ಅಕ್ಷರಾ ಪುಟ್ಟ ಮಕ್ಕಳ ಶಿಕ್ಷಣ ಯೋಜನೆ. ವೈಜಯಂತಿ ಕೆ.

ಐ.ಸಿ.ಡಿ.ಎಸ್  (ICDS) ದೊಂದಿಗೆ ಪರಿಣಾಮಕಾರಿ ಕಾರ್ಯ ಸಾಧಿಸುವುದಕ್ಕಾಗಿ ಒಂದು ಅನುಕೂಲಕರ ಪರಿಸರದ ರಚನೆ:  ಅಕ್ಷರಾ ಪುಟ್ಟ ಮಕ್ಕಳ ಶಿಕ್ಷಣ ಯೋಜನೆ. 
ವೈಜಯಂತಿ ಕೆ.
 
ಹಿನ್ನೆಲೆ 
 ’ ಪುಟಾಣಿ ಮಕ್ಕಳ ಶಿಕ್ಷಣ ’ ಎಂಬ ಈ ಕ್ಷೇತ್ರದ ಮೇಲೆ ವಿಶ್ವದಾದ್ಯಂತ ನಡೆದಿರುವ  ಸಂಶೋಧನೆಗಳ ಸಲಹೆಯ ಪ್ರಕಾರ, ಮಗು ತಾನು ಬಾಲ್ಯದಲ್ಲಿ ಬೆಳೆದ ಪರಿಸರ ಮತ್ತು ಆ ಸಮಯದಲ್ಲಿ ಅದು ಮಾಡಿದ ಪರಿಶೋಧನೆಗಳು ಅದರ ಬೆಳವಣಿಗೆಯಲ್ಲಿ ಗಮನಾರ್ಹ ಕೊಡುಗೆಯನ್ನು ನೀಡುತ್ತವೆ. ಒಂದು ಸಂಪತ್ಭರಿತ ಮತ್ತು ಬೆಂಬಲಯುತ ಪರಿಸರದಲ್ಲಿ  ಮಕ್ಕಳಿಗೆ ಕಲಿಯಲು, ಬಹಳ ಆವಕಾಶಗಳಿರುತ್ತವೆ ಮತ್ತು ವಿಷಯಗ್ರಹಣಾ ಸಾಮರ್ಥ್ಯದ ಬೆಳವಣಿಗೆ  ಪ್ರಮುಖವಾದ ಮುಖ್ಯ ಪಾತ್ರವನ್ನು ವಹಿಸುತ್ತದೆ.  ರಾಷ್ಟ್ರೀಯ ಪುಟಾಣಿ ಮಕ್ಕಳ ಪಾಲನೆ ಮತ್ತು ಶಿಕ್ಷಣ (The National Early Childhood Care and Education (ECCE) Policy in India  ) ಕಾರ್ಯನೀತಿಯು,  ಭಾರತದಲ್ಲಿ ಜನನ ಪೂರ್ವದಿಂದ  ಆರನೇ ವರ್ಷದ ಒಳಗಿನ ಎಲ್ಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಮಗ್ರ ಸೇವೆಯನ್ನು ನೀಡುವಲ್ಲಿ ಭಾರತ ಸರಕಾರದ ಬದ್ಧತೆ ಯನ್ನು ಮತ್ತೆ ಒತ್ತಿ ಹೇಳುತ್ತದೆ.
 
