ಅಂಗೈನಲ್ಲಿ ಅರವಿಂದ ಗುಪ್ತ ಆಟಿಕೆ Apps

ನರೇಶ್ ಧಕೇಚ ಅವರು  ನೀವು ಮತ್ತು ನಿಮ್ಮ ವಿದ್ಯಾರ್ಥಿಗಳು ಗೆ ತರಗತಿಯ ಮೊಬೈಲ್ ಅಪ್ಲಿಕೇಶನ್ ಗಳನ್ನು  ತರಲು ಒಂದು ಉತ್ತಮ ಕಾರಣ ಒದಗಿಸಿದ್ದಾರೆ!

  ಆಟಿಕೆಗಳ ಅಣ್ಣ ಅರವಿಂದ್ ಗುಪ್ತಾ  ಅವರು ಕಳೆದ 3 ದಶಕಗಳಿಂದ ಮಕ್ಕಳಿಗೆ ಮತ್ತು ಅವರ ಕಲ್ಪನೆ, ಕೃತಿಗಳಿಗೆ ಸಾಕಷ್ಟು ಇಂಧನ ಒದಗಿಸಿದ್ದಾರೆ.ಈ ಗೊಂಬೆಗಳನ್ನು ನೋಡಿದಾಗ  ಅವುಗಳ ಸುತ್ತ ವಿಷಯಸಾಮಗ್ರಿ ರಚಿಸಿ ತಮ್ಮ ಪಾಠಕ್ಕೆ ಪಾಠೋಪಕರಣವಾಗಿ ಬಳಸಿಕೊಳ್ಳಲು ಶಿಕ್ಷಕರ ಕೈ ತುಡಿಯುತ್ತದೆ. ಬೇಡವೆಂದು ಬಿಸುಟ ವಸ್ತು ಹಿಂದೆಂದೂ ಆಟಿಕೆಯಾಗಿ ಹೀಗೆ ಅರಳಿರಲಿಲ್ಲ. ಈ ಕಥೆ ನಿಮಗೇನೂ ಹೊಸದಲ್ಲ. ನೀವು ಅನೇಕ ಬಾರಿ ಸ್ಪೂರ್ತಿದಾಯಕ ಕಥೆ ಕೇಳಿದ್ದೀರಿ. ಆಟಿಕೆಗಳ ಬಗ್ಗೆ ಎಷ್ಟೊಂದು ಹೇಳಲಾಗಿದೆ. ಆದರೆ ಎಲ್ಲರಿಗೂ ಅದು ಗೊತ್ತಾಗಬೇಡವೇ? ಈ ಹಿನ್ನೆಲೆಯಲ್ಲಿ ನರೇಶ್ ಧಕೇಚ ಅವರ ಸಾಧನೆ ಶ್ಲಾಘ್ಯವಾದುದು.
                                         
ನರೇಶ್
ಗುಜರಾತ್ ನ ಅಮ್ರೇಲಿಯಲ್ಲಿ ಶಿಕ್ಷಕರಾಗಿದ್ದಾರೆ. ಅವರು ಉಚಿತವಾಗಿ ನಿಮ್ಮ ಮೊಬೈಲಿಗಾಗಿ  free android app ರಚಿಸಿದ್ದಾರೆ  ಇದು (ಪ್ರಕಟಣೆಯ ಸಮಯದಲ್ಲಿ) 1019  ಕಸದಿಂದ ತಯಾರಿಸಿದ ಗೊಂಬೆಗಳನ್ನು ಒಟ್ಟುಗೂಡಿಸಿ  21 ವಿಭಾಗಗಳಲ್ಲಿ ವರ್ಗೀಕರಿಸಿದ್ದಾರೆ  ಈ ಅಪ್ಲಿಕೇಶನ್ ನೀವು  ಗೊಂಬೆಗಳ ತಯಾರಿಕೆಗೆ ತಿಳಿದುಕೊಳ್ಳಬೇಕಾದ ಎಲ್ಲವನ್ನು ಹೇಳುತ್ತದೆ.
ಹೌದು,  ಅನೇಕ ಶಾಲೆಗಳಲ್ಲಿ ಮೊಬೈಲ್ ಫೋನ್ ಬಳಕೆ ನಿಷೇಧಿಸಲಾಗಿದೆ ಎಂಬುದು ನಮಗೆ ಗೊತ್ತು. ನರೇಶ್ ಅಪ್ಲಿಕೇಶನ್ ಶಾಲೆಯಲ್ಲಿ ಒಂದು ಉದ್ದೇಶಕ್ಕಾಗಿ  ನಿಷೇಧ ಮುರಿಯಲು ನಿಮ್ಮನ್ನು ಸ್ವಾಗತಿಸುತ್ತದೆ! ಮತ್ತು ಇನ್ನು ತಂದೆ ತಾಯಿಗಳಿಗಂತೂ  ಮಕ್ಕಳೊಂದಿಗೆ  ಅಂತ್ಯವಿಲ್ಲದ ಮೋಜಿನ ಸಮಯ ತೆರೆದುಕೊಂಡಿದೆ!
 ಅರವಿಂದ್ ಗುಪ್ತಾ ಸಾರಿದ   ಪುನಃ ಉಪಯೋಗಿಸಿ,  ಮರುಬಳಕೆ ಮಾಡಿ ಮತ್ತು ಆನಂದಪಡಿ ತತ್ವ  ನೂರುಪಟ್ಟು ಬಳಕೆಯಾಗುತ್ತದೆ.  ನರೇಶ್ ಧಕೇಚ ನೀವೆ ನಿಮ್ಮ ಸ್ವಂತ  ಹೊಸ ಹೊಸ ಆಟಿಕೆಗಳನ್ನು ರಚಿಸಲು ಆಹ್ವಾನಿಸಿದ್ದಾರೆ!
18914 ನೊಂದಾಯಿತ ಬಳಕೆದಾರರು
7393 ಸಂಪನ್ಮೂಲಗಳು