ಕೆಲವು ವಿದ್ಯಾರ್ಥಿಗಳು ಓದಲು ಏಕೆ ಅಷ್ಟು ಕಷ್ಟಪಡುತ್ತಾರೆ ಮತ್ತು ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು?

 

ಓದುವ ತಂತ್ರಗಳನ್ನು ಕುರಿತು ಅನೇಕ ಲೇಖನಗಳನ್ನು ಬರೆಯಲಾಗಿದೆ ಆದರೆ ಓದುವುದರ ಮೌಲ್ಯಮಾಪನವನ್ನು ಕುರಿತು ಮತ್ತು ಅದು ಸಾಕ್ಷರತೆಯನ್ನು ಹೇಗೆ ಸುಧಾರಿಸುತ್ತದೆ ಎಂಬುದರ ಬಗ್ಗೆ ಹೆಚ್ಚು ಬರೆಯಲಾಗಿಲ್ಲ. ಇದನ್ನೇ ಮನಸ್ಸಿನಲ್ಲಿಟ್ಟು ಕೊಂಡು, ನಬಿನಿತಾ ದೇಶ್ ಮುಖ್ ಅವರು ವಿದ್ಯಾರ್ಥಿಗಳ ಓದುವ ಮಟ್ಟವನ್ನು ಹೆಚ್ಚಿಸಲು ಸುಲಭವಾಗಿ ಬಳಸಬಹುದಾದ ಮೌಲ್ಯಮಾಪನ ಕಾರ್ಯತಂತ್ರಗಳನ್ನು ಪ್ರಸ್ತುತಪಡಿಸಲು ಈ ಲೇಖನದಲ್ಲಿ ಪ್ರಯತ್ನಿಸಿದ್ದಾರೆ.

ಕೆಲವು ವಿದ್ಯಾರ್ಥಿಗಳು ಓದಲು  ಏಕೆ ಅಷ್ಟು ಕಷ್ಟಪಡುತ್ತಾರೆ ಮತ್ತು ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು?

"ಕೆಲವು ವಿದ್ಯಾರ್ಥಿಗಳು ಏಕೆ ಓದುವುದಕ್ಕೆ ಕಷ್ಟಪಡುತ್ತಾರೆ ಮತ್ತು ನಾವು ಅವರಿಗೆ ಹೇಗೆ ಸಹಾಯ ಮಾಡಬಹುದು?" ನಾನು ಒಂದು ಕಾರ್ಯಾಗಾರದ ಸಮಯದಲ್ಲಿ ಶಿಕ್ಷಕರ ಗುಂಪನ್ನು ಕೇಳಿದೆ. ಆಶ್ಚರ್ಯವೆಂದರೆ ಯಾರೊಬ್ಬರೂ ಉಪಯುಕ್ತವಾದ ಉತ್ತರ ನೀಡಲಿಲ್ಲ ಮತ್ತು ಇದೇ ಈ ವಿಷಯದ ಬಗ್ಗೆ  ಆಳವಾಗಿ ಪರಿಶಿಲಿಸಲು ನನ್ನನ್ನು ಪ್ರೇರೇಪಿಸಿತು.

ಓದುವುದು ನಮ್ಮ ಶಾಲಾ ಶಿಕ್ಷಣದ ಒಂದು ಪ್ರಮುಖ ಭಾಗ. ಅದು ಕೇವಲ ನಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಮಾತ್ರವಲ್ಲ  ನಮ್ಮ ವ್ಯಕ್ತಿತ್ವಗಳ ಮೇಲೂ ಪ್ರಭಾವ ಬೀರುತ್ತದೆ! ಸರಿಯಾಗಿ ಓದಲು ಸಾಧ್ಯವಾಗದ ಮಗು ಆತ್ಮ ವಿಶ್ವಾಸ ಮತ್ತು ಉತ್ತಮವಾಗಿ ಮಾತನಾಡುವ  ಕೌಶಲಗಳನ್ನು ಹೊಂದಿರುವುದಿಲ್ಲ.. ಅವರ ಭವಿಷ್ಯವು ಜೀವನದಲ್ಲಿ ಕೆಲಸ ಪಡೆಯುವ ಅವಕಾಶ ಸೀಮಿತವಾಗುತ್ತದೆ ಮತ್ತು ಹತಾಶೆ ಮೈಗೂಡುತ್ತದೆ. ಅದೇ ಚೆನ್ನಾಗಿ ಓದಬಲ್ಲ ಮಗುವಿಗೆ ಆತ್ಮ ವಿಶ್ವಾಸವಿರುತ್ತದೆ, ಹೆಚ್ಚು ಏಕಾಗ್ರತೆ ಮತ್ತು ಅಭಿವ್ಯಕ್ತಿ  ಕೌಶಲಗಳು ಇರುತ್ತವೆ ಮತ್ತು ತಾನು ವಾಸಿಸುವ ಜಗತ್ತನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾನೆ.

ಓದುವ ಕಲೆಯನ್ನು  ಹೇಗೆ ಸುಧಾರಿಸುವುದು?

ಉತ್ತಮ ಓದುವ ಸೂಚನಾ ವಿನ್ಯಾಸ ಮತ್ತು ಅಳವಡಿಸಿಕೊಳ್ಳುವಲ್ಲಿ ಮೊದಲ ಹಂತವೆಂದರೆ ತನ್ನ  ವಿದ್ಯಾರ್ಥಿಗಳ ತಳಮಟ್ಟದ ಕಾರ್ಯಕ್ಷಮತೆ ಗುರುತಿಸಿಕೊಳ್ಳುವುದು.ತರಗತಿಯಲ್ಲಿ  ವಿಭಿನ್ನ ಹಿನ್ನೆಲೆ ಮತ್ತು ಸಂಸ್ಕೃತಿಗಳ ಮಕ್ಕಳು ಭಾಗವಾಗಿದ್ದು, ಶಿಕ್ಷಕರು ಮೊದಲು ವಿದ್ಯಾರ್ಥಿಗಳ ಮಟ್ಟವನ್ನು ನಿರ್ಣಯಿಸಲು ಪರಿಣಾಮಕಾರಿ ತಳಮಟ್ಟ ಗುರುತಿಸುವ ಪರೀಕ್ಷೆಗಳನ್ನು ಬಳಸಬೇಕಾಗುತ್ತದೆ. ಒಮ್ಮೆ ಮಾಡಿದರೆ, ಈ ಪರೀಕ್ಷೆಗಳು ನಮ್ಮ ಓದುಗರಿಗೆ ತೊಧರೆ  ಏನಿದೆ ಎಂಬುದನ್ನು ವಿವರಿಸಲು ಮೌಲ್ಯಯುತವಾದ ದತ್ತಾಂಶವನ್ನು ಒದಗಿಸಬಹುದು.

 

ಮೌಲ್ಯಮಾಪನ ಏಕೆ ಮುಖ್ಯ?

ಕೆಳಗಿನ ಕ್ಷೇತ್ರಗಳಲ್ಲಿ ಶಿಕ್ಷಕರಿಗೆ ಮೌಲ್ಯಮಾಪನ ಸಹಾಯ ಮಾಡುತ್ತವೆ:

 •           ಪರಿಷ್ಕರಣೆ ಅಥವಾ ಸುಧಾರಣೆ ಅಗತ್ಯವಿರುವ ಕೌಶಲ್ಯಗಳನ್ನು ಗುರುತಿಸುವುದು.
  • ವಿದ್ಯಾರ್ಥಿಗಳು ಪ್ರಗತಿ ಮೇಲ್ವಿಚಾರಣೆ ಮಾಡುವುದು.
  • ವಿವಿಧ ರೀತಿಯ ಕಲಿಯುವವರಿಗೆ ಸೂಚನೆಗಳನ್ನು ಆಯ್ಕೆಮಾಡುವುದು.
  • ವಿದ್ಯಾರ್ಥಿಗಳು ತಮ್ಮ ಪಠ್ಯಪುಸ್ತಕಗಳಲ್ಲಿ ಒಳಗೊಂಡಿರುವ ವಿಷಯವನ್ನು ಅರ್ಥಮಾಡಿಕೊಂಡಿರುವರೆ ಎಂದು ಶಿಕ್ಷಕರು ತಿಳಿಯಲು ಸಹಾಯ ಮಾಡುವುದು..
  • ಬೋಧನೆ ಸುಧಾರಿಸುವ ಬಗೆಗಿನ ಒಳನೋಟಗಳನ್ನು ಶಿಕ್ಷಕರಿಗೆ ಒದಗಿಸುವುದು.

ಯಾವುದರ ಮೌಲ್ಯಮಾಪನ ಮಾಡಬೇಕು.

ವಿದ್ಯಾರ್ಥಿಗಳ ಓದುವ ಸಾಮರ್ಥ್ಯಗಳನ್ನು ಪರೀಕ್ಷಿಸುವುದಕ್ಕಾಗಿ, ಹಲವಾರು ಅಂಶಗಳು ಇರುವ ಕಾರಣ ಎಲ್ಲಾ ಅಂಶಗಳನ್ನು ಮೌಲ್ಯಮಾಪನ ಮಾಡುವುದು ಸಾಧ್ಯವಿಲ್ಲ. ಕೆಲವು ನಿರ್ದಿಷ್ಟ ಪ್ರದೇಶಗಳನ್ನು ಸಾಮಾನ್ಯವಾಗಿ ಮೌಲ್ಯಮಾಪನ ಮಾಡಲಾಗುತ್ತದೆ ಮತ್ತು ಅವುಗಳೆಂದರೆ:

• ಅಕ್ಷರ ಜ್ಞಾನ ಅಥವಾ ಫೋನಿಕ್ಸ್

• ಧ್ವನಿಜ್ಞಾನದ ಅರಿವು

• ಸಂಜ್ಞಾ ಅರ್ಥಗ್ರಹಣೆ

• ಸರಾಗತೆ

• ಓದಿದ್ದರ ಅರ್ಥಗ್ರಹಣ

 • ಅಕ್ಷರ ಜ್ಞಾನ
 • ಅಕ್ಷರ ಜ್ಞಾನವೆಂದರೆ ಅಕ್ಷರಗಳಿಗೆ ಶಬ್ದಗಳನ್ನು ಅಥವಾ ನಿರ್ದಿಷ್ಟವಾಗಿ ಅಕ್ಷರದ ಸಂಕೇತಗಳಿಗೆ ಶಬ್ದಗಳನ್ನು ಹೊಂದಿಕೆ ಮಾಡುವ ವಿದ್ಯಾರ್ಥಿಯ ಸಾಮರ್ಥ್ಯ. ಸರಿಯಾದ ಅಕ್ಷರ ಜ್ಞಾನವಿಲ್ಲದೆ ಹೋದರೆ ಮಕ್ಕಳಿಗೆ , ಒಂದು ಪುಟದಲ್ಲಿ ಪದಗಳು ಗೀಚು ಬರಹಗಳಾಗುತ್ತವೆ . ಆಸಕ್ತಿದಾಯಕ ಆಟದ ಮೂಲಕ ಅಕ್ಷರದ ಜ್ಞಾನದ ಮೌಲ್ಯಮಾಪನವನ್ನು ಹೀಗೆ ಮಾಡಬಹುದು.

ಮೌಲ್ಯ ಮಾಪನದ ಆಟ: ಯಾರಾದರೂ ನನಗೆ ಹೇಳಬಹುದೇ?

• ಶಿಕ್ಷಕನು ಪಟ್ಟಿಯಲ್ಲಿ ಮೇಲೆ ಕಾಗುಣಿತವಿರದ ಅಕಾರ ಅಕ್ಷರಗಳ ಪಟ್ಟಿಯನ್ನು ಒದಗಿಸುತ್ತಾರೆ ಮತ್ತು ಪ್ರತಿ ಅಕ್ಷರವನ್ನು ಹೆಸರಿಸಲು ವಿದ್ಯಾರ್ಥಿ ಕೇಳುತ್ತಾನೆ.

• ಸರಳವಾದ ಪ್ರಾಸವನ್ನು ಬಳಸಿ ಈ ಅಭ್ಯಾಸವನ್ನು ಮಾಡಬಹುದು: 'ಗೋಡೆಯ ಮೇಲೆ  ಸಾಲಾಗಿ ಕುಳಿತಿದ್ದವು ಅಕ್ಷರಗಳು  ಯ ಅಕ್ಷರ ಕೆಳಗೆ ಬಿತ್ತು. ಯ ಎಲ್ಲಿದ್ದಾನೆ? ಓ, ಹೇಳಿ ಯ ಎಲ್ಲಿದ್ದಾನೆ? ಯ ಎಲ್ಲಿದೆ ಎಂದು ಯಾರಾದರೂ ನನಗೆ ಹೇಳಬಹುದೇ?

• ಮಗುವಿನ ಅಕ್ಷರದ ಪಟದ ಬಳಿಗೆ ಓಡಿ , ಯ ಅಕ್ಷರವನ್ನು ಬೆರಳು ಮಾಡಿ ಸೂಚಿಸಿದರೆ ಮತ್ತು ಅದನ್ನು ಸರಿಯಾಗಿ ಉಚ್ಚರಿಸಿದರೆ ಒಂದು ಅಂಕ ಪಡೆಯುತ್ತದೆ.

• ಪ್ರಾಸ ಹಾಡುವ ಆಟವನ್ನು ಮುಂದುವರಿಸುತ್ತಾ ಶಿಕ್ಷಕನು ಕಾಗುಣಿತ ಸೇರಿದ (ಕಾ, ಕಿ, ಕು) ಅಕ್ಷರಗಳನ್ನು ಗುರುತಿಸಲು ಇತರ ವಿದ್ಯಾರ್ಥಿಗಳನ್ನು ಕೇಳು ತ್ತಾನೆ.

ಶಬ್ದ ಸಂಕೇತಗಳ  ಅರಿವು

ಅಕ್ಷರ ಜ್ಞಾನವು ಶಬ್ದಗಳ ಮತ್ತು ಅಕ್ಷರಗಳ ನಡುವಿನ ಸಂಬಂಧವಾಗಿದ್ದರೆ, ಶಬ್ದದ ಕೆಲವು ಘಟಕಗಳು (ಧ್ವನಿಗಳು) ಪದಗಳನ್ನು ಸೃಷ್ಟಿಸುತ್ತವೆ ಎಂಬ ಧ್ವನಿಜ್ಞಾನದ ಅರಿವು ಹೊಂದಿದೆ. ಕಪ್ಪು ಹಲಗೆಯನ್ನು ಬಳಸುವ ಸರಳ ವ್ಯಾಯಾಮಗಳ ಮೂಲಕ ಧ್ವನಿಜ್ಞಾನದ ಅರಿವಿನ ಮೌಲ್ಯಮಾಪನವನ್ನು ಸಹ ಮಾಡಬಹುದು.

ಮೌಲ್ಯ ಮಾಪನ ಅಭ್ಯಾಸ:

• ಶಿಕ್ಷಕರು  ರೀತಿಯ ಬೋರ್ಡ್ ಮೇಲೆ  ಮಾವು ಎಂಬ ಪದವನ್ನು ಬರೆಯುತ್ತಾರೆ, ಉದಾಹರಣೆಗೆ. ಅವಳು ಅಕ್ಷರಗಳನ್ನು ಅಥವಾ ಧ್ವನಿ ಭಾಗಗಳಾಗಿ (ಧ್ವನಿಗಳು) ಬಿಡಿಸಿ ಬರೆಯುತ್ತಾರೆ. ನಂತರ ಅದರ ಉ ಕಾರಾಂತ್ಯ ತೆಗೆಯುತ್ತಾರೆ ಕೆಲವು ಮೋಜಿನ ಉದಾಹರಣೆ   ಆಗುತ್ತದೆ ಮಾವು –ಮಾವ ಹೀಗೆ

• ಶಿಕ್ಷಕರು ಬೋರ್ಡ್ ಮೇಲೆ  ಪದಗಳ ಪಟ್ಟಿಯನ್ನು ಬರೆಯುತ್ತಾರೆ ಮತ್ತು ವಿದ್ಯಾರ್ಥಿಗಳು ಚಪ್ಪಾಳೆ ಮೂಲಕ ಧ್ವನಿ ಭಾಗಗಳಾಗಿ ಅವುಗಳನ್ನು ಬಿಡಿಸಬೇಕು.

• ಶಿಕ್ಷಕರು ಒಂದು ಕಥೆಯನ್ನು ನಿರೂಪಿಸುತ್ತಾರೆ ಮತ್ತು ನಂತರ ಪ್ರತಿ ವಿದ್ಯಾರ್ಥಿಗೆ ಬರೆಯಲ್ಪಟ್ಟ ಕಥೆಯಿಂದ ಪರಿಚಿತ ಪದಗಳನ್ನು ಹೊಂದಿರುವ ಫ್ಲಾಶ್ ಕಾರ್ಡುಗಳ ಒಂದು ಸೆಟ್ ಅನ್ನು ವಿತರಿಸುತ್ತಾರೆ.

• ಶಿಕ್ಷಕರು ನಂತರ ಕಥೆಯನ್ನು ಮತ್ತೆ ಹೇಳುತ್ತಾರೆ ಮತ್ತು ವಿದ್ಯಾರ್ಥಿಗಳು ಪರಿಚಿತ  ಪದವನ್ನು ಕೇಳಿದಾಗ ಸರಿಯಾದ ಫ್ಲಾಶ್ಕಾರ್ಡ್ ಅನ್ನು ತೋರಿಸಬೇಕು.

ಸಂಕೇತ ಬಿಡಿಸುವುದು

ಪದಗಳನ್ನು ಗುರುತಿಸಲು ಮತ್ತು ಪಠ್ಯದಲ್ಲಿ ಅಥವಾ ಪ್ರತ್ಯೇಕವಾಗಿ ಓದುವುದಕ್ಕೆ ಅಕ್ಷರ-ಧ್ವನಿ ಸಂಬಂಧವನ್ನು ಬಳಸುವ ಸಾಮರ್ಥ್ಯವೇ ಸಂಕೇತ ಬಿಡಿಸುವುದು ಅಥವಾ ಡಿಕೋಡಿಂಗ್ ಆಗಿದೆ. ವಿದ್ಯಾರ್ಥಿಯ ಓದುವ ನಿಖರತೆಯನ್ನು ಅಳೆಯಲು ಡಿಕೋಡಿಂಗ್ ಅನ್ನು ನಿರ್ಣಯಿಸುವುದು ಮುಖ್ಯ.

ಮೌಲ್ಯ ಮಾಪನ ಅಭ್ಯಾಸ:

• ಶಿಕ್ಷಕ ಪ್ರತ್ಯೇಕ ಪದಗಳನ್ನು ವಿದ್ಯಾರ್ಥಿಗಳು ಒದಗಿಸುತ್ತಾರೆ ಮತ್ತು ಪ್ರತಿ ಪದವನ್ನು ಗಟ್ಟಿಯಾಗಿ ಓದಲು ಹೇಳುತ್ತಾರೆ. ಸರಿಯಾದ ಉಚ್ಚಾರಣೆಗೆ ಪಾಯಿಂಟುಗಳನ್ನು ನೀಡಲಾಗುತ್ತದೆ.

• ಶಿಕ್ಷಕ ಅಸಂಬದ್ಧ ಪದಗಳನ್ನು ಮಾಡುತ್ತಾನೆ ಮತ್ತು ಮೋಜಿಗಾಗಿ ಅವುಗಳನ್ನು ಓದಲು ವಿದ್ಯಾರ್ಥಿಗಳನ್ನು ಕೇಳುತ್ತಾರೆ.

ನಿರರ್ಗಳ ಓದುವುದು

ಪಠ್ಯವನ್ನು 'ವೇಗ, ನಿಖರತೆ ಮತ್ತು ಅಭಿವ್ಯಕ್ತಿಯೊಂದಿಗೆ' ಓದುವುದು ಮತ್ತು ಕಾಂಪ್ರಹೆನ್ಷನ್ಗೆ ನಿಕಟ ಸಂಪರ್ಕ ಹೊಂದಿದ ಸಾಮರ್ಥ್ಯವೇ ನಿರರ್ಗಳ ಓದುವುದು. ಒಬ್ಬ ಓದುಗನು ತನ್ನ ಮನಸ್ಸಿನಲ್ಲಿ ಅದರ ಒಟ್ಟಾರೆ ಅರ್ಥವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುವಂತೆ ಮತ್ತು ಅದರ ಸುಸಂಬದ್ಧವಾದ ಚಿತ್ರವನ್ನು ರಚಿಸಲು ತ್ವರಿತವಾಗಿ ಪಠ್ಯವನ್ನು ಓದಬೇಕು.

 

ಮೌಲ್ಯ ಮಾಪನ ಅಭ್ಯಾಸ

• ಶಿಕ್ಷಕನು ಒಂದು ಗದ್ಯ ಭಾಗವನ್ನು  ಆಯ್ಕೆಮಾಡುತ್ತಾನೆ.ಪದದ ಸಂಖ್ಯೆಗಳನ್ನು ಲೆಕ್ಕ ಮಾಡುತ್ತಾನೆ ಮತ್ತು ಪ್ರತಿಯೊಂದು ಪದಕ್ಕೂ ಒಂದು ಅಂಕವನ್ನು ನಿಗದಿಪಡಿಸಲಾಗುತ್ತದೆ.

• ವಿದ್ಯಾರ್ಥಿಗಳು ಒಬ್ಬೊಬ್ಬರೇ  ಗದ್ಯವನ್ನು  ಗಟ್ಟಿಯಾಗಿ ಓದಬೇಕು. ಬಿಟ್ಟುಬಿಡಲಾದ ಅಥವಾ ತಪ್ಪಾಗಿ ಓದುವ ಪದಗಳನ್ನು ಪರಿಗಣಿಸಲಾಗುವುದಿಲ್ಲ.

ವಿದ್ಯಾರ್ಥಿಯ ಸ್ಪಷ್ಟತೆಯನ್ನು ನಿರ್ಧರಿಸಲು ಶಿಕ್ಷಕನು ಒಟ್ಟು ಅಂಕಗಳನ್ನು ಬರೆಯುತ್ತಾನೆ.

ಓದುವಿಕೆ ಗ್ರಹಿಸುವುದು

ಓದಿದ್ದನ್ನು ಗ್ರಹಿಸುವುದು  ಅಥವಾ ಪಠ್ಯವು ಏನನ್ನು ತಿಳಿಸುತ್ತಿದೆ ಎಂಬ ಬಗ್ಗೆ ತಿಳಿಯುವುದು ನಾವು ಓದುವುದರ ಮುಖ್ಯ ಕಾರಣವಾಗಿದೆ. ಇದು ಡಿಕೋಡಿಂಗ್, ಸರಾಗ ಓದುವಿಕೆ, ಅಕ್ಷರ ಜ್ಞಾನ ಮತ್ತು ಧ್ವನಿಜ್ಞಾನದ ಅರಿವಿನಂತಹ ಹಿಂದಿನ ನಾಲ್ಕು ಅಂಶಗಳನ್ನು ಒಳಗೊಂಡಿದೆ.

ಮೌಲ್ಯ ಮಾಪನ ಅಭ್ಯಾಸ

• ಶಿಕ್ಷಕರು ವಿದ್ಯಾರ್ಥಿಗಳಿಂದ ವಾಕ್ಯವೃಂದವನ್ನು ಓದಿಸುತ್ತಾರೆ ಮತ್ತು ನಂತರ ಪಠ್ಯದ ಆಧಾರದ ಮೇಲೆ ಅರ್ಥ ಗ್ರಹಣೆ ಪ್ರಶ್ನೆಗಳನ್ನು ಕೇಳುತ್ತಾರೆ. ವಿದ್ಯಾರ್ಥಿಗಳು ಮೌಖಿಕವಾಗಿ ಉತ್ತರಿಸುತ್ತಾರೆ.

• ಶಿಕ್ಷಕರು ತಪ್ಪು ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ವಿದ್ಯಾರ್ಥಿಗಳು ಅದನ್ನು ಸರಿಪಡಿಸಲು ಕಾಯುತ್ತಾರೆ.

• ಶಿಕ್ಷಕನು ಬರೆಯುವ ಅಭ್ಯಾಸ ಪತ್ರವನ್ನು ತಯಾರಿಸಿ ಅದರಲ್ಲಿ  ಖಾಲಿ ಜಾಗವನ್ನು ಭರ್ತಿ ಮಾಡಿ ಅಭ್ಯಾಸ ಆಯ್ಕೆ ಇರಿಸುತ್ತಾರೆ ವಿದ್ಯಾರ್ಥಿಗಳು ಉತ್ತರವನ್ನು ತುಂಬಲು ಪಠ್ಯದಿಂದ ಸರಿಯಾದ ಪದಗಳನ್ನು ಬಳಸುತ್ತಾರೆ.

• ಕಥೆಯು ತಮ್ಮದೇ ಮಾತಿನಲ್ಲಿ ಕಥೆಯನ್ನು ಹೇಳಲು ವಿದ್ಯಾರ್ಥಿಗಳನ್ನು ಕೇಳುತ್ತಾರೆ. ಚೆಂಡು ಸುತ್ತಲೂ ಕೈ ಬದಲಾಯಿಸುವ ಆಟದ ಮೂಲಕ ಇದನ್ನು ಮಾಡಬಹುದು. ಚೆಂಡನ್ನು ಹಿಡಿಯುವವನು ಕಥೆಯಿಂದ ಒಂದು ವಾಕ್ಯವನ್ನು ಹೇಳಬೇಕು.

ಬೆಳವಣಿಗೆ ಪೋಷಿಸುವುದು

ಶಿಕ್ಷಕರು ತಮ್ಮ ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಕಲಿಕೆಯ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲು ವಿವಿಧ ವಿಧಾನಗಳನ್ನು ಬಳಸಬಹುದು, ಅವುಗಳಲ್ಲಿ ಓದುವುದು ಒಂದು. ನಿಯಮಿತವಾಗಿ ನಡೆಸಿದ ಮೌಲ್ಯಮಾಪನಗಳು ಬೋಧನಾ ಶೈಲಿಗಳನ್ನು ಸುಧಾರಿಸುತ್ತವೆ ಅಲ್ಲದೆ ವಿದ್ಯಾರ್ಥಿಗಳಲ್ಲಿ ಹೆಚ್ಚು ಆತ್ಮವಿಶ್ವಾಸ ಬೆಳೆಯಲು ಮತ್ತು ಕಲಿಯಲು ಉತ್ತೇಜನಕ್ಕೆ ಸಹಾಯ ಮಾಡುತ್ತಾರೆ. ಎಲ್ಲಕ್ಕೂಮುಖ್ಯವಾಗಿ, ಅವರು ಶೈಕ್ಷಣಿಕ ಪ್ರಗತಿ ಮತ್ತು ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವ ಅನುಕೂಲಕರವಾದ ವಾತಾವರಣವನ್ನು ಶಾಲೆಗಳಲ್ಲಿ ಸೃಷ್ಟಿಸುತ್ತಾರೆ.

 

 

18462 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು