ಸಂಖ್ಯೆಗಳೊಡನೆ ಒಡನಾಟ

Resource Info

ಮೂಲ ಮಾಹಿತಿ

 ಇಲ್ಲಿ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸ ಮಾಡುವಂಥ  ಕೆಲವು ನವೀನ ಸಂಖ್ಯಾ ಚಟುವಟಿಕೆಗಳಿವೆ. ಅದನ್ನು ಮಾಡುವಾಗ  ಅವರು ಸಾಕಷ್ಟು ಮೋಜನ್ನು ಹೊಂದುತ್ತಾರೆ.

ಕಾಲಾವಧಿ: 
02 hours 00 mins
ಪೀಠಿಕೆ: 

ಈ ನವೀನ ಆಟದಲ್ಲಿ ಪುಸ್ತಕಗಳ ಪುಟಗಳಲ್ಲಿನ ಸಂಖ್ಯೆಗಳು , ಜೀವಂತಗೊಂಡು, ಸಂಖ್ಯೆಗಳು ಬೋರು ಹೊಡಿಸದೇ ಮಕ್ಕಳು ಕುಣಿಕುಣಿದು ಅಡುವ ಒಂದು ಚಟುವಟಿಕೆ ಆಗುತ್ತವೆ. ಬನ್ನಿ ನಾವೂ ಆಡೋಣ ಮತ್ತು ಕಲಿಸೋಣ !
 ಸಂಖ್ಯೆಗಳ ಸಮೀಪ ಸಂಸರ್ಗ  ಪಡೆಯಿರಿ ... ಮತ್ತು ನಿಮ್ಮ ಗಣಿತದ ಪಾಠವನ್ನು ಒಂದು ಸಂತೋಷದಾಯಕ ಆಟಗಳ ಸರಣಿಯನ್ನಾಗಿಸಿರಿ!

 

ಉದ್ದೇಶ: 
  • ಅರ್ಥ ಗ್ರಹಿಸಲು ಬಹಳ ಸುಲಭವಾದ ಪರಿಕಲ್ಪನೆಗಳನ್ನು ಪರಿಚಯ ಮಾಡಿಸುವುದು
  • ಇದು ಆಟಗಳು ಸೇರಿದ ಒಂದು ಮೋಜಿನ ಅಭ್ಯಾಸವಾಗುವಂತೆ ಮಾಡುವುದು.
  • ಆಕಾರಗಳನ್ನು ತೋರಿಸಲು ಕಾರ್ಡ್ ಬಳಸಿ ಪರಿಕಲ್ಪನೆಗಳನ್ನು ಮನನ ಮಾಡಿಸಲು  ಸಹಾಯಮಾಡುವುದು.
ಚಟುವಟಿಕೆ ಹಂತಗಳು: 

 

