ಎಲ್ಲಾ ಮಕ್ಕಳಿಗೂ ಅಗತ್ಯಗಳಿವೆ,ಆದರೆ ಕೆಲವು ಮಕ್ಕಳಿಗೆವಿಶೇಷ ಅಗತ್ಯಗಳಿರುತ್ತವೆ.

ಶಿವರಾಜ ಐದನೇ ತರಗತಿಯಲ್ಲಿಓದುತ್ತಿರುವ ಒಬ್ಬ, ಬುದ್ಧಿವಂತ ಚುರುಕಾದ ಲವಲವಿಕೆಯ ಬಾಲಕ . ಆದರೆ ಅವನಿಗೆ ಮೂರು ಅಥವಾ ಹೆಚ್ಚು ಅಕ್ಷರಗಳಿರುವ ಪದಗಳನ್ನು ಓದಲು ಸಾಧ್ಯವಿರಲಿಲ್ಲ. ಯಾರಾದರೂ ಹೇಳಿಕೊಡದೆ  ಒಂದು ವಾಕ್ಯ ಓದಲು ಸಾಧ್ಯವಿರಲಿಲ್ಲ ಮತ್ತು ಸಹಾಯವಿಲ್ಲದೆ ಬರೆಯಲು ಸಾಧ್ಯವಿರಲಿಲ್ಲ. ಅವರು ಗಣಿತದಲ್ಲಿ ಪದಗಳಲ್ಲಿ ಕೊಟ್ಟ ಲೆಕ್ಕಗಳು ಬಂದಾಗ ಬಹಳ ಪೇಚಾಡುತ್ತಿದ್ದ ಮತ್ತು ಏಕೆ ಹೀಗೆ ಆಗುತ್ತಿದೆ ಎಂಬ ಬಗ್ಗೆ ಅವನ ಶಿಕ್ಷಕರಿಗೆ ತಲೆಬುಡ ಅರ್ಥವಾಗುತ್ತಿರಲಿಲ್ಲ.

ಎಲ್ಲಾ ತರಗತಿಯಲ್ಲೂ , ಹೀಗೆ ಓದುಬರಹ  ನಿಭಾಯಿಸಲು ಕಷ್ಟಪಡುವ ಮಕ್ಕಳು ಇವೆ. ಈ ಮಕ್ಕಳು ಬೇರೆ ಎಲ್ಲ ಕ್ಷೇತ್ರಗಳಲ್ಲಿ , ಬುದ್ಧಿವಂತ ಬುದ್ಧಿವಂತರೂ ಚುರುಕಾದವರೂ ಲವಲವಿಕೆ ಇರುವವರೂ ಆಗಿದ್ದರೂ ಬಲು ಮೂಲವಾದ ವಿದ್ಯೆಗಳನ್ನು ಕಲಿಯಲು ಬಹಳ ಕಷ್ಟಪಡುತ್ತಾರೆ. ಅವರು ಸಮಸ್ಯಾತ್ಮಕ   ಮಕ್ಕಳಲ್ಲ ಆದರೆ ಸಮಸ್ಯೆ ಎದುರಿಸುತ್ತಿರುವ ಮಕ್ಕಳು.

ಮೆದುಳು ವಿವಿಧ ಬಗೆಯ ಮಾಹಿತಿಯನ್ನು   ಅನೇಕ  ರೀತಿಯಲ್ಲಿ ಸಂಸ್ಕರಿಸುತ್ತದೆ.  ಕಲಿಕೆಗೆ ನಿರ್ಣಾಯಕ ಎಂದು  ಪರಿಗಣಿಸಲಾಗುಗುವ ಎರಡು ಮುಖ್ಯ ವಿಧಾನಗಳೆಂದರೆ:

 • ಇಂದ್ರಿಯ ಸಂವೇದನಾ ಪ್ರಕ್ರಿಯೆ
 • ವಿಷಯ ಗ್ರಹಣೆ ಪ್ರಕ್ರಿಯೆ
ಮೆದುಳು ಇಂದ್ರಿಯಗಳಿಂದ  ಪಡೆದ ಮಾಹಿತಿಯನ್ನು ಬಳಸುವುದಕ್ಕೆ  ಇಂದ್ರಿಯ ಸಂವೇದನಾ ಪ್ರಕ್ರಿಯೆ ಎಂದು ಹೆಸರು.  ಅರಿವಿನ ಪ್ರಕ್ರಿಯೆ ಮಾಹಿತಿ ಇಂದ್ರಿಯಗಳ ಮೂಲಕ ಬಂದ ನಂತರ ಮೆದುಳು ಮಾಡುವ ಕೆಲಸಕ್ಕೆವಿಷಯ ಗ್ರಹಣೆ ಪ್ರಕ್ರಿಯೆ ಎಂದು ಹೆಸರು.  ಕಣ್ಣುಗಳು ಒಂದು ಆಕಾರ ನೋಡಿ ಅದರ  ಚಿತ್ರವನ್ನು  ಮೆದುಳಿಗೆ ಕಳಿಸುತ್ತ್ದದೆ ಮೆದುಳು ಅದನ್ನು ಮರ  ಎಂದು ಗುರುತಿಸುತ್ತದೆ.

ನೋಟ, ಶಬ್ಧ, ಸ್ಪರ್ಶ, ರುಚಿ ಮತ್ತು ವಾಸನೆ: ಐದು ಇಂದ್ರಿಯಗಳ ಪ್ರಕ್ರಿಯೆ ವಿಧಾನಗಳಿವೆ. ಇವುಗಳಲ್ಲಿ, ಕಲಿಕೆ ಮೇಲೆ ಪರಿಣಾಮ ಮಾಡುವ ಮುಖ್ಯ ಸಂವೇದನಾ ಪ್ರದೇಶಗಳು ದೃಶ್ಯ ಮತ್ತು ಧ್ವನಿಗ್ರಹಣ ಪ್ರಕ್ರಿಯೆ ವಾಹಿನಿಗಳು.

 
ನೋಟಗಳ ಸಂಸ್ಕರಣೆ
ನೋಟಗಳ ಸಂಸ್ಕರಣೆಯು  ಮೆದುಳು ಎಷ್ಟು ಚೆನ್ನಾಗಿ  ದೃಶ್ಯ ಮಾಹಿತಿಯನ್ನು ಹೀರಿಕೊಳ್ಳುತ್ತದೆ ಎಂಬುದನ್ನು ಅವಲಂಬಿಸುತ್ತದೆ. ಇದು ಮುಖ್ಯವಾಗಿ  ಮುಂದಿನವ ನ್ನು ಒಳಗೊಂಡಿರುತ್ತದೆ. 
 
 • ವಸ್ತುಗಳ ನಡುವೆ ವ್ಯತ್ಯಾಸಗಳನ್ನು ಗುರುತಿಸುವುದು.
 • ದೃಶ್ಯದ ವಿವರಗಳನ್ನು ನೆನಪಿಟ್ಟುಕೊಳ್ಳುವುದು.
 • ದೃಶ್ಯೀಕರಣ ಮತ್ತು ಕಲ್ಪಕತೆ

ನೋಟಗಳ  ಸಂಸ್ಕರಣೆಗೆ ಕಷ್ಟಪಡುವ ಮಕ್ಕಳು ಸಾಮಾನ್ಯವಾಗಿ   ಕಾಗುಣಿತ, ಓದುವುದು ಮತ್ತು ಗಣಿತದಲ್ಲಿ  ಸಮಸ್ಯೆಗಳನ್ನು ಎದುರಿಸುತ್ತಾರೆ ಏಕೆಂದರೆ ಅವರು ಅಕ್ಷರಗಳು ಮತ್ತು ಚಿಹ್ನೆಗಳು ಹಾಗು ಸಂಕೇತಗಳನ್ನು ದೃಷ್ಯೀಕರಿಸಿ ನೋಡುವಲ್ಲಿ ತೊಂದರೆ ಅನುಭವಿಸುತ್ತಾರೆ. ಅಂತಹ ಮಕ್ಕಳು ಓದುವ, ಕಾಗುಣಿತದ ಮತ್ತು ಕೈಬರಹದ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅವರು‘b’ ಬದಲಾಗಿ ‘d’ ಎಂದು  ‘who’ ಬದಲಾಗಿ ‘how’'ಎಂದು   ' 69’ ಬದಲಾಗಿ ‘96’ಎಂದು ‘tale’  ಬದಲಾಗಿ‘late’ ಎಂದು  ಓದುತ್ತಾರೆ. ಅವರ ಡ್ರಾಯಿಂಗ್ / ಬರವಣಿಗೆ ಗೋಜಲು ಗುಂಪಾಗಿರುತ್ತದೆ  ಮತ್ತು ಕೊಚಾಪಿಚಿ ಆಗಿರುತ್ತದೆ.  ಮತ್ತು ತಮ್ಮ ಪದಗಳ ನಡುವೆ ಅಂತರ ಇಡುವಲ್ಲಿ  ತೊಂದರೆಗಳನ್ನು ಅನುಭವಿಸುತ್ತಾರೆ. ಓದುವಾಗ ಮತ್ತು ಬರೆಯುವಾಗ ಅವರು ವಾಕ್ಯಗಳಲ್ಲಿ ಒಂದೊಂದು ಪದಗಳನ್ನೆ ಅಥವಾ ಅಕ್ಷರಗಳನ್ನೇ ಬಿಟ್ಟು ಬಿಡುತ್ತಾರೆ. 

