ಆಟದ ಮೈದಾನದಲ್ಲಿ ಸುರಕ್ಷತೆ -1

 ಆಟದ ಮೈದಾನವು ಅಪಾಯರಹಿತ  ಸ್ಥಳವಾಗಿದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಆಟದ ಮೈದಾನದಲ್ಲಿದ್ದಾಗ ಮಕ್ಕಳು ಬಲು ಉತ್ಸಾಹ ಭರಿತ ಮತ್ತು ನಿರಾತಂಕದವರಾಗಿರುತ್ತಾರೆ  ಹೀಗಾಗಿ ಆಟದ ಮೈದಾನವು  ಪೆಟ್ಟುಗಾಯಗಳಿಗೆ ಸಾಮಾನ್ಯ ಸ್ಥಳವಾಗಿದೆ. ಮಕ್ಕಳು ಆಟದ ಮೂಲಕ ಪಡೆಯುವ ಎಲ್ಲಾ ದೈಹಿಕ ಮತ್ತು ಮಾನಸಿಕ ಉತ್ತೇಜನವನ್ನು ಪಡೆಯಲೇಬೇಕು. ಆದ್ದರಿಂದ, ಮಕ್ಕಳಿಗೆ ಸಹಜ ಆಟದ ಪರಿಸರವನ್ನು ಒದಗಿಸುವಾಗ, ಸುರಕ್ಷತೆಗೆ ಪ್ರಾಮುಖ್ಯತೆಯನ್ನು ನೀಡಬೇಕು.

ಅಮೆರಿಕಾದಲ್ಲಿ ಪ್ರತಿ ವರ್ಷ 20,000 ಕ್ಕೂ ಅಧಿಕ ಆಟದ ಮೈದಾನಗಳಲ್ಲಿ ಪೆಟ್ಟು ಗಾಯಗಳು ಸಂಭವಿಸಿದ ವರದಿಯಾಗಿವೆ. ಭಾರತವೂ  ಸೇರಿದಂತೆ ಯಾವುದೇ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ  ಅಂತಹ ಮಾಹಿತಿ ಲಭ್ಯವಿಲ್ಲ. ಆದಾಗ್ಯೂ, ಇಂಡಿಯನ್ ಜರ್ನಲ್ ಆಫ್ ಪೀಡಿಯಾಟ್ರಿಕ್ಸ್ನಲ್ಲಿ ಪ್ರಕಟವಾದ ಮಕ್ಕಳ ಗಾಯಗಳ ಬಗ್ಗೆ ಪೋಷಕರ ಜಾಗೃತಿ ಕುರಿತು ಅಧ್ಯಯನವೊಂದರ ಪ್ರಕಾರ, ಭಾರತದಲ್ಲಿನ ಮಕ್ಕಳಲ್ಲಿನ ಗಾಯಗಳಿಗೆ ಮೇಲಿಂದ ಬೀಳುವುದು ಸಾಮಾನ್ಯ ಕಾರಣವಾಗಿದೆ. ಆಟದ ಸಮಯದಲ್ಲಿ ಗಾಯಗಳಿಗೆ ಗುರಿಯಾಗಬಹುದಾದ ಗರಿಷ್ಠ ಸಂಖ್ಯೆಯ ಮಕ್ಕಳು 5 ರಿಂದ 14 ವರ್ಷ ವಯಸ್ಸಿನವರಾಗಿದ್ದಾರೆ ಎಂದು ಅಧ್ಯಯನವು ಹೇಳುತ್ತದೆ.

 

ಆಟದ ಸಮಯದಲ್ಲಿ ಅನೇಕ ಗಾಯಗಳು ಸಂಭವಿಸುವುದನ್ನು ಸುಲಭವಾಗಿ ತಡೆಗಟ್ಟಬಹುದು. ಅಪಘಾತಕ್ಕೊಳಗಾಗುವ ಸಾಧ್ಯತೆಯ ಅಪಾಯಗಳಿಗೆ ಆಟದ ಮೈದಾನವನ್ನು ಪರಿಶೀಲಿಸಬೇಕು. ಆಟದ ಸಮಯದಲ್ಲಿ ಆಗಬಹುದಾದ ಅಪಾಯಗಳ ಬಗ್ಗೆ  ಚಿಕ್ಕ ಮಕ್ಕಳಿಗೆ ಅರಿವಿಲ್ಲದ ಕಾರಣ  ಪುಟ್ಟ ಮಕ್ಕಳು ಆಡುವಾಗ ವಯಸ್ಕರ ಮೇಲ್ವಿಚಾರಣೆ ಬಹಳ ಅವಶ್ಯಕ. ದೊಡ್ಡ ಮಕ್ಕಳೂ ಸಹ ತಮ್ಮ ಸ್ನೇಹಿತರ ಬಳಿ ಜಂಬ ತೋರಿಸಲು ಅಥವಾ

ತಮ್ಮ ಮಿತಿಗಳನ್ನು ಪರೀಕ್ಷಿಸಲು ಪ್ರಯತ್ನಿಸುತ್ತಿರುವಾಗ ಜಂಗಲ್ ಜಿಮ್ ಅಥವಾ ಇತರ ಆಟದ ಸಲಕರಣೆಗಳ ಬಾರ್ ಗಳನ್ನು ಬಳಸುವಾಗ ಅಪಾಯ  ಎದುರಿಸುತ್ತಾರೆ.

ದೈಹಿಕ ಶಿಕ್ಷಣ ಶಿಕ್ಷಕನ ಜವಾಬ್ದಾರಿಗಳು

ದೈಹಿಕ ಶಿಕ್ಷಣ ಶಿಕ್ಷಕರ  ಅನೇಕ ಜವಾಬ್ದಾರಿಗಳಲ್ಲಿ ಆಟದ ಮೈದಾನದ ನಿರ್ವಹಣೆಯೂ  ಒಂದೂ. ಆಟದ ಮೈದಾನದ ನಿರ್ವಹಣೆಯು ಆಟದ ಮೈದಾನವನ್ನು ವಿನ್ಯಾಸಗೊಳಿಸುವುದು, ಸಲಕರಣೆಗಳ ನಡುವೆ ಸಾಕಷ್ಟು ಸ್ಥಳಾವಕಾಶ ಇರಿಸುವುದು ಮತ್ತು ನಿರ್ವಹಣೆ ಮತ್ತು ವಾಡಿಕೆಯ ತಪಾಸಣೆಗಳನ್ನು ಒಳಗೊಳ್ಳುತ್ತದೆ.

 

ಒಂದು ಶಾಲೆಯ ಮಾದರಿ ಆಟದ ಮೈದಾನವು ಕ್ರೀಡಾಂಗಣಗಳು, ಮೈದಾನಗಳು, ಓಟದ ಪಥಗಳು, ಜಾರುಬಂಡೆ, ಉಯ್ಯಾಲೆಗಳು, ಜಂಗಲ್ ಜಿಮ್ಗಳು, ಇತ್ಯಾದಿ ಉಪಕರಣಗಳನ್ನು ಒಳಗೊಂಡಿರುತ್ತದೆ. ಒಂದು ಆಟದ ಮೈದಾನವನ್ನು ವಿನ್ಯಾಸಗೊಳಿಸುವುದು ಹೇಗಿರಬೇಕೆಂದರೆ ಅದು ಮಕ್ಕಳಿಗೆ ಕನಿಷ್ಠ ಶ್ರಮವಿರುವಂತೆ ಮತ್ತು ಅವರಿಗೆ ಗರಿಷ್ಠ ಸಂತೋಷವನ್ನು ಪರಿಣಾಮಕಾರಿಯಾಗಿ ನೀಡುವಂತೆ ನೋಡಿಕೊಳ್ಳಬೇಕು.

ಮಕ್ಕಳ ವಯಸ್ಸಿಗೆ ಸರಿಯಾದ ಆಟದ ಜಾಗಗಳು ದೊರೆಯುವಂತೆ ನೋಡಿಕೊಳ್ಳುವುದು ಆಟದ ಮೈದಾನ ನಿರ್ವಹಣೆಯ ಪ್ರಮುಖ ಅಂಶ. ಶಾಲಾಪೂರ್ವ ಮತ್ತು ವಯಸ್ಕ ಮಕ್ಕಳಿಗಾಗಿ ಆಟದ ಜಾಗಗಳು ಪ್ರತ್ಯೇಕವಾಗಿರಬೇಕು. ಮಕ್ಕಳು ಬಳಸುವ ಸಾಧನವು ವಿಭಿನ್ನವಾಗಿರುವ ಕಾರಣದಿಂದಾಗಿ, ಆಟದ ಪ್ರದೇಶಗಳನ್ನು ಪ್ರತ್ಯೇಕವಾಗಿ ಗುರುತು ಮಾಡಬೇಕು.

ಆಟ ಆಡುವಾಗ ಮಕ್ಕಳು ಒಬ್ಬರೊಡನೆ ಒಬ್ಬರು ಬೆರೆತು ಗೆಳೆತನ ಬೆಳೆಸಿಕೊಳ್ಳಲು ಅವಕಾಶಗಳು ಸಹ ಇರಬೇಕು. ಮಕ್ಕಳಿಗೆ ಸುರಕ್ಷತೆಯ ಪ್ರಾಮುಖ್ಯತೆಯನ್ನು ವಿವರಿಸಿ ಹೇಳಿ ಆಟದ ಸಮಯದಲ್ಲಿ ಅವರ ಮೇಲ್ವಿಚಾರಣೆ ಮಾಡುವುದು  ದೈ.ಶಿ.ಶಿಕ್ಷಕರ ಕರ್ತವ್ಯಗಳಲ್ಲಿ ಒಂದಾಗಿದೆ.

 

 ನಿಯಮಿತ ಮೈದಾನ ನಿರ್ವಹಣೆ ಅತ್ಯಗತ್ಯ. ಇದು ಮೈದಾನವನ್ನು ರೋಲಿಂಗ್ ಮಾಡುವುದು ಮತ್ತು ಅಂಗಣಗಳು ಮತ್ತು ಅಥ್ಲೆಟಿಕ್ ಟ್ರ್ಯಾಕ್ಗಳ ಮೇಲೆ ಸಾಲುಗಳನ್ನು ಗುರುತಿಸುವುದು. ಮೈದಾನಕ್ಕೆ ನೀರುಹಾಕುವುದು ಮತ್ತು ಭಾರಗಲ್ಲು ಉರುಳಿಸುವುದು ಮೈದಾನವನ್ನು ಗಟ್ಟಿ ಮಾಡುತ್ತದೆ ಮತ್ತು ಮಕ್ಕಳನ್ನು ಆಡಿದಾಗ ಧೂಳು ಏಳುವುದನ್ನು ತಡೆಯುತ್ತದೆ. ಮೈದಾನದಿಂದ ಕಲ್ಲು ಕಂಕರೆಗಳನ್ನು ತೆಗೆದುಹಾಕುವುದು ಬಹಳ ಮುಖ್ಯ, ಆದ್ದರಿಂದ ಆಗಾಗ್ಗೆ ಮೈದಾನವನ್ನು ಗುಡಿಸಬೇಕಾದ ಅವಶ್ಯಕತೆಯಿದೆ.

ಬ್ಯಾಟುಗಳು, ಚೆಂಡುಗಳು, ಹಾಕಿ ಸ್ಟಿಕ್ಗಳು, ನೆಟ್ಗಳು, ಮುಂತಾದ ಆಟದ ಸಾಧನಗಳ ಬಗ್ಗೆ ಎಚ್ಚರಿಕೆಯ ನಿರ್ವಹಣೆ ಕೂಡಾ ಧೈಹಿಕ ಶಿಕ್ಷಕರ ಕೆಲಸದ ವ್ಯಾಪ್ತಿಯೊಳಗೆ ಬರುತ್ತಿವೆ ಮತ್ತು ಇವುಗಳನ್ನು ಸಂಗ್ರಹಿಸಿಡುವ ಸಂದರ್ಭದಲ್ಲಿ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಒಂದು ಬ್ಯಾಟ್, ರಾಕೆಟ್ ಅಥವಾ ನೆಟ್ ನ ದುರಸ್ತಿಗೆ ಅಗತ್ಯವಾದಾಗ ಮಕ್ಕಳನ್ನೇ ತೊಡಗಿಸಿಕೊಳ್ಳಬಹುದು.

