ಸರಳ ಮತ್ತು ಸಂಯುಕ್ತ ಸೂಕ್ಷ್ಮದರ್ಶಕಗಳು

Resource Info

ಮೂಲ ಮಾಹಿತಿ

ಇಂದು ಜೀವಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಸೂಕ್ಷ್ಮದರ್ಶಕವು ಕರಾರುವಾಕ್ಕಾದ ಸಂಶೋಧನೆಗೆ ಬಹು  ಮುಖ್ಯ ಉಪಕರಣವಾಗಿದೆ. ಸರಳ ಮತ್ತು ಸಂಯುಕ್ತ ಸೂಕ್ಷ್ಮದರ್ಶಕಗಳ ಬಗ್ಗೆ ಚಟುವಟಿಕೆಗಳು ಇಲ್ಲಿವೆ

 

ಕಾಲಾವಧಿ: 
(ಇಡೀ ದಿನ)
ಪೀಠಿಕೆ: 

ನಮ್ಮ ಬರಿಗಣ್ಣಿಗೆ ಕಾಣದಷ್ಟು ಚಿಕ್ಕದಾದ ವಸ್ತುಗಳನ್ನು ನಾವು ಪರೀಕ್ಷಿಸಲು ಸಹಾಯ ಮಾಡುವ ಸೂಕ್ಷ್ಮ ದರ್ಶಕವು ಅನೇಕ ಪ್ರಯೋಗಾಲಯಗಳಲ್ಲಿ ಅತ್ಯಗತ್ಯವಾದ ಮತ್ತು ಅನಿವಾರ್ಯವಾದ ಸಾಧನವಾಗಿದೆ.ಇಂಥ  ಸಮರ್ಥ ಸಾಧನದ ಸಂಶೋಧನೆಯಿಂದ ಈ ಹಿಂದೆ ನಮಗೆ ಕಣ್ಣಿಗೆ ಕಾಣದಿದ್ದ ಜೀವಕೋಶಗಳು ಮತ್ತು ಸೂಕ್ಷ್ಮಜೀವಿಗಳ ಜಗತ್ತನ್ನು ಕಾಣುವಂತಾಗಿದೆ. ಇಂದಿಗೂ ಜೀವಕೋಶ ವಿಜ್ಞಾನದಂತಹ ಜೀವ ವಿಜ್ಞಾನದ ಸಂಶೋಧನೆಯ ಅನೇಕ ಪ್ರಮುಖ ಕ್ಷೇತ್ರಗಳಲ್ಲಿ ಸೂಕ್ಷ್ಮದರ್ಶಕಗಳು ಬೆನ್ನೆಲುಬಾಗಿವೆ.

ಚಟುವಟಿಕೆ ಹಂತಗಳು: 

ಸರಳ ಮತ್ತು ಸಂಯುಕ್ತ ಸೂಕ್ಷ್ಮದರ್ಶಕಗಳು

ಒಂದುಸರಳವಾದಸೂಕ್ಷ್ಮದರ್ಶಕವುಒಂದುವಸ್ತುವನ್ನುದೊಡ್ಡದಾಗಿ ಕಾಣಿಸಲುಒಂದುಮಸೂರವನ್ನುಮಾತ್ರ ಬಳಸುತ್ತದೆ, ಓದುವಲ್ಲಿಬಳಸಲಾಗುವಕೈಯಿಂದಹಿಡಿಯುವಭೂತಗನ್ನಡಿಯಹಾಗೆ. ವಾನ್ಲೀವೆನ್ ಹಾಕ್ ನ ಸೂಕ್ಷ್ಮದರ್ಶಕಗಳುಇದುವರೆಗೂಮಾಡಿದಅತ್ಯುತ್ತಮವಾದಸರಳ ಸೂಕ್ಷ್ಮದರ್ಶಕಗಳಲ್ಲಿಒಂದಾಗಿವೆ, ಇದು 250x ಕ್ಕಿಂತಹೆಚ್ಚಿನವರ್ಧನೆಗಳನ್ನುಸಾಧಿಸುತ್ತದೆ. ಇದರಅರ್ಥಚಿತ್ರವುವೀಕ್ಷಿಸುವಮಾದರಿಗಿಂತ 250 ಪಟ್ಟುಹೆಚ್ಚಿನದಾಗಿರುತ್ತದೆ. ಸಂಯುಕ್ತಸೂಕ್ಷ್ಮದರ್ಶಕಗಳುಇದನ್ನುಉತ್ತಮಗೊಳಿಸುವುದಕ್ಕೆಒಂದುಶತಮಾನಕ್ಕಿಂತಲೂಹೆಚ್ಚು ಸಮಯ ತೆಗೆದುಕೊಂಡವು.

 

 ಅಭ್ಯಾಸ ಕ್ಕೆ ಸಲಹೆ

ವಿದ್ಯಾರ್ಥಿಗಳಿಗೆಭೂತಗನ್ನಡಿಯನ್ನುನೀಡಿಮತ್ತುಅದನ್ನುಹೆಚ್ಚುಪರಿಣಾಮಕಾರಿಯಾಗಿಹೇಗೆಬಳಸಬೇಕೆಂಬುದನ್ನುಕಂಡುಹಿಡಿಯಲುಕೆಲವುಸಮಯವನ್ನುಅವರಿಗೆನೀಡಿರಿ. ಅವರುತಮ್ಮಪಠ್ಯಪುಸ್ತಕಗಳಪುಟವನ್ನುಪ್ರಯೋಗಕ್ಕಾಗಿಬಳಸಬಹುದು. ಮೊದಲು ಎರಡೂಕಣ್ಣುಗಳುತೆರೆದಿಟ್ಟುಅದನ್ನುನೋಡಲುಹೇಳಿ, ತದನಂತರಒಂದುಕಣ್ಣನ್ನುಮುಚ್ಚಿ  ಅದನ್ನುನೋಡಲುಹೇಳಿರಿ. ಅವರುತಮ್ಮಕಣ್ಣುಗಳಿಂದವಿವಿಧದೂರದಲ್ಲಿಭೂತಗನ್ನಡಿಯನ್ನುಹಿಡಿದು ನೋಡುವುದನ್ನೂ  ಪ್ರಯತ್ನಿಸಬಹುದು. ನೋಡದೇ ಇರುವಕಣ್ಣನ್ನು  ಮುಚ್ಚಿ  ಮತ್ತುತೆರೆದಕಣ್ಣಿನಅರ್ಧಅಡಿದೂರದಲ್ಲಿ  ಭೂತಗನ್ನಡಿಯನ್ನುಹಿಡಿದಿಟ್ಟುಕೊಂಡಾಗಚಿತ್ರವನ್ನು ಸ್ಪಷ್ಟವಾಗಿನೋಡಬಹುದು ಎಂಬುದನ್ನು  ಅನೇಕರುಕಂಡುಕೊಳ್ಳುತ್ತಾರೆ. ಪ್ರತಿಯೊಬ್ಬರುಅದನ್ನುವಿಭಿನ್ನವಾಗಿಬಳಸ ಬೇಕೆಂದುಮತ್ತುಪ್ರತಿಯೊಬ್ಬವಿದ್ಯಾರ್ಥಿತಮಗೆಯಾವ ಸಂದರ್ಭದಲ್ಲಿ ಉತ್ತಮವಾಗಿ ಕಾಣಿಸುತ್ತದೆ ಎಂಬುದನ್ನು  ಕಂಡುಕೊಳ್ಳಬೇಕು ಎಂದು ಒತ್ತಿಹೇಳಿರಿ.

ಬಿಳಿಕಾಗದದಹಾಳೆಯಮೇಲೆಒಂದು ದೊಡ್ಡಎಲೆಯನ್ನುಅಂಟಿಸಿಮತ್ತುಅದನ್ನುಒಂದು ರಟ್ಟಿಗೆ ಅಂಟಿಸಿರಿ.. ಪ್ರಾರಂಭಕ್ಕೆ ಹಾಳೆಗೆಬಲು ಹತ್ತಿರದಲ್ಲಿ  ಭೂತಗನ್ನಡಿಯನ್ನುಹಿಡಿದಿಟ್ಟುಕೊಳ್ಳಲು  ವಿದ್ಯಾರ್ಥಿಗಳಿಗೆ  ಹೇಳಿರಿ.ನಿಧಾನವಾಗಿಅದನ್ನು ಹಂತ ಹಂತವಾಗಿಮತ್ತಷ್ಟುದೂರಕ್ಕೆ ತೆಗೆದುಕೊಢು ಹೋಗಬೇಕು ,ಪ್ರತಿಹಂತದಲ್ಲೂನಿಂತುದೃಶ್ಯಹೇಗೆಬದಲಾಗುತ್ತದೆಎಂಬುದನ್ನುಗಮನಿಸಲು ಹೇಳಿ. ತಮ್ಮನೋಟ್ಬುಕ್ಗಳಲ್ಲಿಆ ರಟ್ಟು ಕಾಗದದಿಂದ 3 ಅಥವಾ 5 ವಿವಿಧದೂರಗಳಲ್ಲಿ (ಉದಾ 6 ಇಂಚುಗಳು, 1 ಅಡಿ, 2 ಅಡಿ, 5 ಅಡಿ)  ತಾವುನೋಡಿದ್ದರ ಚಿತ್ರ ಬರೆಯಲುಅವರಿಗೆ  ಹೇಳಿ. ಆ ರಟ್ಟು ಕಾಗದದಿಂದ  ಇರುವಅಂತರವನ್ನುಅಳತೆಮಾಡಲುವಿದ್ಯಾರ್ಥಿಗಳುಅಳತೆಟೇಪ್ಅನ್ನುಬಳಸಬಹುದು. ಅವರು ಭೂತಗನ್ನಡಿಯಲ್ಲಿ ಕಂಡುಬಂದದೃಶ್ಯದವಿವರಮತ್ತುಗಾತ್ರವನ್ನುಅವರುಸಾಧ್ಯವಾದಷ್ಟುಹತ್ತಿರವಾಗಿಚಿತ್ರಿಸಲುಪ್ರಯತ್ನಿಸಬೇಕು.

ಒಂದುಸಂಯುಕ್ತಸೂಕ್ಷ್ಮದರ್ಶಕವುಒಂದಕ್ಕಿಂತಹೆಚ್ಚುಲೆನ್ಸ್ಗಳನ್ನುಹೊಂದಿದೆ, ಒಂದು ಕೋಳವೆಯೊಳಗೆ ಸಂಪರ್ಕಿತವಾಗಿರುತ್ತವೆ.ನೋಡುವ ವಸ್ತುಮಾದರಿಗೆಸಮೀಪವಿರುವಮಸೂರವನ್ನುವಸ್ತು ಮಸೂರ ಎಂದುಕರೆಯಲಾಗುತ್ತದೆ. ವಸ್ತು ಮಸೂರದಿಂದ ಉಂಟಾದ ಬಿಂಬವು ದರ್ಶಕ ಮಸೂರದಿಂದ ವಿಸ್ತರಿಸಲ್ಪಡುತ್ತದೆಇದೇ ಅಂತಿಮಮಸೂರ ಮತ್ತು ಇದರ ಮೂಲಕ  ವೀಕ್ಷಕರುದೊಡ್ಡದಾಗಿಸಿದ ಬಿಂಬವನ್ನುನೋಡುತ್ತಾರೆ. ಆಧುನಿಕಸೂಕ್ಷ್ಮದರ್ಶಕಗಳುಎಲ್ಲಾಸಂಯುಕ್ತಸೂಕ್ಷ್ಮದರ್ಶಕಗಳು. ಅವುಗಳುಭೂತಗನ್ನಡಿಗಿಂತಳೂಗಮನಾರ್ಹವಾಗಿಹೆಚ್ಚಿನ (ಸುಮಾರು 1000 ಎಕ್ಸ್ಅಥವಾಹೆಚ್ಚಿನ) ಬಿಂಬ ವರ್ಧನೆಗಳನ್ನುಮಾಡುತ್ತವೆ

 

ಅಭ್ಯಾಸಕ್ಕೆ ಸಲಹೆ

ಮೊಸರಿನೊಳಗೆಒಂದುಹಲ್ಲುಚುಚ್ಚುವಕಡ್ಡಿಯನ್ನುಅದ್ದಿರಿಮತ್ತುದ್ರವದಒಂದುಸಣ್ಣಹನಿಯನ್ನುಅನ್ನುಗಾಜಿನಸ್ಲೈಡ್ಮೇಲೆಸವರಿರಿ. ಬಳಿದ ಮೊಸರಮೇಲೆಕವರ್ ಸ್ಲಿಪ್  ಅನ್ನುನಿಧಾನವಾಗಿ ಇರಿಸಿ. ಒಂದುಸಂಯುಕ್ತಸೂಕ್ಷ್ಮದರ್ಶಕದಅಡಿಯಲ್ಲಿವೀಕ್ಷಿಸಿ, ಅದರಬಿಂಬವನ್ನುನಿಧಾನವಾಗಿಹೆಚ್ಚಿಗೆ ವರ್ಧಿಸಿರಿ. ಸಣ್ಣಬ್ಯಾಕ್ಟೀರಿಯಾವನ್ನು , ಒಂಟಿಯಾಗಿಅಥವಾಗುಂಪುಗಳಲ್ಲಿಮತ್ತುವಿವಿಧಆಕಾರಗಳಲ್ಲಿ - ರಾಡ್ಗಳುಅಥವಾಗೋಳಗಳ ಆಕಾರದಲ್ಲಿನೀವುನೋಡಬಹುದು. ವಿದ್ಯಾರ್ಥಿಗಳು ಸೂಕ್ಷ್ಮದರ್ಶಕದಲ್ಲಿತಾವುಕಂಡದ್ದನ್ನು  ಯಥಾವತ್ತಾಗಿ ಚಿತ್ರಿಸಲು  ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ.

 

 

19218 ನೊಂದಾಯಿತ ಬಳಕೆದಾರರು
7452 ಸಂಪನ್ಮೂಲಗಳು