ಇಂಗಾಲದ (ಕಾರ್ಬನ್ನಿನ) ಆಕ್ಸೈಡ್‍ಗಳು -ಡಾ. ಜಗನ್ನಾಥ ಉಮಾಪತಿ ಡೆಂಗಿ

 
ಒಂದು ಸಾಯಂಕಾಲ  ಹಾಡು ಕೇಳುತ್ತಾ ಕುಳಿತಿದ್ದೆ. “ದೀಪವು ನಿನ್ನದೆ ಗಾಳಿಯು ನಿನ್ನದೆ ಆರದಿರಲಿ ಬೆಳಕೂ” ಇದು ಪ್ರೇಮ ಕವಿ ಕೆ. ಎಸ್. ನರಸಿಂಹಸ್ವಾಮಿಯವರ “ಮೈಸೂರು ಮಲ್ಲಿಗೆ” ಕವನ ಸಂಕಲನದ ಒಂದು ಕವಿತೆಯ ಕೆಲವು ಸಾಲುಗಳು. ಈ ಸಾಲುಗಳನ್ನು ಆಲಿಸಿದ ನನ್ನ ಮಗ ಸೃಜನ್ ಎಂದಿನಂತೆಯೆ ಮತ್ತೆ ನನ್ನ ತಲೆ ತಿನ್ನಲು ಸಜ್ಜಾದವನಂತೆ ಕೇಳಿದ “ಅಪ್ಪಾ, ನಮ್ಮ ಮಿಸ್ ಹೇಳಿದ್ರು, ದೀಪ ಉರಿಯಲು ಆಮ್ಲಜನಕ ಅಂದ್ರ ಗಾಳಿ ಬೇಕು ಅಂತ. ಮತ್ ಅದೇ ಗಾಳಿ ದೀಪನ್ನ ಹ್ಯಾಂಗ್ ಆರಸ್ತೈತಿ” ಹೇಳು ಎಂದ. ನಾನು ಹೇಳಿದೆ “ಬರೀ ದೀಪ ಅಷ್ಟೇ ಅಲ್ಲ, ಯಾವುದೇ ವಸ್ತು ಉರಿಯಲು ಆಮ್ಲಜನಕ ಬೇಕು. ಇದನ್ನು ತೋರಿಸಲಿಕ್ಕೆ ನಿಮ್ಮ ಮಿಸ್ ಉರಿಯುವ ಕ್ಯಾಂಡಲ್ ಮೇಲೆ ಒಂದು ಗಾಜಿನ ಗ್ಲಾಸನ್ನು ಬೋರಲಾಗಿ ಹಾಕುವ ಚಟುವಟಿಕೆ ಮಾಡಿಸಿರಬೇಕಲ್ಲಾ ಅಂದೆ” ಅವನು ಹೌದು ಎಂದ. ಮತ್ತೆ ಗಾಳಿಯಿಂದಲೇ ದೀಪ ಆರಲು ಅದು ಬೀಸುವ ರಭಸ ಕಾರಣ” ಎಂದೆ. ಮುಂದುವರೆದು ನೀನು ಗಮನಿಸಿರಬಹುದು - ದೀಪ, ಕಂದೀಲುಗಳು ಉರಿಯುತ್ತಿರಬೇಕಾದರೆ ಅವು ಕಪ್ಪು ಹೊಗೆಯನ್ನು ಉಗುಳುತ್ತವೆ. ಹಾಗೆಂಯೇ ಮೋಟರ್ ಸೈಕಲ್, ಕಾರು, ಬಸ್ಸು ಮತ್ತು ಟ್ರೇನುಗಳು ಕೂಡಾ ಕಪ್ಪು ಹೊಗೆಯನ್ನು ಉಗುಳುತ್ತವೆ. ಹೀಗೆ ಹೊಗೆಂಯುಗುಳಲು ಕಾರಣ ವಸ್ತುವಿನಲ್ಲಿಯ ಇಂಗಾಲ ಉರಿಯುವಾಗ ಗಾಳಿಯಲ್ಲ್ಲಿಯ  ಆಮ್ಲಜನಕದೊಂದಿಗೆ ವರ್ತಿಸಿ ಇಂಗಾಲದ ಮೊನಾಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತದೆ ಎಂದು ತಿಳಿಸಿ, ಹಾಗಾದರೆ ಇಂಗಾಲದ ಆಕ್ಸೈಡ್‍ಗಳ ಬಣ್ಣ  ಯಾವುದು ಎಂದೆ. ಅದಕ್ಕವನು ಥಟ್ಟನೆ ಉತ್ತರಿಸಿದ “ಏನಪ್ಪಾ ನೀನು, ವಸ್ತುಗಳು ಉರಿಯುತ್ತಿರಬೇಕಾದರೆ ಅವು ಕಪ್ಫ್ಪುಹೊಗೆಯನ್ನು ಉಗುಳುತ್ತವೆ ಎಂದು ನೀನೆ ಹೇಳಿದೆಯ ಲ್ಲಾ” ಎಂದ. ಆಗ ನಾನು ಕೇಳಿದೆ “ಹಾಗಾದರೆ, ನೀನು ಉಸಿರಾಡುತ್ತಿರುವೆಂಯಲಾ ್ಲ ಆ ಗಾಳಿ ಯಾವುದು?” ಎಂದೆ. ಮತ್ತವನು ಅದೇ ವೇಗದಲ್ಲಿ ಹೇಳಿದ “ಆಮ್ಲಜನಕ ತೆಗೆದುಕೊಂಡು ಇಂಗಾಲದ ಡೈ ಆಕ್ಸೈಡನ್ನು ಹೊರಗೆ ಬಿಡುತ್ತೇನೆ” ಎಂದ. ಆಗ ನಾನು ಮತ್ತೆ ಕೇಳಿದೆ
“ಹಾಗಾದರೆ ನೀನು ಉಸಿರಾಡಿ ಬಿಡುವ ಆ ಇಂಗಾಲದ ಡೈಆಕ್ಸೈಡ ಕಪ್ಪೇ” ಎಂದೆ. 2 ಸ್ವಲ್ಪ ಹೊತ್ತು ಂಯೋಚಿಸಿ, “ಇಲ್ಲ, ಇಂಗಾಲದ ಡೈ ಆಕ್ಸೈಡ್ ಕಪ್ಪಲ್ಲ, ಮೋನಾಕ್ಸೈಡ್ ಕಪ್ಪು” ಎಂದ. ಆಗ ನಾನು ಹೇಳಿದೆ“ಇಲ್ಲ ಪುಟ್ಟ, ಇಂಗಾಲದ ಯಾª À ಆಕ್ಸೈಡ್‍ಗಳಿಗೂ ಬಣ ್ಣ, ರುಚಿ ಮತ್ತು ವಾಸನೆ ಇರುವುದಿಲ್ಲ” ಎಂದು. ಅದನ್ನು ಅವನು ಒಪ್ಪಿಕೊಂಡವನಂತೆ “ಹೌದು ನಾನು ಉಸಿರಾಡಿ ಬಿಡುವ ಇಂಗಾಲದ ಡೈ ಆಕ್ಸೈಡ್‍ಗೆ ಬಣ ್ಣ, ರುಚಿ ಮತ್ತು ವಾಸನೆ  ಯೇ ಇಲ್ಲ”ಎಂದೆ ಸ್ವಲ್ಪ ಹೊತ್ತಿನ ನಂತರ ಮತ್ತೆ ಬಂದು ಕೇಳಿದ “ಹಾಗಾದ್ರೆ, ಈ ದೀಪ, ಕಂದೀಲು, ಕಾರು ಮತ್ತು ಬಸ್ಸುಗಳ ಹೊಗೀ ಯಾಕ್ ಕಪ್ಪಿರ್ತದ” ಎಂದ. ನಾನ್ಹೇಳ್ದೆ “ಹೊಗೆಯಲ್ಲಿನ ಕಪ್ಪು ಬಣ್ಣ ಉರಿದ ಇಂಗಾಲದ ಕಣಗಳದೇ ಹೊರತು ಅದು ಇಂಗಾಲದ ಆಕ್ಸೈಡ್‍ನದು ಅಲ್ಲ” ಎಂದು. ಮತ್ತೆ ಕೇಳಿದ “ಹಾಗಾದ್ರೆ, ನಾವು ಉಸಿರಾಡಿ ಬಿಡುವ ಗಾಳಿ ಅದು ಇಂಗಾಲದ ಡೈ ಆಕ್ಸೈಡೇ ಅಂತ ಹೇಗೆ ಹೇಳತಿ” ಎಂದ. ಆಗ ನಾನು ಹೇಳಿದೆ “ಒಂದು ಪ್ರನಾಳದಲ್ಲಿ 2 ಮಿ. ಲಿ. ಸುಣ್ಣದ ನೀರನ್ನು ತೆಗೆದುಕೊಂಡು ಒಂದು ನಳಿಕೆಯ ಮೂಲಕ ಪ್ರನಾಳದೊಳಗೆ ಗಾಳಿಯನ್ನು ನಿಧಾನವಾಗಿ ಊದಿದಾಗ ಅಥವಾ ಇಂಗಾಲದ ಡೈ ಆಕ್ಸೈಡನ್ನು ಸುಣ್ಣದ ತಿಳಿನೀರಿನ ಮೂಲಕ ಹಾಯಿಸಿದಾಗ ಸುಣ್ಣದ ತಿಳಿನೀರು ಹಾಲಿನಂತೆ ಬೆಳ್ಳಗಾಗುತ್ತದೆ. ಇದರಿಂದ ನಾವು ಊದಿದಾಗ ನಮ್ಮ ಉಸಿರಾಟಕ್ರಿಯೆಯಿಂದ ಇಂಗಾಲದ ಡೈ ಆಕ್ಸೈಡ್ ಬಿಡುಗದೆ ಆಗಿರುವುದು ಕಂಡುಬರುತ್ತದೆ” ಎಂದು. ಆಗ ಅವನು “ನನಗೆ ಸುಣ್ಣದ  ತಿಳಿನೀರು ಮತ್ತು ನಳಿಕೆ ಕೊಡು ನಾನು ಮಾಡಿ ನೋಡಿ ಹೇಳುತ್ತೇನೆ” ಎಂದು ಹೇಳಿ ತನ್ನ ಪ್ರಯೋಗಕ್ಕೆ ತಯ್ಯಾರಿ ಮಾಡತೊಡಗಿದ. ನಾನು ಬೇಗನೆ ಎದ್ದು ಹೋಗಿ ಪ್ರಯೋಗದ ಉಸ್ತುವಾರಿಯನ್ನು ಅವರ ಅಮ್ಮನಿಗೆ ವಹಿಸಿ ಆತನಿಂದ ಸ್ವಲ್ಪ ಕಾಲ ತಪ್ಪಸಿಕೊಂಡರಾಯಿತು ಎಂದು ಯೋಚಿಸಿ ನನ್ನ ಕೆಲಸದಲ್ಲಿ ಮಗ್ನನಾದೆ.
 
18488 ನೊಂದಾಯಿತ ಬಳಕೆದಾರರು
7228 ಸಂಪನ್ಮೂಲಗಳು