ಅಕ್ಷರ ಸೇವೆಯ ಸರ್ಕಾರ- ಶಿಕ್ಷಣ ವ್ಯವಸ್ಥೆಗೆ ಕೈಜೋಡಿಸೋಣ! -ಮಂಜುನಾಥ್ ಎ ಆರ್

ನಾವೆಲ್ಲರೂ ವರ್ತಮಾನ ಹಾಗೂ ಭವಿಷ್ಯತ್ತಿನ ನೆಲೆಯಲ್ಲಿ ಮಕ್ಕಳನ್ನು ಬಹು ನಿರೀಕ್ಷಿತ ಶೋಭಾಯಮಾನ ಕೂಸುಗಳು ಭವಿತವ್ಯದ ಸತ್ಪ್ರಜೆಗಳು ಎಂಬಂತೆ ಬುದ್ದಿಜೀವಿಗಳು ಮಾತನಾಡುವುದು, ಆ ನೆಲೆಯಲ್ಲಿ ಬೇಕಾದ ಸರ್ವ ಸಿದ್ಧತೆಗಳನ್ನು ಮಗುವಿನ ಬಾಲ್ಯ / ಬುನಾದಿಯಿಂದಲೇ ಮಾಡುತ್ತೇವೆ. ಹಾಗಾದರೆ ಸತ್ಪ್ರಜೆಗಳು ಎಲ್ಲಿ ರೂಪುಗೊಳ್ಳುತ್ತಾರೆ ?, ಹೇಗೆ ತಯಾರಾಗುತ್ತಾರೆ ? ಅವರನ್ನು ರೂಪಿಸುವವರು ಯಾರು ? ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಕಂಡುಕೊಳ್ಳುವ ಮಾಗಿ ಕಾಲ ಇಂದಿನ ನಮ್ಮ ಶಿಕ್ಷಣ ವ್ಯವಸ್ಥೆಯ ಮೇಲಿರುವ ಜವಬ್ದಾರಿ. ಇದು ಕೇವಲ ಶಿಕ್ಷಣ ಇಲಾಖೆಯದ್ದೇ? ಅಥವ ಪ್ರತಿಯೊಬ್ಬ ನಾಗರೀಕನ ಮೂಲಭೂತ ಕರ್ತವ್ಯವೇ? ಈ ನೆಲೆಯಲ್ಲಿ ಯೋಚಿಸುತ್ತಿರುವಾಗ ಹತ್ತು ಹಲವು ಯೋಚನೆಗಳು ನಮ್ಮೊಳಗೆ ಮಿಂಚಿನಂತೆ ಸಂಚರಿಸುತ್ತವೆ. ಪ್ರತಿಯೊಬ್ಬ ಭಾರತೀಯನಿಗೂ ಅವನದ್ದೇ ಆದ ಮೂಲಭೂತ ಹಕ್ಕು-ಕರ್ತವ್ಯಗಳಿವೆ, ಕಾಯ್ದೆ-ಕಾನೂನುಗಳಿವೆ, ಸಾಂವಿಧಾನಿಕ ರಕ್ಷಣೆಗಳಿವೆ, ಸಾಂವಿಧಾನಿಕ ಮೌಲ್ಯಗಳಿವೆ ಹಕ್ಕುಗಳ ವಿಚಾರದಲ್ಲಿ, ಸೌಲಭ್ಯಗಳ ವಿಚಾರದಲ್ಲಿ ಯಾವೊಬ್ಬ ಪ್ರಜೆಯೂ ಹಿಂದೆ ಸರಿಯುತ್ತಿಲ್ಲ, ಆದರೆ ಅಕ್ಷರ, ಅರಿವು, ಅಭಿವೃದ್ಧಿ (3-ಅ) ಅಂದಾಗ ಇದಕ್ಕೆ ಸಹಕರಿಸುವವರ ಸಂಖ್ಯೆ ತೀರಾ ಬೆರಳೆಣಿಕೆ ಮಾತ್ರ ಎನ್ನಬಹುದು.

