ಹೊಸ ಹೊಸ ಐಡಿಯಾ!

ಚಿಣ್ಣರಿಗೆ ಚಟುವಟಿಕೆಗಳು

Resource Info

ಮೂಲ ಮಾಹಿತಿ

ಇಲ್ಲಿನ ಚಟುವಟಿಕೆ ಮಕ್ಕಳು ಇಂದ್ರಿಯಗಳನ್ನು ವೈಯಕ್ತಿಕವಾಗಿ ಗಮನಿಸುವಂತೆ ಮಾಡುತ್ತದೆ. ಇನ್ನೊಂದು ಚಟುವಟಿಕೆ ಮಗ್ಗಿ ಕಲಿಕೆಯನ್ನು ವಿನೋದಮಯವಾಗಿಸುತ್ತದೆ !

ಕಾಲಾವಧಿ: 
01 hours 00 mins
ಪೀಠಿಕೆ: 

ನಮ್ಮ ಇಂದ್ರಿಯಗಳು ನಮಗೆ ವಿಶ್ವದ ಮತ್ತು ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಅನುಭವಿಸಲು ಅವಕಾಶ ನೀಡುತ್ತವೆ . ನಾವು ನಮ್ಮ ಇಂದ್ರಿಯಗಳ ಮುಖಾಂತರವೇ ಆಹಾರ , ಸಂಗೀತ ಅಥವಾ ಸೌಂದರ್ಯಗಳನ್ನು ಆನಂದಿಸಲು  ಸಮರ್ಥರಾಗಿದ್ದೇವೆ . ಇಲ್ಲಿನ ಚಟುವಟಿಕೆ ಮಕ್ಕಳು ಅವುಗಳನ್ನು ವೈಯಕ್ತಿಕವಾಗಿ ಗಮನಿಸುವಂತೆ ಮಾಡುತ್ತದೆ. ಇನ್ನೊಂದು ಚಟುವಟಿಕೆ ಮಗ್ಗಿ ಕಲಿಕೆಯನ್ನು ವಿನೋದಮಯವಾಗಿಸುತ್ತದೆ !

ಉದ್ದೇಶ: 
  •    ಗುಂಪು ಚಟುವಟಿಕೆ ಪ್ರೋತ್ಸಾಹಿಸುವುದು
  •    ಚರ್ಚೆ ಮೂಲಕ ಮಾತುಕತೆ ಕೌಶಲಗಳನ್ನು ಉತ್ತಮಗೊಳಿಸುವುದು.
  •   ಮಾಡುಕಲಿ  ಚಟುವಟಿಕೆಗಳು ಪರಿಕಲ್ಪನೆಗಳನ್ನು ಮನದಲ್ಲಿ ಹೆಚ್ಚು ಬೇರೂರಿಸುತ್ತವೆ.
ಚಟುವಟಿಕೆ ಹಂತಗಳು: 

ಶಿಶುವಿಹಾರದ ಮೊದಲ ವರ್ಷ ಅಥವಾ ಎರಡನೇ ವರ್ಷ

ನೀವು ಇದನ್ನು ಐದು ಇಂದ್ರಿಯಗಳ ಬಗ್ಗೆ ಮಕ್ಕಳಿಗೆ ಕಲಿಸಲು ಈ ಬಳಸಬಹುದು . ಕಪ್ಪು ಹಲಗೆಯ ಮೇಲೆ  ಕೆಳಗೆ ಬರೆದಿರುವಂತೆ ಮಗುವಿನ ಮುಖದ ಒಂದು ಸರಳ ಚಿತ್ರವನ್ನು ರಚಿಸಿರಿ ,  ಈಗ ಮಕ್ಕಳನ್ನು ಮಗು ಒಂದೊಂದು ಭಾಗದಿಂದಲೂ ಏನೇನು ಮಾಡುತ್ತದೆ ಎಂದು ಕೇಳಿ. ಉದಾಹರಣೆಗೆ ಮಗು ಯಾವುದರಿಂದ ಐಸ್ಕ್ರೀಂ ನೋಡುತ್ತದೆ ಎಂದು ಕೇಳಿರಿ.

ತನ್ನ ಕಣ್ಣುಗಳಿಂದ ಐಸ್ ಕ್ರೀಮ್ ನೋಡುತ್ತಾನೆ !

ಐಸ್ ಕ್ರೀಮ್ ಮಾರುವ  ಮನುಷ್ಯನ  ಕೂಗನ್ನು ಯಾವುದರ ಮುಖಾಂತರ ಕೇಳುತ್ತಾನೆ ?

ಅವನ ಕಿವಿ !
... ಹೀಗೆ .

ಸ್ಪರ್ಶವನ್ನು ಗ್ರಹಿಸಲು ಕೈ ಮತ್ತು ಕಾಲುಗಳನ್ನು ಚಿತ್ರಕ್ಕೆ ಸೇರಿಸಿ . ತಮ್ಮ ಪುಸ್ತಕಗಳಲ್ಲಿ ತಮ್ಮದೇ ಆದ  ಚಿತ್ರಗಳನ್ನು ರಚಿಸಲು ಹೇಳಿ ಮತ್ತು ಕೆಲವರನ್ನು ಅವರ ಚಿತ್ರಗಳನ್ನು ಅಥವಾ ಕಪ್ಪು ಹಲಗೆಯ ಮೇಲಿನ ಚಿತ್ರವನ್ನು ಬಳಸಿಕೊಂಡು ಇಂದ್ರಿಯದ ಕಾರ್ಯಗಳನ್ನು ಮತ್ತೆ ಹೇಳಲು ಕೇಳಿ .

ಇದರ ಬದಲು , ಒಂದು ಖಾಲಿ ಮುಖವನ್ನು ಚಿತ್ರಿಸಿರಿ ಮತ್ತು ಮಕ್ಕಳಿಂದ ಉತ್ತರಗಳನ್ನು ಪಡೆದಂತೆ ಕಣ್ಣುಗಳು , ಕಿವಿಗಳು , ಇತ್ಯಾದಿ ಸೇರಿಸಬಹುದು .
 

2 ಅಥವಾ 3 ನೇ ತರಗತಿ ಮಕ್ಕಳು.
 

ಮಗ್ಗಿಯನ್ನು ಬಾಯಿಪಾಠ ಮಾಡಿ ಅದನ್ನು ಮತ್ತೆ ಹೇಳುವುದು ಪ್ರಯಾಸದ ಕೆಲಸ ಆದರೆ ಅದನ್ನುಕಲಿಯಲೇ ಬೇಕು  ಬೇರೆ ಮಾರ್ಗವೇ ಇಲ್ಲ ,. ನೀವು ಸಂಖ್ಯೆಗಳಿಗೆ ಒಂದಿಷ್ಟು ಬಣ್ಣ ಸೇರಿಸಿದರೆ ಹೇಗಿರಬಹುದು ಯೋಚಿಸಿ  . ಬನ್ನಿ ಮಾಡಿನೋಡೋಣ

0 ಇಂದ 9 ರ ವರೆಗಿನ ಸಂಖ್ಯೆಗಳಿಗೆ ಬಣ್ಣದ ಕೋಡ್ ಸಂಖ್ಯೆಗಳನ್ನುನೀಡಿರಿ. ( ಉದಾ 0 = ಕೆಂಪು , 1 = ಹಳದಿ , 2 = ಹಸಿರು , 3 = ನೀಲಿ , 4 = ಕಪ್ಪು , 5 = ಕಿತ್ತಳೆ , 6 = ನೇರಳೆ , 7 = ಬೂದು 8 = ಕಂದು = ಗುಲಾಬಿ 9 ) . ಎಲ್ಲಾ ಮಕ್ಕಳಿಗೆ ಕಾಣುವಂತೆ  ಬೋರ್ಡ್ ಮೇಲೆ ಬಣ್ಣದ ಕೋಡ್ ಅನ್ನು ಬರೆಯಿರಿ . ಅಭ್ಯಾಸದ ಅಗತ್ಯವಿರುವ ಯಾವುದೇ ಸಂಖ್ಯೆಯ ಮಗ್ಗಿಯನ್ನು ಆರಿಸಿ ಕೊಳ್ಳಿ ಮತ್ತು ಈ ರೀತಿ ಒಂದು ಚಿತ್ರ ಬರೆಯಿರಿ : ( ಬಾಣಗಳನ್ನು ಗುಣಾಕಾರ ಚಿಹ್ನೆಗಳ ಬದಲಾಗಿ ಬರೆಯಲಾಗಿದೆ ) .

ಮಕ್ಕಳು ಅದನ್ನು ನಕಲು ಮಾಡಿ ಬರೆದುಕೊಳ್ಳಲು  ಹೇಳಿ . ಅವರೆಲ್ಲರ ಬಳಿ  ಕ್ರಯೋನ್ಗಳು ಅಥವಾ ಬಣ್ಣದ ಪೆನ್ಸಿಲ್ಗಳು ಇರುವಂತೆ ನೋಡಿಕೊಳ್ಳಿ ಸಂಖ್ಯೆಯ ಬದಲಿಗೆ ಬಣ್ಣದ ಸಂಕೇತ ಬರೆಯಲು ಹೇಳಿ.

 (ಉದಾ. 9 x 12 = 108 = ಹಳದಿ-ಕೆಂಪು-ಕಂದು ) .
 

ಈ ಲೇಖನವು ಈ ಮೊದಲು ಜನವರಿ ಫೆಬ್ರವರಿ 1990 ಟೀಚರ್ ಪ್ಲಸ್  , ಸಂಚಿಕೆ ನಂ .4 ನಲ್ಲಿ ಪ್ರಕಟವಾಗಿದೆ ಮತ್ತು ಅದನ್ನು ಸ್ವಲ್ಪ ಬದಲಾವಣೆಗಳೊಂದಿಗೆ ಇಲ್ಲಿ ಭಾಷಾಂತರಿಸಿ ಕೊಡಲಾಗಿದೆ.

18936 ನೊಂದಾಯಿತ ಬಳಕೆದಾರರು
7394 ಸಂಪನ್ಮೂಲಗಳು