ಮೂಕಾಭಿನಯ

ಮಕ್ಕಳಲ್ಲಿ ಮಾತನಾಡುವ ಮತ್ತು ಅಭಿವ್ಯಕ್ತಿ ಕೌಶಲವನ್ನು ಬೆಳಸುವುದು.

Resource Info

ಮೂಲ ಮಾಹಿತಿ

ನಳಿನಿ ರಾವಲ್ ಮತ್ತು ರಾಜೇಶ್ ಉತ್ಸಾಹಿ

ಮಕ್ಕಳಲ್ಲಿ ಅವರದ್ದೇ ಆದ ಪದಸಂಪತ್ತು ಇರುತ್ತದೆ. ಅವರು ಅವುಗಳನ್ನು ಬಹಳ ಸಹಜವಾಗಿ ಬಳಸುತ್ತಾ ಇರುತ್ತಾರೆ. ಆದರೆ ಅವರಿಗೆ ಔಪಚಾರಿಕ ಪರಿಸರಕ್ಕೆ ಬಂದಾಗ ಅಂದರೆ, ಉದಾಹರಣೆಗೆ ಶಾಲೆಗಳು ಇತ್ಯಾದಿ ಪರಿಸರಕ್ಕೆ ಅವರು ಬಂದಾಗ ಅವರಿಗೆ ಸಂಕೋಚ ಕಾಡುತ್ತದೆ. ಇದೇ ಸಂಕೋಚವು ಅವರಿಗೆ ಹೊಸ ಹೊಸ ಕಲಿಕೆಗೆ ತಡೆಯಾಗಿ ವರ್ತಿಸುತ್ತದೆ. ಈ ಚಟುವಟಿಕೆಯು ಅವರಿಗೆ ತಮ್ಮ ಸ್ವಂತ ಪದ - ಸಂಪತ್ತನ್ನು ಬಳಸಲು ಅವಕಾಶ ನೀಡುತ್ತದೆ. ಇದರಿಂದ ಅವರ ಮಾತನಾಡುವ ಕೌಶಲ್ಯ ಮತ್ತು ಅಭಿವ್ಯಕ್ತಿಯ ಸಾಮರ್ಥ್ಯವು ಹೆಚ್ಚುತ್ತದೆ.

ಕಾಲಾವಧಿ: 
00 hours 40 mins
ಪೀಠಿಕೆ: 

ಉದ್ದೇಶ: 

ಮಕ್ಕಳ ಮಾತನಾಡುವ ಕೌಶಲ್ಯ ಮತ್ತು ಅಭಿವ್ಯಕ್ತಿಯ ಸಾಮರ್ಥ್ಯವು ಹೆಚ್ಚುತ್ತದೆ.

ಚಟುವಟಿಕೆ ಹಂತಗಳು: 

ಹಂತ

ಮೊದಲಿಗೆ ಶಿಕ್ಷಕರು ತಾವೇ ಮೂಕಾಭಿನಯ ಮಾಡಿ ತೋರಿಸಬೇಕು ಅದಕ್ಕೆ   ಉದಾಹರಣೆಗೆ -
 
  •     ಊಟಮಾಡುವುದು,
  •      ಅಡುಗೆ ಮಾಡುವುದು,
  •      ಸ್ನಾನಮಾಡುವುದು,
  •      ಬಟ್ಟೆ ಒಗೆಯುವುದು ಇತ್ಯಾದಿ.
  •      ಶಿಕ್ಷಕರು ಏನು ಮಾಡುತ್ತಿದ್ದಾರೆ ಎಂಬುದನ್ನು ಮಕ್ಕಳು ಹೇಳಬೇಕು.
  •      ತರುವಾಯ ಒಬ್ಬೊಬ್ಬರೇ ಮಕ್ಕಳು  ಅಭಿನಯ ಮಾಡಬೇಕು ಮತ್ತು ಇತರ ಮಕ್ಕಳು ಏನು ನಟನೆಯನ್ನು  ಮಾಡುತ್ತಿದ್ದಾರೆ ಎಂದು  ಹೇಳಬೇಕು.
  •       ಈ ಚಟುವಟಿಕೆಗಳನ್ನು ಮಾಡುವಾಗ ಏನೇನು ಸಂಭಾಷಣೆ ನಡೆಯುತ್ತದೆ ಎಂಬುದನ್ನು ಮಕ್ಕಳು ಹೇಳಲು ಕೇಳಬಹುದು .

ಪುನರವಲೋಕನ:
ಈ ಚಟುವಟಿಕೆಯನ್ನು  ಮಾಡುವಾಗ, ಮಕ್ಕಳು ಮಾತನಾಡುವ ಪದಗಳಿಂದ ಶಿಕ್ಷಕರಿಗೆ ಮಕ್ಕಳ ಪದ ಬಂಢಾರದ  ಅರಿವು ಉಂಟಾಗುತ್ತದೆ. ಅದೇ ಪದ ಬಂಢಾರದ ಆಧಾರದ ಮೇಲೆ
  ಶಿಕ್ಷಕರು ಮುಂದೆ ಭಾಷಾ ಬೋಧನೆಯನ್ನು ಹೇಗೆ ಮಾಡಬೇಕೇಂಬುದನ್ನು  ಯೋಜಿಸಬಹುದು. ಚಟುವಟಿಕೆಯ ಮೂಲಕ  ಶಿಕ್ಷಕರು
ಮಗುವು ತನ್ನ ಸುತ್ತಲಿನ ಪರಿಸರದ ಬಗ್ಗೆ ಏನೇನು ತಿಳಿದು ಕೊಂಡಿದೆ ಎಂಬುದನ್ನೂ ಅರಿತುಕೊಳ್ಳ ಬಹುದು . ಮಾಹಿತಿ ಕೂಡ  ಭಾಷೆಯನ್ನು ಬೋಧಿಸಲು ವಿಶೇಷವಾಗಿ ಸಹಾಯಕವಾಗುತ್ತದೆ.             

 ಹಿಂದಿಮೂಲ: ನಳಿನಿ ರಾವೆಲ್ ಮತ್ತು ರಾಜೇಶ್ ಉತ್ಸಾಹಿ;

ಕನ್ನಡಾನುವಾದ ಮತ್ತು ಸಂಪಾದನೆ : ಜೈಕುಮಾರ್ ಮರಿಯಪ್ಪ.

18927 ನೊಂದಾಯಿತ ಬಳಕೆದಾರರು
7393 ಸಂಪನ್ಮೂಲಗಳು