“ನಾವು ಅಕ್ಷರವನ್ನು ರಕ್ಷಿಸಿದರೆ, ಅಕ್ಷರ ನಮ್ಮನ್ನು ರಕ್ಷಿಸುತ್ತದೆ” ಎನ್ನುವ ಮಾತನ್ನು ನನ್ನ ಶಾಲಾ ಗುರುಗಳು ಹೇಳುತ್ತಿದ್ದರು, ಅದು ಅನುಸರಣೆ ಅನಿಸಬಹುದು ಆದರೆ ಸರ್ವಕಾಲಿಕ ಸತ್ಯವೇ. ಈ ನೆಲೆಯಲ್ಲಿ ನಾವು ಅಕ್ಷರವನ್ನು ಹೇಗೆ ರಕ್ಷಿಸಬೇಕು? ಅಕ್ಷರದ ಅರಿವನ್ನು ಮಕ್ಕಳಲ್ಲಿ / ಸಮುದಾಯದಲ್ಲಿ ಹೇಗೆ ಮೂಢಿಸಬೇಕು ? ಅಕ್ಷರಗಳ ಅರಿವಿನ ಅಭಿವೃದ್ಧಿಗೆ ನೆಲೆ ಯಾವುದು? ಈ ಪ್ರಶ್ನೆಗಳಿಗೆ ಒಂದೇ ಉತ್ತರ ಅದು ಶಾಲೆ.

ಹ್ಹಾ, ಹೌದು! ಶಾಲೆ ಮಾತ್ರ ಒಂದು ಸುಸ್ಥಿರ ನ್ಯಾಯೋಚಿತ ಸಮುದಾಯವನ್ನು ನಿರ್ಮಿಸಲು ಬೇಕಾಗಿರುವ ಮೂಲಾಂಶಗಳನ್ನು ಸೃಷ್ಠಿಸಲು ಸಾಧ್ಯ. ಇದು ಈ ನೆಲದ ಪ್ರತಿಯೋರ್ವನ ಪ್ರಥಮ ಕಾರ್ಯವಾಗಬೇಕು ಮತ್ತು ಅದಕೆ ಸಹಕರಿಸಬೇಕು. ಮಗುವಿನ ಬಾಲ್ಯ / ಬುನಾದಿಯಿಂದಲೇ ನಾವೆಲ್ಲರೂ ಈ ನೆಲೆಯಲ್ಲಿ ಚಿಂತಿಸಿ ಶ್ರಮಿಸಬೇಕಾಗಿದೆ. ತರಗತಿಯಲ್ಲಿ ಒಬ್ಬ ಸುಗಮಕಾರನಿಗೆಷ್ಟು ಜವಬ್ದಾರಿಯಿರುತ್ತದೋ, ಅμÉ್ಟೀ ಜವಬ್ದಾರಿ ಆಯಾ ಪೋಷಕರು ಅಥವಾ ನಾಗರೀಕರಿಗೂ ಇರುವುದು ಸೂಕ್ತವೆನಿಸುತ್ತದೆ. ಮಗುವಿನ ಬಾಲ್ಯದಿಂದಲೇ ಅದರ ಕಲಿಕೆಯಲ್ಲಿ ನೆರವಾಗಬೇಕಾಗುತ್ತದೆ. ಆ ಮಗುವಿನ ಅಳು, ಸ್ಪರ್ಶ, ತೊದಲು ನುಡಿ, ಮಂದ ನಗೆ, ಹೆಜ್ಜೆಗಳು ಈ ಎಲ್ಲಾ ಪ್ರಕ್ರಿಯೆಯ ಹಿಂದೆ ಅದರ ಸಾಮಾಜೀಕರಣ ಅಡಗಿರುತ್ತದೆ ಎನ್ನುವಾಗ ಆ ಮಗುವಿಗೆ ಮನೆಯೇ ಕಲಿಕೆಯ ವನವಾಗಬೇಕು. ಮನೆಯವರೇ ಪ್ರತಿ ಹಂತದಲ್ಲೂ ಕಲಿಕೆಗೆ ನೆರವಾಗಬೇಕು. “ಮಗು ಏನನ್ನು ಸುಮ್ಮನೆ ಹೀರಿಕೊಳ್ಳುವುದಿಲ್ಲ, ಎಲ್ಲವನ್ನು ತನ್ನ ಅನುಭವದ ತೆಕ್ಕೆಗೆ ತಂದುಕೊಂಡು ಹಿಂದಿನ ಅನುಭವಕ್ಕೆ ಹೊಸ ಅನುಭವವನ್ನು ತುಲನೆ ಮಾಡಿ ಹೊಸ ಜ್ಞಾನವನ್ನು ಗಟ್ಟಿಗೊಳಿಸಿಕೊಳ್ಳುತ್ತದೆ.” ಇಂತಹ ಸಾಮರ್ಥ್ಯವಿರುವ ಮಗುವಿಗೆ ನಾವ್ಯಾಕೆ ನಮ್ಮ ಆಸೆ-ಅಭಿಲಾಷೆಗಳ ಹೆಸರಿನಲ್ಲಿ ಅವುಗಳ ಸ್ವ್ವಾತಂತ್ರ-ಹರಣ ಮಾಡಬೇಕು, ಪ್ರಸ್ತುತದಲ್ಲಿ ನಾವೆಲ್ಲರೂ ಯೋಚಿಸುವಂತೆ ಸಂವಿಧಾನದ ರಾಜ್ಯ ನೀತಿ-ನಿರ್ದೇಶಕ ತತ್ವಗಳ ಆಶಯಗಳು NCF-2005 ನ ರೂಪದಲ್ಲಿ ಪ್ರತಿಯೋರ್ವನಿಗೂ ಶಿಕ್ಷಣ ಸೌಲಭ್ಯದ ರೂಪದಲ್ಲಿ ಲಭಿಸುತ್ತಿದೆ. ಹೀಗಿರುವಾಗ ಪ್ರತಿಯೊಬ್ಬ ನಾಗರೀಕನು ಶಾಲೆಗೆ, ಶಾಲಾ ಹಿನ್ನಲೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಸಹಾಯ ಮಾಡಬೇಕಾಗಿದೆ.
ನಮ್ಮ ದೇಶದ ಪ್ರತಿಯೊಂದು ಸರ್ಕಾರಿ ಶಾಲೆಗಳು ನ್ಯಾಯೋಚಿತವಾದ, ಸುಸ್ಥಿರವಾದ ಸಮಾಜವನ್ನು ನಿರ್ಮಿಸಲು ಸಂಕಲ್ಪಿಸಿ ನಿಸ್ವಾರ್ಥ ಸೇವೆಗೈಯ್ಯುತ್ತಿದೆ.

 ಶಾಲಾ ತರಗತಿಗಳು ಸಾಂವಿಧಾನಕ ಮೌಲ್ಯಗಳನ್ನು ಬಾಲ್ಯದಿಂದಲೇ ರೂಢಿಸಲು ತರಗತಿ ಪ್ರಕ್ರಿಯೆಯಲ್ಲಿಯೇ ಮಕ್ಕಳ ಇಷ್ಟಾನುಸಾರವಾಗಿ ಕಲಿಯುವ ವ್ಯವಸ್ಥೆ ಕಲ್ಪಿಸಿದೆ, ಉದಾಹರಣೆಗೆ; ನಲಿಕಲಿ ವರ್ಗ ಪ್ರಕ್ರಿಯೆಯೇ ಸಾಕ್ಷಿ.
 ಮಕ್ಕಳ ಆರೋಗ್ಯದ ದೃಷ್ಠಿಯಲ್ಲಿ ಚಿಕಿತ್ಸೆ, ಹಾಲು, ಆಹಾರ, ಸೈಕಲ್‍ನಂತಹ ಸೌಲಭ್ಯಗಳನ್ನು ಕಲ್ಪಿಸಿದೆ.
ಕಲಿಕೆಗೆ ಅವಶ್ಯವಾಗಿ ಬೇಕಾದ ಚರ್ಚೆ, ಸಂವಾದಗಳು.
 ಮಕ್ಕಳ ಕಲಿಕೆಯ ದೃಷ್ಠಿಯಲ್ಲಿ ಪುಸ್ತಕಗಳು, ವಿದ್ಯಾರ್ಥಿನಿಲಯಗಳು.
 ಸಮತೆಯ ದೃಷ್ಠಿಯಲ್ಲಿ ಸಮವಸ್ತ್ರಗಳು, ಪಾದರಕ್ಷೆಗಳು.
 ಮಕ್ಕಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನದಂತಹ ಸವಲತ್ತುಗಳು.
 ಶೈಕ್ಷಣಿಕ ಪ್ರವಾಸಗಳು, ಸ್ಥಳೀಯ ಇತಿಹಾಸ ಮಾಹಿತಿಗೆ ಜಿಲ್ಲಾದರ್ಶನದ ಕಾರ್ಯಕ್ರಮಗಳು.
 ಪ್ರತಿಭಾ ಪುರಸ್ಕಾರಗಳು, ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಪ್ರತಿಭಾ ಕಾರಂಜಿಗಳು.
 ಹೊಸ ಹೊಸ ಸಂಶೋಧನೆಗೆ ಇನ್ಸೈರ್ ಅವಾಡ್ ್ಗಳು ವಿದ್ಯಾರ್ಥಿ ವಿಜ್ಞಾನಿ ಪುರಸ್ಕಾರಗಳು.
 ಮಕ್ಕಳ ಸ್ವಕಲಿಕೆಗೆ ಪ್ರೇರಕವಾಗಿ ದೇಶಭಕ್ತಿಯ ಮೌಲ್ಯಗಳನ್ನು ಬೆಳೆಸಲು ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಲು ಸೇವದಳ, ಸ್ಕೌಟ್ಸ್ ಗೈಡ್ ತರಬೇತಿಗಳು.
 ಉಚಿತ ಗಣಕಯಂತ್ರದ ಕಲಿಕೆಗಳು.
 ಮಕ್ಕಳಿಗೆ ವಿಶೇಷ ಶಿಕ್ಷಣ (ಟೈಲರಿಂಗ್ 8ನೇ ತರಗತಿ ಮೇಲ್ಪಟ್ಟವರಿಗೆ)
 ವಿದೇಶಿ ಪ್ರವಾಸಗಳು.

ಹೀಗೆ ಸರ್ಕಾರ ತಮ್ಮ ದೇಶದ ಮಕ್ಕಳಿಗೆ ಯಾವುದನ್ನು ಕೊರತೆಯಾಗದಂತೆ ಕಲಿಕೆಗೆ ಪೂರಕವಾಗಿ ಸಾಕಷ್ಟು ಸೌಲಭ್ಯಗಳನ್ನು ನೀಡಿದೆ. ಆದರೂ ನಮ್ಮ ಜನರು ಯಾಕೆ ಖಾಸಗಿ ಶಾಲೆಗಳಿಗೆ ಮುಗಿ ಬಿಳುತ್ತಿರುವರು ? ಸತ್ಯವೆಂದರೆ ಈ ಮೇಲಿನ ಯಾವ ಅಂಶಗಳು ಇಲ್ಲದಿರುವ ಸತ್ವಹೀನವಾದ ಕಲಿಕೆಗೆ ಹೆಚ್ಚು ಹೊತ್ತು ನೀಡುವುದು ಸರಿಯೇ? ಎಂಬುದನ್ನು ನಮ್ಮ ನಾಗರೀಕರು ಅರ್ಥ ಮಾಡಿಕೊಳ್ಳಬೇಕಿದೆ.

ನಮ್ಮ ದೇಶದ ಪ್ರತಿಯೊಬ್ಬ ಪ್ರಜೆಯು ಈ ಸರ್ಕಾರಿ ಶಾಲೆಗಳ ಉದ್ದೇಶಗಳು, ಗುರಿಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಈ ರೀತಿಯ ಸರ್ಕಾರಿ ಶಾಲೆಗಳ ಕಲಿಕಾ ಚಟುವಟಿಕೆಗಳಿಂದ ವಂಚಿಸಿ ತಮ್ಮ ಮಕ್ಕಳಿಗೆ ತಾವೇ ಅನ್ಯಾಯವೆಸಗುತ್ತಿದ್ದಾರೆ. ಮತ್ತೊಂದು ಶೋಚನೀಯ ಸಂಗತಿಯೆಂದರೆ ಪ್ರಬುದ್ದವಾಗಿ ಮಾತನಾಡುವ, ಸರ್ಕಾರಿ ಸೇವೆಯಲ್ಲಿರುವ ನಾಗರೀಕರೇ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಲ್ಲಿ ಕಲಿಸಲು ಇಚ್ಛಿಸುತ್ತಾರೆ. ಅಲ್ಲಿನ ಯಾಂತ್ರಿಕ ಕಲಿಕೆಯು ‘ಮಕ್ಕಳ ಮನಸ್ಸನ್ನು ಅರಳಿಸುವ ಬದಲು ಕೆರಳಿಸುವ ಯತ್ನ ಮಾಡ ಹತ್ತಿರುವುದನ್ನು’ ಪೋಷಕರಾದ ನಾವು ಗಂಭೀರವಾಗಿ ಆಲೋಚಿಸಬೇಕಾಗಿದೆ. ಆ ಮಕ್ಕಳ ಮನಸ್ಥಿತಿಯು ಕಂಪ್ಯೂಟರ್‍ನ ಹಾಗೇ ಫೀಡ್ ಮಾಡಿದರೇ ಮಾತ್ರ ಮೆಮೊರಿಯಲ್ಲಿ ಸೇವ್ ಆಗುವುದು ಇಲ್ಲವಾದರೆ ಅವರು ಸೇವೆಯಲ್ಲಿ ನಾಪತ್ತೆಯಾಗುತ್ತಿರುವುದು ತೀರಾ ಸಾಮಾನ್ಯ ಅಂಶ. ಮತ್ತು ಈ ಖಾಸಗಿ ವ್ಯವಸ್ಥೆಯಲ್ಲಿ ಕಲಿತ ಮಕ್ಕಳು ತೀರಾ ಸುಲಭವಾಗಿ ಅನಾಹುತಗಳಿಗೆ ಕೈ ಹಾಕುವ ಜನರಾಗಿದ್ದಾರೆ. ಉದಾ; ಫಲಿತಾಂಶ, ಕಲಿಕೆ, ಜೀವನದ ಅತೀ ನಿರ್ಧಾರಕ ಸಂದರ್ಭಗಳಲ್ಲಿ ಎಡವುತ್ತಿರುವುದನ್ನು ಕಾಣಬಹುದು. ಇದಕ್ಕೆ ಕಾರಣ ನೋಡಿದಾಗ ಯಾಂತ್ರಿಕತೆ ಎಂಬುದನ್ನು ಎಂದಿಗೂ ಮರೆಯುವಂತಿಲ್ಲ. ಮತ್ತು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತಹ ಆಲೋಚನೆಗಳು ಬಹು ಗಂಭೀರವಾದ ಪ್ರಮಾಣದಲ್ಲಿ ಇತ್ತಿಚೆಗೆ ನಡೆಯುತ್ತಲಿವೆ. ಆದರೂ ಇದು ಸಾಮಾನ್ಯನ ಮಟ್ಟಕ್ಕೆ ನಿಲುಕುವ ವಿಷಯವಾದಾಗ ಇಂತಹ ಸೇವೆಗಳು ಹೆಚ್ಚು ಫಲಿತವಾಗುತ್ತವೆ.

ಆಗ ಮಾತ್ರ ಸರ್ಕಾರಿ ಶಾಲೆಗಳು ತಲೆಯೆತ್ತಿ ಕಲಿಸುತ್ತವೆ. ಶಿಕ್ಷಣದ ನೈಜ ಗುರಿ ಉದ್ದೇಶಗಳನ್ನು ಈಡೇರಿಸಿಕೊಳ್ಳುತ್ತವೆ. ಅದು ನಮ್ಮೆಲ್ಲರ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಿ. ನಮಗೆ ಹಿತವೆನಿಸುವ ಸಮಾಜದ ಸೃಷ್ಠಿಗೆ ನಾವೇ ಕಾರಣವಾಗುತ್ತೇವೆ. ಇನ್ನಾದರೂ “ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರ ಬನ್ನಿ, ನಿಮ್ಮ ಮಕ್ಕಳನ್ನು ಅದರಿಂದ ಹೊರ ತನ್ನಿ”- ಇದು ನಮ್ಮ ಸರ್ಕಾರಿ ಶಾಲೆಗಳ ಘೋಷ ವಾಕ್ಯವಾಗಬೇಕು. ಈ ನೆಲೆಯಲ್ಲಿ ನಾವು ವ್ಯವಸ್ಥೆಯನ್ನು ಅರ್ಥ ಮಾಡಿಕೊಂಡು ದೇಶದ ಸ್ವಾಸ್ಥ್ಯವನ್ನು ಶಿಕ್ಷಣದ ಮೂಲಕ ಅನುಷ್ಠಾನಕ್ಕೆ ತರಲು ನಾವೆಲ್ಲರೂ ಶಿಕ್ಷಣ ವ್ಯವಸ್ಥೆಗೆ ಕೈಜೋಡಿಸೋಣವೇ

18346 ನೊಂದಾಯಿತ ಬಳಕೆದಾರರು
7154 ಸಂಪನ್ಮೂಲಗಳು