ಕಳೆದ ದಶಕಗಳಲ್ಲಿ, ಭಾರತವು  ಇತರ ವಿಷಯಗಳೊಂದಿಗೆ ಸಾರ್ವಜನಿಕ ಶಿಕ್ಷಣದಲ್ಲಿ ಹಣ ಹೂಡಿಕೆ, ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳು, ವಿದ್ಯಾರ್ಥಿಯರ ಪ್ರವೇಶಾವಕಾಶದಲ್ಲಿ ಹೆಚ್ಚಳ, ಶಿಕ್ಷಕರ ಸಂಬಳ, ವಿದ್ಯಾರ್ಥಿ ಹಾಗು ಶಿಕ್ಷಕರ ಅನುಪಾತ ಹಾಗೂ ಇವುಗಳಿಗೆ ಸಂಬಂಧಿಸಿದ ಇತರ ಸೌಲಭ್ಯಗಳನ್ನು ನೀಡಿ ಗಮನಾರ್ಹ ಸುಧಾರಣೆಗಳನ್ನು  ಮಾಡಿದೆ. ಆದರೂ,, ನಿರಂತರ ವೀಕ್ಷಣೆಯಿಂದ ತಿಳಿದ ಅಂಶವೆಂದರೆ ವಿದ್ಯಾರ್ಥಿಯರ ಶೈಕ್ಷಣಿಕ ಸಾಧನೆಯ ಮಟ್ಟ ಕಡಿಮೆಯಾಗಿರುವುದು.ಈಗ ’ಶಾಲಾ ಅಭಿವೃದ್ಧಿ’ ಗಿಂತ  ’ಶಾಲಾ ಗುಣಮಟ್ಟ’ ದ ಕಡೆಗೆ ಹೆಚ್ಚು ಗಮನ ಕೇಂದ್ರೀಕೃತವಾಗುತ್ತಿರುವುದರಿಂದ  ಕಲಿಕಾ ಸಾಧನೆ  ಎಂಬ ಪರಿಕಲ್ಪನೆ ಶೈಕ್ಷಣಿಕ ಯೋಜಕರ ಪದಬಂಡಾರದಲ್ಲಿ    ನಿಧಾನವಾಗಿ ಸ್ಥಾನ ಪಡೆದುಕೊಳ್ಳುತ್ತಿದೆ.ಯಾವುದೇ ಸದೃಢ ಶಿಕ್ಷಣ ವ್ಯವಸ್ಥೆಯಲ್ಲಿ  ಶಾಲಾ ಪೂರ್ವ ಶಿಕ್ಷಣ, ಅಂದರೆ  ಮಕ್ಕಳು ಶಾಲೆಗೆ ಹೋಗಲು ಸಿದ್ಧವಾಗುವಂತೆ ಮಾಡಲು ೦-೬ ವರ್ಷದೊಳಗಿನ ಮಕ್ಕಳ ಶಿಕ್ಷಣ ಮತ್ತು ಪಾಲನೆ  ಬಹು ಮುಖ್ಯ ಅಂಶವಾಗಿದೆ.
ನೋಬೆಲ್ ಪ್ರಶಸ್ತಿ ಪಡೆದಂತಹ ಲೋರೆಟ್ ಜಿಮ್ ಹೆಕ್ಮ್ಯಾನ್ ರವರ ಅಧ್ಯಯನದ ಪ್ರಕಾರ  ಪುಟಾಣಿ ಮಕ್ಕಳ ಶಿಕ್ಷಣವು, ಮಕ್ಕಳ  ವಿಷಯಗ್ರಹಣಾ ಶಕ್ತಿ ಮತ್ತು ಇತರ ಸಾಮರ್ಥ್ಯಗಳನ್ನು ಚೆನ್ನಾಗಿ ಬೆಳಸುವುದೇ ಅಲ್ಲದೆ ಅವರ  ಸಾಮಾಜಿಕ ಆರ್ಥಿಕ ಬೆಳವಣಿಗೆಗೂ ಉತ್ತಮ ಪರಿಣಾಮವನ್ನು ಬೀರುತ್ತದೆ. ಅಲ್ಲದೇ ಲೋರೆಟ್ ಜಿಮ್ ಹೆಕ್ಮ್ಯಾನ್ ರವರ ಸಂಶೋಧನಾ ಅಧ್ಯಯನವು ತಿಳಿಸುವುದೇನೆಂದರೆ, ಎಳೆಯ ವಯಸ್ಸಿನಲ್ಲಿ ಮಕ್ಖಳ ಬವಣೆ ಮತ್ತು ಅನುಭವಗಳು  ದೊಡ್ಡವರಾದ ಮೇಲೆ ಅವರು  ಯಶಸ್ಸು ಪಡೆಯುತ್ತಾರೋ ಅಥವಾ ವಿಫಲರಾಗುತ್ತಾರೋ  ಪ್ರಬಲವಾದ ಮುನ್ಸೂಚನೆಯನ್ನು ನೀಡುತ್ತವೆ  ಮತ್ತು ಪುಟ್ಟವರಾಗಿದ್ದಾಗ ಒಳ್ಳೆಯ ಶಿಕ್ಷಣ ದೊರೆತರೆ ಅದು ಹೇಗೆ ಚಿಕ್ಕ ವಯಸ್ಸಿನ ಅನುಕೂಲ ರಹಿತ ಸನ್ನಿವೇಶದ ಅನಾನುಕೂಲತೆಯನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡುತ್ತದೆ ಎಂಬುದನ್ನು ತೋರಿಸುತ್ತದೆ.
 
 ’ಹೈಯ್ ಸ್ಕೋಪ್ ಪೆರಿ’ ಎಂಬ ಶಿಶು ಶಿಕ್ಷಣ ಕಾರ್ಯಕ್ರಮ ಮತ್ತು ’ಎಬೆಸೆಡೇರಿಯನ್’ ಕಾರ್ಯಕ್ರಮಗಳು ನಡೆಸಿದ ನಿರಂತರ ವೀಕ್ಷಣಾತ್ಮಕ ಅಧ್ಯಯನಗಳ ಪ್ರಕಾರ  ಮಕ್ಕಳ ಬಾಲ್ಯದ ಪರಿಸರ ವನ್ನು ಗಮನಾರ್ಹವಾಗಿ ಸಮೃದ್ಧ ವಾಗಿಸಿದರೆ  ಮಕ್ಕಳ ವಿಷಯಗ್ರಹಣಾ ಶಕ್ತಿ ಮತ್ತು ಇತರ ಸಾಮರ್ಥ್ಯಗಳ ಬೆಳವಣಿಗೆ ಗಣನೀಯವಾಗಿ ಹೆಚ್ಚುತ್ತದೆ  ಎಂಬುದನ್ನು ತಿಳಿಸುತ್ತವೆ.  ಎಡೋಡ್ (೨೦೦೬) ಅವರ ಅಧ್ಯಯನದಿಂದ ತಿಳಿದ ಅಂಶವೆಂದರೆ, ಶಾಲಾ ಪೂರ್ವ ಶಿಕ್ಷಣವನ್ನು ಪಡೆದ ಮಗು  ಶಾಲಾ ಪೂರ್ವ ಶಿಕ್ಷಣ ಪಡೆಯದ ಮಗುವಿಗಿಂತ ಪದಸಂಪತ್ತು , ಆಡುಮಾತಿನಲ್ಲಿ ವಿವೇಚನೆ , ಮಾತಾಡದೇ ಮಾಡುವ ವಿವೇಚನೆ ಮತ್ತು ಶಾಲಾ ಸಿದ್ಧತೆ ಯಂತಹ ಅಂಶಗಳಲ್ಲಿ ಉತ್ತಮ ಸಾಧನೆಯನ್ನು ತೋರ್ಪಡಿಸುತ್ತಾನೆ.  ಇದೇ ರೀತಿಯ ಫಲಿತಾಂಶವನ್ನು ಸಂಶೋಧಕರಾದ  ಮೆಗ್ನುಸನ್, ಮೆಯರ್ಸ್, ರುಮ್, ವಲ್ಡ್ ಫೋಗೆಲ್ (೨೦೦೪) ಅವರ ಅಧ್ಯಯನಗಳು ತಿಳಿಸುತ್ತವೆ, ಇವರುಗಳು ಕಂಡುಕೊಂಡ ಅಂಶವೆಂದರೆ, ಯಾವ ಮಗು ಶಾಲೆಗೆ ಸೇರುವ ಒಂದು ವರ್ಷಕ್ಕೆ ಮುನ್ನ ಶಾಲಾಪೂರ್ವ ಕಲಿಕಾ ಶಾಲೆಗಳಲ್ಲಿ  ಅಥವಾ ಕೇಂದ್ರಗಳಲ್ಲಿ  ಕಲಿಯುತ್ತದೆಯೋ ಅಂತಹ ಮಗು ಕಿಂಡರ್ ಗಾರ್ಡನ್ ಅಥವಾ ಅಂಗನವಾಡಿಗಳಂತಹ  ಶಾಲೆಗಳಲ್ಲಿ ಓದುವ ಮತ್ತು ಗಣಿತದ ಸಾಮರ್ಥ್ಯಗಳಲ್ಲಿ ಅವುಗಳಿಗೆ ಸಂಬಂಧಿಸಿದ  ಹಲವಾರು ಅಂಶಗಳನ್ನು ನಿಯಂತ್ರಿಸಿದರೂ ಉತ್ತಮ ಸಾಧನೆಯನ್ನು ಮಾಡುತ್ತದೆ. ಅಲ್ಲದೇ ಶೈಕ್ಷಣಿಕ ಕೌಶಲ್ಯಗಳಲ್ಲಿಯೂ ಹೆಚ್ಚಿನ ಸಾಧನೆಯನ್ನು ಮಾಡಿರುವುದು ಕಂಡುಬಂದಿದೆ. ಈ ಅನುಕೂಲಗಳು ಮಗು ಕಿಂಡರ್ ಗಾರ್ಡನ್ ಅಥವಾ ೧ ನೇ ತರಗತಿಗೆ ಹೋದಾಗ ಅವರ ಕೌಶಲ್ಯ ಗಳನ್ನು ಪರಿಗಣನೆ ಮಾಡುವಾಗಲೂ  ಮಗುವಿಗೆ ಪ್ರಬುದ್ಧ  ವಾದ ಬೆಂಬಲವನ್ನು ನೀಡುತ್ತದೆ. ಯಾವ ಮಗು ಶಾಲಾ ಪೂರ್ವ  ಶಿಕ್ಷಣ ಕಾರ್ಯಕ್ರಮಗಳಲ್ಲಿ   ಭಾಗವಹಿಸಿರುತ್ತದೆಯೋ ಅವರು ಕಿಂಡರ್ ಗಾರ್ಡನ್‌ಗಳಂತಹ  ಶಾಲೆಗಳಿಗೆ ಹೋದರೂ ತಾನು ಈ ಹಿಂದೆ ಗಳಿಸಿದ ಕೌಶಲಗಳನ್ನು ಹಾಗೇ ಮುಂದುವರಿಸಿಕೊಂಡು ಹೋಗುತ್ತದೆ. ಆದರೆ, ಹಿಂದುಳಿದ ಗುಂಪಿನ ಮಕ್ಕಳಲ್ಲಿ ಇಂತಹ ಪರಿಣಾಮಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಸಿಗುವುದಿಲ್ಲ.  ಈ ಒಂದು ಸಾಧ್ಯತೆಗಳಿಂದ ಶಾಲಾಪೂರ್ವ ಶಿಕ್ಷಣ ಉತ್ತೇಜಿಸುವ ಶೈಕ್ಷಣಿಕ ಯೋಜನೆಗಳು ಹಿಂದುಳಿದ ಕುಟುಂಬಗಳಿಂದ ಬಂದ ಮಕ್ಕಳ ಶಾಲಾಪೂರ್ವ ಶಿಕ್ಷಣದ ಮೇಲೆ ಗಮನ ಹೆಚ್ಚಿಸಿದಷ್ಟೂ ಶಾಲಾ ಉಳ್ಳವರ ಮತ್ತು ಬಡವರ ಮಕ್ಕಳಲ್ಲಿ ಇರುವ ಆರಂಭಿಕ ಸಿದ್ಧತೆಗಳಲ್ಲಿನ ಅಂತರವನ್ನು ಕಡಿಮೆಮಾಡಲು ಸಾಧ್ಯವಾಗುತ್ತದೆ.
ಈ ಹಿನ್ಹೆಲೆಯಲ್ಲಿ ’ಅಕ್ಷರಾ ಶಿಶು ಕೇಂದ್ರಿತ ಶಿಕ್ಷಣ  ಕಾರ್ಯಕ್ರಮ’ ಎಂಬ ಒಂದು ಯೋಜನೆ ರಚಿಸಲಾಗಿತ್ತು.
 
 ’ಅಕ್ಷರಾ’ ಯೋಜನೆಯ ಅನುಭವ:
’ಅಕ್ಷರಾ’ ಎಂಬ ಯೋಜನೆಯು ಶಾಲಾ ಪೂರ್ವಸಿದ್ಧತಾ ಕಾರ್ಯಕ್ರಮ (School Preparedness Programme) ಎಂಬ  ಹೆಸರಿನಲ್ಲಿ  ೨೦೦೬-೨೦೦೭ ರಲ್ಲಿ ಬೆಂಗಳೂರಿನಲ್ಲಿ  ಸುಮಾರು ೨೦೦ ಸಮಗ್ರ ಮಕ್ಕಳ ಅಭಿವೃದ್ದಿ ಸೇವಾ ಸಂಸ್ಥೆ(Integrated Child Development Service centres (ICDS))  ಅಂದರೆ ಅಂಗನವಾಡಿಗಳಂತಹ ಸಂಸ್ಥೆಗಳಲ್ಲಿ  ಹಣ ಸಂದಾಯ ಪಡೆದು ಕೆಲಸಮಾಡುವ ಶಿಕ್ಷಕರನ್ನಿಟ್ಟು ಪ್ರತಿ ದಿನವೂ  ಎರಡು ಗಂಟೆಗಳ ಕಾಲ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಿತು. 
 
