ಪ್ರೇರಣೆ ಇಂತಹ ಮಕ್ಕಳು ತಮ್ಮ ಅಡೆತಡೆಗಳಿಂದ ಹೊರಬರಲು ಬಹಳ ಸಹಾಯ ಮಾಡುತ್ತದೆ. ಅಂದರೆ ಇದರರ್ಥಶಿಕ್ಷಕರು ಮತ್ತು ಪೋಷಕರಿಗೆ ಶಾಲೆಗಳು ಮತ್ತು ಸಮಾಜವು  ಅವರ ಬಗ್ಗೆ  ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಟ್ಟಿರುತ್ತಾರೆ . ನಿಧಾನಗತಿಯ ಕಲಿಯುವವರಿಗೆ ಆರೋಗ್ಯಕರ ಮತ್ತು ಅನುಕೂಲಕರವಾದ ಪರಿಸರವನ್ನು ರಚಿಸುವುದು ಅವರ ವೇಗವನ್ನು ಸುಧಾರಿಸಲು ಅತ್ಯಂತ ಮಹತ್ವದ್ದಾಗಿದೆ. ಸಾಮಾನ್ಯವಾಗಿ ತಮ್ಮ ತರಗತಿಯಲ್ಲಿ ನಿಧಾನಗತಿಯ ಕಲಿಯುವವರನ್ನು ಹೊಂದಿರುವ  ಶಿಕ್ಷಕರು  ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಾರೆ: ಆಯಾ  ಟರ್ಮ್ ನ ಪಠ್ಯಕ್ರಮವನ್ನು ಮಾಡಿಮುಗಿಸುವುದು, ಅಂತಹ ವಿದ್ಯಾರ್ಥಿಗಳ ಬಗ್ಗೆ ಪರಾನುಭೂತಿ ಕಳೆದುಕೊಳ್ಳುವ ಭಯ, ಮತ್ತು ಇನ್ನೂ ಅನೇಕ ಸಮಸ್ಯೆಗಳು.

 

"ನಿಧಾನವಾಗಿ  ಕಲಿಯುವ ಮಕ್ಕಳಿ" ಗಾಗಿ ಕಾರ್ಯ ತಂತ್ರಗಳು
ಸಾಮಾನ್ಯ ನಂಬಿಕೆಗೆ ವಿರುದ್ಧವಾಗಿ, ವಾಡಿಕೆಯ ತರಗತಿಯಲ್ಲಿ ನಿಧಾನಗತಿಯ ಕಲಿಕೆಗಾರರು ಇರುವುದು ಅಪರೂಪವೂ ಅಲ್ಲ ಅಥವಾ ಅನನ್ಯವೂ ಅಲ್ಲ. ತರಗತಿಯಲ್ಲಿ ಸಾಮಾನ್ಯವಾಗಿ ಬಹು ಸಂಖ್ಯೆಯ ವಿದ್ಯಾರ್ಥಿಗಳಿಗಾಗಿ ವಿನ್ಯಾಸಗೊಳಿಸಲಾದ ಬೋಧನಾ ಸಂಪನ್ಮೂಲಗಳು, ಪಠ್ಯಗಳು, ಅಭ್ಯಾಸ ಪುಸ್ತಕಗಳು, ಮತ್ತು ಕಲಿಕೆ ಸಾಮಗ್ರಿಗಳಿಂದ ಸರಾಸರಿ ವೇಗದಲ್ಲಿ ಕಲಿಯಲು ಸಾಧ್ಯವಾಗದ ವಿದ್ಯಾರ್ಥಿಯೇ ಒಬ್ಬ ನಿಧಾನಗತಿಯಲ್ಲಿ  ಕಲಿಯುವ ವಿದ್ಯಾರ್ಥಿ. ಈ ವಿದ್ಯಾರ್ಥಿಗಳಿಗೆ ವಿಶೇಷ ಬೋಧನಾ ವೇಗ ಗತಿ, ಪದೇ ಪದೇ ಹಿಮ್ಮಾಹಿತಿ ಒದಗಿಸುವುದು , ಸರಿಪಡಿಸುವ ಬೋಧನೆ, ಮತ್ತು / ಅಥವಾ ಮಾರ್ಪಡಿಸಿದ ಪಠ್ಯವಸ್ತುಗಳು ಅಗತ್ಯವಿದೆ, ಇವು ಎಲ್ಲಾ ಕಲಿಕೆ ಸಂಭವಿಸುವಂತೆ  ಸಾಕಷ್ಟು ಬದಲಾಯಿಸಿ ಕೊಳ್ಳ ಬಹುದಾದಂತಹ ಪರಿಸ್ಥಿತಿಗಳಲ್ಲಿ ನಿರ್ವಹಿಸಲ್ಪಡಬೇಕು. ಅವರ ಸ್ಪಷ್ಟ ಲಕ್ಷಣವೆನೆಂದರೆ ಹೆಚ್ಚು ಸಮರ್ಥ ವಿದ್ಯಾರ್ಥಿಗಳಿಗೆ ಹೋಲಿಸಿದರೆ  ಅವರು ಸೀಮಿತ ಅವಧಿಯ ವರೆಗೆ ಮಾತ್ರ ತಮ್ಮ  ಗಮನವನ್ನು ಕಲಿಕೆಗೆ ನೀಡುತ್ತಾರೆ. ಈ ವಿದ್ಯಾರ್ಥಿಗಳನ್ನು ಕಲಿಕೆಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿರುವಂತೆ  ನೋಡಿಕೊಳ್ಳಲು ವಿಷಯ ಬೋಧನೆ ವಿಧಾನಗಳಲ್ಲಿ (ನೇರ, ಪರೋಕ್ಷ), ತರಗತಿಯ ವಾತಾವರಣ (ಸಹಕಾರ, ಸ್ಪರ್ಧಾತ್ಮಕ), ಮತ್ತು ಬೋಧನಾ ಸಾಮಗ್ರಿಗಳು (ಚಲನಚಿತ್ರಗಳು, ಅಬ್ಯಾಸ ಪುಸ್ತಕಗಳು, ಸಹಕಾರಿ ಆಟಗಳು, ಅನುಕರಣೆಗಳು)  ಮುಂತಾದವಲ್ಲಿ ಸಾಮಾನ್ಯ ಬದಲಾವಣೆಗಿಂತಲೂ ಹೆಚ್ಚು ಮಾಡಬೇಕಾಗುತ್ತದೆ .

 

ಈ ಬದಲಾವಣೆಯು ನಮ್ಮ ಪಾಠದ ಭಾಗವಾಗಿರದಿದ್ದರೆ, ಈ ವಿದ್ಯಾರ್ಥಿಗಳು ಮ್ಮ ಬೋಧನೆಗಳನ್ನು ಅಡ್ಡಿಪಡಿಸುವ ರೀತಿಯಲ್ಲಿ ತಮ್ಮದೇ ಆದ ವೈವಿಧ್ಯತೆಯನ್ನು ರಚಿಸಿಕೊಂಡುಬಿಡುತ್ತಾರೆ. ನಿಧಾನಗತಿಯ ಕಲಿಯುವವರ ಇತರ ತಕ್ಷಣದ ಗುಣಲಕ್ಷಣಗಳು ಮೂಲಭೂತ ಕೌಶಲ್ಯ (ಓದುವಿಕೆ, ಬರೆಯುವಿಕೆ ಮತ್ತು ಗಣಿತಶಾಸ್ತ್ರ) ದಲ್ಲಿ ಅವರ ಕೊರತೆಗಳು, ಅಮೂರ್ತ ವಿಚಾರಗಳನ್ನು ಅರ್ಥೈಸಿಕೊಳ್ಳುವಲ್ಲಿ ಅವರ ಕಷ್ಟ, ಮತ್ತು  ಆತಂಕದ ವಿಷಯವೆಂದರೆ ಅವರ ಕೆಲವೊಮ್ಮೆ ಅಸಹಜ ಮತ್ತು ಅಸಡ್ಡೆ ಕೆಲಸದ ಅಭ್ಯಾಸಗಳು.

 

ನಿಧಾನಗತಿಯ ಕಲಿಯುವವರಿಗೆ  ಬೋಧನೆಗೆ ಅಂತಲೇ ಯಾವುದೇ ಏಕೈಕ ತಂತ್ರ ಅಥವಾ ತಂತ್ರಗಳ ಸಂಯೋಜನೆಯು ಸಾಕಾಗುವುದಿಲ್ಲವಾದರೂ, ಮುಂದೆ ಏಳಿರುವ ಸಲಹೆಗಳು ನಿಧಾನವಾಗಿ ಕಲಿಯುವವರ ಕಲಿಕೆಯ ಅಗತ್ಯಗಳನ್ನು  ಪೂರೈಸುವ ಬೋಧನಾ ತಂತ್ರಗಳನ್ನು ನಿರ್ದಿಷ್ಟವಾಗಿ ಅಭಿವೃದ್ಧಿಪಡಿಸುವುದಕ್ಕಾಗಿ ಪ್ರಾರಂಭಿಕ ಹಂತವಾಗಿವೆ. ವಿದ್ಯಾರ್ಥಿಗಳ ಆಸಕ್ತಿಗಳು, ಅಗತ್ಯತೆಗಳು ಮತ್ತು ಅನುಭವಗಳನ್ನು ಅಳವಡಿಸುವ ಪಾಠಗಳನ್ನು ನಾವು ಅಭಿವೃದ್ಧಿಪಡಿಸಬೇಕಾಗಿದೆ.

 

ನಿಧಾನಗತಿಯ ಕಲಿಯುವವರು ಗಮನ ಹರಿಸುವ ಅವಧಿ  ಕಡಿಮೆ ಅವಧಿ ಯಾಗಿರುವುದನ್ನು  ಪರಿಹರಿಸಲು  ಇದು ಸಹಾಯ ಮಾಡುತ್ತದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ತಮ್ಮ ನಿರ್ದಿಷ್ಟ ಆಸಕ್ತಿಗಳು ಅಥವಾ ಅನುಭವಗಳನ್ನು ಮನಸ್ಸಿನಲ್ಲಿ ಇಟ್ಟು ಕೊಂಡು ಈ ಪಾಠಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಈ ವಿದ್ಯಾರ್ಥಿಗಳು ಭಾವಿಸುವಂತೆ ಮಾಡಬೇಕು.

 

ನಿಧಾನಗತಿಯ ಕಲಿಯುವವರಲ್ಲಿ ಒಂದು ಸಾಮಾನ್ಯ ಲಕ್ಷಣವೆಂದರೆ ಅವರು ಓದುವ ಮೂಲಕ ಕಲಿಯುವುದಕ್ಕಿಂತ  ನೋಡಿ ಮತ್ತು ಕೇಳಿ ವಿಷಯವನ್ನು  ಉತ್ತಮವಾಗಿ ಕಲಿಯುತ್ತಾರೆ. ಇದು ಅಚ್ಚರಿಯೆನಿಸಬಾರದು, ಏಕೆಂದರೆ ನಿಧಾನ ಕಲಿಯುವವರಲ್ಲಿ ಸಾಮಾನ್ಯವಾಗಿ ಓದುವಿಕೆ ಸೇರಿದಂತೆ ಮೂಲಭೂತ ಕೌಶಲ್ಯದ ಕ್ಷೇತ್ರದಲ್ಲಿ ಕಾರ್ಯಕ್ಷಮತೆಯು ಗ್ರೇಡ್ ಮಟ್ಟಕ್ಕಿಂತ ಕಡಿಮೆಯಾಗಿರುತ್ತದೆ. ಚಲನಚಿತ್ರಗಳು, ವಿಡಿಯೋ ಟೇಪ್ಗಳು ಮತ್ತು ಆಡಿಯೋಗಳನ್ನು ಪಾಠಗಳಾಗಿ ಅಳವಡಿಸಿಕೊಳ್ಳುವುದು ನಿಧಾನ ಕಲಿಯುವವರಲ್ಲಿ ಕಲಿಕೆ ವಿಧಾನಗಳಿಗೆ ತಂತ್ರಗಳನ್ನು ಬೋಧನಾ ವಿಧಾನವಾಗಿ  ಮಾಡುತ್ತದೆ. ಅನೇಕ ಬರವಣಿಗೆಯ ಕಾರ್ಯಯೋಜನೆಗಳನ್ನು ಇವರು –ಪ್ರಯತ್ನಿಸುವುದೇ ಇಲ್ಲ ಅಥವಾ ಅರೆ ಮನಸ್ಸಿನಿಂದ ಮಾತ್ರವೇ ಪ್ರಾರಂಭಿಸುತ್ತಾರೆ ಎಂದು ತಿಳಿದುಬಂದಿದೆ ಏಕೆಂದರೆ ಈ ವಿದ್ಯಾರ್ಥಿಗಳು ತಮ್ಮ ಬರಹವು ಬರವಣಿಗೆಯ ಕನಿಷ್ಟ ಮಾನದಂಡಗಳನ್ನು ಪೂರೈಸುವುದಿಲ್ಲ ಎಂದು ಮನಗಂಡಿರುತ್ತಾರೆ. ಅದರ ಬದಲು ಕೊಟ್ಟ ಕೆಲಸದ  ತ್ತರಗಳನ್ನು  ಎಚ್ಚರಿಕೆಯಿಂದ ಟೇಪ್ ಮಾಡುವುದನ್ನು  ಪರಿಗಣಿಸಬಹುದು. ಇದು ಕಾಗುಣಿತ, ಸಿಂಟ್ಯಾಕ್ಸ್ ಮತ್ತು ಬರಹ ದೋಷಗಳನ್ನು ತಪ್ಪಿಸುವ ಪ್ರಯೋಜನವನ್ನು ಹೊಂದಿದೆ.

 

ನಿಧಾನಗತಿಯ ಕಲಿಕೆಯ ವಿದ್ಯಾರ್ಥಿಗೆ ಕಲಿಸುವ ಬಗ್ಗೆ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಶಿಕ್ಷಕನು ಇಡೀ ಪ್ರಕ್ರಿಯೆಯ ಉದ್ದಕ್ಕೂ ತಾಳ್ಮೆಯಿಂದಿರಬೇಕು ಮತ್ತು ಸ್ಥಿರವಾಗಿರಬೇಕು. ನಿಧಾನಗತಿಯ ಕಲಿಯುವವರ ಶಿಕ್ಷಣದ ಪ್ರಮುಖ ಸಮಸ್ಯೆ ಅವರ ದುರ್ಬಲ ಜ್ಞಾನಗ್ರಹಣ ಕೌಶಲ್ಯಗಳು  ಮತ್ತು ನಿಧಾನ ವೇಗದ ಕಲಿಕೆ .ಸುಲಭವಾಗಿ  ಬೇರೆಡೆ ಗಮನ ಹರಿಸುವ ಸಾಮರ್ಥ್ಯ ಮತ್ತು ಕಡಿಮೆ ಸಮಯ  ಗಮನವನ್ನು ಹೊಂದಿರುವ ಸಾಮರ್ಥ್ಯದ ಬಗ್ಗೆ ನಾವು ತಿಳಿದುಕೊಳ್ಳಬೇಕು ಮತ್ತು ತಾಳಿಕೊಳ್ಳಬೇಕು. ಇದಲ್ಲದೆ, ಅದರಿಂದ ಇಡೀ ತರಗತಿಯು ಪರಿಣಾಮಕ್ಕೆ ಒಳಗಾಗದಂತೆ ಈ ಪರಿಸ್ಥಿತಿಯನ್ನು ನಿಭಾಯಿಸಲು ಸೃಜನಾತ್ಮಕ ಮಾರ್ಗಗಳನ್ನು ನಾವು ಕಂಡುಕೊಳ್ಳಬೇಕು.

 

 

 

ಕಲಾ ತರಗತಿಗಳು, ಶಾಲಾ ಚಟುವಟಿಕೆಗಳು ಅಥವಾ ಸ್ವಯಂ ಸೇವೆ ಬಗ್ಗೆ ಸ್ವಇಚ್ಛೆಯಿಂದ ಅವರು ಮುಂದೆ ಬರಲು ಅವರನ್ನು ಆಹ್ವಾನಿಸಬೇಕು. ಭಾಗವಹಿಸುವಿಕೆಯನ್ನು ಗುರುತಿಸಿ ಮತ್ತು ಬಹುಮಾನ ನೀಡಿರಿ. ಇದು ಅವರ ಆತ್ಮ ವಿಶ್ವಾಸಕ್ಕೆ ಅದ್ಭುತ ಪರಿಣಾ ೀರುತ್ತದೆ.. ತರಗತಿಯ ಮುಂದೆ ಅಥವಾ ಸಾರ್ವಜನಿಕವಾಗಿ ನಿಧಾನಗತಿಯ ವಿದ್ಯಾರ್ಥಿಗಳ ಪ್ರತಿ ಸಣ್ಣ ಪ್ರಯತ್ನವನ್ನು ನಾವು ಯಾವಾಗಲೂ ಶ್ಲಾಘಿಸಬೇಕು. ಇದು ಅವರ ಸ್ವಾಭಿಮಾನ ಮತ್ತು ವಿಶ್ವಾಸವನ್ನು ಹೆಚ್ಚಿಸುತ್ತದೆ. . ನಿರಂತರ ಪ್ರಯತ್ನಕ್ಕಾಗಿ ನಾವು ಅವುಗಳನ್ನು ಪ್ರೋತ್ಸಾಹಿಸಬೇಕು. ತಮ್ಮ ಕೆಲಸಗಳನ್ನು ಮುಂದೂಡಿದರೂ ಪರವಾಯಿಲ್ಲ ಕೊಟ್ಟ ಕೆಲಸವನ್ನು ಮಾಡಿ ಮುಗಿಸಲು ಅವರ ಶ್ರಮ ವನ್ನು ಮುಂದುವರಿಸಲು ಪ್ರೋತ್ಸಾಹಿಸಿ.

 

 

 

ಕೊನೆಯದಾಗಿ, ಕೆಲವು ಮಾಡಬಾರದ ಕೆಲಸಗಳು:
ನಾವು ತರಗತಿಯಲ್ಲಿ  ಎಲ್ಲರ  ಮುಂದೆ ವಾಗ್ದಂಡನೆ ಮಾಡಬಾರದು. ಬರೆಯುವುದ ಕ್ಕೆ ಒತ್ತು ಕೊಡುವ ಬದಲು  ಓದುವದಕ್ಕೆ  ನಾವು ಗಮನಹರಿಸಬೇಕು. ಮೌಖಿಕ ಶಿಕ್ಷಣವು ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಕಂಡುಬಂದಿರುತ್ತದೆ. ನಾವು ಹೆಚ್ಚು ಸಂರಕ್ಷಣೆ ಮಾಡಬಾರದು. ಅವರ ನಿಧಾನ ಕಲಿಕೆಯು ಅವರ ಪರಿಚಯವಾಗಿರ ದಂತೆ ನೋಡಿಕೊಳ್ಳಿರಿ.
ನಿಧಾನ ಕಲಿಯುವವರಿಗೆ ಕಲಿಸುವಾಗ ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕಾದದ್ದು ಏನೆಂದರೆ  , ಏನೂ ಕಲಿಯದೇ ಇರುವುದಕ್ಕಿಂತಲೂ ನಿಧಾನವಾಗಿ ವಿಷಯಗಳನ್ನು ಕಲಿಯಲು ಅವರಿಗೆ ಅವಕಾಶ ಮಾಡಿಕೊಡುವುದು ಸರಿ ಎಂಬುದು. ಓರ್ವ ಶಿಕ್ಷಕನಾಗಿ, ನಾವು ಈ ವಿದ್ಯಾರ್ಥಿಗಳಿಗೆ ದೀಪಸ್ಥಂಭದಮತೆ-ತಮ್ಮದೇ ಆದ ಕಲಿಕೆಯ ವೇಗದಿಂದ ಕಲಿಕೆಯ ತೀರವನ್ನು ತಲುಪಲು  ಅವರಿಗೆ ನಾವೇ ಭರವಸೆಯ ಮೂಲ ಮತ್ತು ನಿರಂತರ ಪ್ರೋತ್ಸಾಹ. ನೆನಪಿಡಿ, ಯಾ ವಿದ್ಯಾರ್ಥಿಯೂ ಹಿಂದುಳಿಯಬಾರದು.

 

 

 

 

 
 

 

 


 

 

 

 

18926 ನೊಂದಾಯಿತ ಬಳಕೆದಾರರು
7393 ಸಂಪನ್ಮೂಲಗಳು