ಆಟದ ಮೈದಾನದ ಮೇಲ್ಮೈ

ಆಟದ ಮೈದಾನದ ಮೇಲ್ಮೈ ಆಟದ ಸಮಯದಲ್ಲಿ  ಗಾಯಗಳನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಾಂಕ್ರೀಟ್ ಮತ್ತು ಡಾಂಬರು ರಸ್ತೆ ಮೇಲ್ಮೈಗಳು ಮಕ್ಕಳು ಆಡಲು ಕಠಿಣ ಮತ್ತು ಅನರ್ಹವಾಗಿದೆ. ಶಿಶುವೈದ್ಯಶಾಸ್ತ್ರಜ್ಞರು ಒಂದು ಗಟ್ಟಿ ಕಾಂಕ್ರೀಟ್ ಮೇಲ್ಮೈಗೆ ಒಂದು ಅಡಿ ಎತ್ತರದಿಂದ ಬಿದ್ದರೂ ಸಹ ಮಗುವಿಗೆ ಮಾರಣಾಂತಿಕ ತಲೆ ಗಾಯವನ್ನು ಉಂಟುಮಾಡಬಹುದು ಎಂದು ಹೇಳುತ್ತಾರೆ. ಫುಟ್ಬಾಲ್, ಹಾಕಿ ಅಥವಾ ಕ್ರಿಕೆಟ್ ಅನ್ನು ಆಡಲು ಮಕ್ಕಳಿಗೆ ಸಮತಟ್ಟಾದ ಮೈದಾನವು ಸಾಕಷ್ಟು ಒಳ್ಳೆಯದು, ಆದರೆ ಇದು ಬಹಳಷ್ಟು ಧೂಳನ್ನು ಎಬ್ಬಿಸುತ್ತದೆ, ಅದಕ್ಕೆ ನಿಯಮಿತವಾಗಿ ನೀರುಹಾಕುವುದು ಮತ್ತು ರೋಲಿಂಗ್ ಮಾಡುವುದು ಅಗತ್ಯವಿದೆ. ಮತ್ತೊಂದೆಡೆ ಹುಲ್ಲಿನ ಹಾಸು  ಮೃದುವಾದದ್ದು ಮತ್ತು ಬೀಳುವ ಪರಿಣಾಮವನ್ನು ಕಡಿಮೆ ಮಾಡುತ್ತದೆ, ಆದರೆ ವೆಚ್ಚದ ಅಂಶವಿದ್ದು ನಿಯಮಿತವಾಗಿ ಮೊವಿಂಗ್ ಮಾಡಬೇಕಾಗುತ್ತದೆ. ಆಟದ ಪ್ರದೇಶವು ನಿಂತ ನೀರಿಂದ ಮುಕ್ತವಾಗಿರಬೇಕು.

 ಆಟದ ಉಪಕರಣಗಳು

ಹರಿತ ಮತ್ತು ಸವೆತ ಮತ್ತು ಸಡಿಲವಾದ ಹಗ್ಗಗಳು ಮತ್ತು ಸರಪಣಿಗಳಲ್ಲಿ ಸಡಿಲವಾದ ಲಿಂಕ್ಗಳಂತಹ ಇತರ ಸಂಭಾವ್ಯ ಅಪಾಯಗಳಿಗೆ ಪ್ಲೇ ಉಪಕರಣಗಳನ್ನು ಆಗಾಗ್ಗೆ ಪರಿಶೀಲನೆ ಮಾಡಬೇಕು. ಮಕ್ಕಳ ಉಡುಪುಗಳನ್ನು ಹಿಡಿದು ಅವರು ಬೀಳುವಂತೆ ಮಾಡುವ ಯಾವುದೇ ಕೊಕ್ಕೆಗಳನ್ನು ಪರಿಶೀಲಿಸಿ. ಬೀಳುವ ವಲಯಗಳನ್ನು ಸರಿಯಾದ ವಸ್ತುಗಳೊಂದಿಗೆ ಮೆತ್ತೆಯನ್ನಾಗಿ ಮಾಡಬೇಕು.

ಚಲಿಸುವ ಭಾಗಗಳ ಓಡಾಟಕ್ಕೆ  ಮತ್ತು ಹತ್ತಿ ಇಳಿಯಲು ಅವಕಾಶ ನೀಡುವಂತೆ ಸಲಕರಣೆಗಳ ಸುತ್ತ ಸಾಕಷ್ಟು ಸ್ಥಳಾವಕಾಶ ಇರಬೇಕು. ನಾಲ್ಕು ರಿಂದ ಐದು ಅಡಿಗಳಷ್ಟುಸುತ್ತಲೂ ಸ್ಪಷ್ಟ ಜಾಗವನ್ನು ಹೊಂದಿರುವಂತೆ ಉಯ್ಯಾಲೆಗಳ ನಡುವೆ ಕನಿಷ್ಠ ಎರಡು ಅಡಿಗಳಷ್ಟು ಅಂತರ ಇರಿಸಬೇಕು.ಒಂದು ಪಥದಲ್ಲಿ ಕೇವಲ ಒಂದು ಉಯ್ಯಾಲೆ ಇರಬೇಕು. ಜಾರು ಬಂಡೆಯಿಂದ  ಜಾರಿ ಇಳಿಯಲು ಅದರ ಅಡಿಯಲ್ಲಿ  ಸಾಕಷ್ಟು ಸ್ಥಳಾವಕಾಶ ಇರಬೇಕು. ಒಂದು ಮಗು ಜಾರಿ ಇಳಿಯಲು, ಕೆಳಭಾಗದಲ್ಲಿ ಮೃದುವಾದ ಮರಳು ಅಥವಾ ಹುಲ್ಲಿನ ಹಾಸು ಇರಬೇಕು.. ಸಲಕರಣೆಗಳ ಬಳಿ ಸಚಿತ್ರ ಸುರಕ್ಷತೆಯ ಸೂಚನೆಗಳನ್ನು ಪ್ರದರ್ಶಿಸುವ ಒಳ್ಳೆಯದು, ಉದಾಹರಣೆಗೆ:

ಉಯ್ಯಾಲೆ ಮೇಲೆ ನಿಲ್ಲಬಾರದು

ಮೊದಲು ಪಾದಗಳು ಮುಂದಾಗಿ ಜಾರಬೇಕು.

ಜಂಗಲ್ ಜಿಮ್ಗಳು ಅಥವಾ ಜಾರುಬಂಡೆ ಮೇಲೆ ತಳ್ಳುವುದು ಮತ್ತು ನೂಕುವುದು ಮಾಡಬಾರದು

ರಕ್ಷಣೆ ಹಳಿಗಳಿಂದ ಹತ್ತುವಂತಿಲ್ಲ ಇತ್ಯಾದಿ.

ಮೈದಾನ ನಿರ್ವಹಣೆ

ಆಟಗಳು ಅವಧಿಯಲ್ಲಿ ಮೈದಾನದಲ್ಲಿ ಕನಿಷ್ಟ 20 ಮತ್ತು 50 ರ ನಡುವೆ ಮಕ್ಕಳು, ಮೈದಾನದಲ್ಲಿ ಒಂದು ದೊಡ್ಡ ಗುಂಪಾಗಿ ಇರಬಹುದು. ಆಟಗಳು ಅವಧಿಯು ಶಾಂತಿಯುತವಾಗಿ ನಡೆಯುವಂತೆ ಖಚಿತಪಡಿಸಲು ಶಿಕ್ಷಕರು ಮಕ್ಕಳು ಇಡೀ ಆಟದ ಪ್ರದೇಶವನ್ನು ಬಳಸುವಂತೆಮತ್ತು ಅದರ ಸಣ್ಣ ಭಾಗದಲ್ಲಿ ಒಟ್ಟುಗೂಡದಂತೆ ನೋಡಿಕೊಳ್ಳಬೇಕು

ವರ್ಣಮಯ ಜಾಗರೂಕತೆಯಿಂದ ಗುರುತಿಸಲಾದ ಸಂಖ್ಯೆಗಳು, ಅಕ್ಷರಗಳ ಗ್ರಿಡ್ಗಳು ಮತ್ತು ವಿವಿಧ ಜ್ಯಾಮಿತೀಯ ಆಕಾರಗಳನ್ನು ಒಳಗೊಂಡಿರುವ ಪ್ರದೇಶಗಳನ್ನು ನಿರೂಪಿಸಲು ಬಳಸಬಹುದಾಗಿದೆ. ಅವುಗಳು ಆಕರ್ಷಕವಾಗಿರುತ್ತವೆ , ಮಕ್ಕಳು ಆಟದ ಮೈದಾನವನ್ನು ಹರ್ಷಚಿತ್ತದಿಂದ ನೋಡುತ್ತಾರೆ. ಇದು ಮಕ್ಕಳನ್ನು ಆಟದ ಸಮಯದಲ್ಲಿ ತಮ್ಮನ್ನು ಗಾಯಗೊಳಿಸುವುದಿಲ್ಲ ಎಂದು ಖಾತ್ರಿಗೊಳಿಸುತ್ತದೆ. ಸಂಘಟಿತ ಆಟದ ಪ್ರದೇಶಗಳು ದಾದಗಿರಿ ಮತ್ತು ಆಟದ ಸಮಯದಲ್ಲಿ ಇತರ ಸೆಣೆಸಾಟಗಳ ವ್ಯಾಪ್ತಿಯನ್ನು ಕಡಿಮೆ ಮಾಡಬಹುದು.

First published in Teacher Plus in May 2008 under the title 'Playing Safe'.

 

18465 ನೊಂದಾಯಿತ ಬಳಕೆದಾರರು
7225 ಸಂಪನ್ಮೂಲಗಳು