ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು

 ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು

ಬಲು ಪರಿಚಿತ ಸೂಕ್ಷ್ಮದರ್ಶಕಗಳು ಆಪ್ಟಿಕಲ್ ಸೂಕ್ಷ್ಮದರ್ಶಕಗಳು - ಅವುಗಳು ಒಂದು ಚಿತ್ರವನ್ನು ಸೃಷ್ಟಿಸಲು ಬೆಳಕನ್ನು ಬಳಸುತ್ತವೆ. ಇತರ ರೀತಿಯ ಸೂಕ್ಷ್ಮದರ್ಶಕಗಳು ಇವೆ.ಸ್ಕ್ಯಾನಿಂಗ್ ಪ್ರೋಬ್ ಸೂಕ್ಷ್ಮ ದರ್ಶಕಗಳು, ಅಲ್ಟ್ರಾ ಸೂಕ್ಷ್ಮದರ್ಶಕಗಳು ಮತ್ತು ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು  ಇವುಗಳಲ್ಲಿ ಸೇರಿವೆ.

 

ಅರ್ನ್ಸ್ಟ್ ರುಸ್ಕಾ ಮತ್ತು ಮ್ಯಾಕ್ಸ್ ನಾಲ್ ಅವರು 1932 ರಲ್ಲಿ ಮೊದಲ ಎಲೆಕ್ಟ್ರಾನ್ ಸೂಕ್ಷ್ಮದರ್ಶಕವನ್ನು ಸೃಷ್ಟಿಸಿದರು. ಇದರ ಹೆಸರೇ ಸೂಚಿಸುವಂತೆ, ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು ಚಿತ್ರವೊಂದನ್ನು ರಚಿಸಲು ಬೆಳಕಿನ ಬದಲಿಗೆ ಎಲೆಕ್ಟ್ರಾನ್ಗಳನ್ನು ಬಳಸುತ್ತವೆ. ಗಾಜಿನ ಮಸೂರಗಳ ಬದಲಾಗಿ ವಿದ್ಯುತ್ಕಾಂತಗಳ ನ್ನು ಬಳಸಲಾಗುತ್ತದೆ, ಆದರೆ ಕೆಲಸದ ತತ್ವವು ಆಪ್ಟಿಕಲ್ ಮೈಕ್ರೋಸ್ಕೋಪ್ನಂತೆಯೇ ಉಳಿದಿದೆ. ಎಲೆಕ್ಟ್ರಾನ್ಗಳು ಬೆಳಕಿಗಿಂತ ಕಡಿಮೆ ತರಂಗಾಂತರವನ್ನು ಹೊಂದಿರುತ್ತವೆ. ಅಂದರೆ, ಎಲೆಕ್ಟ್ರಾನ್ ಮೈಕ್ರೋಸ್ಕೋಪ್ ಆಪ್ಟಿಕಲ್ ಮೈಕ್ರೋಸ್ಕೋಪ್ಗಿಂತ  ಇನ್ನೂಕಡಿಮೆ ಅಳತೆ ಪ್ರಮಾಣದ ವಸ್ತುಗಳ ವಿವರಗಳನ್ನು ಸ್ಪಷ್ಟವಾಗಿ ತೋರಿಸಬಲ್ಲದು ಅಥವಾ ಪ್ರಕಟಿಸಬಲ್ಲದು. ವಾಸ್ತವವಾಗಿ, ಅತ್ಯುತ್ತಮ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು ಎರಡು ಅಣುಗಳನ್ನು ಬೇರೆ ಬೇರೆ ತೋರಿಸಬಲ್ಲದು! ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು ವಸ್ತುಗಳನ್ನು ಗಣನೀಯವಾಗಿ ದೊಡ್ಡದಾಗಿ ತೋರಿಸಬಲ್ಲದುಅಂದರೆ ಒಂದು ಸಂಯುಕ್ತ ಸೂಕ್ಷ್ಮ ದರ್ಶಕಕ್ಕಿಂತ ಸುಮಾರು ಸಾವಿರ ಪಟ್ಟು ದೊಡ್ಡದಾಗಿ ತೋರಿಸಬಲ್ಲದು.

ಎಲೆಕ್ಟ್ರಾನ್ ಮೈಕ್ರೋಸ್ಕೋಪ್ನಲ್ಲಿ ಜೈವಿಕ ಮಾದರಿಗಳನ್ನು ಅಧ್ಯಯನ ಮಾಡುವುದರಲ್ಲಿ ಒಂದು ಪ್ರಮುಖ ಸಮಸ್ಯೆ ಇದೆ. ವಸ್ತು ಮಾದರಿಗಳನ್ನು ನಿರ್ವಾತದಲ್ಲಿ ಅಧ್ಯಯನ ಮಾಡಲಾಗುತ್ತದೆ, ಒಂದಲ್ಲ ಅನೇಕ ವಿಧಾನಗಳಲ್ಲಿ ಅದನ್ನು ಸಿದ್ಧಪಡಿಸಬೇಕು  ಅಥವಾ ಫಿಕ್ಸ್ ಮಾಡಬೇಕು. ಇದರ ಅರ್ಥ ಸಜೀವ ಕೋಶಗಳನ್ನು ವೀಕ್ಷಿಸಲು ಆಗುವುದಿಲ್ಲ ಅಥವಾ ಛಾಯಾಚಿತ್ರ ತೆಗೆಯಲಾಗುವುದಿಲ್ಲ.

19210 ನೊಂದಾಯಿತ ಬಳಕೆದಾರರು
7451 ಸಂಪನ್ಮೂಲಗಳು