ಧ್ವನಿಗ್ರಹಣ ಪ್ರಕ್ರಿಯೆ

ಶ್ರವಣೇಂದ್ರಿಯದ ಮೂಲಕ ಬಂದ ಮಾಹಿತಿ ವಿಶ್ಲೇಷಿಸುವ ಪ್ರಕ್ರಿಯೆ ಒಳಗೊಂಡಿದೆ
 
 • ಪರಸ್ಪರ ಭಿನ್ನವಾದ ವಿವಿಧ ಶಬ್ದಗಳನ್ನು ಮತ್ತು ಧ್ವನಿಗಳನ್ನು ಕೇಳುವುದು.
 • ನಿರ್ದಿಷ್ಟ ಪದಗಳನ್ನು ಅಥವಾ ಸಂಖ್ಯೆಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು.
 • ಒಂದು ಅಕ್ಷರ / ಸಂಖ್ಯೆಯ ಧ್ವನಿ ಯನ್ನು ಅದರ ಚಿಹ್ನೆಗೆ  ಸಂಪರ್ಕಿಸುವುದು.
 • ಸಾಮಾನ್ಯ ಧ್ವನಿ ಮಾದರಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು.
ಧ್ವನಿಗ್ರಹಣ ಪ್ರಕ್ರಿಯೆಯ ಸಮಸ್ಯೆಗಳನ್ನು ಹೊಂದಿರುವ ಮಕ್ಕಳು ಸಾಮಾನ್ಯವಾಗಿ ಓದಲು, ಬರೆಯಲು ಮತ್ತು ಭಾಷೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಅವರು ಓದುವ ಮತ್ತು, ಹೊಸ ಪದಗಳನ್ನು ಅರ್ಥ ಮಾಡಿಕೊಳ್ಳುವ ಮತ್ತು ೋದಿದ ವಿಷಯದ ಗ್ರಹಣೆ  ಕಾಗುಣಿತ ಮತ್ತು ವಾಕ್ಯ ರಚನೆ ಓದುವ ಮತ್ತು ಮಾತನಾಡುವಲ್ಲಿ ಕಷ್ಟಪಡುತ್ತಾರೆ.  ಬಾಯಲ್ಲಿ ಕೊಟ್ಟ ನಿರ್ದೇಶನಗಳನ್ನು ಅನುಸರಿಸಲು ಮತ್ತು ಮೌಖಿಕ ಸೂಚನೆಕೊಡಲುಅವರು ಕಷ್ಟಪಡುತ್ತಾರೆ . ಅವರು ಉಕ್ತ ಲೇಖನ ತೆಗೆದು ಕೊಳ್ಳಲು   ಸಮಸ್ಯೆಪಡುತ್ತಾರೆ. ( ‘music’ ಎಂದು ಕೇಳಿಸಿಕೊಂಡು 'mowseck' ಎಂದು ಬರೆಯುತ್ತಾರೆ) .ಚಿತ್ರಗಳು ಮತ್ತು  ಪದಗಳಿಗೆ ಸಂಬಂಧ ಕಲ್ಪಿಸುವಲ್ಲಿ ಎಡವುತ್ತಾರೆ  (ಮನೆ ಅಥವಾ ಪ್ರಾಣಿಯ ಚಿತ್ರ ಹೆಸರಿಸಲು ಸಾಧ್ಯವಾಗುವುದಿಲ್ಲ).ಅಥವಾ ಸಾಮಾನ್ಯ ರಾಗಗಳನ್ನು ನೆನಪಿನಲ್ಲಿಟ್ಟು ಕೊಳ್ಳಲಾರರು. 
 
ನೆನಪಿಡಿ, ಈ ಮಕ್ಕಳು ಬುದ್ಧಿವಂತರು ಮತ್ತು ಯಾವದೇ ಸಂವೇದನಾ ತೊಂದರೆಯಿರುವುದಿಲ್ಲ (ಕುರುಡುತನ,ಕಿವುಡುತನದ ಇತ್ಯಾದಿ ಸಮಸ್ಯೆಗಳನ್ನು ಹೊಂದಿರುವುದಿಲ್ಲ, ) ಅವರ ತೊಂದರೆಗಳ ಮೂಲ ಮಾಹಿತಿ ಸಂಸ್ಕರಣದಲ್ಲಿದೆ.ಅಂದರೆ  ಕಣ್ಣು ಕಂಡದ್ದನ್ನು ಮತ್ತು  ಕಿವಿ ಮೂಲಕ ಕೇಳಿದ್ದನ್ನು ಮಿದುಳು ಅರ್ಥ ಮಾಡಿಕೊಳ್ಳುವುದಿಲ್ಲ. ಸಮಸ್ಯೆ ಇಂದ್ರಿಯದಲ್ಲಿ  ಅಥವಾ ಮೆದುಳಿನಲ್ಲಿ ಇರುವುದಿಲ್ಲ. ಆದರೆ ಒಂದರಿಂದ ಇನ್ನೊಂದಕ್ಕೆ  ಸಾಗುವ ಪ್ರಯಾಣದಲ್ಲಿ ಇರುತ್ತದೆ.
 
 ಕಲಿಕೆಯಲ್ಲಿ ಸಮಸ್ಯೆ ಇರುವ  ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು? ನಾವು ಆದ್ದರಿಂದ ಅವರ ಕಲಿಕೆಯ ಅಂತರವನ್ನು ಇಲ್ಲವಾಗಿಸುವ  ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹೇಗೆ ಸಾಧ್ಯ?

 

ಕಲಿಯುವ ಸಮಸ್ಯೆಗಳ ಮುನ್ನೆಚ್ಚರಿಕೆ ನೀಡುವ ಲಕ್ಷಣಗಳು:

ತಡವಾಗಿಮಾತು ಕಲಿಯುವುದು - ತೊದಲು ತೊದಲಾಗಿ ಮಾತನಾಡುವುದು.
ನಿಧಾನವಾಗಿ ಶಬ್ದಕೋಶದ ಬೆಳವಣಿಗೆ
ನೀಡಿದ ನಿರ್ದೇಶನ ಅಥವಾ ವಾಡಿಕೆಯಕೆಲಸ ಕಾರ್ಯಗಳನ್ಮು  ಅನುಸರಿಸಲು ಕಡಿಮೆ ಸಾಮರ್ಥ್ಯ.
ದುಡುಕುತನ,ಮತ್ತು  ಯೋಜನೆಯ ಕೊರತೆ
ಅತಿಯಾದ ಚಡಪಡಿಕೆ ಮತ್ತು ಬೇಗನೆ ಬೇರೆಡೆ ಗಮನ ಹರಿಯುವುದು
ಕಳಪೆ ಸಮನ್ವಯ, ಸುತ್ತಮುತ್ತಲಿನ ಭೌತಿಕ ಸನ್ನಿವೇಶದ ಅರಿವಿನ ಕೊರತೆ, ಅಪಘಾತಗಳಿಗೆ ಹೆಚ್ಚಾಗಿ ಈಡಾಗುವುದು - "ಯಾವುದೂ ಸರಿಯಾಗಿ ಮಾಡಲ್ಲ " ಎಂಬಂಥ ಮಗು.
ಗೆಳೆಯರೊಂದಿಗೆ ಒಡನಾಡುವಾಗ ತೊಂದರೆ - ತುಂಬಾ ಸ್ನೇಹಿ ಅಥವಾ ತುಂಬಾ ಆಕ್ರಮಣಕಾರಿ
ಸಂಖ್ಯೆಗಳು, ವರ್ಣಮಾಲೆಯ ಕಲಿಕೆಯಲ್ಲಿ  ತೊಂದರೆ. 
ಅಕ್ಷರಗಳು ಮತ್ತು ಶಬ್ದಗಳ ನಡುವೆ ಸಂಪರ್ಕವನ್ನು ತಿಳಿಯಲು ನಿಧಾನ ವಾಗುವುದು.
ಅವೇ ಓದುವ ಮತ್ತು ಕಾಗುಣಿತ ತಪ್ಪುಗಳನ್ನು ಮಾಡುವುದು.
ಸಂಖ್ಯೆಗಳು,ಸರಣಿಗಳು ಮತ್ತು ಅಂಕಗಣಿತದ ಚಿಹ್ನೆಗಳ ಬಗ್ಗೆ ಸಮಸ್ಯೆಗಳು (+ -, X, /, =)
 
 ಶಿಕ್ಷಕರು  ಏನು ಮಾಡಬಹುದು?
 
ಮಗುವಿನ ಬಗ್ಗೆ ಸಾಧ್ಯವಾದಷ್ಟು ತಿಳಿಯಲು ಪ್ರಯತ್-    ಅದರ ಇಷ್ಟಗಳು, ಇಷ್ಟವಾಗದಿರುವವು, ಸಾಮರ್ಥ್ಯಗಳು, ತೊಂದರೆಗಳು, ಮತುಕತೆವಿಧಾನ, ಪೋಷಣೆಯ ಮಟ್ಟಗಳಿಗೆ, ಇತ್ಯಾದಿ
ಮಗುವಿನ ಪರಿಸರದ ಬಗ್ಗೆ ಸಾಧ್ಯವಾದಷ್ಟು ತಿಳಿಯಲು ಪ್ರಯತ್ನಿಸಿ -ಅವನ ನಿಕಟ ಕುಟುಂಬ, ಸಮುದಾಯ, ದಿನಚರಿಗಳು, ಆರ್ಥಿಕ ಪರಿಸ್ಥಿತಿ, ಉದ್ಯೋಗ, ಇತ್ಯಾದಿ (ಕುಟುಂಬದೊಡನೆ ಭೇಟಿ  ಅತ್ಯಗತ್ಯವಾಗಿರುತ್ತದೆ, ಸಾಧ್ಯವಾದರೆ, ಮಗುವಿನ ಮನೆಗೆ ನೀವೇ ಹೋಗಿ ಭೇಟಿ ಆಗಿರಿ.)
ಮಗುವಿನ ಸಮಸ್ಯೆ ಬಗ್ಗೆ ಸಾಧ್ಯವಾದಷ್ಟು ತಿಳಿಯಲು ಪ್ರಯತ್ನಿಸಿ.
ಶಾಲೆಯ ಸಿಬ್ಬಂದಿ / ವ್ಯವಸ್ಥಾಪಕ ಸಮಿತಿ ಜೊತೆ ಒಟ್ಟಾಗಿ ಕುಳಿತು ಈ ನಿರ್ದಿಷ್ಟ ಮಕ್ಕಳ ಅಗತ್ಯಗಳನ್ನು ಚರ್ಚಿಸಿರಿ.
ವೃತ್ತಿಪರ (ಮನಶ್ಶಾಸ್ತ್ರಜ್ಞ / ವಿಶೇಷ ಶಿಕ್ಷಕ) ರ ಸಲಹೆಗೆ ಮಕ್ಕಳನ್ನು ಕಳುಹಿಸಿ ಕೊಡಿ.  ಅಥವಾ ಸಾಧ್ಯವಾದರೆ ಯಾರಾದರೂ ಅಂಥವರ ಜೊತೆ ಮಾತನಾಡಿರಿ. 
 
ಮಗುವಿನ ಕುಟುಂಬದ ಪರಿಸ್ಥಿತಿ ಯನ್ನು ಗಮನದಲ್ಲಿಟ್ಟು ಕೊಂಡು ಸ್ಥಳೀಯವಾಗಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಈ ಸೌಲಭ್ಯಗಳನ್ನು ದೊರಕಿಸುವ ಸಾಧ್ಯತೆಗಳನ್ನು ಮಗುವು ಸೌಲಭ್ಯಗಳನ್ನು ಪಡೆಯಲು ಸಾಧ್ಯತೆ ಎಷ್ಟು ಎಂದು ನೋಡುವುದು 
ರಾಜ್ಯದಲ್ಲಿ ಕಲಿಕೆಯ ತೊಂದರೆಗಳನ್ನು ಹೊಂದಿರುವ ಮಕ್ಕಳ ಶಿಕ್ಷಣ ಬಗ್ಗೆ ನಿಯಮಗಳನ್ನು ಅಂದರೆ ವಿಷಯದ ವಿನಾಯಿತಿ, ಬರವಣಿಗೆ ಪರೀಕ್ಷೆಗೆ  ಲಿಪಿಕರ ಸಹಾಯ  ಪರೀಕ್ಷೆ ಬರೆಯಲು  ಹೆಚ್ಚುವರಿ ಸಮಯ  ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಿ.
ಸಾಮಾನ್ಯ ತರಗತಿಯ ಕಾರ್ಯತಂತ್ರಗಳು
 
 • ಬೇರೆ ಕಡೆ ಗಮನ ಹರಿಸುವುದನ್ನು ಕಡಿಮೆ ಮಾಡಲು ಬಾಗಿಲು ಮತ್ತು ಕಿಟಿಕಿ ಯಿಂದ ದೂರ  - ಸಾಧ್ಯವಾದಷ್ಟು ಶಿಕ್ಷಕರಿಗೆ ಹತ್ತಿರಕ್ಕೆ ಮಗುವಿನ ಸ್ಥಾನವನ್ನುಇರಿಸಿರಿ.
 • ವಾಸ್ತವಿಕ ಮತ್ತು ಸಾಧಿಸಬಹುದಾದ ಮಗುವಿನ ಸಾಮರ್ಥ್ಯವನ್ನು ಅವಲಂಬಿಸಿ ಮಗುವಿಗೆ ಕಲಿಕೆ ಗುರಿಗಳನ್ನು ನಿಗದಿ ಪಡಿಸಿ.
 • ಮಗು ಒಂದು ಸೂಚನೆಯನ್ನು ಅರ್ಥಮಾಡಿಕೊಳ್ಳಲು ವಿಫಲವಾದಾಗ, ಕೇವಲ ಅದರ ಪುನರಾವರ್ತನೆಮಾಡದೇ - ಬೇರೆ ರೀತಿಯಲ್ಲಿ ಹೇಳಿರಿ ಮತ್ತು ಸೂಚನೆಯನ್ನು  ಸರಳಗೊಳಿಸಿರಿ.
 • ಏಕಕಾಲದಲ್ಲಿ ಮಗು   ಕೇಳಲು  ಬರೆಯಲು ಬಯಸಬೇಡಿ.
 • ಮಾಡುವ ಪದಗಳನ್ನು ಬಳಸಿ, ಒಂದು ತಾರ್ಕಿಕ ಅನುಕ್ರಮ ರೀತಿಯಲ್ಲಿ ಸೂಚನೆಗಳನ್ನು ನೀಡಿ ಅನುಕ್ರಮ ಸ್ಪಷ್ಟ (ಉದಾಹರಣೆಗೆ ಮೊದಲಿಗೆ, ಮುಂದೆ, ಕೊನೆಗೆ)
 • ಸರಳ, ಸಂಕ್ಷಿಪ್ತ, ಒಂದೇ ಪರಿಕಲ್ಪನೆಯ ನಿರ್ದೇಶಗಳನ್ನು  ಬಳಸಿ
 • ಹೊಸ ವಿಷಯ ಪ್ರಾರಂಭಿಸುವ ಮೊದಲು ಹಿಂದೆ ಕಲಿತ ಪರಿಕಲ್ಪನೆಗಳು ಮರುಸಮೀಕ್ಷೆಗೆ ಒತ್ತಾಯ ಮಾಡಿ
 • ಕಪ್ಪುಹಲಗೆಯ ಮೇಲೆ ಬರೆಯುವಾಗ ಬಣ್ಣದ ಚಾಕ್ ಬಳಸಿಮಪ್ರಶ್ನೆ ಮತ್ತು   ಉತ್ತರಗಳನ್ನು ಬೇರ್ಪಡಿಸಲು ಪ್ರಶ್ನೆಗಳಿಗೆ  ಬಣ್ಣದ  ಕೋಡ್ ನೀಡಿ
 • ನಿಮ್ಮ ಪಾಠ ಮತ್ತು ಪಟನಿರೂಪಣೆ ಚೆನ್ನಾಗಿ ರಚಿಸಿರಿ -ಅಸ್ಪಷ್ಟ /ಅಮೂರ್ತವಾಗುವುದು ಬೇಡ 
 • ನಿಮ್ಮ ಸಾಧನ, ವಸ್ತು, ಬೋಧನೆ ಸಹಾಯಕ ವ್ಯವಸ್ಥಿತಗೊಳಿಸಿರಿ
 • ಸುಲಭವಾಗಿ ಗ್ರಾಹ್ಯ ಭಾಗಗಳಾಗಿ ಪಾಠವನ್ನು  ವಿಭಜಿಸಿರಿ.
 • ತೋರಿಸಿ , ಪ್ರತ್ಯಕ್ಷ ನಿರೂಪಣೆ ಮಾಡಿ, ಮಾದರಿಗಳನ್ನು ಬಳಸಿ ಮತ್ತು ಪುನರಾವರ್ತಿಸಿ.
 • ಸಹಪಾಠಿಗಳಿಂದ ಬೋಧನೆ ಬಳಸಿ - ತರಗತಿಯ ಉಳಿದವರಿಂದ ಒಬ್ಬ ಮಾರ್ಗದರ್ಶಿ ಆಯ್ಕೆಮಾಡಿ (ಇದು ಒಂದು ದೊಡ್ಡ ಗೌರವ ಎನ್ನುವಂತೆ ಪರಿಗಣಿಸಿರಿ!
 • ಒಂದು ಬಹು ಇಂದ್ರಿಯ ವಿಧಾನ ಬಳಸಿ
 • ಅಭ್ಯಾಸಕ್ಕೆ ಸಾಕಷ್ಟು ಅವಕಾಶ ನೀಡಿ
 • ಕೆಲಸವನ್ನು ಪೂರ್ಣಗೊಳಿಸಲು  ಸಾಕಷ್ಟು ಸಮಯಾವಕಾಶ ನೀಡಿರಿ.
 • ಸಾಧ್ಯವಾದಷ್ಟು  ಅರ್ಥವಾಗುವಂಥ    ಮಾಹಿತಿಯನ್ನು ಮಾಡಿ
 • ಪರೀಕ್ಷಾ ವಸ್ತು ವಿಷಯವನ್ನು    ಓದಿರಿ (ಪ್ರಶ್ನೆ ಪತ್ರಿಕೆಯ ಇತ್ಯಾದಿ)
 • ಮಗುವಿಗೆ ಸ್ವಯಂ-ನಿಯಂತ್ರಣದ ನೀತಿಗಳನ್ನು ಕಲಿಸಿರಿ. ಕಾರ್ಯಗಳನ್ನು  ಯೋಜನೆ  ಮಾಡುವುದು, ನಿರ್ವಹಿಸುವ ಸಮಯ,  ಟಿಪ್ಪಣಿಗಳನ್ನು ಬರೆಯುವುದು
 • ಸುಲಭವಾಗಿ ವಿಚಲಿತರಾಗುವ  ಮಗುವಿಗಾಗಿ ತರಗತಿಯ ಒಂದು ಭಾಗದಲ್ಲಿ ಒಂದು ಕಲಿಕೆಯ ಮೂಲೆಯಲ್ಲಿ ರಚಿಸಿ.

ಮಗುವಿಗೆ  ಪ್ರೋತ್ಸಾಹಿಸಿ ಬೆಂಬಲ ಮತ್ತು  ಗೌರವ ನೀಡಿ

 • ಅವಹೇಳನಕಾರಿ ಶಬ್ಧವನ್ನು ಮತ್ತು ಹಣೆಪಟ್ಟಿಗಳನ್ನು / ಪದಗಳನ್ನು ಬಳಸಬೇಡಿ
 • ಇದು ಅನುಕೂಲಕರವಾಗಿದ್ದ ಹೊರತು ಇತರರೊಂದಿಗೆ ಈ ಮಗುವಿನ  ಕಾರ್ಯಪ್ರಗತಿ ಹೋಲಿಕೆ ಮಾಡಬೇಡಿ
 •  ಸಾರ್ವಜನಿಕವಾಗಿ ಬೇರೆ ಯಾರೂ ಮಕ್ಕಳ ಬಗ್ಗೆ ನಕಾರಾತ್ಮಕ ಟೀಕೆಗಳನ್ನು ಮಾಡಲು ಬಿಡಬೇಡಿ
ಕನ್ನಡಾನುವಾದ: ಜೈಕುಮಾರ್ ಮರಿಯಪ್ಪ.
 
18585 ನೊಂದಾಯಿತ ಬಳಕೆದಾರರು
7253 ಸಂಪನ್ಮೂಲಗಳು