ಸಂಖ್ಯೆಗಳೊಡನೆ -ಒಡನಾಟ
ನಾವು ಶಾಲೆಯಲ್ಲಿ ಬಳಸುವ  ಅನೇಕ ಗಣಿತದ ಆಟಗಳು ಮತ್ತು ಚತುರ ಸಮಸ್ಯೆಗಳನ್ನು ಬಿಡಿಸಲು ಪೆನ್ ಮತ್ತು ಪೇಪರ್ ಬಳಸಬೇಕಾಗುತ್ತದೆ ಅಥವಾ ಮಾನಸಿಕ ಮಾಡಲಾಗುವ ಸರಳ ಬುದ್ಧಿ ಕಸರತ್ತುಗಳಿರುತ್ತವೆ. ಏನೇ ಇರಲಿ, ಸಂಖ್ಯೆಗಳು ಎಂದರೆ  ಒಂದು ಪುಟದಲ್ಲಿ  ಮುದ್ರಿಸಾಲಾದ ಸಂಕೇತಗಳು ಅಷ್ಟೇ, ಮತ್ತು ಮಾಡುವ ಲೆಕ್ಕಾಚಾರಗಳನ್ನು ಸಾಮಾನ್ಯವಾಗಿ ಗಣಿತಶಾಸ್ತ್ರೀಯ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳದೇ, ಯಾಂತ್ರಿಕವಾಗಿ ಮಾಡಲಾಗುತ್ತದೆ. ಹೆಚ್ಚಿನ ಮಕ್ಕಳಿಗೆ ಗಣಿತ  ಎಂದಿಗೂ ವಾಸ್ತವವಾದ ಹುರುಪಿನ ಮಾನಸಿಕ ಕಸರತ್ತು ಆಗಿರದೇ, ಕೇವಲ ಸಂಖ್ಯೆಗಳು ಮತ್ತು ಸೂತ್ರಗಳನ್ನು ಇಟ್ಟುಕೊಂಡು ಮಾಡುವ ಒಂದು ದೊಂಬರಾಟವಾಗಿಯೇ ಮುಂದುವರಿದಿದೆ. ಪ್ರಾಥಮಿಕ ಶಾಲಾ ಮಟ್ಟದಲ್ಲಿ  ಸಂಖ್ಯೆಗಳನ್ನು ವಿನೋದಮಯ  ಮತ್ತು ಸುಗಮ  ಒಡನಾಡಿಯಾಗಿ ಮಾಡಿಬಿಟ್ಟರೆ ಈ ವರ್ತನೆ ಯನ್ನು, ಸರಿಪಡಿಸ ಬಹುದು.

ಲಂಡನ್ನಲ್ಲಿ ಕೆಲಸ  ಮಾಡುತ್ತಿದ್ದ ಪೋಲಿಷ್ ಗಣಿತ ಶಿಕ್ಷಕ, ಜಾನ್ ಪೊಟವೊರೊಸ್ಕಿ ದೈಹಿಕವಾಗಿ ಮತ್ತು ಮಾನಸಿಕವಾಗಿ ನಡೆಸಬಹುದಾದ ಕೆಲವಾರು ಸಂಖ್ಯೆಗಳ ಚಟುವಟಿಕೆಗಳನ್ನು ನೀಡಿದ್ದಾನೆ.  ನಾವು ಇಲ್ಲಿ ಸುಲಭವಾಗಿ  ಭಾರತೀಯ ತರಗತಿಗಳಲ್ಲಿ ಅಳವಡಿಸಿಕೊಳ್ಳ ಬಹುದಾದ ಅವರ ಕೆಲವು ವಿಚಾರಗಳನ್ನು ವಿವರಿಸಿದ್ದೇವೆ.

ಚಲಿಸುವ ಸಂಖ್ಯೆಗಳು :

ತರಗತಿಯಲ್ಲಿರುವ ಮಕ್ಕಳ ಸಂಖ್ಯೆಯಷ್ಟು ಎರಡು ಸೆಟ್  ದೊಡ್ಡ ಕಾರ್ಡ್ ತಯಾರಿಸಿ  . ಒಂದು ಸೆಟ್ ನಿಂದ, ಪ್ರತಿಯೊಂದು ಮಗುವಿನ ಹಿಂದೆ ಒಂದು ಸಂಖ್ಯೆಯನ್ನು ಅಂಟಿಸಿ.  (ಚಿತ್ರ 1 ನೋಡಿ - ಕೆಲವು ಬಳಕೆಆಗಿಲ್ಲ )

ಪ್ರಶ್ನೆಗಳನ್ನು ಕೇಳುವ ಮೂಲಕ ತಾನು ತೊಟ್ಟಿದ್ದ ಸಂಖ್ಯೆಯನ್ನು ಕಂಡುಹಿಡಿಯಲು ಮಕ್ಕಳಿಗೆ ಹೇಳಿ.ಪ್ರಶ್ನೆಗೆ ಉತ್ತರ 'ಹೌದು' ಅಥವಾ 'ಇಲ್ಲ' ಎಂದು ಮಾತ್ರ ಕೊಡಬೇಕು.  ಅವರು ಚಟುವಟಿಕೆ ಹೆಚ್ಚು ಕ್ರಮಬದ್ಧ ಮಾಡಲು, ಜೋಡಿಯಾಗಿ  ಮಾಡಬಹುದು. ಒಮ್ಮೆ ತಮ್ಮ ಸಂಖ್ಯೆಗಳನ್ನು ಸರಿಯಾಗಿ ಊಹಿಸಿದ  ಅನಂತರ ಎರಡನೇ ಗುಂಪಿನಿಂದ ಅವರು ಅದೇ ಸಂಖ್ಯೆಯ ಕಾರ್ಡನ್ನು ತೆಗೆದುಕೊಂಡು ತಮ್ಮ ಮುಂಭಾಗದಲ್ಲಿ  ಪಿನ್ ಮಾಡಿಕೊಳ್ಳಬಹುದು. .

ಈಗ ನೀವು ಅನೇಕ ಕೆಲಸಗಳನ್ನು ಒಂದರನಂತರ ಒಂದರಂತೆ  ಮಾಡಲು ಮಕ್ಕಳಿಗೆ ಕೇಳಬಹುದು. ಉದಾಹರಣೆಗೆ:

    ನಿಮ್ಮಸಂಖ್ಯೆಗಿಂತ ಎರಡು  ಹೆಚ್ಚು ಇರುವ ಸಂಖ್ಯೆಯ ವ್ಯಕ್ತಿಯ  ಕೈ ಹಿಡಿದುಕೊಳ್ಳಿ (ಮಕ್ಕಳು ಅಂತಿಮವಾಗಿ ಒಂದು ಸರಣಿ ಕಟ್ಟುವುದು ಕಾಣಿಸುತ್ತದೆ. ಸಮಸಂಖ್ಯೆಗಳ ಒಂದು ಸರಣಿ ಮತ್ತು ಬೆಸ ಸಂಖ್ಯೆಗಳ ಇನ್ನೊಂದು ಸರಣಿ).
    ಹಾಗೆಯೇ, ನಿಮ್ಮ ಸಂಖ್ಯೆಗಿಂತ) ನಾಲ್ಕು(ಅಥವಾ ಐದು, ಮೂರು, ಕಡಿಮೆ ಇತ್ಯಾದಿ) ಹೆಚ್ಚು ಸಂಖ್ಯೆ ಹೊಂದಿದ  ಒಬ್ಬ ವ್ಯಕ್ತಿಯೊಂದಿಗೆ ಕೈಗಳನ್ನು ಹಿಡಿದುಕೊಳ್ಳಿ.
    ಪ್ರತಿ ಜೋಡಿ ಸಂಖ್ಯೆ ಕೂಡಿದರೆ 21 (ಅಥವಾ ಯಾವುದೇ ಇತರ ಅನುಕೂಲಕರ ಸಂಖ್ಯೆ) ಆಗುವಂತೆ ಎಷ್ಟು ಜೋಡಿಯಾಗಿ ಕೈ ಹಿಡಿದುಕೊಳ್ಳಬಹುದು ನೋಡಿ. ಈ ಸಂದರ್ಭದಲ್ಲಿ, ಕೆಲವು ವಿದ್ಯಾರ್ಥಿಗಳು ಹೊರಗುಳಿಯಬಹುದು.. ಕಡಿಮೆ ವಿದ್ಯಾರ್ಥಿಗಳು ಹೊರಗುಳಿಯುವಂತೆ ವಿಭಿನ್ನ ಸಂಖ್ಯೆಗಳನ್ನು ಬಳಸಿಕೊಂಡು ಈ ಚಟುವಟಿಕೆ ಮತ್ತೆ ಮಾಡಿ .

 ಒಟ್ಟಿಗೆ ಕೂಡಿದರೆ  4 ರಿಂದ ಭಾಗ ಆಗುವಂತೆ ಆ ರೀತಿಯಲ್ಲಿ ಜೋಡಿ ಮಾಡಿ,. (ಚಿತ್ರ 2 ನೋಡಿ - 4 ರಿಂದ ಭಾಗ ಆಗುವಂತಹುದು)
   ಮೂರರ ಮೂಲಕ ನಿಖರವಾಗಿ ಭಾಗವಾಗುವಂತೆ ಮೂವರ ಗುಂಪು ಮಾಡಿ.
    ನಾಲ್ಕರ ಮೂಲಕ ನಿಮ್ಮ ಸಂಖ್ಯೆಗಳನ್ನು ಭಾಗಿಸಿ. ಏನು  ಉಳಿಯುತ್ತದೋ  ಅದನ್ನು ನೆನಪಿಟ್ಟುಕೊಳ್ಳಿ. ನೀವು ಅದೇ  ಶೇಷವನ್ನು ಹೊಂದಿರುವ   ಇತರರೊಂದಿಗೆ ಕೈ ಹಿಡಿದುಕೊಳ್ಳಿ (ಚಿತ್ರ 3 ನೋಡಿ – ಶೇಷಗಳು ಒಟ್ಟುಗೂಡುವುದು)

ಪ್ರತಿ ಚಟುವಟಿಕೆ ನಂತರ ವಿರಾಮ ಕೊಡಿ ಮತ್ತು ಮಕ್ಕಳ ಗುಂಪು ಮಾದರಿಗಳನ್ನು ಗಮನಿಸಿ. ಜೋಡಿಸುವಿಕೆಯ ರೀತಿಯ ಮೂಲಕ, ಇತ್ಯಾದಿ ನಿಮ್ಮ ಶಾಲೆ ವರ್ಗ ಮಟ್ಟಕ್ಕೆ ಸರಿಹೊಂದುವಂತೆ ಸಂಕೀರ್ಣವಾದ (ಅಥವಾ ಸುಲಭ) ಕಾರ್ಯಗಳನ್ನು ಜೋಡಿಸಬಹುದು.

ಕಾಯಗಳ ಆಕಾರಗಳು

ಬೇರೆ ಬೇರೆ ಜ್ಯಾಮಿತೀಯ ಆಕಾರದ ಹೆಸರನ್ನು ಪ್ರತಿ ಮಗುವಿಗೆ ಲೇಬಲ್ ಮಾಡಿ, ನಂತರ ಒಂದು "ಬೃಹತ್ ವಿಂಗಡನಾ ಚಟುವಟಿಕೆ" ಏರ್ಪಡಿಸಿ (ಚಿತ್ರ 4 ನೋಡಿ)

ಒಂದೇ ಬಗೆಯ ಸಂಖ್ಯೆಯ ಮಗ್ಗುಲುಗಳುಳ್ಳವರು  ಎಲ್ಲಾ ಕೈ ಜೋಡಿಸಿ -
ತಮ್ಮ ಎಲ್ಲಾ ಕಡೆ ಒಂದೇ ತರಹದ ಬದಿಗಳಿರುವವರು. ಕೈ ಜೋಡಿಸಿ
ಕನ್ನಡಿ ಸಮಮಿತಿಯ ಎಲ್ಲರೂ ಕೈ ಜೋಡಿಸಿ. ನೀವು ಕೇವಲ ತ್ರಿಕೋನಗಳು, ಅಥವಾ ಚತುರ್ಭುಜಗಳನ್ನು ಪ್ರಯತ್ನಿಸಬಹುದು.
 

ಚಲಿಸುವ ಭಿನ್ನರಾಶಿಗಳು.
ಪೂರ್ಣಾಂಕಗಳ ಚಟುವಟಿಕೆ ಬದಲಾಗಿ ಭಿನ್ನರಾಶಿಗಳನ್ನು ಬಳಸಿಕೊಂಡು ಚಟುವಟಿಕೆ ಮಾಡಿ. ಭಿನ್ನರಾಶಿಗಳನ್ನು ಸಂಖ್ಯಾತ್ಮಕವಾಗಿ ಅಥವಾ ರೇಖಾಚಿತ್ರವಾಗಿ ಎರಡೂ ರೀತಿಯಲ್ಲಿ ನಿರೂಪಿಸಲು ಸಾಧ್ಯವಿದೆ.

ಇಂತಹ ಆದೇಶಗಳನ್ನು ಬಳಸಿ:
ಕೂಡಿಸಿದರೆ ಒಂದು ಉತ್ತರ ಬರುವ ಜೋಡಿಗಳಾಗಿ ಸೇರಿರಿ.
ಕೂಡಿಸಿದರೆ  ಒಂದಕ್ಕಿಂತ ಹೆಚ್ಚು ಅಥವಾ ಕಡಿಮೆ  ಉತ್ತರ ಬರುವ ಜೋಡಿಗಳಾಗಿರಿ.

ಮತ್ತು   ಕೂಡಿಸಿದರೆ, ಎಲ್ಲರ ಉತ್ತರ  ಒಂದೇ ಆಗುವಂತೆ ಜೋಡಿಗಳಾಗಿರಿ.

ಪಾಟ್ವೊರೊಸ್ಕಿ ಅದೇ ಚಟುವಟಿಕೆಗಳನ್ನು ಚಿಕ್ಕ ಮಕ್ಕಳು ಸಂಖ್ಯೆಗಳನ್ನು ಧರಿಸಿದಂತೆ  ತೋರಿಸುವ ಕಾರ್ಡುಗಳಲ್ಲಿ ಪುನರಾವರ್ತಿಸಬಹುದು ಮಕ್ಕಳು ಅದೇ ಆಜ್ಞೆಗಳ ಮೂಲಕ ಕಾರ್ಡುಗಳನ್ನು ಓಡಿಯಾಡಿಸಿ ಆಡಬಹುದು ಎಂದು ಸೂಚಿಸುತ್ತಾರೆ. ಇದಕ್ಕೆ ಅನೇಕ ಸೆಟ್ ಕಾರ್ಡ್ ಗಳು ಅಗತ್ಯವಿರುವವು, ಅಥವಾ ಮಕ್ಕಳು ಗುಂಪುಗಳಲ್ಲಿ ಕಾರ್ಡ್ನ ವಿವಿಧ ಸೆಟ್ಗಳಲ್ಲಿ ಆಡಬಹುದು.

ಇಲ್ಲಿ ಪ್ರಮುಖ ವಿಷಯ, ಇದು ಸರಳ ಎಂದು ಕಾಣಿಸಬಹುದು ಆದರೂ, ತರಗತಿಯ  ಎಲ್ಲ ಮಕ್ಕಳು ತಪ್ಪದೆ ಭಾಗವಹಿಸ ಬೇಕಾಗಿದೆ ಎಂಬುದು. ಅವರು ಕಲಿಯುತ್ತಲೇ ಬಹಳಷ್ಟು ಮೋಜು ಅನುಭವಿಸುತ್ತಾರೆ.

ಈ ಲೇಖನವು ಈ ಮೊದಲು ಟೀಚರ್ ಪ್ಲಸ್, ಜುಲೈ ಆಗಸ್ಟ್ 1992 ರ ಸಂಚಿಕೆ ಸಂಖ್ಯೆ.19ರಲ್ಲಿ ಪ್ರಕಟವಾಗಿದೆ ಮತ್ತು  ಕೆಲವು ಬದಲಾವಣೆಗಳೊಂದಿಗೆ ಇಲ್ಲಿ ಅನುವಾದಿಸಲಾಗಿದೆ.

 

 

18804 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು