ಸಂಖ್ಯಾ ವಿನೋದ

Resource Info

ಮೂಲ ಮಾಹಿತಿ

ಇಲ್ಲಿ ಸಣ್ಣ ಮತ್ತು ದೊಡ್ಡ ಸಂಖ್ಯೆಗಳನ್ನು ಗುಣಿಸಬಹುದಾದ ಆಸಕ್ತಿದಾಯಕ ಮಾರ್ಗವಿದೆ. ಇದನ್ನು ರಷ್ಯನ್ ಗುಣಾಕಾರ ಎಂದೂ ಹೇಳುತ್ತಾರೆ.ಅಲ್ಲಿನ ರೈತರು ವಿಧಾನವನ್ನು ರೂಪಿಸಿದರು ಎಂದು  ಹೇಳಲಾಗುತ್ತದೆ.

Abstract/Short description: 
02 hours 00 mins
Abstract/Short description: 

ಗುಣಾಕಾರ ಮತ್ತು ಭಾಗಕಾರದ ಲೆಕ್ಕಗಳನ್ನು ಮಾಡುವುದು ಕೆಲವೊಮ್ಮೆ ಬಲುಗೋಜು ಎನಿಸಬಹುದು.  ಮಕ್ಕಳು ಮಾಡುತ್ತಿರುವಾಗಲಂತೂ ಅವರಿಗೆ ಈ ಭಾವನೆ ಇನ್ನೂ ಹೆಚ್ಚು.  ಕೆಲವಾರು ಸಣ್ಣ ಮತ್ತು ದೊಡ್ಡ ಸಂಖ್ಯೆಗಳ ಗುಣಾಕಾರ ಮಾಡಲು ಇಲ್ಲಿ ಸುಲಭೋಪಾಯಗಳಿವೆ.  ಇದೆ ಒಂದು ವಿನೋದದಾಟವಾಗಬಹುದು ಮತ್ತು ಆಟದ ರೀತಿಯಲ್ಲಿ ಲೆಕ್ಕದ ಪಾಠ ಮಾಡಿದಾಗ ಮಕ್ಕಳಲ್ಲಿ ಗಣಿತದ  ಬಗ್ಗೆ ಆಸಕ್ತಿ ಮಾಸದೇ ಉಳಿಯುತ್ತದೆ.

Abstract/Short description: 
  • ಮಕ್ಕಳು ಆಟದ ರೀತಿಯಲ್ಲಿ ಆಡಿದಾಗ ಚೆನ್ನಾಗಿ ಕಲಿಯ ಬಲ್ಲರು.
  • ಅವರ ಸಮೂಹ ಕೌಶಲ ಕೂಡ ವರ್ಧಿಸುತ್ತದೆ.
Abstract/Short description: 

A number trick

 ಕೇವಲ 2 ರಿಂದ ಗುಣಾಕಾರ ಮತ್ತು ಭಾಗಾಕಾರ ಮಾಡುವುದನ್ನು ಮಾತ್ರ ತಿಳಿದುಕೊಂಡವರೂ, ಚಿಕ್ಕ ಮತ್ತು ದೊಡ್ಡ ಸಂಖ್ಯೆಗಳನ್ನು ಗುಣಿಸಬಹುದಾದ ಒಂದು ಸ್ವಾರಸ್ಯಕರ ವಿಧಾನ ಇಲ್ಲಿದೆ.  ಈಗ 75ನ್ನು 38ರಿಂದ ಗುಣಾಕಾರ ಮಾಡೋಣ.  ನಿಮ್ಮ ಪುಟದಲ್ಲಿ ಎರಡು ಕಾಲಂಗಳನ್ನು ಮಾಡಿಕೊಳ್ಳಿರಿ. 

ಮೊದಲನೆಯ(ದೊಡ್ಡ) ಸಂಖ್ಯೆಯನ್ನು ಎಡ ಕಾಲಂನಲ್ಲಿ ತೆಗೆದುಕೊಳ್ಳಿ. ಎರಡನೆಯ (ಚಿಕ್ಕ) ಸಂಖ್ಯೆಯನ್ನು ಬಲಕಾಲಂನಲ್ಲಿ ತೆಗೆದುಕೊಳ್ಳಿ.

 75ನ್ನು ಎರಡರಿಂದ ಭಾಗಿಸಿರಿ: ಬಂದ ಉತ್ತರ= 37.5.  ಇದರಲ್ಲಿರುವ ಭಿನ್ನಾಂಕವನ್ನು ಕೈಬಿಡಿ. ಉಳಿದ ಇಡೀ ಸಂಖ್ಯೆಯನ್ನು ಅಂದರೆ 37 ಅನ್ನು 75 ರ ಅಡಿಯಲ್ಲಿ ಬರೆಯಿರಿ.  ಹೀಗೆ ಬಂದ ಭಾಗಲಬ್ಧಗಳನ್ನು ಎರಡರಿಂದ ಭಾಗಿಸುತ್ತಾ ಮುಂದುವರಿಯಿರಿ. ಕೊನೆಯ ಪೂರ್ಣಾಂಕ ಅಂದರೆ 1 ಬರುವವರೆಗೆ ಹಾಗೆ ಮಾಡುತ್ತಾ ಬನ್ನಿ.

ಈಸಂಖ್ಯೆಯನ್ನು 2 ರಿಂದ ಭಾಗಿಸಿ

ಈ ಸಂಖ್ಯೆಯನ್ನು2 ರಿಂದ ಗುಣಿಸಿ

75

38

37

76

18

152

9

304

4

608

2

1216

1

2432

 

 

 

 

 

 

 

 

 

 

 

 

ಬಲ ಕಾಲಂನಲ್ಲಿ 38 ನ್ನು 2 ರಿಂದ ಗುಣಿಸಿರಿ ಬಂದ ಗುಣಲಬ್ಧವನ್ನು 38ರ ಅಡಿಯಲ್ಲಿ ಬರೆಯಿರಿ. 

ಎಡಬದಿಯ ಕಾಲಂನಲ್ಲಿ ಎಷ್ಟು ಸಾಲುಗಳಿವೆಯೋ ಅಷ್ಟೂ ಸಾಲು ಬರುವವರೆಗೆ ಗುಣಲಬ್ಧಗಳನ್ನು 2 ರಿಂದ ಗುಣಿಸುತ್ತಾ ಹೋಗಿ.  ಎರಡೂ ಕಾಲಂಗಳಲ್ಲಿ ಸಮ ಸಂಖ್ಯೆಗಳಿದ್ದರೆ ಅವನ್ನು ಹೊಡೆದು ಹಾಕಿರಿ.

ಈಸಂಖ್ಯೆಯನ್ನು 2 ರಿಂದ ಭಾಗಿಸಿ

ಈ ಸಂಖ್ಯೆಯನ್ನು2 ರಿಂದ ಗುಣಿಸಿ

75

38

37

76

18

152

9

304

4

608

2

1216

1

2432

 

 

 

 

 

ಗಮನಿಸಿ:ನಾಲ್ಕನೇ ಸಾಲಿನಲ್ಲಿ ನಾವು ಎರಡು ಸಮಸಂಖ್ಯೆಗಳನ್ನು ಹೊಂದಿದ್ದೇವೆ(18 & 152).ಒಂದು ಸಾಲಿನಲ್ಲಿ ಬರುವ ಅಂಥ ಎಲ್ಲ ಸಮಸಂಖ್ಯೆಗಳನ್ನು ಹೊಡೆದು ಹಾಕಿ.

 

 

 

 

 

ಈಗ ಬಲ ಕಾಲಂನಲ್ಲಿ ಇರುವ ಸಂಖ್ಯೆಗಳನ್ನು ಮಾತ್ರ ಕೂಡಿರಿ (38+76+304+2432) ನಿಮಗೆ ದೊರಕುವ ಉತ್ತರ: 2850 !

ಈ ಚಟುವಟಿಕೆಯನ್ನು ತರಗತಿಯಲ್ಲಿ ಒಂದು ಆಟವಾಗಿ ಆಡಿಸಬಹುದು.  ಇದರಿಂದ ಗುಣಾಕಾರ ಮತ್ತು ಭಾಗಾಕಾರ ಮಾಡುವುದು ಮಕ್ಕಳಿಗೆ ತುಂಬಾ ಆಸಕ್ತಿಯ ವಿಷಯವಾಗುತ್ತದೆ.

ಇನ್ನೊಂದು ಉದಾಹರಣೆಯಾಗಿ 84 x 28  ತೆಗೆದುಕೊಳ್ಳೋಣ

ಈ ಸಂಖ್ಯೆಯನ್ನು 2 ರಿಂದ ಭಾಗಿಸಿ

ಈ ಸಂಖ್ಯೆಯನ್ನು2 ರಿಂದ ಗುಣಿಸಿ

84

28

42

56

21

112

10

224

5

448

2

896

1

1792

 

 

 

 

 

 

ಗಮನಿಸಿ : ಮೊದಲನೇ ಸಾಲಿನಲ್ಲಿ ಒಂದು ಜೊತೆ ಸಮ ಸಂಖ್ಯೆಯಿವೆ (84 & 28).ಒಂದು ಸಾಲಿನಲ್ಲಿ ಬರುವ ಅಂಥ ಎಲ್ಲ ಸಮಸಂಖ್ಯೆಗಳನ್ನು ಹೊಡೆದು ಹಾಕಿ.

 

 

 

 

 

ಈಗ 112+448+1792 ಕೂಡಿಸೋಣ. ಬರುವ ಉತ್ತರ 2352 !

ಈ ಚಟುವಟಿಕೆಯನ್ನು ತರಗತಿಯಲ್ಲಿ ಒಂದು ಆಟವಾಗಿ ಆಡಿಸಬಹುದು.  ಇದರಿಂದ ಗುಣಾಕಾರ ಮತ್ತು ಭಾಗಾಕಾರ ಮಕ್ಕಳಿಗೆ ತುಂಬಾ ಆಸಕ್ತಿಯ ವಿಷಯವಾಗುತ್ತವೆ.

ಲೇಖನವು ಮೊದಲು ಟೀಚರ್ ಪ್ಲಸ್ ಸಂಪುಟ.II, ಸಂಚಿಕೆ 2, ಮಾರ್ಚ್, ಏಪ್ರಿಲ್ 2004 ರಲ್ಲಿ ಪ್ರಕಟವಾಗಿದೆ  ಮತ್ತು  ಅದನ್ನು ಇಲ್ಲಿ ಕೆಲವು ಬದಲಾವಣೆಗಳೊಂದಿಗೆ ಅನುವಾದಿಸಲಾಗಿದೆ.

18464 ನೊಂದಾಯಿತ ಬಳಕೆದಾರರು
7224 ಸಂಪನ್ಮೂಲಗಳು