ಸೌರವ್ಯೂಹದ ದ್ರವ್ಯರಾಶಿ ಕೇಂದ್ರ,

Resource Info

ಮೂಲ ಮಾಹಿತಿ

ಎರಡು-ಕಾಯಗಳಿರುವ ವ್ಯವಸ್ಥೆ ಯಲ್ಲಿ ದ್ರವ್ಯರಾಶಿಯ  ಕೇಂದ್ರವು ಎಲ್ಲಿ ಬೀಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು, ಕೆಳಗಿನ ಉದಾಹರಣೆಯನ್ನು ಪರಿಗಣಿಸಿ. ಒಂದೇ ದ್ರವ್ಯರಾಶಿಯ ಎರಡು ಗೋಲಗಳನ್ನು ತೆಗೆದುಕೊಳ್ಳಿ. ಗೋಳಗಳನ್ನು ಒಂದು ಕಂಬಿಯ ಎರಡು ತುದಿಯಲ್ಲಿ ಸಿಕ್ಕಿಸಿದ್ದಲ್ಲಿ, ಗೋಳಗಳ ತೂಕಗಳನ್ನು ಸಮತೋಲನಗೊಳಿಸುವುದಕ್ಕಾಗಿ ನೀವು ಕಂಬಿಯ ಯಾವ ಭಾಗದಲ್ಲಿ  ಆಧಾರ ನೀಡುತ್ತೀರಿ? ನಿಮ್ಮ ವ್ಯವಹಾರ ಜ್ಷಾನ ಇದು ಕಂಬಿಯ ಮಧ್ಯಭಾಗದಲ್ಲಿರಬೇಕು ಎಂದು ಹೇಳುತ್ತದೆ, ಎರಡೂ ಗೋಳದಿಂದ ಅರ್ಧದಷ್ಟು ದೂರದಲ್ಲಿರಬೇಕು ಎಂದು ನಮಗೆ ಹೇಳುತ್ತದೆ.

ಗೋಳಗಳಲ್ಲಿ ಒಂದು ಇನ್ನೊಂದಕ್ಕಿಂತ 10 ಪಟ್ಟು ಹೆಚ್ಚು ಬೃಹತ್ ಪ್ರಮಾಣದ್ದಾಗಿದ್ದರೆ ಏನಾಗುತ್ತದೆ? ನೀವು ಈ ಜೋಡಣೆಯನ್ನು  ಸಮತೋಲನಗೊಳಿಸಲು ನೀವು ಬೃಹತ್ ಗೋಳಕ್ಕೆ 10 ಪಟ್ಟು ಹೆಚ್ಚು ಹತ್ತಿರವಿರುವ ತಾಣದಲ್ಲಿ ಕಂಬಿಗೆ ಆಧಾರ ನೀಡಬೇಕಾಗುತ್ತದೆ. ನೀವು ಬೇರೆ ಯಾವುದೇ ಹಂತದಲ್ಲಿ ಆಧಾರವನ್ನು ಒದಗಿಸಿದರೆ, ಸಂರಚನೆಯು ಸ್ಥಿರವಾಗಿರುವುದಿಲ್ಲ.

ಕಾಲಾವಧಿ: 
(ಇಡೀ ದಿನ)
ಪೀಠಿಕೆ: 

ಗಣಿತಶಾಸ್ತ್ರದಲ್ಲಿ, ದ್ರವ್ಯರಾಶಿಯ  ಕೇಂದ್ರವು ಹೀಗಿರುತ್ತದೆ:

ವಸ್ತು 1ರ ದ್ರವ್ಯರಾಶಿ X ದ್ರವ್ಯರಾಶಿ ಕೇಂದ್ರದಿಂದ ವಸ್ತು 1 ರವರೆಗೆ ದೂರ = ವಸ್ತು 2ರ ದ್ರವ್ಯರಾಶಿ x ದ್ರವ್ಯರಾಶಿ ಕೇಂದ್ರದಿಂದ ವಸ್ತು 2 ರವರೆಗೆ ದೂರ

m x a = M x b

ಚಟುವಟಿಕೆ ಹಂತಗಳು: 

ಈಗ ನಾವು ನಕ್ಷತ್ರ-ಗ್ರಹ ವ್ಯವಸ್ಥೆ ನೋಡೋಣ. ಒಂದು ವಿಶಿಷ್ಟ ನಕ್ಷತ್ರ-ಗ್ರಹ ವ್ಯವಸ್ಥೆ ಯಲ್ಲಿ, ನಕ್ಷತ್ರವು ಗ್ರಹಕ್ಕಿಂತ ಸಾವಿರ ಪಟ್ಟು ಹೆಚ್ಚು ಬೃಹತ್ ಪ್ರಮಾಣದಲ್ಲಿರುವ ಸಂಭವವಿರುತ್ತದೆ. ಆದ್ದರಿಂದ, ಇಲ್ಲಿನ ಸಂರಚನೆಯು ಸ್ಥಿರವಾಗಿರಲು ಕಡಿಮೆ ದ್ರವ್ಯರಾಶಿ ಯ ಗ್ರಹಕ್ಕೆ ಹೋಲಿಸಿದರೆ ದ್ರವ್ಯರಾಶಿಯ ಕೇಂದ್ರವು ನಕ್ಷತ್ರಕ್ಕೆ ಹತ್ತಿರವಾಗಿರ ಬೇಕಾಗುತ್ತದೆ.

  ಈ ಸಮೀಕರಣದಿಂದ, ದ್ರವ್ಯರಾಶಿಯ ಕೇಂದ್ರವು ಇರುವ ಸ್ಥಳವು ಗ್ರಹದ ದ್ರವ್ಯರಾಶಿಗೆ ನಕ್ಷತ್ರದ  ದ್ರವ್ಯರಾಶಿಯ ಅನುಪಾತದ ಮೇಲೆ ಅವಲಂಬಿತವಾಗಿದೆ ಎಂದು ನಾವು ನೋಡಬಹುದು. ಈ ಅನುಪಾತವು ಹೆಚ್ಚು ಆಗಿದ್ದಷ್ಟೂ, ದ್ರವ್ಯರಾಶಿಯ ಕೇಂದ್ರವು ನಕ್ಷತ್ರಕ್ಕೆ ಹತ್ತಿರವಾಗಿರುತ್ತದೆ. ಕೆಲವು ಸಂದರ್ಭಗಳಲ್ಲಿ, ಅನುಪಾತವು ಹೇಗಿರುತ್ತದೆಂದರೆ ದ್ರವ್ಯರಾಶಿ ಕೇಂದ್ರವು ನಕ್ಷತ್ರದೊಳಗೇ  ಇರುತ್ತದೆ ಎಂದು ಹೇಳುತ್ತದೆ.

ನಕ್ಷತ್ರ ಮತ್ತು ಗ್ರಹವು ದ್ರವ್ಯರಾಶಿಯ ಕೇಂದ್ರದ ಸುತ್ತ ಸುತ್ತಬೇಕಾಗಿರುವುದರಿಂದ, ಕಡಿಮೆ ದ್ರವ್ಯರಾಶಿಯ ಗ್ರಹವು ಒಂದು ದೊಡ್ಡ ಕಕ್ಷೆಯನ್ನು ಮತ್ತು ಹೆಚ್ಚಿನ ದ್ರವ್ಯರಾಶಿಯ ನಕ್ಷತ್ರವು ಸಣ್ಣ ಕಕ್ಷೆಯನ್ನು ತೆಗೆದುಕೊಳ್ಳುತ್ತವೆ. ವ್ಯವಸ್ಥೆಯು ಸಕ್ರಿಯವಾಗಿ ಸ್ಥಿರವಾಗಬೇಕಾದರೆ, ನಕ್ಷತ್ರ ಮತ್ತು ಗ್ರಹವು ಎಲ್ಲಾ ಸಮಯದಲ್ಲೂ ದ್ರವ್ಯರಾಶಿಯ ಕೇಂದ್ರದ ವಿರುದ್ಧ ದಿಕ್ಕುಗಳಲ್ಲಿ ಸುತ್ತು ಹೊಡೆಯಬೇಕು, (ಚಿತ್ರ4 ನೋಡಿ.). ಇದು ಸಂಭವಿಸಬೇಕಾದರೆ, ಪೂರ್ಣ ಕಕ್ಷೆಯನ್ನು ಪೂರ್ಣಗೊಳಿಸಲು ಅವು ದ್ರವ್ಯರಾಶಿಯ ಕೇಂದ್ರದ ಸುತ್ತಲೂ ಒಂದು ಸುತ್ತು ಸುತ್ತುವುದಕ್ಕೆ  ತೆಗೆದುಕೊಳ್ಳುವ ಸಮಯ ಒಂದೇ ಆಗಿರಬೇಕು. ಬೇರೆ ರೀತಿಯಲ್ಲಿ ಹೇಳುವುದಾದರೆ, ಗ್ರಹವು ವೇಗವಾಗಿ ಚಲಿಸಬೇಕು ಮತ್ತು ನಕ್ಷತ್ರ ನಿಧಾನವಾಗಿ ಚಲಿಸಬೇಕಾಗುತ್ತದೆ.

 

ಸೂಚಿಸಿದ ಚಟುವಟಿಕೆ: ಯಾವುದೇ ವ್ಯವಸ್ಥೆಯ ದ್ರವ್ಯರಾಶಿಯ ಕೇಂದ್ರವನ್ನು ಲೆಕ್ಕಾಚಾರ ಮಾಡುವುದು ಸುಲಭ. ಉದಾಹರಣೆಗೆ, ಸೌರಮಂಡಲದ ದ್ರವ್ಯರಾಶಿಯ ಕೇಂದ್ರ ಎಲ್ಲಿದೆ ಎಂಬುದನ್ನು ಕಂಡುಹಿಡಿಯಲು ಪ್ರಯತ್ನಿಸಿ? ಲೆಕ್ಕವನ್ನು ಸರಳವಾಗಿಟ್ಟುಕೊಳ್ಳಲು, ಸೌರವ್ಯೂಹದಲ್ಲಿ ಅತಿ ಭಾರವಾದ , ಸೂರ್ಯ ಮತ್ತು ಗುರುಗ್ರಹ ಈ ಎರಡು ಬೃಹತ್ ಕಾಯಗಳ ಬಗ್ಗೆ ಯೋಚಿಸಿ. ಗುರುಗ್ರಹವು ಭೂಮಿಗೆ ಹೋಲಿಸಿದರೆ ದೊಡ್ಡ ಗ್ರಹವಾಗಿದ್ದರೂ ಸಹ, ಸೂರ್ಯನಿಗಿಂತ ಸಾವಿರ ಪಟ್ಟು ಕಡಿಮೆ ಪ್ರಮಾಣದಲ್ಲಿರುತ್ತದೆ. ಹೀಗಾಗಿ, ಸೌರ ವ್ಯೂಹದ  ದ್ರವ್ಯರಾಶಿಯ ಕೇಂದ್ರವು ಸೂರ್ಯನ ಹತ್ತಿರದಲ್ಲಿದೆ ಎಂದು ನಾವು ನಿರೀಕ್ಷಿಸಬೇಕು. ಸೌರವ್ಯೂಹದ ದ್ರವ್ಯರಾಶಿಯ ಕೇಂದ್ರವು ಎಲ್ಲಿದೆ ಎಂದು ಲೆಕ್ಕಾಚಾರ ಮಾಡಲು ಗ್ರಾಫಿಕ್ಸ್ನಲ್ಲಿ ನೀಡಿದ ಮಾಹಿತಿಯನ್ನು ಬಳಸಿ.

 

18051 ನೊಂದಾಯಿತ ಬಳಕೆದಾರರು
6931 ಸಂಪನ್ಮೂಲಗಳು