ಜೀನ್ ಮತ್ತು ಜೀನೋಮ್

ಒಂದು ಜೀವಿಯ ಜೀನೋಮ್ ಎಂದರೆ ಅದರ  ಎಲ್ಲಾ ಜೀನುಗಳನ್ನು ಒಳಗೊಂಡ ಅದರ ಡಿಎನ್‌ಎ ಗಳ ಪೂರ್ಣ ಸೆಟ್ಟು. ಆಯಾ ಜೀವಿಯ ಇಡೀ ಜೀನೋಮ್ ಗಳ-ಮನುಷ್ಯರಲ್ಲಿ ಮೂರು ಶತಕೋಟಿ ಡಿ ಎನ್ ಎ ಬೇಸ್ ಜೋಡಿಗಳು- ಒಂದೊಂದು ಪ್ರತಿಯು ದೇಹದ ಪ್ರತಿಯೊಂದು ಜೀವಕೋಶದಲ್ಲೂ ಇರುತ್ತದೆ. ಪ್ರತಿಯೊಂದು ಜೀನೋಮ್ ನ ಪ್ರತಿಯು ಇಡೀ ಜೀವಿಯನ್ನು ನಿರ‍್ಮಿಸಿ ನಿರ‍್ವಹಿಸಿಕೊಡುಬರಲು ಬೇಕಾದ ಎಲ್ಲಾ ಮಾಹಿತಿಯನ್ನು ಹೊಂದಿರುತ್ತದೆ.
 
ಜೀವಿಗಳ ನೀಲಿನಕ್ಷೆ ಡಿಎನ್‌ಎ, ಇದು ಎರಡು ಎಳೆ ಇರುವಂತಹುದು(ದ್ವಿ ತಂತು). ನಮಗೆ ಗೊತ್ತಿರುವ ಎಲ್ಲಾ ಜೀವಿಗಳು ಮತ್ತು ಅನೇಕ ವೈರಸ್ಗಳ ಬೆಳವಣಿಗೆ, ಅಭಿವೃದ್ಧಿ, ಕಾರ‍್ಯನಿರ‍್ವಹಣೆ ಮತ್ತು ಸತಾನೊತ್ಪತ್ತಿಗೆ ಬೇಕಾದ ಆನುವಂಶೀಯ ಸಲಹೆ ಸೂಚನೆಗಳನ್ನು ಹೊತ್ತು ಒಯ್ಯುವ ಒಂದು ಅಣು ಎಂದರೆ ಡೀಆಕ್ಸೀರೈಬೋನ್ಯೂಕ್ಲಿಕ್ ಆಸಿಡ್ ಬಹಳಷ್ಟು ಒಂದಕ್ಕೊಂದು ಸುತ್ತಿಕೊಂಡು ಒಂದು ಹೆಲಿಕ್ಸ್ ರೂಪಿಸುವ ಎರಡು ಪ್ರತಿ ಸಮಾನಾಂತರ ಬಯೋ ಪಾಲಿಮರ್ ಎಳೆಗಳನ್ನು ಹೊಂದಿರುತ್ತದೆ.
 
ಪ್ರೋಟೀನ್‌ಗಳು ಹೇಗೆ ಅಮೈನೋ ಆಮ್ಲಗಳ ಪಾಲಿಮರ್‌ಗಳಾಗಿವೆಯೋ, ಹಾಗೆಯೇ ಡೀಆಕ್ಸೀರೈಬೋನ್ಯೂಕ್ಲಿಕ್ ಆಸಿಡ್ ಅಥವಾ ಡಿಎನ್‌ಎ,ಯ ಎಳೆಗಳಲ್ಲಿ ಪ್ರತಿಯೊಂದು ಪಾಲಿನ್ಯೂಕ್ಲಿಯೋಟೈಡ್ ಅಥವಾ ನ್ಯೂಕ್ಲಿಯೋಟೈಡ್‌ಗಳ ಪಾಲಿಮರ್ ಆಗಿದೆ. ಪ್ರತಿಯೊಂದು ನ್ಯೂಕ್ಲಿಯೋಟೈಡ್, ಒಂದು ಫಾಸ್ಫೇಟ್ ಗುಂಪು , ಡೀಆಕ್ಸೀರೈಬೋಸ್ ಎಂದು ಕರೆಯಲಾಗುವ  ಸಕ್ಕರೆ ಮತ್ತು ಸಾರಜನಕ ವನ್ನು ಒಳಗೊಂಡಿರುವ ನಾಲ್ಕು ನ್ಯೂಕ್ಲಿಯೋಬೇಸ್‌ಗಳಲ್ಲಿ ಒಂದರಿಂದ ಮಾಡಲ್ಪಟ್ಟಿವೆ. ಡಿಎನ್‌ಎನಲ್ಲಿ ನಾಲ್ಕು ರೀತಿಯ ನ್ಯೂಕ್ಲಿಯೋಬೇಸ್‌ಗಳಿವೆ- ಅವು ಅಡಿನೀನ್( A) ಗ್ವಾನೀನ್(G), ಥೈಮಿನ್(T) ಮತ್ತು ಸೈಟೊಸಿನ್ (C). ಡಿಎನ್‌ಎ ಅಣುವಿನಲ್ಲಿ ಇವುಗಳ ಅನುಕ್ರಮವೇ ಪ್ರೋಟೀನ್‌ಗಳಲ್ಲಿ ಅಮೈನೋ ಆಮ್ಲಗಳ ಅನುಕ್ರಮವನ್ನು ನಿರ್ಧರಿಸುತ್ತದೆ.  ಒಂದು ತಂತುವಿನ ಮೇಲಿರುವ
ನ್ಯೂಕ್ಲಿಯೋಬೇಸ್‌ಗಳು ಇನ್ನೊಂದು ತಂತುವಿನಲ್ಲಿ ಸಂವಾದಿ ಸ್ಥಳದಲ್ಲಿರುವ ಬೇಸ್ಗಳ ಜೊತೆ ಜೋಡಿಯಾಗಿ ಬೇಸ್ ಜೋಡಿ ಯಾಗುತ್ತವೆ.
ಡಿಎನ್ ಎ ಯಲ್ಲಿರುವ ಬೇಸ್ ಜೋಡಿಗಳು ಎರಡು ವಿಧದವಾಗಿರುತ್ತವೆ A-T ಅಥವಾ C-G. ಒಂದು  ಬೇಸ್ ಜೋಡಿಯ ನ್ಯುಕ್ಲಿಯೋಟೈಡ್ ಗಳು ಪರಸ್ಪರ ಪೂರಕವಾಗಿರುತ್ತವೆ. ಅಂದರೆ ಅವುಗಳ ಆಕಾರವು ಜಲಜನಕದ ಬಾಂಡ್ ನಿಂದ ಪರಸ್ಪರ ಜೋಡಿಯಾಗಲು ಅನುವು ಮಾಡಿಕೊಡುತ್ತವೆ.
 
ಜೀನ್ ಎಂಬುದು ಒಂದು ಕಾರ‍್ಯಕಾರಿ ಆರ್ ಎನ್ ಎ ಅಥವಾ ಒಂದು ಪ್ರೋಟೀನ್ ಉತ್ಪನ್ನವನ್ನು ಸಸಂಕೇತರೂಪಿಸುವ(encoded) ಡಿ ಎನ್ ಎ ಯಲ್ಲಿರುವ ಒಂದು ತಾಣ ಅಥವಾ ಸ್ಥಳ.ಆ ಜೀವಿಯ ಮರಿಗಳಿಗೆ ಜೀನ್ ಗಳ ವರ‍್ಗಾವಣೆ ಪ್ರಕಟಲಕ್ಷಣಗಳು ವಂಶದಿಂದ ವಂಶಕ್ಕೆ ಸಾಗುವುದಕ್ಕೆ ಮೂಲ ಕಾರಣ
18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು