ಒಂದು ಸರಳವಾದ ಚಟುವಟಿಕೆ ವಿದ್ಯಾರ್ಥಿಗಳ ಕುತೂಹಲವನ್ನು ಪ್ರಚೋದಿಸಬಹುದು

  ನಾನು ಸ್ವಾಮಿ ವಿವೇಕಾನಂದ ಗ್ರಾಮೀಣ ಶಿಕ್ಷಣ ಸೊಸೈಟಿ ಶಾಲೆಯಲ್ಲಿರುವ ಮಾಧ್ಯಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕಿ ಆಗಿದ್ದೇನೆ. ನಾನು ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಕಲಿಸುತ್ತೇನೆ. ನನ್ನ ಮಕ್ಕಳು ಪಾಠ ಕಲಿಯುವುದನ್ನು ಆನಂದಿಸುವಾಗ ನಾನು ನನ್ನ ತರಗತಿಯಲ್ಲಿ ಪಾಠಮಾಡುವುದನ್ನು ಆನಂದಿಸುತ್ತೇನೆ. ಅದಕ್ಕಾಗಿಯೇ ನಾನು ನನ್ನ ಪಾಠಗಳನ್ನು ನವೀನ ಮತ್ತು ಸಾಧ್ಯವಾದಷ್ಟು ಮಾಡಿ ತೋರಿಸ ಬಹುದಾದದ್ದನ್ನಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತೇನೆ.


WhatsApp Image 2017-08-23 at 9.49.42 AM (1)

ಈ ತಿಂಗಳು, ನನ್ನ 9 ನೇ ತರಗತಿ ವಿದ್ಯಾರ್ಥಿಗಳಿಗೆ "ಅಂಗಾಂಶಗಳ(ಟಿಶ್ಯೂಸ್)" ಬಗ್ಗೆ ಬೋಧಿಸುವಾಗ, ಚಿಗುರು ಕುಡಿ ಅಥವಾ ಬೆಳವಣಿಗೆ ಅಂಗಾಂಶಗಳು ಹೇಗೆ ಬೆಳೆಯುತ್ತಾ ಹೋಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡುವ ರೀತಿಯನ್ನು ನಾನು ಹುಡುಕುತ್ತಿದ್ದೆನು. ನಾನು ಅನೇಕ ಚಟುವಟಿಕೆಗಳನ್ನು ಆನ್ ಲೈನ್ನಲ್ಲಿ ನೋಡಿದೆ .ಆದರೆ ನನ್ನ ತರಗತಿಯ ಪಾಠಕ್ಕೆ ಸೂಕ್ತವಾದದನ್ನು ಪಡೆಯಲಾಗಲಿಲ್ಲ. ಆದ್ದರಿಂದ, ನಾನು ಮತ್ತೆ ನನ್ನ ಪುಸ್ತಕಕ್ಕೆ ತಿರುಗಿ ಅಲ್ಲಿ ನಾನು ಸ್ವಾರಸ್ಯಕರ ಪ್ರಯೋಗವನ್ನು ಕಂಡುಕೊಂಡೆ. ನಮ್ಮಲ್ಲಿ ಹೆಚ್ಚಿನವರು ಪುಸ್ತಕದಲ್ಲಿ ಒದಗಿಸಿದ ಹೆಚ್ಚುವರಿ ಚಟುವಟಿಕೆಗಳನ್ನು ಗಮನಿಸದೆ ಬಿಟ್ಟುಬಿಡುತ್ತಾರೆ ಆದರೆ ತರಗತಿಯಲ್ಲಿ ಆ ಚಟುವಟಿಕೆಗಳನ್ನು ಮಾಡಿಸುವುದು ಪಾಠಕ್ಕೆ ಬಹಳಷ್ಟು ಮೌಲ್ಯವನ್ನು ಸೇರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಇದೇನೋ ಒಂದು ಸಣ್ಣ ಹೆಜ್ಜೆಯಾಗಿದ್ದರೂ ಸುಂದರ ಫಲಿತಾಂಶಗಳನ್ನು ತಂದಿತು.

 

ಮರುದಿನ ನಾವೆಲ್ಲರೂ ಅಗತ್ಯ ವಸ್ತುಗಳ ಜೊತೆ ಸಿದ್ಧರಾಗಿಬಂದೆವು. ನನ್ನ ಮಕ್ಕಳು ತುಂಬಾ ಉತ್ಸುಕರಾಗಿದ್ದರು. ನಾವು ಈರುಳ್ಳಿ ಸಸ್ಯವನ್ನು ಬೀಕರ್ ನಲ್ಲಿ ಬೆಳೆಸಲಿದ್ದೇವೆ. ಆದ್ದರಿಂದ, ನಾವು ಪ್ರಯೋಗಾಲಯಕ್ಕೆ ಹೋದೆವು, ನಮ್ಮ ಬೀಕರ್ ಅನ್ನು ‍ತೆಗೆದುಕೊಂಡು ಈರುಳ್ಳಿಯನ್ನು ಸ್ವಲ್ಪ ನೀರಿನಿಂದ ಇರಿಸಿ. ಮುಂದಿನ ಕೆಲಸವೆಂದರೆ, ಮಕ್ಕಳು ಸಸ್ಯದ ದೈನಂದಿನ ಬೆಳವಣಿಗೆಯನ್ನು ಕುರಿತು ಟಿಪ್ಪಣಿಗಳನ್ನು ತೆಗೆದುಕೊಳ್ಳಬೇಕಾಗಿತ್ತು. 2-3 ದಿನಗಳವರೆಗೆ ತಾಳ್ಮೆಯಿಂದ ಕಾಯುತ್ತಿದ್ದಾಗ, ನಮ್ಮ ಮಕ್ಕಳು ಈರುಳ್ಳಿಯಿಂದ ಪುಟ್ಟ ಪುಟ್ಟ ಬೇರುಗಳು ಹೊರಬರುವುದನ್ನು ಬಲು  ಆಶ್ಚರ್ಯದಿಂದ ನೋಡಿದರು. ಬೇರಿನ ತರುವಾಯ ಕಾಂಡ ಚಿಗುರೊಡೆದು ಸುಂದರ ಎಲೆಗಳು ಬೆಳೆಯುವುದು ಅವರಿಗೆ ಚಿಗುರುಕುಡಿ ಅಂಗಾಂಶಗಳು ಬೆಳೆಯುತ್ತಾ  ಸರಳ ಶಾಶ್ವತ ಅಂಗಾಂಶ ವಾಗುವುದನ್ನು ತೋರಿಸಿತು.

WhatsApp Image 2017-08-23 at 9.49.43 AM

ವೀಕ್ಷಣೆಯ ವಸ್ತು: ಈರುಳ್ಳಿ ಗಿಡ

ನಮ್ಮ ಮಕ್ಕಳಿಗಂತೂ  ಇದೊಂದು  ಪವಾಡ ಎಂದು ಅನಿಸಿತು. ಅವರ ಆಶ್ಚರ್ಯ ಭರಿತ ಮುಖ ನೋಡಲು ಸುಂದರವಾಗಿತ್ತು. ಮಕ್ಕಳು ತಮ್ಮ ವೀಕ್ಷಣೆಯನ್ನು ಟಿಪ್ಪಣಿ ಮಾಡಿಕೊಳ್ಳುತ್ತಿರುವಾಗ ನಾನು ನಿಜವಾಗಿಯೂ ಸಂತಸಪಟ್ಟೆ. ಅವರು ಮುಂದಿನ ಹಂತದ ಬಗ್ಗೆ ಕುತೂಹಲದಿಂದ ತುಂಬಿದ್ದರು. ಇದರ ಮುಂದುವರಿಕೆಯಾಗಿ ನನ್ನ ತರಗತಿಯಲ್ಲಿ ಇಂತಹ ಚಟುವಟಿಕೆಗಳನ್ನು ಹೆಚ್ಚುಹೆಚ್ಚಾಗಿ ಮಾಡಲು ನಾನು ಎದುರು ನೋಡುತ್ತಿದ್ದೇನೆ.

ಪ್ರಾಯೋಗಿಕವಾಗಿ ಮಕ್ಕಳಿಗೆ ಪರಿಕಲ್ಪನೆಗಳನ್ನು ಕಲಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಇದು ಅವರ ತಿಳುವಳಿಕೆಯನ್ನು ಉತ್ತಮಗೊಳಿಸುತ್ತದೆ ಮತ್ತು ಶಿಕ್ಷಕರಿಗೂ ಕೂಡ ನಮ್ಮ ಮಕ್ಕಳ ಬಗ್ಗೆ ಸಾಕಷ್ಟು ಜ್ಞಾನವನ್ನು ನೀಡುತ್ತದೆ. ದೊಡ್ಡ ದೊಡ್ಡ ಪ್ರಯೋಗಗಳಿಗಾಗಿ ಹುಡುಕಬೇಕಾದ ಅಗತ್ಯವಿಲ್ಲ, ಈ ರೀತಿಯ ಸರಳ ಚಟುವಟಿಕೆ ಅವರಲ್ಲಿ ಆಸಕ್ತಿಯ ಕಿಡಿಹೊತ್ತಿಸಲು ಸಾಕು. ದೈನಂದಿನ ಜೀವನಕ್ಕೆ ಸಂಬಂಧಿಸಿದ ಹೆಚ್ಚಿನ ಚಟುವಟಿಕೆಯೊಂದಿಗೆ ಎಲ್ಲ ಶಿಕ್ಷಕರು ತಮ್ಮ ಪಾಠಗಳನ್ನು ಆಸಕ್ತಿದಾಯಕವಾಗಿ ಮಾಡಲು ಪ್ರಯತ್ನಿಸಬೇಕು ಎಂದು ನಾನು ಭಾವಿಸುತ್ತೇನೆ.

ಶ್ರೀಮತಿ ಮಂಜು, ಶಿಕ್ಷಕಿ, ಸ್ವಾಮಿ ವಿವೇಕಾನಂದ ಗ್ರಾಮೀಣ ಶಿಕ್ಷಣ ಸೊಸೈಟಿ (SVRES)_

 


Republished with permission from the blog chronicles of Mantra4Change titled Stories from Schools.

18462 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು