ನಾನೇಕೆ ಬೋಧಿಸುತ್ತೇನೆ:ನನ್ನ ತರಗತಿಯಲ್ಲಿ ನಾನೇ ವಿದ್ಯಾರ್ಥಿಯಾಗುತ್ತೇನೆ.

ನಾನು ಅದ್ಭುತ ಕುಟುಂಬದಲ್ಲಿ ನೆಮ್ಮದಿಯ ಜೀವನ  ಕಂಡ ಅತ್ಯಂತ ಅದೃಷ್ಟಶಾಲಿ . ಇದರ ಹೊರತಾಗಿಯೂ, ನಾನೂ ಸೇರಿದಂತೆ ನನ್ನ ಕುಟುಂಬದ ಎಲ್ಲರೂ ನಿಜಕ್ಕೂ ಸಂತೋಷವಾಗಿಲ್ಲ ಎಂದು  ಅನಿಸುತ್ತಿತ್ತು. ಇಂದಿನ ಪ್ರಾಪಂಚಿಕ ಜಗತ್ತು ನಮಗೆ ತೀರ ಅಲ್ಪಾವಧಿಗೆ ಮಾತ್ರ ಸಂತೋಷವನ್ನು ನೀಡುತ್ತದೆ. ನಾವು ನಂತರ ಗೊಣಗಾಡುವ ಮತ್ತು ಇತರರ ಬಳಿ ಇರುವುದು ನಮ್ಮಲ್ಲಿಲ್ಲಎಂದು ಕೊರಗುವುದಕ್ಕೆ ಮತ್ತೆ  ತೊಡಗುತ್ತೇವೆ.   ದೇವರೇ ಕೃಪೆಯಿಟ್ಟು 2006 ರಲ್ಲಿ ನನಗೆ ದೀಪಾಲಯದಲ್ಲಿ ಶಿಕ್ಷಕಳಾಗುವ ಅವಕಾಶ ನೀಡಿದನು ಎಂದು ನಂಬುತ್ತೇನೆ.ಆಗ ನನಗೆ ಅದು ನಾನು ಈ ಜೀವನದ ಬಗ್ಗೆ ನನ್ನ ದೃಷ್ಟಿಕೋನವನ್ನುಎಷ್ಟೊಂದು ಬದಲಾಯಿಸಲಿದೆ ಎಂದು ಗೊತ್ತಿರಲಿಲ್ಲ.

ನನ್ನ ವಿದ್ಯಾರ್ಥಿಗಳಲ್ಲಿ  ನಾನು ಏನೋ ಒಂದು ಅದ್ಭುತ ಕಂಡುಕೊಂಡೆ. ಅವರು ಯಾವಾಗಲೂ ಸಂತೋಷದಿಂದ ಕಲಿ ಕಲಿಯಾಗಿ ಇರುತ್ತಿದ್ದರು. ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳನ್ನುಹೊಂದಿದ್ದು ಸಮಾಜದ ಆರ್ಥಿಕವಾಗಿ ವಂಚಿತ ವರ್ಗಗಳಿಂದ ಬಂದವರಾಗಿರುತ್ತಾರೆ.  ಒಂದು ಪೆನ್ಸಿಲ್ ಮತ್ತು ಒಂದು ಎರೇಸರ್ ನಂತಹ ಚಿಕ್ಕಪುಟ್ಟ ಉಡುಗೊರೆಗಳನ್ನು ಕೊಟ್ಟರೂ ಅವರ  ಸುಂದರ ಮುಖಗಳು ಗುಲಾಬಿಯಂತೆ ಅರಳುತ್ತಿತ್ತು. ಶಾಲೆಯಲ್ಲಿ ಪಿಕ್ನಿಕ್ ಏರ್ಪಾಟುಮಾಡಲಾಗಿದೆ ಎಂಬ ಒಂದು ಪ್ರಕಟಣೆ ಕೇಳಿದರಂತೂ ಉಲ್ಲಾಸವೋ ಉಲ್ಲಾಸ  ಉತ್ಸಾಹವೋ ಉತ್ಸಾಹ. ನಾನು ಪಠ್ಯಕ್ರಮವನ್ನು ಅನುಸರಿಸಿ ಅವರಿಗೆ ವರ್ಣಮಾಲೆಗಳು, ಗಣಿತ, ವಿಜ್ಞಾನ ಮತ್ತು ಉಳಿದ ವಿಷಯ ಕಲಿಸಲು ಪ್ರಯತ್ನಿಸುವ ಶಿಕ್ಷಕಿ  ನಾನು ಮತ್ತೆ ಮನೆಗೆ ಬಂದು ದಿನದ ಘಟನೆಗಳ ಬಗ್ಗೆ ಯೋಚಿಸಿದಾಗ , ನಾನು ಅವರಿಗೆ ಪಾಠ ಕಲಿಸಿದೆನೋ ಅಥವಾ ಅವರು ನನಗೆ ಪಾಠ ಕಲಿಸಿದರೋ? ಅನಿಸಲಾರಂಭಿಸುತ್ತದೆ. ಏನು ಆಶ್ಚರ್ಯ! ಪ್ರತಿ ದಿನ ನಾನು ಅವರಿಂದ ಮಂದಹಾಸ ಬೀರುವುದನ್ನುಮತ್ತು ಬೇಷರತ್ತಾಗಿ ಸಂತೋಷವಾಗಿರುವುದನ್ನು ಕಲಿಯುತ್ತಿದ್ದೇನೆ. ನಾನು ತರಗತಿಯಲ್ಲಿ ಬೆಳಗ್ಗೆ ಬಂದಾಗ ಪ್ರತಿದಿನ , ಮಕ್ಕಳು ನನಗೆ ಒಂದು ಹೊಸಪಾಠವನ್ನೇ ತೆರೆದು ತೋರಿಸುತ್ತಿದ್ದರು ಮತ್ತು ಜೀವನದ ಬಗ್ಗೆ  ನನ್ನ ದೃಷ್ಟಿಕೋನವನ್ನೇ ಬದಲಾಯಿಸುತ್ತಿದ್ದರು.

ನಾನು  ಇಲ್ಲಿ ಒಂದು ಉದಾಹರಣೆಯನ್ನು ನೀಡಬೇಕು. ನನ್ನ  3ನೇತರಗತಿಯಲ್ಲಿ, ಬಲು ಹರ್ಷಚಿತ್ತದ  ಬುದ್ದಿವಂತ ,ಶ್ರಮಜೀವಿ ಹುಡುಗಿಯೊಬ್ಬಳು ಇದ್ದಳು.ಅವಳ ಮುಖದಲ್ಲಿ   ಒಂದು ಶಾಂತ ಸ್ನಿಗ್ದ ಮಂದಹಾಸ ಸದಾ ಮಿನುಗುತ್ತಿತ್ತು. ಅವಳ  ನೋಟ್ಬುಕ್ ಮತ್ತು ಸಮವಸ್ತ್ರ ಯಾವಾಗಲೂ ಬಲು ಸ್ವಚ್ಛ ವಾಗಿರುತ್ತಿತ್ತು. ಒಂದು ದಿನ ನಾನು ತರಗತಿಯಲ್ಲಿ ಆಕೆ ಅನ್ಯ ಮನಸ್ಕಳಾಗಿದ್ದದನ್ನು ಗಮನಿಸಿದೆ. ಅವಳ ಜೊತೆಗಾರ ಮಕ್ಕಳು MCD ಆಕೆಯ  ಮನೆಯನ್ನು ಕೆಡವಿಹಾಕಿದೆ  ಎಂದು ನನಗೆ ತಿಳಿಸಿದರು. ಒಂದು ವಾರ ಅವಳು ಹಾಗೆ ಚಿಂತೆಯಲ್ಲಿ ಮುಳುಗಿದ್ದಂತೆ ಕಂಡಳು. ಆದರೆ ಶೀಘ್ರದಲ್ಲೇ ತನ್ನ ಮೊದಲಿನ ಸಂತೋಷದ ಸ್ವರೂಪಕ್ಕೆ ಹಿಂದಿರುಗಿದಳು. ಒಂದು ದಿನ ಶಾಲೆಯ ನಂತರ,  ಮನೆಗೆ ಹೋಗುತ್ತಿದ್ದಾಗ , ನಾನು ಈ ಹುಡುಗಿ ರಸ್ತೆ ಪಕ್ಕದಲ್ಲಿ ಅವಳ ಸಹೋದರಿಯೊಂದಿಗೆ ಆಡುತ್ತಿರುವುದನ್ನು ಕಂಡೆ. ಆ ದಿನ ಅವಳು ಶಾಲೆಗೆ ಬಂದಿರಲಿಲ್ಲ. ನಾನು ಅವಳ ಬಳಿಗೆ ಹೋಗಿ ಅವಳನ್ನು ಕರೆದು   ಶಾಲೆಗೆ ಏಕೆ ಬರಲಿಲ್ಲ ಎಂದು ಕೇಳಿದೆ. ತನ್ನ ಸಹೋದರಿಗೆ ಹುಷಾರಿಲ್ಲ ಮತ್ತು ತನ್ನ ತಾಯಿ ಕೆಲಸಕ್ಕೆಹೊಗಿರುವಾಗ  ಅವಳ  ಆರೈಕೆಯನ್ನು ತಾನು  ಮಾಡಬೇಕು ಎಂದು ಹೇಳಿದಳು.ಅವಳು ಹೆಮ್ಮೆಯಿಂದ ನನಗೆ ತನ್ನ ಮನೆಯನ್ನು ತೋರಿಸಿದಳು ಮತ್ತು ನನ್ನ ಮನೆಯ ಚಿತ್ರ ನನ್ನ ಕಣ್ಣುಗಳ ಮುಂದೆ ಬಂತು ನಾನು ಮೂಕ ವಿಸ್ಮಿತಳಾದೆ. ಹುಡುಗಿಯ ಮನೆ ಬರಿ ಒಂದು ಡೇರೆ ಅದೇನೂ ಎಲ್ಲ ಕಡೆ ಮುಚ್ಚಿರಲಿಲ್ಲ.ಅವಳು. ಹೆಮ್ಮೆಯಿಂದ ಅದನ್ನೇ ತನ್ನ ಗುರುವಿಗೆ ತೋರಿಸುತ್ತಿದ್ದಾಳೆ. ಅಲ್ಲಿ ಇದು ಹೇಳಿದ. ನಾನು ಅಂತಹ ಪ್ರತಿಕೂಲ  ಪರಿಸ್ಥಿತಿಯಲ್ಲಿ ವಾಸಿಸುವ ಸಣ್ಣ ಹುಡುಗಿ ಹೇಗೆ ಯಾವಾಗಲೂ ಸಂತೋಷವಾಗಿರುತ್ತಾಳೆ ಶಾಲೆಯಲ್ಲಿ ಶ್ರಮವಹಿಸಿ ಕಲಿಯುತ್ತಾಳೆ ಮತ್ತು ಸ್ವತಃ ಅಚ್ಚುಕಟ್ಟಾಗಿ ಮತ್ತು ಒಪ್ಪವಾಗಿ ಇರಿಸಿಕೊಳ್ಳಲು ಸಾಧ್ಯವಿದೆ ಎಂದು ಚಕಿತಳಾಗಿ ಮರಳಿ ಮನೆಗೆ ಬಂದೆ. ನಾನು ನೆನಪಿಸಿಕೊಳ್ಳಲು ನನ್ನ ಶಾಲೆಯಲ್ಲಿ ಇಂಥ ಬಹಳ ಉದಾಹರಣೆಗಳು ಇವೆ. ನನ್ನ ಸ್ವಂತ ತರಗತಿಯಲ್ಲಿ ನಾನೆ ಒಂದು ವಿದ್ಯಾರ್ಥಿಯಾಗಿ ಬಿಟ್ಟಿದ್ದೇನೆ ಮತ್ತು ಎನೇ ಬರಲಿಎಲ್ಲಾ ಸಂದರ್ಭಗಳಲ್ಲಿ ಸಂತೋಷವಾಗಿರುವುದನ್ನು ಆ ಮಕ್ಕಳಿಂದ ನಾನು ಕಲಿತುಕೊಂಡೆ.

ಕನ್ನಡಾನುವಾದ ಮತ್ತು  ಸಂಪಾದನೆ: ಜೈಕುಮಾರ್ ಮರಿಯಪ್ಪ

 

18904 ನೊಂದಾಯಿತ ಬಳಕೆದಾರರು
7422 ಸಂಪನ್ಮೂಲಗಳು