೨೦೦೯ ರ ಹೊತ್ತಿಗೆ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ  ಅವರಿಂದ ಪರಿಚಯಿಸಲ್ಪಟ್ಟ ಪಠ್ಯಕ್ರಮಕ್ಕೆ ಅನುಗುಣವಾದ ಬೆಳವಣಿಗೆಗೆ ಸೂಕ್ತವಾದ ಮತ್ತು  ಆಟ-ಆಧಾರಿತ ವಾದ ಪಠ್ಯಕ್ರಮವನ್ನು ಅಂಗನವಾಡಿಗಳಲ್ಲಿ ಕಾರ್ಯರೂಪಕ್ಕೆ ತಂದು ಮಕ್ಕಳ ಬೋಧನಾ- ಕಲಿಕಾ ಉಪಕರಣಗಳ ನೆರವನ್ನು ನೀಡುವುದರೊಂದಿಗೆ ’ಶಾಲಾ ಪೂರ್ವಸಿದ್ಧತಾ ಕಾರ್ಯಕ್ರಮ’  ಎಂಬ ಹೆಸರಿಗೆ ಬದಲಾಗಿ ಶಾಲಾಪೂರ್ವ ಶಿಕ್ಷಣ ಕಾರ್ಯಕ್ರಮ’ ಎಂಬ ಹೆಸರಿನಲ್ಲಿ ಪುನರ್ವಿನ್ಯಾಸಗೊಳಿಸಲಾಯಿತು. 
ಈ ಕಾರ್ಯಕ್ರಮವು ತನ್ನ ಕೆಲಸ ಕಾರ್ಯದೊಂದಿಗೆ ನಿರಂತರವಾಗಿ ಅಂಗನವಾಡಿ ಕಾರ್ಯಕರ್ತೆಯರಿಗೆ  ಮತ್ತು ಅಂಗನವಾಡಿ ಸೇವಕರಿಗೆ ಯಾವ ರೀತಿ ಮಗುವಿಗೆ ಶಿಶು ಕೇಂದ್ರಿತ ವಾಗಿ ಆಟ ಆಧಾರಿತ ಕಲಿಕೆಗೆ ಬೋಧನಾ ಕಲಿಕೆ ವಸ್ತುಗಳನ್ನು  ಬಳಸಬೇಕು , ಹೇಗೆ ಮಗುವಿನ ಕಲಿಕಾ ಸಾಧನೆಯನ್ನು ಮೌಲ್ಯಮಾಪನ ಮಾಡಬೇಕು ಎಂದು ಹೇಳಿಕೊಟ್ಟಿತು. ಇದರೊಂದಿಗೆ , ಪುನರ್ವಿನ್ಯಾಸಗೊಂಡ ಈ ಕಾರ್ಯಕ್ರಮವು ಅಂಗನವಾಡಿಗಳಿಗೆ ಸಮುದಾಯ  ಬೆಂಬಲವಾಗಿರುವ ಬಾಲ ವಿಕಾಸ ಸಮಿತಿಗೆ ಮಾರ್ಗದರ್ಶನದ ಪಟ್ಟಿಯನ್ನು ಸಿದ್ಧಪಡಿಸಿತು ಮತ್ತು ಅದರ  ಸದಸ್ಯೆಯರಿಗೆ ಶಿಶು ಶಿಕ್ಷಣದ ವಿಷಯಾಧಾರಿತವಾಗಿ ತರಬೇತಿ  ನೀಡಿತು. 
 
 
ಅಕ್ಷರಾ ಕಾರ್ಯಕ್ರಮವನ್ನು ಬೆಂಗಳೂರಿನ ಅಧಿಸೂಚಿಸದಿರುವ ಕೊಳಚೆ ಪ್ರದೇಶದಲ್ಲಿ (ಒಂದು ಕ್ರಿಯಾ ಸಂಶೋಧನೆಯ ಯೋಜನೆಯಾಗಿ); ಮಹಿಳಾ ಉದ್ಯಮಿಗಳು ಖಾಸಗೀ ಶಿಶು ಶಿಕ್ಷಣ ನಡೆಸುತ್ತಿರುವ ಬಾಲವಾಡಿ ಕೇಂದ್ರಗಳಲ್ಲಿ; ಮತ್ತು ಹಾಗೆಯೇ ತೃತೀಯ ಕೆಲಸಗಾರರ ಮಾದರಿಯಲ್ಲಿ ಅಂಗನವಾಡಿ ಕೇಂದ್ರಗಳ ಜೊತೆಗೂಡಿ  ಜಾರಿಗೆತರಲಾಯಿತು.  ಆದರೂ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ  ಅಂಗನವಾಡಿ ಕೇಂದ್ರಗಳಲ್ಲಿ ಜಾರಿಗೆ ತಂದ ಕಾರ್ಯಕ್ರಮವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಯರೂಪಕ್ಕೆ  ಬಂತು . ಅದೇ ಪ್ರಸ್ತುತ ಅಧ್ಯಯನದ ಮುಖ್ಯ ಗುರಿಯಾಗಿದೆ..
 
 
ಅಕ್ಷರಾ ಶಾಲಾಪೂರ್ವ ಶಿಕ್ಷಣ ಕಾರ್ಯಕ್ರಮ:
 
ಅಕ್ಷರಾ ಎಂಬ ಶಿಶು ಶಿಕ್ಷಣ ಕಾರ್ಯಕ್ರಮದ ಮುಖ್ಯ ಉದ್ದೇಶವೇನೆಂದರೆ, ಉತ್ತಮ ಗುಣಮಟ್ಟದ ಬೋಧನಾ ಸಾಮಗ್ರಿಗಳನ್ನು ನೀಡಿ ಶಿಕ್ಷಕರಲ್ಲಿ ಸಾಮರ್ಥ್ಯವನ್ನು ಬೆಳೆಸಿ ಒಂದು ಸಂರಚನಾತ್ಮಕವಾದ ಶಿಶು ಶಿಕ್ಷಣ ಕಾರ್ಯಕ್ರಮವನ್ನು ಜಾರಿಗೆ ತರುವುದಾಗಿದೆ. ಈ ಉದ್ದೇಶಕ್ಕಾಗಿ ಈ ಕಾರ್ಯಕ್ರಮದಡಿಯಲ್ಲಿ ತರಬೇತಿ ಪಡೆದ ಶಿಕ್ಷಕರು ಈ ಸಂಸ್ಥೆಗಳಲ್ಲಿ ಪ್ರತೀ ದಿನ ೯೦ ನಿಮಿಷ ಶಾಲಾ ಪೂರ್ವ ಶಿಕ್ಷಣ ನೀಡಬೇಕು, ಅಲ್ಲದೇ ಇದಕ್ಕೆ ನೆರವಾಗಿ ಶಿಶುವಿನ ವಿವಿಧ ಸಾಮರ್ಥ್ಯಗಳ ಬೆಳವಣಿಗೆಗೆ ಪೂರಕವಾದ ಉತ್ತಮ ವಿನ್ಯಾಸದ ಸಂಶೋಧನಾಧಾರಿತವಾಗಿ ರಚಿತವಾದ ಬೋಧನಾ ಸಾಮಗ್ರಿಯನ್ನು ನೀಡಲಾಯಿತು.  ಇದರೊಂದಿಗೆ ಈ ಕಾರ್ಯಕ್ರಮವು ಬೋಧಕರಿಗೆ ತರಭೇತಿಯನ್ನು ನೀಡುವ ಮತ್ತು ಮೇಲ್ವಿಚಾರಣೆ ನಡೆಸುವ ಸದೃಢ ವ್ಯವಸ್ಥೆ ಇತ್ತು , ಅಲ್ಲದೆ ಬಾಲ ವಿಕಾಸ ಸಮಿತಿಯನ್ನು ರಚಿಸುವ  ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆಗೆ ಬದ್ಧವಾಯಿತು. 
 
ಯೋಜನೆಯ ನಾಲ್ಕು ಪ್ರಮುಖ ಅಂಗಭಾಗಗಳು.
 
 ಶಾಲಾ ಸಿದ್ಧತೆಯ ಸಾಮಗ್ರಿಗಳು/ ಬೋಧನಾ-ಕಲಿಕಾ ಸಾಮಗ್ರಿ: ೨೦೦೫ ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಪುಟ್ಟ ಮಕ್ಕಳ ಶಿಕ್ಷಣದ ಪಠ್ಯಕ್ರಮವು ಚಟುವಟಿಕಾಧಾರಿತವಾಗಿರಬೇಕು, ಶಿಕ್ಷಣವು ಶಿಶು ಕೇಂದ್ರಿತವಾಗಿರಬೇಕು,  ಶಿಶು ಶಿಕ್ಷಣ ಪಡೆಯುವ ಮಗುವಿನ ವಯಸ್ಸಿಗೆ ಸಮರ್ಪಕವಗಿರಬೇಕು, ಮಗುವಿನ ಸರ್ವಾಂಗೀಣ ಬೆಳವಣಿಗೆಯ ಗುರಿಯನ್ನು ಹೊಂದಿರಬೇಕು ಸ್ಥಳಿಯ ಪರಿಸ್ಥಿತಿಗೆ ತಕ್ಕಂತೆ ಅಳವಡಿಕೆಯಾಗಿರಬೇಕು ಹಾಗೂ ನಮ್ಯವಾಗಿರಬೇಕು ಎಂದು  ಹೇಳುತ್ತದೆ.   ಅಲ್ಲದೇ , ಕಲಿಕಾ ಸಾಮಗ್ರಿಯು ಆಟ ಮತ್ತು ಕಲಿಕೆಗೆ ಅಗತ್ಯವಿರುವಷ್ಟು ಇರುವುದಿಲ್ಲ  ಮತ್ತು ಈ ಆಟಿಕೆಗಳನ್ನು  ಕಲಿಕಾ ಉದ್ದೇಶಕ್ಕೆ ಬಳಸದೇ  ಪ್ರದರ್ಶನಕ್ಕೆ ಹೆಚ್ಚು ಬಳಸಲಾಗುತ್ತದೆ.  ಕರ್ನಾಟಕ ರಾಜ್ಯದ ಮಕ್ಕಳ ಸಮಗ್ರ ಅಭಿವೃದ್ದಿ ಯೋಜನೆ (ICDS) ಸಂಪನ್ಮೂಲ ಪುಸ್ತಕಗಳು ಮತ್ತು ವಿಶಿಷ್ಠವಾದ ಆಟದ ಸಾಮಗ್ರಿಗಳನ್ನು ಒದಗಿಸಿತ್ತು ಇವುಗಳಿಗೂ ಮತ್ತು ಕಲಿಕಾ ಉದ್ದೇಶಗಳಿಗೆ ಸಂಬಂಧ ಕಲ್ಪಿಸಬೇಕಿತ್ತು.  ಆದರೆ, ಅಕ್ಷರಾ ಯೋಜನೆಯು ಈ ರಚನಾತ್ಮಕ ಬೋಧನಾ ಕಲಿಕಾ ಸಾಮಗ್ರಿಗಳಲ್ಲಿ ಕೆಲವೊಂದು ಕೊರತೆ ಕಂಡುಕೊಂಡಿತು.  ಈ ಕೊರತೆಯನ್ನು ನೀಗಿಸಲು ಅಕ್ಷರ ಯೋಜನೆಯು ಹೊಸದಾದ ಮತ್ತು ಕಡಿಮೆ ವೆಚ್ಚದ ಬೋಧನಾ ಸಾಮಗ್ರಿಗಳ ಕಿಟ್ ಅನ್ನು ರಚಿಸಿತು. ಕರ್ನಾಟಕ ರಾಜ್ಯ ಶಿಶು ಅಭಿವೃದ್ದಿ ಪರಿಷತ್ , ರಾಷ್ಟ್ರೀಯ ಜನ ಸಹಯೋಗ ಮತ್ತು ಶಿಶು ಅಭಿವೃದ್ಧಿ ಸಂಸ್ಥೆ ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿ ಸೇವಾ ಕೇಂದ್ರ ಇವುಗಳೊಡನೆ   ಸಮಾಲೋಚನೆ ನಡೆಸಿ  ಈ ಬೋಧನಾ ಕಿಟ್ ನಲ್ಲಿ ಸುಮಾರು ೪೦ ಬಗೆಯ ವಸ್ತುಗಳನ್ನು ಇಡಲಾಗಿದ್ದು,  ಅವುಗಳನ್ನು ಎಲ್ಲಾ ಅಂಗನವಾಡಿ ಕೇಂದ್ರಗಳು ಬಳಸುವಂತೆ ನೋಡಿಕೊಳ್ಳಲಾಯಿತು. ಈ ಕಿಟ್ ಶಿಶು ಕೇಂದ್ರಿತ, ಚಟುವಟಿಕಾಧಾರಿತ ಕಲಿಕಾ ಪದ್ಧತಿ, ಶಿಶುವಿನ ಸ್ವ ಕಲಿಕೆಗೆ ಮತ್ತು ಗುಂಪಿನಲ್ಲಿ ಕಲಿಯಲು ಬೆಂಬಲಿಸುವಂತದ್ದಾಗಿದ್ದವು.
 
೨: ಸಾಮರ್ಥ್ಯದ ಬೆಳವಣಿಗೆ: ಅಂಗನವಾಡಿ ಕಾರ್ಯಕರ್ತೆಯರು  ಅಲ್ಲಿನ ಶಾಲಾಪೂರ್ವ  ಶಿಕ್ಷಕರಾಗಿ ಕೆಲಸ ಮಾಡುವವರು  ಇವರಿಗೆ ತರಬೇತಿ ಇರುವುದಿಲ್ಲ ಮತ್ತು ಕ್ರಮಬದ್ದ ಶಿಶು ಶಿಕ್ಷಣದ ಬೋಧನಾ ಪದ್ಧತಿಯ ಜ್ಞಾನವಿಲ್ಲದವರಾಗಿರುತ್ತಾರೆ.  ಈ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ  ಅಂಗನವಾಡಿ ಕಾರ್ಯಕತ್ರೆಯರಿಗೆ ಮತ್ತು ಸೇವಕರಿಗೆ ಅವರ ಸಾಮರ್ಥ್ಯವನ್ನು ಬೆಳಸುವುದು ಬಹುಮುಖ್ಯವಾಗಿ ಆಗಬೇಕಾಗಿದ್ದ ಕಾರ್ಯ.  ಅಕ್ಷರಾ ತರಬೇತಿ ವಯಸ್ಸಿನ ಆಧಾರದ ಮೇಲೆ ಮಕ್ಕಳನ್ನು ವಿಂಗಡಿಸುವುದು ,,ತರಗತಿಯ ನಿರ್ವಹಣೆ , ಮಕ್ಕಳ ನಿರಂತರ ಮೌಲ್ಯಮಾಪನಕ್ಕೆ ಸಾಮಗ್ರಿಯ ಬಳಕೆ ಕಡೆಗೆ ಗಮನ ಹರಿಸಿತು.  ಅದರೊಂದಿಗೆ IಅಆS ಮೇಲ್ವಿಚಾರಕಾ ಸಿಬ್ಬಂದಿಗೆ ವಿಷಯಾಭಿಮುಖ ತರಬೇತಿ ನೀಡುವುದು   ಅಂಗನವಾಡಿ ಕಾರ್ಯಕರ್ತೆಯರಿಗೆ ನಿರಂತರ ಬೆಂಬಲವನ್ನು ನೀಡುವುದನ್ನೂ ಒಳಗೊಂಡಿತ್ತು.
 
೩:  ಬಾಲ ವಿಕಾಸ ಸಮಿತಿಯನ್ನು ಚುರುಕುಗೊಳಿಸುವುದು: ಅಕ್ಷರಾ ಯೋಜನೆಯು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿಯನ್ನು ನೀಡುವುದಲ್ಲದೇ ಬಾಲ ವಿಕಾಸ ಯೋಜನೆಯ ಸದಸ್ಯೆಯರ ಬೆಂಬಲಯುತವಾದ ಪಾತ್ರ ಮತ್ತು ಅಂಗನವಾಡಿಯ ಹಂತದಲ್ಲಿ ಕಾಣಿಸಿಕೊಳ್ಳುವ  ತೊಡಕುಗಳನ್ನು ಗುರುತಿಸಿ ಅವುಗಳಿಗೆ ಸಾಮೂಹಿಕವಾಗಿ  ಸ್ಥಳೀಯ ಪರಿಹಾರ ಕಂಡು ಕೊಳ್ಳುವ ಬಗೆಯನ್ನು ವಿಧಾನವನ್ನು ಗುರಿಯಾಗಿಟ್ಟುಕೊಂಡು ತನ್ನ ಬೋಧನಾ ಸಾಮಗ್ರಿಯನ್ನು ವಿನ್ಯಾಸಗೊಳಿಸಿತು.
 
೪. ಕಲಿಕೆ ಮಟ್ಟದ ಮೌಲ್ಯಮಾಪನ: :  ಮಕ್ಕಳ ಕಲಿಕೆ /ಬೆಳವಣಿಗೆ  ಅಳೆಯುವ ಉದ್ದೇಶದಿಂದ    ಮಕ್ಕಳ ವಯೋನಿರ್ದಿಷ್ಟ ಫಲಿತಾಂಶ ಸೂಚಕಗಳನ್ನು ರಚಿಸಿತು.  ಈ ಮೌಲ್ಯಮಾಪನ ಸಾಧನವು ಚಟುವಟಿಕಾಧಾರವಾಗಿದ್ದು, ಮಕ್ಕಳ ಬೆಳವಣಿಗೆಯ ಎಲ್ಲ ಕ್ಷೇತ್ರಗಳನ್ನು  ಪರಿಗಣಿಸುವ ಎಲ್ಲಾ ರೀತಿಯ ಪ್ರಮುಖ ಕೌಶಲ್ಯಾಧಾರಿತವಾದ ಸೂಚಕಗಳನ್ನು ಒಳಗೊಂಡಿತ್ತು. ಯೋಜನೆಯು ಎಲ್ಲ ಮಕ್ಕಳ ಪೂರ್ವ ಮತ್ತು ಅಂತಿಮ ಮೌಲ್ಯಮಾಪನ ಮಾಡಿ ನಿರ್ಣಯ ತೆಗೆದು ಕೊಳುತ್ತಿತ್ತು;  
 
 
ಅಂಗನವಾಡಿ ಶಾಲಾ ಪೂರ್ವ ಶಿಕ್ಷಣ ಕಾರ್ಯಕ್ರಮಗಳು:  
೨೦೦೯ ರಿಂದ ೨೦೧೨ ರ ವರೆಗೆ ಬೆಂಗಳೂರಿನ ಸುಮಾರು ೧೭೭೬ ಅಂಗನವಾಡಿಗಳಲ್ಲಿ ಅಕ್ಷರ ಶಾಲಾಪೂರ್ವ ಶಿಕ್ಷಣ ಯೋಜನೆಯನ್ನು ಕಾರ್ಯರೂಪಕ್ಕೆ ತಂದಿತು .  ಈ ಒಂದು ಅವಧಿಯಲ್ಲಿ ಮಕ್ಕಳ ಸಾಧನೆಯನ್ನು ಅಳೆಯಲಾಯಿತಲ್ಲದೇ ನಿರಂತರ ವೀಕ್ಷಣೆಯನ್ನು ಮಾಡಲಾಯಿತು. ಎಲ್ಲಾ ೧೭೭೬ ಅಂಗನವಾಡಿ ಕಾರ್ಯಕರ್ತೆಯರು ತರಬೇತಿ ಪಡೆದರಲ್ಲದೇ ಸುಮಾರು ೧೪೩೦೦  ಬಾಲ ವಿಕಾಸ ಸಂಸ್ಥೆಯ ಸದಸ್ಯೆಯರು ಸಹ  ತರಭೇತಿಯನ್ನು ಪಡೆದರು.
೨೦೧೨ ರಲ್ಲಿ, ದೆಹಲಿಯ ಅಂಬೇಡಕರ್ ವಿಶ್ವವಿದ್ಯಾಲಯದ ಪುಟಾಣಿ ಮಕ್ಕಳ ಶಿಕ್ಷಣ ಮತ್ತು ಅಭಿವೃದ್ಧಿ ಕೇಂದ್ರ ವನ್ನು, ಅಕ್ಷರಾ ಸಂಸ್ಥೆಯು  ಬೆಂಗಳೂರು ನಗರ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ನಡೆಸಿದ ಶಾಲಾಪೂರ್ವ ಶಿಕ್ಷಣದ ಸ್ವತಂತ್ರ  ಮೌಲ್ಯಮಾಪನ ಮಾಡಲು ಆಮಂತ್ರಿಸಿತು. ಆ ಮೌಲ್ಯಮಾಪನದಿಂದ, ಅಕ್ಷರಾ ಎಂಬ ಯೋಜನೆಯು ಸ್ವಯಂಪೂರ್ಣವಾಗಿ ಯೋಜಿತವಾಗಿದ್ದು ತನ್ನ ಉದ್ದೇಶಗಳಿಗೆ ತಕ್ಕಂತೆ ಎಲ್ಲಾ ಪ್ರಮುಖ ಅಂಶಗಳನ್ನು ಅಂದರೆ, ಬೋಧನಾ ಕಲಿಕಾ ಸಾಮಗ್ರಿಗಳು, ಕಲಿಕಾ ಪರಿಸರ, ಎಲ್ಲಾ ಹಂತದ ಕಾರ್ಯಕರ್ತರಿಗೂ ಯೋಗ್ಯವಾದ ತರಬೇತಿ ,ಕಾರ್ಯಕ್ರಮದ ನಿರಂತರ ವೀಕ್ಷಣೆ , ಸಮುದಾಯದ ಪಾಲ್ಗೊಳ್ಳುವಿಕೆ  ಸೇರಿದಂತೆ ವ್ಯವಸ್ಥಿತ ಸುಧಾರಣೆ ಯೋಜನೆಯೊಂದಿಗೆ ಪ್ರಬಲವಾದ ಚೌಕಟ್ಟನ್ನು ಹೊಂದಿದೆ ಎಂಬ ಅಂಶ ತಿಳಿದು ಬಂದಿರುತ್ತದೆ.
 
ಈ ಅಧ್ಯಯನದ  ಕೊನೆಯಲ್ಲಿ,  ಈ ಮಾದರಿಯು ಅದನ್ನು ಅಳವಡಿಸಿದ ವಿಶಾಲ ಪರಿಧಿಯ ದೃಷ್ಟಿಯಿಂದ ಪ್ರಶಂಶಾರ್ಹವಾಗಿದೆ ಎಂದು ಹೇಳಿದ್ದಾರೆ . ಈ ಕಾರ್ಯಕ್ರಮದ ಒಂದು ವಿಶಿಷ್ಟವಾದ ಕೊಡುಗೆಯೆಂದರೆ ಅಂಗನವಾಡಿಗಳ ಶ್ರೇಷ್ಠತಾ ಮಟ್ಟವನ್ನು ಅಳೆಯುವ ೭೦ ವಿಶಿಷ್ಟವಾದ ಸೂಚಕಗಳನ್ನು ಒಳಗೊಂಡಿರುವ ಒಂದು ಪಟ್ಟಿ ತಯಾರಿಸಿರುವುದು ಮತ್ತು ಮಕ್ಕಳ ವಾರ್ಷಿಕ ಸಾಧನೆಯನ್ನು ಅಳೆಯುವ ೫೬ ಸೂಚ್ಯಾಂಕಗಳನ್ನು ಹೊಂದಿರುವ ಮೌಲ್ಯ ಮಾಪನ ಚೌಕಟ್ಟು ತಯಾರಿಸಿರುವುದು.  ಈ ಯೋಜನೆಯ ಪರಿಣಾಮಕಾರಿ ಕಾರ್ಯಗಳನ್ನು ಕಂಡ   ಅಇಅಇಆಯು  ಉತ್ತರದಾಯಿತ್ವ ಮತ್ತು ಉತ್ತಮ ಫಲಿತಾಂಶದ ಬಗ್ಗೆ ಗಮನವನ್ನು ಕೇಂದ್ರೀಕರಿಸುವುದು ಅತ್ಯಂತ ಅಗತ್ಯವಾಗಿ ಆಗಬೇಕಾಗಿದ್ದ ಕಾರ್ಯ ಈ  ದಿಶೆಯಲ್ಲಿ ಇದೊಂದು ಗಮನಾರ್ಹ ಹೆಜ್ಜೆ ಎಂದು ನಿರ್ಣಯಿಸಿದೆ
 
ಪ್ರಸ್ತುತ ಅಕ್ಷರ ಅವರ  ಪುಟಾಣಿ ಮಕ್ಕಳ ಶಿಕ್ಷಣ ಯೋಜನೆಯನ್ನು ಬೆಂಗಳೂರು ನಗರ  ಜಿಲ್ಲೆಯ  ಸುಮಾರು ೩೩೫ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯರೂಪಕ್ಕೆ ತರಲಾಗಿದೆ.  ಈ ಕಾರ್ಯಕ್ರಮದಲ್ಲಿನ ಅನೇಕ ಅಂಶಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಮುಂಬರುವ ತಮ್ಮ ಪುಟಾಣಿ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದ ಮುಂಬರುವ  ಹೊಸ ನೀತಿ ನಿಯಮಗಳಲ್ಲಿ  ಅಳವಡಿಸಿಕೊಳ್ಳುತ್ತಿದ್ದಾರೆ. ಆದರೂ ಕೆಲವೊಂದು ತೊಡಕುಗಳನ್ನು. ಅಂದರೆ, ಪುಟಾಣಿ ಮಕ್ಕಳ ಶಿಕ್ಷಣದ ಪಠ್ಯಕ್ರಮವನ್ನು ಹೇಗೆ ಬೋಧಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು, ಹಲವಾರು ಆಡಳಿತಾತ್ಮಕ ಜವಾಬ್ದಾರಿಗಳನ್ನು ಮತ್ತು ಸಮುದಾಯದ ಕೆಲಸ ಕಾರ್ಯಗಳನ್ನು ನಿರ್ವಹಿಸುವ   ಅಂಗನವಾಡಿ ಕಾರ್ಯಕರ್ತೆಯರೆ ಶಾಲಾ ಪೂರ್ವಶಿಕ್ಷಣದ ಬೋಧಕರಾಗಿ ಕೆಲಸಮಾಡಬೇಕಾಗಿರುವ ಕಾರಣ ಅದಕ್ಕೆ  ಅವರ ಸಾಮರ್ಥ್ಯ ಬೆಳಸುವುದು, ಅವರಿಗೆ ಸೇವಾ ಪೂರ್ವ ಮತ್ತು ಸೇವಾ ನಿರತ  ತರಬೇತಿ ಒದಗಿಸಲು ಇಲಾಖೆಯಲ್ಲಿ ವ್ಯವಸ್ಥಿತ ಏರ‍್ಪಾಟು, ನಿಯತವಾಗಿ ಮೇಲ್ವಿಚಾರಣೆ ನಡೆಸುವ ಬಗ್ಗೆ ಮತ್ತು ಸಾಕಷ್ಟು ಮೂಲ ಸೌಕರ್ಯಗಳು. ಇಲ್ಲದಿರುವುದು, ಈ ಅಂಶಗಳ ಕಡೆಗೆ ಇನ್ನೂ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ.
 
 
18934 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು